ಸಾಮಾಜಿಕ ಉದ್ಯಮಶೀಲತೆ

 ಉದ್ಯಮಶೀಲತಾ ಅಧ್ಯಯನ ಮತ್ತು ಸಂಶೋಧನಾ” ವಲಯದಲ್ಲಿ ಸಾಮಾಜಿಕ ಉದ್ಯಮಶೀಲತೆ ಎನ್ನುವ ಪರಿಕಲ್ಪನೆ ಹೊಸ ಶಾಖೆಯಾಗಿ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಅಭಿವೃಧ್ದಿ ಅಧ್ಯಯನ ವಲಯದಲ್ಲಿಯೂ ಈ ಪರಿಕಲ್ಪನೆ ಅಭಿವೃಧ್ದಿಯ ಹೊಸ ವಿನ್ಯಾಸವಾಗಿ ಪ್ರಾಮುಖ್ಯವನ್ನು ಪಡೆಯುತ್ತಿದೆ.  ಜಗತ್ತಿನಾದ್ಯಂತ ಸಮಾಜಕಲ್ಯಾಣ ಚಿಂತಕರು, ಶೈಕ್ಷಣಿಕ ಪ್ರತಿಷ್ಥಾನಗಳು, ವ್ಯವಹಾರಾಡಳಿತ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧಕರು ಸಾಮಾಜಿಕ ಉದ್ಯಮಶೀಲತೆಯ ಕುರಿತಂತೆ ವಹಿಸಿರುವ ಆಸಕ್ತಿಯ ಕಾರಣದಿಂದಾಗಿ ಕಳೆದೊಂದು ದಶಕದಿಂದ ಅಪಾರ ಸಂಪನ್ಮೂಲ ‘ಸಾಮಾಜಿಕ ಉದ್ಯಮಶೀಲತೆೆಯ’ ಸಂಶೋzನೆ ಮತ್ತು ಅಧ್ಯಯನಕ್ಕೆ ಹರಿದು ಬರುತ್ತಿದೆ. ಇಂತಹ ಬೆಳವಣಿಗೆಯ ಫಲವಾಗಿ ಸಾಮಾಜಿಕ ಉದ್ಯಮಶೀಲತೆಯ ನಾವಿನ್ಯ ಸಾಮರ್ಥ್ಯ ಹಾಗೂ ಅಭಿವೃಧ್ದಿ ವಿನ್ಯಾಸವಾಗಿ ಇದರ ಮಹತ್ವದ ಕುರಿತು ಚಲಾವಣೆಯಲ್ಲಿರುವ ವೈಭವೀಕೃತ ಕಥನUಳು ಇದೊಂದು ಹೊಸ ಮಾದರಿಯ ಹೊಸನೋಟವುಳ್ಳ, ಹೊಸ ಸೈದ್ಧಾಂತಿಕ ಮಾದರಿಯೆಂದು ಹೇಳುತ್ತಿವೆ. ಮಾತ್ರವಲ್ಲದೆ  ಇದನ್ನು ಜಾಗತೀಕರಣದ ಕೆಲವೊಂದು ಅಡ್ಡ ಪರಿಣಾಮಗಳನ್ನು ಪರಿಹರಿಸಬಲ್ಲ ಹೊಸ ಸಾಂಸ್ಥಿಕ ಮಾದರಿಯೆಂದೂ ಹೇಳಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇಂತಹ ಚರ್ಚೆ ಭಾರತೀಯ ಉಪಖಂಡÀದಲ್ಲಿ ಶೈಕ್ಷಣಿಕ ಮತ್ತು ಸಂಶೋಧನೆಯ ವಲಯದಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ. ಇಂತಹ ಸನ್ನಿವೇಶದಲ್ಲಿ ಈ ಪರಿಕಲ್ಪನೆ ರೂಪುಗೊಂಡಿರುವ ಹಿನ್ನೆಲೆಗಳೇನು? ಭಾರತೀಯ ಉಪಖಂಡದ ಸಂದರ್ಭದಲ್ಲಿ ಸಾಮಾಜಿಕ ಉದ್ಯಮಶೀಲತೆಯ ಮಹತ್ವವೇನು? ಅಧ್ಯಯನ ಸಂಶೋಧನೆ ಮತ್ತು ಕಾರ್ಯ ಯೋಜನೆಗೆ ಸಂಬAಧಿಸಿದAತೆ ಭಾರತೀಯ ಸಂದರ್ಭದಲ್ಲಿ ಸಮಾಜ ವಿಜ್ಙಾನಿÀಗಳು, ಯೋಜಕರು ಹಾಗೂ ಚಿಂತಕರು ಯಾವ ವ್ಯೂಹಾತ್ಮಕ ನಿಲುಗಳನ್ನು ತೆಗೆದುಕೊಳ್ಳಬಹುದಾಗಿದೆ. ಮತ್ತು ತೆಗೆದುಕೊಳ್ಳಬೇಕಿದೆ?  ಈ ಹೊಸ ಜ್ನಾನ ಶಾಖೆಗೆ ಆರೋಪಿಸಲಾದ ಮಹತ್ವ ಎಷ್ಟರಮಟ್ಟಿಗೆ ನಿಜ; ಅಭಿವ್ರದ್ದಿಯ ನವ ವಿನ್ಯಾಸವಾಗಿ ಎಷ್ಟರಮಟ್ಟಿಗೆ ಇದು ಅಬಲರ, ನಿರ್ಲಕ್ಷಿತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬಲ್ಲುದು? ಈ ಎಲ್ಲ ವಿಷಯದ ಕುರಿತಂತೆ ಒಂದು ಚರ್ಚೆಯನ್ನು ಹುಟ್ಟುಹಾಕುವುದು ಈ ಲೇಖನದ ಉದ್ದೇಶವಾಗಿದೆ. ಉಲ್ಲೇಖಿತ ಉದ್ದೇಶವನ್ನು ನಾಲ್ಕು ಭಾಗಗಳ ಮೂಲಕ ಸಾಧಿಸುವ, ಸಿದ್ದಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ.


ಭಾಗ – ೧


ಉತ್ಪಾದನಾ ಪರಿಕರಗಳನ್ನು ಹೊಸ ರೀತಿಯಲ್ಲಿ ಸಂಘಟಿಸುವ ಮೂಲಕ ಸಂಪತ್ತು ಸೃಜಿಸುವ ಮತ್ತು ಸೃಷ್ಟಿಸುª ಅನ್ವೇಷಕ ಮನೋವೃತ್ತಿಯನ್ನು ಉದ್ಯಮಶೀಲತೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಅನ್ವೇಷಕ ಪ್ರವತ್ತಿಯ ಜನರು ಒಂದು ಸಮಾಜದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಇದ್ದರೆ ಅಂತಹ ಒಂದು ಸಮಾಜದಲ್ಲಿ ಅಧಿಕ ಪ್ರಮಾಣದ ಸಂಪತ್ತು ಉತ್ಪಾದನೆಯಾಗಲು ಮತ್ತು ದೊಡ್ಡ ಪ್ರಮಾಣದಲ್ಲಿ ಜನಸಮೂದಾಯದ ಜೀವನದ ಬದುಕಿನ ಅವಶ್ಯಕತೆಗಳು (ಆಸನ, ವಸನ, ವಸತಿ,) ಹಾಗೂ ಆಶೋತ್ತರಗಳು ಈಡೇರಲುÄ ಸಾಧ್ಯವಾಗುತ್ತದೆ. ಉದಾಹರಣೆಗೆ ಅಮೇರಿಕಾ, ಜಪಾನ್, ಫ್ರಾನ್ಸ್ಸ್, ಜರ್ಮನಿ ಮುಂತಾದ ದೇಶಗಳು ಮುಂದುವರಿಯಲು ಅಲ್ಲಿ ನಡೆದಿರುವ ಮತ್ತು ನಡೆಯುತ್ತಿರುವ ಸಂಶೋಧನೆ ಮತ್ತು ಅನ್ವೇಷಣೆಗಳು ಕಾರಣ. ಇಂತಹ ಅನ್ವೇಷಣೆ ಮತ್ತು ಸಂಶೋಧನೆಗಳು ನಡೆಯಬೇಕಿದ್ದರೆ ಅನ್ವೇಷಕ ಪ್ರವೃತ್ತಿಯ ಅಥವ ಮನೋಧರ್ಮದ ಜನಸಮುದಾಯ ಕಾರಣ. (ಇಂತಹ ಮನೋವೃತ್ತಿಗೆ ಕಾರಣವಾಗುವ ಅಂಶಗಳ ಬಗ್ಗೆಯೂ ಅನೇಕಾ ಸಿದ್ದಾಂತಗಳಿವೆ) ಇತ್ತೀಚಿನವರೆಗೂ ಉದ್ಯಮಶೀಲತೆಯ ಚರ್ಚೆ ವ್ಯಾಪಾರ, ವ್ಯವಹಾರ ಮತ್ತು ಆರ್ಥಿಕ ಅಭಿವೃಧ್ದಿಯ ವಲಯಗಳಿಗೆ ಸೀಮಿತವಾಗಿತ್ತು. ಆದರೆ ಕಳೆದ ಒಂದೆರಡು ದಶಕಗಳಿಂದ ಉದ್ಯಮಶೀಲತೆಗೆ ಒಂದು ಸಾಮಾಜಿಕ ಮುಖವೂ ಇರುವುದು ಸಾಧ್ಯ ಮತ್ತು ಸಾಮಾಜಿಕ ಮೌಲ್ಯಗಳ ಸೃಜನೆÀಗೆ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ (ಉದ್ಯಮಶೀಲ) ಅನ್ವೇ಼ಷಕ ಪ್ರವೃತ್ತಿಯ ಜನ, ಒದಗಿ ಬರಬಹುದಾದ ಸಂದರ್ಭಗಳ ಬಗ್ಗೆಯೂ ವಾಗ್ವಾದಗಳು ನಡೆಯುತ್ತಿವೆ. ಇಂತಹ ಹಲವೊಂದು ದೃಷ್ಟಾಂತಗಳನ್ನು ಗುರುತಿಸಿ ಅವುಗಳನ್ನು ವಿಶ್ಲೇಷಿಸಿ, ವಿಮರ್ಶೆಗೊಳಪಡಿಸಿ ‘ಸಾಮಾಜಿಕ ಉಧ್ಯಮಶೀಲತಾ’ ಅಧ್ಯಯನಕ್ಕೆ ಒಂದು ನಿರ್ಧಿಷ್ಠ ಸ್ವರೂಪ ನೀಡುವ, ಸೈದ್ಧಾಂತಿಕ ಭೂಮಿಕೆ ಒದಗಿಸುವ ಪ್ರಯತ್ನಗಳು ನಡೆಯುತ್ತಿವೆ. 






