ಅರ್ಥವಿಲ್ಲದ ಪರಮಾರ್ಥ ವ್ಯರ್ಥವೇ....

 


ಅರ್ಥವಿಲ್ಲದ ಪರಮಾರ್ಥ ವ್ಯರ್ಥವೇ....

ದೇಶದ ೭೫ನೇ ಸ್ವಾತಂತ್ರೊö್ಯÃತ್ಸವದ ಈ ಹೊತ್ತಲ್ಲಿ ರಾಷ್ಟç, ದೇಶ, ಬಾಷೆಯ ಕುರಿತಂತೆನಡೆಯುವ ಚರ್ಚೆಗಳ ಮಧ್ಯೆ ಈ ನೆಲದ ಗುಣವನ್ನು ಅರಿತು ಸಮುದಾಯದ ಜನ ಮನವನ್ನು ಮುಟ್ಟಿ, ಆತ್ಮಾಭಿಮಾನವನ್ನು ತಟ್ಟಿ, ನವ ಮನ್ವಂತರಕ್ಕೆ ಮುನ್ನುಡಿ ಬರೆದ ಗಾಂಧಿಯ ತುಡಿತದ ಕುರಿತು ನನ್ನನ್ನು ಕಾಡಿದ ಕೆಲವು ಸಂಗತಿಗಳನ್ನು ಈ ಸಂದರ್ಭದಲ್ಲಿ ಜೈ ಕನ್ನಡಮ್ಮ ಬಳಗದ ಓದುಗರೊಂದಿಗೆ ಹಂಚಿಕೊಳ್ಳುವ ಹಂಬಲದಿAದ ಈ ಲೇಖನ ರೂಪುಗೊಂಡಿದೆ.

ಭಾರತೀಯ ರಾಜಕೀಯ ಸೈದ್ಧಾಂತಿಕ ಭೂಮಿಕೆಯನ್ನು ತನ್ನ ನುಡಿ ಹಾಗೂ ನಡೆಯ ಮೂಲಕ ಶ್ರೀಮಂತಗೊಳಿಸಿದ ಗಾಂಧಿಯೊಳಗೆ ಆವಾಹಿಸಿದ ಶಕ್ತಿ ಮತ್ತು ತನ್ಮೂಲಕ ಅವರು ಕಂಡುಕೊAಡ ಬದುಕಿನ ಒಳನೋಟಗಳು ಅವರಿಗೆ ದಕ್ಕಿದ್ದು ಯಾವ ಮೂಲದಿಂದ ಎನ್ನುವುದು ಬಹಳ ಮಹತ್ವದ ಪ್ರಶ್ನೆಯಾಗಿದೆ.  ಈ ದಿಸೆಯಲ್ಲಿ ಗಾಂಧಿ ಬದುಕಿನುದ್ದಕ್ಕೂ ಪ್ರತಿವಾದಿಸಿದ, ರೂಪಿಸಿದ ಹಾಗೂ ಶ್ರೀಮಂತಗೊಳಿಸಿದ “ಅಹಿಂಸೆ”, ಸ್ವರಾಜ್ಯ, ಸತ್ಯಾಗ್ರಹ, ಸ್ವದೇಶಿ, ಧರ್ಮ, ಸರ್ವೋದಯ, ಸಹಬಾಳ್ವೆಯೇ ಮುಂತಾದ ಪರಿಕಲ್ಪನೆಗಳಿಗೆ ಮರುಜೀವ, ಹೊಸ ಚೈತನ್ಯ ತುಂಬಲು ಪಾರಂಪರಿಕ ಪುರುಷಾರ್ಥದ ತಿಳಿವನ್ನು ಮುರಿದು ಕಟ್ಟಿರುವುದೇ ಮೂಲ ಕಾರಣ.  ಪುರುಷಾರ್ಥದ ಮರುವ್ಯಾಖ್ಯಾನ ಮಾಡಿದ ಗಾಂಧಿ, ಅಂತಹ ಮರು ವ್ಯಾಖ್ಯಾನದ ಚೌಕಟ್ಟಿನಲ್ಲಿ ತಮ್ಮ ಬದುಕು ಬರಹಗಳನ್ನು ರೂಪಿಸುತ್ತಾ ಹೋಗಿರುವ ಅಂಶಗಳನ್ನು ಮನಗಂಡಲ್ಲಿ ೨೧ನೇ ಶತಮಾನದ ಜಾಣರಾದನಾವು ಗಾಂಧಿಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು ಸಾಧ್ಯವಿದೆ. 

