ಸರ್ವೋದಯ

 

ಅಭಿವೃದ್ಧಿಯೆನ್ನುವ ಮಾಯಾ ಜಿಂಕೆ

೨೦೧೪ರಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ‘ಅಭಿವೃದ್ದಿಯ ಆರ್ಥಿಕ ಲೇಪನ’ವಿರುವ ಚುನಾವಣಾ ಪ್ರಣಾಳಿಕೆ ನರೇಂದ್ರ ಮೋದಿಯವರಿಗೆ ಸಹಕಾರಿಯಾಯಿತು ಎಂದರೆ ತಪ್ಪಾಗಲಾರದೇನೋ. ಅಭಿವೃದ್ಧಿಯ ಸ್ಪರ್ಶವಿರದಿದ್ದ ವಿಚಾರಗಳಿಗೆ ಈಗಿನ ಪ್ರಧಾನಮಂತ್ರಿಯವರಿAದ ಸೂಕ್ತ ಸ್ಪಂದನೆ ಸಿಗುವುದಿಲ್ಲ ಎನ್ನುವುದನ್ನುÀ ಅರಿತುಕೊಂಡ ಅವರ ಪಕ್ಷದ ರಾಜಕೀಯ ಧುರೀಣರು ಪಧಾನ ಮಂತ್ರಿಯವರಲ್ಲಿ ಏನೇ ವಿಷಯ ಪ್ರಸ್ತಾಪಿಸಿದರೂ ಅದಕ್ಕೊಂದು ಅಭಿವೃದ್ಧಿಯ ಆಯಾಮ ನೀಡಲು ಹೆಣಗಾಡುವುದರ ಬಗ್ಗೆ ದಿನಪತ್ರಿಕೆಯೊಂದರ ಸಂಪಾದಕರು ಇತ್ತೀಚೆಗೆ ತಮ್ಮ ಅಂಕಣ ಬರಹದಲ್ಲಿ ಪ್ರಸ್ತಾಪಿಸಿದ್ದರು. ಅಭಿವೃದ್ದಿಯೆನ್ನುವ ಮಾಯ ಜಿಂಕೆ ಇಂದು ಸರ್ವಾಂತರಯಾಮಿಯಾಗಿ ಬಿಟ್ಟಿದೆ. ಆದರೆ ನಿಜವಾದ ಅರ್ಥದಲ್ಲಿ ಅಭಿವೃದ್ದಿಯೆಂದರೇನು? ಇದರ ಮೂಲಭೂತ ಆಶಯಗಳೇನು? ಇದ್ದಕ್ಕೆ ಸಂಬAಧಿಸಿದ ಆಚಾರ ವಿಚಾರಗಳು ಏನು ಎನ್ನುವುದು ಎಂದಿನAತೆಯೇ ಗೊಂದಲಗಳಿAದ ಕೂಡಿದೆ. ಕಾಲದಿಂದ ಕಾಲಕ್ಕೆ ಅಭಿವೃದ್ಧಿಯ ವ್ಯಾಖ್ಯಾನದಲ್ಲಿ ಬದಲಾವಣೆ ಮತ್ತು ಪರಿಷ್ಕರಣೆಗೆ ಒಳಗಾಗುತ್ತಲೇ ಇದೆ. 


ಅರ್ಥಶಾಸ್ರದಲ್ಲಿ ತಾವು ಮಾಡಿರುವ ಸಂಶೋಧನಾತ್ಮಕ ಕೆಲಸಗಳಿಗೆ ನೊಬೆಲ್ ಬಹುಮಾನ ಪಡೆದಿರುವ ಜೋಸೆಫ್ ಸ್ಟಿಗ್ಲಿಸ್ ಅಭಿವೃದ್ಧಿಯ ಕುರಿತಂತೆ ಬಹಳ ವಿಚಾರ ಪೂರ್ಣವಾದ ಮತ್ತು ವ್ಯಾಪಕ ಅರ್ಥವಿರುವ ಒಂದು ವ್ಯಾಖ್ಯಾನ ನೀಡಿದ್ದಾರೆ. ಅದರಂತೆ ಅಭಿವೃದ್ಧಿಯೆನ್ನುವುದು ರಾಷ್ಟಿçÃಯವಾಗಿ ನಾಲ್ಕು ವಿದಧ ಸಂಪನ್ಮೂಲಗಳಲ್ಲಿನ ವೃದ್ದಿಯಾಗುವಿಕೆಯಾಗಿರಬೇಕು; ಅವುಗಳೆಂದರೆ


೧. ಒ0ದು ರಾಷ್ಟçದಲ್ಲಿ ಉತ್ಪಾದಿಸಲಾದ ವಸ್ತು ವಿಷಯ ಮತ್ತು ಸೇವೆಗಳು,

೨. ಸ್ವಾಭಾವಿಕ ಯಾ ಪ್ರಾಕೃತಿಕ ಸಂಪನ್ಮೂಲಗಳಾದ ಗಾಳಿ, ನೀರು, ಮಣ್ಣಿನ ಫಲವತ್ತತೆ, ಜೀವ, ಸಸ್ಯ ಸಂಕುಲ ಇತ್ಯಾದಿಗಳ ಸಂರಕ್ಷಣೆ. 

೩. ಮಾನವ ಸಂಪನ್ಮೂಲದ ಆಧಾರಗಳಾಗಿರುವ ಆರೋಗ್ಯ, ಶಿಕ್ಷಣ, ಉದ್ಯೋಗ ಕೌಶಲ್ಯಗಳಲ್ಲಿ ವೃದ್ಧಿ ಹಾಗೂ

೪. ಸಾಮಾಜಿಕ ಬಂಡವಾಳವೆAದು ಪರಿಗಣಿತವಾಗಿರುವ ಸಾಮಾಜಿಕ ಸೌಹಾರ್ದತೆ, ಪರಸ್ಪರ ಸಂಬ0ಧ, ನಂಬಿಕೆ, ಇತ್ಯಾದಿ.

ಜಾಗತಿಕವಾಗಿ ನಾವು ಸಾಗುತ್ತಿರುವ ದಾರಿಯನ್ನು ಗಮನಿಸಿದರೆ ಮೇಲಿನ ಈ ನಾಲ್ಕು ಅಂಶಗಳಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಆರ್ಥಿಕ ಬದಲಾವಣೆಗಳು ನಡೆಯುತ್ತಿಲ್ಲ. ಹಾಗಿರುವಾಗ ನಾವು ದಾಖಲಿಸಿರುವ ಸಾಧನೆಗಳನ್ನು ಎಷ್ಟರ ಮಟ್ಟಿಗೆ ಅಭಿವೃದ್ಧಿಯೆಂದು ಪರಿಗಣಿಸಬಹುದು ಎನ್ನುವ ಅನುಮಾನ ಸಂಶಯಗಳು ನಮ್ಮನ್ನು ಕಾಡಿದರೆ ಆಶ್ಚರ್ಯವಿಲ್ಲ. ನಾವು ಅಭಿವೃದ್ಧಿಯನ್ನು ಅರ್ಥೆÊಸುವಲ್ಲಿ ವಸ್ತು ಮತ್ತು ಸೇವೆಗಳ ಉತ್ಪಾದನೆಗೆ ಇನ್ನಿಲ್ಲದ ಮಹತ್ವವನ್ನು ನೀಡುತ್ತಿದ್ದೇವೆ. ಇಂತಹ ಉತ್ಪಾದನಾ ಕಾರ್ಯದಲ್ಲಿ ಮಾನವ ಸಂಪನ್ಮೂಲವನ್ನು ಉಪಯೋಗಿಸಿಕೊಳ್ಳುವ ದೃಷ್ಟಿಯಿಂದ ಕೌಶಲ್ಯ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ನೀಡಿದ್ದೇವೆಯೇ ಹೊರತು ಬೇರಾವ ದೃಷ್ಟಿಯಿಂದಲೂ ಅಲ್ಲ. ಹಾಗಾಗಿ ಸ್ಟಿಗ್ಲಿಸ್ ಪ್ರಾಸ್ತಾಪಿಸಿದ ಎರಡನೆಯ ಮತ್ತು ನಾಲ್ಕನೆಯ ಅಂಶಗಳು ನಮ್ಮ ಅಭಿವೃದ್ಧಿಯ ಕಾರ್ಯಸೂಚಿಯಲ್ಲಿ ಮಹತ್ವ ಪಡೆದಿಲ್ಲ. ಇಂತಹ ಲೋಪದಿಂದಾಗಿ ಬಹಳಷ್ಟು ಸಮಸ್ಯೆಗಳು ಸೃಷ್ಟಿಯಾಗಿ ಜಗತ್ತಿನಾದಂತ್ಯ ಸಾಮಾಜಿಕ ರಾಜಕೀಯ ಮತ್ತು ಸಾಂಸ್ಕöÈತಿಕ ವಲಯದಲ್ಲಿ ತಲ್ಲಣ ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಗೆ ಆರ್ಥಿಕ ವಿನ್ಯಾಸದಲ್ಲಿನ ದೋಷಗಳು, ಜಾಗತಿಕ ವಿದ್ಯಮಾನಗಳು, ತಾಂತ್ರಿಕ ಅಂಶಗಳು, ಸಾಮಾಜಿಕ ಸಮಸ್ಯೆಗಳು ಮುಂತಾದ ಹಲವಾರು ಕಾರಣಗಳನ್ನು ನೀಡಲಾಗುತ್ತಿದೆ. ಅಲ್ಲದೇ ಬಹಳಷ್ಟು ತಾತ್ವಿಕ ಚಿಂತನಾ ವಿನ್ಯಾಸಗಳೂ ಈ ಕುರಿತಂತೆ ವಿಮರ್ಶಾತ್ಮಕ ಟೀಕೆಗಳನ್ನು ಮಾಡಿವೆ, ಮತ್ತು ಮಾಡುತ್ತಿವೆ. ಅಷ್ಟು ಮಾತ್ರವಲ್ಲದೆ ಅಭಿವೃದ್ಧಿಯ ಪ್ರಕ್ರಿಯೆಯನ್ನು ದೋಷಮುಕ್ತವಾಗಿಸುವ ಮತ್ತು ಸರ್ವರನ್ನೂ ಒಳಗೊಳ್ಳುವಂತೆ ಮಾಡುವ ದಿಸೆಯಲ್ಲಿ ಪ್ರಯತ್ನಗಳು ಸಾಗುತ್ತಿವೆ. ಇದರೊಂದಿಗೇನೇ ಅಭಿವೃದ್ಧಿಯ ಕುರಿತ ಪರ್ಯಾಯ ಆಲೋಚನೆಗಳ ಕುರಿತು ಚರ್ಚೆಯೂ ನಡೆಯುತ್ತಿದೆ. 

ಭಾರತೀಯ ಅರ್ಥವ್ಯವಸ್ಥೆಯನ್ನು ವಿನ್ಯಾಸಗೊಳಿಸುವ ಹಂತದಲ್ಲಿ ಗಾಂಧೀ ಹೇಳಿದ ಆರ್ಥಿಕ ವ್ಯವಸ್ಥೆ ಮತ್ತು ನೆಹರೂ ಪ್ರತಿಪಾದಿಸಿದ ಅರ್ಥವ್ಯವಸ್ಥೆಯ ಕುರಿತು ವ್ಯಾಪಕ ಚರ್ಚೆಗಳು ನಡೆದು ಕೊನೆಯಲ್ಲಿ ನೆಹರೂ ಚಿಂತನೆಗಳು ಮುನ್ನೆಲೆಗೆ ಬಂದ ಪರಿಣಾಮವಾಗಿ ‘ಮಿಶ್ರ ಆರ್ಥಿಕ ವ್ಯವಸ್ಥೆ’ಗೆ ಮಾನ್ಯತೆ ದೊರೆತಿರುವ ವಿಷಯ ಬಹಳ ಹಳೆಯ ಸಂಗತಿ. ಆದರೆ ಮಿಶ್ರ ಆರ್ಥಿಕ ನೀತಿಯೂ ಕುಂಟುತ್ತಾ ತೆವಳುತ್ತಾ ಸಾಗಿ ಎಂಭತ್ತರ ದಶಕದಲ್ಲಿ ನಿಸ್ತೇಜವಾಯಿತು. ಹೊಸ ಆರ್ಥಿಕ ನೀತಿಯ ಮೂಲಕ ಮುಕ್ತ ಮಾರುಕಟ್ಟೆ ನೀತಿಯ ಶಕ್ತಿ ತುಂಬುವ ಮೂಲಕ ಭಾರತೀಯ ಆರ್ಥಿಕ ವ್ಯವಸ್ಥೆಗೆ ಇಂಬು ನೀಡಲಾಗಿದೆಯಾದರೂ ಅಭಿವೃದ್ಧಿಯ ಗುರಿ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಇಂತಹ ಸಂಕ್ರಮಣ ಕಾಲದಲ್ಲಿ ಮತ್ತೆ ಪರ್ಯಾಯ ಚಿಂತನೆಗಳ ಬಗ್ಗೆ ಪ್ರಸ್ತಾಪವಾಗುತ್ತಿದ್ದು ಚರ್ಚೆಗಳೂ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಗಾಂಧೀಜಿಯವರಿAದ ಪ್ರೇರಿತವಾದ ‘ಸರ್ವೋದಯ’ದ ಕುರಿತು ವಿಚಾರ ಪ್ರಸ್ತಾಪಿಸುವ ದಿಸೆಯಲ್ಲಿ ಏರ್ಪಡಿಸಲಾಗಿದ್ದ “ಸರ್ವೋದಯ” ಮತ್ತು “ಅಭಿವೃದ್ಧಿ” ಎನ್ನುವ ಪ್ರಚಾರ ಉಪನ್ಯಾಸದ ವಿಸ್ತöÈತ ಮತ್ತು ಪರಿಷ್ಕöÈತ ಭಾಗವಾಗಿ ಈ ಲೇಖನ ರೂಪುಗೊಂಡಿದೆ. ಲೇಖನದ ಮೊದಲ ಭಾಗದಲ್ಲಿ ಸರ್ವೋದಯ ಪರಿಕಲ್ಪನೆ ಅರ್ಥವ್ಯಾಪ್ತಿ ಮತ್ತು ಅನ್ವಯಿಕತೆಯ ಸಾಧ್ಯಾ ಸಾಧ್ಯಾತೆಗಳ ಕುರಿತು ವಿವರಿಸಲಾಗಿದೆ. ಅಭಿವೃದ್ಧಿಯ ಅರ್ಥ, ವಿನ್ಯಾಸ ಮತ್ತು ವಿವಿಧ ಮಾದರಿಗಳ ಕುರಿತಂತೆ ಲೇಖನದ ಎರಡನೇಯ ಭಾಗದಲ್ಲಿ ಚರ್ಚಿಸಲಾಗಿದೆ. ಲೇಖನದ ಮೂರನೇಯ ಭಾಗದಲ್ಲಿ ಅಭಿವೃದ್ಧಿಯ ವಿನ್ಯಾಸದಲ್ಲಿ ‘ಸರ್ವೋದಯ’ದ ಆಶಯಗಳನ್ನು ಒಳಗೊಳ್ಳುವಂತೆ (ಅನ್ವಯಿಸುವಂತೆ) ಮಾಡುವ ಸಾಧ್ಯತೆಗಳೇನಾದರೂ ಇದೆಯೇ ಅಥವಾ ಈಗಿರುವ ಅಭಿವೃದ್ಧಿಯ ಇಡೀ ವಿನ್ಯಾಸವೇ ದೋಷಪೂರಿತವಾಗಿದೆಯೇ ಹಾಗೂ ಇದಕ್ಕೆ ಪರ್ಯಾಯ ಮಾರ್ಗಗಳೇನಾದರೂ ಇದೆಯೇ ಎನ್ನುವುದನ್ನು ಚರ್ಚಿಸಲಾಗಿದೆ.


  ಭಾಗ-೧

ಸರ್ವೋದಯ - ಪರಿಕಲ್ಪನೆ ಮತ್ತು ತಾತ್ವಿಕ ತಳಹದಿ

ಇಪ್ಪತ್ತನೆಯ ಶತಮಾನದಲ್ಲಿ ಹೊಸ ಚಿಂತನಾ ವಿನ್ಯಾಸದ ಮೂಲಕ ಜಗತ್ತಿನ ಗಮನ ಸೆಳೆದ ಮಹಾನ್ ಚಿಂತಕರಲ್ಲಿ ಮಹಾತ್ಮಾಗಾಂಧೀ ಮತ್ತು ಮಾವೋ ಪ್ರಮುಖರು. ಈ ನಾಯಕರು ಜನಾಂದೋಲನದ ಮೂಲಕ ರಾಜಕೀಯ, ಸಾಮಾಜಿಕ ಸಾಂಸ್ಕöÈತಿಕ ವಲಯದಲ್ಲಿ ಸಂಚಲನ ಮೂಡಿಸಿದ್ದಷ್ಟೇ ಅಲ್ಲದೆ ಪಶ್ಚಿಮದ ಸಾಮ್ರಾಜ್ಯಶಾಹೀ ಶಕ್ತಿಗಳನ್ನು ತಮ್ಮ ನೆಲದಿಂದ ಹೊರದಬ್ಬುವಲ್ಲಿ ಯಶಸ್ವಿಯಾದರು. ಗಾಂಧೀಜಿಯವರು ಸತ್ಯಾಗ್ರಹ, ಅಹಿಂಸೆ, ಅಸಹಕಾರ ಮುಂತಾದ ಅತ್ಯಂತ ಸರಳರೂಪದ ಅಸ್ತçಗಳನ್ನು ಪ್ರಯೋಗಿಸಿ ಬಲಿಷ್ಟವಾದ ಸಾಮ್ರಾಜ್ಯಶಾಹಿ ಶಕ್ತಿಯನ್ನು ಅಸಹಾಯಕತೆಗೆ ದೂಡಿದರು. ಗಾಂಧೀಜಿಯವರು ಅನುಸರಿಸಿದ ವ್ಯಕ್ತಿ ಸಮಾಜ ಮತ್ತು ಪರಿಸರ ಈ ಮೂರನ್ನು ಆಧರಿಸಿದ ಒಂದು ಸಮಗ್ರ ದೃಷ್ಟಿಕೋನವಿರುವ ಚಿಂತನಾ ವಿನ್ಯಾಸವಾಗಿದೆ. ಭಾರತೀಯ ಉಪಖಂಡದಲ್ಲಿದ್ದ ಪಾರಂಪರಿಕ ಜ್ಞಾನ ಸಂಪತ್ತನ್ನು ಶೋಧಿಸಿ ಅದರಿಂದ ಕೆಲವಂಶಗಳನ್ನು ಆಯ್ದು ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಂಡ ಒಬ್ಬ ದಾರ್ಶನಿಕನಾಗಿ ಗಾಂಧೀ ನಮಗೆ ಕಾಣುತ್ತಾರೆ. ಆಧುನಿಕತೆಯನ್ನು ಒಪ್ಪಿಕೊಳ್ಳುತ್ತಲೇ ಆಧುನಿಕತೆ ಉಂಟುಮಾಡಬಹುದಾದ ವಿಕಲ್ಪಗಳ ಬಗ್ಗೆ ಕಟುವಾದ ವಿಮರ್ಶಾತ್ಮಕ ನಿಲುವನ್ನು ಹೊಂದಿದ್ದ ಗಾಂಧೀ ಪಶ್ಚಿಮದ ನಾಗರಿಕತೆಯನ್ನು ಕುರುಡಾಗಿ ಅನುಕರಿಸುವುದು ಬಹಳ ಅಪಾಯಕಾರಿ ಎನ್ನುವ ಎಚ್ಚರದ ನಿಲುವನ್ನು ಹೊಂದಿದ್ದರು. ಅಭಿವೃದ್ಧಿಯ ಕುರಿತಾದ ಪಶ್ಚಿಮದ ಮಾದರಿಯನ್ನು ಭಾರತೀಯ ಸಂದರ್ಭಕ್ಕೆ ಸಮಷ್ಟಿಯ ಹಿತದೃಷ್ಟಿಯಿಂದ ಸ್ವೀಕಾರಾರ್ಹ ಅಲ್ಲವೆಂದು ಖಡಾ ಖಂಡಿತವಾಗಿ ಹೇಳಿದರು. ಆಸೆಯನ್ನು ಆಕಾಂಕ್ಷೆಯನ್ನು ಕೇಂದ್ರವಾಗಿರಿಸಿ ವಸ್ತು ವಿಷಯಗಳನ್ನು ಉತ್ಪಾದಿಸುವ ಇಡೀ ಪ್ರಕ್ರಿಯೇ ದೋಷಪೂರಿತವಾಗಿದ್ದು ಅದರ ಬದಲಿಗೆ ವ್ಯವಸ್ಥೆಯಲ್ಲಿನ ಸಂಪನ್ಮೂಲಗಳನ್ನು ಆಧರಿಸಿದ ಉತ್ಪಾದನ ವ್ಯವಸ್ಥೆಗೆ ಮಹತ್ವ ನೀಡಬೇಕೆನ್ನುವುದು ಗಾಂಧೀಯವರ ಅಭಿಪ್ರಾಯವಾಗಿತ್ತು. ಪಶ್ಚಿಮದ ಅಭಿವೃದ್ಧಿ ಮಾದರಿ ವ್ಯಕ್ತಿ ಮತ್ತು ಸಮುದಾಯದ ಹಿತಾಸಕ್ತಿಗಳ ಮಧ್ಯೆ ಸಂಘರ್ಷ ಉಂಟುಮಾಡುವ ಕಾರಣದಿಂದ ಸೂಕ್ತವಾಗಿಲ್ಲ ಎಂದು ಅಭಿಪ್ರಾಯಪಟ್ಟರು. ಇಂತಹ ಮಾದರಿಗೆ ಪರ್ಯಾಯವಾಗಿ ಗಾಂಧೀ ಆಯ್ಕೆ ಮಾಡಿಕೊಂಡ ಮಾದರಿಯೇ “ಸರ್ವೋದಯ”. 

ಗಾಂಧೀಜೀಯವರ ಆರ್ಥಿಕ ಚಿಂತನೆಯನ್ನು ರೂಪುಗೊಳಿಸುವಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ಮೂಲದ ವಿಚಾರಗಳು ಮಹತ್ವದ ಪಾತ್ರವಹಿಸಿದೆ. ಭಾರತೀಯ ಮೂಲಗಳನ್ನು ಗಮನಿಸಿದಾಗ ಈಶೋಪನಿಷತ್ತು, ಪತಂಜಲಿಯ ಯೋಗಸೂತ್ರ, ಭಗವದ್ಗೀತೆ, ದಾದಾಬಾಯಿ ನವರೋಜಿಯವರ ಬರಹಗಳು ಮತ್ತು ರೊಮೇಶ್ ಚಂದ್ರದತ್ತ್ ಅವರ ಬರಹಗಳಿಂದ ಗಾಂಧೀ ಚಿಂತನೆ ಪ್ರಭಾವಿತವಾಗಿರುವುದು ಕಂಡು ಬರುತ್ತದೆ.

ಗಾಂಧೀಜಿಯವರೇ ಹೇಳಿಕೊಂಡAತೆ ಈಶೋಪನಿಷತ್ತು ಭಾರತೀಯ ಚಿಂತನಾ ಪರಂಪರೆಯಲ್ಲಿ ಬಹಳ ಮಹೋನ್ನತವಾದ ಜ್ಞಾನದ ಆಗರ. ಇದರಲ್ಲಿ ಪ್ರಸ್ತಾಪಿತವಾದ ಸಂಪತ್ತಿನ ಸ್ವಾಮ್ಯತ್ವ, ಪಾರುಪತ್ಯಗಾರಿಕೆ, ಅಂಟದಿರುವಿಕೆ ಯಾ ಕಳಚಿಕೊಳ್ಳುವಿಕೆ, ಅನುಭವಿಸುವಿಕೆ, ಲೋಭತ್ವ ಮುಂತಾದುವುಗಳು ಮನುಷ್ಯ ಜೀವನದ ಚಟುವಟಿಕೆಗಳನ್ನು ನಿರ್ದೇಶಿಸುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಮಹತ್ವ ಪೂರ್ಣವಾದ ಪಾತ್ರವನ್ನು ವಹಿಸುತ್ತವೆ. ವಿಶ್ವ ಮತ್ತು ಪ್ರಾಪಂಚಿಕ ಸಂಪತ್ತು ಮನುಷ್ಯನಿಗಿಂತ ಮೊದಲು ಸೃಷ್ಟಿಯಾಗಿರುವುದರಿಂದ ಅದರ ಒಡೆತನ ದೇವರಿಗೆ ಯಾ ಅದನ್ನು ಸೃಷ್ಟಿಮಾಡಿದವನಿಗೆ ಸೇರಿರುತ್ತದೆ. ಹಾಗಾಗಿ ವಿಷಯ ವಸ್ತುಗಳನ್ನು ಮನುಷ್ಯ ಉಪಯೋಗಿಸುವಾಗ ಅದು ದೇವರಿಗೆ ಸೇರಿರುವ ಕಾರಣ ಅಥವಾ ಅದರ ಒಡೆತನ ಅಪಾರ ಶಕ್ತಿಯ ಮೂಲವಾದ ‘ದೇವರಿಗೆ’ ಸೇರಿದ್ದು ಎನ್ನುವ ಎಚ್ಚರ ಮನುಷ್ಯರಾದ ನಮಗೆ ಇರಬೇಕಾಗುತ್ತದೆ. ಇಂತಹ ಎಚ್ಚರವಿದ್ದಾಗ ಪ್ರಾಪಂಚಿಕ ವಿಷಯದಲ್ಲಿ ಯಾ ಸಂಪತ್ತಿನ ವಿಚಾರದಲ್ಲಿ ಮನುಷ್ಯನ ಪಾತ್ರ ಕೇವಲ ಪಾರುಪತ್ಯಗಾರಿಕೆಗೆ ಮಾತ್ರ ಸೀಮಿತವಾದದ್ದು ಎನ್ನುವ ಅರಿವಿರಬೇಕು. ಹೀಗಾಗಿ ಲಭ್ಯವಿರುವ ವಿಷಯ ವಸ್ತುಗಳನ್ನು ಜೀವನ ನಿರ್ವಹಣೆಯ ದೃಷ್ಟಿಯಿಂದ ಅನುಭವಿಸಬಹುದೇ ಹೊರತು ಅದರಾಚೆಗೆ ಅವುಗಳ ಮೇಲೆ ನಮಗೆ ಯಾವ ಹಕ್ಕೂ ಇರಕೂಡದು, (ನಿಜವಾಗಿಯೂ ಇಲ್ಲ ಕೂಡಾ). ಹೀಗಾಗಿ ಸಂಪತ್ತಿನ ಮೇಲೆ, ಆಸ್ತಿಯ ಮೇಲೆ, ವಿಷಯ ವಸ್ತುಗಳ ಮೇಲೆ ಇದು ನನ್ನದು ನಮ್ಮದು ಎನ್ನುವ ವ್ಯಾಮೋಹ ಅವಲಂಬನೆ ಆಕರ್ಷಣೆ ಹಾಗೂ ಸೆಳೆತಗಳಿಂದ ಮುಕ್ತರಾಗಬೇಕಿದೆ. ಇಂತಹ ಒಡೆತನ ಅಧಿಕಾರ, ಅಹಂಕಾರಗಳಿAದ ಕಳಚಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ (ಮುಕ್ತಿ ಹೊಂದುವ ಮೂಲಕ) ಸಂತೃಪ್ತಿ ಪಡೆಯುವ ಯೋಚನೆ ಮನುಷ್ಯರಲ್ಲಿ ಮನೆ ಮಾಡಬೇಕು. ಹೀಗೆ ಒಬ್ಬರಿಗೆ ಸೇರದ ಅಥವಾ ಮನುಷ್ಯ ಜೀವನದಲ್ಲಿ ನಮಗೆ ಒದಗಿ ಬರುವ ಯಾವುದೂ ನಮ್ಮದಲ್ಲದಿರುವಾಗ ಅವುಗಳ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳುವುದು ತಪ್ಪಾಗುತ್ತದೆ. ಈ ರೀತಿಯ ಆಲೋಚನೆಗಳು, ವಿಚಾರಗಳು ಮನುಷ್ಯನ ದಿನನಿತ್ಯದ ಚಟುವಟಿಕೆಗಳನ್ನು ನಿರ್ದೇಶಿಸಬೇಕು ಮತ್ತು ನಿಯಂತ್ರಿಸಬೇಕು. ಇದು ಸಾಧ್ಯವಾಗದಿದ್ದಾಗ ಸಮಸ್ಯೆಗಳು ಸಹಜವಾಗಬಹುದು. ಯಾಕೆಂದರೆ ಬೇರೆಯವರಿಗೆ ಸೇರಿದ ವಸ್ತು ವಿಷಯಗಳನ್ನು ಅನುಭವಿಸಲು ಹೊರಟಾಗ ಅದರಿಂದ ಉಳಿದವರಿಗೆ ತೊಂದರೆಯಾಗಿ ಸಹಜವಾಗಿ ಸಮಸ್ಯೆಗಳು ಉಂಟಾಗುತ್ತದೆ. ಗಾಂಧೀಜಿ ಹೇಳುವಂತೆ ಪ್ರಕೃತಿಯಲ್ಲಿ ಮನುಷ್ಯನ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಅಗತ್ಯವಾದುದು ಎಲ್ಲವೂ ಇದೆ, ಆದರೆ ಅವನ ದುರಾಸೆಯನ್ನಲ್ಲ ಎನ್ನುವ ಮಾತು ನೆಲೆ ನಿಂತಿರುವುದು ಮೇಲೆ ಹೇಳಲಾದ ಅಂಶಗಳ ಮೇಲೆಯೇ. ಈ ಮೇಲೆ ಉಲ್ಲೇಖಿಸಿದ ನಿಲುವುಗಳು ಚಾಲ್ತಿಯಲ್ಲಿರುವ ತಾತ್ವಿಕ ಚಿಂತನಾ ವಿನ್ಯಾಸಗಳಾದ ಬಂಡವಾಳಶಾಹೀ ಮತ್ತು ಸಮಾಜವಾದೀ ನಿಲುವುಗಳಿಗಿಂತ ವಿಭಿನ್ನವಾದುದು. ಹಲವಾರು ಸಂದರ್ಭಗಳಲ್ಲಿ ಮೇಲೆ ಉಲ್ಲೇಖಿಸಿದ ವಿಷಯಗಳು ವಿಚಿತ್ರವೆಂದೂ ಕಂಡು ಬರಬಹುದು. ಈ ರೀತಿಯ ಮುಖ್ಯಧಾರೆಗಳಿಂದ ಭಿನ್ನವಾದ ವಿಭಿನ್ನ ನಿಲುವುಗಳನ್ನು ಥೋಮಸ್ ಆಕ್ವಿನಾಸ್, ಪ್ರಾನ್ಸಿಸ್ ಬೇಕನ್, ರಿನೀ ಡೆಸ್ಕಾರ್‌ಟಸ್ ಮುಂತಾದವರು ಪ್ರತಿಪಾದಿಸಿದ್ದು ಹಾಗೂ ಅವರ ಬರಹಗಳು ಗಾಂಧೀಜಿಯವರ ಮೇಲೆ ಪರಿಣಾಮ ಉಂಟು ಮಾಡಿವೆ ಎಂದು ಹೇಳಲಾಗುತ್ತಿದೆ. 

ಉಪನಿಷತ್ತಿನ ಆಧಾರದ ಮೇಲೆ ಗಾಂಧೀಜೀ ಪರಿಭಾವಿಸಿದ ಜೀವನ ನಿರ್ದೇಶಕ ಅಂಶಗಳನ್ನು ಪತಂಜಲಿಯ ಯೋಗ ಸೂತ್ರ ಮತ್ತು ಭಗವದ್ಗೀತೆಯ ಆಶಯದ ಬೆಳಕಲ್ಲಿಯೂ ಪ್ರತಿಪಾದಿಸಿದ್ದಾರೆ. ಉದಾಹರಣೆಗೆ ಪತಂಜಲಿಯ ಯೋಗ ಸೂತ್ರದಲ್ಲಿ ಉಲ್ಲೇಖಿಸಲಾದ ‘ಅಸ್ತೇಯ’ ಮತ್ತು ‘ಅಪರಿಗ್ರಹ’ದ ಪರಿಕಲ್ಪನೆಗಳು ಆರ್ಥಿಕ ಚಿಂತನೆಯ ವಿನ್ಯಾಸದಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎನ್ನುವುದನ್ನು ಗಾಂಧೀಜಿ ಮನವರಿಕೆ ಮಾಡಿಕೊಂಡಿದ್ದರು. ಈ ಕಾರಣದಿಂದಾಗಿಯೇ, ಸಂಪನ್ಮೂಲ ಹಾಗೂ ವಸ್ತು ವಿಷಯಗಳು ಕೇವಲ ಐಹಿಕ ಸುಖ ಸಂತೃಪ್ತಿಗೆ, ಆಸೆ, ಆಗತ್ಯ ಪೂರೈಕೆಗೆ ಸಂಬAಧಿಸಿದ್ದಲ್ಲ. ಬದಲಿಗೆ ಅದಕ್ಕೊಂದು ಬೌದ್ಧಿಕ, ಮಾನಸಿಕ ಮತ್ತು ನೈತಿಕ ಆಯಾಮವೂ ಇದೆ. ನಿಜವಾಗಿಯೂ ಮನುಷ್ಯನ ಬುದ್ಧಿ, ಮನಸ್ಸು ಮತ್ತು ಹೃದಯವಂತಿಕೆ ಅವನ ಭೌತಿಕ ಅಗತ್ಯ, ಅವಶ್ಯಕತೆಗಳನ್ನು ಹಾಗೂ ಉಪಭೋಗ ವಿಧಾನಗಳನ್ನು ನಿರ್ಧರಿಸುವಲ್ಲಿ ನಿರ್ಧಾರಕ ಅಂಶವೂ ಆಗಿದೆ. ಆದರೆ ಇಂತಹ ಮಹತ್ವಪೂರ್ಣ ವಿಚಾರವನ್ನು ಹೊರಗಿಟ್ಟು ಆರ್ಥಿಕ ಚಿಂತನೆಯನ್ನು ಕೇವಲ ಐಹಿಕ ಅಗತ್ಯಗಳಿಗೆ ಮಿತಿಗೊಳಿಸುವುದು ಸರಿಯಲ್ಲ. ಈ ರೀತಿ ಮಾಡಿರುವುದರಿಂದ ಇಡೀ ಅರ್ಥಶಾಸ್ತçದ ಅಡಿಪಾಯವೇ ಸಡಿಲವಾಗಿ ಬಿಟ್ಟಿದೆ. ಪತಂಜಲಿ ಪ್ರಸ್ತಾಪಿಸಿದ ‘ಅಸ್ತೇಯ’ ಮತ್ತು ‘ಅಪರಿಗ್ರಹ’ದ ಪಾಲನೆ ಕೇವಲ ವ್ಯಕಿಯ ನೆಲೆಗೆ ಸೀಮಿತವಾಗದೆ ಇಡೀ ಸಮಾಜಕ್ಕೆ ಮತ್ತು ಸಮುದಾಯಕ್ಕೆವಿಸ್ತರಿಸಬೇಕಾದ ಬಹುಮುಖ್ಯ ತತ್ವಗಳಾಗಿವೆ ಎನ್ನುವ ಅಭಿಪ್ರಾಯವನ್ನು ಗಾಂಧೀಜೀ ಹೊಂದಿದ್ದರು. 

ಇನ್ನು ಭಾರತದ ಗತ ಇತಿಹಾಸದ ವಿಷಯಗಳಿಗೆ ಸಂಬAಧಿಸಿದ ಅಧ್ಯಯನವೂ ಗಾಂಧೀಯವರ ಆರ್ಥಿಕ ಚಿಂತನೆಗಳ ಹಿಂದಿರುವುದನ್ನು ಗುರುತಿಸಬಹುದಾಗಿದೆ. ಈ ನಿಟ್ಟಿನಲ್ಲಿ ದಾದಾಬಾಯಿ ನವರೋಜಿ ಅವರ “ಬಡತನ ಮತ್ತು ಬ್ರಿಟೀಷರಿಲ್ಲದ ಭಾರತದ ಆಡಳಿತ” ಮತ್ತು ರೋಮೇಶ್ ಚಂದ್ರದತ್ ಅವರ “ಭಾರತದ ಆರ್ಥಿಕ ಇತಿಹಾಸ”-ಸಂಪುಟ ಒಂದು ಮತ್ತು ಎರಡನ್ನು ಇಲ್ಲಿ ಹೆಸರಿಸಬಹುದು. ಈ ಕೃತಿಗಳು ಆಧುನಿಕ ಭಾರತದ ಅರ್ಥವ್ಯವಸ್ಥೆ ರೂಪುಗೊಂಡಿರುವ ರೀತಿಯ ಬಗ್ಗೆ ಮತ್ತು ಅದರ ಕಾರ್ಯ ವಿಧಾನವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದ್ದುವು. ಭಾರತದಲ್ಲಿ ನಡೆಯುತ್ತಿರುವ ಆಧುನೀಕರಣ ಪ್ರಕ್ರಿಯೆಯನ್ನು ನಿರ್ದೇಶಿಸುವ ಮತ್ತು ನಿರ್ಧರಿಸುವ ಅಂಶಗಳೇನು ಎನ್ನುವುದನ್ನು ಗುರುತಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿತ್ತು. ಮೇಲ್ನೋಟಕ್ಕೆ ಭಾರತದಲ್ಲಿ ಆಧುನೀಕರಣ ವಿಕಸನಗೊಂಡAತೆ, ಇಲ್ಲಿನ ಜನಜೀವನ ಸುಧಾರಣೆ ಹೊಂದಿದAತೆ ಕಂಡರೂ ಅದರ ಮೂಲ ಉದ್ದೇಶವೇ ಜನರ ಜೀವನದ ಸುಧಾರಣೆಯಾಗಿತ್ತು ಎಂದು ಹೇಳಲಾಗದು. ಭಾರತದ ಆಧುನೀಕರಣ ಏನಿದ್ದರೂ ಬ್ರಿಟನ್‌ನ ಆಧುನೀಕರಣಕ್ಕೆ ಹಾಗೂ ಬೆಳವಣಿಗೆಗೆ ಪೂರಕವಾಗಿ ಯಾ ಸರಿಹೊಂದುವ ರೀತಿಯದಾಗಿತ್ತು. ಇಂತಹ ಅಭಿವೃದ್ಧಿ ವಿನ್ಯಾಸ ಮತ್ತು ಆಧುನೀಕರಣ ನೀತಿಯ ಕಾರಣದಿಂದ ಅಪಾರ ಪ್ರಮಾಣದ ಸಂಪತ್ತು ಭಾರತದಿಂದ ಇಂಗ್ಲೆAಡಿಗೆ ವರ್ಗಾವಣೆಯಾಗುತ್ತಿರುವ ಬೆಳವಣಿಗೆಯನ್ನು ಈ ಕೃತಿಯಲ್ಲಿ ಆಧಾರ ಸಹಿತವಾಗಿ ವಿವರಿಸಲಾಗಿತ್ತು. ವಸಾಹತು ಶಕ್ತಿ ಭಾರತದಲ್ಲಿ ಬಲವಾಗಿ ಬೇರೂರಲು ಮತ್ತು ಸಾಮ್ರಾಜ್ಯಶಾಹಿಯ ಶಕ್ತಿಯ ವರ್ಧನೆಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿತ್ತು. ಇಂತಹ ಆಧುನೀಕರಣ ಸ್ವಾವಲಂಭೀ, ಸ್ವಾಯತ್ತ ಸ್ವಾಭಿಮಾನೀ ಸಮಾಜ ರಚನೆಯ ಆಶಯಕ್ಕೆ ಮೂಲಭೂತವಾಗಿ ವಿರುದ್ಧವಾಗಿತ್ತು. ಈ ಮಾದರಿಯಿಂದ ಪ್ರಯೋಜನಕ್ಕಿಂತ ದೇಶಕ್ಕೆ ಅಪಾಯವೇ ಹೆಚ್ಚು ಎನ್ನುವುದು ಮೇಲ್ನೋಟದಿಂದಲೇ ಮನವರಿಯಾಗುವಂತಿತ್ತು ಎನ್ನುವುದು ಗಾಂಧೀವಾದ. ಇಂತಹ ಅವಲಂಬನಾ ಮಾದರಿಯ ಆಧುನೀಕರಣ ಪ್ರಕ್ರಿಯೆ ಮತ್ತು ಅಭಿವೃದ್ಧಿಯ ವಿನ್ಯಾಸದಿಂದ ಮುಕ್ತವಾಗಲು ಸಮಗ್ರ ಸಮುದಾಯದ ಹಿತ ಚಿಂತನೆಯನ್ನು ಆಧರಿಸಿದ ಗಾಂಧೀಜಿಯವರ ಸ್ವದೇಶಿ ಮಾದರಿ ‘ಸರ್ವೋದಯ’ ಸರಿಯಾದ ಆಧುನೀಕರಣ ವಿನ್ಯಾಸ ಎನ್ನುವುದು ತಾತ್ವಿಕವಾಗಿ, ಭೌದ್ಧಿಕವಾಗಿ ಒಪ್ಪಬಹುದಾದ ವಾದವಾಗಿದೆ.

ಬಾಲ್ಯ ಕಾಲದ ಅನುಭವ, ಇಂಗ್ಲAಡ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ಪಾಶ್ಚಿಮಾತ್ಯ ನಾಗರೀಕ ಜೀವನದ ಸಮೀಪ ದರ್ಶನ, ದಕ್ಷಿಣ ಆಫ್ರಿಕಾದಲ್ಲಿ ಅರ್ಥವ್ಯವಸ್ಥೆಯಲ್ಲಿ ಮತ್ತು ರಾಜಕೀಯ ವಲಯದಲ್ಲಿ ಸಮಾಜದ ಇತರೇ ವರ್ಗದವರನ್ನು ಬಿಳಿಯರು ನಡೆಸಿಕೊಳ್ಳುತ್ತಿದ್ದ ರೀತಿ ಮುಂತಾದ ವಿಷಯಗಳು ಖಂಡಿತವಾಗಿಯೂ ಮೋಹನದಾಸ ಕರಮಚಂದ ಗಾಂಧೀಯ ಸ್ಮöÈತಿ ಪಟಲದಿಂದ ಅಳಿಸಿ ಹೋಗಿರಲಾರದು. ಅಷ್ಟೇ ಅಲ್ಲ ಇಂತಹ ಒಂದು ದೊಡ್ದ ಶಕ್ತಿಯನ್ನು ಎದುರಿಸಲು ಒದಗಿ ಬಂದದ್ದು ನ್ಯಾಯಯುತವಾದ ಗುರಿಯನ್ನು ತಲುಪಲು ಸತ್ಯದ ಹಾದಿ ಮತ್ತು ಅಹಿಂಸೆಯ ಶಸ್ತç. ಸತ್ಯಾಗ್ರಹದ ಹಾದಿಯಲ್ಲಿ ಅಹಿಂಸೆಯ ಅಸ್ತç, ಸಾಮ್ರಾಜ್ಯ ಶಕ್ತಿಯನ್ನು ಅಲ್ಲಾಡಿಸಬಹುದೆನ್ನುವ ಕಲ್ಪನೆ ಅಲ್ಲಿಯ ತನಕ ತುಳಿಯುವವರಿಗೆ ಮತ್ತು ತುಳಿಸಿಕೊಂಡವರಿಗೂ ಗೊತ್ತಿರಲ್ಲೇ ಇಲ್ಲ. ಗಾಂಧೀಯ ಮೂಲಕ ತೆರೆದುಕೊಂಡ ಈ ದಾರಿ ಸರ್ವೋದಯ ಕಲ್ಪನೆಗೂ ಮುನ್ನುಡಿಯಾಯಿತ್ತು.


ಸರ್ವೋದಯ: ಒಂದು ಪರಿಕಲ್ಪನೆ

ಸರ್ವೋದಯ:

ಗಾಂಧೀಜಿಯವರ ದೃಷ್ಟಿಯಲ್ಲಿ “ಅರ್ಥ” ಎನ್ನುವುದು ಸಂಪನ್ಮೂಲ. ಜೀವನದಲ್ಲಿ ವ್ಯಕ್ತಿಯೊಬ್ಬನ ಭೌತಿಕ ಅವಶ್ಯಕತೆಯಗಳನ್ನು ಪೂರೈಸಲು ಅಗತ್ಯವಿರುವ ವಿಷಯಗಳನ್ನು ಗಳಿಸುವುದು ಅಥವಾ ಅಂತಹ ವಿಷಯಾಸಕ್ತ ವಸ್ತುಗಳನ್ನು ಪಡೆಯಲು ಅಗತ್ಯವಿರುವ ಆದಾಯ, ಸಂಪನ್ಮೂಲ ಗಳಿಸುವುದು. ಅರ್ಥ ಸಂಚಯಿಸುವ ಪರಿ ಹೇಗಿರಬೇಕೆಂದರೆ ಇದರಿಂದ ಇತರರಿಗೆ ತೊಂದರೆಯಾಗದ ರೀತಿ, ಯಾ ಸಂಕಟಬಾರದ ರೀತಿಯಲ್ಲಿರಬೇಕು. ೧೯೧೫ರಲ್ಲಿ ಆಫ್ರಿಕಾದಿಂದ ಅಹಮದಾಬಾದಿಗೆ ಬಂದು ಸಬರಮತಿ ಆಶ್ರಮದಲ್ಲಿ ನೆಲೆಸಿದರು. ಸಬರಮತಿ ಆಶ್ರಮದ ಆಶ್ರಮವಾಸಿಗಳ ಜೀವನ ಹೇಗೆ ಸರಳವಾಗಿಬೇಕೆಂದು ವಿವರಿಸಿ ಅದರ ಕುರಿತಂತೆ ಒಂದು ವಿನ್ಯಾಸವನ್ನು ಆಶ್ರಮದ ಗೋಡೆಯ ಮೇಲೆ ಚಿತ್ರಿಸಿದ್ದರು. ಅದರಂತೆ ಜೀವನದಲ್ಲಿ ಸತ್ಯ ಮತ್ತು ಅಹಿಂಸೆಗೆ ಕೇಂದ್ರ ಸ್ಥಾನವನ್ನು ನೀಡಲಾಗಿದೆ. ಈ ಕೇಂದ್ರದ ಸುತ್ತಲೂ ಅನ್ನ, ಬಲ, ಜಾನ, ಪ್ರೇಮಗಳನ್ನು ಗಳಿಸುವ ಮೂಲಕ ಜೀವನಯಾನ ನಡೆಯಬೇಕೆನ್ನುವುದು ಗಾಂಧೀಜಿಯವರ ಅಭಿಪ್ರಾಯವಾಗಿತ್ತು. ದೇಹ ಮತ್ತು ಬುದ್ಧಿಯನ್ನು ಸಮಾನವಾಗಿ ದುಡಿಸಿಕೊಳ್ಳುವ ಮೂಲಕ ಸಂಪನ್ಮೂಲ ಸಂಚಯಿಸಬೇಕೆನ್ನುವುದು ಅವರ ನಿಲುವಾಗಿತ್ತು. ಸರ್ವೋದಯದ ಕಲ್ಪನೆಗೆ ಮೂಲ ಪ್ರೇರಣೆಯಾಗಿರುವುದು ಜಾನ್ ರಸ್ಕಿನ್ ಅವರು ಬರೆದಿರುವ “ಅನ್ ಟು ದಿ ಲಾಸ್ಟ್” ಎನ್ನುವ ಆಂಗ್ಲ ಕೃತಿ. ಈ ಕೃತಿಯ ಗುಜರಾತಿ ಭಾಷೆಯ ಅನುವಾದಕ್ಕೆ “ಸರ್ವೋದಯ” ಎನ್ನುವ ಶೀರ್ಷಿಕೆ ನೀಡಲಾಯಿತು. ‘ಸರ್ವೋದಯ’ ಎನ್ನುವ ಗಾಂಧೀಜಿಯವರ ಪರಿಕಲ್ಪನೆಗೆ ಗಾಂಧೀವಾದಿಗಳಾದ ಇತರ ರಾಷ್ಟಿçÃಯ ನಾಯಕರಿಂದ ಬಂದ ಅಭಿಪ್ರಾಯ ಮತ್ತು ವ್ಯಾಖ್ಯಾನಗಳನ್ನು ಸೇರಿಸಿಕೊಳ್ಳಲಾಗಿದೆ. ಹಾಗಾಗಿ ಇಂದು ಸರ್ವೋದಯ ಇನ್ನುವುದು ಗಾಂಧೀಜಿಯಿAದ ಆರಂಭವಾಗಿ ಇತರ ಸಮಾಜಮುಖಿ ಗಾಂಧೀವಾದಿ ಚಿಂತಕರಿAದ ಪೋಷಿಸಲ್ಪಟ್ಟ ಒಂದು ಸೈದ್ಧಾಂತಿಕ ವಿಚಾರಧಾರೆಯಾಗಿದೆ.

*******

ಜಾನ್ ರಸ್ಕಿನ್ ಅವರ ಕೃತಿಯಲ್ಲಿ ಗಾಂಧೀಯವರು ಗುರುತಿಸಿದ ಮೂರು ಪ್ರಮುಖ ಅಂಶಗಳು ಈ ಕೆಳಗಿನಂತಿದೆ.

೧. ವ್ಯಕ್ತಿಯ ಹಿತಾಸಕ್ತಿ ಇಡೀ ಸಮುದಾಯದ ಹಿತಾಸಕ್ತಿಯನ್ನು ಅವಲಂಭಿಸಿದೆ. ಒಂದು ಸಮುದಾಯ ಸುಖ ಶಾಂತಿ ನೆಮ್ಮದಿಯಿಂದ ಇದ್ದಾಗ ಮಾತ್ರ ವೈಯಕ್ತಿಕ ನೆಲೆಯಲ್ಲಿಯೂ ಸುಖ ಶಾಂತಿ ಇರಲು ಸಾಧ್ಯ. ಮೀನು  ನೀರಿನಲ್ಲಿ ಆರೋಗ್ಯ ಪೂರ್ಣವಾಗಿರಬೇಕಾದರೆ ನೀರು ಸ್ವಚ್ಛವಾಗಿರಬೇಕು ಅರ್ಥಾತ್ ಶುದ್ಧವಾದ ನೀರಿನಲ್ಲಿ ಮಾತ್ರ ಮೀನು ಸ್ವಚ್ಛಂಧವಾಗಿ ಈಜಾಡಿಕೊಂಡು ಆರೋಗ್ಯದಿಂದಿರಬಹುದು. ನೀರು ಕೊಳಕಾಗಿದ್ದರೆ, ಕಲುಷಿತಗೊಂಡಿದ್ದರೆ ಅದರ ಪರಿಣಾಮ ಮೀನಿನ ಮೇಲೂ ಉಂಟಾಗುತ್ತದೆ.

೨. ಒರ್ವ ವಕೀಲನ ಕೆಲಸಕ್ಕೆ ಮತ್ತು ಕ್ಷೌರಿಕನ ಕೆಲಸಕ್ಕೆ ಸಮಾನ ಮಹತ್ವವಿದೆ. ಈ ಎರಡೂ ಶ್ರಮದ ಹಿಂದಿನ ಉದ್ದೇಶ ದುಡಿಮೆಯ ಮೂಲಕ ಅನ್ನ ಸಂಪಾದನೆ ಮಾಡುವುದಾಗಿದೆ. ತಿನ್ನುವ ರೊಟ್ಟಿಯಲ್ಲಿ ಮೇಲು ಕೀಳು ಇರಲು ಸಾಧ್ಯಾವಿಲ್ಲ. ಹಸಿವೆಯಲ್ಲಿ ಯಾವುದೇ ತಾರತಮ್ಯವಿರಬಾರದು. ಹಾಗಾಗಿ ಹಸಿವು ನೀಗಿಸಲು ನಾವು ಸಂಪಾದಿಸುವ ಆದಾಯದ ಸ್ವರೂಪ ಎಂದಿಗೂ ಮುಖ್ಯವಾಗಬಾರದು ಎನ್ನುವುದು ಇದರ ಹಿಂದಿನ ಆಶಯವಾಗಿದೆ.

೩. ಶ್ರಮದ ಮೂಲಕ ಮತ್ತು ದುಡಿಮೆಯ ಮೂಲಕ ಅನ್ನ ಸಂಪಾದನೆ ಮಾಡುವವನ ಜೀವನ ಸಾರ್ಥಕವಾದದ್ದು. ಯಾರು ದುಡಿದು ತನ್ನ ಅನ್ನವನ್ನು ಸಂಪಾದನೆ ಮಾಡುವನೋ ಅವನು/ಳು ನಿಜವಾಗಿಯೂ ಶ್ರೇಷ್ಠ ವ್ಯಕ್ತಿಗಳು. 

ಗಾಂಧೀಜಿಯವರು ಹೇಳಿಕೊಂಡAತೆ ಮೊದಲನೆಯ ಆಂಶವನ್ನು ಅವರು ತಿಳಿದುಕೊಂಡಿದ್ದರAತೆ ಆದರೆ ಎರಡನೆಯ ಅಂಶದ ಬಗ್ಗೆ ತನಗೆ ಸಾಧಾರಣ ಅರಿವಿತ್ತು, ಆದರೆ ಮೂರನೆಯ ಅಂಶವAತೂ ಅವರಿಗೆಂದೂ ತಿಳಿದಿರಲಿಲ್ಲ. ಜಾನ್ ರಸ್ಕಿನ್ ಅವರ ಕೃತಿಯನ್ನು ಓದಿದ ನಂತರವಷ್ಟೇ ಮೂರನೆಯ ಅಂಶದ ಮಹತ್ವ ಮನವರಿಕೆಯಾಯಿತು ಮತ್ತು ಈ ಅಂಶ ಮೊದಲೆರಡು ವಿಷಯಗಳಿಂದ ವಿಸ್ತçತಗೊಂಡ ವಿಚಾರವಾಗಿದೆ ಎಂದಿದ್ದಾರೆ. ಆದರೆ ನಿಜವಾದ ಪರಿಣಾಮ ಎಲ್ಲಿ ಮತ್ತು ಹೇಗಾಯಿತೆಂದರೆ ಈ ಅಂಶಗಳು ಬರೀ ವಾದ, ತರ್ಕ ಯಾ ಸೈದ್ಧಾಂತಿಕ ಚರ್ಚೆಗಳಿಗೆ ಸೀಮಿತಗೊಳ್ಳದೆ ಬದುಕಿನಲ್ಲಿ, ನಿಜ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕಾದ ವೃತ ನಿಯಮಗಳಾಗಲೇ ಬೇಕು ಎನ್ನುವ ತೀರ್ಮಾನಕ್ಕೆ ಮೋಹನದಾಸ ಕರಮಚಂದ ಗಾಂಧೀ ಬಂದರು. ಇಂತಹ ಮನೋಭೂವಿಕೆ ಸಿದ್ಧಗೊಳ್ಳುವ ಹಂತದಲ್ಲಿ ಕೆಲವೊಂದು ಪೂರಕ ಅಂಶಗಳು ಪ್ರೇರಕವಾಯಿತು ಮತ್ತು ಅವು ಹೊಸ ಆಲೋಚನೆಗೆ ಒಂದು ಸೈದ್ಧಾಂತಿಕ ತಳಹದಿ ಒದಗಿಸಿತು. ಸರ್ವರ ಹಿತದ ಕಲ್ಪನೆಯ ಮಹತ್ವ. 

ಅಹಿಂಸೆಯನ್ನು ಒಪುö್ಪವ ಯಾವ ವ್ಯಕ್ತಿಯೂ ‘ಪ್ರಯೋಜಕತೆ’ಯ ಸಿದ್ಧಾಂತವನ್ನು ಪ್ರತಿಪದಿಸಲು ಸಾಧ್ಯವಿಲ್ಲ. (ಪ್ರಯೋಜಕತೆಯ ಸಿದ್ಧಾಂತವು ಯಾವುದೇ ಒಂದು ಕ್ರಿಯೆಯ ಸ್ವೀಕೃತಿಗೆ ಬಹುಪಾಲು ಜನರ ಹಿತವನ್ನು ಆಧಾರವಾಗಿ ಪರಿಗಣಿಸುತ್ತದೆ. ಅಂದರೆ ಅತೀ ಹೆಚ್ಚು ಜನರಿಗೆ ಪ್ರಯೋಜನ ಉಂಟುಮಾಡುವ ಅಂಶವನ್ನು ಆಧರಿಸಿ ಯಾವುದಾದರೂ ಒಂದು ಕೆಲಸವನ್ನು ಮಾಡುವ ಅಥವಾ ಮಾಡದಿರುವ ನಿರ್ಧಾರ ತೆಗೆದುಕೊಳ್ಳುವುದು) ಆದರೆ ಅಹಿಂಸೆಯಲ್ಲಿ ನಂಬಿಕೆ ಇರುವ ವ್ಯಕ್ತಿ ಬಹುಪಾಲು ಜನರ ಹಿತದ ಬದಲಿಗೆ ಸಮಷ್ಟಿಯ ಹಿತವನ್ನು ಗಮನದಲ್ಲಿರಿಸುತ್ತಾನೆ. ಯಾಕೆಂದರೆ ಬಹುಪಾಲು ಜನರ ಸುಖ ಅಥವಾ ಬಹುಪಾಲು ಜನರಿಗೆ ಉಪಯುಕ್ತ ಎನ್ನುವ ವ್ಯಾಖ್ಯಾನದಲ್ಲಿಯೇ ಒಂದು ಸಣ್ಣ ಉಪಯೋಗ ವಂಚಿತ ವರ್ಗದ ಹಿತ ಕಡೆಗಣಿಸಲ್ಪಡುತ್ತದೆ. ಅಂದರೆ ಅತೃಪ್ತರ ವರ್ಗ ಒಂದರ ಹುಟ್ಟಿಗೆ ಈ ರೀತಿಯ ಚಿಂತನೆ ಕಾರಣವಾಗುತ್ತದೆ. ಆದರೆ ಇಂತಹ ಮಿತಿಯನ್ನು/ ದೋಷವನ್ನು ಮೀರಬೇಕಾದರೆ ಸರ್ವರ ಹಿತದ ಕಲ್ಪನೆಗೆ ಒಂದು ಸಮನ್ವಯತೆಗೆ ಮಹತ್ವ ನೀಡಬೇಕಾಗುತ್ತದೆ. ಯಾವ ಬೆಲೆ ತೆತ್ತಾದರೂ ಇಂತಹ ಸಮನ್ವಯ ಸಾಧಿಸುವ ತುಡಿತ ಸರ್ವೋದಯದ ಆಶಯವೂ ಆಗಿದೆ. ಈ ಕಾರಣದಿಂದಲೇ ಸಮಷ್ಟಿಯ ಹಿತದ ಪರಿಕಲ್ಪನೆ ‘ಪ್ರಯೋಜಕತೆ’ ಸಿದ್ಧಾಂತದ ಪರಿಕಲ್ಪನೆಗಿಂತ ಮಿಗಿಲಾದುದು ಮತ್ತು ಸಮಾಜದ ಎಲ್ಲರನ್ನೂ ಒಳಗೊಳ್ಳುವಂತಹದ್ದು. ಈ ಕಾರಣದಿಂದಾಗಿಯೇ ಸರ್ವರ ಹಿತದ ಕಲ್ಪನೆ ಸ್ವೀಕಾರಾರ್ಹವಾಗಿದೆ. 

ದಾರಿ ಮತ್ತು ಗುರಿ:

ಗುರಿ ಸಾಧನೆಗೆ ಅನುಸರಿಸುವ ದಾರಿಯೂ ಗುರಿಯಷ್ಟೇ ಮುಖ್ಯ ಎನ್ನುವುದು ಗಾಂಧೀಜಿಯವರ ಪ್ರಮುಖ ನಂಬಿಕೆಯಾಗಿತ್ತು. ಹಲವೊಂದು ಸಂದರ್ಭಗಳಿಲ್ಲಿ ಗುರಿ ಮುಖ್ಯವೇ ಹೊರತು ಯಾವ ಮಾರ್ಗದಿಂದಾರೂ ಸರಿಯೇ ಉದ್ದೇಶ ಸಾಧಿಸಿದರೆ ಸಾಕು ಎನ್ನುವ ವಾದಗಳನ್ನು ಮುಂದಿಡುವುದನ್ನು ಕಾಣುತ್ತೇವೆ. ಅಂದರೆ ಉದ್ದೇಶ ಸಾಧನೆಗೆ ಅನುಸರಿಸುವ ಮಾರ್ಗಗಳು ಏನಾದರೂ ಉದ್ದೇಶ ಒಳ್ಳೆಯದಾಗಿರುವುದರಿಂದ ಅನುಸರಿಸುವ ದಾರಿ ಮುಖ್ಯವಾಗುವುದಿಲ್ಲ ಎಂದು ತಿಳಿಯಲಾಗುತ್ತದೆ. ಅಥವಾ ಅನುಸರಿಸುವ ದಾರಿ ನಗಣ್ಯ ಎನ್ನುವ ರೀತಿಯ ಅಭಿಪ್ರಾಯಗಳಿವೆ. ಆದರೆ ಗುರಿ ಸಾಧನೆ ಎಷ್ಟು ಮಹತ್ವದ ವಿಷಯವೋ ಅನುಸರಿಸುವ ದಾರಿಯೂ ಅಷ್ಟೇ ಮಹತ್ವದ್ದು ಎನ್ನುವುದು ಸರ್ವೋದಯದ ಕಲ್ಪನೆಗೆ ಪೂರಕವಾದ ವಿಚಾರವಾಗಿದೆ. ಇದಕ್ಕೆ ಪ್ರಮುಖ ಕಾರಣ ಸರ್ವೋದಯ ಆಶಯವೇ ಸಮಗ್ರ ಸಮುದಾಯದ ಹಿತ ಚಿಂತನೆಯಾಗಿದೆ. ಉದ್ದೇಶ ಸಾಧನೆಗೆ ಅನುಸರಿಸುವ ದಾರಿಯಲ್ಲಿರುವ ವ್ಯತ್ಯಯಗಳ ಪರಿಣಾಮ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವುದರಿAದ ಅದರ ಬಗ್ಗೆ ಗಮನ ಹರಿಸಬೇಕಾದದ್ದು ಸಮಷ್ಟಿಯ ಹಿತದೃಷ್ಟಿಯಿಂದ ಅನಿವಾರ್ಯ ಕೂಡಾ. ನಮಗೆ ನಮ್ಮ ಗುರಿಗಳ ಕುರಿತು ನಿಯಂತ್ರಣವಿಲ್ಲದಿರಬಹುದು ಅಥವಾ ಫಲದ ಮೇಲೆ ನಿಯಂತ್ರಣವಿಲ್ಲದಿರಬಹುದು, ಆದರೆ ಗುರಿಯನ್ನು ಸಾಧಿಸಲು ಅನುಸರಿಸುವ ಮಾರ್ಗದ ಬಗ್ಗೆ ಅಥವಾ ಪ್ರಯತ್ನದ ಮೇಲೆ ನಮಗೆ ಹಿಡಿತವಿಲ್ಲದಿರಲು ಸಾಧ್ಯವಿಲ್ಲ. ನಮ್ಮ ದಾರಿ ಪ್ರಯತ್ನಗಳಿಗೆ ಅನುಗುಣವಾಗಿ ನಾವು ಫಲವನ್ನು ಅಪೇಕ್ಷಿಸಬೇಕೇ ಹೊರತು ಅದಕ್ಕಿಂತ ಮಿಗಿಲಾಗಿ ಅಲ್ಲ, ನಮ್ಮ ಪ್ರಯತ್ನಕ್ಕೂ ಫಲಕ್ಕೂ ಅರ್ಥಾರ್ಥ ಸಂಬAಧವಿಲ್ಲದೇ ಹೋದರೆ ನಮಗೆ ಧಕ್ಕಿದ ಫಲವನ್ನು ಸರಿಯಗಿ ಸವಿಯಲು ಸಾಧ್ಯವೇ ಇಲ್ಲ. ನಮಗೆ ಸುಲಭವಾಗಿ ದಕ್ಕುವ ಯಾರದೋ ಶ್ರಮದ ಫಲ ನಮ್ಮನ್ನು ನೈತಿಕವಾಗಿ ಕುಗ್ಗಿಸಿ ಬಿಡುವುದರಲ್ಲಿ ಅನುಮಾನವಿಲ್ಲ. ಸರಿಯಾದ ಬೀಜದಿಂದ ಮಾತ್ರವೇ ಸದೃಢವಾದ ಗಿಡ ಬೆಳೆಯಬಲ್ಲುದು ಹೊರತು ಬಲಹೀನವಾದ ಬೀಜದಿಂದ ಉತ್ತಮ ಗಿಡ ಬೆಳೆಯಲು ಸಾಧ್ಯವಿಲ್ಲ. ಬೀಜ ವೃಕ್ಷದ ನಡುವಿರುವ ಸಂಬAಧ ಗುರಿ ಮತ್ತು ದಾರಿಯ ನಡುವೆಯೂ ಇರುವುದು. ಒಂದರ್ಥದಲ್ಲಿ ಇದೊಂದು ಸಹಜ ಸ್ವಭಾವ ಮತ್ತು ಸಂಬAಧ ಮತ್ತು ಜಗದ ನಿಯಮವೂ ಹೌದು. 