ಸಾಮಾಜಿಕ ಉದ್ಯಮಶೀಲತೆಯೆನ್ನುವ ಪರಿಕಲ್ಪನೆ ಆಶಯ ಪ್ರಮುಖವಾಗಿ ಸಮಾಜಮುಖಿಯಾದ, ಸಮಾಜದ ಬಗ್ಗೆ ಕಾಳಜಿ ಉಳ್ಳ, ಒಲವು ಹೊಂದಿದೆ. ಅಂತಹ ಗುರಿ ಸಾಧನೆಗೆ ಯಶಸ್ವೀ ಉದ್ಯಮ ಜಗತ್ತು  ಅನುಕರಿಸಿದ ಹಾಗೂ ಅನುಸರಿಸಿದ ದಾರಿಯನ್ನು ಬಳಸಿಕೊಳ್ಳುವ ಬುದ್ದಿವಂತಿಕೆಯ ನಡೆಯನ್ನು ಒಪ್ಪಿಕೊಳ್ಳುತ್ತದೆ. ಈ ಎರಡು ಅಂಶಗಳ ಮಿಶ್ರತಳಿಯಾಗಿ ಸಾಮಾಜಿಕ ಉಧ್ಯಮಶೀಲತೆ ವ್ಯಾಖ್ಯಾನಿಸಲ್ಪಟ್ಟಿದೆ. ಸಮಾಜಮುಖಿ ಚಿಂತನೆ ಬಹುಪಾಲಿಗೆ ಒಂದು ಸಾಮಾಜಿಕ ಸನ್ನಿವೇಶವನ್ನು, ಸಾಮಾಜಿಕ ಸಂರಚನೆಯನ್ನು ಆಧರಿಸಿದ್ದರೆ, ಉಧ್ಯಮ ಜಗತ್ತಿನ ಯಶಸ್ವಿವ್ಯೂಹಗಳು, ತಂತ್ರಗಾರಿಕೆಗಳು, ವ್ಯವಹಾಡಳಿತದ ಚತುರತೆ ಆರ್ಥಿಕ ಅಭಿವೃಧ್ಧಿ ಮತ್ತು ಆಧುನಿಕ ಆರ್ಥಿಕ ಜಗತ್ತಿನ ವ್ಯೂಹಾತ್ಮಕ ಪ್ರಾವೀಣ್ಯವನ್ನು  ಆಧರಿಸಿರುತ್ತದೆ. ಹೀಗಾಗಿ ಈ ಪರಿಕಲ್ಪನೆಯ ವ್ಯಾಖ್ಯಾನದ ಹಿಂದೆ ಸಾಮಾಜಿಕ ಸಂರಚನೆಯನ್ನು ಮತ್ತು ಅರ್ಥಿಕ ಅಭಿವೃಧ್ದಿಯನ್ನು ಪ್ರಭಾವಿಸುವ ಮತ್ತು ನಿಭಾಯಿಸುವ ವಿಚಾರದಾರೆಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ.

ಅಮೇರಿಕಾದಿಂದ ಅಥವಾ ಅಮೇರಿಕಾದ ಹಿನ್ನೆಲೆಯಿಂದ ಬಂದಿರುವ ವ್ಯಕ್ತಿ ಮತ್ತು ಸಂಸ್ಥೆಗಳು ವ್ಯವಹಾರಾಡಳಿತ ತತ್ವಗಳನ್ನು ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಯಾ ಪರಿಹಾರಕ್ಕ್ತೆ ಹೆಚ್ಚಿನ ಒಲವು ತೋರಿಸುತ್ತಿವೆ. ಬಹುಪಾಲು ಉದ್ಯಮಿಗಳು ಅನ್ವೇಷಕ ಪ್ರವೃತ್ತಿಯನ್ನು ಹೊಂದಿದ್ದು ಉದ್ಯಮ ಜಗತ್ತಿನ ಯಶಸ್ವೀ ಸೂತ್ರಗಳನ್ನು ಸಾಮಾಜಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಕಾರಣವಾಗುವ ಪರಿಕಲ್ಪನೆಗಳಿವೆ. ‘ಹಾರ್ವರ್ಡ್ ಬಿಸಿನೆಸ್ ಸ್ಕೂಲ್’, ‘ಅಶೋಕಾ ಪೌಂಡೇಶನ್’, ‘ಸ್ಕಾಲ್ ಪ್ರತಿಷ್ಠಾ£’À ಮತ್ತಿತರರು ಇಂತಹ ದೃಷ್ಟಿಕೋನವನ್ನು ಹೊಂದಿದ್ದಾರೆ. ಯುರೋಪ್‌ನ ದೇಶಗಳಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದಾಗ ಸಾಮಾಜಿಕ ಆರ್ಥಿಕತೆ (Soಛಿiಚಿಟ ಇಛಿoಟಿomಥಿ) ಸಹಕಾರಿ ಚಳುವಳಿಯ ಮಾದರಿಯೊಳಗೆ ಈ ಪರಿಕಲ್ಪನೆಯನ್ನು ಗುರುತಿಸಲಾಗುತ್ತಿದೆ. ಬದಲಾಗುತ್ತಿರುವ ಆರ್ಥಿಕ ವಿನ್ಯಾಸಗಳಿಂದ ಯಾವುದೇ ರೀತಿಯಲ್ಲಿ ಪ್ರಯೋಜನ ಪಡೆಯಲಾರದವರು ಮತ್ತು ಅಭಿವೃಧ್ದಿಯ ಪರಿಣಾಮಗಳಿಗೆ ಬಲಿಯಾಗುವ ಜನವರ್ಗವನ್ನು ಆದರಿಸುವ ಒಂದು ಸಾಮುದಾಯಿಕ ಉತ್ತರದಾಯಿತ್ವವಿರುವ ಮಾದರಿಯಾಗಿ ಸಾಮಾಜಿಕ ಉದ್ಯಮ ಶೀಲತೆಯನ್ನು ಮಾನ್ಯಮಾಡಲಾಗಿದೆ. ಇಂಗ್ಲೆAಡ್‌ನ್ಲಲ್ಲಿ ಕಮ್ಯೂನಿಟಿÀ ಇಂಟ್ರೆಸ್ಟ್ ಗ್ರೂಪ್ ಕಂಪೆನಿಯ ರೂಪದಲ್ಲಿ, ಇಟೆಲಿಯಲ್ಲಿ ಸಾಮಾಜಿಕ ಸಹಕಾರಿ (Soಛಿiಚಿಟ ಅo-oಠಿಡಿಚಿಣives) ರೂಪದಲ್ಲಿ ಇವುಗಳನ್ನು ನಾವು ನೋಡಬಹುದಾಗಿದೆ. ಹಾಗೇನೇ ನಿಯಂತ್ರಿತ ವ್ಯವಸ್ಥೆಯಿಂದ ಮುಕ್ತ ಆರ್ಥಿಕ ವ್ಯವಸ್ಥೆಗೆ ಪರಿವರ್ತನೆಗೊಂಡ ಸಮಾಜವಾದಿ ಅರ್ಥವ್ಯವಸ್ಥೆಗಳಾದ ರೊಮಾನಿಯಾ, ಪೋಲೆಂಡ್, ಪೂರ್ವ ಜರ್ಮನಿಯೇ ಮುಂತಾದ ದೇಶಗಳಲ್ಲಿ ಕೂಡಾ ಈ ಪರಿಕಲ್ಪನೆಯನ್ನು ಎಲ್ಲಾ ಜನವರ್ಗಗಳನ್ನು ಒಳಗೊಳ್ಳಬಲ್ಲ ಅಭಿವೃದ್ಧಿ ವಿನ್ಯಾಸವನ್ನಾಗಿ ಸ್ವೀಕರಿಸಲಾಗುತ್ತಿದೆ.

ತೃತೀಯ ಜಗತ್ತಿನಲ್ಲಿ ಅಥವಾ ಭಾರತದಂತಹ ಅಭಿವೃಧ್ಧಿ ಶೀಲ ಅರ್ಥವ್ಯªಸ್ಥೆಯಲ್ಲಿ ಸಮಾಜದ ಅಂಚಿನಲ್ಲಿರುವ ಮತ್ತು ಶೋಷಿತ ಜನವರ್ಗಗಳ ಆಶೋತ್ತರಗಳನ್ನು ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಈಡೇರಿಸುವ ನೂರಾರು ಮಾದರಿಗಳಿವೆ. ಅವುಗಳಲ್ಲಿ ಕೆಲªಕ್ಕೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಉದ್ಯಮ ಶೀಲತೆಯ ಹೆಸರಿನಲ್ಲಿ ಮಾನ್ಯತೆಯನ್ನು ದಯಪಾಲಿಸಲಾಗುತ್ತಿದೆ. ಸಾಮುದಾಯಿಕ ಉತ್ತರದಾಯಿತ್ವದ ಅಡಿಯಲ್ಲಿ ಸಂಪನ್ಮೂಲ  ಕ್ರೂಢೀಕರಿಸಿ ಜನರ ಆಶೋತ್ತರಗಳನ್ನು ಈಡೇರಿಸುವ ಸರಕಾರೇತರ, ಲಾಭದ ಉದ್ದೇಶಗಳಿಲ್ಲದ ಸಮಾಜಿಕ ಹೊಣೆಗಾರಿಕೆಯ ಪ್ರಜಾಪ್ರಭುತ್ವ ಮಾದರಿಯ ಸಾಂಸ್ಥಿಕ ಸ್ವರೂಪದ ಸಂಘಟನೆಗಳನ್ನು ಗುರುತಿಸುವ ಕಾರ್ಯವೂ ನಡೆಯುತ್ತಿದೆ. ಇಂತಹ ಸಂಸ್ಥೆಗಳನ್ನು ಹುಟ್ಟುಹಾಕಲು, ಅಭಿವೃಧ್ದಿಪಡಿಸಲು ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಮತ್ತು ಉದ್ಯಮಿವಲಯ ಬಹಳಷ್ಟು ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದ್ದೇಶ ಪೂರ್ವಕವಾಗಿ ನಾವು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಸಾಮಾಜಿಕ ಉದ್ಯಮ ಶೀಲತೆಯ ಕುರಿತಂತೆ ಚಾಲ್ತಿಯಲ್ಲಿರುವ ವ್ಯಾಖ್ಯಾನಗಳು ಯಾವ ದಿಕ್ಕಿನಲ್ಲಿ ಮತ್ತು ಯಾವ ಮಾದರಿಯ, ಯಾವ ಉದ್ದೇಶವನ್ನು ವ್ಯಕ್ತ ಪಡಿಸುತ್ತಿವೆ ಎನ್ನುವುದನ್ನು ಸಾಮಾಜಿಕ ಉದ್ಯಮಶೀಲತೆಯ ಮೂರು ಪ್ರಮುಖ ಮಾದರಿಗಳನ್ನು ಗುರುತಿಸಲಾಗಿದೆ. 