ಒಂದು ಸಾರ್ಥಕ ಬದುಕಿನ ಗುರಿ, ಧರ್ಮ (ಗುರಿಯಾಧಾರಿತ ಕರ್ತವ್ಯ), ಅರ್ಥ (ಸಂಪತ್ತು ಮತ್ತು ಅಧಿಕಾರ), ಕಾಮ (ಶಾರೀಕ ಮತ್ತು ಸೌಂದರ್ಯ ಸುಖ) ಮತ್ತು ಮೋಕ್ಷ (ಪಾರಾಮಾರ್ಥಿಕ ಮುಕಿ) ್ತ ಪುರುಷಾರ್ಥ ಸಾಧನೆಯ  ಬಹಳ ಪ್ರಮುಖ ಅಂ± ವೆಂದೇ  ಪರಿಗಣಿಸಲಾಗಿತು, 'ಶ್ರಮಣ' ಪರಂಪರೆಯ ನಂತರದಲ್ಲಿ ಮುಕ್ತಿಯೇ (ಮೋಕ್ಷ) ಬದುಕಿನ ಸಾರ್ಥಕತೆಗೆ ಅಂತಿಮ ಗುರಿಯೆಂದು ತಿಳಿಯಲಾಗಿತ್ತು. ಎಲ್ಲಾ ಸಂಕಟ, ನೋವುಗಳಿಂದ ಮುಕ್ತರಾಗುವ ಅಂತಿಮ ಮಾರ್ಗವೇ ಭವ ಬಂಧನಗಳಿAದ ಬಿಡುಗಡೆಯಾಗಿ ಹುಟ್ಟು ಸಾವುಗಳನ್ನು ದಾಟಿ ಮುಕ್ತಿ ಪಡೆಯುವುದೆಂದು ತಿಳಿಯಲಾಗಿತ್ತು.  'ಶ್ರಮಣ' ಸಂಸ್ಕöÈತಿ ಹಾಗೂ ಚಿಂತನೆ ಇತರ ಪರಂಪರೆಗಳ ಮೇಲೂ ಬೀರಿದ ಪ್ರಭಾವದ ಕಾರಣದಿಂದ 'ಮೋಕ್ಷ' ಸಾಧನೆಗೆ ಉಳಿದ ಅಂಶಗಳು ಅದರಲ್ಲಿಯೂ ವಿಶೇಷವಾಗಿ ಅರ್ಥ ಮತ್ತು ಕಾಮಗಳು ಅಡ್ಡಿಯಾಗಿವೆ ಎಂದೇ ತಿಳಿಯಲಾಗಿತ್ತು. ಈ ಕಾರಣದಿಂದ ಬದುಕಿನ ಜಂಜಾಟದಿAದ ದೂರವುಳಿದು ಅರ್ಥ ಕಾಮಗಳನ್ನು ನಿಗ್ರಹಿಸಿದರೆ ಮಾತ್ರ ಮುಕ್ತಿ ಹೊಂದಬಹುದು/ಮೋಕ್ಷ ಸಾಧಿಸಬಹುದೆಂದು ತಿಳಿಯಲಾಗಿತ್ತು. ಇದೇ ಚಿಂತನೆಯ ವಿಸ್ತರಣೆಯಾಗಿ ಇಹ ಮತ್ತು ಪರಗಳ ಕಲ್ಪನೆ ಒಂದರೊಳಗೊAದು ಮಿಳಿತವಾಗುವ ಬದಲಿಗೆ ಬೇರೆ ಬೇರೆಯಾಗಿ ಕಾಣತೊಡಗಿದುವು. ಇಂಥಹ ತ್ಯಾಗ, ಪರಂಪರೆಯ ಮಹತ್ವ ಆಧುನಿಕ ಕಾಲದವರೆಗೂ ಮುಂದುವರಿಯುತ್ತಾ ಬಂದಿತ್ತು. ಆದರೆ ಇಂತಹ ಪರಂಪರೆಯನ್ನು ೧೯ನೇ ಶತಮಾನದಲ್ಲಿ ಆಧುನಿಕತೆಯ ಪ್ರಭಾವಕ್ಕೊಳಗಾಗಿ ರಾಜಕೀಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡ ಯಾ ಗಳಿಸಿಕೊಂಡ/ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಂಡ ಹೊಸ ತಲೆಮಾರಿನ ಯುವಕರು ವಿಮರ್ಶೆಗೊಳಪಡಿಸಲಾರಂಭಿಸಿದರು. ಇಂತಹ ಮನೋಭಾವನೆ ಬೆಳೆಸಿಕೊಂಡ ಎಲ್ಲರೂ 'ಮೋಕ್ಷ'ದ ಸ್ಥಾನ ಮತ್ತು ಮಹತ್ವವನ್ನು ನಿರಾಕರಿಸದಿದ್ದರೂ ಬದುಕಿನಲ್ಲಿ ಅದರಲ್ಲಿಯಾ ನಾಗರೀಕ ಜೀವನದಲ್ಲಿ ಅರ್ಥವನ್ನು ಬದಿಗೊತ್ತಿ ಮೋಕ್ಷಕ್ಕೆ ಅತೀ ಮಹತ್ವ ನೀಡುವ ಚಿಂತನೆಯನ್ನು ಪುನರ್ ವಿಮರ್ಶಿಸಿ, ಅದಕ್ಕೊಂದು ಮಿತಿಯನ್ನು ವಿಧಿಸುವ ಯಾ ಹೇರುವ ಅಗತ್ಯವನ್ನು ಒತ್ತಿ ಹೇಳಿದರು. 


ಭೌತಿಕ ಜಗತ್ತಿನಲ್ಲಿ ನಾಗರಿಕ ಸಮಾಜದ ನಿರ್ಮಾಣ ಮತ್ತು ನಿಯಂತ್ರಣದ ವಿಷಯದಲ್ಲಿ ಆರ್ಥಿಕ ಮತ್ತು ರಾಜಕೀಯ ಮಹತ್ವದ ಪಾತ್ರ ವಹಿಸುತ್ತಿರುವುದು ಕಣ್ಣೆದುರಿನ ಸತ್ಯವಾಗಿತ್ತು. ಈ ಕಾರಣದಿಂದ ಪ್ರಸ್ತುತ ಬದುಕಿನ ವಾಸ್ತವಿಕ ಅಂಶಗಳನ್ನು ತೀರಾ ಕಡೆಗಣಿಸಿ ನಾಳೆ ದೊರೆಯುವ ಸ್ವರ್ಗದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ನೀಡುವುದು ಇವರಿಗೆ ಯಾಕೋ ಸರಿ ಬರಲಿಲ್ಲ. ಮೇಲೆ ತಿಳಿಸಿದ ರೀತಿಯ ಪ್ರಜ್ಞೆಯನ್ನು ಬೆಳೆಸಿಕೊಂಡು ರಾಷ್ಟಿçÃಯ ಚಳುವಳಿಯನ್ನು ನಿರೂಪಿಸಿದ ಮಹನೀಯರುಗಳಲ್ಲಿ ಮಹಾತ್ಮಾಗಾಂಧಿಯವರು ಪ್ರಮುಖರು. ಗಾಂಧಿಯವರ ಅಭಿಪ್ರಾಯದಂತೆ ನಾವು ಹಿರಿಯರ ಯಾ ಹಿಂದಿನ ತಲೆಮಾರಿನ ಸಂಪ್ರದಾಯಗಳನ್ನು ಕಣ್ಣುಮುಚ್ಚಿ ಪಾಲಿಸಿ ಕಳೆದು ಹೋಗಬಾರದು. ಕಾಲದಿಂದ ಕಾಲಕ್ಕೆ ಅವುಗಳನ್ನು ವಾಸ್ತವ ಬದುಕನ್ನು ಸತ್ವಯುತವಾಗಿಸಲು ಪೂರಕವಾಗುವಂತೆ ಮರು ನಿರೂಪಿಸಿದ ಮೌಲ್ಯಗಳಾಗಿ ದುಡಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು. ಈ ದಿಸೆಯಲ್ಲಿ ಅನ್ವೇಷಣೆಗಳು ನಡೆಯಬೇಕು, ಉತ್ತಮ ಅಂಶಗಳು ಎಲ್ಲಿಂದಲೇ ಬರಲಿ ಅವುಗಳನ್ನು ಭಾರತೀಯ ಚಿಂತನಾ ವಿನ್ಯಾಸಗಳೊಳಗೆ ಸ್ವೀಕರಿಸಿ ಅನುಷ್ಠಾನ ಮಾಡುವುದು ಒಳಿತು ಎಂದು ಅಭಿಪ್ರಾಯ ಪಟ್ಟರು. ಮಾನವ ಹಕ್ಕುಗಳು, ಲಿಂಗ ಸಮಾನತೆ, ಜಾತ್ಯತೀತತೆ ರಾಜ್ಯ, ಕಾನೂನಿನ ಅನುಷ್ಠಾನ ಪಾಲನೆ, ನಾಗರಿಕ ರಾಷ್ಟಿçÃಯತೆ, ಆರ್ಥಿಕ ಅಭಿವೃದ್ಧಿ ಮುಂತಾದ ಪರಿಕಲ್ಪನೆಗಳನ್ನು ಆಶಯಗಳನ್ನು ಮತ್ತು ನಾಗರಿಕ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರು ತಮ್ಮದಾಗಿಸಿಕೊಂಡು ಅವುಗಳನ್ನು ಅನುಸರಿಸುವುದು ಸ್ವಾಗತಾರ್ಹ ಎನ್ನುವುದು ಗಾಂಧೀಜಿಯವರ ನಿಲುವಾಗಿತ್ತು. ಪುರುಷಾರ್ಥ ಸಾಧನೆಯ ಚೌಕಟ್ಟಿನೊಳಗೆ ಈ ಎಲ್ಲಾ ಮೌಲ್ಯಗಳು ಹಾಸು ಹೊಕ್ಕಾಗುವ ರೀತಿಯಲ್ಲಿ ಅಳವಡಿಕೆಯಾಗಬೇಕು ಎನ್ನುವುದು ಗಾಂಧಿಯವರ ನಿಲುವಾಗಿತ್ತು. 