ಗುರಿಯನ್ನು ನಿರ್ಧರಿಸುವ ಸಮಯದಲ್ಲಿ ನಮ್ಮ ಶಕ್ತಿ, ಸಾಮರ್ಥ್ಯ, ಮತ್ತು ಪರಿಸರವನ್ನು ಗಮನದಲ್ಲಿರಿಸಿ ಸರ್ವರಿಗೂ ಹಿತವಾಗುವ ಯಾ ಅನ್ಯರಿಗೆ ತೊಡಕಾಗದಿರುವ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ದಾರಿಯಲ್ಲಿ ತನ್ಮಯತೆಯಿಂದ, ಧರ್ಮದ ರೀತಿಯಲ್ಲಿ, ಅಸತ್ಯ, ಹಿಂಸೆ, ಅನ್ಯಾಯಗಳಿಗೆ ಅವಕಾಶ ಇಲ್ಲದಂತೆ ಗುರಿಯೆಡೆಗೆ ಮುನ್ನಡೆಯಬೇಕು. ಇಂತಹ ಪ್ರಯತ್ನಕ್ಕೆ ದೊರೆಯುವ ಫಲವನ್ನು ಸ್ವೀಕರಿಸುವುದರಲ್ಲಿಯೇ ‘ಸ್ವ’ ಮತ್ತು ಸಮಷ್ಟಿಯ ಹಿತವಿದೆ ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ. ಹಾಗಾಗಿ ನಾವು ಅನುಸರಿಸುವ ದಾರಿ ಮತ್ತು ಸಾಧಿಸಬೇಕಾದ ಗುರಿ ಕೇವಲ ವೈಯಕ್ತಿಕ ನೆಲೆಯಲ್ಲಿ ವಿವೇಚಿಸಬೇಕಾದ ನಿರ್ಧಾರವಾಗಿರದೆ ಸಮುದಾಯ ಕೇಂದ್ರಿತ ಸಮಾಜಮುಖಿ ಆಯಾಮವಿರುವ ಸ್ವರೂಪಾತ್ಮಕ ಸಂಗತಿಯಾಗಿದೆ ಎನ್ನುವ ಕುರಿತು ಸದಾ ಜಾಗೃತವಾಗಿರಬೇಕಾಗಿದೆ.

ಭೋಜನ ಶ್ರಮ: 

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅನ್ನವನ್ನು ಸ್ವಂತ ದುಡಿಮೆಯ ಮೂಲಕ ಗಳಿಸುವುದರಲ್ಲಿ ಬದುಕಿನ ಸಾರ್ಥಕತೆಯಿದೆ ಎನ್ನುವ ಅಂಶವನ್ನು ಲಿಯೋ ಟಾಲ್ ಸ್ಟಾಯ್ ಅವರ ಬರಹಗಳಿಂದ ಗಾಂಧೀ ಅರಿತುಕೊಂಡರು ಎಂದು ಹೇಳಲಾಗಿದೆ. ಟಾಲ್ ಸ್ಟಾಯ್ ಪ್ರಸ್ತಾಪಿಸಿದ ಈ ಅಂಶ ಗಾಂಧೀಯವರ ಮನಸ್ಸನ್ನು ಗಾಢವಾಗಿ ತಟ್ಟಿತ್ತು. ”ಆನ್ ಟು ದಿ ಲಾಸ್ಟ್” ಕೃತಿಯ ಓದು ಗಾಂಧೀಯ ಮನಸ್ಸಿನಲ್ಲಿದ್ದ ‘ದುಡಿದು ತಿನ್ನುವ’ ಪರಿಕಲ್ಪನೆಯನ್ನು ಶಿಲಾಲೇಖವಾಗಿ ಮಾರ್ಪಡಿಸಿತು.  ಗಾಂಧೀಯ ಇಡೀ ಬದುಕನ್ನು ಅವಲೋಕಿಸಿದಾಗ ಈ ಅಂಶ ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ವಾಸ್ತವಾಗಿ ಲಿಯೋ ಟಾಲ್ ಸ್ಟಾಯ್ ಈ ಅಂಶವನ್ನು ತನ್ನ ಲೇಖನದಲ್ಲಿ ಪ್ರಸ್ತಾಪಿಸಿದ್ದರೂ ಇದರ ಪರಿಕಲ್ಪನೆ ರಷ್ಯನ್ ಲೇಖಕ ಟಿ. ಎಂ. ಬೊಂಡರೆಫ್ ಅವರದ್ದು, ಇಂತಹ ಆಶಯಗಳನ್ನು ಭಗವದ್ಗೀತೆಯಲ್ಲಿಯೂ ಉಲ್ಲೇಖಿಸಲಾಗಿದೆ (ತ್ಯಾಗ, ದುಡಿಮೆಯಿಲ್ಲದೆ ತಿನ್ನುವುದು ಕದ್ದು ತಿಂದ0ತೆ).

ಶ್ರಮವಿಲ್ಲದೆ ತಿನ್ನುವುದು ನೈತಿಕವಾಗಿ ಸಮಂಜಸವಲ್ಲ ಎನ್ನುವ ನಿಲುವಿಗೆ ಹಲವು ಆಯಾಮಗಳಿವೆ. ಬೆವರು ಹರಿಸದೆ ಯಾರಿಗಾದರೂ ಹಸಿವಾಗಲಾರದು ಹಾಗಾಗಿಯೇ ಬೆವರಿನ ಬೆಲೆಯೇ ಆಹಾರ ಅಥವಾ ಅನ್ನ. ಸಂಪತ್ತು ಶೇಖರಿಸಿದ ಶ್ರೀಮಂತರು ಹಸಿವಾಗದಿದ್ದಾಗ ವ್ಯಾಯಾಮ, ಕಸರತ್ತು ಮಾಡುವ ಮೂಲಕ ದೇಹವನ್ನು ಆಹಾರ ಸ್ವೀಕರಿಸಲು ಸಿದ್ಧವಾಗಿಸುತ್ತದೆ ಮತ್ತು ಶೇಖರವಾದ ಹೆಚ್ಚುವರಿ ಆಹಾರದ ಪರಿವರ್ತಿತ ರೂಪವಾದ ಬ್ಬೊಜ್ಜನ್ನು ಕರಗಿಸುತ್ತದೆ. ಆದರೆ ಮೈ ಮುರಿದು ದುಡಿಯುವ ಜನರಿಗೆ ಇದರ ಅಗತ್ಯವಿರುವುದಿಲ್ಲ. ಜಗತ್ತಿನಲ್ಲಿ ಬಹುಪಾಲು ಜನ ದಿನಾಲೂ ಬೆವರು ಸುರಿಸಿ ತಮ್ಮ ಅನ್ನವನ್ನು ಸಂಪಾದಿಸುತ್ತಾರೆ. ಇಂತಹ ಜನ ನಿಜವಾಗಿಯೂ ನೈತಿಕವಾಗಿ ಶ್ರೇಷ್ಟರು, ದೈಹಿಕ ಶ್ರಮದ ಮಹತ್ವವನ್ನು ಪ್ರತಿಯೊಬ್ಬರೂ ಅರಿತಾಗ ಸಮಾಜದಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲೆಸಲು ಸಹಕಾರಿಯಾಗುತ್ತದೆ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿರುವುದರ ಹಿಂದಿನ ಆಶಯವೂ ಹೀಗೆಯೇ ವಿಶಾಲ ಅರ್ಥ ವ್ಯಾಪ್ತಿಯನ್ನು ಹೊಂದಿದೆ. ಇಡೀ ಸಮುದಾಯ ಶ್ರಮ ಸಂಸ್ಕöÈತಿಯ ಮಹತ್ವವನ್ನು ಒಪ್ಪಿಕೊಂಡಾಗ ದುಡಿಮೆಗೆ ಬೆಲೆ ನೆಲೆ ಎರಡೂ ಸಿಕ್ಕುವಂತಾಗುತ್ತದೆ. ಬಡವ ಬಲ್ಲಿದರ ನಡುವಿನ ಅಂತರ ಕೂಡಾಕಡಿಮೆಯಾಗಲು ಸಾಧ್ಯವಿದೆ. ಸಂಪತ್ತಿನ ಹಿಂದಿನ ಶ್ರಮದ ಮಹತ್ವ ತಿಳಿದುಕೊಂಡಾಗ ಯಾರಲ್ಲಿ ಸಂಪತ್ತು ಶೇಖರಣೆಯಾಗಿದೆಯೋ ಅಂತಹ ಸಿರಿವಂತಹರು ಈ ಸಂಪತ್ತು ಸಮಾಜದ ಸರ್ವರ ಶ್ರಮದಿಂದ ಸಂಚಿತವಾದದ್ದು ಮತ್ತು ಇಡೀ ಸಮುದಾಯದ ಪಾರುಪತ್ಯಗಾರಿಕೆಯ ನೆಲೆಯಲ್ಲಿ ಅಂತಹ ಸಂಪತ್ತನ್ನು ವಿನಿಯೋಗಿಸಬೇಕಾದ ಅವಶ್ಯಕತೆಯಿದೆ. ಎನ್ನುವುದನ್ನು ಮನಗಾಣಲು ಸಾಧ್ಯ. ಹೀಗೆ ಬದುಕಿನಲ್ಲಿ ಶ್ರಮಜೀವನದ ಮಹತ್ವ ಅರಿಯುವ ಮೂಲಕ ದುಡಿಯಲು, ಕೆಲಸ ಮಾಡಲು, ಶ್ರಮ ವಹಿಸಲು ಮುಂದಾಗುವುದು ಮತ್ತು ಆ ಮೂಲಕ ಜೀವನ ನಿರ್ವಹಿಸಲು ಮುಂದಾಗುವ ‘ಭೋಜನ ಶ್ರಮ’ದ ಕಲ್ಪನೆ ವೈಯಕ್ತಿಕ ಸಾಮಾಜಿಕವಾಗಿ ಬಹಳ ಮಹತ್ವದ ಸಿದ್ಧಾಂತವಾಗಿದೆ. ಬಹಳ ಸರಳವಾಗಿ ಕಾಣುವ ‘ಭೋಜನ ಶ್ರಮ’ದ ಪರಿಕಲ್ಪನೆ ಸತ್ಯ, ಅಹಿಂಸೆ ಮತ್ತು ಬ್ರಹ್ಮಚರ್ಯ ಸಾಧನೆಗೆ ಸಾಧನವೂ ಆಗಬಲ್ಲದು. ಅರ್ಥಾತ್ ಪರಿಶುದ್ಧ ಚಾರಿತ್ರ÷್ಯ ಮತ್ತು ಜೀವನ ನಿರ್ವಹಣೆಗೆ ಇದು ಸಹಕಾರಿಯಾಗಬಲ್ಲುದು. ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿ ಕೂಡಾ ತನ್ನ ಹಸಿವನ್ನು ನೀಗಿಸಿಕೊಳ್ಳುವ ಮಟ್ಟಿಗಾದರೂ ತನಗಿಷ್ಟವಾದ ಕೆಲಸವನ್ನು ಮಾಡುವ ಮೂಲಕ ಬೆವರು ಸುರಿಸಿ ಅನ್ನ ಸಂಪಾದನೆ ಮಾಡಬೇಕು. ಮನೆಯಿಂದ ಹೊರಗೆ ದುಡಿಯುವುದು ಅನಿವಾರ್ಯವಲ್ಲವಾದ ಸಂದರ್ಭಗಳಲ್ಲಿ ತನ್ನ ಎಲ್ಲಾ ಕೆಲಸಗಳನ್ನು ಸೇವಕರ ಪರಿಚಾರಕರ ಸಹಾಯವಿಲ್ಲದೇ ತಾನೇ ಮಾಡಿಕೊಳ್ಳಬಹುದು. ಕುಟುಂಬದಲ್ಲಿ ಶುಚಿತ್ವದ ಕೆಲಸವನ್ನು ಸ್ವಂತವಾಗಿ ನಿರ್ವಹಿಸಬಹುದಾಗಿದೆ. ಯಾವುದೇ ಕೆಲಸವನ್ನು ಒಂದು ನಿರ್ದಿಷ್ಟ ವರ್ಗದ ಜನರ ಕೆಲಸ, ವೃತ್ತಿ ಎಂದು ಹಣೆಪಟ್ಟಿ ಅಂಟಿಸುವುದು/ವರ್ಗೀಕರಿಸುವುದು ಖಂಡಿತಾ ಸ್ವೀಕಾರಾರ್ಹವಲ್ಲ. ಶುಚಿತ್ವದ ಕೆಲಸಗಳಿಗೆ ಮಹತ್ವ ನೀಡಬೇಕಿದೆ, ಇದರ ಕುರಿತಂತೆ ಬಾಲ್ಯದಿಂದಲೇ ಕುಟುಂಬದಲ್ಲಿ ಸರಿಯಾದ ಸಂಸ್ಕಾರ ಸಿಗಲೇಬೇಕು. ಪ್ರತಿಯೊಬ್ಬರೂ ತಮ್ಮ ಮನೆ ಮತ್ತು ಪರಿಸರದ ಶುಚಿತ್ವ ನಿಭಾಯಿಸುವ ಮೂಲಕ ದೈಹಿಕ ಶ್ರಮದ ಮಹತ್ವವನ್ನು ಮನಗಾಣಬೇಕಿದೆ. ಇದು ಭೋಜನ ಶ್ರಮದ ಕುರಿತು ಮೊದಲ ಪಾಠವಾಗಬೇಕು.

ಸಮಾಜದಲ್ಲಿರುವ ತಾರತಮ್ಯ ನೀತಿಯ ಆಳದಲ್ಲಿ ಶ್ರಮವಿಭಜಕ ನೀತಿಯೂ ಕೆಲಸ ಮಾಡುತ್ತಿದೆ. ಅಂದರೆ ದುಡಿಯುವುದು ಬಹಳ ಸುಲಭದ ಕೆಲಸ ಇದರಲ್ಲಿ ಬರೀ ಅಂಗಾAಗಗಳಿಗೆ ಕೆಲಸ ನೀಡುವುದಷ್ಟೇ ಹೊರತು ಯಾವ ಬುದ್ಧಿವಂತಿಕೆಯೂ ಒಳಗೊಂಡಿಲ್ಲ. ಆದರೆ ಏನು ಕೆಲಸ ಮಾಡಬೇಕು, ಯಾಕೆ ಮಾಡಬೇಕು ಮತ್ತು ಅದರ ಹಿಂದಿನ ತಾತ್ವಿಕ ಚೌಕಟ್ಟುಗಳನ್ನು ನಿರೂಪಿಸುವ ಕೆಲಸ ಬಹಳ ಮಹತ್ವವಿರುವಂತಹದ್ದು ಹಾಗಾಗಿ ಚಿಂತನೆಯನ್ನು ಬುದ್ಧಿಯನ್ನು ಉಪಯೋಗಿಸಿ ಮಾಡುವ ಕೆಲಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವಿದೆ. ಈ ಕಾರಣದಿಂದಾಗಿಯೇ ದೈಹಿಕ ಶ್ರಮವನ್ನು ಆಧರಿಸಿದ ದುಡಿಮೆಗೆ ಕಡಿಮೆ ಮಾನ್ಯತೆ ಮತ್ತು ಬುದ್ಧಿ ಉಪಯೋಗಿಸಿ ಚಿಂತನೆ ಮಾಡುವ ಇತರರ ದುಡಿಮೆಯನ್ನು ಪ್ರಭಾವಿಸುವ ನಿರ್ದೇಶಿಸುವ ಮತ್ತು ನಿಯಂತ್ರಿಸುವ ಕೆಲಸ ಬಹಳ ಮಹತ್ವವಿರುವಂತಹ ಕೆಲಸ ಎನ್ನುವ ಅಭಿಪ್ರಾಯವನ್ನು ರೂಪುಗೊಳಿಸಲಾಗಿತ್ತು. ಇಂತಹ ತಿಳುವಳಿಕೆಯನ್ನು ನಂಬಿಕೊAಡ ಒಂದು ಜನವರ್ಗ ಆಲೋಚಿಸುವ ಕೆಲಸವನ್ನು ಸಮಾಜದ ಕೆಲವೇ ವರ್ಗದ ಜನರಿಗೆ ಬಿಟ್ಟುಕೊಟ್ಟು ಅವರನ್ನು ಹಿಂಬಾಲಿಸಿ ಅವರ ನಿರ್ದೇಶನದಂತೆ ಜೀವನ ನಿರ್ವಹಿಸುವ ಬಹಳ ಸುಲಭದ ಬದುಕಿಗೆ ಮೊರೆಹೋದ ಪರಿಸ್ಥಿತಿಯನ್ನು ನಾವು ಕಾಣಬಹುದಾಗಿದೆ. ದಿನನಿತ್ಯದ ಅವಶ್ಯಕತೆಗಳನ್ನು ಹೊಂದಿಸಿಕೊಳ್ಳುವ ಭರಾಟೆಯಲ್ಲಿ ಯಾರೂ ಹೋರಾಟದಲ್ಲಿ ಸಾಮಾಜಿಕ ಸಂರಚನೆಯಲ್ಲಿನ ದೋಷಗಳ ಕುರಿತಾಗಲೀ, ನಂಬಿಕೆಯ ಹಿಂದಿನ ಗ್ರಹೀತಗಳ ಕುರಿತಾಗಲೀ ತಲೆಕೆಡಿಸಿಕೊಳ್ಳಲಿಲ್ಲ. ಹಲವಾರು ಸಂದರ್ಭಗಳಲ್ಲಿ ಇಂತಹ ನಂಬಿಕೆಗಳು ಪ್ರಶ್ನಿಸಲ್ಪಟ್ಟಾಗ, ಮತ್ತು ನಂಬಿಕೆಗಳ ನೆಲೆ ಕಳಚಲ್ಪಟ್ಟಾಗ, ಸಮಾಜವನ್ನು ನಿಯಂತ್ರಿಸುತ್ತಿದ್ದ ಹಿಂದಿನ ನಂಬಿಕೆಗಳು ಬದಲಾವಣೆಗೆ ಒಳಪಟ್ಟ ನಿದರ್ಶನಗಳನ್ನು ನಾವು ಕಾಣಬಹುದು. ಪಾರಂಪರಿಕ ಕ್ರಮಗಳು, ನಂಬಿಕೆಗಳು ಬಲವಾದ ಪ್ರತಿರೋಧ ಎದುರಿಸಿದಾಗಲೆಲ್ಲ ಹಳೆಯ ನಂಬಿಕೆಗಳು ಕರಗಿ ಮತ್ತೆ ಹೊಸ ರೂಪದಲ್ಲಿ ಮುನ್ನಡೆಯುವ ಸಂಗತಿಗಳು ಅಪರೂಪದ ವಿದ್ಯಮಾನವೇನಲ್ಲ. ಮೇಲೆ ಉಲ್ಲೇಖಿತ ವಿಷಯವನ್ನಾಧರಿಸಿದ ವಿವರಣೆಯಿಂದ ತಿಳಿದು ಬರುವ ಪ್ರಮುಖ ಸಂಗತಿ ಏನೆಂದರೆ ದೈಹಿಕ ಶ್ರಮ ಮತ್ತು ಭೌದ್ಧಿಕ ಶ್ರಮವನ್ನು ವಿಂಗಡಿಸಿ ಅವನ್ನು ಮೇಲು ಕೀಳು ಎನ್ನುವ ರೀತಿಯಲ್ಲಿ ವರ್ಗೀಕರಿಸುವ ಮೂಲಕ ಸಮಾಜದ ವರ್ಗಗಳಲ್ಲಿ ತಾರತಮ್ಯ ಉಂಟಾಗಲು ಹಿತಾಸಕ್ತ ವರ್ಗ ಕಾರಣವಾಯಿತು. ಸಮಾಜದ ಈ ಹಿತಾಸಕ್ತ ವರ್ಗ ಇಂತಹ ತಾರತಮ್ಯ (ಮೇಲು ಕೀಳು) ಸಹಿತವಾದ ಸಮಾಜ ಮುಂದುವರಿದುಕೊAಡು ಹೋಗಲು ಪೂರಕವಾದ ನಂಬಿಕೆ, ಆಚರಣೆ, ಉತ್ಪಾದನಾ ಕ್ರಮ ಚಿಂತನಾ ವಿನ್ಯಾಸಗಳನ್ನು ರೂಪಿಸಿತು. ಸಮಾಜದಲ್ಲಿ ತಾರತಮ್ಯಕ್ಕೆ ಮೂಲವಾಗಿರುವ ಈ ರೀತಿಯ ಶ್ರಮವಿಭಜನೆಯನ್ನೇ ಹೊಸಬೆಳಕಿನಲ್ಲಿ ನೋಡುವ ಪ್ರಯತ್ನವನ್ನು ಗಾಂಧೀ ಮಾಡಿದರು. ಸ್ವಹಿತಾಸಕ್ತಿಯನ್ನು ಪೊರೆಯುವ ಒಂದು ತಿಳುವಳಿಕೆಯನ್ನು ಮುರಿದು ಭೋಜನ ಶ್ರಮ ಮತ್ತು ದುಡಿಮೆಯ ಹಿರಿಮೆಯನ್ನು/ಮಹಿಮೆಯನ್ನು ಶ್ರೇಷ್ಟವೆಂದು ಪರಿಗಣಿಸಿದ ಪರಿಣಾಮವಾಗಿ ಹೊಸ ಆಲೋಚನಾ ಕ್ರಮವನ್ನು ಸಮಾಜಕ್ಕೆ ಪರಿಚಯಿಸಲಾಯಿತು.

ಆರ್ಥಿಕ ಸಮಾನತೆ: 

ಸರ್ವೋದಯ ಆಧಾರಿತ ಅರ್ಥವ್ಯವಸ್ಥೆಯಲ್ಲಿ ಆರ್ಥಿಕ ಸಮಾನತೆ ಸಾಧಿಸುವುದು ಮತ್ತು ಆರ್ಥಿಕ ಅಸಮಾನತೆಯ ನಿವಾರಣೆ ಬಹಳ ಪ್ರಮುಖವಾದ ಅಂಶ. 

ಆರ್ಥಿಕ ಸಮಾನತೆ ಇದ್ದಾಗ ಬಂಡವಾಳ ಮತ್ತು ಕಾರ್ಮಿಕ ವರ್ಗದ ನಡುವಿನ ಸಂಘರ್ಷ ಮರೆಯಾಗಲು ಸಾಧ್ಯವಿದೆ. ಶಾಂತಿಯುತವಾದ ಸಹಬಾಳ್ವೆಗೆ ಆರ್ಥಿಕ ಸಮಾನತೆ ಪ್ರಮುಖ ಅಥವಾ ಬಹಳ ಗಟ್ಟಿಯಾದ ಭೂಮಿಕೆ ಒದಗಿಸುತ್ತದೆ ಎನ್ನುವುದು ಗಾಂಧೀಯವರ ವಾದ. ಯಾರಲ್ಲಿ ಅಪಾರ ಸಂಪತ್ತು ಶೇಖರಣೆಯಾಗಿದೆಯೋ ಅದು ಸಮಾಜದ ಕೆಳವರ್ಗದ ಜನರೆಡೆಗೆ ಹರಿದು ಬರುವಂತಿದ್ದು ಬಡತನ, ದಾರಿದ್ರ÷್ಯದಿಂದ ಬಳಲುತ್ತಿರುವ ಜನರ ಏಳಿಗೆಗೆ ಯಾ ಆರ್ಥಿಕ ಚೇತರಿಕೆಗೆ ಸಹಕಾರಿಯಾಗಬೇಕು. ಆರ್ಥಿಕ ಅಸಮಾನತೆ ಎನ್ನುವುದು ಅಪರೋಕ್ಷವಾಗಿ ಒಂದು ಅಸಂತುಲಿತ ದಮನಕಾರಿ ವ್ಯವಸ್ಥೆಯ ಪ್ರತಿಫಲನವೂ ಆಗಿದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಿದೆ. ಎಲ್ಲಿಯವರೆಗೆ ಆರ್ಥಿಕ ಅಸಮಾನತೆ ತೀವ್ರವಾಗಿರುತ್ತದೆಯೋ ಅಲ್ಲಿಯ ತನಕ ದಬ್ಬಾಳಿಕೆ ಹಿಂಸೆಗಳಿಲ್ಲದ ಸರಕಾರ (ವ್ಯವಸ್ಥೆ) ಅಸ್ತಿತ್ವದಲ್ಲಿರುವುದು ಅನುಮಾನದ ಸಂಗತಿಯಾಗಿರುತ್ತದೆ. ಬಲಾಡ್ಯರು ಆಡಳಿತ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಮೂಲಕ ತಮ್ಮ ಪ್ರಭಾವವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು ಸಾಧ್ಯವಾಗುತ್ತದೆ. ಬಲಹೀನರ, ದುರ್ಬಲರ ದುಃಖ ದುಮ್ಮಾನಗಳು ಸಂಚಿತವಾಗುತ್ತಾ ಮುಂದುವರಿದು ಯಾವುದಾದರೊಂದು ಕ್ಷಣದಲ್ಲಿ ಸ್ಪೋಟಗೊಳ್ಳುವ ಮೂಲಕ ಸಮಾಜದಲ್ಲಿ ಕ್ಷೋಭೆಗೆ, ಅಲ್ಲೋಲಕಲ್ಲೋಲಗಳಿಗೆ ಮುನ್ನುಡಿ ಬರೆಯುವ ಅಪಾಯಗಳಿವೆ. ಹಾಗಾಗಿ ಸಮಾಜದಲ್ಲಿ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಸಮಾಜದಲ್ಲಿ ಸಂಘರ್ಷ ಉಂಟಾಗುವುದರಲ್ಲಿ ಯಾವ ಅನುಮಾನಗಳೂ ಇಲ್ಲ. ಶ್ರೀಮಂತರು ತಮ್ಮನ್ನು ಇಡೀ ಸಮಾಜದ ಪಾರುಪತ್ಯಗಾರರೆಂದು ತಿಳಿದುಕೊಂಡು ತಮ್ಮಲ್ಲಿರುವ ಸಂಪತ್ತನ್ನು ಸಮಾಜದ ಹಿತದೃಷ್ಟಿಯಿಂದ ವಿನಿಯೋಗಿಸಬೇಕು. ಈ ರೀತಿಯಲ್ಲಿ ತಮ್ಮಲ್ಲಿರುವ ಸಂಪತ್ತನ್ನು ಹಂಚಿಕೊAಡು ಬದುಕುವ ಸಾಮುದಾಯಿಕ ಹಿತಚಿಂತನೆ ಮಾಡುವ ಮನೋಸ್ಥಿತಿ ನಿರ್ಮಿಸುವುದು ಸುಲಭದ ಮಾತಲ್ಲವಾದರೂ ಅಸಾಧ್ಯವಾದದ್ದೇನೂ ಅಲ್ಲ. ಮೇಲ್ನೋಟಕ್ಕೆ ಇದೊಂದು ಬಹಳ ರೋಮ್ಯಾಂಟಿಕ್ ಕಲ್ಪನೆಯಾಗಿ ಕಂಡರೂ ಇದರ ಆಳದಲ್ಲಿ ಹುದುಗಿರುವ ಆಶಯ ಉದಾತ್ತವಾದದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. 

ಸರ್ವೋದಯದ ಇತರ ಆಧ್ಯಾತ್ಮಿಕ ನೆಲೆಗಳು: 

ಸರ್ವೋದಯ ಎನ್ನುವುದು ಒಂದು ಸಂಸ್ಥೆಯಲ್ಲ, ವ್ಯವಸ್ಥೆಯೂ ಅಲ್ಲ ಬದಲಾಗಿ ಒಂದು ಹೊಸ ಆಲೋಚನಾ ಕ್ರಮ. ವೈಯಕ್ತಿಕ ಆಲೋಚನೆಗಳನ್ನು ಜೀವನ ಕ್ರಮಗಳನ್ನು ಸಮಾಜದ ಹಿತದೃಷ್ಟಿಯಿಂದ ರೂಪಿಸಿಕೊಳ್ಳುವ ಪ್ರಜ್ಜಾಪೂರ್ವಕ ನೈತಿಕ ಪಥ. ಇದರನ್ವಯ ವ್ಯಕ್ತಿಗತ ಜೀವನದಲ್ಲಿ ನ್ಯಾಯ ಸತ್ಯ ಅಹಿಂಸೆಯ ವ್ರತಸ್ಥರಾಗುವ ಮೂಲಕ ಗಳಿಕೆಯ ಹಾದಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಇಲ್ಲಿ ಅಗತ್ಯ. ನಮ್ಮ ಸುತ್ತಮುತ್ತ ಇರುವ ಜನರ ನೋವು ನಲಿವುಗಳನ್ನು ಗಮನಿಸಿ, ನಮ್ಮ ಸಮಾಜದ ಸಂಪನ್ಮೂಲಗಳನ್ನು ಆಧüರಿಸಿ ನಮ್ಮ ಆಸೆಗಳಿಗೆ ಮಿತಿಯನ್ನು ಹಾಕಿಕೊಳ್ಳಬೇಕು. ನಮ್ಮ ನಡೆನುಡಿಗಳಲ್ಲಿ ಸತ್ಯಕ್ಕೆ ಮಹತ್ವವಿರಬೇಕು. ಸತ್ಯವನ್ನು ದೇವರ ಮಟ್ಟಕ್ಕೆ ಏರಿಸಿದ ಗಾಂಧೀ, ಸತ್ಯ ಮಾರ್ಗದ ಅನುಸರಣೆಯಿಂದ ಸಾಮಾಜಿಕ ಕೊಳೆಯನ್ನು ತೊಳೆಯುವುದು ಸಾಧ್ಯವೆಂದು ನಂಬಿದವರು. ಇಂತಹ ಪರಿಕಲ್ಪನೆಯ ವಿಸ್ತöÈತ ರೂಪವಾಗಿ ಅವರು ಸತ್ಯಾಗ್ರಹವನ್ನು ಹೋರಾಟದ ಅಸ್ತçವಾಗಿ ರೂಪಿಸಿದರು. ನ್ಯಾಯಯುತವಾಗಿ ಉದ್ದೇಶದ ಈಡೇರಿಕೆಗಾಗಿ ಸತ್ಯ ಮಾರ್ಗದಲ್ಲಿ ಆಗ್ರಹಿಸುವ ಶಾಂತಿಯುತವಾದ ಮಾರ್ಗವನ್ನು (ಅನುಸರಿಸುವ ಮೂಲಕ) ಅನ್ವೇಷಿಸಲಾಯಿತು. ಈ ರೀತಿಯಲ್ಲಿ ಸತ್ಯಾಗ್ರಹವನ್ನು ಅಹಿಂಸಾ ಮಾರ್ಗದ ಮೂಲಕ ಅನುಸರಿಸುವುದರಿಂದ ತರಬಹುದಾದ ಮನಃ ಪರಿವರ್ತನೆಯಿಂದ ಸಮಷ್ಟಿಯ ಹಿತ ಚಿಂತನೆಯ ದರ್ಶನವಾಗಬಲ್ಲುದು. ಇಂತಹ ಮನಃ ಪರಿವರ್ತನೆ ಹೊದ ಹುರುಪಿನ, ಹೊಸ ಉತ್ಸಾಹದ, ಭರವಸೆಯ ಸಮಾಜ ನಿರ್ಮಾಣವಾಗಬಹುದು. ಸತ್ಯ, ಅಹಿಂಸೆ, ಅಪರಿಗ್ರಹ, ಬ್ರಹ್ಮಚರ್ಯ, ಅಸ್ತೇಯಗಳು ಜೀವನ ದರ್ಶನಗಳಾದಗ ಮಾತ್ರ ಎಲ್ಲರ ಏಳಿಗೆಗೆ ಕಾರ್ಯೋನ್ಮುಖವಾಗುವ ಸರ್ವೋದಯ ಸಮಾಜ ನಿರ್ಮಾಣ ಮಾಡಬಹುದು.

ತನ್ನ ಜೀವನಾನುಭವದ ಹಿನ್ನಲೆಯಲ್ಲಿ “ಇರುವುದು ಮತ್ತು ಆಗುವುದರ” ನಡುವಿನ ತಾರ್ಕಿಕತೆಯನ್ನು ಗಾಂಧೀ ಕಂಡುಕೊAಡರು. ಅನುಭವದ ಮೂಸೆಯಲ್ಲಿ ಆಲೋಚನೆಗಳು ಹುಟ್ಟಿಕೊಳ್ಳುವುದು ಮತ್ತು ಅಂತಹ ಆಲೋಚನೆಗಳು ಜೀವನಾನುಭವಕ್ಕೆ ವ್ಯಕ್ತಿಯೊಬ್ಬನನ್ನು ಸಿದ್ಧಗೊಳಿಸುವ ಇಡೀ ಕ್ರಿಯೆ ನಿರಂತರ ನಡೆಯುವ ಒಂದು ರೀತಿಯ ವರ್ತುಲಾಕೃತಿಯ ಪ್ರಕ್ರಿಯೆ. ಇಂತಹ ಪ್ರಕ್ರಿಯೆಯ ಹಿಂದಿನ ಚಾಲಕ ಶಕ್ತಿ ಸತ್ಯ ಮತ್ತು ಅಹಿಂಸೆಯಾಗಿರಬೇಕಾದದ್ದು ಬಹಳ ಅವಶ್ಯಕ. ಇಂತಹ ಚಿಂತನಾ ವಿನ್ಯಾಸಕ್ಕೆ ಬಂಡವಾಳಶಾಹೀ (ಆಧುನಿಕ ಉತ್ಪಾದನಾ ವ್ಯವಸ್ಥೆ) ಆರ್ಥಿಕ ವ್ಯವಸ್ಥೆ ಪೂರಕವಾಗಿಲ್ಲ ಎನ್ನುವುದು ಗಾಂಧೀಯವರ ನಿಲುವಾಗಿತ್ತು. ಬಂಡವಾಳಶಾಹೀ ಆರ್ಥಿಕ ವ್ಯವಸ್ಥೆ ಕೇವಲ ಭೌತಿಕ ಅಗತ್ಯಗಳ ಬಗ್ಗೆ ಪ್ರಾಪಂಚಿಕ ಸುಖ ಸಂತೋಷಗಳ ಬಗ್ಗೆ ಚಿಂತಿತವಾಗಿದೆಯೇ ಹೊರತು ಮನುಷ್ಯನ ಮಾನಸಿಕ ಸ್ಥಿತಿಯ ಬಗ್ಗೆ, ನೈತಿಕ ಮೌಲ್ಯಗಳ ಬಗ್ಗೆ, ಸಾಮಾಜಿಕ ಉತ್ತರದಾಯಿತ್ವದ ಬಗ್ಗೆ ಭೌತಿಕ ವಿಷಯಾಸಕ್ತಿಗಳ ಬಗ್ಗೆ ಮತ್ತು ಪ್ರಾಪಂಚಿಕ ಸುಖ ಭೋಗಗಳಿಗೆ ಸಂಬAಧಿಸಿದAತೆ ಮಾತ್ರವಾಗಿರುತ್ತದೆ. 

ಸಂಪತ್ತನ್ನು ಸೃಷ್ಟಿಸುವ ಚಾಲಕ ಶಕ್ತಿಯೇ ಸಮಾಜದ ವ್ಯಕ್ತಿಗಳು. ಆದ್ದರಿಂದ ಸೃಷ್ಟಿಯಾಗುವ ಸಂಪತ್ತಿಗೆ ಒಂದು ಸಾಮಾಜಿಕ ನೆಲೆ, ಬೆಲೆ ಇದೆ. ಸೃಷ್ಟಿಯಾದ ಸಂಪತ್ತಿನ ಹಂಚಿಕೆ ಸಂಪೂರ್ಣವಾಗಿ ಮಾರುಕಟ್ಟೆಯ ಶಕ್ತಿಗಳನ್ನು ಅವಲಂಭಿಸಿದ್ದರೆ ಅದರಿಂದ ಸಮಾಜದ ಹಿತಾಸಕ್ತಿ ಸಾಧಿಸಲು ಸಾಧ್ಯವಿಲ್ಲ, ಕಾರಣ ಮಾರುಕಟ್ಟೆ ಆಧಾರಿತ ವಿತರಣಾ ವ್ಯವಸ್ಥೆಯಲ್ಲಿ ದುರ್ಬಲರಿಗಿಂತ ಹಣವಂತರು ಕೊಳ್ಳುವ ಸಾಮರ್ಥ್ಯವಿರುವವರಿಗೆ ಹೆಚ್ಚಿನ ಮಹತ್ವವಿದ್ದು ಬಡವರಿಗೆ ಮತ್ತು ಆಶಕ್ತರಿಗೆ ಅವಕಾಶ ಕಡಿಮೆ ಇರುತ್ತದೆ. ಈ ಕಾರಣದಿಂದ ಮಾರುಕಟ್ಟೆಯಾಧಾರಿತ ಉತ್ಪಾದನೆ ಮತ್ತು ಸಂಪನ್ಮೂಲಗಳ ವಿತರಣೆ ಸಮಷ್ಟಿಯ ಹಿತದೃಷ್ಟಿಯಿಂದ ಉತ್ತಮ ವ್ಯವಸ್ಥೆಯಲ್ಲ. ಜನರ ಕೊಳ್ಳುವ ಸಾಮರ್ಥ್ಯ ಮಾತ್ರವಲ್ಲದೇ ಜನರ ಅವಶ್ಯಕತೆ ಕೂಡಾ ಸಂಪತ್ತಿನ ವಿತರಣೆಯಲ್ಲಿ ಪ್ರಮುಖ ಅಂಶವಾಗಬೇಕು. ಈ ದೃಷ್ಟಿಯಿಂದ ಸಂಪತ್ತು ಹೊಂದಿರುವ ಮಂದಿ ಸಂಪತ್ತನ್ನು ಸಮಾಜದ ಪಾರುಪತ್ಯಗಾರರ ನೆಲೆಯಲ್ಲಿ ಸಮಾಜದ ಒಳಿತಿಗಾಗಿ  ವಿನಿಯೋಗಿಸುವ ಮನೋಭಾವ ಹೊಂದುವುದು ಅಗತ್ಯವಾಗಿರುತ್ತದೆ. ಸಂಪತ್ತನ್ನು ಈ ರೀತಿಯಲ್ಲಿ ವಿನಿಯೋಗಿಸಿದರೆ ಮನುಷ್ಯನ ಮಿತಿಮೀರಿದ ಆಸೆಗೂ ಒಂದು ಕಡಿವಾಣ ತೊಡಿಸಿದಂತಾಗುತ್ತದೆ. ಸಂಪತ್ತನ್ನು ಸಮಾಜದಲ್ಲಿ ಸೃಷ್ಟಿಸಲು ಸಾಧ್ಯ, ಅದನ್ನು ಶೂನ್ಯದಲ್ಲಿ ಸೃಷ್ಟಿಸಲು ಬರುವುದಿಲ್ಲ.  ಅಲ್ಲದೆ ಸಂಪತ್ತು ಎನ್ನುವುದು ನಿಜವಾದ ಅರ್ಥದಲ್ಲಿ ಸಂಚಯಿತ ಮನುಷ್ಯ ಶ್ರಮ, ಸಂಪತ್ತು ಯಾರಲ್ಲಿ ಶೇಖರವಾಗಿದೆಯೋ ಅವರು ಸಮಾಜದ ಇತರರ ಶ್ರಮವನ್ನು ಸಂಚಯಿಸಿ ತಮ್ಮಲ್ಲಿ ಇರಿಸಿಕೊಂಡAತಾಗುತ್ತದೆ. ಈ ಕಾರಣದಿಂದ ಸಂಚಯಿತ ಶ್ರಮದ ಹಿಂದೆ ಸಮಾಜದ ಕೊಡುಗೆ ಇದೆ. ಈ ಕಾರಣದಿಂದಾಗಿಯೇ ಸಂಪತ್ತಿನ ಒಡೆತನ ವ್ಯವಸ್ಥೆಯ ಕಾರಣದಿಂದ ಯಾರಿಗೇ ಸೇರಿದ್ದರೂ ನೈತಿಕವಾಗಿ ಅದರ ಮೇಲೆ ಇಡೀ ಸಮಾಜಕ್ಕೂ ಹಕ್ಕಿದೆ ಎಂದು ತಿಳಿಯಬೇಕಿದೆ. ಈ ಜಗತ್ತು ಎಲ್ಲಾ ಜೀವಿಗಳಿಗೂ ಸೇರಿದೆ. ಪ್ರತಿಯೊಂದು ಜೀವಿಗೂ ಈ ಜಗತ್ತಿನಲ್ಲಿ ಬದುಕುವ ಬೆಳೆಯುವ ಹಕ್ಕಿದೆ ಎನ್ನುವುದನ್ನು ನಾವು ಮನಗಾಣಬೇಕು. 

ದೈಹಿಕ ಶ್ರಮದ ಮೂಲಕ, ದುಡಿಮೆಯ ಮೂಲಕ ಸಂಪತ್ತು ಗಳಿಸಿದರೆ ಅಥವಾ ಭೋಜನ ಶ್ರಮದ ಮೂಲಕ ಗಳಿಸುವ ಸಂಪತ್ತು ಯಾ ಆದಾಯ ನಮ್ಮದಾಗುತ್ತದೆ. ಅದಕ್ಕಿಂತ ಹೆಚ್ಚುವರಿಯಾಗಿ ಗಳಿಸಿದ್ದೇವೆ ಎಂದಾದರೆ ಅದು ಅನ್ಯರ ಶ್ರಮವನ್ನು ನಾವು ನಮ್ಮ ಲಾಭಕ್ಕೆ ವರ್ಗಾಯಿಸಿಕೊಂಡAತೆಯೇ. ಮಾನವ ಸಮಾಜ ಆಧುನಿಕವಾದಷ್ಟು ಉತ್ಪಾದನಾ ವ್ಯವಸ್ಥೆ, ವಿತರಣಾ ವ್ಯವಸ್ಥೆ ಸಂಕೀರ್ಣಗೊಳ್ಳುತ್ತಾ ಹೋಗುತ್ತದೆ. ಇಂತಹ ಸಂಕೀರ್ಣತೆಯ ಕಾರಣಗಳಿಂದ ವ್ಯವಸ್ಥೆ, ಕಾರ್ಯ ನಿರ್ವಹಣೆ, ಇದರಲ್ಲಿರುವ ಲೋಪದೋಷಗಳ ಬಗೆಗಿನ ತಿಳುವಳಿಕೆ ಮತ್ತು ಇಂತಹ ಲೋಪದೋಷಗಳ ಪರಿಹಾರೋಪಾಯ ಎಲ್ಲವೂ ಸಂಕೀರ್ಣಗೊಳ್ಳುತ್ತಾ ಹೋಗುತ್ತದೆ. ಈ ಕಾರಣದಿಂದಾಗಿ ಗಾಂಧೀಜಿ ಸರಳವಾದ ವ್ಯವಸೆ ್ಥ ಸ್ವಾವಲಂಭಿಯಾದ ಗ್ರಾಮ ಮಟ್ಟದ ‘ಸ್ವದೇಶೀ’ ಕಲ್ಪನೆಯನ್ನು (ಹೆಚ್ಚು) ಪ್ರೋತ್ಸಾಹಿಸಿದರು. ಮತ್ತು ಅದಕ್ಕೆ ಹೆಚ್ಚು ಒತ್ತು ನೀಡಿದರು. ಸ್ವನಿಯಂತ್ರಣ ಸರ್ವೋದಯ ವ್ಯವಸ್ಥೆಯ ಆಧಾರ ಸ್ತಂಭವಾಗಿದೆ. ಯಾರಿಗೆ ತನ್ನ ಮೇಲೆ ನಿಯಂತ್ರಣವಿಲ್ಲವೋ ಅಂತಹವರು ಲಗಾಮಿಲ್ಲದ ಕುದುರೆಯಂತೆ ನಿಯಂತ್ರಣವಿಲ್ಲದಿದ್ದರೆ ಕುದುರೆಗೂ ಅಪಾಯ ಮತ್ತು ಇತರರಿಗೂ ಅಪಾಯ. ಒಂದು ವ್ಯವಸ್ಥೆಯನ್ನು ಸ್ವ ನಿಯಂತ್ರಣದೊಳಗೆ ತರುವಲ್ಲಿ ಸಮಾಜಮುಖೀ ಚಿಂತನೆಹೊAದಿರುವ, ಸಾಮುದಾಯಿಕ ನಾಯಕತ್ವ ನೀಡಬಲ್ಲ, ದಾರ್ಶನಿಕ ಮನೋಭಾವ ಇರುವ ಜನರ ಅಗತ್ಯವಿರುತ್ತದೆ. ಇಂತಹ ಜನ ನಾಗರಿಕ ಸಮಾಜದಲ್ಲಿ ಗ್ರಾಮ ಸ್ವರಾಜ್ಯದ ಕಲ್ಪನೆ ಬೇರೂರುವಂತೆ ಮಾಡಬಲ್ಲರು.

ವಿರಕ್ತ ಮತ್ತು ಪಿತೃತ್ವಭಾವದ ಉಪಭೋಗ ಮಾದರಿ:

ವಸ್ತು ಮತ್ತು ಸೇವೆಗಳನ್ನು ಬಳಸುವಾಗ ವ್ಯಕ್ತಿಗತ ಚಾರಿತ್ರ÷್ಯ ಮತ್ತು ನಡವಳಿಕೆಗಳು ‘ವಿರಕ್ತ’ ಮತ್ತು ಪ್ರೆöÊತ್ರಕ ಭಾವದಿಂದ ಪ್ರೇರಿತವಾಗಿರಬೇಕೆನ್ನುವುದು ಗಾಂಧೀಜಿಯವರ ಅಭಿಪ್ರಾಯವಾಗಿತ್ತು. ದಿನ ನಿತ್ಯದ ಜೀವನದಲ್ಲಿ ಅಗತ್ಯ ವಸ್ತುಗಳನ್ನು ನಾವು ಆಯ್ದುಕೊಳ್ಳುವಾಗಲೂ ನಮ್ಮ ಮನೋಭಾವನೆ ಮುಖ್ಯವಾಗಿರುತ್ತದೆ. ವಸ್ತುಗಳನ್ನು ಆಯ್ದುಕೊಳ್ಳುವಾಗ ಅವುಗಳಿಂದ ನಮಗೆ ದೊರೆಯಬಹುದಾದ ಸುಖ ಯಾ ಸಂತೃಪ್ತ ಭಾವವೇ ಮುಖ್ಯ ಎನ್ನುವುದು ಇಂದಿನ ಅರ್ಥಶಾಸ್ರದ ಹಿಂದಿನ ಗ್ರಹೀತವಾಗಿದೆ. ಆದರೆ ಸಂತೃಪ್ತಿ ಮತ್ತು ಸುಖಗಳನ್ನು ಮೀರಿದ ವಿರಕ್ತ ಮತ್ತು ಪ್ರೆöÊತೃಕ ಭಾವ ನಿರ್ಧಾರಕ ಅಂಶವಾಗಬೇಕೆನ್ನುವುದು ಸರ್ವೋದಯದ ಹಿಂದಿನ ಚಿಂತನೆಯಾಗಿದೆ. ವಿರಕ್ತ ಮತ್ತು ಪ್ರೆöÊತೃಕ ಭಾವದ ಹಿಂದೆ ವಸ್ತುವಿನ ಉಪಯೋಗ, ಉತ್ಪಾದಕನಿಗೆ ಅದರಿಂದ ದೊರಕಬಹುದಾದ ಪ್ರಯೋಜನ, ಅದರ ಉತ್ಪಾದನೆಯಲ್ಲಿ ತೊಡಗಿರಬಹುದಾದ ಜನರ ಜೀವನದ ಪ್ರಶ್ನೆಗಳು, ದುಡಿಮೆಗಾರರು ಆ ವಸ್ತುವಿನ ಉತ್ಪಾದನೆಯಲ್ಲಿ ಪಟ್ಟಿರಬಹುದಾದ ಶ್ರಮ ಮತ್ತು ಅವರ ಕೌಶಲ್ಯ, ಪರಿಸರದ ಮೇಲೆ ನಾವು ಬಳಸುವ ಉತ್ಪನ್ನ ಉಂಟು ಮಾಡಿರಬಹುದಾದ ಪರಿಣಾಮ ಇವೇ ಮುಂತಾದ ಅಂಶಗಳು ಸಮುದಾಯದ ಹಿತದೃಷ್ಟಿಯಿಂದ ಬಹಳ ಮಹತ್ವ ಪೂರ್ಣವಾಗಿವೆ. ಆದಾಯ, ಕೊಳ್ಳುವ ಸಾಮರ್ಥ್ಯಗಳನ್ನು ಮೀರಿದ ಈ ಮೇಲಿನ ಅಂಶಗಳು ಬಳಕೆಗಾಗಿ ವಸ್ತುವಿನ ಆಯ್ಕೆಯನ್ನು ನಿರ್ಧರಿಸುವಲ್ಲಿ ಗಮನಿಸಬೇಕಾದ ಸಂಗತಿಗಳಾಗಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ ನಾವು ಖರೀದಿಸುವ, ಉಪಯೋಗಿಸುವ ವಸ್ತುಗಳಿಗೆ ಸಂಬAಧಿಸಿದAತೆ ಸಮಗ್ರ ವಿವರಗಳು ನಮಗೆ ತಿಳಿದಿರಬೇಕು. ಉದಾಹರಣೆಗೆ ನಾವೊಂದು ಬಟ್ಟೆಯನ್ನು ಖರೀದಿಸಿದ್ದರೆ, ಅದನ್ನು ಯಾವ ಮೂಲದಿಂದ, ಯಾರ ಶ್ರಮದಿಂದ, ಯಾವ ರೀತಿಯ ಪರಿಸ್ಥಿತಿಯಲ್ಲಿ ಅದನ್ನು ಉತ್ಪಾದಿಸಲಾಗಿದೆ, ಅದಕ್ಕೆ ಯಾವ ಬಣ್ಣಗಳನ್ನು ಉಪಯೋಗಿಸಲಾಗಿದೆ. ಅದನ್ನು ಉತ್ಪಾದಿಸಿದ ಕಾರ್ಮಿಕರಿಗೆ ಸೂಕ್ತ ವೇತನ ನೀಡಲಾಗಿದೆಯೆ? ಅಂತಹ ಉತ್ಪನ್ನದಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳೇನಾದರೂಇದೆಯೇ?, ಅದಕ್ಕೆ ಸಂಬAಧಿಸಿದ ಸಾಂಸ್ಕçತಿಕ ಅಂಶಗಳೇನಾದರೂ ಮಹತ್ವ ಪೂರ್ಣವಾಗಿವೆಯೇ... ಇತ್ಯಾದಿ ಸಂಗತಿಗಳನ್ನು ಪರಿಗಣಿಸಿ ನಾವು ಖರೀದಿಸುವ ನಿರ್ಧಾರ ಮಾಡಬೇಕು. ಹಾಗಾಗಿ ಒಂದು ವಸ್ತು ಕಡಿಮೆ ಬೆಲೆಗೆ ಲಭ್ಯವಿದ್ದ (ಅದು ಕಾರ್ಮಿಕರ ಶೋಷಣೆಯಿಂದ ಇತರರಿಗೆ ತೊಂದರೆಯುAಟು ಮಾಡಿದ್ದರೆ, ಪರಿಸರಕ್ಕೆ ಹಾನಿಕರವಾಗಿದ್ದರೆ) ಮಾತ್ರಕ್ಕೆ ಅದನ್ನು ಖರೀದಿಸಬಾರದು. ಬದಲಿಗೆ ಉತ್ಪನ್ನಕ್ಕೆ ಸಂಬAಧಿಸಿದ ಈ ಮೊದಲು ಪ್ರಸ್ತಾಪಿಸಿದ ಇತರ ವಿಷಯಗಳನ್ನು ಅರಿತುಕೊಂಡು ಖರೀದಿಸುವ ಯಾ ಖರೀದಿಸದಿರುವ ನಿರ್ಧಾರ ಮಾಡಬೇಕು. ನಾವು ಬಳಸುವ ವಸ್ತುಗಳಿಗೆ ಸಂಬAಧಿಸಿದ ವಿಚಾರ ನಮ್ಮ ಜೀವನ ಮೌಲ್ಯದ ಭಾಗವಾಗಿರಬೇಕು. 

ನಾವು ಉಪಯೋಗಿಸುವ ವಸ್ತುಗಳು ನಮ್ಮ ಜನ ಸಮುದಾಯದ ಒಳಿತಿಗೆ ಏಳಿಗೆಗೆ ಸಹಕರಿಸುವಂತಿರಬೇಕು ಹಾಗೂ ನಮ್ಮನ್ನು ನಾವು ಆಧರಿಸುವುದಕ್ಕೆ ಅವು ಸಹಕಾರಿಯಾಗಬೇಕು. ಸ್ವರಾಜ್ಯ ಮತ್ತು ಸ್ವದೇಶ ಕಲ್ಪನೆಗಳು ಈ ದೃಷ್ಟಿಯಿಂದ, ಹೊಂದಿರುವ ವ್ಯಾಪಕ ಅರ್ಥವನ್ನು ಮತ್ತು ಆಳವಾದ ಸಂಬAಧವನ್ನು ನಾವು ಅರಿತುಕೊಳ್ಳಬೇಕು. ವಸಾಹತು ಕಾಲದಲ್ಲಿ ಸ್ವದೇಶೀ ಕಲ್ಪನೆಗೆ ಬ್ರಿಟೀಷ್ ಸರಕಾರ ಸಂಪೂರ್ಣ ವಿರೋಧಿ ನಿಲುವನ್ನು ಹೊಂದಿತ್ತು. ಇದಕ್ಕೆ ಕಾರಣ ಸ್ವದೇಶೀ ಕಲ್ಪನೆ ಹೊರಗಿನಿಂದ ಬರುವ ವಸ್ತುಗಳನ್ನು ವಿರೋಧಿಸುವ ಸಿದ್ಧಾಂತ ಹೊಂದಿರುವAತೆಯೇ ಹೊರಗಡೆಯ ನಿಯಂತ್ರಣ, ಪ್ರಭಾವವನ್ನು ನಿರಾಕರಿಸುವ ಅಂಶಗಳನ್ನು ಒಳಗೊಂಡಿರುವುದು ಆಗಿತ್ತು. ಹೀಗಾಗಿ ಸ್ವದೇಶೀ ಕಲ್ಪನೆಗೆ ಎಡೆ ನೀಡದ ಬ್ರಿಟೀಷರ ಧೋರಣೆಯನ್ನು, ನೀತಿಯನ್ನು, ಅಹಿಂಸಾ ತತ್ವವನ್ನಾಧರಿಸಿ ಸತ್ಯಾಗ್ರಹ ಚಳುವಳಿಯ ಮೂಲಕ ವಿರೋಧಿಸಲಾಯಿತು. ವಸ್ತುಗಳಿರಬಹುದು, ವಿಚಾರಗಳಿರಬಹುದು... ಅವುಗಳ ಆಯ್ಕೆಯ ವಿಚಾರದಲ್ಲಿ ನೈತಿಕ ಚೌಕಟ್ಟು ಅಥವಾ ಆಧಾರ ಇಲ್ಲದಿದ್ದರೆ ಅಲ್ಲಿ ಸಮಷ್ಟಿಯ, ಸರ್ವರ ಸುಖ ಸಾಧ್ಯವಿಲ್ಲ ಎನ್ನುವುದು ಸರ್ವೋದಯ ಸಿದ್ಧಾಂತದ ಪ್ರಮುಖ ಅಂಶವೂ ಹೌದು. ವಸ್ತುಗಳ ಉತ್ಪಾದನೆ ಹಾಗೂ ವಿತರಣೆಯ ವಿಷಯದಲ್ಲಿಯೂ ಸ್ವರಾಜ್ಯ ಮತ್ತು ಸ್ವದೇಶೀ ಚಿಂತನೆಗಳು ಕೆಲಸ ಮಾಡಬೇಕಿದೆ. ಮನುಷ್ಯನ ಅಭಿರುಚಿಗಳು ಜನ್ಮದತ್ತವಲ್ಲ, ಅವು ಜೀವನದ ಸಂಸ್ಕಾರದೊAದಿಗೆ ಬರುವಂತಹುದು. ಈ ಕಾರಣದಿಂದ ‘ವಿರಕ್ತಿ’ ಮತ್ತು ‘ಪೈತ್ರಕಭಾವ’ ವನ್ನು ಅಭಿರುಚಿಯಾಗಿ ಒಂದು ನೈತಿಕ ಮೌಲ್ಯವಗಿ ಜನರಲ್ಲಿ ಬೆಳೆಸುವುದು ಅಸಾಧ್ಯವಾದುದೇನಲ್ಲ. ಈ ರೀತಿಯಲ್ಲಿ ಸರ್ವರ ಹಿತಕ್ಕೆ ಪೂರಕವಾದ ಅಂಶಗಳನ್ನು ನಮ್ಮ ಸಾಂಸ್ಕçತಿಕ ಮೌಲ್ಯಗಳಾಗಿ ಬೆಳೆಸದೇ ಹೋದರೆ ಸ್ವಸ್ಥ, ಸ್ವಾಯತ್ತ, ಸಂತೃಪ್ತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಕಲ್ಯಾಣ ಸಮಾಜದ ಆಲೋಚನೆಯ ಹಿಂದಿರುವುದು ತ್ಯಾಗ ಮತ್ತು ಪರೋಪಕಾರವಾಗಿರುವಾಗ, ವಸ್ತು ಮತ್ತು ಸೇವೆಯನ್ನು ಆಯ್ದುಕೊಳ್ಳುವಾಗ, ವಿಶಾಲ ದೃಷ್ಟಿಕೋನದಿಂದ ಯೋಚನೆ ಮಾಡಲು ನಮಗಿರುವ ಅಡ್ಡಿಯಾದರು ಏನು? ಎನ್ನುವ ಪ್ರಶ್ನೆಯನ್ನು ನಾವು ನಮ್ಮಲ್ಲಿ ಕೇಳಿಕೊಳ್ಳಬೇಕಿದೆ. 

ಆಧುನಿಕ ಅರ್ಥವ್ಯವಸ್ಥೆ ಮೇಲೆ ಹೇಳಿದ ಅಂಶಗಳಿಗೆ ಸಂಪೂರ್ಣ ಅಪವಾದವೆನ್ನುವ ರೀತಿಯಲ್ಲಿ (ಕೆಲಸ ಮಾಡುತ್ತದೆ) ವ್ಯವಹರಿಸುತ್ತದೆ. ವಸ್ತು ಯಾ ಸೇವೆಗಳಿಗೆ ಬೇಡಿಕೆಯುಂಟು ಮಾಡುವ ಅರ್ಥವ್ಯವಸ್ಥೆಯ ದಾರಿಯೇ ಅಸಮಂಜಸವಾದುದು. ಉದಾಹರಣೆಗೆ ಟೂಥ್ ಪೇಸ್ಟ್ ಒಂದರ ಜಾಹೀರಾತು ತಿನ್ನುವುದು, ನಿಯಂತ್ರಿಸಿ ಆರೋಗ್ಯ ಪೂರ್ಣವಾದುದನ್ನು ಸೇವಿಸಿ ಎನ್ನುವ ಬದಲಿಗೆ, ಏನೂ ತಿಂದರೂ ಪರವಾಗಿಲ್ಲ ನಿಮ್ಮ ಹಲ್ಲು ಮತ್ತು ಅವುಗಳನ್ನು ಆರೋಗ್ಯವಾಗಿರಿಸಲು ನಾವು ಉತ್ಪಾದಿಸಿದ ಟೂಥ್ ಪೇಸ್ಟ್ ಬಳಸಿ ಎನ್ನುತ್ತದೆ. ಮಾರುಕಟ್ಟೆಯಲ್ಲಿ ಪೂರೈಕೆದಾರ ಮತ್ತು ಬಳಕೆದಾರರನ್ನು ಮಾತ್ರ ಗುರುತಿಸುವ ಆಧುನಿಕ ಅರ್ಥವ್ಯವಸ್ಥೆ ಮಾನವೀಯ ಸಂಬAಧಗಳನ್ನು ಗುರುತಿಸುವುದಿಲ್ಲ. ಮಾನವೀಯ ಸಂಬAಧಗಳನ್ನು ನೈತಿಕ ತಳಹದಿಯ ಮೇಲೆ ಗುರುತಿಸುವ ಯೋಚನೆಯೇ ಲಾಭಗಳಿಕೆಗೆ, ಬಂಡವಾಳ ಸಂಚಯನಕ್ಕೆ ಲಗಾಮು ಹಾಕುತ್ತದೆ. ಈ ಕಾರಣದಿಂದಾಗಿಯೇ ಆಧುನಿಕ ಅರ್ಥವ್ಯವಸ್ಥೆಯಲ್ಲಿ ವ್ಯವಸ್ಥೆಯ ಸಮ್ರಗ ನೋಟ ದಕ್ಕುವುದೇ ಇಲ್ಲ. ಇಡೀ ವ್ಯವಸ್ಥೆಯನ್ನು ಸಣ್ಣ ಸಣ್ಣ ಉಪ ಘಟಕಗಳಾಗಿ ವಿಭಜಿಸಲಾಗಿದೆ. ಇಂತಹ ವಿಭಜನೆಯ ಕಾರಣದಿಂದ ಸಮಾಜ ಲಾಭ ನಷ್ಟಗಳ, ಐಹಿಕ ಸುಖ ಭೋಗಗಳ ವ್ಯಾಮೋಹಕ್ಕೆ ಸಿಕ್ಕಿ ದೂರದೃಷ್ಟಿಯನ್ನೇ ಕಳೆದುಕೊಂಡು ಬಿಟ್ಟಿದೆ. ಇಂತಹ ಮಿತಿಗಳನ್ನು ಮೀರಿ ವ್ಯವಸ್ಥೆಯನ್ನು ಸಮಗ್ರವಾಗಿ ಗ್ರಹಿಸುವ ವಿಶಾಲ ದೃಷ್ಟಿಯನ್ನು ಸರ್ವೋದಯ ಚಿಂತನೆ ನೀಡುತ್ತದೆ.