೧. ತೊಂಬತ್ರರ ದಶಕದಿಂದೀಚೆಗೆ ನಡೆಯುತ್ತಿರುವ ತೃತೀಯವಲಯಕ್ಕೆ ಸಂಬAಧಿಸಿದ ಚರ್ಚೆಗಳ ಹಿನ್ನೆಲೆಯಲ್ಲಿ ಬೆಳವಣೆಗೆಯೊಂದು ನಡೆಯುತ್ತಿರುವುದನ್ನು ನಾವು ಕಾಣಬಹುದಾಗಿದೆ. ತೃತೀಯ ವಲಯದೊಳಗೇನೇ ಸಾಮಾಜಿಕ ಉದ್ದೇಶಗಳು ಉದ್ಯಮಶೀಲತೆಯ ಆಯಾಮ ಪಡೆಯಬೇಕೆನ್ನುವ ಕೂಗು ಇದರ ಆಳದಲ್ಲೇಲ್ಲೋ ಹುಟ್ಟಿ ಬಂದಿರುವುದನ್ನು ನಾವು ಗಮನಿಸಬಹುದು. ಇಡೀ ತೃತೀಯವಲಯದ ಹುಟ್ಟು, ಬೆಳವಣಿಗೆ, ವ್ಯಾಖ್ಯಾನ, ಚರ್ಚೆ, ವಿಮರ್ಶೆಗಳನ್ನು ಗಮನಿಸಿದರೆ ಸಾಮಾಜಿಕ ಉದ್ಯಮಶೀಲತೆಯನ್ನು ಲೆಜಿಟಿಮೈಸ್ ಮಾಡುವ ಇಡೀ ಪ್ರಯತ್ನವೇ ಬಹಳ ಸಂಕೀರ್ಣತೆಯಿAದ ಕೂಡಿದೆ. ಇಂತಹ ಸಂಕೀರ್ಣ ಚರ್ಚೆಯನ್ನು ಸರಳಗೊಳಿಸಿ ಹೇಳುವುದಾದರೆ ಸರಕಾರ ಮತ್ತು ಖಾಸಗೀವಲಯವನ್ನು ಹೊರತು ಪಡಿಸಿದ ಎಲ್ಲ ಸಾಂಸ್ಥಿಕ ಸಂಘಟನೆಗಳು (ತೃತೀಯವಲಯದ) ಯಾ ವ್ಯವಸ್ಥೆಗಳು ಸ್ವಾವಲಂಭಿ ಸ್ವಾಯತ್ವ, ನೆಲೆಯಲ್ಲಿ ಭದ್ರಗೊಳ್ಳಬೇಕೆನ್ನುವ ಆಶಯವಿದೆ. ಈ ರೀತಿಯಲ್ಲಿ ಅವು ಬೆಳೆಯಬೇಕಾದರೆ ಅವುಗಳಿಗೆ ಅವಶ್ಯಕವಿರುವ ಸಂಪನ್ಮೂಲವನ್ನು ಅವೇ ಸ್ವತ: ಕ್ರೂಢೀಕರಿಸಬೇಕು. ಸಂಪನ್ಮೂಲ ಸಂಗ್ರಹವಾಗಬೇಕಾದರೆ ಅವು ಉದ್ದಿಮೆಗಳು ಅನುಸರಿಸುವ ವ್ಯವಹಾರಾಡಳಿತದ ಕಸರತ್ತುಗಳನ್ನು ಕರಗತ ಮಾಡಿಕೊಂಡು ಮುನ್ನಡೆಯಬೇಕು. ಹೀಗಾದಾಗ ಅವು ಸಾಮಾಜಿಕ ಉದ್ದೇಶಗಳನ್ನು ಯಾರ ಹಂಗೂ ಇಲ್ಲದೆ ಈಡೇರಿಸಬಹುದಾಗಿದೆ. ಅದೇ ರೀತಿಯಲ್ಲಿ ಸರಕಾರೀ ಒಡೆತನದ, ಖಾಸಗೀ ಒಡೆತನದ ಉದ್ಯಮವಲಯ ಸಂಪೂರ್ಣ ಲಾಭಗಳಿಕೆಯ ಉದ್ದೇÃಶದಿಂದ ಕೊಂಚ ವಿಮುಖವಾಗಿ ಲಾಭಗಳಿಕೆಯೊಂದಿಗೆ ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವ ರೀತಿಯಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ತಮ್ಮ ಚಟುವಟಿಕೆಗಳನ್ನು ಮರುಸಂWಟಿಸಿಕೊಳ್ಳಬೇಕು ಎನ್ನುವ ಆಶಯವು ಸಾಮಾಜಿಕ ಉದ್ಯಮಶೀಲತೆಯ ಇನ್ನೊಂದು ಮುಖವಾಗಿದೆ.


೨.ಸಾಮಾಜಿಕ ಉದ್ಯಮಶೀಲತೆಯನ್ನು ಸಾಮಾಜಿಕ ಅನ್ವೇಷಣೆ ಎನ್ನುವ ರೀತಿಯಲ್ಲಿ ಪರಿಭಾವಿಸಲಾಗಿದೆ. ಜೋಸೆಫ್ ಷಂಪೀಟರ್ ಉದ್ಯಮಶೀಲತೆ ಅನ್ವೇಷಣೆ (Iಟಿಟಿovಚಿಣioಟಿ) ಯ ಆಯಾಮವನ್ನು ನೀಡಿದ ರೀತಿಯಲ್ಲಿಯೇ ಸಾಮಾಜಿಕ ಮೌಲ್ಯಗಳನ್ನು ಪ್ರತಿಷ್ಠಾಪಿಸುವ ರೀತಿಯ ಅನ್ವೇಷಕ ಮಾದರಿಯನ್ನು ಕೇಂದ್ರ ಬಿಂದುವಾಗಿರುವ ಪ್ರಯತ್ನಗಳನ್ನು ಜ್ನಾನÀ ಮಾದರಿಯಲ್ಲಿ ಗುರುತಿಸಲಾಗಿದೆ. ಇದಕ್ಕೆ ಸಮರ್ಥನೆಯಾಗಿ ಸಾಮಾಜಿಕ ಸಂಘಟನೆಗಳನ್ನು ಸಂಪನ್ಮೂಲಗಳಿಸಬಲ್ಲ ಸ್ವಾವಲಂಬೀ ಸಂಸ್ಥೆಗಳಾಗಿ ರೂಪಿಸಿ ಉಧ್ಯಮಶೀಲ ಮನೋಭಾವದ ವ್ಯಕ್ತಿಗಳ ಸಾಧನೆಯನ್ನು ಉದಾಹರಣೆಯಾಗಿ ನೀಡಲಾಗಿದೆ. ಹೊಸರೀತಿಯ ಸೇವೆ, ಉತ್ಪನ್ನ, ಮೌಲ್ಯಯುತಸೇವೆಯ ಒದಗಣೆ ಹೀಗೆ ಒಂದು ಹೊಸದಿಕ್ಕಿನೆಡೆ ಹೊಸನೋಟವಿರುವ ಕಾರ್ಯ ವಿಧಾನದ ಮೂಲಕ ಸಮಾಜೋದ್ಧಾರಕÀ ಸಂಸ್ಥೆಗಳಿಗೆ ಅಗತ್ಯವಿರುವ ಸಂಪನ್ಮೂಲ ಕ್ರೂಢೀಕರಿಸುವ ಚೈತನ್ಯ ತುಂಬಿರುವ ಮುಂದಾಳುಗಳ ದೃಷಾಂತಗಳನ್ನು ನೀಡಲಾಗಿದೆ.

೩. ಮೂರನೇಯದಾಗಿ ಆರ್ಥಿಕ ಚಟುವಟಿಕೆಯ ಪ್ರಕಿಯೆಯಲ್ಲೇ ಸಾಮಾಜಿಕ ಹಿತವನ್ನು ಹಾಸು ಹೊಕ್ಕಾಗಿಸಿಕೊಂಡ, ಸಾಮುದಾಯಿಕ ಒಡೆತನವಿರುವ ಪ್ರಜಾಸತ್ತಾತ್ಮಕ ಮಾದರಿಯ ಸಾಮಾಜಿಕ ಉತ್ತರದಾಯಿತ್ವ ಹೊಂದಿರುವ ಸಂಸ್ಥೆಗಳ ಮೂಲಕ ಸಾಮಾಜಿಕ ಉದ್ಯಮಶೀಲತೆಯ ಹೊಸ ಮಾದರಿಯನ್ನು ಪರಿಕಲ್ಪಿಸಲಾಗಿದೆ. ಇಂತಹ ದೃಷ್ಟಾಂತಗಳು ಬಹುಪಾಲು ಯೂರೋಪಿನ ದೇಶಗಳಲ್ಲಿ ಕಂಡು ಬರುತ್ತವೆ. ಆರ್ಥಿಕ ಸ್ವಾವಲಂಬನೆಯ ಕಾರ್ಯಸೂಚಿ ಸಂಪನ್ಮೂಲಗಳಿಕೆಯ  ಸಾಮಾಜಿಕ ಹಿತದ ಬೆಳಕಲ್ಲಿಯೇ ನಿರ್ಮಿತಗೊಂಡಿರುತ್ತದೆ. ಮಾತ್ರವಲ್ಲ ಇಡೀ ಸಂಪನ್ಮೂಲಗಳಿಕೆಗೆ ಅನುಸರಿಸಲಾಗುವ ಇಡೀ ಆಡಳಿತ ವ್ಯವಸ್ಥೆ ಮತ್ತು ಆಡಳಿತದ ಗುಣಮಟ್ಟವೂ ವೃತ್ತಿಪರ ರೀತಿಯಲ್ಲಿರುತ್ತದೆ. ಇಂತಹ ವ್ಯವಸ್ಥೆಯ ಇಡೀ ಹಿರಿಮೆ ಇರುವುದು ಸಾಮಾಜಿಕ ಉತ್ತರದಾಯಿತ್ವದ ಮೂಲಕ ಪಾರದರ್ಶಕವಾಗಿ ಜವಾಬ್ದಾರಿಯುತವಾಗಿ ನಡೆಯಲು ಅನುವಾಗುವ ರೀತಿಯ ಸಂಘಟನೆ. ಈ ಮಾದರಿಯ ಸಾಮಾಜಿಕ ‘ಉದ್ಯಮ ಶೀಲತೆ’ ರೂಪುಗೊಳ್ಳಲು ಯೂರೋಪ್‌ನ ಸಾಮಾಜಿಕ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಪರಿಸರ  ಗಾಢವಾದ ಪರಿಣಾಮ ಬೀರಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 

ಮೇಲೆ ವಿವರಿಸಿದ ಮೂರು ಮಾದರಿಗಳು ರೂಪುಗೊಂಡಿರುವ ಹಿನ್ನೆಲೆ, ಸಾಮಾಜಿಕ ಪರಿಸರ ಆರ್ಥಿಕ ವಿನ್ಯಾಸ ಮತ್ತು ಚಾರಿತ್ರಿಕ ಸನ್ನಿವೇಶಗಳ ಒಟ್ಟು ಪರಿಣಾಮ ಎನ್ನುವುದನ್ನು ನೆನಪಿಡಬೇಕಿದೆ. ಮುಂದಿನ ಭಾಗದಲ್ಲಿ ಭಾರತದಲ್ಲಿ ಸಾಮಾಜಿಕ ಉದ್ಯಮ ಶೀಲತೆಯ ಕುರಿತಂತೆ ಯಾವ ರೀತಿಯ ಅಧ್ಯಯನ, ಸಂಶೋಧನೆ ಮತ್ತು ಕಾರ್ಯಯೋಜನೆಗಳಿವೆ. ಅಕಾಡೆಮಿಕ್, ಉದ್ಯಮವಲಯ ಮತ್ತು ಪ್ರತಿಷ್ಠಾನಗಳು ಈ ಉದ್ಯಮ ಜಗತ್ತಿನ ಹೊಸ ತಳಿಯ ಕುರಿತಂತೆ ಯಾವ ನಿಲುವನ್ನು ಹೊಂದಿದ್ದಾರೆ ಎನ್ನುವ ಎನ್ನುವ ವಿಚಾರಗಳನ್ನು ಚರ್ಚಿಸಲಾಗಿದೆ.