ಈ ಮೇಲಿನ ನಿಲುವು ತೆಗೆದುಕೊಂಡ ಪರಿಣಾಮವಾಗಿ ಆಧುನಿಕ ಭಾರತದ ರಾಜಕೀಯ ಸಿದ್ಧಾಂತ/ತತ್ವ ಒಂದರ ಉದಯವಾಯಿತು. ಇಲ್ಲಿ ನಾವು ಗಮನಿಸಲೇಬೇಕಾದ ಅಂಶವೆAದರೆ “ಭಾರತೀಯ ರಾಜಕೀಯ ತತ್ವ ಯಾ ಸಿದ್ಧಾಂತ” ಎನ್ನುವ ಹೊಸ ಚಿಂತನೆಯ ಸೆಲೆಯೊಂದರ ಉಗಮವಾಗುವುದಕ್ಕೆ ಪುರುಷಾರ್ಥ ಚಿಂತನೆಯ ಮರುವ್ಯಾಖ್ಯಾನ ಪ್ರಮುಖ ಕಾರಣವಾಯಿತು ಎನ್ನುವುದು.   ವರ್ತಮಾನದ ಬದುಕಿಗೆ ಸಂಬAಧಿಸಿದ ಭಾರತೀಯ  ನೆಲಮೂಲದ ಚಿಂತನಾ ವಿನ್ಯಾಸಕ್ಕೆ  ಮೋಹನದಾಸ ಕರಮಚಂದ ಗಾಂಧಿ ಮುನ್ನುಡಿ ಬರೆದರು. “ಭಾರತದಲ್ಲಿನ ರಾಜಕೀಯ ತತ್ವ” ಮತ್ತು “ಭಾರತೀಯ ರಾಜಕೀಯ ತತ್ವ” ಇವುಗಳ ನಡುವಿರುವ ಸೂಕ್ಷ÷್ಮವಾದ ವ್ಯತ್ಯಾಸವನ್ನು ನಾವು ಗಮನಿಸಬೇಕಿದೆ. ಭಾರತದಲ್ಲಿನ ರಾಜಕೀಯ ತತ್ವವೆಂದರೆ ಆಧುನಿಕ ಶಿಕ್ಷಣ ಮತ್ತು ಜೀವನ ಕ್ರಮ, ಜಗತ್ತಿನ ವಿವಿದೆಡೆಯ ಜ್ಞಾನ ಶಾಖೆಗಳಿಂದ ಪ್ರಭಾವಿತರಾಗಿ ರೂಡಿಸಿಕೊಂಡ ಚಿಂತನಾ ವಿನ್ಯಾಸ. “ಭಾರತೀಯ ರಾಜಕೀಯ ತತ್ವ”ವೆಂದರೆ ಭಾರತದ ಜ್ಞಾನ ಶಾಖೆಗಳ ಬೆಳಕಿನಲ್ಲಿ ಒಳಗನ್ನು ಹಾಗೂ ಹೊರಗನ್ನೂ ದರ್ಶಿಸಿ, ಬಂದಿರುವ ಒಂದು ಪುರುಷಾರ್ಥ ಪ್ರೇರಿತವಾದ ಹಾಗೂ ಪ್ರಧಾನವಾದ ಚಿಂತನಾ ವಿನ್ಯಾಸ, ಪ್ರಾಯಶಃ ಗಾಂಧೀ ಮಾಡಿದ್ದು ಎರಡನೆಯದ್ದನ್ನು. ರವೀಂದ್ರನಾಥ ಟಾಗೋರ್, ಅರಬಿಂದೋ, ಜವಾಹರಲಾಲ್ ನೆಹರೂ, ಮುಂತಾದವರು ಈ ಪರಂಪರೆಯ ಇತರ ಮಹನೀಯರು. ಬದಲಾದ ಕಾಲಮಾನದಲ್ಲಿ ಯಾವುದೇ ದೇಶದ ಪ್ರಗತಿಗೆ ಉತ್ಕರ್ಷಕ್ಕೆ ಸಂಸ್ಕöÈತಿಯ ತಿರುಳನ್ನು ಇಟ್ಟುಕೊಂಡು, ಹೊಸ ಆಲೋಚನೆ, ಯೋಜನೆ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಂಡು, (ಇಡೀ ಸಮುದಾಯಕ್ಕೆ) ಸಮಷ್ಠಿಗೆ ಮತ್ತು ವ್ಯಕ್ತಿಗತ ಬೆಳವಣೆಗೆಗೆ ಗುರಿ ನಿರ್ಧರಿಸುವ ಕೆಲಸವಾಗಬೇಕಾಗಿದೆ ಎನ್ನುವುದು ಗಾಂಧಿಯ ಚಿಂತನೆ. ಎಲ್ಲಿಂದ ಏನೇ ಪಡೆದರೂ ಅದು ಭಾರತೀಯ ಚಿಂತನಾ ಕ್ರಮದ ಮೂಸೆಯಲ್ಲಿ ಪಕ್ವವಾಗಬೇಕು ಎಂದು ಗಾಂಧಿ ಪ್ರತಿಪಾದಿಸುತ್ತಾರೆ. ಪುರುಷಾರ್ಥದ ಮರು ನಿರೂಪಣೆ ಮಾಡುವ ದಿಸೆಯಲ್ಲಿ, ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ನೀಡಲಾದ ಕೊಡುಗೆಗಳ ಬಗ್ಗೆ ನಾವು ಈ ಕೆಳಗಿನ ಬಹುಮುಖ್ಯ ಅಂಶಗಳನ್ನು ನಾವು ನೆನಪಿಸಬೇಕಿದೆ.