ಆಧುನಿಕ ಅರ್ಥಶಾಸ್ತçದ ಮೂಲವಾದ ಸಂಪತ್ತನ್ನು ಸರ್ವೋದಯದ ಮೂಲಕ ಗಳಿಸುವುದು ಬಹಳ ಕಷ್ಟಸಾಧ್ಯಾವಾದ ವಿಷಯವೇ ಸರಿ. ಆರ್ಥಿಕವಾಗಿ ಉತ್ತಮವಾದುದ್ದು ಸಾಮಾಜಿಕವಾಗಿ, ನೈತಿಕವಾಗಿಯೂ ಸ್ವೀಕಾರಾರ್ಹವಾಗಬಹುದೇ ಎನ್ನುವ ಪ್ರಶ್ನೆಗೆ ಉತ್ತರಿಸುವುದು ಕಠಿಣವಾದ ಸಂಗತಿಯಾಗಿದೆ. ಜೆ.ಎಸ್.ಮಿಲ್ ಹೇಳುವಂತೆ ಸಂಪತ್ತು ಎಂದರೆ ವಿನಿಮಯದಲ್ಲಿ ಉಪಯುಕ್ತತೆ ಇರುವ ಒಪ್ಪಿತವಾದ ಉಪಯುಕ್ತ ವಸ್ತುಗಳನ್ನು ಸ್ವಾಧೀನದಲ್ಲಿ ಇರಿಸಿ ಕೊಳ್ಳುವುದಾಗಿದೆ. ಇಲ್ಲಿ ಉಪಯುಕ್ತತೆ ಎನ್ನುವುದಕ್ಕೆ ಎರಡು ಆಯಾಮಗಳಿವೆ; ಒಂದು ವಿನಿಮಯದಲ್ಲಿ ಉಪಯುಕ್ತತೆ ಮತ್ತೊಂದು ಉಪಯೋಗದಲ್ಲಿ ಉಪಯುಕ್ತತೆ. ಈ ಎರಡು ಅಂಶಗಳನ್ನು ಆಧರಿಸಿ ಮೌಲ್ಯ ಮತ್ತು ಸಂಪತ್ತು ನಿರ್ಧರಿತವಾಗುತ್ತದೆ. ಮನುಷ್ಯನ ಬದುಕಿನಲ್ಲಿ ಆಸೆ, ಆಕಾಂಕ್ಷೆಗಳ ಈಡೇರಿಕೆಯಲ್ಲಿ ವಿನಿಮಯದ ಉಪಯುಕ್ತತೆ ಗಿಂತಲೂ ಉಪಯೋಗದ ಉಪಯುಕ್ತತೆ ಬಹಳ (ಪ್ರಮುಖವಾದುದು) ಮಹತ್ವದ್ದಾಗಿದೆ. ಈ ಕಾರಣದಿಂದ ನೇರವಾಗಿ ಉಪಭೋಗಕ್ಕೆ ಬರುವ ಮತ್ತು ಆಸೆ, ಬಯಕೆಗಳನ್ನು ಪೂರೈಸುವ ವಸ್ತುವಿನ ಉತ್ಪಾದನೆಗಳು ನಿಜವಾದ ಸಂಪತ್ತಿನ ಆಳತೆಗೋಲಾಗಿರಬೇಕು. ಈ ಕಾರಣದಿಂದಾಗಿಯೇ ಒಂದು ದೇಶದ ನಿಜವಾದ ಸಂಪತ್ತು ಇರುವುದು ಆ ದೇಶದಲ್ಲಿರುವ ಹಣದ ಮೊತ್ತದ ಮೇಲಲ್ಲ ಬದಲಾಗಿ ಅಲ್ಲಿನ ಜನರ ಹೃದಯ ಶ್ರೀಮಂತಿಕೆಯಲ್ಲಿ. ಈ ಕಾರಣದಿಂದ ನ್ಯಾಯ, ಪ್ರಾಮಾಣಿಕತೆ, ಮತ್ತು ಮಾನವೀಯ ಗುಣಗಳನ್ನು ಆಧರಿಸಿದ ಉತ್ಪಾದನಾ ವ್ಯವಸ್ಥೆ ಮಾತ್ರ ಸಮಾಜವನ್ನು ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಮನುಷ್ಯನಿಗೆ ಜೀವನದಲ್ಲಿ ಒದಗುವ ತೃಪ್ತಿಯನ್ನು ಮೀರಿ “ಸಂಪತ್ತು” ಇರುವುದು ಸಾಧ್ಯವಿಲ್ಲ. ಈ ಲೇಖನದ ಮೊದಲ ಭಾಗದಲ್ಲಿ ಉಲ್ಲೇಖಿಸಿದ ಜೋಸೆಫ್ ಸ್ವಿಗ್ಲಿಜ್ ಅವರು ನೀಡಿದ ಅಭಿವೃದ್ಧಿಯ ವ್ಯಾಖ್ಯಾನವು ಗಾಂಧೀ ಉಲ್ಲೇಖಿಸಿದ ವ್ಯಾಖ್ಯಾನಕ್ಕೆ ಬಹಳ ಸಮೀಪದಲ್ಲಿದೆ ಎಂದು ನನ್ನ ಭಾವನೆ. ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಅರ್ಥಶಾಸ್ತçಜರಾದ ಪ್ರೊ. ಅಮರ್ತ್ಯ ಸೇನ್ ಅಭಿಪ್ರಾಯ ಪಟ್ಟಂತೆ ವ್ಯವಸ್ಥೆಯಲ್ಲಿ ವ್ಯಕ್ತಿಗಳಿಗೆ ಲಭ್ಯವಿರುವ ಸಾಮರ್ಥ್ಯ ಮತ್ತು ಆಯ್ಕೆಯ ಸ್ವಾತಂತ್ರ÷್ಯಗಳೇ ಅಭಿವೃದ್ಧಿಯ ನಿಜವಾದ ಮಾನದಂಡಗಳು. 

ಕೈಗಾರಿಕಾ ಕ್ರಾಂತಿಯ ಮೂಲಕ ರೂಪುಗೊಂಡ ಬ್ರಿಟನ್ನಿನ ಆರ್ಥಿಕ ವ್ಯವಸ್ಥೆಯು (ಮನುಷ್ಯನನ್ನು ಅಂಚಿಗೆ ಸರಿಸಿ) ವಹಿವಾಟಿನಲ್ಲಿ ವಿನಿಮಯ ಮತ್ತು ಚಲಾವಣೆಯ ಅನುಕೂಲಕ್ಕಾಗಿ ಉಪಯುಕ್ತತೆ ಪಡೆದುಕೊಂಡ ‘ಹಣದ ಗುಣ’ ಮನುಷ್ಯನನ್ನು ಅಂಚಿಗೆ ಸರಿಸಿ ತಾನೇ ನಿಯಂತ್ರಕ ಶಕ್ತಿಯಾಯಿತು. ಈ ಬೆಳವಣಿಗೆಯ ಹಿಂದಿನ ಸೂಕ್ಷ÷್ಮವನ್ನು ಗಾಂಧೀ ಸರಿಯಾಗಿಯೇ ಗ್ರಹಿಸಿದ್ದಾರೆ ಮತ್ತು ಆ ಬಗ್ಗೆ ಬಹಳ ಎಚ್ಚರದ ಮಾತುಗಳನ್ನೂ ಹೇಳಿದ್ದಾರೆ. ಮನುಷ್ಯ ಬಿಡುಗಡೆಯ ದಾವಂತದಲ್ಲಿ ಒಂದು ದುರಂತದಿAದ ಇನ್ನೊಂದು ದುರಂತದೆಡೆಗೆ ನಡೆಯುವುದನ್ನು ತಡೆಯವ ಒಂದು ಮಾರ್ಗೋಪಾಯವಾಗಿ ‘ಸರ್ವೋದಯ’ ಚಿಂತನೆಯನ್ನು ಗುರುತಿಸಿದ್ದಾರೆ ಎನ್ನಬಹುದೇನೋ?.

ಪಾರಂಪರಿಕ ಸಮಾಜದಲ್ಲಿದ್ದ ಶೋಷಣೆಯಿಂದ ಮುಕ್ತಗೊಂಡರೂ ಪಶ್ವಿಮದ ದೇಶಗಳು ಆಧುನಿಕತೆಯ ಅವಾಂತರಗಳಿAದ ತಪ್ಪಿಸಿಕೊಳ್ಳಗಾಗಲಿಲ್ಲ. ಯುದ್ಧ, ನಾಗರಿಕ ದಂಗೆಗಳು, ಸಾಮಾಜಿಕ ಮತ್ತು ಆರ್ಥಿಕ ಶೋಷಣೆಗಳಿಂದ ಪಾರಾಗಬೇಕಾದರೆ ಸ್ವದೇಶೀ ಪ್ರೇರಿತ, ಸರ್ವೋದಯ ನಿರ್ದೇಶಿತ ದಾರಿಯಲ್ಲಿ ಸಾಗುವ ಅವಶ್ಯಕತೆ ಇದೆ ಎನ್ನುವ ಅಭಿಪ್ರಾಯ ಅನುಷ್ಠಾನಕ್ಕೆ ಕಷ್ಟವೆನಿಸಿದರೂ ತಾತ್ವಿಕವಾಗಿ ತಳ್ಳಿಹಾಕುವಂತಿಲ್ಲ. ಈ ಮಾತನ್ನು ಹೇಳಲು ಪ್ರಮುಖ ಕಾರಣ ಗಾಂಧೀಯವರು ಜೀವನದಲ್ಲಿ ಮಾಡಿದ ಪ್ರಯೋಗಗಳು. ಗಾಂಧೀಯವರು ಹೇಳಿದ ವಿಷಯಗಳು, ಅವರ ಬರಹಗಳು, ಭಾಷಣಗಳು, ಎಲ್ಲೂ ನಮಗೆ ಬಹಳ ಅದ್ಬುತವೆನಿಸುವುದಿಲ್ಲ. ಅವರ ಮಾತುಗಳು ಎಲ್ಲೂ ಮೈನವಿರೇಳಿಸುವಂತೆ ಇಲ್ಲ ಬದಲಿಗೆ ಸರಳ ವಿಷಯಗಳನ್ನು ವಾಸ್ತವಿಕ ಬದುಕಿನಲ್ಲಿ ಆಳವಡಿಸಿಕೊಳ್ಳುವ ಬಗ್ಗೆ ತಣ್ಣಗೆ ಹೇಳಿಬಿಡುತ್ತದೆ. ಆದರೆ ಗಾಂಧಿ ಮಾತ್ರ ಪ್ರಪಂಚದಲ್ಲಿ ಆಗಬೇಕಾದ ಮತ್ತು ಆಗಬಹುದಾದ ಪರಿವರ್ತನೆಯನ್ನು ತನ್ನಿಂದಲೇ ಆರಂಭಿಸಬಹುದೆನ್ನುವುದಕ್ಕೆ ಜೀವಂತ ಉದಾರಣೆಯಾದರು. ಗಾಂಧೀ ಇವತ್ತು ಒಬ್ಬ ರಾಜಕೀಯ, ಸಾಮಾಜಿಕ ಮತ್ತು ಬದಲಾವಣೆಯ ಹರಿಕಾರನಾಗಿದ್ದರೆ ಅದಕ್ಕೆ ಪ್ರಮುಖ ಕಾರಣ ತನ್ನ ಎಲ್ಲ ತತ್ವ ಸಿದ್ಧಾಂತಗಳಿಗೆ ತನ್ನ ಸ್ವಂತ ಬದುಕನ್ನು ಪ್ರಯೋಗ ಶಾಲೆಯನ್ನಾಗಿಸಿದ್ದು.

ಸರ್ವೋದಯ ಎನ್ನುವುದು ಒಂದು ಸಂಸ್ಥೆಯಲ್ಲ ಅದೊಂದು ಚಿಂತನಾ ವಿನ್ಯಾಸ, ಇದಕ್ಕೆ ಮಹತ್ವ ಬರುವುದು ಅಂತಹ ಚಿಂತನಾ ವಿನ್ಯಾಸ ವಾಸ್ತವಿಕವಾಗಿ ವ್ಯಕ್ತಿ ಮತ್ತು ಸಮುದಾಯದ ಬದುಕನ್ನು ಆವರಿಸಿಕೊಂಡ ಸಂದರ್ಭದಲ್ಲಿ ಮಾತ್ರ. ಹಾಗಾಗಿ ಸರ್ವೋದಯ ಎನ್ನುವುದು ಗಾಂಧೀ ತನ್ನ ಬದುಕಿನಲ್ಲಿ ಅನುಸರಿಸಿದ ಜೀವನ ಧರ್ಮ, ಸ್ವಾವಲಂಬನೆ ಮತ್ತು ಸ್ವರಾಜ್ಯ ಇದರ ಅಂತಿಮ ಗುರಿಯಾಗಿದೆ. ಗಾಂಧೀ ನಂತರದಲ್ಲಿ ವಿನೋಬಾ ಭಾವೆ, ಜಯಪ್ರಕಾಶ ನಾರಾಯಣ್ ಮುಂತಾದ ನಾಯಕರು ಈ ಪರಂಪರೆಯನ್ನು ಮುಂದುವರಿಸಲು ಪ್ರಯತ್ನ ಪಟ್ಟರೂ ಅದರಲ್ಲಿ ಅವರಿಗೆ ಮಹತ್ವ ಪೂರ್ಣವಾದ ಯಶಸ್ಸು ಸಿಗಲಿಲ್ಲ ಎಂದೇ ಹೇಳಬಹುದು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜನರ ಆಶಯಗಳಿಂದ ದೂರವಾಗುತ್ತಿರುವ ಆತಂಕಕಾರಿ ಸನ್ನಿವೇಶದಲ್ಲಿ ಸರ್ವೋದಯದ ಆಶಯಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಾಪಿಸುವ ಮತ್ತು ಬೆಳೆಸುವ ಒಂದು ಪ್ರಯತ್ನ ೧೯೬೦ರಲ್ಲಿ ನಡೆಯಿತು. ಇಂತಹ ಒಂದು ಪ್ರಯತ್ನದ ಬಗ್ಗೆ ರಜನಿ ಕೊಠಾರಿಯವರು ತಯಾರಿಸಿದ ವರದಿಯ ಕೆಲವು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸುವುದು ಸಕಾಲಿಕವೆನಿಸುತ್ತದೆ. ರಜನಿ ಕೊಥಾರಿ, “ಜಯಪ್ರಕಾಶ ನಾರಾಯಣ್ಸ್ ಥೀಸೀಸ್: ಎ ರಿಪೋರ್ಟ್ ಆಫ್ ಡಿಸ್‌ಕಶನ್” ಎಕಾನಮಿಕ್ ವೀಕ್ಲಿ ಸಂಚಿಕೆ ೧೨ (ಸಂಪುಟ ೧೫) ಎಪ್ರಿಲ್ ೯, ೧೯೬೦ ಪುಟ ೫೮೫-೫೮೮.

ಭಾರತದ ಜನತಂತ್ರ ವ್ಯವಸ್ಥೆಯು ಮಿತ ಜನತಂತ್ರವಾಗಿ ಅಥವಾ ಸೀಮಿತ ಜನತಂತ್ರವಾಗಿ ಮಾರ್ಪಡುತ್ತಿದ್ದು ಸಾಮಾನ್ಯ ಜನರಿಂದ ಆಡಳಿತ ದೂರ ಸರಿಯುತ್ತಿದೆ. ಈ ರೀತಿಯ ದೂರ ಸರಿಯುವಿಕೆಯ ಕಾರಣದಿಂದ ಜನ ಸಾಮಾನ್ಯರ ಸಮಸ್ಯೆಗಳಿಗೆ ಸರಕಾರಗಳು ಸ್ಪಂದಿಸುತ್ತಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಜನ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರ ಕೇಂದ್ರೀಕರಣ, ಅಧಿಕಾರಶಾಹಿಯ ನಿರ್ಲಿಪ್ತತೆ, ಪಕ್ಷರಾಜಕಾರಣ, ಈ ಮೇಲೆ ಹೇಳಿದ ಬೆಳವಣಿಗೆಗಳಿಗೆ ಪ್ರಮುಖ ಕಾರಣವೆಂದು ಗುರುತಿಸಲಾಯಿತು. ಈ ಸಮಸ್ಯೆಗಳನ್ನು ನಿವಾರಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವ ಕೆಲಸ ನಡೆಯಬೇಕೆನ್ನುವುದು ಪ್ರಮುಖ ನಾಯಕರ ಅಭಿಪ್ರಾಯವಾಗಿತ್ತು. ಪ್ರಸ್ತುತ ಪರಿಸ್ಥಿಯಲ್ಲಿ ಕಾರ್ಪೋರೇಟ್ ವಲಯ ಅಥವಾ ದೊಡ್ಡ ಬಂಡವಾಳಗಾರರು (ಕೈಗಾರಿಕೆ ಅಥವಾ ಕೃಷಿ ವಲಯದಲ್ಲಿರುವವರು ಅಂದರೆ ಕೈಗಾರಿಕೆ ಅಥವಾ ಕೃಷಿ ವಲಯದಲ್ಲಿ ಪ್ರಭಾವ ಹೊಂದಿರುವAತಹ ಜನರ ಒಂದು ಸಣ್ಣ ಗುಂಪು) ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಪ್ರಭಾವ ಹೊಂದಿರುವ ಕಾರಣ ಜನಸಾಮಾನ್ಯರ ಧ್ವನಿ ಇಲ್ಲಿ ಕ್ಷೀಣವಾಗಿದೆ. ಇಂತಹ ಪರಿಸ್ಥಿತಿ ಬದಲಾಗಿ ಸಣ್ಣ ಸಮುದಾಯಗಳಿರುವ ಒಂದು ಸಾಮುದಾಯಿಕ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಾಗ ಮಾತ್ರ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಜನಸಾಮಾನ್ಯರ ಸಮಸ್ಯೆ, ಆಶಯ, ಆಕಾಂಕ್ಷೆ ಮತ್ತು ಅದರ ಈಡೇರಿಕೆಯ ಮಾರ್ಗೋಪಾಯಗಳಿಗೆ ಮಹತ್ವ ದೊರೆಯುತ್ತದೆ. 

ನಮ್ಮ ದೇಶದಲ್ಲಿ ಈಗ ಇರುವ ಗೋಫುರಾಕೃತಿಯ ಪ್ರಜಾಪ್ರಭುತ್ವ ವ್ಯವಸ್ಥೆಯು (ಹೆಚ್ಚು ವಿಸ್ತಾರವಾಗಿ ಹರಡಿಕೊಳ್ಳುವ ಮೂಲಕ) ಸಾಮುದಾಯಿಕ ಪಾಲ್ಗೊಳ್ಳುವಿಕೆಗೆ ಅವಕಾಶವಿರುವಂತೆ ಬದಲಾಗಬೇಕು. ಸಾಮುದಾಯಿಕವಾಗಿ ಬಹುಸಂಖ್ಯಾತರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಂತಾದಾಗ ಸರ್ವೋದಯದ ಆಶಯಗಳು ಅನುಷ್ಟಾನಗೊಳಿಸುವುದು ಸಾಧ್ಯವಾಗಬಹುದು. ಇಂತಹ ಸಮುದಾಯಗಳು ಸಮಾಜದಲ್ಲಿ ಪಂಚಾಯತ್ ಮಟ್ಟದಿಂದ ಹಂತ ಹಂತವಾಗಿ ಕಾರ್ಯನಿರ್ವಹಿಸುವಂತೆ ಇರಬೇಕು. ಮೊದಲನೇಯ ಹಂತದಲ್ಲಿ ಕಂದಾಯ ಗ್ರಾಮಗಳ ನೆಲೆಯಲ್ಲಿ  ಪ್ರಾಥಮಿಕ ಸಮುದಾಯಗಳಿರಬೇಕು. ನಂತರದ ಹಂತದಲ್ಲಿ  ಪ್ರಾದೇಶಿಕ ಸಮುದಾಯಗಳಿರಬೇಕು. (ಹಲವು ಪ್ರಾಥಮಿಕ ಸಮುದಾಯಗಳ ಒಂದು ಗುಂಪಾಗಿ ಪ್ರಾಥಮಿಕ ಸಮುದಾಯಗಳಾಗಬೇಕು) ಹಲವು ಪ್ರಾದೇಶಿಕ ಸಮುದಾಯಗಳು ಒಗ್ಗೂಡಿ ಜಿಲ್ಲಾ ಸಮುದಾಯಗಳು ಜಿಲ್ಲಾ ಸಮುದಾಯಗಳ ಒಂದು ಗುಂಪು ಪ್ರಾಂತೀಯ ಸಮುದಾಯ ಮತ್ತು ಪ್ರಾಂತೀಯ ಸಮುದಾಯಗಳು ಸೇರಿ ರಾಷ್ಟಿçÃಯ ಸಮುದಾಯಗಳ ರಚನೆಯಾಗಬೇಕು. ಇಂತಹ ರಾಷ್ಟಿçÃಯ ಸಮುದಾಯಗಳನ್ನು ಜಾಗತಿಕ ಮಟ್ಟದಲ್ಲಿಯೂ ರಚಿಸುವಂತಾಗಬೇಕು. ಪ್ರತೀ ಹಂತದಲ್ಲಿ ಜನ ಪ್ರತಿನಿಧಿಗಳು ಸಮುದಾಯದ ಸಮ್ಮತಿಯೊಂದಿಗೆ ಎಲ್ಲರ ಒಪ್ಪಿಗೆಯ ಮೂಲಕ ಆಯ್ಕೆಗೊಳ್ಳುವಂತಾಗಬೇಕು. ಗ್ರಾಮ ಮಟ್ಟದಲ್ಲಿ ಸಮುದಾಯದ ಹಿರಿಯರು ಚರ್ಚಿಸಿ ಜನರನ್ನು ಪ್ರತಿನಿಧಿಸುವ ಅರ್ಹತೆಯುಳ್ಳ ಸಾಮಾಜಿಕ ಬದ್ಧತೆ ಇರುವ ವ್ಯಕ್ತಿಗಳನ್ನು ಗುರುತಿಸಿ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು. ಆಯ್ಕೆ ಕಠಿಣವೆನಿಸುವ ಸಂದರ್ಭಗಳಲ್ಲಿ ಅರ್ಹರನ್ನು ಚೀಟಿ ಎತ್ತುವ ಮೂಲಕ ಆರಿಸಬೇಕು. ನಂತರದ ಪ್ರತೀ ಹಂತಗಳಲ್ಲಿಯೂ ಇದೇ ರೀತಿಯಲ್ಲಿ ಜನಪ್ರತಿನಿಧಿಗಳ ಆಯ್ಕೆಯಾದಾಗ ಜನರಿಗೆ ಹತ್ತಿರವಿದ್ದುಕೊಂಡು ಕೆಲಸ ಮಾಡುವ ಮತ್ತು ಬಹು ಜನರ ಪಾಲ್ಗೊಳ್ಳುವಿಕೆಯ ಮೂಲಕ ಪ್ರತಿನಿಧಿಗಳ ಆಯ್ಕೆ ನಡೆಯುವಂತಾಗುತ್ತದೆ. 

ಬಲವಂತರಾಯ್ ಮೆಹ್ತಾ ಸಮಿತಿ ಎಸ್.ಕೆ.ಡೇ ಭಾರತ ಸರಕಾರ ೧೯೫೭ರ ಜನವರಿಯಲ್ಲಿ ಬಲವಂತರಾಯ್ ಮೆಹತಾ ಸಮಿತಿಯನ್ನು ನೇಮಕ ಮಾಡಿತು. ಸಮುದಾಯ ಅಭಿವೃದ್ಧಿ ಕಾರ್ಯಕ್ರಮ (ಕಮ್ಯುನಿಟಿ ಡೆವಲಪ್‌ಮೆಂಟ್ ಪ್ರೊಗ್ರಾಂ ೧೯೫೨) ಮತ್ತು ರಾಷ್ಟಿçÃಯ ವಿಸ್ತರಣಾಸೇವೆ (ನ್ಯಾಷನಲ್ ಎಕ್ಸ್ಟೆನ್‌ಶನ್ ಸರ್ವಿಸ್ ೧೯೫೩೦) ಇವುಗಳು ಕಾರ್ಯ ನಿರ್ವಹಿಸುವ ರೀತಿಯನ್ನು ಪರಿಶೀಲಿಸಿ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಮಾಡುವರೇ ಸೂಕ್ತ ಶಿಫಾರಸು ಮಾಡುವುದು ಈ ಸಮಿತಿಯ ಮುಖ್ಯ ಉದ್ದೇಶವಾಗಿತ್ತು. ೧೯೫೭ರ ನವಂಬರ್ ತಿಂಗಳಲ್ಲಿ ಈ ಸಮಿತಿ ತನ್ನ ವರದಿಯನ್ನು ಸಲ್ಲಿಸಿತು. ಪ್ರಜಾಪ್ರಭುತ್ವ ಮಾದರಿಯಲ್ಲಿ ಅಧಿಕಾರ ವಿಕೇಂದ್ರೀಕರಿಸಿ ಆ ಮೂಲಕ ಈ ಯೋಜನೆಗಳನ್ನು ಅನುಷ್ಟಾನಗೊಳ್ಳುವುದು ಸೂಕ್ತ ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿತು. ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಎಂಟು ಪ್ರಮುಖ ಶಿಫಾರಸುಗಳನ್ನು ಈ ಮಾಹಿತಿ ಮಾಡಿದೆ. ಈ ದಿಸೆಯಲ್ಲಿ ಕೆಲಸ ಮಾಡಿದ ಇನ್ನೋರ್ವ ಪ್ರಮುಖ ನೇತಾರ ಸುರೀಂದರ್ ಕುಮಾರ್ ಡೇ ಅಥವಾ ಎಸ್.ಕೆ.ಡೇ. ಇವರು ಸ್ವಾತಂತ್ರ÷್ಯ ಭಾರತದ “ಸಹಕಾರ ಮತ್ತು ಪಂಚಾಯತ್‌ರಾಜ್” ಖಾತೆ ಹೊಂದಿದ ಕ್ಯಾಬಿನೆಟ್ ಸಚಿವರು. ಅಭಿವೃದ್ಧಿ ಕಾರ್ಯಗಳನ್ನು ಸರಕಾರಿ ನೌಕರರಿಂದ ಅನುಷ್ಟಾನಗೊಳಿಸಲು ಸಾಧ್ಯವಿಲ್ಲ. ಇದರ ಬದಲು ಜನರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಅಭಿಪ್ರಾಯಪಟ್ಟವರು. ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರಯತ್ನ ಪಟ್ಟವರು ಎಸ್.ಕೆ.ಡೇ ಮುಂತಾದ ಹಲವು ಚಿಂತಕರು ಮುತುವರ್ಜಿ ವಹಿಸಿಕೊಂಡ ಕಾರಣದಿಂದ ಮತ್ತು ನೆಹರೂ ಅವರ ಒತ್ತಾಸೆಯಿಂದಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನಗಳು ನಡೆಯಿತಾದರೂ ಅದು ನಿರೀಕ್ಷಿತ ಮಟ್ಟದಲ್ಲಿ ಗಟ್ಟಿಯಾಗಿ ಬೇರೂರಲಿಲ್ಲ. ಪಂಚಾಯತ್ರಾಜ್ ವ್ಯವಸ್ಥೆ ಜನರಿಗೆ ಅಧಿಕಾರ ನೀಡುವ ಕ್ರಾಂತಿಕಾರಿ ವ್ಯವಸ್ಥೆಯಾಗಬೇಕಾದರೆ ಈ ಕೆಳಗಿನ ಅಂಶಗಳಿಗೆ ಮಹತ್ವ ದೊರೆಯಬೇಕು. 

೧. ಜನಸಾಮಾನ್ಯರಿಗೆ ಪಂಚಾಯತ್‌ರಾಜ್ ವ್ಯವಸ್ಥೆಯ ಮಹತ್ವ ಮನವರಿಕೆಯಾಗಬೇಕು. ಅದರಲ್ಲಿಯೂ ಸಂವಿಧಾನದ ಆಶಯದನ್ವಯ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಈ ಪಂಚಾಯತ್ ಮಟ್ಟದಲ್ಲಿ ರಾಜಕೀಯ ಇಚ್ಛಾಶಕ್ತಿ ನಿರ್ಧಾರಕ ಅಂಶವಾಗಿದೆ. ಈ ವಿಷಯದಲ್ಲಿ ಶಿಕ್ಷಣ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು ಮತ್ತು ರಾಜಕೀಯ ಹಿತಾಸಕ್ತಿಗಳಿಲ್ಲದ ನಾಡಿನ ಹಿರಿಯರು ಜನರಿಗೆ ಮಾರ್ಗದರ್ಶನ ಮಾಡಬೇಕು. 

೨. ರಾಜಕೀಯ ಪಕ್ಷಗಳು, ಪಕ್ಷದ ಹಿತಾಸಕ್ತಿಗಿಂತ ಸಮುದಾಯದ ಮತ್ತು ದೇಶದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಬದ್ಧತೆ ತೋರಬೇಕು. ಅಂತಹ ಪರಿಪಕ್ವ ನಿಲುವನ್ನು ರಾಜಕೀಯ ಪಕ್ಷಗಳು ತೋರದೇ ಹೋದರೆ ಜನ ಸಮುದಾಯ ಪಕ್ಷಗಳ ಆಧಾರದ ಮೇಲೆ ವಿಭಜನೆಗೊಳ್ಳುವ ಅಪಾಯಗಳಿವೆ. ಪಂಚಾಯತ್ ರಾಜ್ ವ್ಯವಸ್ಥೆಯೆನ್ನುವುದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಾಕಿದ ಬೆಂಕಿ ಎಂದು ರಾಜಕೀಯ ಪಕ್ಷಗಳು ಭಾವಿಸಿದರೆ ಪ್ರಜಾಪ್ರಭುತ್ವ ಸತ್ವಹೀನವಾಗುವುದರಲ್ಲಿ ಅನುಮಾನವಿಲ್ಲ. ಜನರಿಗೆ ಸ್ವಯಂ ಆಡಳಿತದ ಮಹತ್ವ, ಅದರ ಉದ್ದೇಶ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಯೋಜನಗಳು ಮತ್ತು ಅಂತಹ ವ್ಯವಸ್ಥೆಯನ್ನು ದುಡಿಸಿಕೊಳ್ಳುವ ರೀತಿಯ ಕುರಿತು ಜನರಿಗೆ ಸೂಕ್ತ ಮಾಹಿತಿ ಮತ್ತು ಶಿಕ್ಷಣವನ್ನು ರಾಜಕೀಯ ಪಕ್ಷಗಳು ನೀಡಬೇಕಿದೆ. ಸಾಮಾನ್ಯ ಜನರಿಗೆ ಜವಾಬ್ದಾರಿ ನೀಡಿದಲ್ಲಿ ಅವರ ಖಂಡಿತವಾಗಿಯೂ ಅಂತಹ ಜವಾಬ್ದಾರಿಯನ್ನು ನಿಭಾಯಿಸಲು ಶಕ್ತರಿದ್ದಾರೆ. ಜನಶಕ್ತಿಯ ಮೇಲೆ ವಿಶ್ವಾಸಲಿರಿಸಿ ಅವರಿಗೆ ಶಿಕ್ಷಣ ನೀಡಿ, ಸಶಕ್ತರನ್ನಾಗಿಸಬೇಕು. ಪ್ರತಿಯೊಂದು ಹಂತದಲ್ಲೂ ಜವಾಬ್ದಾರಿಯ ಜೊತೆಗೇನೇ ಸಂಪನ್ಮೂಲ ಸಂಗ್ರಹಿಸುವ ಅಧಿಕಾರ ನೀಡಬೇಕು. ಎಲ್ಲಿ ಆದಾಯದ ಕೊರತೆ ಇರುವುದೋ ಅಂತಹ ಕಡೆ ಸರಕಾರ ಅನುದಾನದ ಮೂಲಕ ಸೂಕ್ತ ಸಂಪನ್ಮೂಲ ದೊರಕಿಸಿ ಜನಪರ ಯೋಜನೆಗಳು ಜಾರಿಯಾಗುವಂತೆ ನೋಡೊಕೊಳ್ಳಬೇಕು. 

೩. ಪ್ರತಿಯೊಂದು ಸಮುದಾಯದ ವ್ಯಾಪ್ತಿಯಲ್ಲಿ ಬರುವ ನೌಕರಶಾಹಿ ಸ್ಥಳೀಯಾಡಳಿತ ಸಂಸ್ಥೆಗಳ ಅಧಿಕಾರ ವ್ಯಾಪ್ತಿಗೆ ಒಳಪಡಬೇಕು. ಆದರೆ ನೌಕರಶಾಹಿಯು ನಿಯಮ ನಿಬಂಧನೆಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವುದಕ್ಕೆ ಸ್ಪಷ್ಟವಾಗಿ ಮಾರ್ಗಸೂಚಿಗಳಿರಬೇಕು. ಜನಪ್ರತಿನಿಧಿಗಳಿಗೆ ನೌಕರಶಾಹಿಯನ್ನು ನಿಯಮ ನಿಂಬAಧನೆಗಳಿಗೆ ಅನುಸಾರವಾಗಿ ಸಾಮುದಾಯಿಕ ಹಿತಕ್ಕಾಗಿ ದುಡಿಸಿಕೊಳ್ಳಲು ಅಧಿಕಾರವಿರಬೇಕೇ ಹೊರತು ನೌಕರಶಾಹಿಯ ಮೇಲೆ ದಬ್ಬಾಳಿಕೆ ನಡೆಸಿ ದುರುಪಯೋಗ ಮಾಡಿಕೊಳ್ಳಬಾರದು. ಯಾವುದೇ ಸಂದರ್ಭದಲ್ಲಿ ಅಧಿಕಾರದ ದುರುಪಯೋಗಗಳಾದಾಗ ನಾಗರಿಕ ಸಮಾಜದ ಸ್ವಯಂಸೇವಾ ಸಂಸ್ಥೆಗಳು, ನಾಗರಿಕ ಹಿತಾಸಕ್ತಿ ವೇದಿಕೆಗಳು ಸಾರ್ವಜನಿಕ ಹಿತಾಸಕ್ತಿಯ ನೆಲೆಯಲ್ಲಿ, ಅಧಿಕಾರದ ದುರುಪಯೋಗವನ್ನು ವಿರೋಧಿಸಬೇಕು. ಪ್ರಜಾಪ್ರಭುತ್ವದಲ್ಲಿ ನಾಲ್ಕನೆಯ ಅಂಗವೆನಿಸಿದ ಪತ್ರಿಕೋದ್ಯಮ ಈ ಕುರಿತು ಸಕ್ರಿಯವಾಗಬೇಕು.

೪. ಪ್ರತಿಯೊಂದು ನಾಗರಿಕ ಸಮಾಜದಲ್ಲಿ ಮನುಷ್ಯ ಜೀವನದ ಅವಶ್ಯಕತೆಗಳಾದ ಆರೋಗ್ಯ, ಶಿಕ್ಷಣ, ವಸತಿ, ಭೂಮಿಯ ಒಡೆತನ, ಮುಂತಾದವು ಎಲ್ಲರಿಗೂ ದೊರೆಯುವಂತೆ ನೋಡಿಕೊಳ್ಳುವುದು ಸ್ಥಳೀಯಾಡಳಿತ ವ್ಯವಸ್ಥೆಯ ಕರ್ತವ್ಯವಾಗಿರುತ್ತದೆ. 

ಸ್ವತಂತ್ರ ಭಾರತದಲ್ಲಿ ಎಂಭತ್ತರ ದಶಕದ ವರೆಗೂ ನಾವು ಅನುಸರಿಸಿದ ಅಭಿವೃದ್ಧಿಯ ‘ಮಿಶ್ರ ಆರ್ಥಿಕ ವ್ಯವಸ್ಥೆಯ’ ಮಾದರಿ ಮೇಲೆ ಹೇಳಿದ ವಿಷಯಗಳಲ್ಲಿ ಯಾವುದನ್ನೂ ಸಾಧಿಸಲು ಸಾಧ್ಯವಾಗಲೇ ಇಲ್ಲ. ಸರ್ವೋದಯದ ಆಶಯಗಳು ಮಿಶ್ರ ಆರ್ಥಿಕ ವ್ಯವಸ್ಥೆಯಲ್ಲಿ ಜಾಗ ಪಡೆಯಲು ಸಾಧ್ಯವಾಗಲಿಲ್ಲ. ಅಥವಾ ಮಿಶ್ರ ಆರ್ಥಿಕ ವ್ಯವಸ್ಥೆ ಎನ್ನುವುದು ಕೂಡಾ ಮೂಲಭೂತವಾಗಿ ಮಾರುಕಟ್ಟೆ ಆಧಾರಿತ ಅಭಿವೃದ್ಧಿ ನೀತಿಯನ್ನೇ ಅವಲಂಭಿಸಿದ್ದರಿAದ ಇದಕ್ಕೆ ಪ್ರಜಾಪ್ರಭುತ್ವದ ಹೊರ ಆವರಣವಿದ್ದಂತೆ ಗೋಚರಿಸಿದರೂ ಅದರಲ್ಲಿ ಕೊಳ್ಳುವ ಶಕ್ತಿಯಿಲ್ಲದಿರುವ ಜನವರ್ಗಕ್ಕೆ ಅವಕಾಶಗಳಿರಲಿಲ್ಲ ಎಂದು ಹೇಳಲಾಗುತ್ತದೆ.

ಭಾರತದ ಆರ್ಥಿಕ ವ್ಯವಸ್ಥೆಯ ಮತ್ತು ಆರ್ಥಿಕ ವ್ಯವಸ್ಥೆಯ ಸಂರಚನೆ ಐವತ್ತರ ದಶಕದಿಂದ ಆರಂಭಿಸಿ, ಮಿಶ್ರ ಆರ್ಥಿಕ ನೀತಿಯನ್ನು ಬದಿಗೆ ಸರಿಸಿ ಆರ್ಥಿಕ ಉದಾರೀಕರಣದ ಪ್ರವರ್ಧಮಾನಕ್ಕೆ ಬಂದAತಹ ಬೆಳವಣಿಗೆಗಳನ್ನು ಮುಂದಿನ ಭಾಗದಲ್ಲಿ ವಿವರಿಸಲಾಗಿದೆ. ನಿಜವಾಗಿಯೂ ಆರ್ಥಿಕ ಉದಾರೀಕರಣಎಂದರೇನು? ಇದರ ಇಂದು ಮುಂದು ಎಡ ಬಲಗಳಲ್ಲಿ ಈ ಮಾದರಿಯ ಆರ್ಥಿಕ ವಿನ್ಯಾಸವನ್ನು ನಿರ್ದೇಶಿಸುವ ಅಂಶಗಳು ಯಾವುವು ಎಂಬುದನ್ನು ಮುಂದಿನ ಭಾಗದಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಭಾಗ-೨

ಅಭಿವೃದ್ಧಿ ಮತ್ತು ಭಾರತೀಯ ಆರ್ಥಿಕ ವ್ಯವಸ್ಥೆ

ಇಂದಿಗೂ ಜಗತ್ತಿನ ಮೂರನೇ ಎರಡಂಶ ಜನ ಬಹಳ ದೀನ ಸ್ಥಿತಿಯಲ್ಲಿಯೇ ಬದುಕುತ್ತಿದ್ದಾರೆ. ವಿಶ್ವಬ್ಯಾಂಕ್‌ನ ಸಮೀಕ್ಷೆಗಳೇ ಹೇಳುವ ಹಾಗೆ ಜಗತ್ತಿನ ಶೇಕಡ ನಲವತ್ತರಷ್ಟು ಜನ ತೀವ್ರವಾದ ಬಡತನದಲ್ಲಿದ್ದು, ಪೋಷಕಾಂಶಗಳ ಕೊರತೆ, ಹಸಿವು, ಅನಾರೋಗ್ಯ ಮುಂತಾದ ಸಮಸ್ಯೆಗಳಿಂದ ಕಂಗೆಟ್ಟು ಹೋಗಿದ್ದಾರೆ. ಬದುಕಿನ ಕನಿಷ್ಟ ಅವಶ್ಯಕತೆಗಳಾದ ಅನ್ನ, ವಸ್ತç ಮತ್ತು ವಸತಿಯನ್ನು ಹೊಂದಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ.  ಪ್ರತಿ ದಿನ ಇಪ್ಪತ್ತೆರಡು ಸಾವಿರ ಮಕ್ಕಳು ಪೋಪಕಾ೦ಶಗಳ ಕೊರತೆಯಿ೦ದ ಸಾವನ್ನಪುö್ಪತ್ತಿದ್ದಾವೆ. ಆಫ್ರಿಕಾದ ಹಲವು ದೇಶಗಲ್ಲಿ ಹೊಟ್ಟೆಗಿಲ್ಲದೆ ಸಾಯುವವರ ಸಂಖ್ಯೆ, ಸಾವಿನ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಹಾಗೆಂದು ವಿಶ್ವದಲ್ಲಿ ಆಹಾರ ಪದಾರ್ಥಗಳ ಉತ್ಪಾದನೆಯೇ ಆಗುತ್ತಿಲ್ಲವೆಂದಿಲ್ಲ. ವಿಶ್ವದ ಎಲ್ಲ ಜನರ ಹಸಿವನ್ನು ನೀಗಿಸಲು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಆಹಾರ ಸಾಮಾಗ್ರಿಗಳನ್ನು ಉತ್ಪಾದಿಸಲಾಗುತ್ತಿದೆ. ಹಲವು ದೇಶಗಳಲ್ಲಿ ಬೇಡಿಕೆ, ಪೂರೈಕೆಗಳ ನಡುವೆ ಸಮತೋಲನ ಉಳಿಸಿಕೊಳ್ಳಲು ಟನ್ನುಗಟ್ಟಲೆ ಆಹಾರ ಸಾಮಾಗ್ರಿಗಳನ್ನು ಸಮುದ್ರಕ್ಕೆ ಚೆಲ್ಲಲಾಗುತ್ತದೆ. ಹಸಿವು ಬಡತನಗಳಿರುವ ಸರ್ಬಿಯಾ, ಪ್ಯಾಲೆಸ್ತೀನ್, ಅಪ್‌ಘಾನಿಸ್ಥಾನದಂತಹ, ದೇಶಗಳಲ್ಲೂ ಜನ ಅತ್ಯಾಧುನಿಕ ಶಸ್ತಾçಸ್ತçಗಳನ್ನು ಹಿಡಿದುಕೊಂಡು ಹೋರಾಡÀÄತ್ತಿದ್ದಾರೆ. ಒಂದು ಕಡೆ ನಮ್ಮ ತಂತ್ರಜ್ಞಾನ, ಬಂಡÀವಾಳ ಮತ್ತು ಆ ಮೂಲಕ ಮಾನವ ಸಂಪನ್ಮೂಲದ ಬಳಕೆಯಿಂದ ರಾಶಿಗಟ್ಟಲೆ ಆಹಾರ ಧಾನ್ಯಗಳ ಉತ್ಪಾದನೆ ಸಾಧ್ಯವಾಗಿದ್ದರೆ ಇನ್ನೊಂದೆಡೆ ಕಿತ್ತು ತಿನ್ನುವ ಹಸಿವು ಬಡತನ! ಇದೊಂದು ರೀತಿಯ ಅಸಂಗತ ಸ್ಥಿತಿಯಾಗಿ ಕಾಣುತ್ತದೆ. ನಮ್ಮ ನಿರಂತರ ಅಭಿವೃದ್ಧಿಯ ಫಲ ಯಾರಿಗೆ ದಕ್ಕಿದೆ? ವಿಶ್ವದಲ್ಲಿ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಯಾಕೆ ಹೆಚ್ಚುತ್ತಾ ಹೋಯಿತು? ಅಂತರಾಷ್ಟಿçÃಯ ದ್ರವ್ಯ ನಿಧಿ, ವಿಶ್ವಬ್ಯಾಂಕ್ ಮತ್ತು ಅದರ ಸಹ ಸಂಸ್ಥೆಗಳು ಬಡದೇಶಗಳನ್ನು ಬಡತನದಿಂದ ಮುಕ್ತವಾಗಿಸಲು ನಡೆಸುತ್ತಿರುವ ಹರಸಾಹಸಗಳ ಹೊರತಾಗಿಯೂ ಬಡದೇಶಗಳ ಪರಿಸ್ಥಿತಿ ಯಾಕೆ ಸುಧಾರಿಸುತ್ತಿಲ್ಲ? ಮತ್ತು ಇಂತಹ ಅಭಿವೃದ್ಧಿಯ ನೀತಿಯ ಫಲ ಏನಾಗಿದೆ?  ಎನುವುದನ್ನು ಸಂಕ್ಷಿಪ್ತವಾಗಿ ತಿಳಿಯೋಣ. 

ಅಭಿವೃದ್ಧಿ – ವ್ಯಾಖ್ಯೆ ಮತ್ತು ಪರಿಕಲ್ಪನೆ

ನಮ್ಮಲ್ಲಿ ಅಭಿವೃದ್ಧಿ ಎಂದರೆ ಆರ್ಥಿಕ ಅಭಿವೃದ್ಧಿ ಎಂದು ತಿಳಿಯಲಾಗುತ್ತದೆ. ಆರ್ಥಿಕ ಚಿಂತನೆಯ ಆರಂಭದ ದಿನಗಳಲ್ಲಿ ಆರ್ಥಿಕ ಅಭಿವೃದ್ಧಿ ಎಂದರೆ ಒಂದು ದೇಶದ ತಲಾ ಆದಾಯದಲ್ಲಿ, ದೀರ್ಘಾವಧಿಯಲ್ಲಿ ಏರಿಕೆಯುಂಟಾಗುವ ಒಟ್ಟು ಪ್ರಕ್ರಿಯೆ ಎಂದು ವ್ಯಾಖ್ಯಾನಿಸಲಾಗಿತ್ತು. ತಲಾ ಆದಾಯದಲ್ಲಿ ಏರಿಕೆಯಾದಾಗ ಅದು ದೇಶದ ಒಟ್ಟು ಉತ್ಪನ್ನದಲ್ಲಿ ಹೆಚ್ಚಳವಾಗಿರುವುದನ್ನು ತೋರಿಸುತ್ತದೆ. ಇಂತಹ ಹೆಚ್ಚುವರಿ ಸಂಪತ್ತು ಜನರಲ್ಲಿ ಹರಿದು ಹೋಗಿ ಅವರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿ ಜೀವನ ಮಟ್ಟವನ್ನು ಉತ್ತಮವಾಗಿಸುತ್ತದೆ. ಅಂದರೆ ಇಲ್ಲಿ ತಲಾ ಆದಾಯದಲ್ಲಿನ ಹೆಚ್ಚುವರಿಯಾದ ಆದಾಯ ಜನರಿಗೆ ಹರಿದು ಹೋಗುತ್ತಿದೆ ಎಂಬ ನಂಬಿಕೆಯನ್ನು ಸೂಚಿಸುತ್ತದೆ. ದೀರ್ಘಾವಧಿ ಎಂದರೆ ಮರ‍್ನಾಲ್ಕು ದಶಕಗಳ ಕಾಲ. ಯಾಕೆಂದರೆ ಅಭಿವೃದ್ಧಿ ಎನ್ನುವುದು ಅಲ್ಪಕಾಲೀನವಾಗಿರಬಾರದು: ಅದು ದೀರ್ಘಾವಧಿಯಲ್ಲಿ ಗುರುತಿಸಬೇಕಾದಂತಹುದು ಮತ್ತು ಇಂತಹ ಅಭಿವೃದ್ಧಿ ಕುರಿತ ಚಟುವಟಿಕೆಗಳು ನಿರಂತರವಾಗಿರಬೇಕು. ಒಂದು ದೇಶ ಒಂದೆರಡು ವರ್ಷಗಳಷ್ಟು ಕಾಲ ಅಭಿವೃದ್ಧಿಶೀಲವಾಗಿದ್ದು ನಂತರ ಹಿಂದುಳಿದ ದೇಶಗಳ ಸಾಲಿಗೆ ಸೇರಿದ್ದೆಂದು ಪರಿಗಣಿಸುವಂತಿರಬಾರದು. ಅಲ್ಪಕಾಲಾವಧಿಯಲ್ಲಿ ನಾವು ಒಂದು ದೇಶ ಪ್ರಗತಿ ಪಥದತ್ತ ಕಾರ್ಯೊನ್ಮಖವಾಗಿರುವುದನ್ನು ಕಾಣಬಹುದೇ ಹೊರತು ಅಭಿವೃದ್ಧಿ ಹೊಂದಿತೆAದು ಹೇಳುವ ಹಾಗಿಲ್ಲ. ‘ಅಭಿವೃದ್ಧಿ ಮತ್ತು ಬೆಳವಣಿಗೆ ಎನ್ನುವುದು ಹಲವಾರು ಸಂದರ್ಭಗಳಲ್ಲಿ ಸಮಾನ ಅರ್ಥ ನೀಡುವ ಪದಗಳೆಂದು ಬಳಸುವುದುಂಟು ಆದರೆ ಅವೆರಡೂ ಬೇರೆ ಬೇರೆ. ಬೆಳವಣಿಗೆ ಎನ್ನುವುದನ್ನು ಸಾಮಾನ್ಯವಾಗಿ ಪ್ರಮಾಣ ಅಥವಾ ಬಾಹ್ಯವಾಗಿ ಕಾಣಿಸಿಕೊಳ್ಳುವ ಕೆಲವೊಂದು ಲಕ್ಷಣಗಳ ಮೂಲಕ ಗುರುತಿಸಲಾಗುತ್ತದೆ. ಉದಾಹರಣೆಗೆ ಆದಾಯದಲ್ಲಿ ವೃದ್ಧಿ, ಉದ್ಯೋಗ, ಕೃಷಿ ಮತ್ತು ಕೈಗಾರಿಕೆಯ ಉತ್ಪನ್ನಗಳಲ್ಲಿ ಆಗುವ ಏರಿಕೆ ಮುಂತಾದವು. ಅದರೆ ಅಭಿವೃದ್ಧಿ ಎನ್ನುವ ಬಹಳಷ್ಟು ಮಟ್ಟಿಗೆ ಒಂದು ಗುಣಾತ್ಮಕ ಅಂಶ. ಮೇಲೆ ಉಲ್ಲೇಖಿಸಿದ ಬೆಳವಣಿಗೆಯನ್ನು ಆಧರಿಸಿ ಒಂದು ಸಮುದಾಯದ ಅಥವಾ ಜನವರ್ಗದ ಬದುಕಿನ ಗುಣಮಟ್ಟದಲ್ಲಿ ಖಾಯಂ ಆದ ಬದಲಾವಣೆ ಆದಾಗ ಮಾತ್ರ ನಾವು ಅಭಿವೃದ್ಧಿ ಎಂದು ಹೇಳಬಹುದು. ಬೆಳವಣಿಗೆಯಲ್ಲಿ ಒಂದು ಅವಧಿಯಲ್ಲಿ ಏರಿಕೆಯಾಗಿ ನಂತರದ ಹಂತದಲ್ಲಿ ಇಳಿಕೆ ಕಂಡು ಬರಬಹುದು. ಅದರೆ ಅಭಿವೃದ್ಧಿಯಲ್ಲಿ ಹಾಗಾಗುವುದಿಲ್ಲ. ಒಂದು ಸಾರಿ ಅಭಿವೃದ್ಧಿ ಹೊಂದಿದರೆ ಅಂತಹ ಪರಿವರ್ತನೆಯ ಪರಿಣಾಮ ದೀರ್ಘಕಾಲೀನವಾಗಿರುತ್ತದೆ. ಹೀಗೆ ಅಭಿವೃದ್ಧಿ ಒಂದು ಪ್ರಕ್ರಿಯೆ, ಯಾಕೆಂದರೆ ಇಲ್ಲಿ ಅಂತರ್ ಸಂಬAಧಿಯಾದ ಉತ್ಪಾದನಾ ಪರಿಕರಗಳು ಸಾಮಾನ್ಯ ಮಾದರಿಯಲ್ಲಿ ಒಂದು ನಿಶ್ಚಿತ ಉದ್ದೇಶದ ಈಡೇರಿಕೆಗೋಸ್ಕರ ಕ್ರಿಯಾಶೀಲವಾಗುತ್ತವೆ. ನಾವು ಬಡತನೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಇಂತಹ ಉತ್ಪಾದನಾ ಪರಿಕರಗಳನ್ನು ಬಳಸಿ ಕಾರ್ಯೋನ್ಮುಖರಾದಾಗ, ಬಡತನ ನಿರ್ಮೂಲನವಾಗಬೇಕಾದರೆ ಯಾವ ಯಾವ ವಸ್ತುಗಳು ಉತ್ಪಾದನೆಯಾಗಬೇಕೋ ಅವನ್ನು ಉತ್ಪಾದಿಸುತ್ತವೆ ಮತ್ತು ಇಂತಹ ವಸ್ತುಗಳು ಬಳಕೆಗೆ ಒದಗಿ ಬಡತನ ನಿರ್ಮೂಲನೆಯ ಉದ್ದೇಶ ಸಾಧಿತವಾಗುತ್ತದೆ. ಒಂದು ವೇಳೆ ನಮ್ಮ ಉದ್ದೇಶ ರಾಷ್ಟಿçÃಯ ಆದಾಯವನ್ನು ಹೆಚ್ಚಿಸುವುದೆಂದಾದರೆ, ಉತ್ಪದನಾ ಪರಿಕರಗಳನ್ನು ಬಳಸಿ ಅಧಿಕ ಪ್ರತಿಫಲ ತರುವ ವಸ್ತುಗಳನ್ನು ಉತ್ಪಾದಿಸಿದಾಗ ರಾಷ್ಟಿçÃಯ ಆದಾಯದಲ್ಲಿ ಏರಿಕೆಯುಂಟಾಗುತ್ತದೆ. ಇಂತಹ ಅಭಿವೃದ್ಧಿ ಸಾಧಿಸುವಾಗ ನಾವು ಗಮನಿಸಬೇಕಾದಂತಹ ಕೆಲವು ಪ್ರಮುಖ ಅಂಶಗಳಿವೆ, ಅವುಗಳೆಂದರೆ, ಒಂದು ಸಮುದಾಯ ಅಭಿವೃದ್ಧಿಯತ್ತ ಸಾಗುತ್ತಾ ಹೋಗುವಾಗ ಅಭಿವೃದ್ಧಿ ಪೂರ್ವ ಹಂತದಲ್ಲಿ ಬಡತನದ ರೇಖೆಗಿಂತ ಕೆಳಗೆ ಇದ್ದ ಜನಸಂಖ್ಯಾ ಪ್ರಮಾಣ ಇಳಿಮುಖವಾಗುತ್ತಾ ಹೋಗಬೇಕು. ಉದಾಹರಣೆಗೆ, ಪ್ರಸ್ತುತ ನಮ್ಮ ದೇಶದಲ್ಲಿ ಶೇಕಡಾ ನಲವತ್ತರಷ್ಟು ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ. ನಾವು ಈಗ ಅಭಿವೃದ್ಧಿ ಹೊಂದಲು ಅನುಷ್ಟಾನಗೊಳಿಸುವ ಕಾರ್ಯತಂತ್ರದ ಫಲವಾಗಿ ಬಡತನದ ರೇಖೆಗಿಂತ ಕೆಳಗಿರುವ ಶೇಕಡಾ ನಲವತ್ತರಷ್ಟು ಪ್ರಮಾಣ ಭವಿಷ್ಯತ್ತಿನಲ್ಲಿ ಇಳಿಮುಖವಾಗುತ್ತಾ ಹೋಗಬೇಕು. ಇಲ್ಲವಾದಲ್ಲಿ ಒಂದು ವೇಳೆ ರಾಷ್ಟಿçÃಯ ಆದಾಯದಲ್ಲಿ ಏರಿಕೆಯಾದರೂ ಅದನ್ನು ಅಭಿವೃದ್ಧಿ ಎಂದು ಕರೆಯಲಾಗದು. ರಾಷ್ಟಿçÃಯ ಉತ್ಪನ್ನದಲ್ಲಿ ಹೆಚ್ಚಳವಾದಂತೆಯೇ ಜನಸಂಖ್ಯೆಯಲ್ಲಿಯೂ ಅದೇ ಪ್ರಮಾಣದಲ್ಲಿ ಹೆಚ್ಚಳವಾದರೆ ನಾವು ಅದನ್ನು ಆರ್ಥಿಕ ಅಭಿವೃದ್ಧಿ ಎಂದು ಕರೆಯಲಾಗದು. ಆದ್ದರಿಂದ ಹೆಚ್ಚುವರಿ ಏನು ಉತ್ಪಾದನೆಯಾಗುತ್ತದೆ ಅದನ್ನು ಜನಸಂಖ್ಯಾ ಹೆಚ್ಚಳ ಕಬಳಿಸಿ ಬಿಡುವಂತೆ ಆಗಬಾರದು. ಉತ್ಪಾದಿಸಲಾದ ಹೆಚ್ಚುವರಿ ಉತ್ಪಾದನೆ ಆದಷ್ಟು ಸಮಾನವಾಗಿ ವಿತರಣೆಯಾದಾಗ ಅಭಿವೃದ್ಧಿಯಲ್ಲಿ ಹೆಚ್ಚು ಸ್ಥಿರತೆಯೂ ಕಂಡು ಬರುತ್ತದೆ. ಈ ರೀತಿಯಲ್ಲಿ ಅಭಿವೃದ್ಧಿ ಎಂದರೆ, ದೀರ್ಘಾವಧಿಯಲ್ಲಿ ಒಂದು ದೇಶದಲ್ಲಿರುವ ಉತ್ಪಾದನಾ ಪರಿಕರಗಳು ಬಳಕೆಯಾಗಿ, ಅವುಗಳು ಉತ್ಪಾದನೆಯನ್ನು ಹೆಚ್ಚಿಸಿ, ಅಂತಹ ಹೆಚ್ಚಳದ ಪರಿಣಾಮವಾಗಿ ತಲಾ ಆದಾಯ ಮತ್ತು ರಾಷ್ಟಿçÃಯ ಆದಾಯದಲ್ಲಿ ಏರಿಕೆಯಾಗುವ ಒಟ್ಟು ಪ್ರಕ್ರಿಯೆ, ಅಮಾರ್ತ್ಯಸೇನ್ ಅವರ ಮಾತಿನಲ್ಲಿ ಹೇಳುವುದಾದರೆ ಉತ್ಪಾದನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವ ಮೂಲಕ ಜನ ಸಾಮಾನ್ಯ ತÀನಗಿರುವ ಬದುಕುವ ಸ್ವಾತಂತ್ರö್ಯವನು ಮತ್ತು ಆಯ್ಕೆಯ ಸ್ವಾತಂತ್ರö್ಯವನ್ನು ಹೊಂದುವುದಾಗಿದೆ. 

ಅಭಿವೃದ್ಧಿಯ ವಿಸ್ತಾರ ಮತ್ತು ಆಳ ಕೇವಲ ಸಂಪತ್ತು ಸೃಷ್ಟಿಸುವುದು ಸೀಮಿತವಾಗುಳಿಯದೇ, ಸಾಮಾಜಿಕ ಸಂಸ್ಥೆಗಳ ಮೇಲೆ, ಜನರ ಅಭ್ಯಾಸ, ನಂಬಿಕೆ, ಮೌಲ್ಯಗಳ ಮೇಲೆ, ಅಗಾಧವಾದ ಪರಿಣಾಮವನ್ನುಂಟುಮಾಡುತ್ತದೆ. ಪಾಕಿಸ್ಥಾನ ಸರಕಾರದ ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಂತೆ ಅಭಿವೃದ್ಧಿಯೆನ್ನುವುದು ಬಡತನ, ಪೌಷ್ಠಿಕ ಆಹಾರದ ಕೊರತೆ, ಹಸಿವು, ರೋಗ, ಅನಕ್ಷರತೆ, ಅಸಮಾನತೆ ಮುಂತಾದವುಗಳ ಮೇಲಿನ ಸಮರವಾಗಬೇಕು. ನಾವಂದು ಕೊಂಡಿರುವ ರಾಷ್ಟಿçÃಯ ಉತ್ಪನ್ನ ಹೆಚ್ಚಿದಾಗ ಬಡತನ ಮಾಯವಾಗಲಿದೆ ಎನ್ನುವ ನಂಬಿಕೆ ತಿರುವವು ಮುರುವಾಗಬೇಕು. ಬಡತನದ ಮೇಲೆ ಸಾರುವ ನಿರಂತರ ಸಮರ ಯಶಸ್ವಿಯಾದಾಗ ರಾಷ್ಟಿçÃಯ ಉತ್ಪನ್ನ ತಾನೇ ತಾನಾಗಿ ಹೆಚ್ಚುತ್ತದೆ. ತೃತೀಯ ಜಗತ್ತಿನ ರಾಷ್ಟçಗಳ ರಾಷ್ಟಿçÃಯ ಉತ್ಪನ್ನದಲ್ಲಿ ೧೯೬೦ರಿಂದೀಚೆಗೆ ಶೇಕಡಾ ಐವತ್ತರಷ್ಟು ಅಭಿವೃದ್ಧಿಯಾಗಿದ್ದರೂ ಮೂರನೇ ಎರಡಂಶ ಜನ ಹಸಿವಿನಿಂದ ಬಳಲುತ್ತಿದ್ದಾರೆ. ಆದಾಯ ವಿತರಣೆಯಲ್ಲಿ ಅಸಮತೋಲನ ಹಿಂದೆAದಿಗಿAತಲೂ ಅಧಿಕವಾಗಿದೆ. ಜಾಗತಿಕ ಮಟ್ಟದಲ್ಲಿಯೂ ಇದೇ ತೆರನಾದ ಅಭಿವೃದ್ಧಿಯ ಫಲ ಉಳ್ಳವರ ಪಾಲಿಗೆ ದಕ್ಕಿದೆ. ಇಲ್ಲದವರು ಇನ್ನೂ ಬಡವರಾಗಿದ್ದಾರೆ. ಇದರಿಂದ ದೇಶಗಳೊಳಗೆ, ದೇಶದೊಳಗಿನ ವಿವಿಧ ಸಾಮಾಜಿಕ ವರ್ಗಗಳೊಳಗೆ ಅತೃಪ್ತಿ ಪ್ರಕ್ಷÄಬ್ಧತೆ ಹುಟ್ಟಿಕೊಂಡಿದೆ. ನಾವು ಸಾಧಿಸಿದ ಇದುವರೆಗಿನ ಅಭಿವೃದ್ಧಿಯನ್ನು ಗಮನಿಸಿದಾಗ ಕಂಡು ಬರುವ ಅಂಶಗಳೆAದರೆ:

೧. ತಲಾ ಆದಾಯದಲ್ಲಿ ಶೇಕಡಾ ೩.೫ರ ಪ್ರಮಾಣದಲ್ಲಿ ವೃದ್ಧಿಯಾಗುತ್ತಲಿರುವಾಗ ಬಡಜನರ ಆದಾಯದಲ್ಲಿ        ತೀವ್ರ ಪ್ರಮಾಣದ ಇಳಿಮುಖ ಕಂಡು ಬರುತ್ತಿದೆ.

೨. ಅಧಿಕ ಪ್ರಮಾಣದಲ್ಲಿ ಸಂಪತ್ತು ಸೃಷ್ಟಿಯಾಗಿರುವುದು ಸತ್ಯ.