ಭಾಗ- ೨


ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕçತಿಕ ಪರಿಸರಗಳ ಹಿನ್ನೆಲೆಯಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಂಡರೆ ಅಂತಹ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಹೊಸ ಮಾದರಿಯ ಹೊಸವಿನ್ಯಾಸಗಳು ಅನ್ವೇಷಿಸಲ್ಪಡುತ್ತವೆ. ಇಂತಹದೇ ಪರಿಸ್ಥಿತಿಯಲ್ಲಿ ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ, ನೇರವಾಗಿ ಪ್ರಸ್ತಾಪಿಸುವುದೇ ಆದರೆ ಜಾಗತಿಕ ನೆಲೆಯಲ್ಲಿ ಶೀತಲ ಸಮರದ ನಂತರ ಬಂಡವಾಳಶಾಹೀ ಮುಕ್ತ ಅರ್ಥವ್ಯವಸ್ಥೆ ಜಾಗತಿಕ  ಅರ್ಥವ್ಯವಸ್ಥೆಯ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಿದ ಪರಿಣಾಮವಾಗಿ (ಬೇಡಿಕೆ ಪರ‍್ಯೆಕೆ ಆಧಾರಿತ) ಮಾರುಕಟ್ಟೆ ಆಧಾರಿತ,  ಅನಿಯಂತ್ರಿಕ (ಆಡಂಸ್ಮಿತ ಹೇಳುವ ಹಾಗೆ ಸ್ವನಿಯಂತ್ರಿತ) ವ್ಯವಸ್ಥೆ ಬಲಗೊಂಡಿದೆ. ಬೇಡಿಕೆ, ಪರ‍್ಯೆಕೆಯ ಪ್ರಕ್ರಿಯೆ ಮೂಲಕ ಕಾರ್ಯನಿರ್ವಹಿಸುವ ಇಂತಹ ಹೊಸ ವಿನ್ಯಾಸದಲ್ಲಿ ಪಾಲ್ಗೋಳ್ಳಲಾಗದ ಒಂದು ಸಮೂದಾಯವನ್ನು ತಲುಪಲು ಹೊಸರೀತಿಯ ಮಾರ್ಗೋಪಾಯಗಳನ್ನು ಅನ್ವೇಷಿಸಲಾಗಿದ್ದು ಅಂತಹ ಇಡೀ ಪ್ರಯತ್ನವನ್ನು ತೃತೀಯವಲಯವಾಗಿ ಗುರುತಿಸಲಾಗಿದೆ. ತೃತೀಯ ವಲಯದೊಳಗಿನ ಹಲವು ಸಾಂಸ್ಥಿಕ ಪ್ರಭೇಧಗಳಲ್ಲಿ ಸಾಮಾಜಿಕ ಉದ್ಯಮ ಶೀಲತೆ ಕೂಡಾ ಒಂದು. ಈ ಮೊದಲೇ ವಿವರಿಸಿದ ಹಾಗೆ ಈ ಮಿಶ್ರ ತಳಿಯ ಸಂಸ್ಥೆಗಳ ಉದ್ದೇಶ, ಕಾರ್ಯವ್ಯಾಪ್ತಿ ಮತ್ತು ಒಟ್ಟಾರೆ ಗುರಿಗಳನ್ನು ಗಮನಿಸಿ ಇದು ಈಗಷ್ಟೇ ಅಸ್ತಿತ್ವಕ್ಕೆ ಬಂದ ಪರಿಕಲ್ಪನೆಯೆಂದು ಹೇಳುವುದು ಸಮಂಜಸವಲ್ಲ. ಕಾರಣ, ಭಾರತೀಯ ಉಪಖಂಡದಲ್ಲಿ ಈ ಹಿಂದೆ ಅಸ್ತಿತ್ವದಲ್ಲಿದ್ದ (ವಿವಿಧ ಸ್ವರೂಪಗಳಲ್ಲಿ) ವಿಭಿನ್ನ ರೀತಿಯ ಉದ್ಯಮಶೀಲ ಮಾದರಿಗಳ ಪರಂಪರೆಯನ್ನೇ ನಿರಾಕರಿಸಿದಂತಾಗುತ್ತದೆ. ಆಧುನೀಕತೆಯ  ಪ್ರಕ್ರಿಯೆ ಆರಂಭವಾದ ದಿನದಿಂದಲೇ ಇಂತಹ ಹಲವಾರು ಪ್ರಯತ್ನಗಳು ನಿರಂತರವಾಗಿ ನಡೆದಿದ್ದುವು ಮತ್ತು ಇಂದಿಗೂ ಮುಂದುವರಿದಿದೆ. ಈಗ ನಾವು ಉಲ್ಲೇಖಿಸುವ ಹೊಸ ಮಾದರಿಯಲ್ಲಿ ಸಾಮಾಜಿಕ ಆರ್ಥಿಕ ಪರಿವರ್ತನೆಯ ಪರ್ವ ಆರಂಭವಾದ ನಂತರದ ದಿನಗಳಲ್ಲಿ ಇಂತಹ ಪ್ರಯತ್ನಗಳನ್ನು ಅಭಿವೃದ್ಧಿ ಶೀಲ ದೇಶಗಳು ಕಲಿಸಿದ ಹೊಸ ಭಾಷೆಯಲ್ಲಿ ಮೂಲಕ ಗುರುತಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದೇವೆ ಎಂದಷ್ಟೇ ಹೇಳಬಹುದು. ಇಂತಹ ಅಭ್ಯಾಸವನ್ನು ಬೆಳೆಸಿಕೊಳ್ಳದೇ ಹೋದರೆ ಈಗ ಚಾಲ್ತಿಯಲ್ಲಿರುವ ಜ್ಞಾನ ಜಗತ್ತಿಗೆ ಮತ್ತದರ ಆಧುನಿಕ ವಾಙ್ಮಯದಲ್ಲಿ ನಮಗೆ ಸ್ಥಾನವಿರುವುದಿಲ್ಲ. ಈ ಸೂಕ್ಷö್ಮವನ್ನು ಅರಿತುಕೊಂಡೇ ನಾವು ಭಾರತದಲ್ಲಿ ನಡೆಯುತ್ತಿರುವ ಬೆಳವಣೆಗೆಗಳನ್ನು ತಿಳಿದುಕೊಳ್ಳಬೇಕಿದೆ.


ಪ್ರಸ್ತುತ ಸಾಮಾಜಿಕ ಉದ್ಯಮಶೀಲತೆಯ ಆಶಯ ಮತ್ತು ಉದ್ದೇಶಗಳನ್ನು ಪೂರೈಸುವ ಚಟುವಟಿಕೆಗಳು ವಿಶ್ವದೆಲ್ಲೆಡೆ ಆಚರಣೆಯಲ್ಲಿದ್ದಿರಬಹುದಾದರೂ, ಅವುಗಳೆಲ್ಲವನ್ನು ಶಾಸ್ತಿçÃಯವಾದ ರೀತಿಯಲ್ಲಿ ದಾಖಲಿಸಲಾಗಿಲ್ಲ, ಅವು ವಿದ್ವಾಂಸರ, ಚಿಂತಕರ ಚರ್ಚೆಯ ಭಾಗವಾಗಿ ದೇಶದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ನಮ್ಮಲ್ಲಿರುವ ಸಾಮಾಜಿಕ ವ್ಯವಸ್ಥೆಯೇ ಭಿನ್ನವಾಗಿರುವುದು ಮತ್ತು ಆರ್ಥಿಕ ವ್ಯವಸ್ಥೆಗಳು ಸಂಘಟಿತವಾಗಿರುವುದರ ಹಿಂದಿನ ಧ್ಯೇಯೋಧ್ದೇಶಗಳು ಕೇವಲ ಲಾಭ-ನಷ್ಟ ಮಾತ್ರವಲ್ಲ, ಪಾಪ ಪುಣ್ಯಗಳ ಕಲ್ಪನೆಯಿಂದಲೂ ಪ್ರಭಾವಿತವಾಗಿವೆ. ಈ ಕಾರಣದಿಂದ ಸಮಾಜ ಕಲ್ಯಾಣ ಎನ್ನುವುದು (ಸಾಮಾಜಿಕ ಚಿಂತನೆಯ) ಕೃಷಿ, ಕೈಗಾರಿಕೆ, ಸೇವಾವಲಯವನ್ನು ಸೇರಿಸಿದಂತೆ ಎಲ್ಲಾ ಉತ್ಪದನಾ ಕಾರ್ಯಗಳನ್ನು ಪ್ರಭಾವಿಸಿವೆ. ಮಠ ಮಾನ್ಯಗಳು, ಸಾಮುದಾಯಿಕ ನೆಲೆಯಲ್ಲಿ ಸಂಘಟಿತವಾಗಿರುವ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೇವಾ ಸಂಸ್ಥೆಗಳು ಮತ್ತು ಇನ್ನಿತರ ಸಂಸ್ಥೆಗಳ ಹಿನ್ನೆಲೆ ಗಮನಿಸಿದರೆ ಈ ಅಂಶ ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ. ಮಾತ್ರವಲ್ಲ ಇಂದಿನ ಪರಿಸ್ಥಿತಿಯಲ್ಲಿ ಯಾರನ್ನು ಸಾಮಾಜಿಕ ಉದ್ಯಮಿಗಳು ಎಂದು ಪರಿಗಣಿಸಬಹುದೋ ಅಂತಹ ಹಲವಾರು ವ್ಯಕ್ತಿಗಳನ್ನು ಭಾರತೀಯ ಇತಿಹಾಸದ ಸಂದರ್ಭಗಳಲ್ಲಿಯೂ Uಮನಿಸಬಹುದಾಗಿದೆ, (ನೋಡಿ ಪಂಡಿತಾ ರಮಾಬಾಯಿ ಸರಸ್ವತಿ). ಉದ್ಯಮಶೀಲತೆಯ ಈ ವಾಙ್ಮಯದ ಹಿನ್ನೆಲೆಗಳನ್ನು ಗಮನಿಸಿದಾಗ ಇದೊಂದು ಏಕಾಏಕಿಯಾಗಿ ಹೊಸದಾಗಿ ಅನ್ವೇಷಿಸಲಾದ ಪರಿಕಲ್ಪನೆಯಲ್ಲ ಎನ್ನುವ ಅಂಶ ಸ್ಪ಼ಷ್ಟವಾಗುತ್ತದೆ. ಪ್ರಾಯಶ: ಈ ಪರಿಕಲ್ಪನೆಯ ಕುರಿತಂತೆ ಚಲಾವಣೆಯಲ್ಲಿರುವ ಮತ್ತು ಸ್ಥಾಪಿಸಲಾಗುತ್ತಿರುವ ವ್ಯಾಖ್ಯಾನಗಳನ್ನು ನೋಡಿದಾಗಲೂ ಆರ್ಥಿಕ ನೆಲೆಯಿಂದ /ಯಾ ಮಾರುಕಟ್ಟೆ ಆಧಾರಿತ ಮಾರುಕಟ್ಟೆ ನೆಲೆಯಿಂದ ಇದನ್ನು ವ್ಯಾಖ್ಯಾನಿಸುವ ಪ್ರಯತ್ನಗಳೇ ಮುಖ್ಯವಾಗಿ, ಬಹುಮುಖೀ ಚಿಂತನಾ ವಿನ್ಯಾಸದ ಎಳೆಗಳನ್ನು ಈ ವ್ಯಾಖ್ಯಾನ ಒಳಗೊಳ್ಳದಿರುವ ಪರಿಸ್ಥಿತಿಯನ್ನು ಕಾಣಬಹುದು.