ಪುರುಷಾರ್ಥವೆನ್ನುವುದು ಪ್ರತಿಯೊಬ್ಬ ವ್ಯಕ್ತಿಯು ಗ್ರಹಿಸಬೇಕಿರುವ 'ಆಧ್ಯಾತ್ಮಿಕ ಶಕ್ತಿ'. ಈ ಶಕ್ತಿಯನ್ನು ಆಧರಿಸಿ ಪ್ರತಿ ವ್ಯಕ್ತಿಯೋರ್ವನೂ ತಾನು ಬದುಕಿನಲ್ಲಿ ಸಾಗಬೇಕಾಗಿರುವ ದಾರಿ ಮತ್ತು ತಲುಪಬೇಕಾಗಿರುವ ಗುರಿಯನ್ನು ಗ್ರಹಿಸುವ ಆಂತರಿಕ, ಅನುವಂಶಿಕ ಆಧ್ಯಾತ್ಮಿಕ ಚೈತನ್ಯ ಗಳಿಸಿಕೊಳ್ಳಬೇಕಿದೆ. ಈ ರೀತಿಯಲ್ಲಿ ಗುರಿಯನ್ನು ನಿರ್ಧರಿಸಿ, ಸಾಧಿಸುವ, ಕೌಶಲ್ಯ, ಬುದ್ಧಿವಂತಿಕೆ ಮತ್ತು ಸಾಧಿಸುವ ಛಲ ನೈಜ ಪುರುಷಾರ್ಥದ ಹಿಂದಿನ ಚಾಲಕ ಮತ್ತು ಪ್ರೇರಕವಾದ ಶಕ್ತಿಯಾಗಿರಬೇಕಿದೆ. ಇಂತಹ ಶಕ್ತಿ ಲಿಂಗ ಬೇಧವಿಲ್ಲದೇ ಎಲ್ಲ ವ್ಯಕ್ತಿಗಳಲ್ಲಿ ಅವರವರ ಅಂತಃಶಕ್ತಿಗನುಸಾರ ಇರುವುದಾಗಿದೆ. ಹಾಗಾಗಿ ಇದು ಲಿಂಗ ತಾರತಮ್ಯಕ್ಕೆ ಎಡೆಯಿಲ್ಲದಂತಹ ಒಂದು ವಿಶಾಲವಾದ ಅರ್ಥದ ಪರಿಕಲ್ಪನೆ ಪುನರ್ ವ್ಯಾಖ್ಯಾನಿಸಲಾದ ಪುರುಷಾರ್ಥದ ವ್ಯಾಪ್ತಿ ಸಾಂಪ್ರದಾಯಿಕ ಅರ್ಥಕ್ಕಿಂತ ಹೆಚ್ಚು ವಿಸ್ತಾರವೂ, ಆಳವೂ, ವಾಸ್ತವಿಕವೂ ಆಗಿದೆ. ಇದರನ್ವಯ ಗುರಿ ಸಾಧನೆಯ ದಾರಿಯಲ್ಲಿ ನಮ್ಮೊಳಗಿರಬಹುದಾದ ದೌರ್ಬಲ್ಯಗಳನ್ನು ಮೀರಿ ಮುನ್ನಡೆಯುವ ಆಶಯವನ್ನೂ ಈ ಪರಿಕಲ್ಪನೆ ಒಳಗೊಂಡಿದೆ. ಯಾವುದು ನಮ್ಮ ಬದುಕಿನ ಸಾಧನೆಗೆ ಅಡ್ಡಿಯಾಗುವುದೋ ಅದನ್ನು ನಿವಾರಿಸಿ, ನೀವಾಳಿಸಿ ಎದೆಗುಂದದೆ ಮುನ್ನಡೆಯುವ ಬಲ ಮತ್ತು ಛಲ ಎರಡನ್ನೂ ಮೈಗೂಡಿಸಿಕೊಳ್ಳುವುದು ಕೂಡಾ ಪುರುಷಾರ್ಥದ ಲಕ್ಷಣ. ಈ ಹಿನ್ನಲೆಯಲ್ಲಿ ಪುರುಷಾರ್ಥವನ್ನು ಗ್ರಹಿಸಿದರೆ ನಮ್ಮ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಲಿಂಗತಾರತಮ್ಯ, ಜಾತಿಪದ್ಧತಿ, ವಿಧಿಲಿಖಿತ, ಕರ್ಮದ ಬಂಧನ ಇವೆಲ್ಲವನ್ನೂ ಮೀರುವ ರೀತಿಯಲ್ಲಿ ಆಧ್ಯಾತ್ಮಿಕ ಬೌದ್ಧಿಕ ಮತ್ತು ಭೌತಿಕ ಶಕ್ತಿಯನ್ನು ಸಂಚಯಿಸಿಕೊಳ್ಳಬಹುದಾಗಿದೆ.