೩. ಬಡಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಅಧಿಕ ಪ್ರಮಾಣದಲ್ಲಿ ಅಭಿವೃದ್ಧಿ ಅವಶ್ಯಕವಾದರೂ,        ಇಂತಹ ಅಭಿವೃದ್ಧಿ ಬಡಜನರ ಸ್ಥಿತಿಯನ್ನು ಖಂಡಿತ ಸುಧಾರಿಸುತ್ತದೆ ಎಂದು ಹೇಳಲಾಗುವುದಿಲ್ಲ.

೪. ಮಾನವ ಸಂಪನ್ಮೂಲ ಕೇಂದ್ರಿತ ಉತ್ಪಾದನಾ ಕ್ರಮಗಳನ್ನು ಅನುಸರಿಸಿದ ಅಭಿವೃದ್ಧಿಯ ದರದಲ್ಲಿ          ಏರಿಕೆಯಿದ್ದಾಗ ಮಾತ್ರ ಶೇಕಡಾ ೪೦ರಷ್ಟು ಕಡುಬಡತನವಿರುವ ಜನರ ಆದಾಯದಲ್ಲಿ ಏರಿಕೆ ಕಂಡು         ಬಂದಿದೆ.

ಇಲ್ಲಿ ನಮಗೆ ಸ್ಪಷ್ಟವಾಗುವ ವಿಚಾರವೆಂದರೆ ನಮ್ಮಲ್ಲಿ ರಾಷ್ಟಿçÃಯ ಉತ್ಪನ್ನ ಮತ್ತು ತಲಾ ಆದಾಯದಲ್ಲಿ ಹೆಚ್ಚಳ ಉಂಟುಮಾಡುವುದರಿAದ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆ ಇದೆ. ಬಡದೇಶಗಳಲ್ಲಿ ಸಂಪನ್ಮೂಲವಿದೆ ಆದರೆ ಬಂಡವಾಳ ಮತ್ತು ತಂತ್ರಜ್ಞಾನದ ಕೊರೆತೆಯಿದೆ; ಬಡದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಅಧುನಿಕ ತಂತ್ರಜ್ಞಾನ ಮತ್ತು ಬಂಡವಾಳವನ್ನು ಒದಗಿಸಿಕೊಡಬೇಕು; ಇದನ್ನು ಬಳಸಿಕೊಂಡು ಬಡದೇಶಗಳು ಉತ್ಪಾದನೆ ಹೆಚ್ಚಿಸಿ, ತಲಾ ಆದಾಯ ಹೆಚ್ಚಿಸಿ ಅಭಿವೃದ್ಧಿ ಹೊಂದುವುದು ಸಾಧ್ಯ ಎಂಬ ನಂಬಿಕೆ ಕೆಲಸ ಮಾಡುತ್ತಿದೆ. ಆದರೆ ಮಹಾಯುದ್ಧದ ನಂತರದಲ್ಲಿ ಸುಮಾರು ಐದು ದಶಕಗಳಷ್ಟು ಕಾಲ ನಿರಂತರ ನಡೆದ ಈ ಅಭಿವೃದ್ಧಿಯ ಪ್ರಯತ್ನಗಳ ಹೊರತಾಗಿಯೂ ಹಸಿವು ಅನಕ್ಷರತೆ, ಪೌಷ್ಠಿಕಾಂಶದ ಕೊರತೆಯಿಂದ ಜನ ಕಂಗೆಟ್ಟಿದ್ದಾರೆ, ಮಿಲಿಯನ್‌ಗಟ್ಟಲೆ ಹಣವನ್ನು ಸಾಲವಾಗಿ ಪಡೆದು, ತಂತ್ರಜ್ಞಾನವನ್ನು ಎರವಲು ಪಡೆದು ಬಡದೇಶಗಳು ಅಭಿವೃದ್ಧಿ ಹೊಂದಲು ಮಾಡಿದ ಎಲ್ಲ ಸಾಹಸಗಳ ಹೊರತಾಗಿಯೂ ಅವರ ಪರಿಸ್ಥಿತಿಯಲ್ಲಿ ಬಹಳ ದೊಡ್ಡ ಬದಲಾವಣೆ ಆಗಿಲ್ಲ. ಆದರೆ ಶ್ರೀಮಂತ ರಾಷ್ಟçಗಳು ಮಾತ್ರ ಎಂದಿನAತೆ ಸಂಪತ್ತಿನಲ್ಲಿ ಮುಳುಗಿ ಹೋಗಿವೆ. ಬೇಡಿಕೆಯನ್ನು ಸರಿದೂಗಿಸಲು ಟನ್ನುಗಟ್ಟಲೆ ಆಹಾರವನ್ನು ಸಮುದ್ರಕ್ಕೆ ಚೆಲ್ಲುತ್ತಿವೆ. ಹೀಗಾಗಿ ಅಭಿವೃದ್ಧಿ ಎಂದರೆ, ಅಭಿವೃದ್ಧಿ ಹೊಂದಿದ ದೇಶಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು, ತಂತ್ರಜ್ಞಾನ ವರ್ಗಾವಣೆ ಮಾಡಲು, ಬಡದೇಶಗಳ ಮಾನವ ಸಂಪನ್ಮೂಲ ಬಳಕೆ ಮೂಲಕ ಸಾಧಿಸಿದ ಪ್ರಗತಿಯನ್ನುಳಿಸಿ ಕೊಳ್ಳಲು ಹೂಡಿದ ಒಂದು ಉಪಾಯವಾಗಿದೆ ಎನ್ನುವ ಅಭಿಪ್ರಾಯ ಮೂಡುತ್ತದೆ. ಉತ್ಪಾದಿತವಾಗಿರುವ ವಸ್ತುಗಳು, ಅಂತಹ ಉದ್ದೇಶಕ್ಕೆ ಬಳಕೆಯಾದಾಗ ಮಾತ್ರ ಅದಕ್ಕೆ ಮೌಲ್ಯವಿದೆ ಹೊರತು ದುಡ್ಡಿದ್ದವರಿಗೆ ಸೇರಿದಾಗ ಅಲ್ಲ. ಉತ್ಪಾದನೆಯಾದ ವಸ್ತು ಮತ್ತು ಸರಕುಗಳು ಸಮಾನವಾಗಿ ವಿರತಣೆಯಾಗಿ ಸಂಪತ್ತಿನ ಸಮಾನ ಹಂಚಿಕೆಯಾಗಿ, ಬಡತನ ಸಿರಿತನ ನಡುವಿನ ಅಂತರ ಕಡಿಮೆಯಾಗಿ ಒಂದು ರೀತಿಯ ಸಾಮಾಜಿಕ ಸ್ಥಿರತೆ, ಆರ್ಥಿಕ ಸಮಾನತೆ, ಆರ್ಥಿಕ ಏಳಿಗೆಯಾದರೆ ಅದನ್ನು ಅಭಿವೃದ್ಧಿ ಎನ್ನಬಹುದು. ಈ ಲೇಖನದ ಆರ೦ಭದಲ್ಲಿ ಪ್ರಸ್ತಾಪಿಸಿದ೦ತೆ ಅಭಿವೃದ್ಧಿಯ ಆಶಯ ಇವತ್ತು ವಸ್ತು, ವಿಶಯಗಳನ್ನು ಮೀರಿದ ಕೆಲವೊ೦ದು ಅ೦ಶಗಳನ್ನು ಒಳಗೊ೦ಡು, ಇಡೀ ಸಮುದಾಯ ಅಥವಾ ಸಮಾಜ ಸಮಗ್ರವಾಗಿ ಜೋಸೆ¥s಼ï ಸ್ಟಿಗ್ಲಿಜ್ ಅವರು ಹೇಳಿದ ಎಲ್ಲ ನಾಲ್ಕು ಅ೦ಶಗಳನ್ನು ಒಳಗೊ೦ಡ೦ತೆ ವಿಕಾಸ ಹೊ೦ದಿದರೆ ಮಾತ್ರ ನಾವದನ್ನು ಅಭಿವೃದ್ಧಿಯೆ೦ದು ಪರಿಗಣಿಸಬಹದು. ಇತ್ತೀಚೆಗೆ ಅಮೇರಿಕಾದ ಸೋಷಿಯಲ್ ಪ್ರೊಗ್ರೆಸ್ ಒಪರೇಟಿವ್ ಸಂಸ್ಥೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಆಧಾರದಲ್ಲಿ ಭಾರತ ಪ್ರಪಂಚದ ೧೩೩ ದೇಶಗಳಲ್ಲಿ ೧೦೧ನೇ ಸ್ಥಾನದಲ್ಲಿದೆ. ರಾಷ್ಟಿçÃಯ ಆದಾಯದ ಆಧಾರದ ಮೇಲೆ ೧೩೩ರ ಪೈಕಿ ೯೩ನೇ ಸ್ಥಾನದಲ್ಲಿದೆ.  ಸಾಮಾಜಿಕ ಅಭಿವೃದ್ಧಿಯ ಮಾನ ದಂಡವನ್ನು ತೆಗೆದುಕೊಂಡರೆ ನೆರೆಯ ಬಾಂಗ್ಲಾ, ಶ್ರೀಲಂಕಾ ಮತ್ತು ನೇಪಾಳಗಳಿಗಿಂತಲೂ ಭಾರತ ಕೆಳಗಿನ ಸ್ಥಾನದಲ್ಲಿರುವುದು ಚಿಂತೆಯ ವಿಷಯವೇ ಸರಿ.  ಈ ರೀತಿಯು ವಿಶ್ಲೇಷಣೆಯನ್ನು ಸಾಮಾಜಿಕ ಮತ್ತು ಪರಿಸರ ಸಂಬAಧಿ ಅಂಶಗಳಾದ, ಆಹಾರ, ಆರೋಗ್ಯ, ಶಿಕ್ಷಣ, ನೈರ್ಮಲ್ಯ, ವೈಯಕ್ತಿಕ ಸುರಕ್ಷೆ, ಸಾಮಾಜಿಕ ಸಹಿಷ್ಣುತೆ, ಜನರ ಸಾಮಾಜಿಕ ಮತ್ತು ಆರ್ಥಿಕ ಆಯ್ಕೆ ಮತ್ತು ಅವಕಾಶಗಳು,  ಸಾಮಾಜಿಕ ಮತ್ತು ಆರ್ಥಿಕ ಒಳಗೊಳ್ಳುವಿಕೆಯೇ ಮುಂತಾದ ೫೨ ಮಾನದಂಡಗಳ ಆಧಾರದ ಮೇಲೆ ಈ ಸಮೀಕ್ಷೆಯನ್ನು ನಡೆಸಲಾಗಿದೆ. ವಿಶ್ವ ಬ್ಯಾಂಕ್, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಗಾಗಿ ಸಂಘಟನೆ, ಯುರೋಪಿಯನ್ ಕಮಿಶನ್‌ಗಳು ಈ ಸಮೀಕ್ಷೆಯಲ್ಲಿ ಬಳಸಲಾದ ಸಾಮಾಜಿಕ ಮತ್ತು ಆರ್ಥಿಕ ಅಂಶಗಳ ಆಧಾರದಲ್ಲಿ ದೇಶದ ಅಭಿವೃದ್ಧಿಯನ್ನು ನಿರ್ಧರಿಸುವುದು ಹೆಚ್ಚು ಸೂಕ್ತವಾಗಿದೆ ಎಂದು ಅಭಿಪ್ರಾಯಿಸಿವೆ. ದೇಶದಲ್ಲಿ ಸಂಪತ್ತು ಉತ್ಪಾದನೆಯಾಗಿ ತಲಾ ಆದಾಯದಲ್ಲಿ ವೃದ್ಧಿ ಮತ್ತು ರಾಷ್ಟಿçÃಯ ಅಭಿವೃದ್ಧಿ ದರ ಏರಿಕೆಯಾದ ತಕ್ಷಣಕ್ಕೆ ಜನರ ಬದುಕು ಸುಧಾರಿಸಿದೆ ಎನ್ನುವ ತೀರ್ಮಾನಕ್ಕೆ ಬರಲಾಗದು. ಈ ಕಾರಣದಿಂದಾಗಿಯೇ ನಾರ್ವೆ, ಸ್ವೀಡನ್, ಐಲಾಂಡ್, ನ್ಯೂಜಿಲ್ಯಾಂಡ್‌ಗಳಲ್ಲಿ ಜನರ ಜೀವನ ಮಟ್ಟ ಆಮೇರಿಕಾ, ಜಪಾನ್, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳಿಗಿಂತ ಚೆನ್ನಾಗಿದೆ.  ಆದಾಯದ ಜೊತೆಗೇನೆ ಬದುಕಿನಲ್ಲಿ ನೆಮ್ಮದಿ, ಸಂತೋಷ ನೀಡಬಲ್ಲ ಸಾಮಾಜಿಕ ಮತ್ತು ಆರ್ಥಿಕ ಪರಿಸರವೂ ಮುಖ್ಯ.  ಅಂತಹ ವಿಷಯಗಳನ್ನು ಆಧಾರವಾಗಿರಿಸಿದರೆ ಭಾರತದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ ಮತ್ತು ಅಭಿವೃದ್ಧಿಯ ಕುರಿತ ನಮ್ಮ ಸಾಧನೆ ಖಂಡಿತಾ ಸಾಮಾಧಾನಕರವಾಗಿಲ್ಲ.


ಭಾರತೀಯ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿ ಮತ್ತು ಹೊಸ ಆರ್ಥಿಕ ನೀತಿ 

ಐದು ಶತಮಾನಗಳಷ್ಟು ಕಾಲ ಸಾಮ್ರಾಜ್ಯಶಾಹಿ ಆಡಳಿತಕ್ಕೊಳಪಟ್ಟ ನಮ್ಮ ದೇಶದಲ್ಲಿ ಬಡತನ, ಸಾಮಾಜಿಕ ಆರ್ಥಿಕ ಅಸಮಾನತೆಯೇ ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯ ಸ್ವಾತಂತ್ರಾö್ಯ ನಂತರ ನಮ್ಮ ಮುಂದಿದ್ದ ಗುರಿಯಾಗಿತ್ತು, ಇಂತಹ ಜಟಿಲವಾದ ಸಮಸ್ಯೆಗಳಿಗೆ ಅಭಿವೃದ್ಧಿ ನೀತಿಯೊಂದನ್ನು ರೂಪಿಸಿಕೊಂಡು ಹೆಚ್ಚುವರಿ ಸಂಪತ್ತನ್ನು ಸೃಷ್ಟಿಸಿ ಅದನ್ನು  ಸರಿಯಾಗಿ ವಿತರಣೆ  ಮಾಡುವ ಮೂಲಕ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಸಾಧ್ಯ ಎಂದು ತಿಳಿಯಲಾಗಿತ್ತು. ಸಾಮಾಜಿಕ ಅಸಮಾನತೆ ಬಡತನ ಮುಂತಾದ ಸಮಸ್ಯೆಗಳೆಲ್ಲ ಬಹುಪಾಲು “ಅರ್ಥಮೂಲ’’ವಾಗಿರುವಂತಹವುಗಳೇ, ಆಗಿವೆ ಎನ್ನುವು ನಮ್ಮ ತಿಳಿವಳಿಕೆಯಾಗಿತ್ತು. ನಾವು ಸ್ವಾತಂತ್ರ÷್ಯ ಗಳಿಸಿದ ಕಾಲಕ್ಕೆ ಆರ್ಥಿಕ ಅಭಿವೃದ್ದಿಯ ಗುರಿ ಸಾಧನೆಗೆ ನಮ್ಮ ಮುಂದೆ ಎರಡು ಮಾರ್ಗಗಳಿದ್ದುವು. ಒಂದು ಮುಕ್ತ ಆರ್ಥಿಕ ಅಭಿವೃದ್ದಿ ನೀತಿ ಅಥವಾ ಬಂಡವಾಳಶಾಹಿ ವ್ಯವಸ್ಥೆ. ಎರಡನೆಯದು ಸರಕಾರದ ನಿಯಂತ್ರಣಕ್ಕೊಳಪಟ್ಟ ಯೋಜನಾಧಾರಿತ ನಿಯಂತ್ರಿತ ಅಭಿವೃದ್ಧಿ ನೀತಿ, ಮೊದಲನೆಯ ಮಾರ್ಗವನ್ನನುಸರಿಸಿ ಯಶಸ್ವಿಯಾದ ದೇಶಗಳಲ್ಲಿ ಅಮೇರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳಿದ್ದರೆ, ಎರಡನೇ ಮಾರ್ಗವನ್ನನುಸರಿಸಿ ಆರ್ಥಿಕ ಸಾಧಿಸಿದ ದೇಶಗಳಲ್ಲಿ ರಷ್ಯಾ, ಚೀನಾ, ಕ್ಯೂಬಾ ಪ್ರಮುಖವಾಗಿದ್ದುವು. 

ಸರಕಾರದ ಹಸ್ತಕ್ಷೇಪವಿಲ್ಲದೆ ಖಾಸಗೀ ರಂಗ ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿ ಸಂಪತ್ತು ಸೃಷ್ಟಿಸಿ ಮರುವಿತರಣೆಯಲ್ಲಿ ಪ್ರಮುಖ ಪಾತ್ರವಹಿಸುವುದು ಮುಕ್ತ ಅರ್ಥವ್ಯವಸ್ಥೆಯ ಪ್ರಮುಖ ಲಕ್ಷಣ ಇಂತಹ ಅಭಿವೃದ್ಧಿಯ ನೀತಿಗೆ ಅರ್ಥಶಾಸ್ತçಜ್ಞ ಆಡಂ ಸ್ಮಿತ್‌ರಂತಹ ಪ್ರಮುಖ ‘ಶಾಸ್ತೀಯ ಅರ್ಥಶಾಸ್ತçಜ್ಞರ’ ಚಿಂತನೆ ಆಧಾರವಾಗಿತ್ತು. ಈ ರೀತಿಯ ಚಿಂತನೆಯ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಹಿತಾಶಕ್ತಿಯನ್ನು ಗಮನದಲ್ಲಿರಿಸಿ ಉತ್ಪಾದಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ವಸ್ತು ಮತ್ತು ಸೇವೆಯನ್ನು ಉತ್ಪಾದಿಸುತ್ತಾನೆ/ಳೆ. ಹೀಗೆ ಬಹುಪಾಲು ಜನ ಕಾರ್ಯಪ್ರವೃತ್ತರಾದಾಗ ಸಂಪತ್ತಿನ ಸೃಷ್ಟಿಯಾಗಿ ಒಂದು ದೇಶ ಯಾ ಪ್ರದೇಶ ಪ್ರಗತಿ ಹೊಂದುವುದು ಸಾಧ್ಯವಾಗುತ್ತದೆ. 

ಯೋಜನಾಧಾರಿತ ನಿಯಂತ್ರಿತ ಅಭಿವೃದ್ಧಿ ನೀತಿಯ ಪ್ರಮುಖ ಲಕ್ಷಣವೆಂದರೆ, ದೇಶದ ಎಲ್ಲಾ ಉತ್ಪಾದನಾ ಪರಿಕರಗಳನ್ನು ಸರ್ಕಾರದ ಆಸ್ತಿಯೆಂದು ಪರಿಗಣಿಸಿ, ಬಹುಪಾಲು ಜನರ ಹಿತವನ್ನು ದೃಷ್ಯಿಯಲ್ಲಿರಿಸಿ ಕೇಂದ್ರಿಯ ಯೋಜನಾ ಆಯೋಗ ನಿರ್ಧಾರ ಮಾಡುವ ವಸ್ತುಗಳನ್ನು ಯಾ ಸೇವೆಯನ್ನು ಉತ್ಪಾದಿಸಿ, ಅವುಗಳ ವಿತರಣೆ  ಮಾಡುವುದಾಗಿದೆ. ೧೯೧೬ರ ವರೆಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರಷ್ಯಾ ಇಂತಹ ಅಭಿವೃದ್ಧಿ  ನೀತಿಯನ್ನನುಸರಿಸಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿತು. ೧೯೩೦ರ ದಶಕದಲ್ಲಿ ಪಶ್ಚಿಮದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕುಸಿತ ಉಂಟಾಗಿದ್ದ ಸಮಯದಲ್ಲೂ ರಷ್ಯಾ ನಿರಂತರವಾಗಿ ರಾಷ್ಟಿçÃಯ ಉತ್ಪನ್ನದಲ್ಲಿ ಹೆಚ್ಚಳ ಸಾಧಿಸುತ್ತಾ ಬಂದಿತು. ಮುಗ್ಗರಿಸಿದ್ದ ಬಂಡವಾಳಶಾಹೀ ಸುಧಾರಣೆಗೆ ಸರಕಾರದ ಮದ್ಯಪ್ರವೇಶ ಅಗತ್ಯ ಮತ್ತು ಅನಿವಾರ್ಯ ಎನ್ನುವುದನ್ನು ಪಶ್ಚಿಮದ ದೇಶಗಳು ತಾತ್ವಿಕವಾಗಿ ಒಪ್ಪಿಕೊಂಡವು. ಭಾರತದಲ್ಲಿಯೂ ಅಭಿವೃದ್ಧಿ ನೀತಿ ಸರಿಯಾಗಿ ಅನುಷ್ಠಾನಗೊಳ್ಳಲು ಸರಕಾರದ ಪರಿಣಾಮಕಾರೀ ನಿಯಂತ್ರಣ ಅಗತ್ಯವೆಂದು ತಿಳಿಯಲಾಗಿದೆ.

ಅಭಿವೃದ್ಧಿ ನೀತಿಯನ್ನು ರೂಪಿಸುವಾಗ ನಮ್ಮ ಮುಂದೆ ಅಮೇರಿಕಾ ಮಾದರಿಯ ಮತ್ತು ರಷ್ಯಾ ಮಾದರಿಯ ಅಭಿವೃದ್ಧಿ ನೀತಿ, ಇದ್ದು ಇವೆರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಇಂತಹ ಆಯ್ಕೆ ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಾಗಿರಲ್ಲ ಹಾಗೂ ಸರಳವಾಗಿರಲ್ಲ. ಪಾಶ್ಚಿಮಾತ್ಯ ಮಾದರಿಯ  ಶಿಕ್ಷಣ ಪಡೆದು, ಹಲವಾರು ವಿಚಾರಗಳಲ್ಲಿ ಅವರಿಂದ ಪ್ರಭಾವಿತರಾಗಿದ್ದ ನಮ್ಮ ರಾಜಕೀಯ ನಾಯಕರ ಮೇಲೆ ಮುಕ್ತ ಅರ್ಥ ವ್ಯವಸ್ಥೆಯ ಪ್ರಭಾವ ಸ್ವಾಭಾವಿಕವಾಗಿಯೇ ಅಧಿಕವಾಗಿತ್ತು. ನಮ್ಮ ದೇಶದಲ್ಲಿ ನಿಧಾನವಾಗಿ ಬೇರೂರುತ್ತಾ ಬಂದಿದ್ದ ಉದ್ಯಮಪತಿಗಳೂ ಮುಕ್ತ ಅರ್ಥ ವ್ಯವಸ್ಥೆಯ ಕಡೆಗೆ ವಾಲಿದ್ದು ಸಹಜವಾಗಿತ್ತು. ಹೊಸದಾಗಿ ಸ್ವಾತಂತ್ರö್ಯ ಪಡೆದ ನಮ್ಮ ದೇಶದಲ್ಲಿ ಬಂಡವಾಳ ಸಕ್ರಿಯಗೊಳ್ಳಲು ವಿಪುಲವಾದ ಅವಕಾಶಗಳಿದ್ದವು ಇಂತಹ ಅವಕಾಶಗಳನ್ನು ದೇಶೀಯ  ಬಂಡವಾಳಶಾಹಿ ಕಳೆದುಕೊಳ್ಳಲು ಸಿದ್ದವಾಗಿರರಲಿಲ.್ಲ ಬಂಡವಾಳದ ಮತ್ತು ಕೈಗಾರಿಕಾ ರಂಗದ ಬೆಳವಣಿಗೆಗೆ ಸರಕಾರದ ರಕ್ಷಣೆ ಮತ್ತು ಸಹಾಯ ಅಗತ್ಯವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಂತಹ ಪ್ರಕ್ರಿಯೆಗಳು ಪ್ರಮುಖವಾಗಿದ್ದು ಪ್ರತಿಯೊಂದು ಚುನಾವಣೆಗಳಲ್ಲೂ ಬಹಳ ದೊಡ್ಡ ಮೊತ್ತದ ಹಣದ ಚಲಾವಣೆಯಾಗುತ್ತದೆ. ರಾಜಕೀಯ ಪಕ್ಷಗಳಿಗೆ ಅಗತ್ಯವಿರುವ ಇಂತಹ ದೊಡ್ಡ ಮೊತ್ತದ ಹಣ ಒದಗಿಸುವ ಸಾಮರ್ಥ್ಯ ಉದ್ಯಮಪತಿಗಳಿಗೆ ಬಿಟ್ಟರೆ ಮಿಕ್ಕುಳಿದ ವರ್ಗಗಳಿಗೆ ಸಾಧ್ಯವಾಗಿರುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ಪ್ರಜಾಪ್ರಭುತ್ಯ ವ್ಯವಸ್ಥೆಗಳೂ ಬಂಡವಾಶಾಹಿ ಸರ್ಕಾರಗಳ ಮೇಲೆ  ಪ್ರಭಾವ ಬೀರುವ ಮೂಲಕ ತಮಗನುಕೂಲವಾದ ವಾತಾವರಣ ನಿರ್ಮಿಸಿಕೊಂಡಿರುವುನ್ನು ಕಾಣಬಹುದಾಗಿದೆ. ಮುಕ್ತ ಅರ್ಥ ವ್ಯವಸ್ಥೆಯ ಇಂತಹ ಪ್ರಭಾವದ ಹೊರತಾಗಿಯೂ ಜವಾಹರ್‌ಲಾಲ್ ನೆಹರೂರಂತಹ ನಾಯಕರಿಗೆ ಸಮಾಜವಾದೀ ಒಲವುಗಳಿದ್ದು, ರಷ್ಯಾದಲ್ಲಿ ಅನುಷ್ಠಾನ ಗೊಂಡ ಪಂಚವಾರ್ಷಿಕ ಯೋಜನೆಗಳು ಸಾಧಿಸಿದ ಪ್ರಗತಿಯ ಬಗೆಗೂ ಒಲವಿತ್ತು. ಸಮಾಜವಾದೀ ರಾಷ್ರö್ಟನಿರ್ಮಾಣ ಸಾಧನೆಗೆ ಪಂಚವಾರ್ಷಿಕ ಯೋಜನೆಗಳಂತಹ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು ಸಹಕಾರಿಯಾಗಬಲ್ಲವೆಂದು ನೆಹರೂ ಅವರಂತಹ ಜನನಾಯಕರು ತಿಳಿದಿದ್ದರು. ಈ ಕಾರಣದಿಂದಾಗಿ ಯಾವುದಾದರೊಂದು ನೀತಿಗೆ ಬದ್ದವಾಗಿ ಅಭಿವೃದ್ಧಿ ನೀತಿಯನ್ನು ರೂಪಿಸುವುದು ಸಾಧ್ಯವಾಗದೇ ಎರಡೂ ನೀತಿಗಳನ್ನು ಒಪ್ಪಿಕೊಂಡು ಸಮ್ಮಿಶ್ರ ಆರ್ಥಿಕ ನೀತಿಯನ್ನು ರೂಪಿಸಲಾಯ್ತು. ೧೯೪೪ರಲ್ಲಿ ಜೆ.ಆರ್.ಡಿ.ಟಾಟಾ, ಘನಶ್ಯಾಂದಾಸ್ ಬಿರ್ಲಾ, ಆರ್ದೆಶಿರ್ ದಲಾಲ್, ಕಸ್ತೂರಿ ಭಾಯಿ, ಆರ್ದಿಶಿರ್ ದಾರಾಬ್ ಶಾ ಶ್ರಾಫ್, ಸರ್ ಪುರುಷೋತ್ತಮ್ ದಾಸ್ ಠಾಕೂರ್ ದಾಸ್ ಮತ್ತು ಜಾನ್ ಮಥಾಯ್, ಮುಂತಾದ ಆ ಕಾಲದ ಕೈಗಾರಿಕೋದ್ಯಮಿಗಳು ಸ್ವತಂತ್ರ ಭಾರತದ ಅಭಿವೃದ್ಧಿ ಹೇಗಿರಬೇಕೆನ್ನುವ ಕುರಿತು ತಯಾರಿಸಿದ ಒಂದು ನೀಲ ನಕಾಶೆ. ಈ ನೀಲ ನಕಾಶೆಯನ್ವಯವೇ ಭಾರತದ ಪಂಚವಾರ್ಷಿಕ ಯೋಜನೆಗಳು ರೂಪು ತಳೆದಿದೆ ಎಂದು ಹೇಳಲಾಗುತ್ತಿದೆ. ಸ್ವತಂತ್ರ ಭಾರತದಲ್ಲಿ ಸರಕಾರ ರಕ್ಷಣೆಯಲ್ಲಿ ಖಾಸಗೀ ವಲಯ ಕಾರ್ಯ ನಿರ್ವಹಿಸಬೇಕು, ವಿದೇಶಿ ಬಂಡವಾಳವನ್ನು  ನಿಯಂತ್ರಿಸುವುದು ಅಗತ್ಯ.  ಮೂಲಭೂತ ಸೌಕರ್ಯ ಒದಗಿಸುವಲ್ಲಿ, ಕೃಷಿಕ್ಷೇತ್ರದ ಅಭಿವೃದ್ಧಿಗೆ ಸರಕಾರ ಪ್ರಾಮುಖ್ಯತೆ ನೀಡುವುದೇ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು. ಈ ಯೋಜನೆಯ ಕುರಿತು ವಿಸ್ತöÈತ ಚರ್ಚೆಗಳಾಗಿದ್ದು ಇದರಲ್ಲಿರುವ ಹಲವಾರು ಅಂಶಗಳು ನಂತರ ಯೋಜನಾ ಆಯೋಗದ ಪ್ರಾಮುಖ್ಯತೆಯ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಕಾಕತಾಳೀಯವಾಗಿರಬಹುದೇ ? ೧೯೪೨-೪೪ರ ಆವಧಿಯಲ್ಲಿ ಬ್ರಿಟೀಷ್ ಸರಕಾರದ ವಿರುದ್ಧ ಬಲಗೊಂಡ ಭಾರತ ಬಿಟ್ಟು ತೊಲಗಿ ಚಳುವಳಿ ಒಂದೊಮ್ಮೆ ಬಂಡವಾಳಶಾಹೀ, ಖಾಸಗೀ ವಲಯದ ವಿರುದ್ಧ ತಿರುಗಿ ಬಿಟ್ಟರೆ ಖಾಸಗೀ ವಲಯಕ್ಕೆ ಕಂಟಕ ಪ್ರಾಯವಾಗಬಹುದು ಎನ್ನುವ ಭಯವೂ ಈ ರೀತಿಯ ಯೋಜನೆ ರೂಪುಗೊಳ್ಳಲು ಕಾರಣ ಎನ್ನುವ ಮಾತುಗಳೂ ಚಾಲ್ತಿಯಲ್ಲಿದ್ದವು. ಇದರಂತೆ ಅರ್ಥವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯಗಳನ್ನು ಗುರುತಿಸಲಾಯ್ತು. ಸಾರ್ವಜನಿಕ ರಂಗದಲ್ಲಿ ಬೃಹತ್ ಪ್ರಮಾಣದ ಉದ್ದಿಮೆಗಳು ಸಾರಿಗೆ ಮತ್ತು ಸಂಪರ್ಕ, ರಕ್ಷಣೆ ಮುಂತಾದ ಸ್ವರೂಪಾತ್ಮಕ ಉತ್ಪಾದಕ ಚಟುವಟಿಕೆಗಳಿದ್ದರೆ ಮಿಕ್ಕುಳಿದುದನ್ನು ಖಾಸಗೀ ವಲಯದಲ್ಲಿ ಸೇರಿಸಿ ಬಿಡಲಾಯಿತು. ದೇಶದ ಹಿತದೃಷ್ಟಿಯಿಂದ, ಖಾಸಗಿ ವಲಯ ಕಾರ್ಯ ನಿರ್ವಹಿಸುವಂತೆ ಖಾತರಿಪಡಿಸಲು ಕೆಲವೊಂದು ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಯಿತು. ಮಿಶ್ರ ಆರ್ಥಿಕ ನೀತಿ ರೂಪುಗೊಳ್ಳಲು ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಹಲವಾರು ಶಕ್ತಿಗಳು ಯಾ ಕಾರಣಗಳು ಕೂಡಾ ಕೆಲಸ ಮಾಡಿವೆ. ಮಿಶ್ರ ಆರ್ಥಿಕ ನೀತಿ ರೂಪುಗೊಳ್ಳಲು ರಾಷ್ಟಿçÃಯ ಮಟ್ಟದಲ್ಲಿ ಪ್ರಭಾವ ಬೀರಿರುವ ಅಂಶಗಳು ಈ ಕೆಳಗಿನಂತಿವೆ.

(೧)೧೯೪೭ರ ಸಮಯದಲ್ಲಿ ನಮ್ಮ ದೇಶದಲ್ಲಿನ ಬಂಡವಾಳಶಾಹಿ ಉದ್ದಮೆರಂಗದಲ್ಲಿ ಆಗತಾನೇ ಬೆಳೆಯುವ ಹಂತದಲ್ಲಿದ್ದು ಬೃಹತ್ ಉದ್ದಿಮೆಗಳಲ್ಲಿ ತೊಡಗಿಕೊಳ್ಳುವಷ್ಟು ಪ್ರಬಲವಾಗಿರಲಿಲ್ಲ. (೨) ಹೆಚ್ಚಿನ ಬೃಹತ್ ಉದ್ಯಮಗಳು ಸ್ವರೂಪಾತ್ಮಕ ರೀತಿಯಲ್ಲಿದ್ದು ಅಲ್ಪಕಾಲದಲ್ಲಿ ಲಾಭದಾಯಕವಲ್ಲದ ಮತ್ತು ಪ್ರತ್ಯಕ್ಷವಾಗಿ ಪ್ರತಿಫಲ ನೀಡದಿರುವಂತಹ ರೀತಿಯವು ಆಗಿದ್ದಿವು. ಉದಾಹರಣೆಗೆ ಸಾರಿಗೆ, ಸಂಪರ್ಕ, ರೈಲ್ವೆ, ವಿದ್ವುತ್ ಶಕ್ತಿ ಇತ್ಯಾದಿ.(೩) ಖಾಸಗೀ ಉದ್ಯಮ ವಲಯವನ್ನು ವಿದೇಶಿ ಉದ್ಯಮಗಳ ಸ್ಪರ್ದೆಯಿಂದ ರಕ್ಷಿಸುವುದು ಅಗತ್ಯವಾಗಿತ್ತು. ಯಾಕೆಂದರೆ ಅತ್ಯುತ್ತಮ ಮಟ್ಟದ ತಾಂತ್ರಿಕತೆಯನ್ನು ಪ್ರಯೋಗಿಸಿಕೊಂಡು ಉತ್ಪಾದನೆ ಮಾಡುವ ಮುಂದುವರಿದ ದೇಶಗಳ ಕೈಗಾರಿಕೆಗಳೊಂದಿಗೆ ಪೈಪೋಟ ನಡೆಸುವ ಶಕ್ತಿ ನಮ್ಮ ದೇಶದ ಕೈಗಾರಿಕೆಗಳಿಗಿರಲಿಲ್ಲ. ಆದ್ದರಿಂದ ವೀದೇಶಿ ಉತ್ಪನ್ನಗಳನ್ನು ದೇಶಿಯ ಮಾರುಕಟ್ಟೆ ಪ್ರವೇಶಿಸದಂತೆ ತಡೆಯುವ ಶಾಸನಾತ್ಮಕ ಕ್ರಮಗಳು ಅಗತ್ಯವಾಗಿದ್ದು, ಖಾಸಗೀ ವಲಯ ಇಂತಹ ನಿಯಂತ್ರಣ ವ್ಯವಸ್ಥೆಯನ್ನು ಬೆಂಬಲಿಸಿತು.(೪) ಉದ್ಯೋಗಾವಕಾಶಗಳ ಸೃಷ್ಟಿಯ ದೃಷ್ಟಿಯಿಂದಲೂ ಸಾರ್ವಜನಿಕ ರಂಗದ ಉದ್ದಿಮೆಗಳು ಮಹತ್ವದ ಪಾತ್ರವಹಿಸಬೇಕಿತ್ತು. ಭಾರತದಂತಹ ಮಾನವ ಸಂಪನ್ಮೂಲ ಅಧಿಕವಾಗಿರುವ ದೇಶದಲ್ಲಿ ಖಾಸಗಿ ವಲಯವೊಂದೇ ಉದ್ಯೋಗ ಸೃಷ್ಟಿಸುವುದು ಸಾಧ್ಯವಿಲ್ಲ. ಅಲ್ಲದೆ ಸ್ವಾತಂತ್ರö್ಯ ಹೋರಾಟದ ಸಮಯದಲ್ಲಿ ಪ್ರಚಲಿತವಿದ್ದ ಇನ್ನೊಂದು ಅಂಶ ಸಾಮಾಜಿಕ ಸಮಾನತೆ ಮತ್ತು ಅನಕ್ಷರತೆಯ ನಿರ್ಮೂಲನ. ಹಿಂದುಳಿದ ಮತ್ತು ಬಡವರ್ಗದ ಜನರಿಗೆ ಸಾಮಾಜಿಕ ನ್ಯಾಯವೊದಗಿಸುವಲ್ಲಿ (ಕೈಗಾರಿಕೀಕರಣದಲ್ಲಿ ಸರಕಾರ ಸಕ್ರಿಯವಾಗುವುದರ ಮೂಲಕ ಅರ್ಥಾತ್ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ) ಸರ್ಕಾರಿ ಸ್ವಾಮ್ಯದ ಉದ್ದಿಮೆರಂಗ ಪ್ರಮುಖ ಪಾತ್ರ ವಹಿಸಬೇಕಿತು.

ಮಿಶ್ರ ಆರ್ಥಿಕ ನೀತಿ ರೂಪಗೊಳ್ಳಲು ಅಂತಾರಾಷ್ಟಿçÃಯ ಮಟ್ಟದಲ್ಲಿ ಪ್ರಭಾವ ಬೀರಿದ ಅಂಶಗಳಲ್ಲಿ ಒಂದು, ಏಷ್ಯಾ ಖಂಡದಲ್ಲಿ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಲಿದ್ದ ರಷ್ಯದಂತಹ ದೇಶದಿಂದ ನಾವು ಸಂಪೂರ್ಣವಾಗಿ ಹೊರಗುಳಿಯಬೇಕಾದರೆ ಬಂಡವಾಳಶಾಹಿ ಶಕ್ತಿಗಳ ಮರ್ಜಿಗೆ ಮಣೆ ಹಾಕಲೇಬೇಕಾಗಿತ್ತು. ಆಗ ತಾನೇ ಸ್ವಾತಂತ್ರö್ಯ ಪಡೆದ ನಮಗೆ ಇಂತಹ ಅವಲಂಬನೆ ಬೇಕಾಗಿರಲಿಲ್ಲ. ಹಾಗಾಗಿ ರಷ್ಯದೊಂದಿಗೆ ಆರ್ಥಿಕ ಸಂಬAಧ ಸ್ಥಾಪಸಿಕೊಳ್ಳುವ ಮೂಲಕ ಒಂದು ರೀತಿಯ ಸಮತೋಲನ ಉಳಿಸಿಕೊಳ್ಳಲು ಪ್ರಯತ್ನಿಸಿದೆವು. ಎರಡನೆಯದಾಗಿ ಆರ್ಥಿಕ ಅಭಿವೃಧ್ಧಿಯ ಅನುಷ್ಟಾನ ಒಂದು ನಿರ್ದಿಷ್ಟ ಚೌಕಟ್ಟನ್ನು ಬಯಸುತ್ತದೆ. ಈಗಾಗಲೇ ಅಭಿವೃಧ್ಧಿ ಹೊಂದಿದ ಪಶ್ಚಿಮದ ರಾಷ್ಟçಗಳಲ್ಲಿ ಚಾಲ್ತಿಯಲ್ಲಿದ್ದ ಮಾದರಿಯ ಚೌಕಟ್ಟುಗಳನ್ನು ನಮ್ಮ ದೇಶದಲ್ಲಿಯೂ ಸ್ವೀಕರಿಸಲಾಯಿತು. ಇವೆಲ್ಲಕಿಂತಲೂ ಮುಖ್ಯವಾಗಿ ಸಮಾಜವಾದಿ ತತ್ವಗಳ ಬಗ್ಗೆ ಜವಾಹರಲಾಲ್ ನೆಹರೂರವರಿಗಿದ್ದ ಆರ್ಕರ್ಷಣೆಯೂ ಅಭಿವೃದ್ಧಿ ನೀತಿಯಲ್ಲಿ ರೂಪಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ ಒಟ್ಟಿನಲ್ಲಿ ಎರಡು ಪ್ರಮುಖ ವಿಚಾರಧಾರೆಗಳಿಂದ ಪ್ರೇರಿತವಾದ ಮಿಶ್ರ ಆರ್ಥಿಕ ನೀತಿಯನ್ನು ಪಂಚವಾರ್ಷಿಕ ಯೋಜನಾಧಾರಿತ ಕಾರ್ಯಕ್ರಮಗಳ ಮೂಲಕ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಯಿತು.

ಇಂದಿಗೆ ಸ್ವಾತಂತ್ರಾö್ಯ ನಂತರದ ೬೮ ವರ್ಷಗಳು ಸಂದಿವೆ, ೧೨ ಪಂಚವಾರ್ಷಿಕಯೋಜನೆಗಳು ಅನುಷ್ಟಾನಗೊಂಡಿವೆ, ಹಲವಾರು ಚುನಾಯಿತ ಸರ್ಕಾರಗಳು, ಸಮಾಜವಾದೀ ಸಮಾಜ ನಿರ್ಮಾಣ ಮಾಡಲು ಪ್ರಯತ್ನಗಳನ್ನು ನಡೆಸಿದೆ, ನಮ್ಮೆಲ್ಲ ಅಭಿವೃದ್ಧಿ ಪ್ರಯತ್ನಗಳು ನೀಡಿರಬಹುದಾದ ಪ್ರತಿಫಲದ ಬಗ್ಗೆ ಯೋಚಿಸಿದರೆ ಮೇಲ್ನೋಟಕ್ಕೆ ಬಹಳಷ್ಟು ಬದಲಾವಣೆಗಳು(ಸುಧಾರಣೆ) ಆದಂತೆ ಕಂಡು ಬಂದರು ವಾಸ್ತವಿಕವಾಗಿ ಇಂತಹ ಪ್ರತಿಫಲ ಕೆಲವೇ ವರ್ಗಗಳಲ್ಲಿ ಹರಿದು ಹೋಗಿ, ಕೆಳವರ್ಗದ ಜನರಂತೂ ಯಾವ ದೊಡ್ದ ಪ್ರಯೋಜನವನ್ನು ಪಡೆಯಲಿಲ್ಲವೆಂದೇ ಹೇಳಬಹುದು.ಹಾಗಾಗಿ ನಿರುದ್ಯೋಗ, ಬಡತನ, ಅನಕ್ಷರತೆ, ಮೂಲಭೂತ ಸೌಕರ್ಯಗಳಿಲ್ಲದ ಹಳ್ಳಿಗಳ ಸಮಸ್ಯೆಅಭಿವೃದ್ಧಿಯ ಹೆಸರಲ್ಲಿ ಮೂಲೆಗುಂಪಾಗುತ್ತಿರುವ ಜನರ ಸಂಖ್ಯೆ ಮತ್ತು ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿರುವ ಪರಿಸರ ಸಂಬAಧಿ ಪ್ರಶ್ನೆಗಳು ಪ್ರಸ್ತುತವಾಗಿವೆ.ಮತ್ತು ಇಂತಹ ಸಮಸ್ಯೆಗಳಿಗೆಲ್ಲ ಒಂದು ಪರಿಹಾರ ಕಂಡು ಹಿಡಿಯಬೇಕಾದ್ದು ಅಗತ್ಯವಾಗಿದೆ. ನಮ್ಮ ಮುಂದಿರುವ ಇಂತಹ ಸವಾಲುಗಳಿಗೆ ‘ಅಭಿವೃದ್ಧಿಯ’ ಮಿತಿಯೊಳಗೆ ಉತ್ತರ ಹುಡುಕಿದರೆ ಸೂಕ್ತ ಉತ್ತರ ಯಾ ಪರಿಹಾರ ಸಿಗುವುದು ಕಷ್ಟ. ಯಾಕೆಂದರೆ ಒಂದು ಸಮಾಜದಲ್ಲಿ ಆರ್ಥಿಕ ಯೋಜನೆಗಳು ಕೇವಲ ಅರ್ಥಶಾಸ್ತಿçÃಯ ಚೌಕಟ್ಟಿನಲ್ಲಿ ಮಾತ್ರ ಅನುಷ್ಠಾನಗೊಳ್ಳುವುದಿಲ್ಲ. ಬದಲಿಗೆ ಸಾಮಾಜಿಕ, ರಾಜನೈತಿಕ ಪ್ರಭಾವಕ್ಕೊಳಪಟ್ಟು ಅನುಷ್ಟಾನಗೊಳ್ಳುತ್ತವೆ. ಈ ಕಾರಣದಿಂದಾಗಿ ಒಂದು ನಿರ್ದಿಷ್ಟ ಆರ್ಥಿಕ ನೀತಿಯ ಪರಿಣಾಮ ಬೇರೆ ಬೇರೆ ಸಾಮಾಜಕ ಮತ್ತು ರಾಜಕೀಯ ಸ್ಥಿತಿಗಳಲ್ಲಿ ವಿಭಿನ್ನ ರೀತಿಯ ಪರಿಣಾಮಗಳನ್ನು ಬೀರುತ್ತಿದೆ. ಇದೇ ಕಾರಣದಿಂದಾಗಿ ಅಮೇರಿಕಕ್ಕೆ ಯಾ ಜಪಾನಿಗೆ ಸೂಕ್ತವೆನಿಸುವ ಆರ್ಥಿಕ ನೀತಿ ಭಾರತದಲ್ಲಿ ಸೂಕ್ತವಾಗಲೇ ಬೇಕಾಗಿಲ್ಲ. ಸಂಕ್ಷಿಪ್ತವಾಗಿ ಹೇಳುವುದಿದ್ದರೆ ನಮ್ಮ ಆರ್ಥಿಕ ವ್ಯವಸ್ಥೆಯ ನೀರಸ ಪರಿಣಾಮಗಳಿಗೆ ಸಾಮಾಜಿಕ ಮತ್ತು ರಾಜನೈತಿಕ ಹಿನ್ನಲೆಯಲ್ಲೂ ಸೂಕ್ತ ಉತ್ತರ ಹುಡುಕುವ ಕಾರ್ಯ ನಡೆಯ ಬೇಕಾಗಿದೆ. 

ಆರ್ಥಿಕ ಅಭಿವೃದ್ಧಿಗೆ ಸಂಬAಧಿಸಿದ ನೀತಿ ರೂಪಗೊಳ್ಳುವಲ್ಲಿ ರಾಷ್ಟçಮಟ್ಟದಲ್ಲಿ ಉದ್ದಿಮೆದಾರರು ಮತ್ತು ವ್ಯಾಪಾರಿ ವರ್ಗ ತನ್ನ ಹಿತಾಶಕ್ತಿಯನ್ನು ಕಾಪಾಡಲು ಸದಾ ತುದಿಗಾಲ ಮೇಲೆ ನಿಂತಿರುತ್ತದೆ. ಈ ಲಾಬಿಯ ಆಶಯದಂತೆ ಆಮದು ಕಡಿತಗೊಳಿಸುವುದು, ದೇಶಿಯ ಮಾರುಕಟ್ಟೆಗೆ ಶಾಸನಾತ್ಮಕ ಕ್ರಮಗಳ ಮೂಲಕ ರಕ್ಷಣೆ ಒದಗಿಸುವುದು, ಅರ್ಥವ್ಯವಸ್ಥೆಯ ಸ್ವರೂಪಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ಬೃಹತ್ ಉದ್ಯಮಗಳಲ್ಲಿ ಸರಕಾರ ಬಂಡವಾಳ ಹೂಡುವಿಕೆ, ಮುಂತಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ. ಖಾಸಗೀವಲಯದ ಕೈಗಾರಿಕೆಗಳ ಬೆಳವಣಿಗೆಯನ್ನು ಮತ್ತು ಕಾರ್ಯನಿರ್ವಹಣೆಯನ್ನು ಕಂಡು ಶಾಸನಗಳನ್ನು ರೂಪಿಸಲಾಗಿತ್ತಾದರೂ ಅಂತಹ ಕ್ರಮಗಳ ಸರಿಯಾದ ಅನುಷ್ಟಾನ ಅಪರೂಪವೆಂದೇ ಹೇಳಬೇಕು. ಖಾಸಗೀ ಉದ್ಧಿಮೆಗಳಲ್ಲಿ ಸಾರ್ವಜನಿಕ ರಂಗದ ಹಣಕಾಸು ಸಂಸ್ಥೆಗಳು ಬೃಹತ್ ಪ್ರಮಾಣದ ಶೇರು ಬಂಡವಾಳ ಹೊಂದಿದ್ದರೂ ಅವುಗಳನ್ನು ರಾಷ್ಟಿçÃಯ ಹಿತಾಸಕ್ತಿಗಳಿಗನುಸಾರವಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಸರಕಾರಗಳು ಯಶಸ್ವಿಯಾಗಲಿಲ್ಲ. ಮಾತ್ರವಲ್ಲ ಖಾಸಗೀ ವಲಯದಲ್ಲಿ ನಷ್ಟ ಅನುಭವಿಸುವ ಯಾ ರೋಗಗ್ರಸ್ಥ ಉದ್ಧಿಮೆಗಳನ್ನು ಸರಕಾರದ ಮಡಿಲಿಗೆಸೆದು ಉದ್ಯಮ ಪತಿಗಳು ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪರಿಪಾಠವೂ ನಮ್ಮಲ್ಲಿದೆ. ಒಟ್ಟಿನಲ್ಲಿ ಕೈಗಾರಿಕಾ ವಲಯದಲ್ಲಿ ಖಾಸಗೀ ಉದ್ಧಿಮೆಗಳು ಸ್ವಂತ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ಬಂಡವಾಳಶಾಹಿ ಬೆಳವಣಿಗೆಗೆ ಸಹಕರಿಸಿದುವು. ಉದ್ಧಿಮೆರಂಗದ ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ ಸಣ್ಣ ಉದ್ದಿಮೆಗಳ ಸಂಖ್ಯೆಯಲ್ಲಿ ಆದಂತಹ ಹೆಚ್ಚಳ. ಮೇಲ್ನೋಟಕ್ಕೆ ಅಭಿವೃಧ್ದಿಯ ದೃಷ್ಟಿಯಿಂದ ಇದು ಒಂದು ಒಳ್ಳೆಯ ಬೆಳವಣಿಗೆ ಎನಿಸಿದರೂ ವಾಸ್ತವವಾಗಿ ಹಾಗಿಲ್ಲ. ಕಾರಣ ಇಂತಹ ಸಣ್ಣ ಉದ್ದಿಮೆಗಳಲ್ಲಿ ಗಣನೀಯ ಪ್ರಮಾಣದ ಉದ್ದಿಮೆಗಳು ನವ ಉದ್ಯಮಪತಿಗಳಿಂದ ಅಥವಾ ಉದ್ಯಮ ಸಂಪರ್ಕವಿಲ್ಲದ ಜನರಿಂದ ಪ್ರಾರಂಭಿಸಿದAತಹ ಉದ್ದಿಮೆಗಳಾಗಿರದೆ, ಬೃಹತ್ ಕೈಗಾರಿಕೆಗಳ ಉಪಯೋಗಕ್ಕಾಗಿ ಅಸ್ತಿತ್ವಕ್ಕೆ ಬಂದವುಗಳೂ ಆಗಿವೆ. ಕಾರ್ಮಿಕ ಕಾನೂನಿನಿಂದ ವಿನಾಯಿತಿ ಸುಂಕ ಮತ್ತು ತೆರಿಗೆ ವಿನಾಯಿತಿ, ಸಹಾಯಧನ ಮುಂತಾದ ಸವಲತ್ತುಗಳನ್ನುಪಯೋಗಿಸಿಕೊಳ್ಳಲು ಹುಟ್ಟಿಕೊಂಡ ನಾಮಕಾವಸ್ತೆ ಉದ್ದಿಮೆಗಳಾಗಿರುವುದನ್ನು ಕಾಣಬಹುದಾಗಿದೆ. ಹಾಗಾಗಿ ಸಣ್ಣ ಉದ್ಯಮ ವಲಯದ ಕಾರ್ಯ ನಿರ್ವಹಣೆಯ ಕುರಿತು ಸಂಪೂರ್ಣವಾಗಿ ಸಮಾಧಾನ ಪಡುವ ಹಾಗಿಲ್ಲ.

ನಮ್ಮ ಅರ್ಥ ವ್ಯವಸ್ಥೆಯಲ್ಲಿ ಪ್ರಬಲವಾದ ಇನ್ನೊಂದು ವರ್ಗ ಶ್ರೀಮಂತ ಭೂಮಾಲಿಕದ್ದು, ಕೃಷಿ ಪ್ರಧಾನವಾದ ದೇಶದಲ್ಲಿ ಬಹುಪಾಲು ಜನ ಜೀವನಾಧಾರಕ್ಕಾಗಿ ಕೃಷಿಯನ್ನವಲಂಬಿಸಿದ್ದಾರೆ. ಆದರೆ ಭೂಮಿಯ ಒಡೆತನ ಮಾತ್ರ ಕೆಲವೇ ಜನರಲ್ಲಿ ಅಥವಾ ಕೆಲವೇ ವರ್ಗದ ಜನರಲ್ಲಿ ಕೇಂದ್ರಿಕೃತವಾಗಿರುವುದನ್ನು ಕಾಣಬಹುದು. ಹೀಗೆ ಭೂಮಾಲಿಕರಾಗಿದ್ದು, ಗೇಣಿ ವಸೂಲಿ ಮಾಡಿ ಜೀವನ ನಡೆಸುತ್ತಿದ್ದವರಿಗೆ ಬಂಡವಾಳ ಸಂಚಯನ ಸಾಧ್ಯವಾಗಿ ಅಭಿವೃದ್ಧಿಯ ಹಂತದಲ್ಲಿ ಸೇವಾರಂಗ, ಆಡಳಿತಕ್ಷೇತ್ರ ರಾಜಕೀಯ ಮುಂತಾದೆಡೆ ಸೃಷ್ಟಿಯಾದ ಹೊಸ ಹೊಸ ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಸುಲಭ ಸಾಧ್ಯವಾಯಿತು. ಸಣ್ಣ ಹಿಡುವಳಿದಾರರಿಗೆ ಮತ್ತು ಗೇಣಿದಾರರಿಗೆ ಭೂವಸೂದೆಯಂತಹ ಪ್ರಗತಿಪರ ಕಾರ್ಯಕ್ರಮಗಳು ಕೊಂಚ ಮಟ್ಟಿಗೆ ಪ್ರಯೋಜನವುಂಟು ಮಾಡಿವೆ ಎನ್ನವುದನ್ನು ಒಪ್ಪಬಹುದು. ಕೃಷಿಕ್ಷೇತ್ರದ ಪ್ರಗತಿಗೆ ಸರಕಾರ ಕೊಡ ಮಾಡಿದ ಸವಲತ್ತುಗಳು ಸಣ್ಣ ರೈತರಿಗಿಂತಲೂ ದೊಡ್ಡ ಜಮೀನುದಾರರಿಗೆ ದೊಡ್ಡ ರೀತಿಯ ಪ್ರಯೋಜನವುಂಟು ಮಾಡಿದವು. ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಮತ್ತು ಹೆಚ್ಚು ಪ್ರಮಾಣದಲ್ಲಿ ರಸಗೊಬ್ಬರ ಬಳಕೆಯಾಗುತ್ತಾ ಬಂದಾಗ ದೊಡ್ಡ ರೈತರು ಆರ್ಥಿಕವಾಗಿ ಹೆಚ್ಚು ಪ್ರಯೋಜನ ಪಡೆಯಲಾರಂಭಿಸಿದರು. ಅಲ್ಲದೆ ಕೃಷಿ ಕ್ಷೇತ್ರದಲ್ಲಿ ಯಾಂತ್ರಿಕತೆಗೆ ದೊಡ್ಡ ಹಿಡಿವಳಿಯಿದ್ದಷ್ಟು ಅಧಿಕ ಲಾಭವಿದ್ದುದರಿಂದ ಶ್ರೀಮಂತರಾದ ಭೂಮಾಲಿಕರು ಸಣ್ಣ ರೈತರ ಜಮೀನುಗಳನ್ನು ಆಕರ್ಷಕ ಬೆಲೆಗೆ ಕೊಂಡುಕೊಳ್ಳಲು ಶುರುಮಾಡಿದರು. ಹೀಗಾಗಿ ಆರ್ಥಿಕ ಕಾರಣಗಳಿಂದಾಗಿ ಸಣ್ಣ ಹಿಡುವಳಿದಾರರು ತಮ್ಮ ಜಮೀನುಗಳನ್ನು ಶ್ರೀಮಂತ ರೈತರಿಗೆ ಮಾರಿ ಪಟ್ಟಣಕ್ಕೆ ವಲಸೆ ಹೋದರು ಅಥವಾ ಕೃಷಿ ಕಾರ್ಮಿಕರಾಗಿ ಸೇರಿ ಕೊಂಡರು. ೧೯೪೦-೬೦ರ ಅವಧಿಯಲ್ಲಿ ನಾರ್ಮನ್ ಬೋರ್‌ಲಾಗ್ ಇವರ ಮುಂದಾಳುತ್ವದಲ್ಲಿ ನಡೆದ ಸಂಶೋಧನೆಗಳ ಫಲವಾಗಿ ಕೃಷಿಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದುವು. ಹೊಸತಳಿಯ ಮೂಲಕ ಆಹಾರ ಧಾನ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಜನರನ್ನು ಹಸಿವಿನಿಂದ ಕಂಗೆಡದAತೆ ಮಾಡಲಾಯಿತೆಂದು ಹೇಳಲಾಗುತ್ತದೆ. ಇಂತಹ ಒಂದು ಪರಿವರ್ತನಾ ಕ್ರಮವನ್ನು ‘ಹಸಿರುಕ್ರಾಂತಿ’ ಎಂದು ೧೯೬೮ರಲ್ಲಿ ಮೊತ್ತ ಮೊದಲಿಗೆ ಸಂಭೋಧಿಸಿದವನು ‘ಅಂತಾರಾಷ್ಟೀಯ ಅಭಿವೃದ್ಧಿಗಾಗಿ ಅಮೇರಿಕಾದ ಸಂಸ್ಥೆ’ (ಯುನೈಟೆಡ್ ಸ್ಟೇಟ್ ಏಜನ್ಸಿ ಫಾರ್ ಇಂಟರ್ ನ್ಯಾಷನಲ್ ಡೆವಲಪ್‌ಮೆಂಟ್) ಯ ನಿರ್ದೇಶಕ ವಿಲಿಯಂ ಗಾಡ್. ಅಧಿಕ ಇಳುವರಿಯ ತಳಿಗಳನ್ನು ಅಭಿವೃದ್ಧಿ ಶೀಲ ದೇಶಗಳು ಬೆಳೆಸುವಂತೆ ಪ್ರೋತ್ಸಾಹಿಸುವ ಮೂಲ, ಹಸಿವಿನ ಪ್ರಶ್ನೆಗೆ ಸಮರ್ಥ ಉತ್ತರ ಕಂಡು ಹಿಡಿಯಲಾಯಿತು. ಈ ಹಸಿರು ಕ್ರಾಂತಿಯ ಮೂಲಕ ದೇಶೀಯ ತಳಿಗಳ ಅವಸಾನವಾಗಿ, ಕೃಷಿಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣ ಗರಿಷ್ಟವಾಯಿತೆನ್ನುವ ಟೀಕೆಯೂ ಇದೆ. ಈ ಕಾರಣದಿಂದ ರಾಸಾಯನಿಕ ಪದಾರ್ಥ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಅಧಿಕ ಪ್ರಮಾಣ ಬಳಸುವುದು ಅನಿವಾರ್ಯವಾಗಿ ಬಡ ಮತ್ತು ಸಣ್ಣ ರೈತರು ತೊಂದರೆಗೆ ಒಳಗಾದರ್ ಎನ್ನುವ ವಾದವೂ ಇದೆ. ಇನ್ನು ಕೃಷಿಯನ್ನವಲಂಭಿಸಿದ ಕೂಲಿಕಾರ್ಮಿಕರು ಮತ್ತು ಕುಶಲಕರ್ಮಿಗಳು ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಹೆಚ್ಚಾಗುತ್ತಾ ಬಂದAತೆ ಕೂಲಿ ಕಾರ್ಮಿಕರಾದರು ಅಥವಾ ಪಟ್ಟಣಕ್ಕೆ ವಲಸೆ ಹೋಗಲಾರಂಭಿಸಿದರು. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಸರಕಾರ ನೀಡಿದ ಸವಲತ್ತುಗಳು ಆರ್ಥಿಕವಾಗಿ ಸಶಕ್ತರಾಗಿದ್ದ ರೈತರಿಗೆ ಉಪಯುಕ್ತವಾಯಿತು. ಕೃಷಿಯನ್ನವಲಂಭಿಸಿದ ಕೂಲಿ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಶ್ರೀಮಂತ ರೈತರೊಂದಿಗೆ ಸಾಲಿಗ ಮಾಲಿಕ ಸಂಬAಧ ಮಾತ್ರ ಹೊಂದಿದದು ಅವರೊಂದಿಗೆ ಹೊಂದಿಕೊAಡು ಯಾ ಅವರು ಮರ್ಜಿಗನು ಗುಣವಾಗಿ ಬದುಕುತ್ತಿದ್ದಾರೆ. ಹಾಗಾಗಿ ಮೇಲ್ನೋಟಕ್ಕೆ ಕಂಡು ಬರುವ ಕೃಷಿಕರ ಸಂಖ್ಯೆ ಅಪಾರವೆನಿಸಿದರೂ ಭೂಮಾಲಿಕತ್ವ ಹೊಂದಿದ್ದು ಇದರಿಂದ ಪ್ರಯೋಜನ ಪಡೆಯುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಿದೆ. ಬಹು ಸಂಖ್ಯಾತರಾಗಿರುವ ಕೃಷಿ ಕಾರ್ಮಿಕರಾಗಲೀ, ಕೂಲಿಕಾರ್ಮಿಕರಾಗಲೀ ಸಂಘಟಿತರಾಗಿಲ್ಲ. ಇದಕ್ಕೆ ಪ್ರಮುಖ ಕಾರಣ, ಈ ಜನವರ್ಗ ತಮ್ಮೆಲ್ಲ ಅವಶ್ಯಕತೆಗಳಿಗೆ ಶ್ರೀಮಂತ ಭೂಮಾಲಿಕರನ್ನೇ ಅವಲಂಭಿಸಿಕೊAಡಿರುವುದು, ಅನಕ್ಷರತೆ, ಸಾಮಾಜಿಕ ಅಸಮಾನತೆಯೆ ಮುಂತಾದವುಗಳಾಗಿವೆ. ಹಾಗಾಗಿ ಬಹುಸಂಖ್ಯೆಯಲ್ಲಿದ್ದರೂ ಇವರು ಸಾಮಾಜಿಕವಾಗಿ ಯಾ ರಾಜಕೀಯವಾಗಿ ಸಂಘಟಿತ ಹೋರಾಟ ನಡೆಸಲು ಶಕ್ತರಾಗಿಲ್ಲ.