ಸಾಮಾಜಿಕ ಉದ್ಯಮಶೀಲತೆಯೆನ್ನುವುದು ಈ ತೃತೀಯ ವಲಯದ ಪರಿಧಿಯೊಳಗೆ ಬರುವ ಒಂದು ಅಭಿವೃದ್ಧಿ ವಿನ್ಯಾಸವಾಗಿದೆ. ಇಂತಹ ವಿನ್ಯಾಸದ ಕುರಿತಂತೆ ವಿಮರ್ಶೆ, ಇದರ ಅನ್ವಯಿಕತೆ ಮತ್ತು ಮರು ನಿರೂಪಣೆಯ ಅಗತ್ಯಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಬೇಕಿದೆ. ನಾವು (ಭಾರತದ ಅರ್ಥ ವ್ಯವಸ್ಥೆ) ಎದುರಿಸುತ್ತಿರುವ ಯಾವ ಸಮಸ್ಯೆಗಳನ್ನು  ಎಷ್ಟರಮಟ್ಟಿಗೆ ಈ ವಿನ್ಯಾಸ ನಿವಾರಿಸಬಹುದು. ನಮ್ಮಲ್ಲಿರುವ ಉದ್ಯಮಶೀಲತೆಯÀ ಮಾದರಿ ಯಾವುದು, ಇದರ ಹಿಂದಿನ ಹಿತಾಸಕ್ತಿಗಳು ಏನು? ಈ ವಿಚಾರಗಳನ್ನು ಮುಂದಿನ ಭಾಗಗಳಲ್ಲಿ ಚರ್ಚಿಸಲಾಗಿದೆ.


ಭಾಗ – ೩


ಸ್ವಾತಂತ್ರಾö್ಯ ನಂತರ ಹಲವು ದಶಕಗಳ ನಂತರವೂ ಆರೋಗ್ಯ, ಶಿಕ್ಷಣ, ಉದ್ಯೋಗ ನೀಡಲು ನಮ್ಮ ಸರಕಾರಗಳಿಗೆ ಸಾಧ್ಯವಾಗಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಆರಂಭವಾದ ವಯಸ್ಕರ ಶಿಕ್ಷಣ, ಸ್ವಉದ್ಯೋಗ ಯೋಜನೆ, ಮಹಿಳಾ ಸಬಲೀಕರಣವೇ ಮುಂತಾದ ಕಾರ್ಯಕ್ರಮಗಳನ್ನು ಸರಕಾರೇತರ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಖಾಸಗೀ ಪ್ರತಿಷ್ಠಾನಗಳ ಮೂಲಕ ಅನುಷ್ಠಾನಗೊಳಿಸುವ  ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಪುಟಾಣಿ ಸಾಲ ಯೋಜನೆ (ಒiಛಿಡಿo ಈiಟಿಚಿಟಿಛಿe Pಡಿogಡಿಚಿm) ಬಹಳ ಜನಪ್ರಿಯವಾದ ಯೋಜನೆ. ಇದಲ್ಲದೆ ಮಹಿಳಾ ಸಶಕ್ತೀಕರಣ, ಸಾವಯವ ಕೃಷಿಯ ಮೂಲಕ ಆಹಾರ ಉತ್ಪಾದನೆ , ಗಿಡಮೂಲಿಕೆಗಳ ಉಪಯೋಗ, ಸಾಂಪ್ರದಾಯಿಕವಲ್ಲದ ಇಂದನ ಉತ್ಪಾದನೆ, ತ್ಯಾಜ್ಯ ಮರುಬಳಕೆ, ಪರಿಸರ ಸ್ನೇಹೀ ಕಟ್ಟಡ ನಿರ್ಮಾಣ ಸಾಮಾಗ್ರಿಗಳು, ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಶಿಕ್ಷಣ, ಹೆಚ್.ಐ.ವಿ. ಪೀಡಿತರಿಗೆ ಪುನರ್ವಸತಿ ಒzಗಿಸುವುದು, ಬ್ರಹತ್ ಯೋಜನೆಗಳಿಂದ ನಿರ್ವಸಿತರಾದವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಇತ್ಯಾದಿ ಸವಾಲುಗಳನ್ನು ಎದುರಿಸುವ ಪರಿಹರಿಸುವ ನಿಟ್ಟಿನಲ್ಲಿ ಸಾಮಾಜಿಕ ಉದ್ಯಮಗಳು, ಉದ್ಯಮಶೀಲರು ಕಾರ್ಯ ಪ್ರವೃತ್ರರಾಗಿರುವ ಪರಿಸ್ಥಿತಿಯನ್ನು ಕಾಣಬಹುದು. ಈ ದಿಸೆಯಲ್ಲಿ ಅಹಮದಾಬಾದಿನ ಸೇವಾ, ಪುಣೆಯ ಲಿಜ್ಜತ್, ಬೆಂಗಳೂರಿನ ಸೆಲ್ಕೊ, ಬಿಹಾರ ಮೂಲದ ಬಿಂದೇಶ್ವರ, ದುಬೆಯವರು ಸುಲಭ್ ಶೌಚಾಲಯ, ವಾಧ್ವಾನಿ ಪೌಂಡೇಶನ್, ಚೆನ್ನೆöÊಯ ವರ್ಕಿಂಗ್ ವಿಮೆನ್ಸ್ ಫೋರಂ, ಅರವಿಂದ ನೇತ್ರಾಲಯ, ಬೆಂಗಳೂರಿನ ನಾರಾಯಣ ಹೃದಯಾಲಯ, ಮಹೀಂದ್ರಾ ಸ್ಪಾರ್ಕ್ ಇತ್ಯಾದಿ ಸಂಸ್ಥೆಗಳನ್ನು ಹೆಸರಿಸಬಹುದು

ಅಕಾಡೆಮಿಕ್ ವಲಯದಲ್ಲಿ ಸಾಮಾಜಿಕ ಉದ್ಯಮ ಶೀಲತೆಗೆ ಸಂಬAಧಿಸಿದAತೆ ಅಧ್ಯಯನ, ಸಂಶೋಧನೆ ಮತ್ತು ಸಾಮಾಜಿಕ ಉದ್ಯಮ ವಲಯವನ್ನು ಅಭಿವೃಧ್ದಿ ಪಡಿಸುವ ದೃಷ್ಟಿಯಿಂದ ವೃತ್ತಿಪರವಾದ ಉನ್ನತ ಶಿಕ್ಷಣ ನೀಡುವ ಕೆಲಸವು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮುಂಬ್ಯೆಯ ಟಾಟಾ ಸಮಾಜ ವಿಜ್ಞಾನ ಸಂಸ್ಥೆ, ಅಹಮದಾಬಾದಿನಲ್ಲಿರುವ ಎಂಟ್ರಿ ಪ್ರಿನರ್‌ಶಿಫ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಅಫ್ ಇಂಡಿಯಾ ಪ್ರಮುಖವಾದುದು. ನಮ್ಮ ದೇಶದ ಶೈಕ್ಷಣಿಕ ವ್ಯವಸ್ಥೆಯ ಮುಕುಟ ಪ್ರಾಯ ತಾಂತ್ರಿಕ ಶಿಕ್ಷಣ ಸಂಸ್ಥೆಯಗಳಾಗಿರುವ ಐ.ಐ.ಟಿ ಯಂತಹ ಸಂಸ್ಥೆಗಳು ಕೂಡಾ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನವನ್ನು ಸಾಮ್ರಾಜ್ಯ ಜನರ ಸಹಭಾಗಿತ್ವದಲ್ಲಿ ಆರಂಭಗೊಳ್ಳುವ ಅಥವಾ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರೋಪಾಯ ನೀಡಬಲ್ಲ ಉದ್ಯಮಗಳಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಹೀಗೆ ಹತ್ತು ಹಲವು ರೀತಿಯಲ್ಲಿ ಸಾಮಾಜಿಕ ಉದ್ಯಮ ಶೀಲತೆಗೆ ಸಂಬAಧಿಸಿದ ಚಟುವಟಿಕೆ, ಚಿಂತನೆ, ಕಾರ್ಯ ಯೋಜನೆಗಳು ಮತ್ತು ಸಂಶೋಧನೆಗಳು ನಡೆಯುತ್ತಿವೆ.

ಕರ್ನಾಟಕ ರಾಜ್ಯದಲ್ಲಿಯೂ ಇಂತಹ ಚಟುವಟಿಕೆಗಳು ನಡೆಯುತ್ತಿವೆ. ಶಿವಮೊಗ್ಗ ಸಾಗರದ ಹೆಗ್ಗೋಡಿನ ರಂಗ ಕರ್ಮಿ ಪ್ರಸನ್ನ ಅವರ ಚಿಂತನೆಯ ಕೂಸಾಗಿರುವ ‘ಚರಕ’ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಹಕಾರಿ ಸಂಘ ಮತ್ತು ‘ದೇಸೀ’ ವಸ್ತç ಮಾರಾಟದ ಮಳಿಗೆಗಳು ಬಹಳ ಪ್ರಮುಖವಾದದ್ದು. ಇದು ಪ್ರಮುಖವಾzದ್ದು ಎಂದು ಉಲ್ಲೇಖಿಸುವುದಕ್ಕೆ ಕಾರಣ ಈ ಸಂಸ್ಥೆಗಳ ಹುಟ್ಟಿನ ಹಿಂದಿರುವ ಚಿಂತನೆ, ಅವು ಸಂಘಟಿತವಾಗಿರುವ ಮತ್ತು ಕಾರ್ಯನಿರ್ವಹಿಸುತ್ತಿರುವ ರೀತಿ. ಪ್ರಸನ್ನ ಅವರು ‘ದೇಸೀ ಜೀವನ ಪದ್ಧತಿ’ ಮತ್ತು ಯಂತ್ರಗಳನ್ನು ಕಳಚೋಣ ಎನ್ನುವ ಎರಡು ಕೃತಿಗಳಲ್ಲಿ ಬಹಳಷ್ಟು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಆದ್ದರಿಂದ ಈ ಎರಡು ಸಂಸ್ಥೆಗಳ ಹಿಂದಿರುವ ಆಶಯ ಗ್ರಹೀತ ಮತ್ತು ಉದ್ಯಮಗಳ ಒಟ್ಟಾರೆ ಆಶಯದ ಹಿಂದೆ ಒಂದು ಸ್ಪಷ್ಟವಾದ ಕಲ್ಪನೆ ಇರುವುದು ಕಂಡುಬರುತ್ತದೆ. ದಾವಣಗೆರೆಯ ‘ಸಂವೇದ, ಹುಣಸೂರಿನ ‘ಶ್ರೀವಿವೇಕಾನಂದ ಗಿರಿಜನ ಕೇಂದ್ರ’ ಹರೀಶ್ ಹಂದೆಯವರ ‘ಸೆಲ್ಕೋ’ ಇವುಗಳನ್ನು ಇಲ್ಲಿ ಅಧ್ಯಯನ  ದೃಷ್ಟಿಯಿಂದ ಉಲ್ಲೇಖಿಸ ಬಹುದಾಗಿದೆ. ಇದರೊಂದಿಗೇನೇ ಅಶೋಕಾ ಪ್ರತಿಷ್ಠಾನದಂತಹ ಹಲವಾರು ವಿದೇಶೀ ಮೂಲದ ಪ್ರತಿಷ್ಠಾ£ಗಳು, ಅಸೋಚೆಮ್‌ನಂತಹ ಉದ್ಯಮಶೀಲರ ವ್ಯಾಪಾರಸ್ಥರ ಸಂಘಟನೆಗಳು ಸಾಮಾಜಿಕ ಉದ್ಯಮಶೀಲತಾ ವಲಯದ ಮೇಲೇ ಪ್ರಭಾವ ಬೀರುತ್ತಿವೆ. ವರ್ತಮಾನದ ಬೆಳವಣಿಗೆಯನ್ನು ಗಮನಿಸಿದರೆ ಈ ಹೊಸ ಪರಿಕಲ್ಪನೆ ಅಭಿವೃದ್ದಿಯ ಹೊಸ ವಿನ್ಯಾಸವಾಗಿ, ಸಮಾಜಕಲ್ಯಾಣ ಸಾಧನೆಯ ಸಾಧನವಾಗಿ ಅಧ್ಯಯನ ವiತ್ತು ಸಂಶೋಧನೆಯ ವಿಷಯವಾಗಿ ಮಹತ್ವ ಪಡೆದುಕೊಳ್ಳುತ್ತಿದೆ.