ಅರ್ಥ ಮತ್ತು ಮೋಕ್ಷಗಳನ್ನು ಬೇರೆ ಬೇರೆಯಾಗಿ ನೋಡದೆ ಅವೆರಡನ್ನೂ ಒಂದಕ್ಕೊAದು ಹೇಗೆ ಪೂರಕವಾಗಿದೆ ಎನ್ನುವ ಕುರಿತಂತೆ ಯೋಚಿಸಲಾಯಿತು. ಅದೇ ರೀತಿಯಲ್ಲಿ ಜ್ಯಾತ್ಯತೀತತೆ ಮತ್ತು ಆಧ್ಯಾತ್ಮಿಕತೆ ಹಾಗೂ ಅಧಿಕಾರ ಮತ್ತು ನ್ಯಾಯ, ಇವುಗಳ ನಡುವೆ ಒಂದು ರೀತಿಯ ಸಾಮರಸ್ಯವನ್ನು ಯಾವ ರೀತಿಯಲ್ಲಿ ಉಂಟುಮಾಡಬಹುದು ಎನ್ನುವ ಕುರಿತು ಒಂದು ರೀತಿಯ ಅನ್ವೇಷಕ ಮನೋಭಾವವನ್ನು ನಾವು ಕಾಣಬಹುದು. ಈ ರೀತಿಯಲ್ಲಿ ಇದುವರೆಗೂ ಪರಸ್ಪರ ವಿಲೋಮ ಸಂಬAಧವಿರುವ ಪರಿಕಲ್ಪನೆಗಳು ಒಂದಕ್ಕೊAದು ಪೂರಕವಾಗಿರುವಂತೆ ಕಾರ್ಯ ನಿರ್ವಹಿಸಬಹುದು ಎನ್ನುವಾಗ ಅಂತಹ ಪರಿಕಲ್ಪನೆಗಳನ್ನು ಮುರಿದುಕಟ್ಟಲೇ ಬೇಕಾಗುತ್ತದೆ. ಹಾಗೂ ಅವುಗಳನ್ನು ಈ ಹಿಂದಿಗಿAತ ಭಿನ್ನವಾಗಿ ವಾಸ್ತವದ ಬೆಳಕಲ್ಲಿ ಮರುನಿರೂಪಿಸಿಬೇಕಾಗುತ್ತದೆ. ಪಾರಂಪರಿಕ ಚೌಕಟ್ಟಿನಲ್ಲಿ 'ಅರ್ಥಶಾಸ್ತç' ಶಾಸ್ತೀಯವಾಗಿ ವ್ಯಾಖ್ಯಾನಿಸಲ್ಪಟ್ಟಾಗಲೆಲ್ಲಾ ಅರ್ಥ ಸಂಪಾದನೆಗೆ, ಸಂಪತ್ತಿನ ಸಂಚಯಕ್ಕೆ ಅಧಿಕಾರದ ಅಗತ್ಯವನ್ನು ಪ್ರತಿಪಾದಿಸಲಾಗಿತ್ತು. ಪಾಶ್ಚಿಮಾತ್ಯ ವಿಚಾರಧಾರೆಯಲ್ಲಿಯೂ ಕೂಡಾ ರಾಜಕೀಯ ಅಧಿಕಾರದ ಮೂಲಕವೇ ವ್ಯವಸ್ಥೆಯನ್ನು ದುಡಿಸಿಕೊಂಡು ಅರ್ಥ ಸಂಚಯನ ಕಾರ್ಯ ನಡೆಯುತ್ತದೆ ಎಂದು ತಿಳಿಯಲಾಗಿದೆ. ಹಾಗಾಗಿ ಅಧಿಕಾರಕ್ಕಾಗಿ ನಡೆಯುವ ಸಂಘರ್ಷದಲ್ಲಿ ಹಿಂಸೆಯ ವ್ಯಾಪಕತೆ ಪಾತ್ರ ಸಹಜವೆಂದು ತಿಳಿಯಲಾಗಿತ್ತು. ವಸಾಹತೀಕರಣದ ಮೂಲಕ ಸಂಪತ್ತಿನ ಸಂಚಯನಕ್ಕಾಗಿ ನಡೆದ ಇಡೀ ಪ್ರಕ್ರಿಯೆಯನ್ನು ಗಮನಿಸಿದಾಗ ಹೇಗೆ ಹಿಂಸೆ ಅಧಿಕಾರದ ಅವ್ಯಕ್ತ ಭಾಗವಾಗಿ ಅಧಿಕಾರದೊಂದಿಗೆ ಹಾಸು ಹೊಕ್ಕಾಗಿತ್ತು ಎನ್ನುವ ಅಂಶ ವಿಷದವಾಗುತ್ತದೆ.