ದೇಶದ ಬಹಳಷ್ಟು ಭಾಗಗಳಲ್ಲಿ ಭೂಮಾಲಿಕರು ಯಾ ದೊಡ್ಡ ಹಿಡುವಳಿದಾರರು ಪ್ರಬಲರಾಗುತ್ತಾ ಬಂದ ಕಾರಣದಿಂದಾಗಿ ಗ್ರಾಮೀಣಶಾಹಿ ರೂಪಗೊಳ್ಳತೊಡಗಿತು. ಬೃಹತ್ ಪ್ರಮಾಣದ ನೀರಾವರಿ ಸೌಲಭ್ಯ, ಅಧಿಕ ಇಳವರಿಯ ತಳಿಗಳು ಕೃಷಿಯ ವಾಣಿಜ್ಯೀಕರಣ ಮುಂತಾದ ಕ್ರಮಗಳಿಂದ ಕೃಷಿ ಕ್ಷೇತ್ರದಲ್ಲೂ ಬಂಡವಾಳಹೀ ಬೆಳವಣಿಗೆ ಸುಲಭವಾಯ್ತು, ಹಾಗಾಗಿ ಈ ವರ್ಗ ಕೃಷಿಯಲ್ಲದೇ ಲೇವಾದೇವಿ, ಸಾರಿಗೆ, ವ್ಯಾಪಾರ ಮುಂತಾದ ಕ್ಷೇತ್ರಗಳಿಗೂ ತಮ್ಮ ಚಟುವಟಿಕೆಯನ್ನು ವಿಸ್ತರಿಸುತ್ತಾ ಬಂದಿತು. ನಿಧಾನವಾಗಿ ಹೂಡಿಕೆಯ ಮೂಲಕ ಆಧುನಿಕ ಉದ್ದಿಮೆ ರಂಗಗಳಿಗೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುತ್ತಾ ಬಂದ ಒಂದು ಪ್ರಭಾವೀ ಗುಂಪಾಗಿ ದೇಶದ ರಾಜಕೀಯದ ಮೇಲೆಯೂ ಪ್ರಭಾವ ಬೀರುವಷ್ಟು ಸಮರ್ಥರಾಗುತ್ತಾ ಬಂದರು. ದೇಶದ ಬಹುಸಂಖ್ಯಾತ ಜನರು ಹಳ್ಳಿಯಲ್ಲಿದ್ದು, ಇಂತಹ ಶ್ರೀಮಂತ ಭೂಮಾಲಿಕರ ಪ್ರಭಾವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕವಾಗುತ್ತಾ ಹೋಯಿತು. ಇಂತಹ ಭೂಮಾಲಿಕರು ಸಾಮಾಜಿಕ ಅಸಮಾನತೆಗಳಿದ್ದಾಗಲೂ ಎಲ್ಲ ವರ್ಗ ಹಿತದ ಪ್ರಶ್ನೆಗೆ ಬಂದಾಗ ಈ ವ್ಯತ್ಯಾಸಗಳನ್ನು ಬದಿಗಿರಿಸಿ ಒಂದಾಗುತ್ತಾರೆ. ಹೀಗೆ ಉದ್ಯಮವಲಯ ಮತ್ತು ಕೃಷಿ ವಲಯದಲ್ಲಿ ಒಂದು ಸಣ್ಣ ಶ್ರೀಮಂತ ವರ್ಗದ ಹಿಡಿತ ದೇಶದ ಆರ್ಥಿಕ ಮತ್ತು ರಾಜಕೀಯದ ಮೇಲೆ ಬಲವಾಗುತ್ತ ಹೋಯಿತು.

ಈ ಮೇಲಿನ ಎರಡು ಪ್ರಮುಖ ವರ್ಗಗಳನ್ನು ಹೊರತು ಪಡಿಸಿದರೆ ನಮ್ಮ ಅರ್ಥ ವ್ಯವಸ್ಥೆಯಲ್ಲಿ ಪ್ರಭಾವಿಯಾಗಿರುವ ಇನ್ನೊಂದು ವರ್ಗ ಆಡಳಿತಶಾಹೀ ಅಥವಾ ನೌಕರಶಾಹೀ. ಸರ್ಕಾರದ ಕಾರ್ಯಕ್ರಮಗಳೆಲ್ಲ ಅನುಷ್ಠಾನವಾಗುವಲ್ಲಿ ಈ ನೌಕರಶಾಹಿಯ ಪಾತ್ರ ಬಹಳ ಪ್ರಮುಖವಾಗಿದ್ದು ಸರ್ಕಾರಗಳು ಬದಲಾದರೂ ನೌಕರಶಾಹೀ ಮಾತ್ರ ಖಾಯಂ ಆಗಿ ಮುಂದುವರಿಯುತ್ತಿದ್ದು ತನ್ನದೇ ಆದ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ನೌಕರಿಶಾಹೀ ವ್ಯವಸ್ಥೆಯೊಳಗೆ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಭಿನ್ನತೆಗಳಿವೆಯಾದರೂ ಸಂಘಟಿತ ವರ್ಗವಾಗಿರುವ ಕಾರಣ ಸರಕಾರದ ಮೇಲೆ ಪ್ರಭಾವ ಬೀರಿಯೋ ಒತ್ತಡ ಹೇರಿಯೋ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಂಡು ಮುಂದುವರಿಯುತ್ತಲೇ ಇದೆ.

ಮೇಲೆ ಚರ್ಚಿಸಿದ ವಿವರಗಳನ್ನು ಸರಿಯೆಂದೊಪ್ಪಿಕೊAಡರೆ ಹಾಗಾದರೆ ಇದುವರೆಗೆ ನಾವೇನೂ ಪ್ರಗತಿ ಸಾಧಿಸಿಲ್ಲವೇ? ಎನ್ನುವ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಖಂಡಿತವಾಗಿಯೂ ನಾವು ನಮ್ಮ ಅಭಿವೃದ್ದಿ ಕಾರ್ಯಗಳಲ್ಲಿ ಯಶಸ್ಸು ಗಳಿಸಿದ್ದೇವೆ. ಆದರೆ ಈ ಯಶಸ್ಸಿನ ಫಲ, ಪ್ರಯತ್ನದಲ್ಲಿ ಪಾಲ್ಗೊಂಡ ಎಲ್ಲರಿಗೂ ಸರಿಯಾಗಿ ಲಭಿಸಿಲ್ಲ. ಬದಲಾಗಿ ಕೆಲವೇ ಜನರಲ್ಲಿ ಹಂಚಿಹೋಗಿದೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಅರ್ಥವ್ಯವಸ್ಥೆಯಲ್ಲಿ ಹೆಚ್ಚು ಅಧಿಕಾರ ಹೊಂದಿರುವವರು ಅಭಿವೃದ್ಧಿ ಕಾರ್ಯ ಕ್ರಮಗಳು ನೀಡಿದ ಪ್ರತಿಫಲದಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆದಿರುವುದನ್ನು ಕಾಣಬಹುದು. ಸಂಘಟಿತ ವರ್ಗಗಳು ತಮ್ಮ ಸಂಘಟನಾ ಶಕ್ತಿಯಿಂದ ಬೇಡಿಕೆಗಳ ಬಗ್ಗೆ ಬಂಡವಾಳ ಶಾಹಿಯ ಮೇಲೆ ಒತ್ತಡ ಹೇರಲು ಶಕ್ತವಾಗಿರುವುದರಿಂದ ಅವರೂ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಬಹುಮಟ್ಟಿಗೆ ಯಶಸ್ವಿಯಾಗಿದ್ದಾರೆ. ಆದರೆ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಮಾತ್ರ ಇಂತಹ ತನ್ನ ಸ್ಥಿತಿಯಲ್ಲಿ ಸುಧಾರಣೆ ತರಲು ಸಾಧ್ಯವಾಗಿಲ್ಲ. ಕಾರ್ಮಿಕರ ವರ್ಗ ತಮ್ಮ ಶ್ರಮ ಸಂಪತ್ತನ್ನು ಉಳಿಸಿಕೊಂಡು ಅದನ್ನು ಬಂಡವಾಳಶಾಹಿಯ ಬೆಳವಣಿಗೆಯಲ್ಲಿ ವಿನಯೋಗಿಸುವ ಹಾಗೆ ನೋಡಿಕೊಳ್ಳಬೇಕಾದರೆ, ಅವರನ್ನು ಕನಿಷ್ಠ ಈಗಿರುವ ಸ್ಥಿತಿಯಲ್ಲಾದರೂ ಉಳಿಸಿಕೊಂಡಿರಬೇಕಾಗುತ್ತದೆ. ಹಾಗಾಗಿ ಉದ್ದಿಮೆರಂಗದಿAದ ತಮಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಪ್ರಯೋಜನವನ್ನು ಪಡೆಯದೇ ಹೋದ ಸಮುದಾಯಕ್ಕೆ ಸರಕಾರದ ಜನೋಪಯೋಗಿ ನೀತಿಗಳ ಮೂಲಕ ಬದುಕಿನ ಕನಿಷ್ಠ ಅವಶ್ಯಕತೆಗಳು ದೊರೆಯುವಂತೆ ನೋಡಿಕೊಳ್ಳುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಕಾರ್ಮಿಕ ವರ್ಗವಿಲ್ಲದೆ ಬಂಡವಾಳಶಾಹಿ ಉಳಿದು ಬೆಳೆಯುವುದಿಲ್ಲ ಎನ್ನುವುದು, ಮೇಲಾಗಿ ಕನಿಷ್ಠ ಅವಶ್ಯಕತೆಗಳಿಗೂ ಕುತ್ತು ಬರುವ ಸಂದರ್ಭ ಸೃಷ್ಟಿಯಾದಾಗ ಅಸ್ತಿತ್ವವುಳಿಸಿಕೊಳ್ಳಲು ಕಾರ್ಮಿಕ ವರ್ಗ ಹೋರಾಡಲೇ ಬೇಕಾದ ಅನಿವಾರ್ಯ ಸ್ಥಿತಿ ನಿಮಾಣವಾಗುತ್ತದೆ. ದೇಶದಲ್ಲಿ ಬಂಡವಾಳ ಶಾಹಿಯ ಪ್ರಭಾವದಲ್ಲಿರುವ ಸರಕಾರ ಆಗಿಂದಾಗ್ಗೆ ಹಿಂದುಳಿದ ವರ್ಗ, ಕೃಷಿಕಾರ್ಮಿಕರಿಗೆ ಮತ್ತಿತರ ಅಸಂಘಟಿತ ವರ್ಗದ ಜನರಿಗೆ ನೀಡುತ್ತಾ ಬಂದ ಸವಲತ್ತುಗಳಿಗೆ ಕಾರಣ ಸಮಾನತೆಯನ್ನು ಸಾಧಿಸುವುದಕ್ಕಿಂತಲೂ ಅಧಿಕವಾಗಿ ಅವರ ಶ್ರಮಿಕ ಸಂಪತ್ತನ್ನು ಉಳಿಸಿಕೊಂಡು ಒಲಿಸಿಕೊಂಡು ಒಂದು ವ್ಯವಸ್ಥೆಯನ್ನು ಮುಂದುವರಿಸಿಕೊAಡು ಹೋಗುವ ಉದ್ದೇಶವಾಗಿದೆ ಎನ್ನಬಹುದು.

೧೯೪೭ರಿಂದ ಈ ವರೆಗೆ ನಾವು ಪಾಲಿಸುತ್ತಾ ಬಂದ ಆರ್ಥಿಕ ಅಭಿವೃದ್ಧಿ ನೀತಿಗಳಲ್ಲಿ ವ್ಯಾಪಕಮಟ್ಟದ ಬದಲಾವಣೆಗಳಾಗಿವೆ. ಮಿಶ್ರ ಆರ್ಥಿಕ ನೀತಿಯ ಬದಲಾಗಿ ಮುಕ್ತ ಮಾರುಕಟ್ಟೆಯೆಡೆಗೆ ಆಕರ್ಷಿತರಾಗಿದ್ದೇವೆ. ಆರ್ಥಿಕ ಉದಾರೀಕರಣ, ಜಾಗರಿಕರಣ, ಖಾಸಗೀಕರಣ ಮುಂತಾದ ವಿಷಯಗಳು ಅಭಿವೃದ್ಧಿ ಸಾಧಿಸಲು ಅನಿವಾರ್ಯವೆನ್ನುವ ಮಟ್ಟಿಗೆ ಚಲಾವಣೆಯಲ್ಲಿವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಇಂತಹ ವ್ಯಾಪಕ ಬದಲಾವಣೆಗಳಿಗೆ ಮೂಲಭೂತ ಕಾರಣಗಳೇನು? ನಿಜವಾಗಿಯೂ ಉದಾರೀಕರಣ ನೀತಿ ದೇಶದ ಹಿತದೃಷ್ಟಿಯಿಂದ ಅನುಷ್ಠಾನಗೊಳಿಸಲ್ಪಡುತ್ತಿದೆಯೇ ಅಥವಾ ೯೦ರ ದಶಕದವರೆಗಿನ ನೀತಿಗಳಲ್ಲಿನ ಲೋಪ ದೋಷಗಳು ಇಂತಹ ಬದಲಾವಣೆಯನ್ನು ಅನಿವಾರ್ಯವಾಗಿಸಿವೆಯೇ? ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ನಾವು ನಮ್ಮ ಅರ್ಥ ವ್ಯವಸ್ಥೆಗೆ ಸಂಬAಧಿಸಿದ ಕೆಲವೊಂದು ವಿವರಗಳನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ. ಅದರಂತೆ ಸ್ವಾತಂತ್ರ‍್ಯಾ ನಂತರ ನಮ್ಮ ಅಭಿವೃದ್ಧಿ ನೀತಿ ವಿಮರ್ಶೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಕುರಿತ ಸರಕಾರದ ಧೋರಣೆ, ಅಭಿವೃದ್ಧಿ ನೀತಿಯ ಮೇಲೆ ಉಂಟಾಗಿರಬಹುದಾದ ರಾಜಕೀಯ ಪರಿಣಾಮಗಳೇನು ಮುಂತಾದ ವಿಚಾರಗಳನ್ನು ತಿಳಿಯುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

ಸ್ವಾತಂತ್ರಾö್ಯ ನಂತರ ಆರ್ಥಿಕ ಅಭಿವೃದ್ದಿಯ ಗತಿ ಮತ್ತು ವೇಗವನ್ನು ಗಮನಿಸಿದರೆ ನಮಗೆ ಸ್ಪಷ್ಟವಾಗುವ ಒಂದು ಅಂಶ ೧೯೪೭ರಿಂದ ೧೯೮೦ರ ವರೆಗೆ ಮಂದಗತಿಯಲ್ಲಿದ್ದ ಬೆಳವಣಿಗೆ ೧೯೮೦-೯೦ರ ಅವಧಿ ಚುರುಕುಗೊಂಡಿತು. ೧೯೮೦-೨೦೧೦ರ ಅವಧಿಯಲ್ಲಿ ದಾಖಲಾದ ಪ್ರಮುಖ ಸಾಧನೆಗಳೆಂದರೆ, ಮೊದಲನೆಯದಾಗಿ ಆಹಾರ ಧ್ಯಾನ್ಯಗಳ ಆಮದು ನಿಂತು ಹೋದದ್ದು, ಎರಡನೆಯದಾಗಿ ಕೈಗಾರಿಕಾ ರಂಗದಲ್ಲಿ ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಮೂರನೆಯದಾಗಿ ಸೇವಾರಂಗದ ಕಾರ್ಯ ನಿರ್ವಹಣೆಯಲ್ಲಿ ಅಭಿವೃದ್ಧಿ ೧೯೮೦-೯೧ಅವಧಿಯಲ್ಲಿ ಇಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಅರ್ಥ ವ್ಯವಸ್ಥೆ ನಂತರ ಏಕಾಏಕಿ ಸಂಕಷ್ಟಕ್ಕೆ ಗುರಿಯಾಗಲು ಕಾರಣವೇನು ಅನ್ನುವುದು ಮಹತ್ವದ ಪ್ರಶ್ನೆಯಾಗುತ್ತದೆ. ಇದಕ್ಕೆ ಹಲವಾರು ಕಾರಣಗಳನ್ನು ಆರೋಪಿಸಲಾಗುತ್ತಿದೆ ಮತ್ತು ಆರ್ಥಿಕ ಚಿಂತರಲ್ಲಿಯೂ ಈ ವಿಚಾರದ ಕುರಿತಂತೆ ಅಭಿಪ್ರಾಯ ಭೇಧಗಳಿವೆ. ಒಂದು ಗುಂಪಿನ ತಜ್ಞರ ಅಭಿಮತದಂತೆ ಇಂತಹ ತೊಂದರೆಗೆ ಕಾರಣ ಐವತ್ತರ ದಶಕದಿಂದಲೂ ನಾವು ಆರ್ಥಿಕ ಅಭಿವೃದ್ಧಿಯಲ್ಲಿ ಅನುಸರಿಸಿದ ನೀತಿಗಳು ಮತ್ತು ವ್ಯೂಹಗಳಲ್ಲಿನ ದೋಷಗಳು. ಇನ್ನು ಕೆಲವರ ಅಭಿಪ್ರಾಯದಂತೆ ೧೯೮೦ರ ದಶಕದಲ್ಲಿ ಸರ್ಕಾರ ಅರ್ಥವ್ಯವಸ್ಥೆಯನ್ನು  ಬೇಕಾಬಿಟ್ಟಿಯಾಗಿ ನಡೆಸಿಕೊಂಡಿರುವುದೇ ಆಗಿದೆ. ಇನ್ನು ಒಂದು ಅಭಿಪ್ರಾಯದ ಪ್ರಕಾರ ನಮ್ಮ ಆರ್ಥಿಕ ನೀತಿ ಮತ್ತು ಯೋಜನೆಗಳಲ್ಲಿಯೇ ಮೂಲಭೂತವಾಗಿ ದೋಷಗಳಿರುವುದೇ ಇಂತಹ ಸಮಸ್ಯೆಗಳಿಗೆ ಕಾರಣ. ೧೯೯೧ ರಲ್ಲಿ ಎದುರಾದ ಆರ್ಥಿಕ ಮುಗ್ಗಟ್ಟು ಏಕಾಏಕಿ ಉದ್ಭವಿಸಿದ ಸಮಸ್ಯೆಯಾಗಿ ಕಂಡರೂ ಇದರ ಬೆಳವಣಿಗೆ ೧೯೮೦ರ ದಶಕದುದ್ದಕ್ಕೂ ಆಗಿರುವುದು ಕಂಡು ಬರುತ್ತದೆ. ೧೯೮೦ ರ ದಶಕದಲ್ಲಿ ಆರ್ಥಿಕ ಅಭಿವೃದ್ಧಿಗೆ ಸಂಬAಧಿಸಿದAತೆ ಸರಕಾರ ಕೈಗೊಂಡ ಹಲವಾರು ನೀತಿಗಳ ಬಗ್ಗೆ ಟೀಕಾಕಾರರು ಮಾಡಿದ್ದ ಆರೋಪಗಳು ನಿರಾಧಾರವಾಗಿಲ್ಲ ಎಂದು ತಿಳಿದುಬರುತ್ತದೆ. ೮೦ರ ದಶಕದಲ್ಲಿ ಹಲವಾರು ರೀತಿಯಲ್ಲಿ ಉತ್ತಮ ಸಾಧನೆಗಳಾಗಿದ್ದರೂ, ಅದರೊಂದಿಗೆ ಅಂತರಾಷ್ಟೀಯ ವ್ಯಾಪಾರದಲ್ಲಿ ಕೊರೆತೆಯ ಪ್ರಮಾಣದಲ್ಲಿ ಏರಿಕೆ, ಸರಕಾರದ ಬಜೆಟ್ ಕೊರೆತೆ, ಮತ್ತು ಬಾಹ್ಯ ಸಾಲದ ಹೊರೆ, (ಆಂತರಿಕ ಹಣಕಾಸು ಮಾರುಕಟ್ಟೆಯಲ್ಲಿ ಏರುತ್ತಿದ್ದ ಸಾಲದ ಮೊತ್ತ ಮುಂತಾದ) ಸಾರ್ವಜನಿಕ ಋಣದ ಪ್ರಮಾಣದಲ್ಲಿ ಹೆಚ್ಚಳ ಮುಂತಾದ ಸಮಸ್ಯೆಗಳೂ ಹುಟ್ಟಿಕೊಂಡವು ಆರ್ಥಿಕ ವ್ಯವಸ್ಥೆಯ ಆರೋಗ್ಯಕ್ಕೆ ಹಾನಿಕಾರಕವಾದಂತಹ ತೊಂದರೆಗಳ ನಿವಾರಣೆಗೆ ಯೋಜನಾ ಆಯೋಗ ಮತ್ತು ಆರ್ಥಿಕ ತಜ್ಞರು ನೀಡುತ್ತಾ ಬಂದ ಸಲಹೆ ಸೂಚನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ.  ಅಥವಾ  ೮೦ರ ದಶಕದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳಿಗೆ ಕಠೋರವಾದ ಆರ್ಥಿಕ ಶಿಸ್ತನ್ನು ಪಾಲಿಸಿಕೊಂಡು ಮುಂದುವರೆಯುವುದು ಸಾಧ್ಯವಾಗಲಿಲ್ಲ. ದುರ್ಬಲವಾಗಿದ್ದ ಅರ್ಥವ್ಯವಸ್ಥೆಯು ಸ್ಥಿತಿ ಕೊಲ್ಲಿ ಯುದ್ಧದಿಂದುAಟಾದ ತೈಲಬೆಲೆ ಏರಿಕೆ, ಅನಿವಾಸಿ ಭಾರತೀಯರಿಂದ ವಿದೇಶಿ ವಿನಿಮಯ ಠೇವಣಿಗಳ ಹಿಂದೆ ಪಡೆಯುವಿಕೆ, ವಿದೇಶಿ ವಿನಿಮಯದ ಒಳ ಹರಿವಿನಲ್ಲಿ ಗಮನಾರ್ಹ ಇಳಿಕೆ, ರಷ್ಯಾದಲ್ಲಿ ಉಂಟಾದ ಆಂತರಿಕ ಗೊಂದಲಗಳು ದ್ವಿಪಕ್ಷೀಯ ವ್ಯಾಪಾರ ಸಂಬAಧಗಳಿAದಾಗಿ ಸಂಪೂರ್ಣವಾಗಿ ಹದಗೆಟ್ಟಿತು. ಅರ್ಥ ವ್ಯವಸ್ಥೆಯನ್ನು ಪುನಃಶ್ಚೇತನಗೊಳಿಸಲು ದೊಡ್ಡ ಮೊತ್ತದ ವಿದೇಶಿ ವಿನಿಮಯದ ಅಗತ್ಯವಿದ್ದು ಅಂತಾರಾಷ್ಟಿçÃಯ ದ್ರವ್ಯನಿಧಿ ಮತ್ತು ವಿಶ್ವಬ್ಯಾಂಕ್ ಮೊರೆ ಹೋಗುವುದನ್ನು ಬಿಟ್ಟರೆ ಅನ್ಯಮಾರ್ಗವಿರಲಿಲ್ಲ. ಅಂತಾರಾಷ್ಟಿçÃಯ ಹಣಕಾಸು ಸಂಸ್ಥೆಗಳು ಶರತ್ತು ಬದ್ಧವಾಗಿ ನೀಡÀÄವ ಇಂತಹ ಸಾಲಗಳು ದೇಶದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಉಂಟು ಮಾಡುತ್ತದೆ ಎನ್ನುವುದು ಪ್ರಶ್ನಾರ್ಹವಾದ ವಿಚಾರವಾಗಿದೆ. ಉದಾರೀಕರಣ ಕ್ರಮಗಳು ಪ್ರಾರಂಭವಾಗಿ ಸುಮಾರು ೩೫ ವರ್ಷಗಳುರುಳಿವೆ.ಇದರ ಸಾಧಕ ಬಾದಕಗಳು ಏನೇ ಇದ್ದರೂ ಇದನ್ನು ತಡೆಯುವ ಯಾ ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸುವ ಸ್ವಾತಂತ್ರö್ಯ ಈ ಹಂತದಲ್ಲಿ ಖಂಡಿತಾ ನಮಗಿಲ್ಲ ಎಂದೇ ಹೇಳಬಹುದು.

ನಮ್ಮ ದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಹೇಗೆ ಅನುಷ್ಠಾನಕ್ಕೆ ಬರುತ್ತಿದ್ದವು ಅಥವಾ ಅಭಿವೃದ್ಧಿ ಕಾರ್ಯಕ್ರಮಗಳು ಯಾವ ರೀತಿಯಲ್ಲಿ ರಾಜಕೀಯವಾಗಿ ಪ್ರೇರಿತವಾಗಿರುತ್ತಿದ್ದುವು ಅನ್ನುವುದನ್ನು ತಿಳಿಯುವುದು ಅವಶ್ಯಕ ಎನಿಸುತ್ತದೆ ಮಿಶ್ರ ಆರ್ಥಿಕ ನೀತಿಯನ್ವಯ ನಿರ್ಧರಿತವಾದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯೋಜನಾ ಆಯೋಗ ಸಿದ್ದಗೊಳಿಸಿ, ಅದನ್ನು ಹೇಗೆ ಅಥವಾ ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕೇಂದು ನಿರ್ಧರಿಸುತ್ತದೆ. ಹಾಗಾಗಿ ಯೋಜನಾ ಆಯೋಗದ ಪಾತ್ರ ಮತ್ತು ಜವಾಬ್ದಾರಿ ಬಹಳ ಮಹತ್ವಪೂರ್ಣವಾಗಿದೆ. ದೇಶದ ಪ್ರಧಾನಿ ಈ ಆಯೋಗದ ಅಧ್ಯಕ್ಷರಾಗಿದ್ದು ದೇಶದ ವಿವಿಧ ರಂಗಗಳಲ್ಲಿ ಅನುಭವವಿರುವ ತಜ್ಞರನ್ನು ಸರಕಾರ ಸದಸ್ಯರನ್ನಾಗಿ ನಾಮಕರಣ ಮಾಡುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳ ನೀತಿಗಳೂ, ಗೊಂದಲಗಳೂ ಯೋಜನಾ ಆಯೋಗದಂತಹ ತಜ್ಞರಿರುವ ಸಂಸ್ಥೆಯ ಕಾರ್ಯದಕ್ಷತೆಯ ಮೇಲೆ ಪರಿಣಾಮ ಬೀರುವಂತಹ ವಾತಾವರಣವಿದೆ. ೧೯೭೦ರ ದಶಕದವರೆಗೆ ಅಧಿಕಾರದಲ್ಲಿದ್ದ ಕಾಂಗ್ರ‍್ರೆಸ್ ಸರಕಾರ ಮತ್ತು ರಾಜಕಾರಣಿಗಳಿಗೆ ನಿಶ್ಚಿತವಾದ ಗುರಿ ಮತ್ತು ಒಂದು ಮಟ್ಟದ ದೂರ ದೃಷ್ಟಿ ಇತ್ತಾದರೂ ತದನಂತರದಲ್ಲಿ ನಾವು ಅಂತಹದೇ ಸ್ಥಿರತೆಯನ್ನು ಕಾಣಲಿಲ್ಲ. ೧೯೭೭ರಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದಾಗ ಪ್ರಥಮ ಬಾರಿಗೆ ವಿರೋಧ ಪಕ್ಷವೊಂದು ಸರಕಾರ ರಚಿಸಿತು. ಇದುವರೆಗೆ ವಿರೋಧ ಪಕ್ಷದ ಟೀಕೆಗಳಿಗೆ ಗುರಿಯಾಗಿದ್ದ ಅಭಿವೃದ್ಧಿ ನೀತಿಗಳು ಕೊಂಚಮಟ್ಟಿಗೆ ಮರುವಿಮರ್ಶೆಗೊಳಪಟ್ಟವು. ಯೋಜನಾ ಆಯೋಗದ ಪುನಾರಚನೆಯಾಗಿ ಅಭಿವೃದ್ಧಿಯ ಅಧ್ಯತೆಗಳಲ್ಲೂ ಬದಲಾವಣೆಗಳುಂಟಾದವು. ನಂತರ ಇಂತಹ ಬದಲಾವಣೆಗಳು ಕಾಲಕಾಲಕ್ಕೆ ಸರಕಾರದಲ್ಲಿ ಬದಲಾವಣೆಗಳುಂಟಾದAತೆ ನಡೆದಿವೆ. ಒಟ್ಟಿನಲ್ಲಿ ೧೯೭೦ರ ವರೆಗೆ ಒಂದು ರೀತಿಯ ರಾಜಕೀಯ ಸ್ಥಿರತೆಯಿದ್ದು ಇಂತಹ ಸ್ಥಿರತೆಗೂ ಆರ್ಥಿಕ ರಂಗದಲ್ಲಿ ಕಂಡು ಬಂದಿರುವAತಹ ಸ್ಥಿತಿಗೂ ಒಂದು ರೀತಿಯ ಸಂಬAಧವಿದೆಯೆAದು ಹೇಳಬಹುದು. ನಂತರದ ದಿನಗಳಲ್ಲಿ ರಾಜಕೀಯ ಏರಿಳಿತಗಳು ಮತ್ತು ಅನಿಶ್ಚಿತತೆಗಳು ಅರ್ಥ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆಯೂ ತನ್ನ ಪರಿಣಾಮವನ್ನು ಉಂಟುಮಾಡಿವೆ. ಹಾಗಾಗಿ ನಮ್ಮ ದೇಶದ ಆರ್ಥಿಕ ಅಭಿವೃದ್ದಿಯ ಕುರಿತು ಅಧ್ಯಯನ ನಡೆಸುವಾಗ ರಾಜಕೀಯ ವ್ಯವಸ್ಥೆಯ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯವಾಗಿದೆ. 

೨೦೧೪ರಲ್ಲಿ ಅಧಿಕಾರಕ್ಕೆ

ಎನ್ ಡಿ ಎ ಒಕ್ಕೂಟದ ಕೇಂದ್ರ ಸರಕಾರ ಯೋಜನಾ ಆಯೋಗವನ್ನು ರದ್ದುಗೊಳಿಸಿ ನೀತಿ ಆಯೋಗವನ್ನು ಅಸ್ತಿತ್ವಕ್ಕೆ ತಂದಿದೆ. ಸುಭಾಸ್ ಚಂದ್ರಬೋಸ್ ಅವರು ೧೯೩೮ರಲ್ಲಿ ಪರಿಕಲ್ಪಿಸಿದ ಈ ಯೋಜನಾ ಆಯೋಗಕ್ಕೆ ಭಾರತದ ಸ್ವಾತಂತ್ರ÷್ಯ ಸಂಗ್ರಾಮ ಮತ್ತು ಸ್ವತಂತ್ರ ಭಾರತದ ಅಭಿವೃದ್ಧಿಯನ್ನು ದೇಶದ ಜನಮಾನಸದೊಂದಿಗೆ ಬೆಸೆದ ಚರಿತ್ರೆ ಇದೆ. ಆದರೆ ನಾವಿಂದು ಚರಿತ್ರೆಯನ್ನು ಮರು ನಿರೂಪಿಸುವ ಹುಮ್ಮಸ್ಸಿನಲ್ಲಿದ್ದೇವೆ. ಸ್ವಾತಂತ್ರಾ÷್ಯನAತರದಲ್ಲಿ ಪಿ.ಸಿ.ಮಹಾಲ್ ನೋಬಿಸ್, ಮೆಗನಾದ್ ಶಹಾ, ಪಿತಾಂಬರ್ ಪಂತ್, ಡಿ.ಆರ್.ಗಾಡ್ಗೀಳ್ ಮುಂತಾದ ಮಹನೀಯರ ರಾಜಕೀಯ ದಾರ್ಶನಿಕ ಪರಂಪರೆಯನ್ನು ಬದಿಗೆ ಸರಿಸಿದ್ದೇವೆ. ಹೀಗೆ ಮಾಡುವ ಮೂಲಕ ಮುಂದಿನ ತಲೆಮಾರಿಗೆ ತಿಳಿಯಲೇ ಬೇಕಿದ್ದ ಕೆಲವೊಂದು ಚಾರಿತ್ರಿಕ ವಿಷಯಗಳು ತಿಳಿಯದಂತಾಗಿದೆ. ಪ್ರಮುಖವಾಗಿ ಯೋಜನಾ ಆಯೋಗ ನಿರ್ವಹಿಸುತ್ತಿದ್ದ ಮುಖ್ಯವಾದ ಮೂರು ಜವಾಬ್ದಾರಿಗಳು ಮಹತ್ವ ಪೂರ್ಣವಾಗಿದ್ದುವು. ೧. ದೇಶದ ಅಭಿವೃದ್ಧಿಗೆ ಒಂದು ಸರಿಯಾದ ಸಮಗ್ರವಾದ ಚೌಕಟ್ಟನ್ನು ಒದಗಿಸುವುದು ೨.ಆರ್ಥಿಕ ಮಂತ್ರಾಲಯ ಮತ್ತು ಇತರ ಮಂತ್ರಾಲಯಗಳ ನಡುವೆ ಸಂಪನ್ಮೂಲ ಸರಿಯಾಗಿ ಹಂಚಿಕೆಯಾಗುವ0ತೆ ನೋಡಿಕೊಳ್ಳುವುದು, ಹಾಗೂ ೩.ದೇಶದಲ್ಲಿ ಅನುಷ್ಟಾನಗೊಂಡಿರುವ ಯೋಜನೆಗಳ ಮೌಲ್ಯಮಾಪನ ಮಾಡಿ ಸರಕಾರಕ್ಕೆ ಮಾರ್ಗದರ್ಶನ ನೀಡುವುದು. ಹೀಗಿರುವಾಗ ಯೋಜನಾ ಆಯೋಗದ ರದ್ಧತಿ ಖಂಡಿತಾವಾಗಿ ಪ್ರಶ್ನಾರ್ಹ. ಅದರ ಕಾರ್ಯನಿರ್ವಹಣೆ, ಬದ್ಧತೆಯಲ್ಲಿ ದೋಷಗಳಿದ್ದರೆ ಖಂಡಿತಾವಾಗಿಯೂ ಸುಧಾರಿಸಬಹುದಿತ್ತು. ಅದನ್ನು ಶಾಶ್ವತವಾಗಿ ಅಳಿಸಿ ಹಾಕಿ ಅದರ ಬದಲಿಗೆ ಅದರದೇ ಕೆಲಸಗಳನ್ನು ನಿರ್ವಹಿಸುವ ‘ನೀತಿ ಆಯೋಗ’ವನ್ನು ಹುಟ್ಟುಹಾಕಿದ್ದರ ಹಿಂದೆ ಇರುವ ಚಿಂತನೆ ಆರೋಗ್ಯಪೂರ್ಣವಲ್ಲವೆನ್ನಬಹುದು.

ಐವತ್ತು ಮತ್ತು ಅರವತ್ತರ ದಶಕಗಳಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಥಿರ ಹಾಗೂ ದಕ್ಷವಾದ ಸರಕಾರಗಳಿದ್ದುದರಿಂದ ಯೋಜನಾ ಆಯೋಗ ಹೆಚ್ಚು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸರಕಾರಗಳಿಗೆ ಯೋಜನೆಯ ಮತ್ತು ಆದ್ಯತೆಗಳ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದುದರಿಂದ ಯೋಜನಾ ಆಯೋಗ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿತ್ತು. ಇಂತಹ ಆರೋಗ್ಯ ಪೂರ್ಣ ವಾತಾವರಣ ಅರವತ್ತರ ದಶಕದ ಕೊನೆಯ ದಿನಗಳಲ್ಲಿ ಬದಲಾಗುತ್ತ ಬಂದಿತು. ಪ್ರಮುಖ ರಾಜಕೀಯ ಪಕ್ಷ ಮತ್ತು ದೀರ್ಘಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಒತ್ತಡಗಳಿಂದಾಗಿ ಕೂಡಾ ಅದುವರೆಗೆ ಅನುಸರಿಸುತ್ತಾ ಬಂದ ನೀತಿಗಳನ್ನು ಮುಂದುವರೆಸುವುದು ಕಷ್ಟವಾಯ್ತು. ದೇಶ ಎದುರಿಸಿದ ಬರ ಮತ್ತು ವಿದೇಶಿ ವಿನಿಮಯ ಸಮಸ್ಯೆಯ ನಿಭಾವಣೆಗೆ ವಿವಿಧ ಮಾದರಿಯ ಪರಿಹಾರಗಳು ಸೂಚಿತವಾದವು. ಇಂತಹ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿಯೇ ಯೋಜನಾ ಆಯೋಗ ಈ ಹಿಂದಿನAತೆ ಧೃಢತೆಯಿಂದ ಮುಂದುವರೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಸರಿಯಾಗಿ ನೆರವು ನೀಡಲು ಒಪ್ಪಿದ ಕೆಲವು ರಾಷ್ಟçಗಳು ನೆರವಿನ ಪ್ರಮಾಣದಲ್ಲಿ ಕಡಿತವುಂಟು ಮಾಡಿದವು. ರೂಪಾಯಿಯ ಅಪಮೌಲ್ಯ ಮಾಡಿ ರಫ್ತು ಹೆಚ್ಚಿಸಿ ಸದ್ಯದ ಪರಿಸ್ಥಿತಿಯನ್ನು ಎದುರಿಸಲು ಕ್ರಮಕೈಗೋಳ್ಳಲಾಯ್ತಾದರೂ ಇಂತಹ ಕ್ರಮಗಳೂ ನಿರೀಕ್ಷಿತ ಫಲ ನೀಡಲಿಲ್ಲ. ಪಂಚವಾರ್ಷಿಕ ಯೋಜನೆಗಳನ್ನು ಮೂರುವರ್ಷಗಳವರೆಗೆ ಸ್ಥಗಿತಗೊಳಿಸಲಾಯ್ತು. (೧೯೬೬-೬೯) ಒಂದರ್ಥದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡವು. ಇಂತಹ ಸಮಸ್ಯೆಗಳಿಂದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳಲು ಒಂದು ದಶಕವೇಬೇಕಾಯ್ತು. ೧೯೬೯ ರ ಮೊದಲಿದ್ದ ದೃಢತೆ ಮರಳಿ ಬರಲಿಲ್ಲ. ಇದಕ್ಕೆ ಅನುಗುಣವಾಗಿ ಅಧಿಕಾರದಲ್ಲಿರುವ ಮುಖಂಡರು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಳ್ಳಬೇಕಾದ ದೃಢ ನಿರ್ಧಾರಗಳನ್ನು  ಕೈ ಬಿಟ್ಟು ಗರೀಬಿ ಹಟಾವೋದಂತಹ  ಅಲ್ಪಾವಧಿಯಲ್ಲಿ ಜನಪ್ರಿಯತೆ ನೀಡಬಲ್ಲ  ಕಾರ್ಯಕ್ರಮ ರೂಪಿಸತೊಡಗಿದರು. ಈ ಹಂತದಲ್ಲಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಸರಕಾರ ರಚನೆ ಮಾಢಿದವು. ಈ ರೀತಿಯ ಬೆಳವಣಿಗೆಗಳು ರಾಜಕೀಯ ಪಕ್ಷಗಳಿಗೆ ಅಧಿಕಾರ ಹಿಡಿಯಲು ನೆರವು ನೀಡಬಲ್ಲ ಜನಪ್ರಿಯವಾದ ಅಭಿವೃದ್ಧಿ ನೀತಿಯ ಕುರಿತು ಯೋಚಿಸುವಂತೆ ಮಾಡಿದವು. ಹಾಗಾಗಿ ಅಲ್ಲಿಂದೀಚೆಗೆ ಸರಕಾರಗಳು ಉದ್ಯಮ ಅಥವಾ ಸಂಪತ್ತು ಸೃಷ್ಟಿಸುವಂತಹ ಕಾರ್ಯಕ್ರಮಗಳಿಗೆ ಬದಲಾಗಿ ವೋಟ್ ಬ್ಯಾಂಕ್ ಸೃಷ್ಟಿಸುವಂತಹ ಕಾರ್ಯಕ್ರಮಗಳಿಗೆ ಮಹತ್ವ ನೀಡುತ್ತ ಬಂದವು. ೧೯೭೨ರಲ್ಲಿ ದಿ.ಶ್ರೀಮತಿ ಇಂದಿರಾಗಾAಧಿ ‘ಗರೀಬಿ ಹಟಾವೋ’ ಘೊಷಣೆಯನ್ನು ಮುಂದಿಟ್ಟುಕೊAಡು ಚುನಾವಣೆಯನ್ನು ಎದುರಿಸಿ ವಿಜಯಿಯಾದರೂ, ಪ್ರತಿಯೊಂದು ರಾಜಕೀಯ ಪಕ್ಷಗಳು ಮತ ಸೆಳೆಯಬಲ್ಲ ಜನಪ್ರಿಯ ಕಾರ್ಯಕ್ರಮಗಳೇ ರಾಷ್ಟಿçÃಯ ಅಭಿವೃದ್ಧಿ ನೀತಿ ಎನ್ನುವ ಮಟ್ಟದಲ್ಲಿ ಯೋಚಿಸಲಾರಂಭಿಸಿದುವು. ಯೋಜನಾ ಆಯೋಗ ಕೂಡಾ ಹಿಂದಿನ ಮಹತ್ವವನ್ನು ಕಳೆದುಕೊಂಡು ಸರಕಾರದ ಪ್ರಣಾಳಿಕೆಗಳನ್ನು ಅನುಷ್ಠಾನಗೊಳಿಸುವ ವ್ಯವಸ್ಥೆಯಾಯ್ತು. ಹೀಗಾಗಿ ಸಹಾಯಧನ ಪದ್ಧತಿ, ಬಡತನ ನಿರ್ಮುಲನಕ್ಕಾಗಿ ಕಾರ್ಯಕ್ರಮ ರೂಪಿಸುವುದು ಮುಂತಾದ ವಿಷಯಗಳು ಮಹತ್ವ ಪಡೆದವು. ದೂರದೃಷ್ಟಿಯುಳ್ಳ ರಾಷ್ಟಿçÃಯಹಿತವನ್ನು ಗಮನದಲ್ಲಿರಿಸಿಕೊಂಡು ತಯಾರಿಸಬೇಕಾದಂತಹ ನಿರ್ದಿಷ್ಠ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸರಕಾರಗಳು ಗಂಭೀರವಾಗಿ ಯೋಚಿಸುವ ಗೋಜಿಗೆ ಹೋಗಲಿಲ್ಲ. ಹೀಗೆ ಅರವತ್ತರ ದಶಕದ ಕೊನೆಯವರೆಗೆ ಮಂದಗತಿಯಲ್ಲಾದರೂ ಒಂದು ರೀತಿಯಲ್ಲಿ ನಿರ್ದಿಷ್ಟ ದಿಕ್ಕಿನಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕಾರ್ಯಕ್ರಮಗಳು ಕೊಂಚ ಸಮಯ ಗೊಂದಲಕ್ಕೊಳಗಾಗಿ ಮತ್ತೆ ಎಪ್ಪತ್ತರ ಕೊನೆಯವರೆಗೂ ಕುಂಟುತ್ತಾ ಸಾಗಿದುವು.

ದೇಶದ ಅರ್ಥವ್ಯವಸ್ಥೆ ೧೯೮೦ರ ದಶಕದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಂಡಿತು. ಸರಕಾರ ಆಂತರಿಕವಾಗಿ ಬಂಡವಾಳ ಸಂಚಯಿಸುವ ಅಗತ್ಯ ನೀತಿಗೆ ಗಮನ ಹರಿಸಲಿಲ್ಲ. ಬದಲಾಗಿ ವಿಸ್ತರಣಾ ನೀತಿಯನ್ನು ಅನುಸರಿಸುತ್ತಾ ಹೋಯಿತು. ಹಣಕಾಸಿನ ಪ್ರಸರಣ ಪ್ರಮಾಣದಲ್ಲಿ ಏರಿಕೆಯುಂಟಾಗುತ್ತಾ ಹೋಯಿತು. ಸಾಲ ರೂಪದಲ್ಲಿ ಪಡೆದ ಹಣವನ್ನು ಜನಪ್ರಿಯ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಲಾಯ್ತು. ರಫ್ತು ಪ್ರಮಾಣದಲ್ಲಿ ಇಳಿಕೆಯಾಗಿ, ಆಮದು ಮಾಡಿದ ವಸ್ತುಗಳಿಗೆ ಪಾವತಿಸಲು ಬೇಕಾದ ವಿದೇಶಿ ವಿನಿಮಯದಲ್ಲಿ ತೀವ್ರ ಕೊರೆತೆ ಕಂಡು ಬಂತು.  ಬಳಕೆದಾರರ (ಭೋಗ ಸಾಮಾಗ್ರಿಗಳು) ಸಾಮಾಗ್ರಿಗಳ ಉತ್ಪಾದನೆಗೆ ವಿದೇಶಿ ತಂತ್ರಜ್ಞಾನ ಮತ್ತು ಬಂಡವಾಳವನ್ನು ದೇಶದೊಳಗೆ ಪ್ರವೇಶಿಸಲು ಅನುಮತಿ ನೀಡÀಲಾಯ್ತು. ೧೯೮೦ ದಶಕದ ಪ್ರಾರಂಭದ ದಿನಗಳಲ್ಲಿಯೇ ಆರ್ಥಿಕ ವಲಯದಲ್ಲಿ ಅರ್ಥ ವ್ಯವಸ್ಥೆಯನ್ನು ಸರಕಾರದ ನಿಯಂತ್ರಣದಿAದ ಮುಕ್ತವಾಗಿರಿಸಬೇಕು ಮತ್ತು ಆ ಮೂಲಕ ಖಾಸಗೀ ಉದ್ಯಮರಂಗದ ಅತ್ಯುತ್ತಮ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿತ್ತು.ಇಂತಹ ಮುಕ್ತ ಯಾ ನಿಯಂತ್ರಣವಿಲ್ಲದ ಮಾರುಕಟ್ಟೆ ನೀತಿಯಾಧಾರಿತ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಇದುವರೆಗೆ ಸಾಧ್ಯವಾಗದ್ದನ್ನು ಸಾಧಿಸಬಹುದೆನ್ನುವ ವಾದಕ್ಕೆ ಇಂಬು ದೊರೆಯಲಾರಂಭಿಸಿತು. ರಾಜೀವ ಗಾಂಧಿ ಅಧಿಕಾರಕ್ಕೆ ಬಂದಾಗ, (೧೯೮೪-೮೯) ಇಂದಿರಾಗಾAಧಿಯವರಿAದ  (೧೯೮೦–೮೪) ಪ್ರಾರಂಭಗೊAಡ ಕೆಲವೊಂದು ಉದಾರೀಕರಣ ಕಾರ್ಯಕ್ರಮಗಳು ಮುಂದುವರಿಯುತ್ತಾ ಚುರುಕುಗೊಂಡವು.

ಮುAದೆ ನರಸಿಂಹರಾವ್ ಅಧಿಕಾರವಧಿಯಲ್ಲೂ (೧೯೯೧-೯೬) ಹೊಸ ಆರ್ಥಿಕ ನೀತಿ ಎನ್ನುವ ಹೆಸರಿನೊಂದಿಗೆ ಇಂತಹ ಬದಲಾವಣೆ ಚಲಾವಣೆಗೆ ಬಂದಿತು. ಪ್ರಾರಂಭಿಕ ಹಂತದಲ್ಲಿ ಅಭಿವೃದ್ದಿಯ ದರಗಳಲ್ಲಿ ಏರಿಕೆ ಕಂಡು ಬಂದು ಭಾರತೀಯ ಅರ್ಥವ್ಯವಸ್ಥೆ ಹೊಸಹಾದಿಯಲ್ಲಿ ಹೊಸ ಹುರುಪಿನಿಂದ ನಡೆಯುತ್ತಿದೆ ಎನ್ನುವ ಭರವಸೆ(ಭ್ರಮೆ)ಯನ್ನು ಮೂಡಿಸಿತು. ಕೈಗಾರಿಕಾರಂಗದಲ್ಲಿ ಮತ್ತು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳ ದಾಖಲಾದವು, ಇಂತಹ ಹೆಚ್ಚಳದೊಂದಿಗೆ ಬಜೆಟ್ ಕೊರತೆ ಮತ್ತು ಸಾರ್ವಜನಿಕ ವೆಚ್ಚ (ಪಬ್ಲಿಕ್ ಎಕ್ಸಪೆಂಡಿಚರ್) ಅಧಿಕವಾಗುತ್ತ ಬಂದವು ಈರೀತಿಯಲ್ಲಿ ಅಧಿಕವಾಗುತ್ತಾ ಬಂದ ಸಾರ್ವಜನಿಕ ವೆಚ್ಚವನ್ನು ಸರಿದೂಗಿಸುವ ಸೂಕ್ತ ಕ್ರಮವನ್ನು ಮಾತ್ರ ನಿರೂಪಿಸಲಾಗಿರಲಿಲ್ಲ. ಸಾಮಾನ್ಯವಾಗಿ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲ್ಲು ಅಭಿವೃದ್ಧಿ ಶೀ¯ ರಾಷ್ಟçಗಳು ಅನುಸರಿಸುವ ಕ್ರಮವೆಂದರೆ ಅಧಿಕ ತೆರಿಗೆ ಸಂಗ್ರಹಿಸುವುದು.ಆದರೆ ಹೊಸ ಆರ್ಥಿಕ ನೀತಿಯನ್ವಯ ವ್ಯಾಪಾರ ಮತ್ತು ಉದ್ದಿಮೆಗಳ ಮೇಲೆ ತೆರಿಗೆಗಳಲ್ಲಿ ಕಡಿತ ಮಾಡಿರುವ ಕಾರಣ ಕೊರತೆಯ ಪ್ರಮಾಣ ಅಗಾಧವಾಗಿ ಏರುತ್ತಲೇ ಹೋಯಿತು. ಇಂತಹ ಕೊರತೆಯನ್ನು ಸಾರ್ವಜನಿಕ ಸಾಲ ಎತ್ತುವ ಮೂಲಕ ಸರಿ ಹೊಂದಿಸಲು ಪ್ರಯತ್ನಿಸಲಾಯ್ತು. ಇಂತಹ ಸಾರ್ವಜನಿಕ ಸಾಲ ಮರುಪಾವತಿಸುವ ಸಂದರ್ಭದಲ್ಲಿಯೇ ಅನಿರೀಕ್ಷಿತ ಸಮಸ್ಯೆಗಳೆದುರಾದ ಕಾರಣ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಯಿತು. ಸರಕಾರದ ಖರ್ಚಿನ ಯಾ ವೆಚ್ಚದ ಬಾಬ್ತಿನಲ್ಲಿ ಎರಡು ವಿಧಗಳಿದ್ದು ಒಂದು ಬಂಡವಾಳ ರೀತಿಯದು ಎರಡನೆಯದು ಸಾಮಾನ್ಯ ರೀತಿಯದು. ಸಾಮಾನ್ಯ ರೀತಿಯ ಖರ್ಚು, ಅನುತ್ಪಾದಕ ಚಟುವಟಿಕೆಗಳ ಕುರಿತಾಗಿರುವುದರಿಂದ ಇದು ಹಣದುಬ್ಬರ, ಬಜೆತ್ ಕೊರತೆ ಮುಂತಾದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತಲೇ ಹೋಯಿತು. ೧೯೮೦ರ ದಶಕದಲ್ಲಿ ಕೈಗಾರಿಕಾ ಉತ್ಪಾದನೆಕಯಲ್ಲಿ ಹೆಚ್ಚಳವಾಗಿರುವುದರ ಕುರಿತಂತೆ ಈಗಾಗಲೆ ಪ್ರಸ್ತಾಪಿಸಲಾಗಿದೆ. ಕೈಗಾರಿಕಾ ರಂಗದ ಸಾಧನೆಗೆ ಮೂಲ ಕಾರಣ ಆಮದು ಪ್ರೋತ್ಸಾಹಕ ನೀತಿಯನ್ನು ಅನುಸರಿಸಿದ್ದೇ ಆಗಿತ್ತು.ಆಮದು ಪ್ರೋತ್ಸಾಹಕ ನೀತಿಯನ್ನು ಅನುಸರಿಸಿದ್ದರಿಂದ ಕೈಗಾರಿಕಾ ರಂಗದಲ್ಲಿ ಉತ್ಪದನೆಯೆನೋ ಹೆಚ್ಚಳವಾಯಿತು. ಆದರೆ ವಿದೇಶಿ ವಿನಿಮಯ ಪಾವತಿ ಸಮಸ್ಯೆ ಮಾತ್ರ ಉಲ್ಬಣಗೊಳ್ಳುತ್ತಾ ಹೋಯಿತು. ಹೀಗಾಗಿ ನಮ್ಮ ರಫ್ತಿಗಿಂತ ಆಮದಿನ ಪ್ರಮಾಣದಲ್ಲಿ ಹೆಚ್ಚಳವಾಗಿ ದೊಡ್ಡ ಮೊತ್ತದ ವಿದೇಶಿ ವಿನಿಮಯ ಪಾವತಿಸಬೇಕಾದಂತಹ ಸಂದರ್ಭ ಸೃಷ್ಟಿಯಾಯಿತು. 

ಪಾವತಿ ಖಾತೆ ಕೊರತೆ ಅಗಾಧವಾಗಿ ಬೆಳೆಯುತ್ತಬಂದ ಪರಿಣಾಮ ಹೆಚ್ಚು ಮೊತ್ತದ ವಿದೇಶಿ ಸಾಲವನ್ನು ಪಡೆಯುವುದು ಅನಿವಾರ್ಯವಾಯ್ತು.ಇದರಿಂದಾಗಿ ವಿದೇಶಿ ಸಾಲದ ಹೊರೆಯೂ ಅಧಿಕವಾಯ್ತು. ಹಳೆಸಾಲಗಳ ಮರುಪಾವತಿಗಾಗಿ ಹೊಸಸಾಲ ಪಡೆಯುವುದು ಅನಿವಾರ್ಯವಾಯಿತು. ಇಂತಹ ಸಂದರ್ಭದಲ್ಲಿ ವಿಶ್ವಬ್ಯಾಂಕಿನ ಅಭಿವೃದ್ಧಿ ವರದಿ ಭಾರತದ ಅರ್ಥ ವ್ಯವಸ್ಥೆಯ ಸುಧಾರಣೆಗೆ ರೂಪಾಯಿಯ ಅಪಮೌಲ್ಯಕ್ಕೆ ಶಿಫಾರಸು ಮಾಡಿತು. ಇಂತಹ ವರದಿ ಪ್ರಕಟವಾದ ಕೂಡಲೇ ವಿದೇಶಿ ವಿನಿಮಯ ಖಾತೆಯಲ್ಲಿದ್ದ ಠೇವಣಿಯನ್ನು ಠೇವಣಿದಾರರು ಹಿಂದೆ ಪಡೆಯಲಾರಂಭಿಸಿದ್ದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿತು. ಹೀಗಾಗಿ ಒಂದಾದರೊAದರ ಮೇಲಂತೆ ಬಂದೆರಗಿದ ಆರ್ಥಿಕ ಸಮಸ್ಯೆಗಳನ್ನೆದುರಿಸಲು ದೊಡ್ಡ ಮೊತ್ತದ ಆರ್ಥಿಕ ಅಹಾಯ ಅಗತ್ಯವಾಗಿ, ಅಂತರಾಷ್ಟಿçÃಯ ಹಣಕಾಸು ಸಂಸ್ಥೆಗಳಿAದ ಸಾಲ ಪಡೆಯುವುದು ಅನಿವಾರ್ಯವಾಯ್ತು.*    

ಆರ್ಥಿಕ ಉದಾರೀಕರಣ ಮತ್ತು ಸ್ವರೂಪಾತ್ಮಕ ಹೊಂದಾಣಿಕೆಗಳನ್ನು ಅನುಷ್ಟಾನಗೊಳಿಸುವ ಮೊದಲಿನ ರಾಜಕೀಯ ಪರಿಸ್ಧಿಯೂ ಬಹಳ ಸಂವೇದನಾತ್ಮಕವಾಗಿತ್ತು.ಮತ್ತು ಒಂದು ರೀತಿಯ ಅಸ್ಧಿರತೆಯಿಂದ ಕೂಡಿತ್ತು. ಇಂತಹ ಸ್ಧಿತಿಯಲ್ಲಿ ಅಧಿಕಾರಕ್ಕೆ ಬಂದ ಪಿ.ವಿ.ನರಸಿಂಹರಾವ್ ನೇತೃತ್ವದ ಅಲ್ಪಮತದ ಕಾಂಗ್ರೆಸ್ ಸರಕಾರದ ಮುಂದುವರಿಕೆ ಅನಿವಾರ್ಯವಾಗಿತ್ತು. ಉದಾರೀಕರಣ ನೀತಿಯನ್ನುಅನುಷ್ಟಾನಗೊಳಿಸಲು ಡಾ.ಮನಮೋಹನ್ ಸಿಂಗ್‌ರAತಹ ವಿತ್ತ ಮಂತ್ರಿಯೂ ನಮಗೆ ಅನಿವಾರ್ಯವಾದರು. ಉದಾರೀಕರಣ ನೀತಿಯ ಕುರಿತಂತೆ ಈಗಾಗಲೆ ಚರ್ಚೆ ನಡೆಸಿರುವುದರಿಂದ, ನಾವೀಗ ಉದಾರೀಕರಣ ಭಾರತದಲ್ಲಿ ನೀಡಿದಂತಹ ಫಲಗಳ ಕುರಿತು ತಿಳಿಯಲು ಪ್ರಯತ್ನಿಸೋಣ. 

ವಿದೇಶಿ ವ್ಯಾಪಾರ ಮತ್ತು ಹೂಡಿಕೆ ನೀತಿ 

ವಿದೇಶಿ ತಂತ್ರಜ್ಞಾನ ಮತ್ತು ವಿದೇಶಿ ಬಂಡವಾಳಕ್ಕೆ ನಮ್ಮ ಅರ್ಥ ವ್ಯವಸ್ಥೆಯನ್ನು ತೆರೆದಿಡುವ ವಿಚಾರ ವಿವಾದಾತ್ಮಕವೇ ಆಗಿದೆ. ದೇಶೀ ಉದ್ದಿಮೆಗಳ ಸ್ಪರ್ಧಾತ್ಮಕತೆ ಹೆಚ್ಚಿಸುವ, ಗುಣಮಟ್ಟದಲ್ಲಿ ಉತ್ಕೃಷ್ಟತೆ ಸಾಧಿಸುವ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದೇ ಮೊದಲಾದ ಕಾರಣಗಳಿಗಾಗಿ ದೇಶೀ ಮಾರುಕಟ್ಟೆಯನ್ನು ಅನಿಯಂತ್ರಣಗೊಳಿಸುವುದು ಲಾಭದಾಯಕವೆಂದು ವಾದಿಸಲಾಗಿದೆ.ಇಂತಹ ಕ್ರಮಗಳಿಂದ ನಮ್ಮ ದೇಶದ ಕೈಗಾರಿಕೆಗಳು ಸ್ಪರ್ಧಾತ್ಮಕತೆಯನ್ನು ಮೈಗೂಡಿಸಿಕೊಂಡು ಜಾಗತಿಕ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಶಕ್ತವಾಗುತ್ತವೆ ಎಂದು ನಂಬಲಾಗಿದೆ. ಹಾಗಾಗಿ ಕೈಗಾರಿಕಾ ರಂಗಕ್ಕೆ ವಿದೇಶಿ ಬಂಡÀವಾಳ ಹರಿದು ಬರುವುದು ನಮ್ಮ ಅರ್ಥ ವ್ಯವಸ್ಥೆಗೆ ಸಹಕಾರಿ ಎಂದು ನಂಬಲಾಗಿದೆ. ಈ ನಿಟ್ಟಿನಲ್ಲಿ  ಹೊಸ ಉದಾರೀಕರಣ ನೀತಿ ಸೂಕ್ತಫಲ ನೀಡಿದೆ ಎಂದು ಹೇಳಲಾಗಿದೆ. ೧೯೯೧ ರಲ್ಲಿ ಒಂದು ಬಿಲಿಯನ್ ಡಾಲರಗಳಿದ್ದ ವಿದೇಶಿ ವಿನಿಮಯ ೨೦೦೬ ರಲ್ಲಿ ೭೯ ಬಿಲಿಯನ್ ಡಾಲರ್‌ಗಳಾಗಿದ್ದು ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ. ವಾಸ್ತವಿಕವಾಗಿ ಇಂತಹ ಹೆಚ್ಚಳ ನಮ್ಮ ಗಳಿಕೆಯಾಗಿರದೆ ಸಾಲ ಅಥವಾ ಬಂಡವಾಳದ ರೂಪದಲ್ಲಿದೆ ಇಂತಹ ವಿದೇಶಿ ವಿನಿಮಯವನ್ನು ನಂಬಿ ವಹಿವಾಟು ನಡೆಸುವುದು ಅಪಾಯಕಾರಿ ಕೂಡ ಏಕೆಂದರೆ ಈ ವಿದೇಶಿ ವಿನಿಮಯ ಯಾವುದೇ ಸಂದರ್ಭದಲ್ಲಿ ದೇಶದಿಂದ ಹೊರಹರಿಯಬಹುದಾಗಿದೆ. ಒಂದು ವೇಳೆ ಅದು ಇನ್ನೊಂದು ರೀತಿಯ ಸಂಕಷ÷್ಟಕ್ಕೆ ದಾರಿಯಾಗಬಹುದು. 