ಭಾಗ – ೪


ಸಾಮಾಜಿಕ ಉದ್ಯಮಶೀಲತೆಗೆ ಸಂಬAಧಿಸಿz ಜ್ಞಾನಮೀಮಾಂಸೆ ಇನ್ನೂ ಒಂದು ವೈಜ್ಙಾನಿಕ ಆಯಾಮವನ್ನು ಪಡೆದುಕೊಂಡಿಲ್ಲ ಜಾಗತಿಕ ಮಟ್ಟದಲ್ಲಿ ಚಿಂತಕರ, ಸಂಶೋಧಕರ ಉದ್ಯಮ ವಲಯದ, ಅಭಿವೃಧ್ದಿ ಯೋಜಕರ ಗಮನ ಸೆಳೆದಿದೆಯಾದರೂ ಇದಿನ್ನೂ ಬೆಳೆಯುತ್ತಿರುವ ಜ್ಞಾನ ಶಾಖೆ. ಕೆಲವು ನಿರ್ಧಿಷ್ಟ ಸಂದರ್ಭಗಳಲ್ಲಿ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ಕಾರಣಗಳಿಂದ ನಡೆಸಲಾದ ಯಶಸ್ವೀ ಪ್ರಯೋಗಗಳ ಸುತ್ತ ಸಾಮಾಜಿಕ ಉದ್ಯಮಶೀಲತೆಯ (ವ್ಯಾಖ್ಯಾನ) ಪರಿಕಲ್ಪನೆಯನ್ನು ನಿರ್ಮಿಸಲಾಗಿದೆ.    ಅಂದರೆ ನಿಲಕ್ಷಿತ ವರ್ಗಗಳ ಆರ್ಥಿP ಒಳಗೊಳ್ಳುವಿಕೆಯಂತಹ, ಸಾಮಾಜಿಕ ಕಾಳಜಿಯುಳ್ಳ, ಉದ್ದೇಶ ಹೊಂದಿರುವ,  ಇಂತಹ ಮಾದರಿಗಳು (ಸಂಪನ್ಮೂಲ ಸಂಗ್ರಹಿಸುವ ನಿಟ್ಟಿನಿಂದ ಉದ್ಯಮ ಜಗತ್ತಿನ ವ್ಯವಹಾರ ಆಡಳಿತ ತತ್ವಗಳನ್ನು ಅಳವಡಿಸಿಕೊಂಡ) ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಕಂಡು ಬರುತ್ತಿವೆ. ಇವು ಯಶಸ್ವಿಯಾಗಿರುವುದಕ್ಕೆ ನಿರ್ಧಿಷ್ಟ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ಕಾರಣಗಳಿವೆ ಎನ್ನುವುದನ್ನು ನಾವು ಮರೆಯಬಾರದು. ಜಗತ್ತಿನಾದ್ಯಂತ ಒಂದೇ ರೀತಿಯ ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಪರಿಸರವಾಗಲೀ ಇಲ್ಲ. ಹಾಗಿರುವಾಗ ಈ ಯಶಸ್ವೀ ಮಾದರಿಗಳ ಹಿಂದಿನ ನಿರ್ಧಾರಕ ಶಕ್ತಿಗಳು ಒಂದೇ ಆಗಿರುವುದು ಸಾಧ್ಯವಿಲ್ಲ. ಹೀಗಾಗಿ ಈ ಪರಿಕಲ್ಪನೆಯ ವ್ಯಾಖ್ಯಾ£ದಲ್ಲಿ ನಾವು ಸ್ವಾಭಾವಿಕವಾಗಿಯೇ ಪ್ರಬೇಧಗಳನ್ನು ಕಾಣಬಹುದು. ಸಮಾಜಿಕ ಮತ್ತು ಉದ್ಯಮಶೀಲತೆ ಎನ್ನುವ ಈ ಎರಡು ಕಲ್ಪನೆಯನ್ನು ಕಸಿ ಮಾಡಿ ಸಾಮಾಜಿಕ ಉದ್ಯಮಶೀಲತೆಎನ್ನುವ ಮಿಶ್ರ ತಳಿಯ ಸಾಂಸ್ಥಿಕ ರಚನೆಯನ್ನು ಪರಿಭಾವಿಸಿದÀ ಇಡೀ ಪ್ರಕ್ರಿಯೆಯನ್ನು ಗಮನಿಸಿದಾಗ ಇದು ಕ್ರಮಿಸಿದ ಹಾದಿ ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ದಿಸೆಯಲ್ಲಿ ಯೂರೋಪಿನ ಕೆಲವೊಂದು ವಿದ್ವಾಂಸರು ಬೆಳಕು ಚೆಲ್ಲುವ ಕೆಲಸವನ್ನು ಮಾಡಿದ್ದಾರೆ. ಈ ಕುರಿತ ವಿಮರ್ಶೆಯ ಕೆಲವು (ಕವಲುಗಳನ್ನು) ಪದಗಳನ್ನು ಗಮನಿಸಬೇಕಿದೆ.


ಆರೋಗ್ಯ, ಶಿಕ್ಷಣ, ಉದ್ಯೋಗ ಒದಗಿಸುವುದು (ಯಾ ಮಾನವಸಂಪನ್ನೂಲ ಸಜ್ಜಳೀಕೆ) ಪರಿಸರ, ಲಿಂಗ ತಾರತಮ್ಯ, ನಗರೀಕರಣ ಇತ್ಯಾದಿ ವಲಯಗಳಿಗೆ ಸಂಬAಧಿಸಿದ ಸಮಸ್ಯೆಗಳಿಗೆ ಪರಿಹಾರ ಅನ್ವೇಷಿಸಲಾದ ಯಶಸ್ವೀ ªಮಾದರಿಗಳನ್ನು ವೈಭವೀಕರಿಸಿರುವ ದೃಷ್ಟಾಂತಗಳನ್ನು ಆಯ್ದು ತೆಗೆದು ಅದರ ಆಧಾರದ ಮೇಲೇ ಏನು ಅಭಿವೃಧ್ದಿಯ ಉದ್ಯಮಶೀಲತೆಯ ಹೊಸ ವಿನ್ಯಾಸವನ್ನು ಗುರುತಿಸಲಾಗಿದೆಯೋ ಆ ಇಡೀ ಪ್ರಕ್ರಿಯೆಯ ಹಿಂದೆ ಕೆಲವು ಚಾಲಕ ಶಕ್ತಿಗಳಿವೆ ಮತ್ತು ಅದರ ಹಿಂದೆ ಒಂದು ರಾಜಕೀಯವಿದೆ ಎನ್ನುವ ಗುಮಾನಿ ಸಂಪೂರ್ಣ ನಿರಾಧಾರವಲ್ಲ. ಇಂತಹ ಮಾದರಿಗಳು ಬಳಸುವ ತಂತ್ರಗಳು ಉಪಯೋಗಿಸುವ ಭಾಷೆ ಜಗತ್ತಿನಾದ್ಯಂತ ಇರುವ ಕೆಲವು ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಿ ಬಿಡಬಹುದೆನ್ನುವ ತರ್ಕ, ವ್ಯವಸ್ಥೆಯಲ್ಲಿ ಹುದುಗಿರುವ ಕೆಲವು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳಲ್ಲಿರುವ ಸಂಕೀರ್ಣತೆಯನ್ನು ಅಲ್ಲಗಳೆಯುತ್ತವೆ. ಮೇಲ್ನೋಟಕ್ಕೆ ಇದು ಆಕರ್ಷಕವಾಗಿ ಕಾಣಬಹುದಾದರೂ ಆಳದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಉದಾಹರಣೆ ಪುಟಾಣಿ ಸಾಲಯೋಜನೆಯ ಬಗ್ಗೆ ಬಡದೇಶಗಳು ಮಾತನಾಡುವಾಗ ಬೇಡಿಕೆಯ ಮಗ್ಗುಲಿನಿಂದ, ಆರ್ಥಿಕ ಸಂಪನ್ಮೂಲದ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ನೋಡುತ್ತವೆ. ಅದೇ ಮುಂದುವರಿದ ದೇಶಗಳು ಈ ಯೋಜನೆಯನ್ನು ಉಳಿತಾಯದ ಹೂಡಿಕೆಗಿರುವ ಅವಕಾಶಗಳ ದೃಷ್ಟಿಯಿಂದ, ಸಾಮಾನ್ಯವಾಗಿ ಹಣಕಾಸು ಸಂಸ್ಥೆಗಳು ನೀಡುವ ಬಡ್ಡ್ಡಿಯ ದರಕ್ಕಿಂತ ಅಧಿಕ ಬಡ್ಡಿ ಲಭ್ಯವಾಗಬಲ್ಲ ಸಾಧ್ಯತೆಯ ದೃಷ್ಟಿಯಿಂದ ನೋಡುತ್ತವೆ. ಅರ್ಥಾತ್ ಒಂದೆ ಪರಿಕಲ್ಪನೆಯನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕçತಿಕವಾಗಿ ವಿಭಿನ್ನ ಹಿನ್ನೆಲೆಯಲ್ಲಿರುವ ಜನ, ಸಮುದಾಯ ಅರ್ಥ್ಯೆಸುವ ರೀತಿ ಮತ್ತು ದೃಷ್ಟಿಕೋನಗಳು ಬೇರೆ ಬೇರೆಯಾಗಿರುತ್ತವೆ ಎನ್ನುವುದು ಬºಳ ಇಲ್ಲಿಮುಖ್ಯ. ಇಂದು ಸಾÀಮಾಜಿಕ ಉಧ್ಯಮಶೀಲತೆಯ ಕುರಿತ ಚರ್ಚೆಗಳಲ್ಲಿ ಇಂತಹ ಒಂದು ಸೂಕ್ಷö್ಮವನ್ನು ನಿರ್ಲಕ್ಷಿಸಲಾಗಿದೆ. ಸಾಮಾಜಿಕ ಉಧ್ಯಮಶೀಲತೆಯ ಚರ್ಚೆಗಳು ಉಲ್ಲೇಖಿಸುವ, ಕಾರ್ಯದಕ್ಷತೆ, ಆರ್ಥಿಕ ಶಿಸ್ತು, ಪರಿಣಾಮಕಾರೀ ಆಡಳಿತ ವ್ಯವಸ್ಥೆ, ಸಾಮಾಜಿಕ ಉತ್ತರದಾಯಿತ್ವ, ಸಂಪನ್ಮೂಲ ಸಂಗ್ರಹದಲ್ಲಿ ಸಾಧನೆ ಇತ್ಯಾದಿಗಳ ಬಗ್ಗೆ ಇನ್ನಿಲ್ಲದ ಮಹತ್ವವನ್ನು ನೀಡÀÄತ್ತಿವೆ. 