'ಅರ್ಥದ' ಪುನರ್ ವ್ಯಾಖ್ಯಾನ ಮಾಡುವ ಹಂತದಲ್ಲಿ ಗಾಂಧಿ ಭಾರತೀಯ ಸಂದರ್ಭ ಹಾಗೂ ಪಾಶ್ಚತ್ಯ ಚಿಂತನೆಯಲ್ಲಿ ವ್ಯಕ್ತಿವಾದ ಅಧಿಕಾರದ ಪರಿಕಲ್ಪನೆಯನ್ನು ನಯವಾಗಿ ತಿರಸ್ಕರಿಸುತ್ತಾರೆ, ಮತ್ತು ರಾಜಕೀಯ ಶಕ್ತಿಯ ಮೂಲಕ ವ್ಯಕ್ತವಾಗುವ ಅಧಿಕಾರದ ಪಾತ್ರವನ್ನು ಸಂದರ್ಭಾನುಸಾರ ಮರು ನಿರೂಪಿಸುತ್ತಾ ಹೋಗುತ್ತಾರೆ. ರಾಜಕೀಯ ವ್ಯವಸ್ಥೆಯಲ್ಲಿ ಅಧಿಕಾರವೆಂದರೆ ಒಂದು ನ್ಯಾಯಯುತವಾದ , ಶಾಂತಿಯುತವಾದ ಹಾಗೂ ಸಹಬಾಳ್ವೆ ಸಾಧ್ಯವಾಗಿರುವ ರಾಜಕೀಯ ಸಮುದಾಯದ ಸೃಷ್ಟಿಸುವ ಪ್ರಕ್ರಿಯೆಯಾಗಬೇಕು ಎಂದು ಹೇಳುತ್ತಾರೆ. ನಾಗರಿಕರಿಗೆ ಅನ್ವಯಿಸಿದಂತೆ ರಾಜಕೀಯ ಅಧಿಕಾರವೆಂದರೆ ಒಂದು ರಾಜಕೀಯ ಸಮುದಾಯವನ್ನು ಸಾರ್ವಜನಿಕ ಜವಾಬ್ದಾರಿ ಯಾ ಉತ್ತರದಾಯಿತ್ವದ ಹೊಣೆಯಾದಿತು ವೈಯಕ್ತಿಕ ನಡವಳಿಕೆಯನ್ನು ರೂಪಿಸಿ ಅದರಂತೆ ನಡೆಯುವುದು ಎಂದು ಹೇಳುತ್ತಾರೆ. ದಮನಿತರಿಗೆ ಇದು ಅಧಿಕಾರದ ದುರುಪಯೋಗ, ದಾಷ್ಟ÷್ಯ, ಯಾ ಅದರ ಮೂಲಕ ನಡೆಯುವ ಶೋಷಣೆಯನ್ನು ಅಹಿಂಸಾತ್ಮಕ ವಿಧಾನದ ಮೂಲಕ ಪ್ರತಿಭಟಿಸುವುದಾಗಿದೆ. ಅಂತಾರಾಷ್ಟಿçÃಯ ಸಮುದಾಯದ ದೃಷ್ಟಿಯಿಂದ ಇದರ ಅರ್ಥ ಸ್ವಾತಂತ್ರ÷್ಯವಾದ, ಸ್ವಾಯತ್ವವಾದ, ಆದರೆ ಪರಸ್ಪರ ಅವಲಂಬನೆಯ ಮೂಲಕ ಸಹಜೀವನ ನಡೆಸುವ ವ್ಯವಸ್ಥೆಯಾಗಿರುತ್ತದೆ. ಅಂದರೆ ರಾಜಕೀಯ ಅಧಿಕಾರ ಎನ್ನುವುದು ಒಂದು ಸರ್ವಾಂತರಯಾಮಿಯಾದ, ಸಾರ್ವಕಾಲಿಕವಾದ ಸರ್ವರಿಗೂ ಏಕಕಾಲಕ್ಕೆ, ಸಾಮಾನ್ಯ ಅರ್ಥದಲ್ಲಿ ಅನ್ವಯಿಸಬಹುದಾದ ಒಂದು ಪರಿಕಲ್ಪನೆಯಲ್ಲ. ಬದಲಿಗೆ ನಿರ್ದಿಷ್ಟ ಹಿನ್ನಲೆಯಲ್ಲಿ ಸಂದರ್ಭನುಸಾರ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎನ್ನುವುದು ಬಹಳ ಮಹತ್ವ ಪೂರ್ಣವಾದ ಹಾಗೂ ವಿಶಿಷ್ಟ ಸಂಗತಿಯಾಗಿದೆ. ಅಧಿಕಾರ ಎನ್ನುವುದರೊಳಗೆ ಸಾಂಪ್ರಾದಾಯಿಕ ಅರ್ಥದಲ್ಲಿ ಸ್ಥಾಯಿಯಾಗಿದ್ದ, ಅಡಕವಾಗಿದ್ದ, ಅನಿವಾರ್ಯವಾಗಿದ್ದ ಅಥವಾ ಅಧಿಕಾರದೊಂದಿಗೆ ಹಾಸು ಹೊಕ್ಕಗಿದ್ದ ಹಿಂಸೆಯನ್ನು ನಿರಾಕರಿಸುವ ಮೂಲಕ ಮರುವ್ಯಾಖ್ಯಾನಿಸಿದ್ದು ಗಾಂಧಿಯವರು ನೀಡಿದ ಮಹತ್ವದ ಕೊಡುಗೆಯಾಗಿದೆ. ಹಾಗಾಗಿ ಮರು ನಿರೂಪಣೆಗೊಂಡ ಅರ್ಥದಲ್ಲಿ ರಾಜಕೀಯ ಅಧಿಕಾರ ಬಳಸ ಬಯಸಿ ಬೆಳೆಯುವ ಯಾ ರೂಪುಗೊಳ್ಳುವ ಅರ್ಥವ್ಯವಸ್ಥೆ ಮಾತ್ರ ಪಾರಮಾರ್ಥಿಕ ಯಾ ಮೋಕ್ಷ ಚಿಂತನೆಗೆ ಒಗ್ಗುವ ಪೂರಕವಾದ ವ್ಯವಸ್ಥೆಯನ್ನು ಆಧರಿಸಬಲ್ಲುದು ಎನ್ನುವುದು ಗಾಂಧಿಯ ವಾದವಾಗಿದೆ.

ಮೋಕ್ಷ ಎನ್ನುವುದು ಎಲ್ಲವನ್ನು ತ್ಯಜಿಸಿ ಪರ್ವತದಲ್ಲಿ ತಪಸ್ಸು ಮಾಡಿ ಪಡೆಯುವ ಸಿದ್ಧಿಯಾಗಿರಬೇಕಿಲ್ಲ ಒಂದರ್ಥದಲ್ಲಿ 'ಉಂಡುಸವಾಸಿ, ಬಳಸಿ ಬ್ರಹ್ಮಚಾರಿ' ಎನ್ನುವ ರೀತಿಯಲ್ಲಿ ಇದರ ಮರುವ್ಯಾಖ್ಯಾನ ನಡೆದಿದೆ. ಮೋಕ್ಷ ಸಾಧಕ ತಿರಸ್ಕರಿಸಬೇಕಿರುವುದು ಸಾಂಸಾರಿಕ ಬಂಧನವನ್ನಲ್ಲ, ಊರನ್ನಲ್ಲ, ವ್ಯವಹಾರವನ್ನಲ್ಲ ಬದಲಿಗೆ  ತನ್ನೊಳಗಿರುವ ಅಹಂಕಾರವನ್ನು. ಅಹಂಕಾರದಲ್ಲಿ ಅಹಂಕಾರ ಮತ್ತು ಅದರ ಉಪಉತ್ಪನ್ನಗಳಾಗಿರುವ ಅತಿಯಾಸೆ, ಕಾಮನೆ, ಕೋಪ, ತಾಪ, ವೈರತ್ವ ಇತ್ಯಾದಿಗಳೆಲ್ಲವೂ ಒಳಗೊಂಡಿವೆ. ಇವೆಲ್ಲವೂ ಉದಾತ್ತ ವ್ಯಕ್ತಿತ್ವದ ರೂಪುಗೊಳ್ಳುವಿಕೆಗೆ ಮತ್ತು ಉತ್ತಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ದೊಡ್ಡ ಕಂಟಕಗಳಾಗಿರುವ ಕಾರಣ ಅವುಗಳನ್ನು ತ್ಯಜಿಸುವುದು ಅಪೇಕ್ಷಣೀಯ ಮತ್ತು ಅಗತ್ಯ. ಹಾಗಾಗಿ ಮೋಕ್ಷ ಸಾಧನೆಗೆ “ಸ್ಥಿತ ಪ್ರಜ್ಞ” ಮನೋಸ್ಥಿತಿ ಅಗತ್ಯ ಎನ್ನುವುದು ಗಾಂಧಿಯ ಅಭಿಪ್ರಾಯ. ಪ್ರಾರ್ಥನೆ, ಧ್ಯಾನ ಮತ್ತು ತಪಸ್ಸು. ಇಂತಹ ಮನೋಭಾವನೆಯನ್ನು, ಹಾಗೂ ವ್ಯಕ್ತಿಗತವಾದ ಅಂತಶಕ್ತಿಯನ್ನು ಸಂಚಯಿಸಲು ಸೂಕ್ತ ಮಾರ್ಗವಾಗಿದೆ ಎಂದು ಗಾಂಧಿ ನಂಬಿದ್ದರು. ಯಾವುದೇ ದೇವರು ಯಾ ಧರ್ಮದಲ್ಲಿ ನಂಬಿಕೆ ಇಟ್ಟು ಇದನ್ನು ಮಾಡುವ ಅಗತ್ಯವಿರುವುದಿಲ್ಲ ಅವೆಲ್ಲವೂ ಒಂದು ಮಾರ್ಗಗಳೇ ಹೊರತು ಅದೇ ಗುರಿಯಾಗಿರುವುದಿಲ್ಲ. ಸತ್ಯವಾಗಿಯೂ ಇಂತಹ ಒಂದು ಗುರಿಯನ್ನು ಸಾಧಿಸಲು ತನ್ನನ್ನು ತಾನು ನಿಷ್ಠೆಯಿಂದ ಅಣಿಗೊಳಿಸುವುದು ಬಹಳ ಮುಖ್ಯವಾಗಿರುತ್ತದೆ. ಪ್ರಾಯಶಃ ಇದೇ ಅರ್ಥದಲ್ಲಿ ಗಾಂಧೀ 'ದೇವರೇ ಸತ್ಯದಿಂದ ಸತ್ಯವೇ ದೇವರು' ಎನ್ನುವ ನಿಲುವಿಗೆ ಬಂದಿರಬಹುದೇನೋ.