ವಿದೇಶಿ ವಿನಿಮಯಗಳಿಕೆ ಹಲವು ಸಮಸ್ಯೆಗಳಿಗೆ ಮೂಲವಾಗಿರುತ್ತದೆ. ಮೊದಲನೆಯದಾಗಿ ವಾಣಿಜ್ಯ ಸಾಲದಂತಹ ಮೂಲಗಳಿಂದ ಹಣದ ಮೇಲೆ ಬಡ್ಡಿ ಸಹಿತ ಅಸಲು ಮರುಪಾವತಿಸಬೇಕಾಗುತ್ತದೆ. ಹಾಗಾಗಿ ಸದ್ಯದ ಮಟ್ಟಿಗೆ ವಿದೇಶಿ ವಿನಿಮಯ ಗಳಿಸಿದರೂ ನಂತರದಲ್ಲಿ ಹೆಚ್ಚು ಮೊತ್ತದ ಹಣ ದೇಶದಿಂದ ಹೊರೆಹರಿಯುತ್ತದೆ. ಎರಡನೆಯದು ಬಂಡವಾಳ ಸಕ್ರಿಯಗೊಳ್ಳುವ ರೀತಿ ಉಂಟು ಮಾಡಬಹುದಾದ ಸಮಸ್ಯೆ. ಇದನ್ನು ಈ ರೀತಿಯಲ್ಲಿ ವಿವರಿಸಬಹುದಾಗಿದೆ. ವಿದೇಶಿಬಂಡವಾಳ ಎರಡು ರೂಪದಲ್ಲಿ ಅರ್ಥ ವ್ಯವಸ್ಥೆಯಲ್ಲಿ ಸಕ್ರಿಯವಾಗುತ್ತದೆ. ಒಂದು ಪ್ರತ್ಯಕ್ಷವಾಗಿ ಯಾ ನೇರವಾಗಿ ತೊಡಗಿಕೊಳ್ಳುವುದರ ಮೂಲಕ. ಉದಾಹರಣೆಗೆ ಹೊಸ ಉತ್ಪಾದಕ ರಂಗದಲ್ಲಿ ವಿದೇಶಿ ಬಂಡÀವಾಳದ ಬಳಕೆ.ಇನ್ನೊಂದು ಈಗಾಗಲೇ ಅಸ್ತಿತ್ವದಲ್ಲಿರುವ ಭಾರತೀಯ ಕಂಪನಿಗಳ ಶೇರು ಮತ್ತು ಸಾಲಪತ್ರಗಳಲ್ಲಿ ತೊಡಗಿಸಲಾಗುವ ವಿದೇಶಿ ಬಂಡವಾಳ. ಈ ರೀತಿಯ ಬಂಡವಾಳ ಬಹಳ ಅಪಾಯಕಾರಿಯಾದದ್ದು, ಯಾಕೆಂದರೆ ಇಂತಹ ಬಂಡವಾಳದ ಮೇಲೆ ಸಿಗುವ ಲಾಭಾಂಶ ವಿದೇಶಿ ವಿನಿಮಯಕ್ಕೆ ಪರಿವರ್ತಿತವಾಗಿ ದೇಶದಿಂದ ಹೊರ ಹರಿಯುತ್ತದೆ, ಮತ್ತು ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತಾ ಬಂದಾಗ ಇಂತಹ ಹೂಡಿಕೆ ದೇಶದಿಂದ ಹೊರ ಹರಿಯಲಾರಂಭಿಸಿದರೆ ಇಡೀ ಅರ್ಥ ವ್ಯವಸ್ಥೆ ಕುಸಿದು ಹೋಗುವ ಅಪಾಯವಿದೆ. ನಮ್ಮ ದೇಶಕ್ಕೆ ಹರಿದು ಬಂದಿರುವ ವಿದೇಶಿ ವಿನಿಮಯದಲ್ಲಿ ಹೆಚ್ಚು ಪಾಲು ಈ ರೀತಿಯದ್ದಾಗಿರುವುದು ಕಂಡು ಬರುತ್ತದೆ. ನೇರವಾಗಿ ಹೂಡಲ್ಪಟ್ಟ ಬಂಡವಾಳದಲ್ಲಿಯೂ ತೊಡಕುಗಳಿವೆ. ಇಂತಹ ಬಂಡವಾಳ ಆಸ್ತಿಗಳಲ್ಲಿ ಹೂಡಲ್ಪಟ್ಟಿರುವ ಕಾರಣ ಸರಕಾರ ಅವಶ್ಯಕತೆಯಿದ್ದಾಗ ಇದನ್ನು ಬಳಸುವ ಸ್ಥಿತಿಯಲ್ಲಿರುವುದಿಲ್ಲ. ಮೂರನೆಯದಾಗಿ ವಿದೇಶಿ ವಿನಿಮಯದಿಂದ ಹೊರ ಮತ್ತು ಒಳಹರಿವುಗಳಲ್ಲಿ ಏರಿಳಿತವಿದ್ದಾಗ ಅದು ಸ್ವದೇಶದ ಹಣದ ಮೇಲೆ ಅಥವಾ ಹಣದ ಮೌಲ್ಯದ ಮೇಲೆ ಪ್ರಭಾವ ಬೀರುವ ಮೂಲಕ ಸ್ವದೇಶಿ ವಿನಿಮಯಕ್ಕೆ ಸಂಬAಧಿಸಿದAತೆ ಈಗಿರುವ ಪರಿಸ್ಥಿತಿ ಯಾವಾಗ ಬೇಕಾದರೂ ಅರ್ಥ ವ್ಯವಸ್ಥೆಯನ್ನು ಅಪಾಯಕ್ಕೀಡು ಮಾಡಬಹುದಾಗಿದೆ. ತೈಲ ಉತ್ಪಾದನೆಯ ದೇಶಿಯ ಮೂಲಗಳಲ್ಲಿ (ನಮ್ಮ ದೇಶದಲ್ಲಿ ಲಭ್ಯವಿರುವ ತೈಲ ಉತ್ಪಾದನೆ) ಇಳಿತ ಉಂಟಾಗುವ ಸಂಭವವಿರುತ್ತದೆ. ಅಂತಹ ಸಂದರ್ಭದಲ್ಲಿ ಕಚ್ಚಾ ತೈಲ ಆಮದಿನಿಂದಾಗಿ ಇನ್ನೂ ಹೆಚ್ಚಿನ ವಿದೇಶಿ ವಿನಿಮಯ ಬಳಕೆಯಾಗ ಬಹುದಾದಂತಹ ಸಾಧ್ಯತೆ ಇದೆ. ವಿದೇಶಿ ಸಾಲಗಳಲ್ಲಿ ಬಹುಪಾಲು ಸಾಲವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಮರುಪಾವತಿಸಬೇಕಾಗಿದೆ. ವಿದೇಶಿ ಬಂಡÀವಾಳ ಮತ್ತು ಅನಿವಾಸಿ ಭಾರತೀಯರ ಖಾತೆಗಳಲ್ಲಿರುವ ಹಣ ಹಿಂದಕ್ಕೆ ಪಡೆಯಲ್ಪಟ್ಟು ದೇಶದಿಂದ ಹೊರಹರಿದರೆ ಪರಿಸ್ಥಿತಿ ಮತ್ತೆ ಆರ್ಥಿಕವಾಗಿ ಅಸ್ಥಿರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ.

ಹಿಂದಿನ ದಶಕಕ್ಕೆ ಹೋಲಿಸಿದರೆ, ಅರ್ಥ ವ್ಯವಸ್ಥೆ ೧೯೮೦ ದಶಕದಲ್ಲಿ ಅನುಭವಿಸುತ್ತಿದ್ದ ತೊಂದರೆಗಳಿಗಿAತ ಚೇತರಿಸಿಕೊಂಢಿದೆ ಎಂದೆಷ್ಟೇ ಹೇಳಬಹುದು. ೧೯೯೫-೯೬ ರ ವರ್ಷಕ್ಕೆ ಅಂದಾಜಿಸಲಾಗಿರುವ ಶೇಕಡಾ ಆರರ ಬೆಳವಣಿಗೆ ದರವನ್ನು ಮುಂದಿನ ಕೆಲವರ್ಷಗಳ ಮಟ್ಟಿಗಾದರೂ ಉಳಿಸಿಕೊಂಡು ಮುಂದುವರಿಯುವುದು ಸಾಧ್ಯವಾದರೆ ಅದೊಂದು ಉತ್ತಮ ಫಲಿತಾಂಶವಾಗ ಬಹುದಾಗಿದೆ. ಆರ್ಥಿಕ ಉದಾರೀಕರಣದ ನಂತರದ ವರ್ಷಗಳಲ್ಲಿ ಉತ್ತಮ ಮಂಗಾರಿನಿAದ ಕೃಷಿ ರಂಗದ ಉತ್ಪಾದನೆ ಹೆಚ್ಚಿದ್ದು ಆಹಾರ ಧಾನ್ಯ ಉತ್ಪಾದನೆಯಲ್ಲಿ ದಾಖಲೆ ನಿರ್ಮಾಣವಾಗಿದೆ. ದೊಡ್ಡ ಪ್ರಮಾಣದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಇದೆ. ಆದರೆ ವಿಚಿತ್ರವೆಂದರೆ ಬಡಜನರ ಕೊಳ್ಳುವ ಸಾಮರ್ಥ್ಯದಲ್ಲಿ ಕಡಿತವಾಗಿರುವುದು ಕಂಡÀÄ ಬರುತ್ತದೆ. ಇದು ಉತ್ಪಾದನೆ ಹೆಚ್ಚಳವಾಗಿದ್ದರೂ ಸರಿಯಾಗಿ ವಿತರಣೆಯಾಗಿಲ್ಲವೆನ್ನುವ ಅಂಶವನ್ನು ವಿಷದಪಡಿಸುತ್ತದೆ. ಕೈಗಾರಿಕಾ ರಂಗದ ಉತ್ಪಾದನೆಯಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು ಕಂಡು ಬರುತ್ತದೆ. ಆದರೆ ಹಣದುಬ್ಬರ ಮತ್ತು ವಿದೇಶಿ ಸಾಲದ ಪ್ರಮಾಣಗಳನ್ನು ಗಮನದಲ್ಲಿರಿಸಿ ನೋಡಿದರೆ ಈ ಸಾಧನೆಯಿಂದ ತೃಪ್ತಿಪಟ್ಟುಕೊಳ್ಳಲಾಗದು.

ಒಂದು ದೇಶದ ಅರ್ಥ ವ್ಯವಸ್ಥೆ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕಿದ್ದರೆ ಬಂಡವಾಳ ಸಂಚಯನ ಸಾಧ್ಯವಾಗಬೇಕು. ಅಂದರೆ ಒಟ್ಟು ಉತ್ಪಾದನಾ ಪರಿಕರಗಳು ಸಕ್ರಿಯವಾಗಿ ಹೆಚ್ಚುವರಿ ಸಂಪತ್ತು ಉತ್ಪಾದನೆಯಾಗುತ್ತದೆ. ಬಂಡವಾಳ ಸಂಚಯನದ ಸ್ಥಿತಿಯಲ್ಲಿ ೧೯೯೦-೯೧ರ ಅವಧಿಯಲ್ಲಿ ಗೋಚರಿಸಿದ ಏರಿಕೆ ತದನಂತರದ ವರ್ಷಗಳಲ್ಲಿ ಕಡಿಮೆಯಾಗುತ್ತಾ ಬಂದಿದೆ. ಅಂತೆಯೇ ರಾಷ್ಟಿçÃಯ ಉತ್ಪನ್ನದಲ್ಲಿ ಉಳಿತಾಯದ ಪ್ರಮಾಣ ಕೂಡ ಇದ್ದು ೯೦-೯೧ ರಲ್ಲಿ ೨೩.೭೧ ಕ್ಕೋ ಏರಿಕೆಯಾಗಿದ್ದು ಕಂಡು ಬರುತ್ತದೆ. ಆದರೆ ಇಂತಹ ಏರಿಕೆಯ ದರದಲ್ಲಿ ಮುಂದುವರೆಕೆಯೂ ಇಳಿಯುತ್ತಾ ಬಂದು ೧೯೯೩-೯೪ ರಲ್ಲಿ ೨೦.೨ ರಷ್ಟಾಗಿತ್ತು. ೨೦೦೧-೦೨ ರಲ್ಲಿ ಇದು ೨.೯೩%, ೨೦೦೬-೦೭ರಲ್ಲಿ ೩೪.೬೦% ಕ್ಕೆ ಏರಿದರೆ ೨೦೧೨-೧೩ರಲ್ಲಿ ೩೦.೦೯%ಕ್ಕೆ ಬಂದು ನಿಂತಿದೆ. ಉಳಿತಾಯಕ್ಕೆ ಸಂಬAಧಿಸಿದAತೆ ಇನ್ನೊಂದು ಪ್ರಮುಖ ವಿಷಯವೆಂದರೆ ಖಾಸಗೀ ರಂಗದ ಉದ್ದಿಮೆಗಳು  ಸಾಮಾನ್ಯ ಜನರು ಮಾಡುತ್ತಿದ್ದ ಉಳಿತಾಯದಲ್ಲಿ ಇಳಿಕೆ ಕಂಡು ಬಂದಿದೆ. ಇಂತಹ ಪರಿಣಾಮಗಳಿಗೆ ಖಾಸಗೀಕರಣಕ್ಕೆ ಮಹತ್ವವೇ ಮುಂತಾದ ಹೊಸ ಆರ್ಥಿಕ ನೀತಿಗಳೂಕಾರಣವಾಗಿವೆ. ಒಟ್ಟಿನಲ್ಲಿ ಮುಗ್ಗರಿಸಿದ್ದ ನಮ್ಮ ಅರ್ಥವ್ಯವಸ್ಥೆ ಮಾರುಕಟ್ಟೆ ವೃದ್ಧಿಯ ಕಾರಣ ನಿಧಾನ ಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಮಾರುಕಟ್ಟೆಯನ್ನು ವೃದ್ಧಿಗೊಳಿಸಿ ಉತ್ಪಾದನೆ ಹೆಚ್ಚು ಮಾಡುವುದು ಅಥವಾ ಅಭಿವೃದ್ಧಿ ಸಾಧಿಸಲು ಯತ್ನಿಸುವ ಮಾರ್ಗವೇ ಅಪಾಯಕಾರಿ, ಕಾರಣ ಮಾರುಕಟ್ಟೆ ಕುಸಿದರೆ ಇಡೀ ಅರ್ಥವ್ಯವಸ್ಥೆಯ ಮೇಲೆ ಅದರ ಪರಿಣಾಮ ಉಂಟಾಗುತ್ತದೆ. ಅದರಲ್ಲಿಯೂ ವಿದೇಶೀ ಮಾರುಕಟ್ಟೆಯ ಬೇಡಿಕೆಯನ್ನು ಅವಲಂಭಿಸಿ, ಯಾ ನಿರ್ಯಾತ ಆಧಾರಿತ ಆರ್ಥಿಕ ಅಭಿವೃದ್ಧಿ ಇನ್ನೂ ಅಪಾಯಕಾರಿ. ಕಾರಣ ಆಂತರಿಕ ಮಾರುಕಟ್ಟೆಯನ್ನು ದೇಶದ ಆರ್ಥಿಕ, ಹಣಕಾಸು, ಕೈಗಾರಿಕ ನೀತಿಯ ಮೂಲಕ ಪ್ರಭಾವಿಸಬಹುದು. ಅದರೆ ಅಂತಾರಾಷ್ಟಿçÃಯ ಮರುಕಟ್ಟೆಯ ಮೇಲೆ ಭಾರತದಂತಹ ರಾಷ್ಟçಗಳು ಪ್ರಭಾವಿಸುವ ಸಾಧ್ಯತೆಗಳು ಇಲ್ಲ. ಕಾರಣ ಅಂತಾರಾಷ್ಟಿçÃಯ ವ್ಯಾಪಾರದಲ್ಲಿ ನಮ್ಮ ದೇಶದ ಪಾಲು ಶೇಕಡಾ ಎರಡಕ್ಕಿಂತಲೂ ಕಡಿಮೆ ಇದೆ. ಆದರೆ ೮೦ರ ದಶಕದಲ್ಲಿ ನಾವು ಇರಿಸಿಕೊಂಡಿದ್ದ ಗುರಿಗಳಿಗಿಂತ ಉಳಿತಾಯದ ಪ್ರಮಾಣದಲ್ಲಿ ನಿರುತ್ಸಾಹಕ ವಾತಾವರಣ, ವಿದೇಶೀ ಬಂಡವಾಳದ ಮೇಲೆ ಅತೀ ಅವಲಂಬನೆ ಮುಂತಾದ ಅಂಶಗಳನ್ನು ಗಮನಿಸಿದಾಗ ಗುರಿಸಾಧನೆ ಸಾಧ್ಯವೇ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಹೊಸ ಆರ್ಥಿಕ ನೀತಿ ಪ್ರತಿಪಾದಿಸುವ ಮಹತ್ವದ ಅಂಶಗಳಲ್ಲಿ ಸರಕಾರದ ಹಸ್ತಕ್ಷೇಪ ಕಡಿಮೆಯಾಗಬೇಕು ಎನ್ನುವುದೂ ಒಂದಾಗಿದೆ. ಉತ್ಪಾದನಾ ರಂಗಗಳಲ್ಲಿ ಸರಕಾರ ತನ್ನ ಪಾತ್ರವನ್ನು ಆದಷ್ಟು ಮಿತಿಗೊಳಿಸಿ ಖಾಸಗೀ ವಲಯ ಸಕ್ರಿಯವಾಗಲು ಅವಕಾಶ ನೀಡಬೇಕೆನ್ನುವುದು ಉದಾರ ಆರ್ಥಿಕ ನೀತಿಯ ಮೂಲತತ್ವ ಕೂಡ. ಅಂತರಾಷ್ಟಿçÃಯ ಹಣಕಾಸು ಸಂಸ್ಥೆಗಳು ಸಾಲ ನೀಡುವಾಗ ಇಂತಹ ವಾತಾವರಣ ಸೃಷ್ಟಿಸುವ ದೃಷ್ಟಿಯಿಂದ ಶರತುಗಳನ್ನು ವಿಧಿಸುತ್ತದೆ. ರಷ್ಯಾದ ಅರ್ಥ ವ್ಯವಸ್ಥೆ ಕುಸಿದು ಬಿದ್ದ ನಂತರ ಅಭಿವೃದ್ಧಿಗೆ ಸರಿಯಾದಮಾರ್ಗವೇ ಮುಕ್ತ ಅರ್ಥವ್ಯವಸ್ಥೆ ಅಥವಾ ಜಾಗತೀಕರಣ ಎನ್ನುವ ವಾದ ಪ್ರಬಲವಾಗಿ ಕೇಳಿಬರುತ್ತಿದೆ. ಅಭಿವೃದ್ಧಿ ಶೀಲ ರಾಷ್ಟçಗಳಿಗೆ ಬೇಕಾದಂತಹ ಬಂಡವಾಳ ಮತ್ತು ತಂತ್ರಜ್ಞಾನವನ್ನು ಅಪಾರವಾಗಿ ಹೊಂದಿರುವ ಮುಂದುವರಿದ ರಾಷ್ಟçಗಳು ಹೇಳುವುದನ್ನು ಬಡದೇಶಗಳು ಕೇಳಲೇ ಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಮುಂದುವರಿದ ರಾಷ್ಟçಗಳು ತಮ್ಮಲ್ಲಿರುವ ಎಲ್ಲಾ ಅವಕಾಶಗಳನ್ನು ವ್ಯಯಿಸಿಕೊಂಡಿವೆ. ಹಾಗಾಗಿ ಮುಂದುವರಿದ ಶ್ರೀಮಂತ ದೇಶಗಳಿಗೆ ತಮ್ಮ ಶ್ರೀಮಂತಿಕರಯನ್ನು ಉಳಿಸಿಕೊಳ್ಳಲು ಮತ್ತು ಬಂಡವಾಳ ವಿನಿಯೋಗಿಸುವ ಅವಕಾಶ ಪಡೆಯಲು ಅಭಿವೃದ್ಧಿ ಶೀಲ ದೇಶದೊಳಕ್ಕೆ ಪ್ರವೇಶಿಸದೆ ಅನ್ಯ ಮಾರ್ಗವಿಲ್ಲದಂತಾಗಿದೆ. ಹಾಗಾಗಿ ಆರ್ಥಿಕ ಉದಾರೀಕರಣ ಅಂತಹ ದೇಶಗಳಿಗೆ ಅನಿವಾರ್ಯವಾಗಿದೆ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟçದಲ್ಲಿ ಸರಕಾರ ಹಲವಾರು ರೀತಿಯ ಕಾನೂವು ಕಾಯಿದೆಗಳ ಯಾ ಶಾಸನಾತ್ಮಕ ಕ್ರಮಗಳ ಮೂಲಕ ಖಾಸಗೀ ರಂಗದ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಹಲವಾರು ರೀತಿಯ ಉತ್ಪಾದಕ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗುತ್ತದೆ. ಆರ್ಥಾತ್ ಸಾರ್ವಜನಿಕ ರಂಗದ ಉದ್ದಿಮೆಗಳು ಸರಕಾರದ ಒಡೆತನಕ್ಕೆ ಸೇರದವುಗಳಾಗಿವೆ. ಆರ್ಥಿಕ ಉದಾರೀಕರಣ ಪ್ರತಿ ಪಾದಿಸುವ ತತ್ವವೇನೆಂದರೆ ಭಾರತದಂತಹ ದೇಶದಲ್ಲಿ ಸರಕಾರ ಶಾಸನಾತ್ಮಕ ತೊಡಕುಗಳನ್ನು ನಿವಾರಿಸಿ ಖಾಸಗಿ ರಂಗದ ಕಾರ್ಯ ದಕ್ಷತೆಗೆ ಸಂಪೂರ್ಣ ಅವಕಾಶ ಮಾಡಿಕೊಡಬೇಕು. ಸರಕಾರ ನಡೆಸುವ ಉದ್ದಿಮೆಗಳು ನಷ್ಟವನ್ನು ಅನುಭವಿಸುತ್ತಿರುವುದರಿಂದ  ಅವುಗಳನ್ನು ಖಾಸಗಿಯವರಿಗೆ ಮಾರಿ ಬರುವ ಹಣದಿಂದ ಸರಕಾರದ ಬಜೆಟ್ ಕೊರತೆ ತುಂಬಲು ಬಳಸಿಕೊಳ್ಳಬೇಕು. ಸರಕಾರ ತನ್ನ ಆದಾಯದ ಮೂಲಗಳಿಗಿಂತ ಹೆಚ್ಚು ವೆಚ್ಚ ಮಾಡುವ ಪರಿಪಾಠವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಂತಹ ವಾದಗಳು ಬಹಳ ಆಕರ್ಷಕ ಮತ್ತು ಸತ್ಯವಾದಂತಹವುಗಳು ಎನಿಸುತ್ತದೆ. ಇದರ ಹಿಂದಿರುವ ಬಂಡವಾಳಶಾಹಿ (ಚಿಂತನೆ) ಉದ್ದೇಶ ಜನಸಾಮಾನ್ಯರಿಗೆ ತಿಳಿಯುವುದೇ ಇಲ್ಲ. ೧೯೯೧ರಲ್ಲಿ ವಿಶ್ವ ಬ್ಯಾಂಕ್ ಮತ್ತು ಅಂತರಾಷ್ಟಿçÃಯ ದ್ರವ್ಯ ನಿಧಿಯಿಂದ ಸಾಲ ಪಡೆದಾಗ ಅವರು ವಿಧಿಸಿದ ಹಲವು ಶರತ್ತುಗಳಲ್ಲಿ ಸರಕಾರ ಬಜೆಟ್ ಕೊರತೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿ ಆದಾಯಕ್ಕನುಗುಣವಾಗಿ ವೆಚ್ಚ ಮಾಡಬೇಕೆನ್ನುವುದು ಪ್ರಮುಖವಾಗಿದೆ. ೧೯೯೧ರಿಂದೀಚೆಗಿನ ಕೊರೆತೆಯನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗಿದೆ.೧೯೯೦-೯೧ರಲ್ಲಿ ರಾಷ್ಟಿçÃಯ ಉತ್ಪನ್ನದ ೮.೪ ಇದ್ದ ಕೊರೆತೆಯ ಪ್ರಮಾಣ ೯೪.೫೪ರಲ್ಲಿ ೯೫-೯೬ರ ಬಜೆಟ್ ಈ ಕೊರತೆಯ ಮಟ್ಟವನ್ನು ೫.೫ ರಷ್ಟಕ್ಕೆ ಮಿತಿಗೊಳಿಸುವ ಗುರಿಹೊಂದಿದೆ. ಇಲ್ಲಿ ಕೊರತೆಯ ಮೂಲವಾಗಿರುವ ಸರಕಾರ ಆದಾಯದ ಮತ್ತು ಖರ್ಚಿನಲ್ಲಿ ಎರಡು ವಿಧಗಳಿವೆ. ಒಂದು ಸಾಮಾನ್ಯ ಖರ್ಚು, ಕಾನೂನು ಶಿಸ್ತು ಪಾಲನೆ, ಆಡಳಿತ ವೆಚ್ಚ ಮುಂತಾದ ನೇರ ಪ್ರತಿಫಲವಿಲ್ಲದ ಉದ್ದೇಶಗಳಿಗೆ ಆಗುತ್ತದೆ. ಎರಡನೆÀಯದು ಬಂಡವಾಳ ಖರ್ಚು, ಕೃಷಿ ಉದ್ದಿಮೆ ಸ್ಥಾಪನೆ, ಉದ್ಯೋಗಾವಕಾಶ ಸೃಷ್ಟಿ, ಮುಂತಾದ ಉದ್ದೇಶಗಳಿಗಾಗುತ್ತದೆ. ಹಾಗಾಗಿ ಸಾರಾಸಗಟಾಗಿ ಸರಕಾರ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು ನಿರುಪಯುಕ್ತ ಎಂದು ಹೇಳುವ ಹಾಗಿಲ್ಲ. ಯಾಕೆಂದರೆ ಬಡಜನರ ಸಂಖ್ಯೆ ಅಧಿಕವಾಗಿರುವ ನಮ್ಮ ದೇಶದಲ್ಲಿ ಅವರಿಗೆ ಆದಾಯ ಗಳಿಸಿಕೊಡಲು ಸರಕಾರ ಬಂಡವಾಳ ಖರ್ಚುಗಳನ್ನು ಮಾಡುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಬಂಡವಾಳ ಖರ್ಚು ಸಮಾಜದ ಕೆಳಸ್ತರದ ಅಂದರೆ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಯೋಜನ ನೀಡುವಂತಹ ರೀತಿಯ ಖರ್ಚಾಗಿದೆ. ಹಾಗಾಗಿ ಸರಕಾರದ ಖರ್ಚು ಯಾ ಕೊರತೆಯ ಮೂಲ ಕಾರಣ ತಿಳಿದು ಅದು ಸಾಮಾನ್ಯ ಖರ್ಚಾಗಿದ್ದರೆ ಮಾತ್ರ ಅದು ಅಪ್ರಯೋಜಕ ಯಾ ನಿರುಪಯುಕ್ತ ಎಂದು ಹೇಳಬಹುದೇ ಹೊರತು ಬಂಡವಾಳ ಖರ್ಚಾದಾಗ ಹಾಗೆ ಹೇಳುವ ಹಾಗಿಲ್ಲ. ೧೯೯೧-೯೨ ರ ನಂತರದಲ್ಲಿ ನಮ್ಮ ಬಜೆಟ್ ಕೊರತೆಯ ಪ್ರಮಾಣದಲ್ಲಿ ಇಳಿಮುಖವಾಗಿರುವುದೇ ಒಂದು ದೊಡ್ಡ ಸಾಧನೆಯೆಂದು ಹೇಳಲಾಗುತ್ತಿದೆ. ಆದರೆ ಈ ಕೊರೆತೆಯ ಪ್ರಮಾಣದ ಇಳಿಕೆಗೆ ಮುಖ್ಯ ಕಾರಣ ಸರಕಾರ ಬಂಡÀವಾಳ ಖರ್ಚನ್ನು ಕಡಿಮೆಮಾಡಿ ಉತ್ಪಾದಕ ಚಟುವಟಿಕೆಗಳಿಗೆ ಹರಿದು ಹೋಗುತ್ತಿರುವ ಹಣದ ಪ್ರಮಾಣವನ್ನು ತÀಡೆದುದೇ ಆಗಿದೆ. ಇನ್ನೊಂದೆಡೆ ಸಾಮಾನ್ಯ ಆಡಳಿತಾತ್ಮಕ ಖರ್ಚುಗಳು ಏರುತ್ತಲೇ ಇದೆ. ಇಂತಹ ಉದ್ದೇಶಗಳಿಗೆ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವ ಬದಲು ನಾವು ಸಾಲ ಪಡೆಯುತ್ತಲಿದ್ದೇವೆ. ನಮ್ಮ ಆದಾಯದ ಬಹುಪಾಲು ಹಣ ಬಡ್ಡಿ ಪಾವತಿಸಲು ವಿನಿಯೋಗವಾಗುತ್ತಿದೆ. ಇದು ಪ್ರತಿವರ್ಷ ಏರುತ್ತಲೇ ಇದೆ. ಇನ್ನೊಂದೆಡೆ ತೆರಿಗೆಯ ಆದಾಯದಲ್ಲಿ ಇಳಿತವುಂಟಾಗುತ್ತಲಿದೆ. ೧೯೯೦-೯೧ ರಲ್ಲಿ ರಾಷ್ಟಿçÃಯ ಉತ್ಪನ್ನದ ೧೦.೮% ರಷ್ಟಿದ್ದ ತೆರಿಗೆ ಆದಾಯ ೯೪-೯೫ ರಲ್ಲಿ ೯.೬% ಕ್ಕೆ ಇಳಿದಿದೆ. ಬಜೆಟ್ ಕೊರತೆಯಲ್ಲಿ ಸರ್ಕಾರಗಳಿಗೆ ನೀಡುವ ಸಂಪನ್ಮೂಲದ ಪ್ರಮಾಣದಲ್ಲಿ ಕಡಿತವುಂಟು ಮಾಡಲಾಗಿದೆ. ಇದರ ಪರಿಣಾಮವಾಗಿ ರಾಜ್ಯ ಸರಕಾರಗಳು ಕೃಷಿ ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾರ್ಯಗಳನ್ನು  ನಿಧಾನಗೊಳಿಸುತ್ತದೆ. ೧೯೯೦-೯೧ರಲ್ಲಿ ರಾಷ್ಟಿçÃಯ ಉತ್ಪನ್ನದ ೯.೧% ನ್ನು ರಾಜ್ಯಗಳು ಪಡೆಯುತ್ತಿದ್ದರೆ, ೯೪.೯೫ ರಲ್ಲಿ ಇದು ೪.೫% ರಷ್ಟು ಮತ್ತು ೨೦೧೫-೧೬ರ ಸಾಲಿನಲ್ಲಿ ೪.೧% ದಷ್ಟಿದೆ. ಹಾಗಾಗಿ ಸರಕಾರ ಬಜೆಟ್ ಕೊರತೆ ಕಡಿಮೆ ಮಾಡಲು ಅನುಸರಿಸಿದ ಮಾರ್ಗಗಳು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಹೇಳಬಹುದು. ಇಂತಹ ನೀತಿಗಳ ಪರಿಣಾಮ ತಿಳಿದು ಬರಲು ಕೊಂಚ ಕಾಲಾವಕಾಶ ಬೇಕಾಗಬಹುದೇನೋ?

ಸಾರ್ವಜನಿಕ ರಂಗದ ಉದ್ದಿಮೆಗಳು ತೆರಿಗೆದಾರರಿಂದ ಸಂಗ್ರಹವಾಗುವ ಕೋಟಿಗಟ್ಟಲೆ ಹಣವನ್ನು ತಿಂದು ಯಾವ ಪ್ರತಿಫಲವನ್ನು ನೀಡುತ್ತಿಲ್ಲ ಎನ್ನುವ ವಾದವಿದೆ. ಇಲ್ಲಿ ನಾವು ನೆನಪಿಡಬೇಕಾದ ಅಂಶವೆAದರೆ ಇಂತಹ ಉದ್ದಿಮೆಗಳು ದೇಶದ ಆರ್ಥಿಕ ಅಭಿವೃದ್ದಿಯ ದೃಷ್ಟಿಯಿಂದ ಅನಿವಾರ್ಯವಾಗಿದ್ದು ಖಾಸಗಿ ರಂಗ ಇಂತಹ ಉದ್ದಿಮೆಗಳಲ್ಲಿ ಹಣ ತೊಡಗಿಸಲು ಸಾಧ್ಯವಿಲ್ಲದಂತಹ ಸಮಯದಲ್ಲಿ ಇದನ್ನು ಕೈಗೆತ್ತಿಕೊಂಡು ದಕ್ಷವಾಗಿ ನಡೆಸಿಕೊಂದು ಬಂದಿದೆ. ಇಂತಹ ಉದ್ಯಮಗಳು ನಷ್ಟ ಅನುಭವಿಸಲು ಪ್ರಮುಖ ಕಾರಣ ಅರ್ಥ ಮೂಲವಾಗಿಲ್ಲದೇ ಬೇರೆಯೇ ಆಗಿದೆ. ಸಾಮಾನ್ಯವಾಗಿ ಸರಕಾರೀ ರಂಗದ ಉದ್ದಿಮೆಗಳು ರೋಗಗ್ರಸ್ಥವಾಗಲು ಅದಕ್ಷತೆ, ನೌಕರವರ್ಗದ ಸೋಮರಿತನ, ರಾಜಕೀಯ ಹಸ್ತಕ್ಷೇಪವೇ ಮುಂತಾದ ಕಾರಣಗಳನ್ನು ನೀಡಲಾಗುತ್ತದೆ. ಆದರೆ ಸರಕಾರೀ ರಂಗದ ಉದ್ದಿಮೆಗಳು  ಖಾಸಗೀ ರಂಗದ ಉದ್ದಿಮೆಗಳಿಗಿಂತಲೂ ದಕ್ಷವಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳು ಬಹಳಷ್ಟಿವೆ. ಇಂತಹ ಆರೋಪ ಪ್ರತ್ಯಾರೋಪಗಳನ್ನು ಖಾಸಗೀ ಮತ್ತು ಸರಕಾರ ಎರಡೂ ರಂಗಗಳ ಕಡೆಯಿಂದ ಮಾಡಬಹುದು. ಉದ್ಯಮವೊಂದರ ದಕ್ಷ ಕಾರ್ಯ ನಿರ್ವಹಣೆಯನ್ನು ನಿರ್ಧರಿಸುವ ಅಂಶಗಳು ಈ ಚರ್ಚೆಗಿಂತ ಭಿನ್ನವಾಗಿರಬಹುದಾದ ಸಾಧ್ಯತೆಗಳನ್ನು ನಾವು ಮನಗಾಣಬೇಕು. ಹಲವಾರು ಸಂದರ್ಭಗಳಲ್ಲಿ ಸರಕಾರೀ ರಂಗದ ಉದ್ದಿಮೆಗಳನ್ನು ಪೂರ್ವಕವಾಗಿ ರೋಗಗ್ರಸ್ಥವನ್ನಾಗಿ ಮಾಡುವ ಹುನ್ನಾರಗಳೂ ನಡೆದಿವೆ, ಮತ್ತು ನಡೆಯುತ್ತಿವೆ. ಖಾಸಗೀ ವಲಯದ ಮುಲಾಜಿಗೆ ಒಳಗಾಗುವ ರಾಜಕೀಯ ಪಕ್ಷಗಳು ಯಾರದೋ ಒತ್ತಡಗಳಿಗೆ ಒಳಗಾಗಿ ಗುಪ್ತ ಕಾರ್ಯಸೂಚಿಯ ಕಾರ್ಯಾನುಷ್ಟಾನದ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುವ ಉದಾಹರಣೆಗಳು ನಮ್ಮ ಮುಂದಿವೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ದೂರ ಸಂಚಾರ ನಿಗಮವನ್ನು ಅದಕ್ಷವಾಗಿಸುವ ನಿಟ್ಟಿನಲ್ಲಿ ಸರಕಾರದ ವರ್ತನೆ ಕಂಡು ಬರುತ್ತಿದೆ ಎಂದು ನೌಕರವರ್ಗ ಟೀಕಿಸುತ್ತಿದೆ. ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲೂ ಕಲ್ಲಿದ್ದಲು ಹಗರಣ, ೨ಜಿ ಹಗರಣಗಳು ಈ ವಿಷಯವನ್ನು ನಿಚ್ಚಳಗೊಳಿಸುತ್ತಿವೆ. ಹೀಗೆ ಈ ಉದ್ಯಮಗಳ ಕಳಪೆ ನಿರ್ವಹಣೆಗೆ ರಾಜಕೀಯ ಹಸ್ತಕ್ಷೇಪ ಮತ್ತು ಖಾಸಗೀ ಉದ್ದಿಮೆರಂಗದ ಕರಾಮತ್ತುಗಳು ಕಾರಣವಾಗಿದೆ. ಇಂದು ನಾವು ಇಂತಹ ಉದ್ದಿಮೆಗಳ ಶೇರುಗಳನ್ನು ಸಾರ್ವಜನಿಕರಿಗೆ ಮಾರಲು ಹೊರಟ್ಟಿದ್ದೇವೆ. ಈ ಸಾರ್ವಜನಿಕ ರಂಗದ ಉದ್ದಿಮೆಗಳ ಆಸ್ತಿಯ ನಿಜವಾದ ಮೌಲ್ಯ ಪುಸ್ತಕದಲ್ಲಿ ನಮೂದಿಸಿರುವುದಕ್ಕಿಂತ ಹಲವಾರು ಪಟ್ಟು ಜಾಸ್ತಿಯಿದೆ. ತಮಾಷೆಯೆಂದರೆ ಮುಖಬೆಲೆಗೆ ಯಾ ದಾಖಲಿತ ಬೆಲೆಗೆ ಅವುಗಳನ್ನು ಮಾರ ಹೊರಟಾಗಲೂ ಖರೀದಿಗಾರರೇ ಇಲ್ಲದಂತಹ ಸಂದರ್ಭವಿದೆ ಕಾರಣ ಸರಕಾರ ಸಾರ್ವಜನಿಕ ರಂಗದ ಕಂಪನಿಗಳ ಶೇರುಗಳನ್ನು ಮಾರಾಟಮಾಡಿ ಸಂಪÀನ್ಮೂಲ ರೂಢಿಸ ಹೊರಟಿರುವ ವಿಚಾರ ಈಗಾಗಲೇ ಎಲ್ಲ ವಲಯಗಳಲ್ಲೂ ಗೊತ್ತಿರುವುದರಿಂದ ಖಾಸಗೀ ಉದ್ಯಮ ರಂಗ ಶೇರುಗಳ ಬೆಲೆಯಲ್ಲಿ ಇನ್ನೂ ಇಳಿತವುಂಟÁಗುವುದನ್ನು ನಿರೀಕ್ಷಿಸುತ್ತದೆ. ಸಾರ್ವಜನಿಕ ರಂಗದ ಉದ್ದಿಮೆಗಳ ಶೇರುಗಳನ್ನು ಹೀಗೆ ಬಿಕರಿ ಮಾಡುವುದರಿಂದ ಆಗಬಹುದಾದ ಇನ್ನೊಂದು ಅಪಾಯವೆಂದರೆ, ದೇಶದ ಹಿತದಷ್ಟಿಯಿಂದ ಹುಟ್ಟಿಕೊಂಡ ಇಂತಹ ಉದ್ದಿಮೆಗಳ ಶೇರುಗಳು ವಿದೇಶಿಯರ ಪಾಲಾಗುವ ಸಾಧ್ಯತೆಗಳಿವೆ. ಜಗತೀಕರಣ, ಮುಕ್ತಮಾರುಕಟ್ಟೆ ಯಾ ಉದಾರ ಅರ್ಥಿಕತೆಯ ಪರಿಣಾಮ ಹಿತಕಾರಿಯಾಗುವಂತೆ ಕಾಣುಸುತ್ತಿಲ್ಲ.

ಹಿಂದಿನ ಸರಕಾರ ಆರ್ಥಿಕ ಕಾರ್ಯಕ್ರಮಗಳನ್ನು ಕಟುವಾಗಿ ಟೀಕಿಸುತ್ತಿದ್ದ ರಾಜಕೀಯ ಪಕ್ಷಗಳೆಲ್ಲಸೇರಿ ಎನ್‌ಡಿಎ ಪಕ್ಷ ರಚಿಸಿಕೊಂಡ ಸಂಯುಕ್ತ ರಂಗ ಸರಕಾರ ೨೦೧೪ ಜೂನ್ ನಿಂದ ಅಧಿಕಾರ ನಡೆಸುತ್ತಿದೆ. ಯಾವ ಆರ್ಥಿಕ ಕಾರ್ಯಕ್ರಮಗಳನ್ನು ಈಗ ಅಧಿಕಾರದಲ್ಲಿರುವ ಪಕ್ಷ ಟೀಕಿಸುತ್ತಿದ್ದವೋ, ಅದೇ ಇಂದು ಉದಾರೀಕರಣವನ್ನು ಮುಂದುವರಿಸಿಕೊAಡು ಹೋಗಬೇಕಾಗಿರುವುದು ರಾಜಕೀಯ ದುರಂತವಾಗಿದೆ. ಮುಕ್ತ ಅರ್ಥ ವ್ಯವಸ್ಥೆಯ ಬಗೆ ಒಲವಿರುವ ಅರುಣ್ ಜೇಟ್ಲಿ ಸಚಿವರಾಗಿ ಮುಂದುವರಿಯುತ್ತಿದ್ದಾರೆ. ೨೦೧೪-೧೫ ಸಾಲಿನ ಮುಂಗಡ ಪತ್ರ ಹಿಂದಿನ ಕಾಂಗ್ರೆಸ್ ಸರಕಾರದ ಉದಾರೀಕರಣ ನೀತಿಯ ಮುಂದುವರಿಕೆಯಾಗಿದೆ. ದೇಶದ ಶೇರು ಮಾರುಕಟ್ಟೆ ಸ್ಥಿರವಾಗೇನೂ ಇಲ್ಲ, ವಿದೇಶಿ ಬಂಡವಾಳ ಸಂಗ್ರಹಿಸಲು ಪ್ರಯತ್ನಗಳು ಮುಂದುವರೆಯುತ್ತಲಿವೆ. ಒಟ್ಟಿನಲ್ಲಿ ಯಾವ ಉದ್ದೇಶಕ್ಕಾಗಿ ನಾವು ನಿಯಂತ್ರಣ ವ್ಯವಸ್ಥೆಯಿಂದ ಮುಕ್ತ ಅರ್ಥ ವ್ಯವಸ್ಥೆಯೆಡೆಗೆ ಹೊರಟ್ಟಿದ್ದೆವೋ ಅಂತಹ ಪ್ರಯತ್ನಗಳು ಸಂಪೂರ್ಣ ಫಲಕಾರಿಯಾಗಿದೆ ಎಂದು ಹೇಳುವ ಹಾಗಿಲ್ಲ. ಜಾಗತೀಕರಣದ ಇಡೀ ಪ್ರಕ್ರಿಯೆ ಪೂರ್ಣಗೊಂಡರೆ ವಿಶ್ವದಲ್ಲಿನ ವ್ಯವಸ್ಥೆ ಹೇಗಾಗಬಹುದು ಎನ್ನುವ ಪ್ರಶ್ನೆಯೂ ಪ್ರಸ್ತುತವೇ?

ಆರ್ಥಿಕ ಆಭಿವೃದ್ಧಿ ನೀತಿಯಲ್ಲಿ ಮೂಲಭೂತ ಬದಲಾವಣೆಗೆ ಕಾರಣಗಳನ್ನು ನಮ್ಮ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಹಿನ್ನಲೆಯಲ್ಲಿ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಹಾಗೆಯೇ ಅಭಿವೃದ್ಧಿಯ ನೀತಿಯಲ್ಲಿರಬಹುದಾದ ಲೋಪದೋಷಗಳು, ರಾಜಕೀಯರಂಗದಲ್ಲಿ ಆದಂತಹ ಬದಲಾವಣೆಗಳು, ಸಾಮಾಜಿಕ ಅಸಮಾನತೆ, ೮೦ರ ದಶಕದ ನಂತರ ನಮ್ಮ ಅಭಿವೃದ್ಧಿ ನೀತಿಗಳಲ್ಲಿ ಉಂಟಾದ ಬದಲಾವಣೆಗಳು ಮುಂತಾದುವೆಲ್ಲ ಇಂದು ಆಗಿರಬಹುದಾದಂತಹ ಬದಲಾವಣೆಗೆ ಕಾರಣವೆಂದೊಪ್ಪಿಕೊAಡರೂ ಇಂತಹ ಬದಲಾವಣೆಗಳಿಗೆಲ್ಲ ಮೂಲವಾಗಿರುವ ಅಂಶಗಳು ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಬಲವಾಗಿರುವ ಬಂಡವಾಳಶಾಹಿ ಎನ್ನುವುದನ್ನು ತಿಳಿಯಬೇಕಾಗಿದೆ. ೧೯೪೭ರ ಹೊತ್ತಿಗೆ ಬಂಡವಾಳಶಾಹಿ ಮತ್ತು ಈ ವ್ಯವಸ್ಥೆಯನ್ನು ಪ್ರಶ್ನಿಸುವ ಇನ್ನೊಂದು ಗುಂಪು ಪ್ರಬಲವಾಗಿದ್ದವು. ನಂತರದಲ್ಲಿ ಅಂದರೆ ೧೯೮೦ರಷ್ಟು ಹೊತ್ತಿಗೆ  ರಷ್ಯಾದಲ್ಲಿ ತಲೆದೂರಿದ ಅಂತರಿಕ ಸಮಸ್ಯೆಗಳಿಂದಾಗಿ ಕಮ್ಯುನಿಸ್ಟ್ ಸರಕಾರದ ಪತನ ಅಂತರಾಷ್ಟಿçÃಯವಾಗಿ ಬಂಡವಾಳಶಾಹಿಗೆ ಸವಾಲೇ ಇಲ್ಲದಂತೆ ಮಾಡಿತು. ರಷ್ಯಾದೊಂದಿಗೆ ನಾವು ಹೊಂದಿದ್ದ ಆರ್ಥಿಕ ಮತ್ತು ರಾಜಕೀಯ ಸಂಬAಧಗಳಿAದಾಗಿ ನಮಗಿದೊಂದು ಆಘಾತವೇ ಆಯ್ತು. ರಷ್ಯಾದ ಪತನಾನಂತರ ಭಾರತ ಪರ್ಯಾಯ ಮಾರುಕಟ್ಟೆಯ ಅನ್ವೇಷಣೆಗೆ ತೊಡಗಿತು. ಇಂತಹ ಅನ್ವೇಷಣೆಯ ಪರಿಣಾಮವಾಗಿ ಆಫ್ರಿಕಾದ ದೇಶಗಳನ್ನು ಗಮನದಲ್ಲಿರಿಸಿ ಮಾರುಕಟ್ಟೆ ಹೊಂದುವ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ. ಸ್ವರೂಪತ್ಮಕಾ ಕಾರಣಗಳಿಗಾಗಿ ಮತ್ತು ವ್ಯಾಪಾರದ ದೃಷ್ಟಿಯಿಂದಲೂ ಇದು ಉತ್ತಮ ಕ್ರಮ. ಆದರೆ ಇದಿನ್ನೂ ಆರಂಭದ ಹಂತದಲ್ಲಿದೆ. ಅಲ್ಲದೆ ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ಆಫ್ರಿಕಾದ ದೇಶಗಳು (ಬ್ರಿಕ್) ಒಂದುಗೂಡಿ ತಮ್ಮೊಳಗೆ ವ್ಯಾಪ್ಪಾರ ವೃದ್ದಿಸುವ ಬಗೆಗಿನ ಯೋಜನೆಗಳೂ ಕಾರ್ಯರೂಪಕ್ಕೆ ಬರುತ್ತಿವೆ. ಈ ನಿಟ್ಟಿನಲ್ಲಿ ಬ್ರಿಕ್ ಬ್ಯಾಂಕ್ ಒಂದನ್ನು ಸ್ಥಾಪಿಸುವ ಕುರಿತು ಬ್ರಿಕ್ ರಾಷ್ಟçಗಳು ನಿರ್ಧಾರ ಕೈಗೊಂಡಿವೆ. ಬ್ರಿಕ್ ದೇಶಗಳ ನಡುವೆ ವಿದೇಶೀ ವ್ಯಾಪಾರವನ್ನು ಬಲಗೊಳಿಸುವುದು ಬ್ಯಾಂಕ್ ಸ್ಥಾಪನೆಯ ಉದ್ದೇಶವಾಗಿದೆ. ೧೯೮೯-೯೦ರಲ್ಲಿ ನಡೆದ ಕೊಲ್ಲಿ ಯದ್ಧದ ಪರಿಣಾಮ ಮುಕ್ತ ಅರ್ಥವ್ಯವಸ್ಥೆಗೆ ಹೊಸ ಆತ್ಮ ವಿಶ್ವಾಸವನ್ನೇ ನೀಡಿತೆಂದರೂ ತಪ್ಪಾಗಲಾರದು. ಸಮಾಜವಾದಿ ವ್ಯವಸ್ಥೆ ಒಂದು ಉತ್ತಮ ಅಭಿವೃದ್ಧಿ ನೀತಿ ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಅನುವು ಮಾಡಿಕೊಡುವುದಿಲ್ಲ. ಎನ್ನುವುದನ್ನು ಪಶ್ಚಿಮದ ದೇಶಗಳು ರಷ್ಯಾವನ್ನು ಉದಾಹರಿಸಿ ಪ್ರಚಾರ ಮಾಡುತ್ತಾ ಬಂದವು. ಆದರೆ ಇಲ್ಲಿ ನಾವು ನೆನಪಿಟ್ಟುಕೊಳ್ಳಬೇಕಾದ ಅಂಶವೆAದರೆ ೧೯೩೦ ರ ದಶಕದಲ್ಲಿ ಬಂಡವಾಳಶಾಹಿ ದೇಶಗಳು ಆರ್ಥಿಕ ಸಂಕಷ್ಟದಲ್ಲಿದ್ದಾಗ ಸಮಾಜವಾದಿ ರಾಷ್ಟç ಸೋವಿಯತ್ ರಷ್ಯಾ ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಪ್ರಗತಿ ಸಾಧಿಸಿತ್ತು. ಬದಲಾದ ಜಾಗತಿಕ ಪರಿಸ್ಥಿತಿಯಲ್ಲಿ ಜಗತ್ತಿನಲ್ಲಿ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟçಗಳು ಮುಂದುವರಿಯಬೇಕಾದರೆ, ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಬಲವಾಗಿರುವ ಬಂಡವಾಳಶಾಹಿಯ ದ್ಯೆತ್ಯ ಶಕ್ತಿಯೊಂದಿಗೆ ಕೂಡಿ ಬಾಳುವುದು ಅನಿವಾರ್ಯವಂತೂ ಆಗಿದೆ ಎನ್ನುವ ಮಾತು ಕೇಳಿಬರುತ್ತದೆ. ಆದರೆ ಸಾಮ್ರಾಜ್ಯಶಾಹೀ ನೀತಿಯ ಯಶಸ್ಸಿಗೆ ಅಮೆರಿಕನ್ ಪ್ರಜೆಗಳು ತೆರುತ್ತಿರುವ ಬೆಲೆಯ ಕುರಿತಂತೆ ಅಲ್ಲಿನ ಪ್ರಜೆಗಳು ಸಂತೋಷವಾಗಿಲ್ಲ. ಆದರೆ ಈ ಹುಲಿ ಸವಾರಿಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ತರುವ ಮಾರ್ಗೋಪಾಯ ಯಾವುದು ಎನ್ನುವುದೇ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ.


 ಭಾಗ – ೩

ಭಾರತೀಯ ಆರ್ಥಿಕ ವ್ಯವಸ್ಥೆ ಮತ್ತು ಹೊಸ ಆರ್ಥಿಕ ನೀತಿ

ಭಾರತೀಯ ಅರ್ಥವ್ಯವಸ್ಥೆಯಲ್ಲಿ, ಆರ್ಥಿಕ ಉದಾರೀಕರಣದ ನಂತರ ಬಹಳಷ್ಟು ಗಂಗೆಯಲ್ಲಿ  ಕಳೆದ ೩೫ ವರ್ಷಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಅಂತೆಯೇ ದೇಶದಲ್ಲಿ ಸಮ್ಮಿಶ್ರ ಸರಕಾರಗಳ ಯುಗ ಆರಂಭವಾಗಿದೆ. ಕಾಂಗ್ರೆಸ್ ಪಕ್ಷ ಇನ್ನಿಲ್ಲದ ರೀತಿಯಲ್ಲಿ ಹೊಡೆತ ತಿಂದಿದೆ ಹಾಗೂ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ದೇಶದಲ್ಲಿ ಒಟ್ಟಾರೆ ಸಂಪನ್ಮೂಲ ಹೆಚ್ಚುತ್ತಿದ್ದರೂ ಪ್ರಾದೇಶಿಕವಾಗಿ ಜನಸಮುದಾಯ ತೃಪ್ತಗೊಂಡಿಲ್ಲ. ಒಂದಲ್ಲ ಒಂದು ಕಾರಣದಿಂದ ಅಸಮಾಧಾನ ಗೊಂಡಿದ್ದಾರೆ ಎನ್ನುವುದು ಇವತ್ತು ಪ್ರಾದೇಶಿಕ ಪಕ್ಷಗಳಿಗೆ ದೊರಕುತ್ತಿರುವ ಮಾನ್ಯತೆ ಮತ್ತು ಜನ ಬೆಂಬಲವನ್ನು ನೋಡಿದರೆ ಇದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಅಭಿವೃದ್ಧಿಯಲ್ಲಿನ ಅಸಮಾನತೆಯ ಪ್ರಶ್ನೆಯನ್ನು, ಮಾರುಕಟ್ಟೆ ನೀತಿಯ ವೈಫಲ್ಯವನ್ನು ಅಸ್ಥಿತಿಯ ರಾಜಕಾರಣ, ಜಾತಿ ಮತ್ತು ಕೋಮು ರಾಜಕಾರಣದ ಮೂಲಕ ಎದುರಿಸುವ ಸಂಕುಚಿತ ದೃಷ್ಟಿಯುಳ್ಳ ಅಪಾಯಕಾರಿಯಾದ ನೀತಿಯ ಮೂಲಕ ಭಾರತದ ರಾಜಕಾರಣ ಹೊರಟಿರುವುದು ನಮ್ಮನ್ನು ದಿಗಿಲುಗೊಳಿಸುತ್ತಿದೆ. ನಮ್ಮ ಅಭಿವೃದ್ಧಿಯ ಸಮಸ್ಯೆಗಳಿಗೆ ಮುಕ್ತ ಮಾರುಕಟ್ಟೆ ಸೂಕ್ತ ಪರಿಹಾರವಾಗಬಹುದು ಎನ್ನುವ ಅಪೇಕ್ಷ ಕೇವಲ ನಿರೀಕ್ಷೆಯಾಗಿಯೇ ಉಳಿದಿದೆಯೇ ಅಥವಾ ಕೆಲಮಟ್ಟಿಗಾದರೂ ನಿಜವಾಗಿದೆಯೇ ಎನ್ನುವ ಕುರಿತು ತಿಳಿಯಬೇಕಾದ ಅಗತ್ಯವಿದೆ. ಹೊಸ ಆರ್ಥಿಕ ನೀತಿಯನ್ನು ಅನುಷ್ಟಾನಗೊಳಿಸಿ ೩೫ ವರ್ಷಗಳಲ್ಲಿ ನಾವು ಹೇಗೆ ಬದಲಾಗಿದ್ದೇವೆ, ನಮ್ಮ ದುಗುಡು ದುಮ್ಮಾನಗಳು ಕರಗಿ ಹೋಗಿವೆಯೇ ಅಥವಾ ಹಾಗೇ ಇವೆಯೇ ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಇಂದಿನ ಕಾಲ ಘಟ್ಟದಲ್ಲಿ ಉದಾರೀಕರಣ ಯಾಕಾಗಿ, ಯಾವ ಕಾರಣದಿಂದ ನಡೆಯಿತು. ಎನ್ನುವ ಚರ್ಚೆಯಂತೂ ಅಪ್ರಸ್ತುತವೆನಿಸಿ ಬಿಟ್ಟಿದೆ. ಬದಲಾವಣೆ ಎನ್ನುವ ಏಕಮುಖ ಮಾರ್ಗದಲ್ಲಿ ಈಗಾಗಲೇ ಆಗಿಹೋದಘಟನಾವಳಿಗಳನ್ನು  ಅನುಷ್ಟಾನಗೊಳಿಸಿರುವ ಅಭಿವೃದ್ಧಿ ಯೋಜನೆಗಳನ್ನು ಅಳಿಸಿ ಹಾಕುವುದು ಸಾಧ್ಯವಿಲ್ಲ. ಆದರೆ ಇಂತಹ ಘಟನಾವಳಿಗಳು ಅನುಸರಿಸಿದ ಕಾರ್ಯ ತಂತ್ರಗಳು ಮತ್ತು ಅವು ಉಂಟುಮಾಡಿದ ಪರಿಣಾಮಗಳನ್ನು ಬಹುಜನರಿಗೆ ಹಿತವಾಗುವಂತೆ ಬದಲಾಯಿಸಿಕೊಳ್ಳುವ ದೃಷ್ಟಿಯಿಂದ ಮುಂದಿನ ಕಾರ್ಯ ಯೋಜನೆ ರೂಪಿಸಿಕೊಳ್ಳವುದು ಅಗತ್ಯ. ಈ  ಕಾರಣದಿಂದಾಗಿಯೇ ಆರ್ಥಿಕ ವಲಯದಲ್ಲಿ ಈ ಕುರಿತ ಚರ್ಚೆ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಆರ್ಥಿಕ ಉದಾರೀಕರಣ ಅಥವಾ ೧೯೯೦ರಿಂದ ನಂತರದ ಅವಧಿಯಲ್ಲಿ ಆಗಿರುವ ಬದಲಾವಣೆಗಳು ಮತ್ತು ಉಂಟುಮಾಡಿರಬಹುದಾದ ಪರಿಣಾಮಗಳ ಬಗ್ಗೆ ಪರ, ವಿರೋಧ ವಾದಗಳಿರುವುದು ಸಹಜ. ಇಂತಹ ವಾದಗಳು ತರ್ಕಬದ್ದವಾದ ಪೂರ್ವನಿರ್ಧಾರಿತ ನಿಲುವನ್ನು ಸಮರ್ಥಿಸುವ ಬದಲಿಗೆ ವಾಸ್ತವ ಮತ್ತು ವಿಕಲ್ಪಗಳ ಕುರಿತು ತಿಳುವಳಿಕೆ ನೀಡುವ ಹಾಗಿರಬೇಕು.

ಪ್ರಚಲಿತ ಸಮಯ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಆಗಿರುವ ಬದಲಾವಣೇಗಳ ಬಗೆಗೆ ನಾವು ಮೂರು ರೀತಿಯ ಅಭಿಪ್ರಾಯಗಳನ್ನು ಗಮನಿಸಬಹುದು.  ಮೊದಲನೆ ವಾದ ಸರಣಿ ಉದಾರೀಕರಣವನ್ನು ಸಮರ್ಥಿಸುತ್ತಾ ಹೋಗುತ್ತದೆ. ಇದು ಉದಾರೀಕರಣ ಮತ್ತು ಆದರಿಂದ ಉಂಟಾದ ಬದಲಾವಣೆಯ ಬಗ್ಗೆ ಸಹಮತ ವ್ಯಕ್ತಪಡಿಸುತ್ತದೆ, ಮಾತ್ರವಲ್ಲದೆ ಉದಾರೀಕರಣದ ನಂತರ ಆಗಿರುವ ಬದಲಾವಣೆಯ ಬಗ್ಗೆ ಈ ವಾದಕ್ಕೆ ಒಂದು ರೀತಿಯ ಸಂಭ್ರಮವಿದೆ. ಆರ್ಥಿಕ ದಿವಾಳಿಯಂಚಿಗೆ ಬಂದಿದ್ದ ನಮ್ಮ ಅರ್ಥ ವ್ಯವಸ್ಥೆ ಉದಾರೀಕರಣ ನೀತಿಯನ್ನು ಅನುಸರಿಸಿದ ಕಾರಣದಿಂದಾಗಿ ಒಂದು ಜಾಗತೀಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಎಂದು ತಿಳಿಯಲಾಗಿದೆ. ಈ ವರ್ಗದ ಅಭಿಪ್ರಾಯದಂತೆ ದೀರ್ಘಕಾಲದವರೆಗೆ ಸರಕಾರದ ನಿಯಂತ್ರಣದಿAದಾಗಿ ಇಡೀ ಅರ್ಥ ವ್ಯವಸ್ಥೆöಯೇ ಜಡ್ಡುಗಟ್ಟಿಹೋಗಿತ್ತು. ಅಧಿಕಾರಶಾಹಿಯ ಎಗ್ಗಿಲ್ಲದ ದುರಾಡಳಿತದಿಂದ ಉದ್ಯಮಶೀಲ ಮನೋವೃತ್ತಿಯು ದಮನಿತವಾಗಿ ನಿರುಪಯುಕ್ತವಾಗಿ ಬಿಟ್ಟಿತ್ತು. ಈ ಎಲ್ಲಾ ಕಾರಣಗಳಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ಕಾಲೆಳೆಯುತ್ತಾ ಮುಂದುವರೆದಿತ್ತು. ಅಭಿವೃದ್ಧಿಯ  ಸ್ವಾತಂತ್ರಾ÷್ಯ ನಂತರದರ ಸರಾಸರಿ ೩.೫.ರ ದರವನ್ನು ಮೀರಿರಲಿಲ್ಲ.ಉದಾರೀಕರಣದ ನಂತರದ ದಿನಗಳಲ್ಲಿ ಈ ಸ್ಥಿತಿಗಿಂತ ಸಂಪೂರ್ಣಭಿನ್ನವಾದ ಭಾರತದ ಚಿತ್ರಣವನ್ನು ನಾವು ಈಗ ಕಾಣುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ಭಾರತ ೨೦೨೦ರ ಹೊತ್ತಿಗೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎನ್ನುವ ಅಭಿಪ್ರಾಯವನ್ನು ಈ ವರ್ಗ ನಿಸ್ಸಂಶಯವಾಗಿ ಅನುಮೋದಿಸುತ್ತಿದೆ. ಆದರೆ ಇಂತಹ ವಾದಗಳನ್ನು ಮತ್ತು ಸಮರ್ಥನೆಗಳನ್ನು ನಾವು ಬರೀ ಭಾರತೀಯ ಆರ್ಥಿಕ ವ್ಯವಸ್ಥೆಯ ಒಂದು ಕಾಲ ಘಟ್ಟದ ಪರಿಸ್ಥಿತಿಯನ್ನಾಗಿ ಮಾತ್ರ ನೋಡದೆ, ಇದರ ಆಚೆ ಈಚೆ, ಹಿಂದೆ ಮುಂದೆಯೂ ಇರುವ ಅಂಶಗಳ ವಿಷಯ ಗ್ರಹಣ ಮಾಡಬೇಕು. ಈಗ ಆರ್ಥಿಕ ಉದಾರೀಕರಣದ ಸಂಭ್ರಮಾಚರಿಸುವ ಅಭಿಪ್ರಾಯಿಗರು ತಮ್ಮ ಈ ಕ್ಷಣದ ಸಮಾಧಾನಕ್ಕೆ ಸಂಭ್ರಮಕ್ಕೆ ಮುಂದೊಡ್ಡುತ್ತಿರುವ ಸಮರ್ಥನೆಗಳ ಬಗ್ಗೆ ದೃಷ್ಟಿ ಹರಿಸೋಣ.

ಆರ್ಥಿಕ ಉದಾರೀಕರಣ ಎನ್ನುವುದು ನಮ್ಮ ಮುಂದಿರುವ ದಾರಿ ಮಾತ್ರವಲ್ಲ ಗುರಿಯೂ ಆಗಿದೆ. ಈಗಾಗಲೇ ಜಾಗತೀಕ ಅರ್ಥ ವ್ಯವಸ್ಥೆ ಬಲಗೊಳ್ಳುತ್ತಿದ್ದು, ಭಾರತೀಯ ಅರ್ಥವ್ಯವಸ್ಥೆಯನ್ನು ಅದರಿಂದ ಬೇರ್ಪಡಿಸುವುದು ಅಸಾಧ್ಯ ಮಾತ್ರವಲ್ಲ ಅಂತಹ ಕ್ರಮ ಮೂರ್ಖತನದ್ದೂ ಆಗಿದೆ. ಹಾಗಿರುವಾಗ ನಾವು ಈ ಬದಲಾವಣೆಯನ್ನು ಭಾರತದಲ್ಲಿ ಜನರ ಜೀವನ ಮಟ್ಟ ಸುಧಾರಿಸುವ ದೃಷ್ಟಿಯಿಂದ ಸಮರ್ಥವಾಗಿ ದುಡಿಸಿಕೊಳ್ಳಬೇಕೇ ಹೊರತು ಅದನ್ನು ತಡೆಯಬಾರದು ಯಾವುದೇ ವ್ಯವಸ್ಥೆ ಒಳ್ಳೆಯದೂ ಅಲ್ಲ ಕೆಟ್ಟದ್ದೂ ಪೂರ್ಣ ಒಳ್ಳೆಯದೂ ಅಲ್ಲ. ಒಂದು ವ್ಯವಸ್ಥೆಯನ್ನು ನಾವು ಎಷ್ಟು ಶ್ರದ್ದೆಯಿಂದ ಮತ್ತು ಜನಪರ ಕಾಳಜಿಯಿಂದ ದುಡಿಸಿಕೊಳ್ಳುತ್ತೇವೆ ಎನ್ನುವ ವಿಷಯ ಮುಖ್ಯ.