ಸಾಮಾಜಿಕ ಉಧ್ಯಮಶೀಲತೆಯ ಅವಶ್ಯಕತೆಯನ್ನು ಉಲ್ಲೇಖಿಸುವಾಗ ಇದೊಂದು ಕ್ರಾಂತಿಕಾರಕ ಕ್ರಮವಾಗಬಹುದೆನ್ನುವುರತ್ತ ಬಹಳಷ್ಟು ಒತ್ತು ನೀಡಲಾಗುತ್ತಿದೆ. ವಿಶೇಷವಾಗಿ ದಾನಿಗಳಿಂದ, ಸರಕಾರಗಳಿಂದ, ಸಹಾಯ ಮತ್ತು ಸಂಪನ್ಮೂಲ ಪಡೆಯುವ ಸರಕಾರೇತರ ಮತ್ತು ಸ್ವಯಂಸೇವಾ ಸಂಸ್ಥೆಗಳು ಈ ಮಾದರಿಯನ್ನು ಅನುಸರಿಸುವ ಮೂಲಕ ಹಣಕಾಸಿನ ನೆರವು ನೀಡುವ ದಾನಿಗಳು ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಮೂಗು ತೂರಿಸುವ ಸನ್ನಿವೇಶವನ್ನು ಮತ್ತು ಹೊರಗಿನ ಕಾರ್ಯಸೂಚಿ ಉಂಟು ಮಾಡಬಹುದಾದ ಕಿರಿಕಿರಿಯಿಂದ ಪಾರಾಗಬಹುದೆನ್ನುವ ಮಾತುಗಳನ್ನು ಹೇಳಲಾಗುತ್ತಿದೆ. ಇಂತಹ ಎಲ್ಲಾ ವಾದಸರಣಿಗಳನ್ನು ಗಮನಿಸುತ್ತಾ ಹೋದಾಗ ಸಾಮಾಜಿಕ ಉದ್ಯಮಶೀಲತೆಯನ್ನು ಹಿಂದೆ ಮುಕ್ತ ಅರ್ಥವ್ಯವಸ್ಥೆಯನ್ನು ಪ್ರತಿಪಾದಿಸುವಾಗ ಉದ್ಯಮಶೀಲತೆಯ ಕುರಿತು ಯಾವ ರೀತಿಯ ವಾಗ್ವಾದಗಳನ್ನು ಚಲಾವಣೆಗೆ ತರಲಾಯಿತೋ ಅಂತಹದೇ ರೀತಿಯ ಪ್ರಯತ್ನಗಳು ಕಂಡುಬರುತ್ತಿವೆ. ಅಭಿವೃದ್ಧಿಶೀಲ ದೇಶಗಳು ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿ ಹೊಂದದೇ ಇರುವುದಕ್ಕೆ, ಉಧ್ಯಮಶೀಲತೆಯ ಪೂರ್ಣ ವಿಕಸನಕ್ಕೆ ಸರಕಾರೀ ವ್ಯವಸ್ಥೆಯು ಉಂಟು ಮಾಡಿರಬಹುದಾದ ಅಡ್ಡಿ ಆತಂಕಗಳೇ ಕಾರಣ ಎನ್ನುವ ವಾದವನ್ನು ಮುಂದಿಡಲಾಗಿತ್ತು ಇಂತಹ ಅಡ್ಡಿ ಆತಂಕಗಳನ್ನು ನಿವಾರಿಸಿದಲ್ಲಿ ಉಧ್ಯಮಶೀಲತೆಗೆ ವಿಕಸನಕ್ಕೆ ಸೂಕ್ತ ಅವಕಾಶಗಳು ನಿರ್ಮಾಣವಾಗಿ ಅಭಿವೃದ್ಧಿಯ ದರದಲ್ಲಿ ಏರಿಕೆಯಾಗಿ ಬಡತನ, ಲಿಂಗತಾರತಮ್ಯ, ನಿರುದ್ಯೋಗದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ತಿಳಿಯಲಾಗಿತ್ತು. ಸಾಮಾಜಿಕ ಉಧ್ಯಮಶೀಲತೆಯ ಕುರಿತಂತೆ ನಡೆಯುತ್ತಿರುವ ಚರ್ಚೆಗಳ ಹಿಂದೆಯು ಇಂತಹದೇ ಗ್ರಹೀತಗಳು ಹುದುಗಿರುವುದನ್ನು ಕಾಣಬಹುದು.

ಇಂದು ನಾವು ಏನು ಸಾಮಾಜಿಕ ಉಧ್ಯಮಶೀಲತೆ ಎಂದು ಗಮನಿಸುತ್ತೇವೋ ಅದಕ್ಕೆ ಜಾಗತಿಕವಾಗಿ ಒಂದು ಚರಿತ್ರೆ ಎಲ್ಲಾ ಸಮಾಜಗಳಲ್ಲಿಯೂ ಇತ್ತು, ಇದೆ ಮತ್ತು ಇರುತ್ತದೆ. ಯಾಕೆಂದರೆ ಸದಾಕಾಲದಲ್ಲಿ ಮಾರುಕಟ್ಟೆಯ ಶಕ್ತಿಗಳಿಗಿಂತ ದೂರದಲ್ಲಿ ಇದ್ದು ಬಿಡುವ ಒಂದು ಸಣ್ಣ ಸಮೂದಾಯವಾದರೂ ಇರುತ್ತದೆ. ಇಂತಹ ಸಮುದಾಯದÀ ಆಶೋತ್ತರಗಳನ್ನು ಈಡೇರಿಸುವ  ಹೊಣೆಗಾರಿಕೆ ನಾಗರಿಕ ಸಮಾಜಕ್ಕೆ ಸೇರಿರುತ್ತದೆ.  ಇಂತಹ ಸಮಸ್ಯೆಗಳನ್ನು ಅನುಸರಿಸಿದ ಕ್ರಮಗಳು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ (ಕಾರಣಗಳನ್ನು) ಅಂಶಗಳನ್ನು ಅವಲಂಭಿಸಿರುತ್ತವೆ. ಹಾಗಾಗಿ ಸಾಮಾಜಿಕ ಸಂಸ್ಥೆಗಳನ್ನು ಈ ಅಂಶಗಳಿAದ ಪ್ರತ್ಯೇಕಿಸಿ ನೋಡದೇ ನಿರ್ಧಾರಕ ಅಂಶಗಳ ಹಿನ್ನೆಲೆಯಲ್ಲಿ ಗಮನಿಸಬೇಕು. ಇಂತಹ ಒಂದು ಗಂಭೀರವಾದ ಪ್ರಯತ್ನವನ್ನು ನಾವು ಮಾಡದೇ ಹೋದಲ್ಲಿ mಚಿಡಿgiಟಿಚಿಟisಚಿಣioಟಿ  ನ ತೀವ್ರತೆಯನ್ನು ಕಡಿಮೆ ಮಾಡಿರುವ ವೈವಿದ್ಯಮಯ ಸಾಮಾಜಿಕ ಸಂಸ್ಥೆಗಳ ವಿಶಿಷ್ಟ ಸ್ವರೂಪಗಳು ‘ಏPಶಿಲಾಮಾದರಿಯ’ ಸಿದ್ಧಾಂತಗಳ ದಾಳಿಗೆ ಬಲಿಯಾಗುವ ಅಪಾಯವಿದೆ. ಇಂತಹ ಹಲವೊಂದು ದೃಷ್ಟಾಂತಗಳನ್ನು ಗುರುತಿಸಿ ಅವುಗಳನ್ನು ವಿಶ್ಲೇಷಿಶಿಸಿ, ವಿಮರ್ಶೆಗೊಳಪಡಿಸಿ ‘ಸಾಮಾಜಿಕ ಉಧ್ಯಮಶೀಲತಾ’ ಅಧ್ಯಯನಕ್ಕೆ ಒಂದು ನಿರ್ಧಿಷ್ಠ ಸ್ವರೂಪ ನೀಡುವ, ಸೈದ್ಧಾಂತಿಕ ಭೂಮಿಕೆ ಒದಗಿಸುವ ಪ್ರಯತ್ನಗಳು ನಡೆಯುತ್ತಿವೆ. ಯಥಾಪ್ರಕಾರ ಇಂತಹ ಪ್ರಯತ್ನಗಳಲ್ಲಿ ವಿಶ್ವದ ಅಭಿವೃಧ್ಧಿಶೀಲ ದೇಶಗಳು ಮುಂದಿವೆ. ಹೊಸ ರೀತಿಯ ಅಥವಾ ನವೀನ ಮಾದರಿಯ ಚಿಂತನಾ ವಿನ್ಯಾಸ ರೂಪುಗೊಳ್ಳುವಾಗ ಅದನ್ನು ನಿರೂಪಿಸುವ, ನಿರ್ವಹಿಸುವ ಮತ್ತು ವ್ಯಾಖ್ಯಾನಿಸುವ ಯಜಮಾನಿಕೆಯಲ್ಲಿ ಅಮೇರಿಕಾ ಮತ್ತು ಯುರೋಪಿನ ವಿದ್ವಾಂಸರು ಮುಂಚೂಣಿಯಲ್ಲಿರುತ್ತಾರೆ. ಸಾಮಾಜಿಕ ಉದ್ಯಮ ಶೀಲತೆ ಅಧ್ಯಯನ ಮತ್ತು ಸಂಶೋಧನೆಯಯ ವಿಷಯದಲ್ಲಿಯೂ ಈ ಮಿತಿಯನ್ನು ನಾವು ಮೀರಿಬೆಳೆದಿಲ್ಲ. ಸಾಮಾಜಿಕ ಉದ್ಯಮಶೀಲತೆಯ ನೆಪದಲ್ಲಿ ಇಂತಹ ತೃತೀಯ ವಲಯವನ್ನು ಮಾರುಕಟ್ಟೆ ಸಿದ್ಧಾಂತದ ಸೂತ್ರ ಆವರಿಸಿ ಬಿಟ್ಟರೆ ಈಗಾಗಲೇ ಶಕ್ತಿ ಕಳಕೊಂಡ ಸಮಾಜದ ಕೆಲವರ್ಗಗಳಿಗೆ ಇದರಿಂದ ಕವಡೆ ಕಾಸಿನ ಪ್ರಯೋಜನವೂ ಆಗಲಿಕ್ಕಿಲ್ಲ. 