ಅಧ್ಯಾತ್ಮಿಕ ಬದುಕು ಮತ್ತು ನಾಗರಿಕ ಜೀವನದ ನಡುವೆ ಒಂದು ರೀತಿಯ ಸಮತೋಲನ ಇರಬೇಕೆಂದು ಬಯಸಿದ್ದರು. ಹಾಗೂ ತನ್ನ ಬದುಕಿನಲ್ಲಿ ಇದನ್ನು ಸಾಧಿಸಿದರು ಕೂಡಾ. ನಾಗರಿಕ ಬದುಕಿಗೆ ಅಗತ್ಯವಿರುವ ಸಂಪತ್ತು ಅಥವಾ 'ಅರ್ಥ' ಮೋಕ್ಷ ಸಾಧನೆಗೆ ಯಾ ಸತ್ಯದ ಸಾಕ್ಷಾತ್ಕಾರಕ್ಕೆ ವಿರೋಧಿಯಲ್ಲ ಅಥವಾ ವಿರೋಧಿಯಾಗಿರಬೇಕಾಗಿಲ್ಲ ಎನ್ನುವುದನ್ನು ಪ್ರತಿಪಾದಿಸಿದರು. ಜಾತ್ಯಾತೀತತೆ ಮತ್ತು ಅಧ್ಯಾತ್ಮಿಕತೆಯ ಗುರಿ ಮತ್ತು ದಾರಿಗಳು ಬೇರೆ ಬೇರೆಯಾಗಿದ್ದರೂ ಅವು ಒಂದು ಇನ್ನೊಂದರ ವಿರೋಧಿಯಾಗಿಲ್ಲ. ಅದೇ ಹೊತ್ತಿಗೆ ಅವೆರಡೂ ಸಮುದಾಯದ ಜನರ ಬದುಕನ್ನು ಶ್ರೀಮಂತಗೊಳಿಸಲು ಸಹಾಯಕವಾಗಿವೆ ಎನ್ನುವುದುನ್ನು ಮರೆಯಬಾರದು. ಒಂದು ರಾಜಕೀಯ ವ್ಯವಸ್ಥೆಯನ್ನು ಈ ಮೇಲೆ ವಿವರಿಸಲಾದ ಮರು ನಿರೂಪಿತ 'ಮೋಕ್ಷದ ಪರಿಕಲ್ಪನೆಯ ಹಿನ್ನಲೆಯಲ್ಲಿ ಅರ್ಥ ಮಾಡಿಕೊಂಡಾಗ ಅದು ಹೇಗೆ ಜಾತ್ಯಾತೀತ ಮತ್ತು ನೈಜಾರ್ಥದಲ್ಲಿ ಮನುಷ್ಯನಿಗೆ ಮುಕ್ತಿಯನ್ನು (ಸ್ಥಿತಪ್ರಜ್ಞತೆಯ ಮೂಲಕ) ನೀಡುವ ಮೂಲಕ ವಾಸ್ತವ ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿಯನ್ನು ನೀಡುವುದಕ್ಕೆ ಸಾಧ್ಯವೆನ್ನುವುದನ್ನು ನಾವು ತಿಳಿದುಕೊಳ್ಳಬಹುದು. ಕಾವಿಬಟ್ಟೆ ಧರಿಸಿದ ಯೋಗಿ ಒಬ್ಬ ಮಾತ್ರ ಆಧ್ಯಾತ್ಮಿಕ ವ್ಯಕ್ತಿಯಾಗಿ ಇರಬೇಕಿಲ್ಲ. ನಿಜವಾದ ಸನ್ಯಾಸಿ ಯಾರು ಎಂದರೆ ಯಾರು ರಾಜಕೀಯವನ್ನು ತನ್ನ ವೃತ್ತಿಯನ್ನಾಗಿ ಸ್ವೀಕರಿಸಿ, ಅದಕ್ಕೋಸ್ಕರ ಬದುಕುತ್ತಾನೋ, ಹೊರತು ಅದರಿಂದಾಗಿ ಬದುಕುವವನಲ್ಲ; ಅಲ್ಲದೆ ಗುರಿ ಸಾಧನೆಗೆ ನೈತಿಕ ಮಾರ್ಗಗಳನ್ನು ಅನುಸರಿಸುವಂತಹವನು ಆಗಿರುತ್ತಾನೆ. ಗೋಪಾಲಕೃಷ್ಣ ಗೋಖಲೆಯಂತಹ ನಾಯಕರನ್ನು ಆದರ್ಶವಾಗಿಟ್ಟುಕೊಂಡು ಇಂತಹ ತೀರ್ಮಾನಕ್ಕೆ ಗಾಂಧಿಯವರು ಬಂದಿರಬಹುದೆAದು ತಿಳಿಯಲಾಗಿದೆ. ಭಾರತೀಯರು ಎಂದರೆ ಯಾರು ಮತ್ತು ಭಾರತ ಎಂದರೆ ಏನೆಂದು ನಾವು ಅರ್ಥಮಾಡಿಕೊಳ್ಳಬೇಕು. ಇಷ್ಟೊಂದು ವಿಶಾಲ ಭೂಪ್ರದೇಶದಲ್ಲಿ ಹಂಚಿಹೋಗಿರುವ , ವಿವಿಧ ಭಾಷೆ, ಸಂಸ್ಕöÈತಿ ಆಹಾರ ಪದ್ಧತಿ, ಧಾರ್ಮಿಕ ಆಚರಣೆಗಳು ಅನುಸರಿಸುವ ಈ ಉಪಖಂಡದ ಜನರಿಗೆ ಈ ಹಿಂದೆAದಿಗಿAತಲೂ ಇಂದು ಅಸ್ಮಿತೆಯ ಪಶ್ನೆ ಕಾಡಿದೆ. ನಾವು ನಮ್ಮ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವುದರೊಂದಿಗೇನೇ ಈ ಹಿಂದೆ ಕಾಡುತ್ತಿದ್ದ ಲಿಂಗ ತಾರತಮ್ಯ, ಜಾತೀಯತೆ, ಧಾರ್ಮಿಕ ಅಸಹಿಷ್ಣುತೆ ಇವೆಲ್ಲವುಗಳನ್ನು ಮೀರಿ ಸಹಬಾಳ್ವೆಗೆ ಸಹಮತವಿರುವ ನಾಗರಿಕರಾಗುವುದು ಬಹಳ ಮುಖ್ಯ.