 ಕೈಗಾರೀಕರಣದ ಪ್ರಭಾವದಿಂದ ಎಲ್ಲರಿಗೆ ಅನ್ನ, ಮನೆ, ಉದ್ಯೋಗ ಮುಂತಾದ ಅವಶ್ಯಕತೆಗಳನ್ನು ಪೂರೈಸುವ ಮೂಲಕ ನಾವು ಸಾಕಷ್ಟು ಮುಂದೆ ಬಂದಿದ್ದೇವೆ. ಆರೋಗ್ಯ, ಶಿಕ್ಷಣ, ತಂತ್ರಜ್ಞಾನದAತಹ ರಂಗಗಳಲ್ಲಿ ಜಗತ್ತಿನ ಇತರ ದೇಶಗಳು ಹುಬ್ಬೇರಿಸುವಷ್ಟು ಮಟ್ಟಿಗೆ ನಮ್ಮ ದೇಶ ಸಾಧನೆ ಮಾಡಿದೆ. ಮಾಹಿತಿ ತಂತ್ರಜ್ಞಾನದಲ್ಲAತೂ ವಿಶ್ವದ ಗಮನ ಸೆಳೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮಾತ್ರವಲ್ಲ ಈ ರಂಗದ ಅಪರಿಮಿತ ಸಾಧನೆಯ ಪರಿಣಾಮವಾಗಿ ಸಾಕಷ್ಟು ದೊಡ್ಡ ಪ್ರಮಾಣದ ವಿದೇಶೀ ಬಂಡವಾಳ ಹರಿದು ಬಂದಿದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿರುವುದು ನಮ್ಮ ಕಣ್ಣ ಮುಂದಿದೆ. ಇಂತಹ ಬದಲಾವಣೆಗಳು ಆಗುವ ಸಮಾಜದಲ್ಲಿ ಅರ್ಥ ವ್ಯವಸ್ಥೆಯಲ್ಲಿ, ಕೆಲಮಟ್ಟಿನ ತಲ್ಲಣಗಳು, ಏರಿಳಿತಗಳು ಆಗುವುದು ಸಹಜ ಆದರೆ ಅಂತಹ ತಲ್ಲಣ, ಏರಿಳಿತಗಳನ್ನು ನಿಯಂತ್ರಿಸಿ ಮುಂದುವರಿಯುವ ಬಗ್ಗೆ ಯೋಚಿಸಬೇಕೇ ಹೊರತು, ಬದಲಾವಣೆಯಿಂದ ಪಾಲಾಯನ ಮಾಡಲು ಅವು ಕಾರಣಗಳಾಗಬಾರದು. ಜಗತ್ತಿನಲ್ಲಿ ಸಂಪೂರ್ಣ ಪ್ರತ್ಯೇಕವಾಗುಳಿದು ಮುನ್ನಡೆ ಸಾಧಿಸಿದ ಯಾವ ದೇಶವೂ ನಮಗೆ ಕಾಣಸಿಗುವುದಿಲ್ಲ.

೧೯೫೦ ರಿಂದ ೮೦ರ ವರೆಗೂ ಸಾಂಪ್ರದಾಯಿಕ ಮನೋಧರ್ಮ ಪ್ರೇರಿತ ರಕ್ಷಣಾತ್ಮಕ ಮಾದರಿಯ ಆರ್ಥಿಕ ಅಭಿವೃದ್ಧಿ ನೀತಿಯನ್ನು ಅನುಸರಿಸಿದ ಕಾರಣ ದೊಡ್ಡ ರೀತಿಯ ಬದಲಾವಣೆಗಳು ಆಗಲಿಲ್ಲ. ಈ ಅವಧಿಯಲ್ಲಿ ರಾಷ್ಟಿçÃಯ ಉತ್ಪನ್ನದಲ್ಲಿ೩ ರಿಂದ ೫% ರಷ್ಟು ಬೆಳವಣಿಗೆಯನ್ನು ಭಾರತೀಯ ಅರ್ಥ ವ್ಯವಸ್ಥೆ ದಾಖಲಿಸಿತು. ನಿಧಾನಗತಿಯ ಈ ಬೆಳವಣಿಗೆಯ ದರವನ್ನು ‘ಹಿಂದೂ ಅಭಿವೃದ್ಧಿ ದರ’ ವೆಂದು ಕರೆಯಲಾಗುತ್ತಿದೆ. ಉದಾರೀಕರಣದ ತರುವಾಯ ಆರ್ಥಿಕ ಚಟುವಟಿಕೆಗಳು ಉತ್ಕರ್ಷಗೊಂಡ ಪರಿಣಾಮವಾಗಿ ಅಭಿವೃದ್ದಿಯ ದರದಲ್ಲಿ ಗಮನಾರ್ಹ ಏರಿಕೆಯಾಗಿ ಅದು ಶೇಕಡಾ ೮-೯ ರಷ್ಟು ಏರಿಕೆಯಾಗಿದೆ. ಇದೊಂದು ಗಮನಾರ್ಹ ಸಾಧನೆಯೇ ಸರಿ.

ವಿದೇಶೀ ವಿನಿಮಯದ ಕೊರತೆಯಿಂದ ಬಹುಪಾಲು ದಿವಾಳಿಯ ಅಂಚಿಗೆ ಬಂದಿದ್ದ ಪರಿಸ್ಥಿತಿ ಇವತ್ತು ಸಂಪೂರ್ಣ ಬದಲಾಗಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ವಿದೇಶಿ ವಿನಿಮಯದ ಸಂಗ್ರಹವಿದೆ. ಪಾಲು ಬಂಡವಾಳ ವಿದೇಶಿ ಹಣಕಾಸು ಸಂಸ್ಥೆಗಳಿಗೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಅವಕಾಶ ಮತ್ತು ಅನಿವಾಸೀ ಭಾರತೀಯರು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೋಳ್ಳಲು ಕಲ್ಪಿಸಿರುವ ಅವಕಾಶಗಳೇ ಮುಂತಾದ ಕಾರಣಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹಿಂದಿನ ದಿನಗಳಿಗಿಂತ ಹೆಚ್ಚು ಸುಭದ್ರವಾಗಿದೆ. ಆರ್ಥಿಕ ಶಿಸ್ತು ಪಾಲಿಸುವುದು ಅನಿವಾರ್ಯವಾಗಿರುವ ಕಾರಣದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದೆAದಿಗಿAತಲೂ ಹೆಚ್ಚು ಶಿಸ್ತು ಬದ್ಧವಾಗಿ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿವೆ ಎಂದು ಹೇಳಲಾಗುತ್ತಿದೆ. ಸರಕಾರಗಳು ತಮ್ಮ ಆಯವ್ಯಯ ಮಂಡಿಸುವಾಗ ವಿತ್ತೀಯ ಕೊರತೆಗೆ ಸಂಬAಧಿಸಿ ಬಜೆಟ್ ಮೆನೇಜ್ ಮೆಂಟ್ ಹಾಗೂ ಪಿಸಕಲ್ ರಿಸ್ಪಾಸಿಬಲೀಟಿ ಕಾಯಿದೆಯ ಅನ್ವಯ ತನ್ನ ಉತ್ತರದಾಯಿತ್ವವನ್ನು ಸ್ಪಷ್ಟವಾಗಿ ನಿರೂಪಿಸಬೇಕಿದೆ.

ದೇಶೀ ಸೇವಾ ರೂಪದ ಉತ್ಪನ್ನಗಳ ರಫ್ತು ಗಮನಾರ್ಹವಾಗಿ ಏರಿಕೆಯಾಗಿದೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಆಗಿರುವ ಕ್ರಾಂತಿಯೇ ಇದಕ್ಕ ಪ್ರಮುಖ ಕಾರಣವಾಗಿದೆ. ೧೯೯೦-೯೧ರಲ್ಲಿ ೪.೬ ಬಿಲಿಯನ್ ಡಾಲರ್ ರಫ್ತು ೨೦೦೧-೦೨ರಲ್ಲಿ ೨೦.೩ ಬಿಲಿಯನ್ ಡಾಲರಗಳಿಗೆ ಹೆಚ್ಚಿದೆ. ೧೯೯೩-೯೪ರಲ್ಲಿ ೦.೩ ಬಿಲಿಯನ್ ಡಾಲರ್‌ಗಳಿಷ್ಟಿದ್ದ ಮಾಹಿತಿ ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ರಫ್ತು ೨೦೦೧-೦೨ ನೇ ವ್ಯಾಪಾರ ಸಾಲಿನಲ್ಲಿ ೨೦೧೩-೧೪ ಬಿಲಿಯನ್ ಡಾಲರ್‌ಗಳಷ್ಟಾಗಿದೆ. ನಿರ್ಬಂಧ ಮತ್ತು ನೇರ ವಿದೇಶಿ ಹೂಡಿಕೆಗೆ ಅವಕಾಶ ದೊರೆತಿರುವ ಕಾರಣದಿಂದ ಇಂತಹ ಬದಲಾವಣೆ ಸಾಧ್ಯವಾಗಿದೆ ಎನ್ನುವುದನ್ನು ಮರೆಯುವ ಹಾಗಿಲ್ಲ.

ಚಾಲ್ತಿ ಖಾತೆ ಮತ್ತು ಬಂಡವಾಳ ಖಾತೆಗೆ ರೂಪಾಯಿಯ ಪರಿವರ್ತನೆಯ ಕುರಿತಂತೆ ಬದಲಾದ ನೀತಿಯ ಕಾರಣದಿಂದ ಮೇ ೨೦೦೩ ರ ಅಂತ್ಯಕ್ಕೆ ವಿದೇಶಿ ವಿನಿಮಯದ ಮೊತ್ತ ಸುಮಾರು ೭೯ ಬಿಲಿಯನ್ ಡಾಲರ್‌ಗಳಷ್ಟಿತ್ತು ಬಾಹ್ಯ ಸಾಲಗಳ ನಿರ್ವಹಣೆಯೂ ಉತ್ತಮವಾಗಿಯೇ ಇದೆ. ಹೀಗಾಗಿ ವಿಶ್ವ ಇಂದು ಭಾರತವನ್ನು ಭವಿಷ್ಯತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಪರಿಗಣಿಸುತ್ತಿದೆ.

ಕೈಗಾರಿಕ ಲೈಸನ್ಸ್ ನೀತಿಯನ್ನು ಬದಲಾಯಿಸಿ ಅಗತ್ಯವಾಗಿರುವ ಕಾನೂನು ನಿರ್ಬಂಧಗಳನ್ನು ತೆಗೆದು ಹಾಕಿ ಅದರ ಬದಲಿಗೆ ಪ್ರತಿ ಸ್ಪರ್ಧೆಯನ್ನು ಪ್ರೋತ್ಸಾಹಿಸುವ ಪ್ರತಿಸ್ಪರ್ಧಾ ಕಾಯಿದೆಯನ್ನು ೨೦೦೦ನೇ ಇಸವಿಯಲ್ಲಿ ಜಾರಿಗೆ ತರಲಾಗಿದೆ. ಏಕಸ್ವಾಮ್ಯ ಮತ್ತು ವ್ಯಾಪಾರ ಜಾಗತಿಕ ಕೈಗಾರಿಕ ರಂಗದಲ್ಲಿ ಸ್ಪರ್ಧಿಸಲು ಅನುಕೂಲವಾಗಲು ಬೃಹತ್ ಉದ್ಯಮಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯದ ಉದ್ಯಮಗಳು ನಮ್ಮ ದೇಶದಲ್ಲಿ ಬೆಳೆಯ ಬೇಕಾದರೆ ದೊಡ್ಡ ಮಟ್ಟದ ಉದ್ದಿಮೆಗಳು ರೂಪುಗೊಳ್ಳಲು ಸರಕಾರದ ಪ್ರೋತ್ಸಾಹ ಅಗತ್ಯ. ಟಾಟಾ ಸ್ಟೀಲ್ಸ್ನಂತಹ ಉದ್ದಿಮೆ ದೊಡ್ಡ ವಿದೇಶಿ ಕಂಪನಿಗಳನ್ನು ಖರೀದಿಸಿ ತನ್ನ ತಕ್ಕೆಗೆ ತೆಗೆದುಕೊಳ್ಳುವಂತಹ ಬೆಳವಣಿಗೆ ನಡೆದಿರುವುದು ದೇಶದ ಘನತೆಯನ್ನು ಹೆಚ್ಚಿಸಿದೆ. ಸನ್‌ಫಾರ್ಮಾ, ರೆಡ್ಲೀಸ್‌ಲ್ಯಾಬ್, ಬಯೋಕಾನ್ ನಂತರ ಉದ್ದಿಮೆಗಳು ವಿಶ್ವದ ಗಮನ ಸೆಳೆಯುತ್ತಿವೆ.

ದೇಶದ ಒಟ್ಟಾರೆ ಅಭಿವೃದ್ಧಿಯ ದೃಷ್ಟಿಯಿಂದ ಆರ್ಥಿಕ ಉದಾರೀಕರಣದ ವೇಗವನ್ನು ಹೆಚ್ಚಿಸಲು ಸಹಾಯಕವಾಗುವ ತೆರಿಗೆ, ಹಣಕಾಸು, ವ್ಯಾಪಾರ, ಇಂಧನ ಮುಂತಾದ ವಲಯಗಳಲ್ಲಿ ಸೂಕ್ತ ನೀತಿ ನಿಯಮ ಹಾಗೂ ಹಲವಾರು ಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಗಳು ನೀಡಿರುವ ಶಿಫಾರಸುಗಳನ್ನು ಅನಿಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಬ್ಯಾಂಕಿAಗ್, ತೆರಿಗೆ ನೀತಿ, ಸಣ್ಣ ಉದ್ಯಮ ವಲಯ ಮುಂತಾದ ವಲಯಗಳಲ್ಲಿ ಅನಗತ್ಯ ಔಪಚಾರಿಕ ಕಾನೂನುಗಳನ್ನು  ನಿವಾರಿಸಿ,  ಆ ವಲಯಗಳ ಕಾರ್ಯ ದಕ್ಷತೆಯನ್ನು ಹೆಚ್ಚು ಮಾಡಲಾಗಿದೆ ಆದರೆ ಆರ್ಥಿಕ ಸುಧಾರಣೆಯನ್ನು ಮುಂದುವರಿಸದೇ ಹೋದಲ್ಲಿ ಈಗಾಗಲೆ ಆಗಿರುವ ಬದಲಾವಣೆಗಳ ಫಲ ಸಾಕಷ್ಟು ಪ್ರಮಾಣದಲ್ಲಿ ದೊರೆಯದೇ ಹೋಗುವ ಸಂಭವವೂ ಇದೆ.

ಸರಕಾರೀ ಸ್ವಾಮ್ಯದ ಕಂಪೆನಿಗಳ ಶೇರುಬಂಡವಾಳವನ್ನು ಖಾಸಗೀ ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ ಜಡವಾಗಿದ್ದ ಸರಕಾರೀ ಉದ್ಯಮ ಎಚ್ಚೆತ್ತು ಕೊಳ್ಳುವಂತೆ ಮಾಡಲಾಗಿದೆ. ಮಾತ್ರವಲ್ಲ ಇಂತಹ ಕ್ರಮದ ಮೂಲಕ ಅಂದಾಜು ೨ಬಿಲಿಯನ್ ಡಾಲರ್‌ಗಳಷ್ಟು ಹಣ ಸರಕಾರೀ ಬೊಕ್ಕಸಕ್ಕೆ ಹರಿದು ಬಂದಿದೆ. ಇಂತಹ ಸಂಪನ್ಮೂಲಗಳನ್ನು ಮೂಲಭೂತ ಸೌಕರ್ಯವೃದ್ಧಿ ಯಂತಹ ಉದ್ದೇಶಗಳಿಗೆ ಉಪಯೋಗಿಸುವ ಮೂಲಕ ಖಾಸಗೀಕರಣದ ಫಲ ಜನ ಸಾಮಾನ್ಯರಿಗೂ ವರ್ಗಾಯಿಸಿದಂತಾಗಿದೆ.

ದೂರಸAಪರ್ಕ ವಲಯದಲ್ಲಿಯಂತೂ ಒಂದು ದೊಡ್ಡ ಕ್ರಾಂತಿಯೇ ನಡೆದು ಹೋಗಿದೆ ಎಂದರೂ ತಪ್ಪಾಗಲಾರದು. ೧೯೯೪-೯೫ರಲ್ಲಿ ಅಸ್ತಿತ್ವಕ್ಕೆ ಬಂದ ರಾಷ್ಟಿçÃಯ ಟೆಲಿಕಾಂ ನೀತಿಯ ಪರಿಣಾಮವಾಗಿ ಈ ವಲಯದಲ್ಲಿ ವಿದೇಶೀ ಹೂಡಿಕೆಗೆ ಅವಕಾಶ ಮಾಡಲಾಗಿದೆ. ಈ ವಲಯದ ಕಾರ್ಯ ನಿರ್ವಹಣೆಯನ್ನು ನಿಯಂತ್ರಿಸಲು ರಾಷ್ಟಿçÃಯ ಟೆಲಿಕಾಂ ನಿಯಂತ್ರಣ  ಪ್ರಾಧಿಕಾರ ಉತ್ಪನ್ನ ಸೇವೆಯ ವಿಧಿ ವಿಧಾನ, ಬೆಲೆ ನಿರ್ಣಯ ಇತ್ಯಾದಿ ವಿಷಯಗಳ ಮೇಲುಸ್ತುವಾರಿ ನಡೆಸುತ್ತಿದ್ದು ಬಳಕೆದಾರರಿಗೆ ಅನ್ಯಾಯವಾಗದಂತೆ ಜಾಗರೂಕತೆ ವಹಿಸುತ್ತಿದ್ದು ಈ ವರೆಗಿನ ಇದರ ಕಾರ್ಯ ವೈಖರಿ ಸಮಾಧಾನಕರವಾಗೀಯೇ ಇದೆ. ಅತಿ ಕಡಿಮೆವೆಚ್ಚದಲ್ಲಿ ಜನ ಸಾಮಾನ್ಯರಿಗೂ ದೂರ ಸಂಪರ್ಕ ಒದಗಿಸುವುದು ಸರ್ಕಾರದ ಉದ್ದೇಶ ೨೦೦೨ನೇ ಇಸವಿಯ ಅಂತ್ಯದಲ್ಲಿ ಸ್ಥಿರ ದೂರವಾಣಿ ಸಂಪರ್ಕಗಳ ಶೇಕಡಾ ೮೦% ಸಾರ್ವಜನಿಕ ವಲಯದ ಬಿ. ಎಸ್. ಎನ್. ಎಲ್ ಒದಗಿಸಿದರೆ, ಮೊಬೈಲ್ ಸಂಪರ್ಕಗಳ ಶೇಕಡಾ ೭೫%ರಷ್ಟು ಖಾಸಗಿ ವಲಯಗಳು ಒದಗಿಸಿವೆ. ಯುಪಿಎ ಎರಡರ ಅವಧಿಯಲ್ಲಿ ನಡೆದ ೨ಜಿ ಹಗರಣದಿಂದಾಗಿ ಸರಕಾರೀ ಬೊಕ್ಕಸಕ್ಕೆ ಅಪಾರ ನಷ್ಟವಾದ ಕಾರಣ ಸರಕಾರ ಭಾರೀ ಮುಖಭಂಗ ಅನುಭವಿಸುವಂತಾಯಿತು. ಮಾತ್ರವಲ್ಲ ೨೦೧೪ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಹೀನಾಯ ಸೋಲು ಕಾಣುವಂತಾಯ್ತು. ದೇಶದ ಸರ್ವೋಚ್ಛ ನ್ಯಾಯಲಯ ಸುಪರ್ದಿನಲ್ಲಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ದೇಶದ ಸಂಪನ್ಮೂಲಗಳನ್ನು ಖಾಸಗೀ ಉದ್ದಿಮೆದಾರರಿಗೆ ವಿತರಿಸುವ ಸಂದರ್ಭಗಳಲ್ಲಿ ಪಾರದರ್ಶಕ ನೀತಿಯನ್ನು ಅನುಸರಿಸಬೇಕೆನ್ನುವ ವಾದವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇತ್ತೀಚೆಗೆ ನಡೆದ (ಮಾರ್ಚ್ ೨೦೧೫) (ಸ್ಪೆಕ್ಟçಂ ವಿತರಣೆ) ತರಂಗಾAತರ ವಿತರಣೆಯಿಂದ ಸರಕಾರದ ಬಿಕ್ಕಸಕ್ಕೆ ೧,೦೯,೦೦೦ ಕೋಟಿ ಆದಾಯ ಲಭ್ಯವಾಗಿದೆ.

ದೇಶದ ಎಲ್ಲ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವದ ಯೋಜನೆಗಳು ಬೆಳಕು ಕಂಡಿವೆ. ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ೬೦೦೦ಕಿ.ಮೀ. ಉದ್ದದ ಸುವರ್ಣ ಚತುಷ್ಕೋಣ ರಸ್ತೆಯ ನಿರ್ಮಾಣಕ್ಕೆ ಕೈಹಾಕಿದು ಇದು ಒಂದು ಮಹತ್ವದ ಯೋಜನೆಯಾಗಿದೆ. ಅದೇ ರೀತಿಯಲ್ಲಿ ದೇಶದ ಉತ್ತರ ಪೂರ್ವ ರಾಜ್ಯಗಳನ್ನು ದೇಶದ ಇತರ ಭಾಗಗಳೊಂದಿಗೆ ಬೆಸೆಯುವ ೭೩೯೯ಕಿ.ಮೀ. ಉದ್ದದ ರಸ್ತೆಯ ನಿರ್ಮಾಣವು  ಪ್ರಗತಿಯಲ್ಲಿದೆ. ೧೯೯೦ರವರೆಗೆ ಕೇವಲ  ಹಣಕಾಸು ವ್ಯವಹಾರಗಳಿಗೆ ಮಾತ್ರ ಸಿಮಿತವಾಗಿದ್ದ ಬ್ಯಾಂಕಿAಗ್ ವಲಯ ಉದಾರೀಕರಣದ ನಂತರದ ದಿನಗಳಲ್ಲಿ ಮರು ಹುಟ್ಟು ಪಡೆದಿದೆ ಎಂದರೆ ತಪ್ಪಾಗಲಾರದು. ಈ ಹಿಂದಿನ ಅನಗತ್ಯ ಸರಕಾರೀ ನಿಯಂತ್ರಣ, ಸಾಂಸ್ಥಿತ ತೊಡಕುಗಳು ನಿವಾರಣೆಯಾಗಿ ಬ್ಯಾಂಕಿAಗ್ ವಲಯ ಒಂದು ಸ್ವಾಯತ್ತ ಮಾರುಕಟ್ಟೆ ಸಂವೇದಿ ರೀತಿಯಲ್ಲಿ ಸಮರ್ಥವಾಗಿ ಕೆಲಸ ಮಾಡುವ ಮೂಲಕ ಲಾಭಗಳಿಕೆಯ ದೃಷ್ಟಿಯಿಂದ ಹೊಸರೀತಿಯ ವ್ಯಾಪಾರ ವಹಿವಾಟುಗಳಿಗೆ ಪದಾರ್ಪಣೆ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆತರೆ ಬ್ಯಾಂಕುಗಳಿಗೆ ಲಾಭವು ಸಿಗುತ್ತದೆ. ಖಾಸಗೀ ವಲಯದ ಬ್ಯಾಂಕುಗಳ ಸೇವೆಯನ್ನು ಸರಿಗಟ್ಟುವ ರೀತಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದು ಇದರಿಂದ ದೇಶದ ಅರ್ಥ ವ್ಯವಸ್ಥಗೆ ಲಾಭವಾಗಿದೆ. ವಿಮಾವಲಯದಲ್ಲಿಯೂ ಇದೇ ರೀತಿಯ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ವಿಮಾ ರಂಗದಲ್ಲಿ ವಿದೇಶೀ ಹೂಡಿಕೆಯನ್ನು ಅಧಿಕಗೊಳಿಸುವ ಕಾಯಿದೆಯನ್ನು ಪಾರ್ಲಿಮೆಂಟಿನ ೨೦೧೫ರ ಬಜೆಟ್ ಅಧೀವೇಶನದ ಅವಧಿಯಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ದೀರ್ಘಕಾಲ ಜಡವಾಗಿದ್ದ ಸರ್ಕಾರೀ ಸ್ವಾಮ್ಯದ ವಿಮಾ ಕಂಪನಿಗಳು ಕುಂಬಕರ್ಣ ನಿದ್ದೆಯಿಂದ ಎಚ್ಚೆತ್ತು ಬೀಸುತ್ತಿರುವ ಬದಲಾವಣೆಯ ಗಾಳಿಗೆ ಸ್ಪಂದಿಸುತ್ತಿರುವುದು ಗ್ರಾಹಕರ ಪಾಲಿಗೆ ಆಯ್ಕೆ ಹೆಚ್ಚಿಸಿದೆ. ಪ್ರಾಯಶ: ಉದಾರೀಕರಣವಾಗದಿದ್ದರೆ ಇಂತಹ ಒಂದು ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೆಂದೇ ಹೇಳಬಹುದು.

ಆರ್ಥಿಕ ಸುಧಾರಣೆಯ ನಂತರ ಕೃಷಿ ಮತ್ತು ಸಮಾಜ ಕಲ್ಯಾಣ ಕಾರ್ಯಗಳು ಹಿನ್ನಡೆಯನ್ನು ಅನುಭವಿಸಿದೆ ಎಂದು ಹೇಳಲಾಗುತ್ತದೆಯಾದರೂ ಇದಕ್ಕೆ ಸೂಕ್ತ ಪರ್ಯಾಯಗಳನ್ನು ಕಲ್ಪಿಸಲಾಗಿದೆ. ಅಸಂಘಟಿತ ವಲಯದಲ್ಲಿ ಉದ್ಯಮ ಶೀಲ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸ್ವ ಉದ್ಯೋಗ ಕಂಡು ಕೊಳ್ಳಲು ತಾಂತ್ರಿಕ ಮತ್ತು ಹಣಕಾಸಿನ ನೆರವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಪುಟಾಣಿ ಸಾಲ ಯೋಜನೆಗಳು ದಕ್ಷಿಣ ಭಾರತದಲ್ಲಿ ಹಳ್ಳಿ ಹಳ್ಳಿಯನ್ನು ತಲುಪಿ ದುರ್ಬಲ ವರ್ಗಗಳಿಗೆ ಸುಲಭವಾಗಿ ಹಣಕಾಸಿನ ನೆರವು ದೊರೆಯುವಂತೆ ಆಗಿದೆ ಕರ್ನಾಟಕ. ಕೇರಳ ಹಾಗೂ ತಮಿಳುನಾಡಿನಲ್ಲಿ ಈ ಯೋಜನೆ ಉತ್ತಮ ಫಲಿತಾಂಶವನ್ನು ನೀಡಿದೆ. ಸ್ಥಳೀಯ ಸಮಸ್ಯೆ ಸಂಪನ್ಮೂಲಗಳ ಬಗ್ಗೆ ಅರಿವಿರುವ ಮತ್ತು ಜನರವನ್ನು ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿಸುವಂತೆ ಮಾಡಲು ಸರಕಾರೇತರ ಸಂಸ್ಥೆಗಳು ಸಹಯೋಗವನ್ನು ಕೋರಲಾಗಿದೆ. ಸರಕಾರೇತರ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಲ್ಲಿ ಮೂರನೆಯ ವಲಯವೊಂದನ್ನು ಗುರುತಿಸಿದಂತಾಗಿದೆ. ಈ ಬೆಳವಣಿಗೆಯಿಂದ ಹಲವಾರು ಕಾರ್ಪೋರೇಟ್ ಸಂಸ್ಥೆಗಳು ಸಮಾಜ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಸಾಧ್ಯವಾಗಿದೆ. ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಕೇವಲ ಸರಕಾರವನ್ನೇ ಅವಲಂಭಿಸಿ ಬಿಡುವ ಪ್ರವೃತ್ತಿಯಲ್ಲಿ ನಿಧಾನವಾಗಿಯಾದರೂ ಬದಲಾವಣೆಯಾಗುತ್ತಿರುವುದು ಆರೋಗ್ಯ ಪೂರ್ಣ ಬೆಳವಣಿಗೆಯಾಗಿದೆ. ಇಷ್ಟರ ಹೊರತಾಗಿಯೂ ಕೇಂದ್ರ ಸರಕಾರ ಆಹಾರ ಭದ್ರತೆಯ ಹಕ್ಕು, ಕಡ್ಡಾಯ ಪ್ರಾಥಮಿಕ ಶಿಕ್ಷಣ ಮತ್ತು ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳಂತಹ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಬಡಜನರಿಗೆ ದುಡಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಅನಗತ್ಯ ಅಂಜುಕುಳಿತನದಿAದ ಹೊರಬಂದು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸ್ಪರ್ಧಿಸುವ ಲಕ್ಷಣಗಳನ್ನು ಭಾರತೀಯ ಅರ್ಥವ್ಯವಸ್ಥೆ ಮೈಗೂಡಿಸಿಕೊಳ್ಳುತ್ತಿರುವುದಕ್ಕೆ ಉದಾರೀಕರಣವೇ ಕಾರಣವಾಗಿದೆ. 

ಆರ್ಥಿಕ ಉದಾರೀಕರಣವನ್ನು ಸಮರ್ಥಿಸುವ ಮೇಲಿನ ವಾದ ಸರಣಿಯನ್ನು ನಿರಾಕರಿಸುವ ಇನ್ನೊಂದು ವಾದವನ್ನು ಪರಿಶೀಲಿಸೋಣ ಮತ್ತು ಯಾವ ನೆಲೆಯಲ್ಲಿ ಮೇಲಿನ ಸಮರ್ಥನೆಗಳನ್ನು ಟೀಕಿಸಲಾಗಿದೆ ಎಂದು ಪರಿಶೀಲಿಸೋಣ. ಅರ್ಥವ್ಯವಸ್ಥೆಯಲ್ಲಿ ಸ್ವರೂಪಾತ್ಮಕ ಬದಲಾವಣೆಗಳು ಆದ ಮೇಲೆ ದೇಶದ ಅರ್ಥವ್ಯವಸ್ಥೆ ಸುಭದ್ರ ತಳಪಾಯದಿಂದ ದೂರವಾಗಿ ಜಾಗತಿಕ ಅರ್ಥವ್ಯವಸ್ಥೆಯ ನಿಯಂತ್ರಕ ಶಕ್ತಿಗಳ ಹಿಡಿತಕ್ಕೆ ಜಾರಿಹೋಗಿದೆ. ಇದರಿಂದ ನಮ್ಮ ಸಮಾಜದ ಮತ್ತು ದೇಶದ ಹಿತದೃಷ್ಟಿಯಿಂದ ಯಾವ ಸಾಮಾಜಿಕ ಆರ್ಥಿಕ ನೀತಿಗಳು ರೂಪುಗೊಳ್ಳಬೇಕಿತ್ತೋ ಅದು ಇಂದು ಸಾಧ್ಯವಾಗುತ್ತಿಲ್ಲ. ನಮ್ಮ ಕೈಗಾರಿಕ ನೀತಿ, ಆರ್ಥಿಕ ನೀತಿ ವಿದೇಶಾಂಗ ನೀತಿ ಇವೆಲ್ಲವೂ ಜಾಗತಿಕ ಅರ್ಥವ್ಯವಸ್ಥೆಯ ಮರ್ಜಿಗನುಗುಣವಾಗಿ ನಡೆಯುತ್ತಿದೆ. ಜಾಗತಿಕ ಅರ್ಥವ್ಯವಸ್ಥೆಯ ಶಿಖರದಲ್ಲಿರುವ ಅಮೇರಿಕಾದ ಮುಂದಾಳತ್ವದ ಮುಂದುವರಿದ ರಾಷ್ಟçಗಳು ಈ ಜಾಗತಿಕ ಅರ್ಥವ್ಯವಸ್ಥೆಯ ನಿಯಂತ್ರಕ ಶಕ್ತಿಯಾಗಿದೆ. ಯಾವುದು ಅಭಿವೃದ್ಧಿ, ಯಾವುದು ಅಭಿವೃದ್ಧಿಯಲ್ಲ, ಅಭಿವೃದ್ದಿಯ ಗುರಿ ಮತ್ತು ಗತಿಯನ್ನು ನಿಯಂತ್ರಿಸಲು ತಾವು ನೀಡುವ ಮಾರ್ಗದರ್ಶನವೇ ನಿರ್ಣಾಯಕವಾಗಬೇಕು ಎನ್ನುವ “ವಾಷಿಂಗ್ ಟನ್ ಕಾನ್ಸೆಸ್’’   ಈ ರೀತಿಯ ವಾದಗಳು ಮಿಕ್ಕಳಿದವರ ಅಭಿಪ್ರಾಯವನ್ನು ಕಡೆಗಾಣಿಸಿ ಮುನ್ನುಗ್ಗುತ್ತಿದೆ. ಇಂತಹ ಒಂದು ಮಹಾಚಿಂತನೆ ಬುದ್ಧಿವಂತರ ರಾಜಕೀಯ ಚಿಂತಕರ, ಮಾಧ್ಯಮದವರ ಚಾವಡಿಯಲ್ಲಿ ನಿರಂತರ ಚಲಾವಣೆಯಲ್ಲಿರುವಂತೆ ಮಾಡಲಾಗಿದೆ. ಹೀಗಾಗಿ ಸಮಾಜದ ಅಂಚಿನಲ್ಲಿರುವವರ ಅಹವಾಲು ಅರಣ್ಯರೋದನವಾಗಿದೆ. ಗಂಭೀರವಾದ ವಾಸ್ತವ ಪರಿಸ್ಥಿತಿ, ಬಡತನ ಹಿಂಸೆ, ಸಾಮಾಜಿಕ ಅನ್ಯಾಯಗಳ ಅವಗಣನೆ ಮತ್ತು “ಜಾಣಕುರುಡು’’ ಹಿಂಸಾತ್ಮಕ ಹೋರಾಟ ಹಾಗೂ ಧಾರ್ಮಿಕ ಮೂಲಭೂತವಾದಗಳಿಗೆ ಕಾವು ಕೊಡುತ್ತಿದೆ. ಈ ವರ್ಗವು ತನ್ನ ವಾದಗಳಿಗೆ ಸಮರ್ಥನೆಯಾಗಿ ದಾಖಲಿಸುತ್ತಿರುವ ವಿಷಯಗಳು ಈ ಕೆಳಗಿನಂತಿವೆ.

೧. ಕೃಷಿ ಕ್ಷೇತ್ರದ ನಿಧಾನಗತಿಯ ಬೆಳವಣಿಗೆ, ಕೃಷಿಯನ್ನೇ ಅವಲಂಭಿಸಿದ ಬಹುಪಾಲು ಜನರ ಬದುಕಿನಲ್ಲಿ ಹಿಂದೆAದೂ ಕಾಣದ ರೀತಿಯ ತಲ್ಲಣ ಉಂಟಾಗಿರುವುದು. ಇತ್ತೀಚೆಗೆ ಸುಗ್ರಿವಾಜ್ಞೆಯ ಮೂಲಕ ಜಾರಿಗೆ ಬಂದ ಭೂ ಸ್ವಾದೀನ ಅಧಿನಿಯಮವಂತೂ ರೈತರ ಜಮೀನನ್ನು ಕಿತ್ತು ಕೊಳ್ಳಲು ಕಾರ್ಪೋರೇಟ್ ವಲಯಕ್ಕೆ ಮುಕ್ತ ಅವಕಾಶ ನೀಡಿದೆ. ಈ ಮೂಲಕ ರೈತರ ಬದುಕುವ ಹಕ್ಕನ್ನು ಮೊಟಕುಗೊಳಿಸಲಾಗಿದೆ.

೨. ವಿದೇಶಿ ಹೂಡಿಕೆಗೆ ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳಿಗೆ ಹೋಲಿಸಿದರೆ ಹರಿದು ಬರುತ್ತಿರುವ ವಿದೇಶಿ ಬಂಡವಾಳ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು. ಚೀನಾಕ್ಕೆ ಹೋಲಿಸಿದರೆ ನಮ್ಮಲ್ಲಿ ಬಂದ ಬಂಡವಾಳ ಅತ್ಯಲ್ಪ. (ಮುಂದಿನ ದಿನಗಳಲ್ಲಿ ಚೀನಾಕ್ಕಿಂತ ಭಾರತ ವೇಗವಾಗಿ ಅಭಿವೃದ್ಧಿ ಹೊಂದ ಬಹುದು ಎಂದು ಅಂದಾಜಿಸಲಾಗಿದೆ)

೩. ಉದ್ಯೋಗದ ಪ್ರಮಾಣದಲ್ಲಿ ಆಗುತ್ತಿರುವ ಕುಸಿತ ಮತ್ತು ಪಲ್ಲಟಗಳು ಸಂಘಟಿತ ವಲಯದಲ್ಲಿ ಉದ್ಯೋಗವಕಾಶಗಳು ತೀವ್ರ ಮಟ್ಟದಲ್ಲಿ ಕುಸಿಯುತ್ತಿದ್ದು, ಅಸಂಘಟಿತ ವಲಯದಲ್ಲಿ ತಾತ್ಕಾಲಿಕ, ‘ಪಾತರಗಿತ್ತಿ’ ಮಾದರಿಯ ಉದ್ಯೋಗಗಳ ಸೃಷ್ಟಿಯಾಗುತ್ತಿರುವುದು.

೪. ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹಕ ಕ್ರಮಗಳು ನಿರೀಕ್ಷಿತ ಮಟ್ಟದ ತೆರಿಗೆ ಆದಾಯವನ್ನಾಗಲಿ ಬೆಳವಣಿಗೆಯನ್ನಾಗಲಿ ತರಲು ಯಶಸ್ವಿಯಾಗಲಿಲ್ಲ.

೫. ಮೂಲಭೂತ ಸೌಕರ್ಯ ಸುಧಾರಣೆಯಲ್ಲಿ ಖಾಸಗೀ ವಲಯದ ನಿರುತ್ಸಾಹದಾಯಕ ಪಾಲುದಾರಿಕೆ.

೬. ಸಾರ್ವಜನಿಕ ರಂಗದಲ್ಲಿ ಹೂಡಿಕೆಯನ್ನು ಕಡಿತಗೊಳಿಸಿದಾಗಲೂ ವಿತ್ತೀಯ ಕೊರೆತೆಯ ಪ್ರಮಾಣ ಏರುತ್ತಲೇ ಹೋಗುತ್ತಿದ್ದು, ಕಂದಾಯ ಖಾತೆಯಲ್ಲಿ ಕೊರತೆಯುಂಟಾಗಿ ತೆರಿಗೆಯ ಹೊರೆ ಮುಂದುವರೆಯುತ್ತಾ ಹೋಗುತ್ತಿದ್ದು, ಭವಿಷ್ಯದಲ್ಲಿಯೂ ಜನರ ಮೇಲೆ ಕರಭಾರ ಬೀಳಲಿದೆ. (೨೦೧೫ರ ಆಯವ್ಯಯದಲ್ಲಿ ಇದನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲಾಗಿದೆ).

೭. ಅರ್ಥವ್ಯವಸ್ಥೆ ವಿವಿಧ ವಲಯಗಳ ನಡುವೆ ಅಸಮತೋಲನೆ ಮುಂದುವರಿದಿದ್ದು ಕೈಗಾರಿಕೆ ಮತ್ತು ಕೃಷಿ ವಲಯದ ಉತ್ಪಾದನೆ ಕುಸಿಯುತ್ತಾ ಮುಂದುವರಿದಿದೆ. ಆದರೆ ಸೇವಾ ಕ್ಷೇತ್ರದಲ್ಲಿ ಬೆಳವಣಿಗೆಯ ದರ ಅಧಿಕವಾಗುತ್ತ ಹೋಗುತ್ತಿದೆ.

೮. ಇಂದಿಗೂ ಶೇಕಡಾ ೬೦ರಷ್ಟು ಜನ ಕೃಷಿ ವಲಯವನ್ನು ಅವಲಂಬಿಸಿದ್ದು, ಬೇರೆಲ್ಲಿಗೂ ಸ್ಥಳಾಂತರಗೊಳ್ಳಲು ಯಾವ ಉದ್ಯೋಗಕ್ಕೂ ಪಲ್ಲಟಗೊಳ್ಳಲು ಸಾಧ್ಯವಾಗದಿರುವ ರೈತಾಪಿ ಜನರ ಸ್ಥಿತಿ ಚಿಂತಾಜನಕವಾಗಿದೆ. ದೇಶದಲ್ಲಿ ರೈತರ ಆತ್ಮಹತ್ಯೆ ನಿರಂತರ ಮುಂದುವರಿಯುತ್ತಿದೆ.

೯. ಸರಕಾರೀ ನಿಯಂತ್ರಣ, ಸಾರ್ವಜನಿಕ ವಲಯದಲ್ಲಿ ಪಾರದರ್ಶಕತೆ, ಹೊಸ ತಂತ್ರಜ್ಞಾನಧಾರಿತ ಮತ್ತು ಸೀಮಿತ ವೃತ್ತಿ ನಿರತ ವ್ಯವಹಾರಜ್ಞರಿಂದಲೇ ನಡೆಯುವ ಬಹುಪಾಲು ವಾಣಿಜ್ಯ ವಹಿವಾಟುಗಳು ಹಲವಾರು ಹಗರಣಗಳಿಗೆ ದಾರಿ ಮಾಡಿಕೊಡುತ್ತಿರುವ ಅಂಶ ಆರ್ಥಿಕ ಸದೃಢತೆಯ ದೃಷ್ಟಿಯಿಂದ ಉತ್ತಮ ಲಕ್ಷಣವಲ್ಲ.

೧೦. ಹೆಚ್ಚುತ್ತಿರುವ ಪ್ರಾದೇಶಿಕ ಅಸಮಾನತೆಗಳು, ರಾಜ್ಯಗಳು ನಡುವಿನ ವ್ಯತ್ಯಾಸಗಳಿಂದಾಗಿ ದೇಶದೊಳಗೆ ಹರಿದು ಬಂದ ವಿದೇಶಿ ಬಂಡÀವಾಳ ಆಯ್ದ ಕೆಲವೊಂದು ರಾಜ್ಯಗಳತ್ತ ಮಾತ್ರ ಹರಿಯುತ್ತಿದೆ. ಹೀಗಾಗಿ ಅಸಮಾನತೆ ಇನ್ನೂ  ಹೆಚ್ಚುತ್ತಾ ಹೋಗುತ್ತಿದೆ.

೧೧.ಉದ್ಯಮ ರಂಗದ ಒಟ್ಟು ಹೂಡಿಕೆಯ ಪ್ರಮಾಣದಲ್ಲಿ ನಿರಂತರ ಏರಿಕೆಯಾಗುತ್ತಿದ್ದು ವಿತರಣೆಯಲ್ಲಿ ಇಳಿಕೆಯಗುತ್ತಿದೆ. ಇದರಿಂದ ಸಾಮಾನ್ಯ ಜನರ ಖರೀದಿಸುವ ಸಾಮರ್ಥ್ಯ ಕುಂಟಿತವಾಗುತ್ತಿದೆ ಎಂದು ತಿಳಿಯಲಾಗಿದೆ.

೧೩. ಮಾಹಿತಿ ತಂತ್ರಜ್ಞಾನ ರಂಗದಲ್ಲಿ ದೊಡ್ಡ ಮೊತ್ತದ ಸಂಬಳವಿರುವ ಕೆಲಸಗಳು ಸೃಷ್ಟಿಯಾಗುತ್ತಿರುವುದರ ಹೊರತಾಗಿಯೂ ನಿರುದ್ಯೋಗದ ಪ್ರಮಾಣದಲ್ಲಿ ಅಧಿಕ ಪ್ರಮಾಣದ ಏರಿಕೆಯಾಗುತ್ತಿದೆ.

೧೪. ಬಹಳಷ್ಟು ದೊಡ್ಡ ಪ್ರಮಾಣದ ವಿದೇಶೀ ವಿನಿಮಯವನ್ನು ಅದರ ಗಳಿಕೆಯ ವೆಚ್ಚಕ್ಕಿಂತಲೂ ಕಡಿಮೆ ಆದಾಯ ನೀಡುವ ಖಜಾನೆ ಹುಂಡಿಗಳಲ್ಲಿ ತೊಡಗಿಸಲಾಗಿದೆ. ಇದು ಅರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ.

೧೫. ಆದಾಯ ಗಳಿಕೆಯ ಸಾಮರ್ಥ್ಯ ಮತ್ತು ವಾಸ್ತವ ಆದಾಯದ ವಿಷಯದಲ್ಲಿ ದೇಶದ ಜನರ ನಡುವೆ ಇರುವ ವ್ಯತ್ಯಾಸ ಅತ್ಯಂತ ವೇಗವಾಗಿ ಏರುತ್ತಿದೆ. ಬಡವ ಶ್ರೀಮಂತರ ನಡುವಿನ ಈ ವ್ಯತ್ಯಾಸದಿಂದಾಗಿ ಸಾಮಾಜಿಕ ಸಂತುಲನದಲ್ಲಿ ವ್ಯತ್ಯಯಗಳುಂಟಾಗುತ್ತಿದೆ.

ಮೇಲೆ ಹೇಳಿದ ಅಂಶಗಳು ಉದಾರೀಕರಣ ಉಂಟುಮಾಡಿದ ಒಟ್ಟು ಸ್ಥಿತಿಯನ್ನು ಹಿಡಿದಿಡುವ ಪ್ರಯತ್ನ ಮಾತ್ರವೇ ಹೊರತು, ವಾಸ್ತವ ಪರಿಸ್ಥಿತಿಯ ಸಂಪೂರ್ಣ ಚಿತ್ರಣವಲ್ಲ. ಉದಾರೀಕರಣದ ನಂತರವೂ ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನದಲ್ಲಿ ಅಂತಹ ಏರಿಕೆಯೇನು ಆಗಿಲ್ಲ. ಇದಕ್ಕೆ  ಪ್ರಮುಖ ಕಾರಣ ದೇಶದಲ್ಲಿ ಸಂಪತ್ತಿನ ಸೃಷ್ಟಿ, ಸರಕು ಮತ್ತು ಸೇವೆಗಳ ಉತ್ಪಾದನೆಯಂತೂ ಹೆಚ್ಚಾಗಿರುವುದು ನಿಜ. ಆದರೆ ಇಂತಹ ಹೆಚ್ಚಳ ಕೆಲವು ಸೀಮಿತ ವಲಯಗಳಲ್ಲಿ ಉತ್ತತ್ತಿಯಾಗಿ ಸೀಮಿತ ಜನವರ್ಗಗಳಿಗೆ ಹಂಚಿಕೆಯಾಗಿದೆ. ಈ ರೀತಿಯಲ್ಲಿ ಸೃಷ್ಟಿಯಾದ ಶ್ರೀಮಂತ ವರ್ಗದ ಬೇಡಿಕೆಗಳು ಹೆಚ್ಚಿರುವ ವಿಷಯವನ್ನು ಆಧರಿಸಿ ಇಡೀ ಅರ್ಥ ವ್ಯವಸ್ಥೆಯ ಬೇಡಿಕೆಯೇ ಇದಾಗಿದೆ ಎಂದು ಹೇಳುವುದು ಸರಿಯಲ್ಲ. ಉಪಭೋಗೀ ಆದಾಯ ‘ಪ್ರದರ್ಶನ ಪ್ರವೃತ್ತಿಗೆ’ ಯಾವ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ ಎನ್ನುವುದನ್ನು ತಿಳಿಯಬೇಕಿದೆ. ಮಾಹಿತಿ ತಂತ್ರಜ್ಞಾನ, ಹಣಕಾಸು ವ್ಯವಹಾರ, ಮನೋರಂಜನೆ, ಪ್ರವಾಸ ಮತ್ತು ಅತಿಥಿ ಸತ್ಕಾರ, ಭೂವ್ಯವಹಾರ ವ್ಯಾಪಾರೀ ಚಟುವಟಿಕೆಗಳಲ್ಲಿ ಒಟ್ಟು ವ್ಯವಹಾರ ವೇಗ ಪಡೆದುಕೊಂಡಿದೆ. ಇಂತಹ ವ್ಯಾಪಾರಿ ಚಟುವಟಿಕೆಗಳಲ್ಲಿ ಭಾರಿ ಬಂಡವಾಳ ಹೂಡಿಕೆಯಾಗಿದ್ದು, ಪ್ರಸರಣದ ವೇಗವೂ ಅಧಿಕವಾಗಿದೆ. ಹೀಗೆ ಅಧಿಕ ಪ್ರಸರಣದ ವೇಗದ ಕಾರಣದಿಂದ ಉತ್ಪತ್ತಿಯಾಗುವ ಲಾಭದ ಪ್ರಮಾಣವು ಅಧಿಕವಾಗಿದೆ. ಯಾರಿಗೆ ಅಧಿಕ ಪ್ರಮಾಣದ ಬಂಡವಾಳ ಮತ್ತು ಅಧಿಕ ಪ್ರಸರಣ ವೇಗವನ್ನು ನಿಯಂತ್ರಿಸುವ ಮತ್ತು ನಿಭಾಯಿಸುವ ಸಾಮರ್ಥ್ಯವಿದೆಯೋ ಅಂತಹ ಜನ ವರ್ಗಕ್ಕೆ ಅಧಿಕ ಲಾಭವಾಗುತ್ತದೆ. ನಾವು ಅಗತ್ಯವಾಗಿ ಗಮನಿಸಲೇಬೇಕಾದ ಅಂಶವೆAದರೆ ಇಂತಹ ಕ್ರಿಯೆಯನ್ನು ನಿಭಾಯಿಸುವ ಶಕ್ತಿಯಿರುವುದು ಅಧಿಕಾರ, ಹಣ ಅಥವಾ ಇವೆರಡನ್ನೂ ಹೊಂದಿರುವ ಖಾಸಗೀ ಬಂಡವಾಳದಾರರಿಗೆ, ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ‘ಕೈಯಿಂದ ಬಾಯಿಗೆ’ ಬೇಕಾಗುವಷ್ಟು ಆದಾಯ ಹೊಂದಿರುವ ಅಸ್ತಿತ್ವವುಳಿಸಿಕೊಳ್ಳಲು ಪರದಾಡುವ ಬಹು ಪಾಲು ಬಡ ಮತ್ತು ಕೆಳಮದ್ಯಮ ವರ್ಗದ ಜನರಿಗೆ ಉದಾರೀಕರಣದ ಫಲ ಅವಶ್ಯವಿರುವಷ್ಟು ತಲುಪಿಲ್ಲ. ಇದೇ ಕಾರಣದಿಂದ ಅನಿಯಂತ್ರಿತ ಮುಕ್ತ ಮಾರುಕಟ್ಟೆಯ ಬೆಳವಣಿಗೆ ಇಡೀ ಅರ್ಥ ವ್ಯವಸ್ಥೆಯ ನಿಯಂತ್ರಕ ಶಕ್ತಿಯನ್ನು ಕೆಲವೇ ಕೆಲವು ಶ್ರೀಮಂತರ ಕೈಗೆ ವರ್ಗಾಯಿಸುತ್ತಿದೆ. ಇಂತಹ ಆರ್ಥಿಕ ಬೆಳವಣಿಗೆಗಳು ನಾವು ಪ್ರತಿಪಾದಿಸುತ್ತಿರುವ ಸಬಲೀಕರಣ, ಪ್ರಜಾಪ್ರಭುತ್ವ, ಲಿಂಗಸಮಾನತೆ, ಅಧಿಕಾರ ವಿಕೇಂದ್ರಿಕರಣ, ಇತ್ಯಾದಿ ಪರಿಕಲ್ಪನೆಗಳಿಗೆ ಪೂರಕ ಸನ್ನಿವೇಶ ನಿರ್ಮಾಣ ಮಾಡಲು ಸಹಕಾರಿಯಗಿಲ್ಲ. ಆರ್ಥಿಕಭಿವೃದ್ದಿಯ ಅಳತೆಗೋಲಾಗಿರುವ ಈ ಮೊದಲು ಹೇಳಿರುವ ಪರಿಕಲ್ಪನೆಗಳಿಗೆ ವಿರುದ್ಧವಾದ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಉದಾರೀಕರಣೋತ್ತರ ಬೆಳವಣಿಗೆಯನ್ನು ನಾವು ಹೇಗೆ ಪ್ರಗತಿ, ಉನ್ನತಿ,ಯಾ ಅಭಿವೃದ್ಧಿ ಎಂದು ಗುರುತಿಸಲು ಸಾಧ್ಯ?

ಉದಾರೀಕರಣದ ನಂತರ ಚುನಾವಣೆಗಳಲ್ಲಿ ವ್ಯಕ್ತವಾದ ಜನಾಭಿಪ್ರಾಯವನ್ನು ವಿಶ್ಲೇಷಿಸಿದಾಗ ಅಭಿವೃದ್ಧಿಯ ಕುರಿತು, ಯಾ ಆರ್ಥಿಕ ನೀತಿಗಳ ಕುರಿತು ಬಹುಸಂಖ್ಯಾತ ಜನ ತೀವ್ರ ಅಸಂತೋಷದಿAದಿರುವ ವಿಷಯ ಬಹಿರಂಗವಾಗಿದೆ. ಚುನಾವಣಾ ಫಲಿತಾಂಶಗಳಲ್ಲಿ ಪ್ರಮುಖವಾಗಿ ಆಂದ್ರ ಪ್ರದೇಶದಲ್ಲಿ ವಿಶ್ವ ಬ್ಯಾಂಕಿನ ‘ಪ್ರಜಾಪ್ರಭುತ್ವ ಸರಕಾರದ’ ಆಡಳಿತ ನಿರ್ದೇಶಕ, ಆರ್ಥಿಕ ಉದಾರೀಕರಣದ ಪ್ರತಿಪಾದಕ ಮತ್ತು ಮಾಧ್ಯಮಗಳಲ್ಲಿ ಆಡಳಿತ, ಅಭಿವೃದ್ಧಿ ನೀತಿಗಳ ವಿಷಯದಲ್ಲಿ ಮಹಾ ಮುತ್ಸದ್ದಿಯೆಂದು ಕರೆಯಿಸಿಕೊಂಡಿದ್ದ ಚಂದ್ರಬಾಬುನಾಯ್ಡು ಅವರು ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದದ್ದು ಮತ್ತು “ಭಾರತ ಬೆಳಗುತ್ತಿದೆ”, ಜಾಗತಿಕ ಆರ್ಥಿಕ ಚೈತನ್ಯವಾಗಿ’ ಭಾರತ ರೂಪುಗೊಳ್ಳುತ್ತಿದೆ ಎನ್ನುವ ಘೋಷಣೆಯೊಂದಿಗೆ ಚುನಾವಣೆ ಎದುರಿಸಿದ ಅಂದಿನ ಎನ್.ಡಿ.ಎ.ಸರಕಾರದ ಬಗ್ಗೆ ದೇಶದ ಜನ ನೀಡಿದ ಮತಾಭಿಪ್ರಾಯ, ಉದಾರೀಕರಣ ವಾಸ್ತವಿಕವಾಗಿ ಈ ದೇಶದ ಜನರ ಬದುಕಿನಲ್ಲಿ ಮೂಡಿದ ಪರಿಣಾಮ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದೆ ಎಂದು ತಿಳಿಯಲಾಗುತ್ತಿದೆ. ೨೦೦೪ ರಿಂದ ೨೦೦೯ರ ವರೆಗೆ ಆಡ್ಳಿತ ನಡೆಸಿದ ಯುಪಿಎ ಸರಕಾರ ಕೊಂಚಮಟ್ಟಿಗೆ ಜನರ ನಿರೀಕ್ಷೆಗಳಿಗೆ ಸ್ಪಂದಿಸುವ ಕೆಲಸ ಮಾಡಿರುವ ಕಾರಣ ಮತ್ತೆ ಅಧಿಕಾರ ಗಳಿಸಿಕೊಂಡಿತು. (ಮಾಹಿತಿ ಹಕ್ಕು, ಉದ್ಯೋಗ ಭದ್ರತೆ, ಮತ್ತಿತರ ಜನಪರ ಕಲ್ಯಾಣ ಯೋಜನೆಗಳ ಕಾರಣದಿಂದ ಇದು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ). ಆದರೆ ಎರಡನೆಯ ಅವಧಿಯಲ್ಲಿ ಹಗರಣಗಳ ಸರಮಾಲೆಯನ್ನೇ ಹೊತ್ತುಕೊಂಡ ಕಾರಣ ಅಭಿವೃದ್ಧಿಯ ವಿಷಯ ಮಹತ್ವ ಕಳೆದುಕೊಂಡಿತು. ಅಭಿವೃದ್ಧಿಯ ಕುರಿತು ಭರವಸೆ ಮೂಡಿಸಿದ ಎನ್‌ಡಿಎ ಒಕ್ಕೂಟವನ್ನು ಜನ ಚುನಾವಣೆಯಲ್ಲಿ ಗೆಲ್ಲಿಸಿದರು. ಆದರೆ ‘ಅಭಿವೃದ್ಧಿಯ ಮಂತ್ರ’ ಕೇವಲ ಚುನಾವಣಾ ತಂತ್ರಗಾರಿಕೆಯೆನ್ನುವುದು ಜನರಿಗೆ ಮನವರಿಕೆಯಾದದ್ದೇ ತಡ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಜನ ಹೊಸತಾಗಿ ಕಣ್ಣ್ ಬಿಡುತ್ತಿದ್ದ ಆಮ್ ಅದ್ಮಿ ಪಕ್ಷವನ್ನು ಅಭೂತ ಪೂರ್ವಕ ಬಹುಮತದೊಂದಿಗೆ ಅಧಿಕಾರಕ್ಕೆ ತಂದರು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸುವಾಗ ಜನಸಾಮಾನ್ಯರು ಎಷ್ಟರಮಟ್ಟಿಗೆ ಭ್ರಮ ನಿರಸನಗೊಂಡಿದ್ದಾರೆ ಮತ್ತು ತಮ್ಮ ಆದ್ಯತೆಯನ್ನು ಗುರುತಿಸುವ ರಾಜಕೀಯ ಪಕ್ಷಗಳನ್ನು ಅಧಿಕಾರಕ್ಕೆ ತರಲು ಹೇಗೆ ಹಪ ಹಪಿಸುತ್ತಿದ್ದಾರೆ ಎನ್ನುವ ಅಂಶ ತಿಳಿದುಬರುತ್ತದೆ.