ಪರಾಮರ್ಶನ ಗ್ರಂಥಗಳು:

೧. ಪಾಸ್ಕಲ್ ಡೇ ಮತ್ತು ಕ್ರಿಸ್ ಸ್ಟೇಯಾರ್ಟ್ (೨೦೧೦)  “ದಿ ಪಾಲಿಟಿಕ್ಸ್ ಆಫ್ ನೆರೆÉÃಟಿಂಗ್ 

ಸೋಷಿಯಲ್ ಎಂಟ್ರ ಪ್ರೆನ್ಯೂರ್‌ಶಿಪ್” ಜರ್ನಲ್ ಆಫ್ ಎಂಟರ್ ಪ್ರೆöÊಸಿಂಗ್ ಕಮ್ಯನೀಟೀಸ್ - ಪೀಪಲ್ ಎಂಡ್ ಪ್ಲೇಸಸ್ ಇನ್ ಗ್ಲೋಬಲ್ ಇಕಾನಮಿ ಸಂಪುಟ – ೪, ಸಂಚಿಕೆ ೦೧  ಪುಟ ೮೫ – ೧೦೮


೨. ಕರೀಂ, ಎಲ್ (೨೦೦೮) “ಡಿ ಮಿಸ್ಟ ಫೈಯಿಂಗ್ ಮೈಕೋ ಕ್ರೆಡಿಟ್: ದಿ ಗ್ರಾಮೀಣ ಬ್ಯಾಂಕ್, ಓಉಔs ಎಂಡ್ ನಿಯೋಲಿಬರಲಿಸಮ್ ಇನ್ ಬಾಂಗ್ಲಾದೇಶ” ಕಲ್ಚರಲ್ ಡೈನಾಮಿಕ್ಸ್ ಸಂಚಿಕೆ ೨೦ ಪುಟ ೫ -೨೯


೩. ನಿಕೋಲ್ಸ್ ಎ. (೨೦೦೬) “ಸೋಷಿಯಲ್ ಎಂಟ್ರ ಪ್ರೆನ್ಯೂರ್‌ಶಿಫ್ ನ್ಯೂಮೋಡೆಲ್ಸ್ ಆಫ್ ಸಸ್ಟೇನೇಬಲ್ ಸೋಷಿಯಲ್ ಚೇಂಜ್” ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರಸ್, ಆಕ್ಸ್ಫರ್ಡ್


೪. ಮೋರೆ, ನಥಾಲೀ ಮತ್ತು ರಾಬಿನ್ (೨೦೦೯) “ದಿ ಆರ್ಗ್ನೈಸೇನಲ್ ಗೋಲ್ಸ್ ಆಫ್ ಸೋಷಿಯಲ್ ಎಂಟ್ರಪ್ರೆನ್ಯರ‍್ಸ್: ಹೌ  ಸೋಷಿಯಲ್ ಆರ್ ದೇ?” ಫ್ರಾಂಟಿಯರ್ಸ್ ಆಫ್ ಎಂಟ್ರಪ್ರೆನ್ಯರ‍್ಸ್ಶಿಫ್ ರಿಸರ್ಚ್ ಸಂಪುಟÀ ೨೯, ಸಂಚಿಕೆ ೨೧


೫. ಕಾಲಿಮಾ ರೋಸ್ , (೧೯೯೨) “ವೇರ್ ವಿಮೆನ್ ಆರ್ ಲೀಡರ್ಸ್ : ದಿ ಸೇವಾ ಮುವ್‌ಮೆಂಟ್ ಇನ್ ಇಂಡಿಯಾ” ವಿಸ್ಸಾರ ಪಬ್ಲಿಕೇ±ನ್ಸ್ ನವದೆಹಲಿ


೬. ಜಯ ಅರುಣಾಚಲಂ ಮತ್ತು ಇತರರು(೨೦೦೩) “ಸ್ಟಕ್ಚರಿಂಗ್ ಎ ಮೂವಮೆಂಟ್ ಎಂಡ್ ಸ್ಪೇಡಿಂಗ್ ಇಟ್ ಆನ್ “ಹಿಸ್ಟರಿ ಆಂಡ್ ಗ್ರೋತ್ ಆಫ್ ವರ್ಕಿಂಗ್ ವಿಮೆನ್ಸ್ ಫೋರಮ್ : ವಿ.ಐ.ಕೆ. ಫ್ರಾಂಕ್‌ಪರ್ಟ್ 


೭. ಜೋಹಾನ್ ಮೈಯರೋ (೨೦೧೦) ಸೋಷಿಯಲ್ ಎಂಟ್ರಪ್ರೆನ್ಯರ‍್ಸ್ಶಿಫ್ ಟೆÉÃಕಿಂಗ್ ಸ್ಟಾಕ್ ಎಂಡ್ ಲುಕಿಂಗ್ ಅಹೆಡ್” ವರ್ಕಿಂಗ್ ಪೇಪರ್ ೮೮೮, ಐ.ಇ.ಎಸ್.ಇ ಬಿಸಿನೆಸ್ ಸ್ಕೂಲ್ ಯುನಿವರ್ಸಿಟಿ ಆಫ್ ನಾರಾ ಸ್ಪೆÊನ್

೮. ಆಲ್ಟರ್ ಕೆ. (೨೦೦೮) “ಸೋಷಿಯಲ್ ಎಂಟರ್ ಪ್ರೆöÊಸ್ ಟ್ಯೆಪಾಲಜಿ’ ಅಂvರ್‌ಜಾಲತಾಣ hಣಣಠಿ:ಡಿiಟಿಟಿovಚಿಣioಟಿs.eಜubಟogs.oಡಿg/ಜಿiಟes/೨೦೦೮/೦೭/seಣಥಿಠಿoಟogಥಿ


೯. ರಶ್ಮಿ ಬನ್ಸಾಲ್ (೨೦೧೧) “ಐ ಹ್ಯಾವ್ ಎ ಡ್ರೀಮ್ ದಿ ಇನ್‌ಸ್ಪö್ಯರಿಂಗ್ ಸ್ಟೋರಿಸ್ ಆಫ್ ೨೦ ಸೋಷಿಯಲ್ ಎಂಟ್ರಪ್ರೆನ್ಯರ‍್ಸ್ಶಿಫ್  ಹೂ ಫೌಂಡ್ ನ್ಯೂ ವೇಸ್ ಟು ಸಾಲ್ವ್ ಪ್ರಾಬ್ಲೆಮ್ಸ್ “ ವೆಸ್ಟ್ ಲ್ಯಾಂಡ್ £ ನ್ಯೂಡೆಲ್ಲಿ 


೧೦. ರಿಫೋರ್ಟ್ ಆನ್ ದಿ ಫೀಲ್ಡ್ ಆಫ್ ಸೋಷಿಯಲ್ ಎಂಟ್ರಪ್ರೆನ್ಯರ‍್ಸ್ಶಿಫ್ ಎ ರಿಫೋರ್ಟ್ ಪ್ರೋಮ್ ದಿ ಸೆಂಟರ್ ಫಾರ್ ಅಡ್ವಾನ್ಸ್ಮೆಂಟ್ ಆಫ್ ಸೋಷಿಯಲ್ ಎಂಟ್ರಪ್ರೆನ್ಯರ‍್ಸ್ಶಿಫ್ “ ಪುರುವಾ ಸ್ಕೂಲ್ ಅಫ್ ಬಿಸಿನೆಸ್ ಡ್ಯೂಕ್ ಯುನಿವರ್ಸಿಟಿ (೨೦೦೮) 


೧೧. ಡಿ ಫೌರ್ನಿ ಜೆ. ಮತ್ತು ಎಂ. ವೈಸ್ಸೆನ್ಸ್ (೨೦೦೮) “ಸೋಷಿಯಲ್ ಎಂಟ್ರಪ್ರೆನ್ಯರ‍್ಸ್ಶಿಫ್ ಇನ್ ಯೂರೋಪ್ – ರಿಸೆಂಟ್ ಟ್ರೇಂಡ್ಸ್ ಎಂಡ್ ಡೆವಲಪ್‌ಮೆಂಟ್” ಇ.ಎಂ.ಇ.ಎಸ್ ಯೂರೋಪಿಯನ್ ರಿಸರ್ಚ್ ನೆಟ್‌ವರ್ಕ್, ವರ್ಕಿಂಗ್ ಪೇಪರ್ ೦೮/೦೧


೧೨. ಟ್ರೇಸಿ ಪಿ ಮತ್ತು ಜಾರ್ವಿಸ್.ಓ (೨೦೦೭) “ಟುವರ್ಡ ಎ ಥಿಯರಿ ಆಫ್ ಸೋಷಿಯಲ್ ವೆಂಚರ್ ಪ್ರಾಂಚೈಸಿAಗ್” ಎಂಟ್ರಪ್ರೆನ್ಯರ‍್ಸ್ಶಿಫ್ ಥಿಯರಿ ಎಂಡ್ ಪ್ರಾಕ್ಟೀಸ್, ಸಂಚಿಕೆ ೫ ಸಂಪುಟ ೩೧ ಪುಟ ೬೬೭- ೮೫ 


೧೩. ಉದಯಕುಮಾರ್ ಎಂ.ಎ. ಮತ್ತು ರಾಜಲಕ್ಷಿö್ಮÃ ಎನ್.ಕೆ “ಪಂಡಿತಾ ರಮಾ ಬಾಯಿ ಸರಸ್ವತಿ – ಮೇಕಿಂಗ್ ಆಫ್ ಸೋಷಿಯಲ್ ಎಂಟ್ರಪ್ರೆನ್ಯೂರ್  – ಬೆಲ್ಗ್ರೇಡ್


೧೪. ಉದಯಕುಮಾರ್ ಎಂ.ಎ. ಮತ್ತು ರಾಜಲಕ್ಷಿö್ಮÃ ಎನ್.ಕೆ “ಕಂಟೆAಟ್ ಎಂಡ್ ದಿ ಕಾಂಟೆಕ್ಸೆಟ್ – ಟುವರ್ಡ್ಸ ಎ ಕಾಂಪ್ರೆ ಹೆನ್ಸಿವ್ ಡೆಫಿನಿಷನ್ ಆಫ್ ಸೋಷಿಯಲ್ ಎಂಟ್ರಪ್ರೆನ್ಯರ‍್ಸ್ಶಿಫ್ ಇನ್ ಇಂಡಿಯಾ” ಇಂರ‍್ನೇಶ£ಲ್ ಸೊಸೈಟಿ ಫಾರ್ ಥರ್ಡ ಸೆಕ್ಟರ್ ರಿಸಚ ಏಶಿÀಯಾ ಫೇಸಿಫಿಕ್ ಸಮ್ಮೇಳನ ಬಾಲಿ ಇಂಡೋಶಿಯ ಇಲ್ಲಿ ಮಂಡಿಸಿದ ಪ್ರಬಂಧ ೨೦೧೧

************


Comments

Popular posts from this blog

ಭಾರತೀಯ ಆರ್ಥಿಕ ವ್ಯವಸ್ಥೆ: ವಿನ್ಯಾಸ ಮತ್ತು ವಿಮರ್ಶೆ

೧೫೦ನೇ ವರ್ಷಾಚರಣೆಯ ನೆನಪಿನ ಕಾರ್ಯಕ್ರಮಗಳ ಪಕ್ಷಿನೋಟ