ಆಧುನಿಕ ಭಾರತ ಹೀಗೆ ಬಹುಭಾಷೆ, ಬಹು ಸಂಸ್ಕöÈತಿಯ, ಪ್ರಜಾಸತ್ತಾತ್ಮಕ, ಜಾತ್ಯಾತೀತ ರಾಜಕೀಯ ಸಮುದಾಯವಾಗಿ ರೂಪುಗೊಳ್ಳಬೇಕಿದೆ. ಒಂದು ಗಡಿರೇಖೆಯ ಒಳಗಿರುವ ನಾವು ನಾಗರೀಕ ದೇಶದ ಪ್ರಜೆಗಳು. ದೇಶವನ್ನು ಒಂದು ಭಾಷೆ, ಒಂದು ಧರ್ಮದ ಆಧಾರದಲ್ಲಿ ಕಟ್ಟುವುದರಲ್ಲಿ ಅದು ಗಟ್ಟಿಯಾಗಿ ಉಳಿಯುವುದು ಸಾಧ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಅಲ್ಲದೇ ಇದೆಲ್ಲದಕ್ಕೂ ನಾಗರಿಕ ರಾಷ್ಟಿçÃಯತೆಯೇ ಪರಿಹಾರ ಎಂದು ಗಾಂಧಿ ಪ್ರತಿಪಾದಿಸಿದರು. ಮತ್ತು ಇದು ಮಾತ್ರ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಸಾಧ್ಯ ಎಂದು ನಂಬಿದ್ದರು. ಈ ಅಭಿಪ್ರಾಯವನ್ನು ಸ್ವಾಮಿ ವಿವೇಕಾನಂದರೂ ಕೂಡಾ ಹೊಂದಿದ್ದರು ಎಂದು ಹೇಳಲಾಗಿದೆ.

ಜೀವನ ತತ್ವವನ್ನು ಪುರುಷಾರ್ಥದ ಪರಿಕಲ್ಪನೆಯನ್ನು ಮುರುನಿರೂಪಿಸುತ್ತಾ ಗಾಂಧಿ ಭಾರತದ ಸಾರ್ವಜನಿಕ ಜೀವನದಲ್ಲಿ ನಾವು ಅನುಸರಿಸಬಹುದಾದ ಒಂದು ಹೊಸ ಸಿದ್ಧಾಂತವನ್ನು ನಿರೂಪಿಸಿದರು. ಮತ್ತು ಇಂತಹ ಒಂದು ಸಿದ್ಧಾಂತದ ಚೌಕಟ್ಟಿನಲ್ಲಿ ಸಾರ್ವಜನಿಕ ಚರ್ಚೆಗಳು ನಡೆಯುವುದು ಸೂಕ್ತ ಎಂದು ನಂಬಿ ಅದರಂತೆಯೇ ಅವರ ಹೋರಾಟ, ಚಳುವಳಿಗಳನ್ನು ರೂಪಿಸಿದರು. ಅಂತಹ ಚಳುವಳಿಯಲ್ಲಿ ಅರ್ಥ ಮತ್ತು ಮೋಕ್ಷದ ನಡುವಿನ ಪಾರಂಪರಿಕ ಅರ್ಥದ ಸಂಘರ್ಷವನ್ನು ಸಂವಾದವಾಗಿ ಬದಲಿಸುವ ಮೂಲಕ ಸತ್ಯಾಗ್ರಹ, ಅಹಿಂಸೆ, ಅಸಹಕಾರ ಸ್ವದೇಶಿ, ಸರ್ವೋದಯವೇ ಮುಂತಾದ ಹೊಸ ಮಾರ್ಗಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಿದರು. ಇಂತಹ ಒಂದು ಅನ್ವೇಷಣೆಯಿಂದಾಗಿ ಭಾರತದ ಸಾರ್ವಜನಿಕ ಬದುಕಿನಲ್ಲಿ ಪುರುಷಾರ್ಥಗಳು ಹೊಸ ಮೌಲ್ಯಗಳಾಗಿ ಉಳಿದು ಬೆಳೆದುವು ಎನ್ನುವುದು ಕೇವಲ ಇತಿಹಾಸವಲ್ಲ ವರ್ತಮಾನದ ಸತ್ಯ ಮತ್ತು ಭವಿಷ್ಯದ ಭರವಸೆಯೂ ಆಗಿದೆ. ಈ ಜಗತ್ತಿನ ಮುನ್ನಡೆಗೆ, ಮನುಕುಲದ ಉಳಿವಿಗೆ, ಸಹನೆ, ಸಹಬಾಳ್ವೆ, ಅಗತ್ಯ ಮತ್ತು ಅನಿವಾರ್ಯ ಎನ್ನುವುದು ನನ್ನ ಮನದಾಳದ ಮಂಥನ...

Comments

Popular posts from this blog

ಸಾಮಾಜಿಕ ಉದ್ಯಮಶೀಲತೆ

ಭಾರತೀಯ ಆರ್ಥಿಕ ವ್ಯವಸ್ಥೆ: ವಿನ್ಯಾಸ ಮತ್ತು ವಿಮರ್ಶೆ

೧೫೦ನೇ ವರ್ಷಾಚರಣೆಯ ನೆನಪಿನ ಕಾರ್ಯಕ್ರಮಗಳ ಪಕ್ಷಿನೋಟ