ಹೊಸ ಆರ್ಥಿಕ ನೀತಿ ವಾಸ್ತವಿಕವಾಗಿ ಮತ್ತು ತಾತ್ವಿಕವಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲತತ್ವಗಳಾಗಿರುವ ಸಾಮಾಜಿಕ ಸುರಕ್ಷೆ, ಅಧಿಕಾರ, ವಿಕೇಂದ್ರೀಕರಣ, ದುಡಿಯುವ ವರ್ಗಗಳ ಮತ್ತು ದುರ್ಬಲ ವರ್ಗಗಳ ಹಿತರಕ್ಷಣೆ ಇತ್ಯಾದಿ ವಿಷಯಗಳ ಬಗ್ಗೆ ನಿರುತ್ಸಾಹ ಧೋರಣೆಯನ್ನು ಹೊಂದಿದೆ. ಮೂಲಭೂತವಾಗಿ ಮಾರುಕಟ್ಟೆಯಾಧಾರಿತ ಮುಕ್ತ ಆರ್ಥಿಕ ನೀತಿಯ ಚೌಕಟ್ಟಿನಲ್ಲಿ ನಿಂತಿರುವ ಹೊಸ ಆಲೋಚನಾ ಕ್ರಮ ಎಲ್ಲರನ್ನೂ ಸಮದೃಷ್ಟಿಯಿಂದ ನೋಡುತ್ತದೆ. ಆದರೆ ಅಸಮಾನ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಮೇಲಿರುವ ಜನರನ್ನು ಸಮಾನವಾಗಿ ಪರಿಗಣಿಸಿದಾಗಲೂ ಬೇದ ಭಾವ ಮೂಡಿದಂತೆಯೇ ಆಗುತ್ತದೆ. ಎಲ್ಲಿ ಶೋಷಿತರು, ಮಹಿಳೆಯರು, ಸಮಸ್ಯೆಗಳಲ್ಲಿರುತ್ತಾರೋ ಅಂತಹವರಿಗೆ ಹೆಚ್ಚು ಸಹಾಯ ಮತ್ತು ಅವಕಾಶವಗಳನ್ನು ನೀಡಬೇಕಾಗುತ್ತದೆ. ಸಮಾನತೆಯನ್ನುವುದನ್ನು ‘ಸಂಕೀರ್ಣ’ ಅಥವಾ ‘ಸೀಮಿತ’ ವಾಚ್ಯಾರ್ಥದಲ್ಲಿ ಗ್ರಹಿಸದೆ ಅದರ ಹಿಂದಿರುವ ಇಂಗಿತವನ್ನು ಗ್ರಹಿಸಬೇಕಾಗುತ್ತದೆ. ಆದರೆ ‘ನವ ಅರ್ಥಶಾಸ್ತç’ ವ್ಯಕ್ತಿಯ ಒಳಿತು ಕೆಡುಕುಗಳ ಜವಾಬ್ದಾರಿಯನ್ನು ಅವರವರ ಶಕ್ತಿ ಸಾಮರ್ಥ್ಯಗಳಿಗೆ ಆರೋಪಿಸುವ ಮೂಲಕ, ಸಾಮಾನ್ಯ ಜನರ ದುಃಖ, ದುಮ್ಮಾನಗಳ ಬಗ್ಗೆ ಮೌನವಾಗಿದ್ದು ಬಿಡುತ್ತದೆ. ಉದ್ಯಮ ವಲಯಕ್ಕೆ ಈ ಧೋರಣೆಯನ್ನು ಅನ್ವಯಿಸಿದಾಗ ಅದು ಸರಿ ಸುಮಾರು ಸಮರ್ಥನೀಯವೇ ಆಗುತ್ತದೆ. ಯಾಕೆಂದರೆ ಎಲ್ಲ ಉದ್ಯಮಗಳೂ ಒಂದು ನಿರ್ದಿಷ್ಠ ಸಾಮಾಜಿಕ ರಾಜಕೀಯ ವ್ಯವಸ್ಥೆಯಲ್ಲಿ  ಈಗಷ್ಟೇ ಉತ್ಪಾದನೆ ಆರಂಭಿಸುತ್ತದೆ. ಅದಕ್ಕೆ ತನ್ನ ಅಸ್ತಿತ್ವವನ್ನು ಕಾಡುವ ಚರಿತ್ರೆ ಇರುವುದಿಲ್ಲ. ಉದಾರೀಕರಣದ ನಂತರ ವ್ಯಾಪಾರ ಮತ್ತು ಕೈಗಾರಿಕಾ ವಲಯಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿರುವುದರ ಹೊರತಾಗಿಯೂ ಬಾಕಿಯಿರುವ ತೆರಿಗೆ, ಸಾರ್ವಜನಿಕ ಹಣಕಾಸು ಸಂಸ್ಥೆಗಳಿಗೆ ಮರುಪಾವತಿಸಬೇಕಾಗಿದ್ದ ಸಾಲ, ಇತ್ಯಾದಿಗಳನ್ನು ವಸೂಲು ಮಾಡಲು ಸರಕಾರ ವಿಫಲವಾಗಿರುವುದÀನ್ನು ಗಮನಿಸಬಹುದು. ಮೂಲಭೂತ ಸೌಲಭ್ಯ ಒದಗಿಸಲು, ದೊಡ್ಡ ದೊಡ್ಡ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು ಅಂತಾರಾಷ್ಟಿçÃಯ ವಲಯದಿಂದ ದೊಡ್ಡ ಮೊತ್ತದ ಬಂಡವಾಳವನ್ನು ಪಡೆಯಲಾಗಿದೆ. ಇದನ್ನು ಪಡೆಯುವ ಹಂತದಲ್ಲಿ ‘ಕಮಿಷನ್’, ಸತ್ಕಾರ, ‘ಪರಿಣಿತ ಮಾರ್ಗದರ್ಶನ’ಇತ್ಯಾದಿಗಳು ಹೇಗೆ ಬಡಜನತೆಯ ಹೆಗಲ ಹೊರೆಯಾಗಿದೆ ಎನ್ನುವುದನ್ನು ೨೦೦೬ ನೇ ಇಸವಿಯಲ್ಲಿ ನೋಬೆಲ್ ಪಾರಿತೋಷಕ ಪಡೆದ ಬಾಂಗ್ಲಾದೇಶದ ಆರ್ಥಿಕ ತಜ್ಞ ಮಹಮದ್ ಯೂನಸ್ ತಮ್ಮ ಆತ್ಮ ಕಥೆಯಲ್ಲಿ ವಿವರಿಸುತ್ತಾರೆ. ಕೈಗಾರಿಕಾ ವಲಯಕ್ಕೆ ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳಿಂದ ಮತ್ತು ಆ ವಲಯದಿಂದ ಬರಬೇಕಾದ ತೆರಿಗೆ, ಸುಂಕ ಮತ್ತಿತರ ರಾಜಸ್ವ ವಸೂಲಾತಿಯಲ್ಲಿನ ಅದ್ಯಕ್ಷತೆಯಿಂದ ವಿತ್ತೀಯ ಕೊರತೆಯು ಏರುತ್ತಿದೆ. ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸುವ ಸಂಪನ್ಮೂಲವು ಅದಕ್ಷ ಮತ್ತು ಸಂವೇದನಾ ಶೀಲತೆಯಿಲ್ಲದೆ ಸರಕಾರೀ ವ್ಯವಸ್ಥೆಯ ಕಾರಣದಿಂದ ಸಮಾಜದ ಕೆಳಸ್ತರಗಳನ್ನು ತಲುಪುವಲ್ಲಿ  ಸೋಲುತ್ತದೆ. ಇದರ ಪರಿಣಾಮವಾಗಿ ವಿತ್ತೀಯ ಕೊರತೆಯಲ್ಲಿ ಏರಿಕೆಯ ಮತ್ತು (ಪಾವತಿ ಖಾತೆ) ಬಾಹ್ಯ ಪಾವತಿಗಳ (exಣeಡಿಟಿಚಿಟ iಟಿಣeಡಿಟಿಚಿಟ ಠಿಚಿಥಿmeಟಿಣs) ಸಮಸ್ಯೆ ದೇಶದ ಸರಕಾರ ಮತ್ತು ಸಂಘಟಿತ ವಲಯದ ಮೇಲೆ ಒತ್ತದ ಉಂಟು ಮೂಡುತ್ತದೆ. ಆದರೆ ಇಂತಹ ಒತ್ತಡ ಅಂತಿಮವಾಗಿ, ಅಸಂಘಟಿತ ವಲಯ ದುರ್ಬಲ ವರ್ಗಗಳಿಗೆ ವರ್ಗಾಯಿಸಲ್ಪಡುತ್ತದೆ. ಸಂಘಟಿತ ವಲಯ ತನ್ನ ಸಮಸ್ಯೆಗಳ ಬಗ್ಗೆ, ಅವಶ್ಯಕತೆಗಳ ಬಗ್ಗೆ ಹಾಗೂ ತನ್ನ ಅಸ್ತಿತ್ವದ ಪ್ರಶ್ನೆಯ ಬಗ್ಗೆ ಒಂದು ಸಂಘಟಿತ ಹೋರಾಟ ಮಾಡುತ್ತದೆ. ಹಾಗಾಗಿ ಈ ವಲಯದ ಸಮಸ್ಯೆಗಳು ಅಸಂಘಟಿತ ವಲಯದ ಸಮಸ್ಯೆಗಳಂತೆ ಸೂಕ್ಷö್ಮ ಸ್ತರಗಳಲ್ಲಿ ಕೌಟುಂಬಿಕ ಯಾ ವ್ಯಕ್ತಿಯ ಮೇಲೆ ಆಘಾತಕಾರೀ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಭಾರತದ ಅರ್ಥ ವ್ಯವಸ್ಥೆಯಲ್ಲಿ ಇಂದು ತಲೆಯೆತ್ತುತ್ತಿರುವ ಕೋಮುವಾದ, ಜಾತಿ ಸಂಘರ್ಷ ಮಹಿಳಾ ಶೋಷಣೆ, ದುರ್ಬಲ ವರ್ಗಗಳ ಮೇಲಿನ ದಬ್ಬಾಳಿಕೆಗಳು ಇವೆಲ್ಲದರ ಹಿಂದಯೂ ಆರ್ಥಿಕ ನೀತಿಗಳ ಪರಿಣಾಮವಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಪ್ರಜಾಪ್ರಭುತ್ವ ಮಾದರಿಯ ಸರಕಾರಗಳಲ್ಲಿ ಅಸ್ಥಿರತೆ, ಗೊಂದಲಗಳು ಉಂಟಾಗಿರುವುದು ಸಹಜ, ಅದರಲ್ಲಿಯೂ ಭಾರತದಂತಹ ಬಹುರೂಪೀ ಬಹುಜಾತಿಗಳಿರುವ ದೇಶದಲ್ಲಿ ವಿವಿಧ ರೀತಿಯ ಅಸ್ಮಿತಿಯ ನೆಲೆಯಲ್ಲಿ ಸಮುದಾಯ ಸಂಘಟಿತವಾಗಿ ಪ್ರಜಾ ಪ್ರಾತಿನಿದ್ಯ ವಿಕೃತಿಗೊಳಗಾಗುವ ಅಪಾಯಗಳಿವೆ. ಇದರಿಂದ ಸ್ಥಿರತೆಯ ಹುಡುಕಾಟವೇ ಮುಖ್ಯವಾಗಿ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ ಮೂಲೆಗೊತ್ತಲ್ಪಡುವ ಪ್ರಮೇಯ ಉಂಟಾಗುವುದು. ಇಂತಹ ಬೆಳವಣಿಗೆಗಳನ್ನು ಉದಾರೀಕರಣದ ನಂತರ ಕಂಡು ಬರುವ ರಾಜಕೀಯ ವಲಯದಲ್ಲಿ ಕಾಣಬಹುದಾಗಿದೆ. ನಿಜವಾದ ಅಪಾಯವಿರುವುದು ಈ ಪರಿಸ್ಥಿತಿಯಲ್ಲಿ ಅಲ್ಲ. ಬದಲಿಗೆ ಇಂತಹ ಗೊಂದಲದ ವಾತಾವರಣವನ್ನು ಅಂತಾರಾಷ್ಟಿçÃಯ ವ್ಯಾಪಾರೀ ಸಮುದಾಯ ಮತ್ತು ಮುಂದುವರಿದ ದೇಶಗಳು ಅವರ ಅನುಕೂಲಕ್ಕಾಗಿ ಬಳಸಿಕೊಳ್ಳುವುದರಲ್ಲಿ. ಪ್ರಪಂಚದ ಬಹಳಷ್ಟು ಕಡೆ ಆರ್ಥಿಕ ಉದಾರೀಕರಣದ ಬಗ್ಗೆ ಬಹುಪಾಲು ಜನರು ವಿರೋಧ ವ್ಯಕ್ತಪಡಿಸುತ್ತಿದ್ದರೂ ಅಂತಹ ವಿರೋಧ ಒಂದು ಸಂಘಟಿತ ರೂಪದಲ್ಲಿ ವ್ಯಕ್ತವಾಗದೆ ಚದುರಿ ಹೋಗಿರುವುದರಿಂದ, ಬಹು ಜನರಿಗೆ ಸ್ವೀಕೃತವಲ್ಲದ ಒಂದು ಅಭಿವೃದ್ಧಿ ಮಾದರಿಯ ನೀತಿಯ ಮುಂದುವರಿಕೆಯನ್ನು ತಡೆಯಲಾಗುತ್ತಿಲ್ಲ. ಭಾರತದಲ್ಲಿಯೂ ಅಂತಹದೇ ಪರಿಸ್ಥಿತಿಯನ್ನು ನಾವು ಕಾಣಬಹುದಾಗಿದೆ.

ಇಂದಿಗೂ ಬಹುಪಾಲು ಜನರಿಗೆ ಆಧಾರವಾಗಿರುವ ಕೃಷಿಕ್ಷೇತ್ರವಂತೂ ಉದಾರೀಕರಣದ ನಂತರ ತತ್ತರಿಸಿ ಹೋಗಿದೆ. ಕರ್ನಾಟಕ, ಮಹಾರಾಷ್ಟç, ಆಂದ್ರಪ್ರದೇಶ, ರಾಜ್ಯಗಳಲ್ಲಿ ರೈತರು ನಿರಂತರ ಆತ್ಮಹತ್ಯೆಗೆ ಶರಣಾಗುತ್ತಿರುವ ಕರುಣಾಜನಕ ಪರಿಸ್ಥಿತಿ ಇದೆ. ಪ್ರಧಾನಿ ಮನಮೋಹನ್ ಸಿಂಗ್ ಅವರ ‘ವಿದರ್ಭ ಪ್ಯಾಕೇಜ್’ ರೈತರ ಆತ್ಮಹತ್ಯೆಯನ್ನು ತಡೆಯಲು ಸಮರ್ಥವಾಗಿಲ್ಲ. ಸೂಕ್ಷö್ಮಮನಸ್ಸಿನ ಅಮಾಯಕ ರೈತಾಪಿ ಜನ ದೇಶಕ್ಕೆ ಅನ್ನ ನೀಡಿ ತಾವು ಮಾತ್ರ ವಿಷ ಸೇವಿಸುವಂತಹ ಒಂದು ದಾರುಣ ಪರಿಸ್ಥಿತಿ, ನಮ್ಮ ದೇಶದ ಪಾರ್ಲಿಮೆಂಟ್ ಮತ್ತು ರಾಜ್ಯದ ವಿಧಾನ ಸಭೆಗಳ ಗೋಡೆಯನ್ನು ದಾಟಿ ಒಳಗಿರುವ ಜನಪ್ರತಿನಿಧಿಗಳನ್ನು ತಲುಪುತ್ತಿಲ್ಲ. ಕೃಷಿ ವಲಯದ ಸಮಸ್ಯೆಗಳಿಗೆ ವಾಣಿಜ್ಯ ಜಗತ್ತು ನೀಡುತ್ತಿರುವ ಪರಿಹಾರಗಳಂತೂ ಇನ್ನೂ ಗಾಬರಿ ಹಿಡಿಸುವ ಹಾಗಿವೆ. ಕೃಷಿ ವಲಯಕ್ಕೆ ಅನ್ವಯಿಸಬಹುದಾದ ಒಪ್ಪಂದ ಬೇಸಾಯ”ದಂತಹ ನೀತಿಯನ್ನು ಅನ್ವಯಿಸಿದರೆ ಅದರಿಂದ ರೈತರ ಪರಿಸ್ಥಿತಿ ಇನ್ನೂ ಹದಗೆಡಬಹುದು ಎನಿಸುತ್ತದೆ. ರೈತರ ಆತ್ಮಹತ್ಯೆಯ ಬಗ್ಗೆ ಇದುವರೆಗೆ ನಡೆದಿರುವ ಯಾವ ಅಧ್ಯಯನಗಳೂ ರೈತರ ಆತ್ಮಹತ್ಯೆಯ ಹಿಂದಿರುವ ಕಾರಣಗಳನ್ನು ಸರಿಯಾಗಿ ಗ್ರಹಿಸಿಲ್ಲ. ಈ ಕಾರಣಕ್ಕಾಗಿಯೇ ಈ ಸಮಸ್ಯೆಯ ಗಂಭೀರತೆಯ ಬಗ್ಗೆ ನೀಡಬೇಕಾಗಿರುವ ಗಮನ ನೀಡಿಲ್ಲವೆಂದೇ ಹೇಳಬೇಕಾಗುತ್ತದೆ.

ವ್ಯಾವಹಾರಿಕ ಮತ್ತು ವ್ಯಾಪಾರೀ ಜಗತ್ತು ಕೃಷಿ ವಲಯಕ್ಕೆ ತಂದೊಡ್ಡುತ್ತಿರುವ ಮತ್ತೊಂದು ಅಪಾಯ ‘ವಿಶೇಷ ಆರ್ಥಿಕ ವಲಯಗಳ ರೂಪದಲ್ಲಿದೆ. ಈ ವಿಶೇಷ ಆರ್ಥಿಕ ವಲಯದ ಹಿಂದೆ ಗುಪ್ತ ಕಾರ್ಯಸೂಚಿಗಳೇನಾದರೂ ಇರಬಹುದು. ಎನ್ನುವ ರೀತಿಯಲ್ಲಿ ಇದಕ್ಕೆ ಸಂಬAಧಿಸಿದ ಬೆಳವಣಿಗೆಗಳು ನಡೆಯುತ್ತಿವೆ. ಕೃಷಿ ನಮ್ಮ ದೇಶದಲ್ಲಿ ಬರೀ ಉದ್ಯೋಗ ಮಾತ್ರವಲ್ಲ ಅದು ಒಂದು ವಿಶಿಷ್ಟವಾದ ಸಂಸ್ಕೃತಿ ಕೂಡಾ ಆಗಿದೆ. ಹಾಗಾಗಿ ಕೃಷಿ ರಂಗವನ್ನು ಬರೀ ನಾಣ್ಯಗಳ ಮೂಲಕ ಅಳೆಯುವುದು ಸರಿಯಲ್ಲ. ಕೃಷಿಯೊಂದಿಗೆ ನಮ್ಮ ಸಂಸ್ಕೃತಿಯೂ ಬೆರೆತುಕೊಂಡಿದೆ. ಇಂತಹ ಸೂಕ್ಷö್ಮವನ್ನು ಅರಿಯದೆ ಬರೀ ಪರಿಹಾರದ ಹಣ, ವಿದೇಶಿ ವಿನಿಮಯ ಮತ್ತು ಬೃಹತ್ ಆರ್ಥಿಕ ಶಕ್ತಿಯಾಗುವತ್ತ ಓಟ’ ಎನ್ನುವ ಆಮದಿತ ಬುದ್ಧಿವಂತಿಕೆಯನ್ನು ಬದಿಗಿಟ್ಟು ಯೋಚನೆ ಮಾಡಬೇಕಾದ ಅಗತ್ಯವಿದೆ. ವಿಶೇಷ ಆರ್ಥಿಕ ವಲಯದ ನೆಪದಲ್ಲಿ ರೈತರ ಬದುಕಿನೊಂದಿಗೆ ಆಟವಾಡುವುದು ಸರಿಯಲ್ಲ. ಏನೇ ಸಂಪತ್ತನ್ನು ಗಳಿಸಿದರೂ ಅದರ ಅಂತಿಮ ಉದ್ದೇಶ ಒಂದು ಸುಖೀ ಸಮಾಜದ ನಿರ್ಮಾಣವೇ ಹೊರತು ಬರೀ ಹಣಗಳಿಕೆ ಮಾತ್ರವಲ್ಲ.

ಕಾರ್ಮಿಕ ಪಾಲುಗೊಳ್ಳುವಿಕೆಯ ದರದಲ್ಲಿ ಇಳಿಕೆ, ನೌಕರವರ್ಗ ಗಳಿಸುತ್ತಿರುವ ಆದಾಯದ ನಡುವೆ ಇರುವ ವ್ಯತ್ಯಾಸ ಏರುತ್ತಿರುವುದು, ಸಣ್ಣ ಜನವರ್ಗ ದೇಶದ ಸಂಪತ್ತಿನ ದೊಡ್ಡ ಭಾಗದ ಮೇಲೆ ಹಿಡಿತ ಹೊಂದಿರುವುದು, ಬಡತನದ ತೀವ್ರತೆ ಹೆಚ್ಚಾಗುತ್ತಿರುವುದು, ಅಧಿಕಾರದ ಕೇಂದ್ರಗಳು ಜನತಾಂತ್ರಿಕ ವ್ಯವಸ್ಥೆಯಿಂದ ನಿಧಾನವಾಗಿ ಬಂಡವಾಳ ನಿಯಂತ್ರಿತ ವ್ಯವಸ್ಥೆಯ ಕಡೆಗೆ, ಅವ್ಯಕ್ತ ರೀತಿಯಲ್ಲಿ ವರ್ಗಾವಣೆ ಹೊಂದುತ್ತಿರುವುದು, ಬಹುಪಾಲು ಜನರ ಸಂಕಟದ ಬಗ್ಗೆ ಮಾದ್ಯಮಗಳಿಗೆ, ಆಡಳಿತ ವ್ಯವಸ್ಥೆಗೆ ನಿರಾಸಕ್ತಿ, ದುರ್ಬಲ ವರ್ಗಗಳ ಸಮಸ್ಯೆಗಳ ಬಗ್ಗೆ ಗಮನ ಕಡಿಮೆಯಾಗುತ್ತಿರುವುದು, ಬದುಕಿನ ಸರ್ವ ರಂಗಗಳನ್ನೂ ವ್ಯಾಪಾರೀಕರಣಗೊಳಿಸಲು ಸಮರ್ಥ ರೀತಿಯ ವಾದಗಳನ್ನು ಮುಂದಿಡಲಾಗುತ್ತಿದೆ, ಇದು ಅಕ್ಷೇಪಾರ್ಹ. ಈ ಹಿಂದಿನ ಭಾಗದಲ್ಲಿ ಹೊಸ ಅರ್ಥನೀತಿಯನ್ನು ಒಪುö್ಪವ ಮತ್ತು ಟೀಕಿಸುವ ವರ್ಗಗಳ ವಾದಗಳನ್ನು ಗಮನಿಸಲಾಗಿದೆ. 

ಈ ಮೇಲಿನ ಎರಡರ ಹೊರತಾದ ಮೂರನೇಯ ವರ್ಗವೊಂದಿದೆ. ಇದು ಯಾವುದರ ಬಗ್ಗೆಯೂ ಗಂಭೀರವಾಗಿ ಯೋಚಿಸುವುದೇ ಇಲ್ಲ. ಈ ವರ್ಗಕ್ಕೆ ಬದಲಾವಣೆಯೆನ್ನುವುದು ಅನಿವಾರ್ಯ ಅದರ ಹಿಂದೆ ಮುಂದೆ ಯೋಚಿಸುವುದರಿಂದ ಏನೂ ಲಾಭವಿಲ್ಲ. ಹಾಗಾಗಿ ವ್ಯವಸ್ಥೆಗೆ ಹೊಂದಿಕೊAಡು ಅದರಿಂದ  ಪ್ರಯೋಜನ ಪಡೆಯುವುದು ಮುಖ್ಯ ಎಂದಷ್ಟೇ ಚಿಂತಿಸುತ್ತದೆ. ಅರ್ಥಶಾಸ್ತçಜ್ಞ ಕೇನ್ಸ್ ಹೇಳುವಂತೆ “ನಾವು ದೀರ್ಘಾವಧಿ ಪರಿಣಾಮಗಳ ಬಗೆಗೆ ಹೆಚ್ಚು ಚಿಂತಿತರಾಗಿಲ್ಲ, ಯಾಕೆಂದರೆ ದೀರ್ಘಾವಧಿಯಲ್ಲಿ ನಾವಿರುವುದಿಲ್ಲ.  ನಾವು ಬದುಕುವುದು ಅಲ್ಪಾವಧಿಯಲ್ಲಿ ಮಾತ್ರ ಹಾಗಾಗಿ ನಾವು ಅಲ್ಪಾವಧಿಯ ಬಗ್ಗೆ ಮಾತ್ರ ಚಿಂತಿತರಾಗಿದ್ದೇವೆ’’ಎನ್ನುವುದು ಆದರೆ ಈ ಜಗತ್ತಿನಲ್ಲಿ ನಾವು ಅಲ್ಪಾವಧಿಯಲ್ಲಿ ಇರುವವರಾದರೂ ಅದು ನಮ್ಮ ಮುಂದಿನ ತಲೆಮಾರಿಗೂ ಸೇರಿದ್ದು ಎನ್ನುವ ವಿವೇಕವನ್ನು ಸಮಾಜ ಕಳಕೊಳ್ಳಬಾರದು.

ಆರ್ಥಿಕ ಅಭಿವೃದ್ಧಿಯ ಬದಲಾಗುತ್ತಿರುವ ವಾಙ್ಮಯಗಳು ಯಾವುದೋ ಒಂದು ದಿಕ್ಕಿನಲ್ಲಿ ಮುನ್ನಡೆಯುತ್ತಿವೆ. ಇಂತಹ ದಿಕ್ಕು, ಗತಿ ಮತ್ತು ವೇಗಗಳನ್ನು ನಿಯಂತ್ರಿಸುವ ಒಂದು ಗುಂಪು ಸದಾ ಇದ್ದೇ ಇದೆ. ಎಲ್ಲವೂ ನೀರಿಕ್ಷೆಯಂತೆ ನಡೆಯದೇ ಹೋದರೂ ಬಹುಪಾಲು ಬದಲಾವಣೆಗಳು ಆ ಗುಂಪಿನ ಹಿತಾಸಕ್ತಿಗೆ ಪೂರಕವಾಗಿ ನಡೆಯುತ್ತಿರುವುದಂತೂ ಸತ್ಯ. ಈಗಿರುವ ಪರಿಸ್ಥಿತಿ ಬದಲಾಗಿ ಅಭಿವೃದ್ಧಿಯ ವಿಸ್ತಾರ ಮತ್ತು ವ್ಯಾಪ್ತಿ ಬಹುಜನರ ಹಿತಾಸಕ್ತಿಗಳನ್ನು ಒಳಗೊಂಡು ಎಲ್ಲ ಜನವರ್ಗವನ್ನು ತಮ್ಮೊಟ್ಟಿಗೆ ಕರೆದುಕೊಂಡು ಮುನ್ನಡೆಯುವ ಹಾಗೆ ಆಗಬೇಕು.ಈ ನಿಟ್ಟಿನಲ್ಲಿ ಅಧಿಕಾರ ವಿಕೇಂದ್ರೀಕರಣ, ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯ ಪೂರ್ಣ ಬೆಳವಣಿಗೆ, ಸಮಾಜದ ಸ್ವಾಸ್ಥö್ಯ ಮತ್ತು ದೃಢತೆಯನ್ನು ನಿಯಂತ್ರಿಸುವ ಮತ್ತು ನಿರ್ಧರಿಸುವ ಮೂಲಧಾತುವಾಗಿರುವ ಶಿಕ್ಷಣ ಮತ್ತು ಆರೋಗ್ಯವನ್ನು ಎಲ್ಲರಿಗೆ ಕಡ್ಡಾಯವಾಗಿ ವಿತರಿಸುವ ವ್ಯವಸ್ಥೆ ಮಾನವ ಹಕ್ಕು ರಕ್ಷಣೆ, ಇತ್ಯಾದಿಗಳು ಅತ್ಯಗತ್ಯ. ಮಾರುಕಟ್ಟೆ ಆಧಾರಿತ ವ್ಯವಸ್ಥೆಯಾಗಿರಬಹುದು ಅಥವಾ ಸರಕಾರ ನಿಯಂತ್ರಿಸುವ ವ್ಯವಸ್ಥೆಯಾಗಿರಲಿ, ಅದು ಮಾನವ ಕಲ್ಯಾಣ ಕೇಂದ್ರಿತ ವ್ಯವಸ್ಥೆಯಾಗಿರುವುದು ಅತ್ಯಂತ ಪ್ರಮುಖವಾಗಿದೆ. 

ಪ್ರಸ್ತುತ ಪರಿಸ್ಥಿತಿಯಲ್ಲಿ ಮುಕ್ತ ಮಾರುಕಟ್ಟೆಯಾಧಾರಿತ ಅರ್ಥ ವ್ಯವಸ್ಥೆ ಉಳಿದೆರಡು ವ್ಯವಸ್ಥೆಗಿಂUತ ಬಲಿಷ್ಠವಾಗಿ ಜಗತ್ತನ್ನು ಅವಹಿಸಿಕೊಂಡಿದೆ.  ಇಂತಹ ಆರ್ಥಿಕ ವ್ಯವಸ್ಥೆ ತನ್ನೆಲ್ಲಾ ಮಿತಿಗಳ ಹೊರತಾಗಿಯು ಬೆಳೆಯುತ್ತದೆ.  ಇಂತಹ ಆರ್ಥಿಕ ವ್ಯವಸ್ಥೆಯ ಮಿತಿಗಳೇ ಇದರ ಕುಸಿತಕ್ಕೆ ಕಾರಣವಾಗಬಹುದೆಂದು ತಿಳಿಯಲಾಗಿತ್ತು.  ಆದರೆ ಇಂತಹ ಆರ್ಥಿಕ ವಿನ್ಯಾಸ ತನ್ನ ಹುಳುಕಗಳನ್ನು ಮುಚ್ಚಿಕೊಳ್ಳುವ ಮತ್ತು ಮಿತಿಗಳನ್ನು ನಿಭಾಯಿಸುವ ಮಾರ್ಗೋಪಾಯಗಳನ್ನು ತನ್ನೊಳಗೇ ಸಿದ್ಧಗೊಳಿಸಿದ್ದುಕೊಂಡು ಮುಂದುವರಿಯುತ್ತಿರುವುದನ್ನು ಕಾಣಬಹುದು.

ಸರ್ವೋದಯಕ್ಕಾಗಿ ಅಭಿವೃüದ್ಧಿ- ವಾಸ್ತವ ಮತ್ತು ವಿಕಲ್ಪ 

ಸರ್ವೋದಯದ ಆಧಾರಿತ ಅಭಿವೃದ್ದಿಯ ಬಗೆಗೆ ಮೊದಲನೇ ಭಾಗದಲ್ಲಿ ವಿವರಿಸಲಾಗಿತ್ತು. ಎರಡನೇಯ ಭಾಗದಲ್ಲಿ ಭಾರತದಲ್ಲಿ ನಾವು ಅನುಸರಿಸಿದ ಅಭಿವೃದ್ಧಿಯ ಮಾದರಿ, ಅದರಲ್ಲಿ ತೊಂಭತ್ತರ ದಶಕದಲ್ಲಿ ತರಲಾದ ಬದಲಾವಣೆಗಳ ಕುರಿತು ವಿವರಿಸಲಾಗಿದೆ. ಮಾತ್ರವಲ್ಲ ಅಂತಹ ಬದಲಾವಣೆಗಳ ಪರಿಣಾಮಗಳ ಕುರಿತಂತೆಯೂ ಚರ್ಚಿಸಲಾಗಿದೆ. ಈ ಹಿನ್ನಲೆಯಲ್ಲಿ ನಿಜವಾಗಿಯೂ ಪ್ರಸ್ತುತ ಜಗತ್ತು ಮಾರುಕಟ್ಟೆ ಆಧಾರಿತ ಅಥವಾ ಬಂಡವಾಳ ನೀತಿಯನ್ನು ಕೇಂದ್ರವಾಗಿರಿಸಿಕೊAಡಿರುವ ಆರ್ಥಿಕ ವ್ಯವಸ್ಥೆಯ ಕಡೆಗೆ ಸಂಪೂರ್ಣವಾಗಿ ವಾಲಿರುವುದನ್ನು ತಿಳಿಯಬಹುದು. ಅಥವಾ ಈ ಅರ್ಥವ್ಯವಸ್ಥೆಯನ್ನು ಒಪ್ಪಿಕೊಳ್ಳದೇ ಅನ್ಯ ವಿಧಿಯೇ ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೇಳುವಂತಾಗಿದೆ. ಉದಾಹರಣೆಗೆ ಮುಂದುವರಿದ ದೇಶಗಳದ್ದೇ ಅಧಿಪತ್ಯವಿದೆ ಎಂದು ಹೇಳಿ ವಿಶ್ವ ವ್ಯಾಪಾರ ಸಂಘಟನೆಯಿAದ ಅದು ಅಸ್ತಿತ್ವಕ್ಕೆ ಬಂದ ಮೊದಲಿಗೆ (೧೯೯೪) ವಿಶ್ವದ ಸುಮಾರು ಎಪ್ಪತ್ತರಷ್ಟು ರಾಷ್ಟçಗಳು ಹೊರಗುಳಿದುವು. ಆದರೆ ಇಂದು (೨೦೧೫)ರಲ್ಲಿ ನೂರ ತೊಂಭತ್ತ ನಾಲ್ಕು ದೇಶಗಳಲ್ಲಿ ನೂರ ಅರವತ್ತು ರಾಷ್ಟçಗಳು ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯರಾಗಿದ್ದರೆ, ಇದಕ್ಕೆ ಮುಖ್ಯ ಕಾರಣ ಬಲಗೊಳ್ಳುತ್ತಿರುವ ಜಾಗತೀಕರಣದ ಪರಿಸ್ಥಿತಿಯಲ್ಲಿ ಯಾವುದೇ ಒಂದು ರಾಷ್ಟç ಸ್ವತಂತ್ರವಾಗಿ, ಸ್ವಾಯತ್ತ ಘಟಕವಾಗಿ ಉಳಿಯುವುದು ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ವೋದಯ ಆಶಯಗಳಿಗೆ ಅವಕಾಶ ಎಲ್ಲಿದೆ ಅಥವಾ ಅವಕಾಶ ಕಲ್ಪಿಸುವುದು ಸಾಧ್ಯವೇ? ಈ ಪ್ರಶ್ನೆಗೆ ಉತ್ತರಿಸುವ ಒಂದು ಪ್ರಯತ್ನವನ್ನು ಈ ಭಾಗದಲ್ಲಿ ಮಾಡಲಾಗಿದೆ. ಎಪ್ರಿಲ್ ತಿಂಗಳಲ್ಲಿ ಕರ್ನಾಟಕ ರಾಜ್ಯದ ಚಾಮರಾಜ ನಗರದ ಐತಿಹಾಸಿಕ ‘ಬದನವಾಳು’ ಅಧಿವೇಶನದಲ್ಲಿ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ನಡೆದ ಚರ್ಚೆ ಈಗಿನ ಅಭಿವೃದ್ಧಿ ಮಾದರಿಯಲ್ಲಿ ಮಾರುಕಟ್ಟೆಯ ದೈತ್ಯ ಶಕ್ತಿಗಳು ಹೇಗೆ ಇಡೀ ಸಮುದಾಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿವೆ ಮತ್ತು ಇದರಿಂದ ಏನೇನು ಅಪಾಯಗಳಿವೆ ಎನ್ನುವ ಕುರಿತು ವಿಮರ್ಶಿಸಿದ್ದಾರೆ. ಇಂತಹ ಅಭಿವೃದ್ಧಿ ಮಾದರಿಗೆ ಪರ್ಯಾಯ ಮಾರ್ಗ ಹುಡುಕಲೇ ಬೇಕಾದ ಅನಿವಾರ್ಯತೆಯ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆಗಳಾಗಿದೆ.

ಜಾಗತಿಕ ಮಟ್ಟದಲ್ಲಿ ಎಲ್ಲ ಪ್ರತಿತೋಧಗಳನ್ನು ಚಾಕಚಕ್ಯತೆಯಿಂದ ನಿಭಾಯಿಸುವ ಮೂಲಕ ಮುಕ್ತ ಆರ್ಥಿಕ ವಿನ್ಯಾಸ ಅಥವಾ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆ ತನ್ನನ್ನು ಗಟ್ಟಿಯಾಗಿಯೇ ಸ್ಥಾಪಿತಕೊಂಡಿದೆ. ಹಾಗೆಂದ ಮಾತ್ರಕ್ಕೆ ಈ ವ್ಯವಸ್ಥೆ ಬಹು ಜನರ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಹೇಳಲಾಗದು. ಭಾರತದ ಸಂದರ್ಭದಲ್ಲಿ ಉದಾರೀಕರಣದ ನಂತರ ಅರ್ಥವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳು ಸಮಾಜದಲ್ಲಿ ತಲ್ಲಣ, ತಳಮಳಗಳಿಗೆ ಕಾರಣವಾಗಿದೆ. ಇದು ವಿಶ್ವದ ಇತರೆಡೆಗಳಲ್ಲಿಯೂ ಕಂಡು ಬರುತ್ತದೆ. ಸಮಾಜದಲ್ಲಿ ಇಂತಹ ಸಮಸ್ಯೆಗಳಿರುವಾಗ ಮುಕ್ತ ಅರ್ಥವ್ಯವಸ್ಥೆ ಇವುಗಳನ್ನು ಉಪೇಕ್ಷಿಸಿ ಮುಂದುವರಿಯುವAತಿಲ್ಲ. ಸಮಸ್ಯೆಗಳಿಗೆ ಒಂದು ಪರಿಹಾರವನ್ನು ಸೂಚಿಸಲೇಬೇಕು, ಇಲ್ಲವಾದರೆ ಸಮಾಜದಲ್ಲಿ ಜನರ ಅಸಹಕಾರ, ವಿರೋಧದ ನಡುವೆ ಒಂದು ಅರ್ಥವ್ಯವಸ್ಥೆ ಚಾಲ್ತಿಯಲ್ಲುಳಿಯಲು ಸಾಧ್ಯವಾಗುವುದಿಲ್ಲ. ಹಾಗಾದರೆ ಈ ಸಮಸ್ಯೆಗಳನ್ನು ಯಾರು ಪರಿಹರಿಸಬೇಕು, ಸರಕಾರಗಳೇ, ಅಥವಾ ಉದ್ಯಮ ವಲಯವೇ ಯಾ ನಾಗರಿಕ ಸಮಾಜವೇ? ಸರಕಾರಗಳ ನೀತಿಯ ಪರಿಣಾಮವಾಗಿಯೇ ಸಮಸ್ಯೆಗಳು ಹುಟ್ಟಿಕೊಂಡಿರುವುದರಿAದ ಸರಕಾರದ ಮೂಲಕ ಯಾ ಸರಕಾರಿ ವ್ಯವಸ್ಥೆಯ ಮೂಲಕ ಇದಕ್ಕೆ ಪರಿಹಾರ ಕಷ್ಟ ಸಾಧ್ಯ. ಇನ್ನು ಉದ್ಯ÷್ಮ ವಲಯದ ಆದ್ಯತೆ ವಸ್ತು ಮತ್ತು ಸೇವೆಗಳ ಉತ್ಪಾದನೆಯೇ ಹೊರತು ಸಮಾಜ ಕಲ್ಯಾಣ ಕಾರ್ಯಕ್ರಮಗಳಲ. ಒಂದು ವೇಳೆ ಉದ್ಯಮ ವಲಯ ಇಂತಹ ಕೆಲಸಗಳನ್ನು ಮಾಡಲು ತೊಡಗಿದರೆ ಅವುಗಳಿಗೆ ಆರ್ಥಿಕ ಹೊರೆಯಾಗುವುದರ ಜೊತೆಗೇನೆ ಪ್ರಮುಖ ಉದ್ದೇಶವಾದ ಲಾಭಗಳಿಕೆ, ಮತ್ತು ವ್ಯಾವಹಾರ ವರ್ಧನೆಗೆ ಕುಂದು ಉಂಟಾಗುತ್ತದೆ. ಹೀಗೆ ಕುಂದು ಉಂಟಾದರೆ ಅವುಗಳಲ್ಲಿ ಬಂಡವಾಳ ಹೂಡಿದ ಶೇರುದಾರರು ತಕರಾರು ಉಂಟು ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ಬಡತನ, ನಿರುದ್ಯೋಗ, ಶಿಕ್ಷಣ, ಆರೋಗ್ಯ, ಲಿಂಗಬೇಧ, ಪರಿಸರ ಸಂರಕ್ಷಣೆ, ಗ್ರಾಹಕರ ಹಕ್ಕುಗಳ ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ನಾಗರಿಕ ಸಮಾಜದ ಪಾಲ್ಗೊಳ್ಳುವಿಕೆಯ ಮೂಲಕ ಪರಿಸ್ಥಿಯನ್ನು ನಿಭಾಯಿಸುವುದು ಉತ್ತಮ ಎನ್ನುವ ಚಿಂತನೆಯಿದೆ. ಈ ನಿಟ್ಟಿನಲ್ಲಿ ಬಹಳಷ್ಟು ಕಾರ್ಯಕ್ರಮಗಳು ಜಾರಿಗೆ ಬಂದಿವೆ. ಅಷ್ಟು ಮಾತ್ರವಲ್ಲ, ಹಲವಾರು ವಿಷಯಗಳಲ್ಲಿ ಈ ರೀತಿಯ ಪ್ರಯತ್ನ ಬಹಳ ಯಶಸ್ವಿಯಾಗಿದೆ ಎಂದು ತಿಳಿಯಲಾಗಿದೆ. ಹೀಗೆ ನಾಗರಿಕ ಸಮಾಜದ ಪಾಲ್ಗೊಳ್ಳುವಿಕೆಯಿಂದ ಸ್ವಯಂ ಸೇವಾ ಸಂಸ್ಥೆಗಳು, ಸಹಕಾರಿ ಸಂಘಟನೆಗಳು, ಸಾಮೂದಾಯಿಕ ಸಂಸ್ಥೆಗಳು, ಪಾರುಪತ್ಯತನದ ಸಂಸ್ಥೆಗಳು ಮತ್ತು ಸರಕಾರೇತರ ಸಂಸ್ಥೆಗಳ ರೂಪದಲ್ಲಿರುವ ಸಂಸ್ಥೆಗಳನ್ನು ಒಟ್ಟಾಗಿ ತೃತೀಯ ವಲಯವೆಂದು ಗುರುತಿಸಲಾಗಿದೆ. ಇಂದಿನ ಪರಿಸ್ಥಿಯಲ್ಲಿ ತೃತೀಯ ವಲಯವೆಂದು ಗುರುತಿಸಿದ ವಲಯವನ್ನು ವಿಶ್ವದ ಬೇರೆ ಬೇರೆ ಕಡೆ ಬೇರೆ ಬೇರೆ ಹೆಸರಿನಿಂದ ಗುರುತಿಸಲಾಗಿದೆ.

ತೃತೀಯ ವಲಯದಲ್ಲಿರುವ ವಿವಿಧ ಮಾದರಿಯ ಸಂಘಟನೆಗಳು ಸರ್ವೋದಯ ಗುರುತಿಸುವ ಹಲವು ಪರಿಕಲ್ಪನೆಗಳನ್ನು ಕಾರ್ಯರೂಪಕ್ಕೆ ತಂದಿವೆ. ಮತ್ತು ಹಾಗೆ ಕಾರ್ಯರೂಪಕ್ಕೆ ತರುವ ಮೂಲಕ ಜನರನ್ನು ಬಾಧಿಸುವ ಸಮಸ್ಯೆಗಳಿಂದ ಮುಕ್ತಿ ನೀಡುವ ಯತ್ನ ಮಾಡುತ್ತಿವೆ. ಆದರೆ ಇಂತಹ ಪ್ರಯತ್ನಗಳು ಎಷ್ಟರ ಮಟ್ಟಿಗೆ ಜಗತ್ತಿನಲ್ಲಿ ಎಲ್ಲರಿಗೆ ಸುಖ ಶಾಂತಿ ನೆಮ್ಮದಿ ತರಬಲ್ಲವು ಎನ್ನುವುದು ನಮ್ಮ ಮುಂದಿನ ಬಹುದೊಡ್ದ ಪ್ರಶ್ನೆಯಾಗಿದೆ. ಅಂದರೆ ಬಿಡಿ ಬಿಡಿಯಾಗಿ ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಸೀಮಿತವಾಗಿರುವ ಇಂತಹ ಪ್ರಯತ್ನಗಳನ್ನು ಪ್ರಾಂತೀಯವಾಗಿಯೂ ರಾಷ್ಟಿçÃಯವಾಗಿ ಪ್ರಯೋಗ ಮಾಡಬಹುದೇ? ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇಂತಹ ಕಠಿಣವಾದ ಸವಾಲಿಗೆ ಇತ್ತೀಚಿನ ಸ್ವಚ್ಛ ಭಾರತ ಅಭಿಯಾನವನ್ನು ನೆಪವಾಗಿ, ಆ ಮೂಲಕ ಉತ್ತರಿಸಲು ಪ್ರಯತ್ನಿಸಲಾಗಿದೆ. 

ಸರ್ವೋದಯ ಮತ್ತು ಸ್ವಚ್ಛ ಭಾರತ: 

ಇತ್ತೀಚೆಗೆ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಸರಕಾರ ಆರಂಭ ಮಾಡಿರುವ ಸ್ವಚ್ಛ ಭಾರತ ಅಭಿಯಾನ ದೇಶದಲ್ಲಿ ಸ್ವಚ್ಛತೆಯ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಒಂದು ಉತ್ತಮ ಪ್ರಯತ್ನ. ಈ ಕಾರ್ಯಕ್ರಮಕ್ಕೆ ದೇಶಾದ್ಯಂತ ಚಾಲನೆ ನೀಡಲಾಯಿತು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿರಿಸುವ ಮೂಲಕ ಪರಿಸರ ಮಾಲಿನ್ಯದಿಂದಾಗಿ ಮತ್ತು ರೋಗ ಹರಡಿ ಜನ ಅನಾರೋಗ್ಯ ಪೀಡಿತರಾಗುವುದನ್ನು ಸೃಷ್ಟಿಸುವ ಒಂದು ಸುಲಭದ ದಾರಿಯೂ ಇದಾಗಿದೆ. ಹೀಗೆ ಸ್ವಚ್ಛತೆಯ ವಿಷಯಕ್ಕೆ ದೇಶದ ಸ್ವಾತಂತ್ರ÷್ಯಕ್ಕಾಗಿ ಹೋರಾಡಿದ ಗಾಂಧೀಜಿಯವರು ಮಹತ್ವ ನೀಡಿದ್ದರು. ಈ ಅಂಶವನ್ನು ಜನರಿಗೆ ಮನದಟ್ಟು ಮಾಡುವುದಕ್ಕಾಗಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದ ಜಾಹೀರಾತುಗಳಲ್ಲಿ ಗಾಂಧೀಜಿಯವರ ಚಿತ್ರ ಮತ್ತು ಸಂದೇಶಗಳನ್ನು ತೋರಿಸಲಾಗುತ್ತಿದೆ. ಮಾತ್ರವಲ್ಲ ೨೦೧೫-೧೬ರ ಕೇಂದ್ರ ಸರಕಾರದ ಮುಂಗಡ ಪತ್ರದಲ್ಲಿ ಸ್ಚಚ್ಛ ಭಾರತ ಅಭಿಯಾನಕ್ಕೆ ಜನರು ದೇಣಿಗೆ ನೀಡುವುದನ್ನು ಪ್ರೋತ್ಸಾಹಿಸಲು ದೇಣಿಗೆಗೆ ಆದಾಯ ತೆರಿಗೆ ವಿನಾಯಿತಿಯನ್ನೂ ನೀಡಲಾಗಿದೆ. ಒಟ್ಟಿನಲ್ಲಿ ಈ ಸ್ವಚ್ಛತಾ ಅಭಿಯಾನಕ್ಕೆ ಪ್ರಚಾರ, ಮತ್ತು ಹಣದ ನೆರವನ್ನು ಸರಕಾರ ಮತ್ತು ಖಾಸಗೀ ಉದ್ಯಮ ವಲಯ ದೊಡ್ದ ಪ್ರಮಾಣದಲ್ಲಿ ನೀಡುತ್ತಿದೆ.

ಸ್ವಚ್ಛತಾ ಅಭಿಯಾನದ ಉದ್ದೇಶಗಳನ್ನು ಯಾರೂ ಅಲ್ಲಗಳೆಯುವ ಹಾಗಿಲ್ಲ. ಹಾಗಾದರೆ ಇದರ ಬಗ್ಗೆ ಯಾವುದು ಸರಿ ಹಾಗೂ ತಪುö್ಪ? ತಪ್ಪಾದರೆ ಯಾಕೆ? ಅಭಿಯಾನ ಖಂಡಿತಾ ತಪ್ಪಲ್ಲ. ಆದರೆ ಬರೀ ಸ್ವಚ್ಛತೆಯ ಅಭಿಯಾನದಿಂದ ಮಾತ್ರ ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡು ಜನರ ಆರೋಗ್ಯ ಕಾಪಾಡಲು ಸಾಧ್ಯವಿಲ್ಲ. ರಾಶಿ ರಾಶಿ ಕಸ, ಪರಿಸರ ಮಾಲಿನ್ಯವನ್ನು ಉಂಟುಮಾಡುವ ನಮ್ಮ ಉತ್ಪಾದನಾ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ನಾವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಸಿದ್ಧರಾಗಬೇಡವೇ? ಇಂತಹ ಕ್ರಮಕ್ಕೆ ಮುಂದಾದರೆ ಅದರ ಬಗ್ಗೆ ಬೇರೆ ಬೇರೆ ಜನವರ್ಗದ ಪ್ರತಿಕ್ರಿಯೆ ಏನಿರುತ್ತದೆ. ನಮ್ಮ ದೇಶದ ನಗರ ಮತ್ತು ಗಾಮೀಣ ಪ್ರದೇಶಗಳು ಇಂದು ಪ್ಲಾಸ್ಟಿಕ್ ಕಸದಿಂದ ತುಂಬಿ ಹೋಗುತ್ತಿವೆ. ನಗರ ಪ್ರದೇಶದಿಂದ ಆಗಾಧ ಪ್ರಮಾಣದಲ್ಲಿ ಕಸವನ್ನು ಗ್ರಾಮೀಣ ಪ್ರದೇಶಗಳಲ್ಲಿ ತಂದು ಸುರಿಯುವ ಮೂಲಕ ಅಲ್ಲಿನ ಜನರ ಪರಿಸರ, ಮತ್ತು ಉತ್ಪಾದನಾ ಕ್ರಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಲಾಗುತ್ತಿದೆ. ನಗರ ಪ್ರದೇಶಗಳ ಕಸ/ತ್ಯಾಜ್ಯ ವಿಲೇವಾರಿ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಅಂತೆಯೇ ನಗರ ಪ್ರದೇಶಗಳಲ್ಲಿ ಸಾರಿಗೆ ದಟ್ಟಣೆಯ ಸಮಸ್ಯೆಯಂತೂ ಹೇಳತೀರದು, ರಸ್ತೆಗಳು ವಿಸ್ತಾರವಾಗುತ್ತಾ ಹೋದರೂ ವಾಹನಗಳ ಸಂಖ್ಯೆಯಲ್ಲಿ ಅಪಾರ ಪ್ರಮಾಣದ ಹೆಚ್ಚಳವಾಗುತ್ತಿರುವ ಕಾರಣ ರಸ್ತೆಗಳ ಮೇಲಿನ ಒತ್ತಡ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಪ್ರತಿದಿನ ನಾವು ಉರಿಸುವ ಇಂಧನದ ಪ್ರಮಾಣ ಏರುತ್ತಾ ಹೋಗುತ್ತಿದೆ. ಈ ರೀತಿಯಲ್ಲಿ ಇಂಧನವನ್ನು ಹೆಚ್ಚ್ವು ಹೆಚ್ಚು ಉರಿಸುವುದರಿಂದ ಪರಿಸರ ಮಾಲಿನ್ಯ ಒಂದು ಕಡೆಯಾದರೆ, ಈ ಇಂಧನವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲು ನಾವು ವಿನಿಯೋಗಿಸುವ ವಿದೇಶಿ ವಿನಿಮಯದಿಂದಾಗಿ ನಮ್ಮ ಸಂಪನ್ಮೂಲ ಹೊರದೇಶಗಳಿಗೆ ಹರಿದು ಹೋಗುತ್ತಿದೆ. ಇದನ್ನು ಬಹುಮಟ್ಟಿಗೆ ನಿವಾರಿಸಲು ಖಂಡಿತವಾಗಿಯೂ ಸಾಧ್ಯ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ದಕ್ಷವಾಗಿ ನಿಭಾಯಿಸಿದರೆ, ನಗರಗಳನ್ನು ಯೋಜನಾ ಬದ್ಧವಾಗಿ ಅಭಿವೃದ್ಧಿ ಪಡಿಸಿದರೆ ಇದು ಸಾಧ್ಯ. ಆದರೆ ಅಂತಹ ಕೆಲಸ ನಮ್ಮಲ್ಲಿ ಆಗುತ್ತಿಲ್ಲ. ಇದಕ್ಕೆ ಸಾನಾನ್ಯವಾಗಿ ನೀಡಲಾಗುವ ಕಾರಣ ಸರಕಾರದಲ್ಲಿ ಇಚ್ಛಾಶಕ್ತಿಯ ಕೊರತೆ, ಮತ್ತು ಅಧಿಕಾರಶಾಹಿಯ ಅಸಡ್ಡೆ, ಆದರೆ ಇಲ್ಲಿಗೆ ಉತ್ತರ ಪೂರ್ಣವಾಗಲಾರದು. ಸರಕಾರದ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕಾರಿಯಶಾಹಿಯ ಅಸಡ್ಡೆಯ ಹಿಂದಿನ ಕಾರಣಗಳನ್ನು ತಿಳಿಯುವ ಅಗತ್ಯವಿದೆ. ಸರಕಾರವನ್ನು ನಿಯಂತ್ರಿಸುವ ಶಕ್ತಿಗಳು ಯಾವುವು.... ಅಧಿಕಾರಶಾಹಿಯ ಮೇಲೆ ಒತ್ತಡ ತರುವ ಮತ್ತು ಅಧಿಕಾರಶಾಹಿಯ ಮೇಲೆ ಆಮಿಷವೊಡ್ಡುವ ಶಕ್ತಿ ಯಾವುದು ಎನ್ನುವುದು ಮುಖ್ಯವಾದ ಪ್ರಶ್ನೆಯಾಗಿದೆ. ಲಭ್ಯವಿರುವ ಸಂಪತ್ತನ್ನು ಎಲ್ಲರ ಹಿತದೃಷ್ಟಿಯಿಂದ ವಿನಿಯೋಗಿಸುವ ನೀತಿಗಳತ್ತ ಗಮನ ಹರಿಸುವಲ್ಲಿ ನಾವು ಸೋತಿದ್ದೇವೆಯೇ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. 

ಸಮಸ್ಯೆಯ ಹುಟ್ಟಿಗೆ ಕಾರಣವಾಗಿರುವ ಅಂಶಗಳ ಮೂಲಕ್ಕೆ ನಾವುಇಳಿಯದೇ, ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಒದಗಿಸಲು ಹೊರಟಿದ್ದೇವೋ ಎನ್ನುವ ಅನುಮಾನ ಕಾಡುತ್ತದೆ. ಕಸವನ್ನು ಬಾಚುವುದು ಎಷ್ಟು ಮುಖ್ಯವೋ ಕಸದ ಉತ್ಪಾದನೆಯನ್ನು ತಡೆಯುವುದೂ ಅಷ್ಟೇ ಮುಖ್ಯವಾಗಿದೆ. ಈ ಎರಡೂ ಕೆಲಸಗಳು ಜೊತೆ ಜೊತೆಯಾಗಿ ನಡೆದಾಗಲಷ್ಟೇ ಏನಾದರೂ ಬದಲಾವಣೆಗಳು ಆಗುವುದು ಸಾಧ್ಯ. ಇಲ್ಲವಾದರೆ ಬರೀ ಕಸ ಬಾಚುವುದೇ ನಮ್ಮ ಕಾಯಕವಾಗಬಹುದು. ಮೇಲ್ನೋಟಕ್ಕೆ ಅದ್ಭುತವೆಂದು ಕಾಣುವ ಇಂತಹ ಕಾರ್ಯಕ್ರಮಗಳು ನಮ್ಮನ್ನು ನಿಜವಾದ ಸಮಸ್ಯೆಯನ್ನು ಅರಿತುಕೊಳ್ಳುವುದರಿಂದ ವಂಚಿತರನ್ನಾಗಿಸಬಾರದು. ಗಾಂಧೀಜಿ ಹೇಳಿದ ಉತ್ಪಾದನಾ ವ್ಯವಸ್ಥೆ, ಭೋಜನ ಶ್ರಮದ ಮಹತ್ವ, ಸತ್ಯ, ಅಹಿಂಸೆ, ಮುಂತಾದುವುಗಳನ್ನು ಬಿಟ್ಟು ಬರೀ ಸ್ವಚ್ಛತೆಯನ್ನು ಮಾತ್ರ ಹಿಡಿದುಕೊಂಡರೆ ಅದರಿಂದ ಸಮಾಜದಲ್ಲಿ ದೊಡ್ಡ ವ್ಯತ್ಯಾಸಗಳೇನೂ ಆಗುವುದಿಲ್ಲ. ಗಾಂಧೀಜಿ ಬಹಳ ಮಹತ್ವ ನೀಡಿದ ಸಾಮಾಜಿಕ ಸೌಹಾರ್ದವನ್ನು ಹೇಗೆ ತರಬಹುದು? ಅಥವಾ ವರ್ತಮಾನದ ಪರಿಸ್ಥಿಯಲ್ಲಿ ಸಾಮಾಜಿಕ ಸಂಘರ್ಷ, ಮಹಿಳೆಯರ ಮೇಲಿನ ದೌರ್ಜನ್ಯ ಇತ್ಯಾದಿಗಳ ಬಗೆಗೆ ನಮ್ಮ ನಿಲುವೇನು? ಇಂತಹ ಸಮಸ್ಯೆಗಳು ಆರ್ಥಿಕ ಉದಾರೀಕರಣದ ನಂತರದ ದಿನಗಳಲ್ಲಿ ಯಾವ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಕೇವಲ ಈ ಸಮಸ್ಯೆಗಳಿಗೆ ತತ್‌ಕ್ಷಣದ ಸ್ವಚ್ಛತಾ ಅಭಿಯಾನವೊಂದೇ ಪರಿಹಾರವಾಗಬಹುದೇ? ಖಂಡಿತವಾಗಿಯೂ ಈ ಸಮಸ್ಯೆಗಳಿಗೆ ನಮ್ಮ ಆರ್ಥಿಕ ವ್ಯವಸ್ಥೆ, ಅಭಿವೃದ್ಧಿಯ ವಿನ್ಯಾಸ ಬಹುಮಟ್ಟಿಗೆ ಕಾರಣವಾಗಿದೆ. ನಮ್ಮ ಆರ್ಥಿಕ ವ್ಯವಸ್ಥೆ ಅಭಿವೃದ್ದಿಯ ವಿನ್ಯಾಸ ಮತ್ತು ಇದರ ಕುರಿತ ಅರಿವಿನ ವಿನ್ಯಾಸ ಜಾಗತಿಕ ಮಟ್ಟದಲ್ಲಿ ಪ್ರಬಲವಾಗಿ ಬೆಳೆಯುತ್ತಿರುವ ಒಂದು ದೊಡ್ದ ಅಭಿಯಾನದ ಭಾಗವಾಗಿದೆ.

ಆರ್ಥಿಕ ಅಭಿವೃದ್ಧಿಯ ನಮ್ಮ ವಿನ್ಯಾಸ ಉಂಟು ಮಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಸಂದರ್ಭದಲ್ಲಿ ನಾಗರಿಕ ಸಮಾಜದ ಒಳಗೊಳ್ಳುವಿಕೆ ಇರುವುದು ಅಗತ್ಯವೆನ್ನುವುದನ್ನು ಮನಗಂಡು ಅದಕ್ಕೆ ಅನುಗುಣವಾಗಿ ಕಾರ್ಯಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ. ಆದರೆ ಇಂತಹ ಪ್ರಯತ್ನಗಳಿಂದ ಸಂಪೂರ್ಣವಾಗಿ ಬಡತನ, ಲಿಂಗ ತಾರತಮ್ಯ, ಅನಾರೋಗ್ಯ, ಸಾಮಾಜಿಕ ಸಂಘರ್ಷ ಬಡವ ಶ್ರೀಮಂತರ ನಡುವಿನ ವ್ಯತ್ಯಾಸ ಇದೆಲ್ಲವನ್ನೂ ನೀಗಿಸಲು ಸಾಧ್ಯವೇ? ಪ್ರಾಯಶಃ ಸಾಧ್ಯವಾಗದು. ಒಂದು ವೇಳೆ ಅದು ಸಾಧ್ಯವಾಗುವುದಿದ್ದರೆ ಇಷ್ಟು ವರ್ಷಗಳಲ್ಲಿ ಆಗಬೇಕಿತ್ತು. ಆದರೆ ಅಂತಹ ಸಾಧನೆ ನಮ್ಮಿಂದ ಇದುವರೆಗೂ ಸಾಧ್ಯವಾಗಲಿಲ್ಲ. ಸಮಸ್ಯೆಯ ಮೂಲವಿರುವುದು ಆರ್ಥಿಕ ಅಭಿವೃದ್ಧಿಯ ವಿನ್ಯಾಸದಲ್ಲಿ ಹಾಗಾಗಿ ಸ್ವರೂಪಾತ್ಮಕವಾಗಿರುವ ದೋಷಗಳನ್ನು ನಿವಾರಿಸಿಕೊಳ್ಳದೆ ನಾವು ಸಮಗ್ರವಾಗಿ ಅಭಿವೃದ್ಧಿ ಹೊಂದುವುದು ಸಾಧ್ಯವಾಗಲಾರದು. 

ಸರ್ವೋದಯದ ಆಶಯಗಳನ್ನು ತೃತೀಯ ವಲಯದ ಸಂಘಟನೆಗಳು ಸೀಮಿತ ಪ್ರಮಾಣದಲ್ಲಿ ಅನುಸರಿಸುತ್ತಿರುವ ಪರಿಸ್ಥಿಯನ್ನು ಕಾಣಬಹುದು. ಇಂತಹ ಪ್ರಯತ್ನಗಳಿಂದಾಗಿ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟ ಬಡ ಮತ್ತು ಹಿಂದುಳಿದ ವರ್ಗಗಳು ಸಾಮೂಹಿಕ ಪಾಲ್ಗೊಳ್ಳುವಿಕೆಯ ಮೂಲಕ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಹೆಣಗಾಡುತ್ತಿವೆ. ಆದರೆ ಇಂತಹ ಎಲ್ಲಾ ಪ್ರಯತ್ನಗಳೂ ಒಂದು ಸೀಮಿತ ವಲಯದಲ್ಲಿ ಸೀಮಿತ ಹಂತದ ವರೆಗೆ ಮಾತ್ರ ಪರಿಣಾಮಕಾರಿಯಾಗಬಲ್ಲುದು. ಅರ್ಥಾತ್ ಮುಖ್ಯ ಆರ್ಥಿಕ ವಿನ್ಯಾಸದಿಂದ ಉಂಟಾಗುವ ವಿಕಲ್ಪಗಳಿಗೆ ಪರಿಹಾರ ರೂಪವಾಗಿ ತೃತೀಯ ವಲಯದ ಸಂಘಟನೆಗಳು ಬಹುಮಟ್ಟಿಗೆ ಯಶ್ವಸಿಗೊಳ್ಳಬಹುದಾದರೂ ಮುಖ್ಯ ಆರ್ಥಿಕ ವಿನ್ಯಾಸವನ್ನು ವಿಮರ್ಶೆಗೆ ಒಡ್ಡುವ ಕೆಲಸವನ್ನು ಇಂತಹ ವಲಯ ಮಾಡುವುದಕ್ಕೆ ಸಮರ್ಥವಾಗಲಾರದು. ಮಾರುಕಟ್ಟೆ ಆಧಾರಿತ ಆರ್ಥಿಕ ಅಭಿವೃದ್ಧಿಯ ವಿನ್ಯಾಸ ಉಂಟುಮಾಡುವ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ವಿಕೋಪಕ್ಕೆ ಹೋಗಿ ಇಡೀ ವ್ಯವಸ್ಥೆಗೆ ಅಪಾಯವುಂಟಾಗದAತೆ ಮಾಡುವಲ್ಲಿ ತೃತೀಯ ವಲಯವನ್ನು ಉಪಯೋಗಿಸಿಕೊಳ್ಳಲಾಗುತ್ತದೆ ಎನ್ನುವ ವಾದವೂ ಚಾಲ್ತಿಯಲ್ಲಿದೆ. ಈ ಕಾರಣದಿಂದಾಗಿಯೇ ಸರ್ವೋದಯದ ಸಂಪೂರ್ಣ ಆಶಯ ಅನುಷ್ಠಾನವಾಗಬೇಕಾದರೆ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳು ಆಗಲೇಬೇಕಾಗುತ್ತದೆ. ಆದರೆ ಅಂತಹ ಬದಲಾವಣೆ ಬಟ್ಟೆ ಬದಲಾಯಿಸಿದಷ್ಟು ಸುಲಭದ ಮಾತಲ್ಲ. ಕನಿಷ್ಟ ತೃತೀಯ ವಲಯದಲ್ಲಿ ಕಾರ್ಯಪ್ರವೃತ್ತವಾಗಿರುವ ಇಡೀ ಸಮುದಾಯ ಒಂದು ಸಿದ್ಧಾಂತದಡಿಯಲ್ಲಿ ಒಟ್ಟಾಗುವ ಸಾಧ್ಯತೆಯಾದರೂ ಇದ್ದರೆ ಮಾರುಕಟ್ಟೆ ಅರ್ಥವ್ಯವಸ್ಥೆಯ ಬೀಸು ಕಡಿಮೆಯಾಗಬಹುದು.

ಗಾಂಧೀಜಿಯವರ ಬರಹಗಳ ಕುರಿತಂತೆ ಬಹಳಷ್ಟು ಅಧ್ಯಯನ ನಡೆಸಿರುವ ಆಂಟೋನಿ ಜೆ. ಪರೆಲ್ ಅವರು ಹೇಳುವ ಪ್ರಕಾರ ಗಾಂಧೀಯವರ ವಿಚಾರಗಳು ಬಂಡವಾಳಶಾಹೀ ವ್ಯವಸ್ಥೆಯ ಕುರಿತಂತೆ ರಚನಾತ್ಮಕ ಟೀಕೆ ಮಾಡಿದೆ. ಗಾಂಧೀಯವರು ಎಲ್ಲಿಯೂ ಬಂಡವಾಳಶಾಹೀ ವ್ಯವಸ್ಥೆಯಲ್ಲಿನ ನ್ಯೂನತೆಗಳು ಗಂಭೀರ ಸ್ವರೂಪದ್ದಾಗಿವೆ. ಮತ್ತು ಅಂತಹ ಕಾರಣಗಳಿಗಾಗಿ ಅದನ್ನು ಕಿತ್ತೊಗೆಯಬೇಕು ಎಂದು ಹೇಳಿಲ್ಲ. ಪಾರುಪತ್ಯಗಾರರಾಗಿ ಬಂಡವಾಳಶಾಹೀ ಶಕ್ತಿ ಅಥವಾ ಸಂಪತ್ತು ಹೊಂದಿದವರು ಇಡೀ ಸಮಾಜದ ಹಿತಕ್ಕಾಗಿ ದುಡಿಯಬೇಕೆನ್ನುವುದು ಅವರ ವಾದವಾಗಿತ್ತು. ಎಡಪಂಥೀಯ ವಿಚಾರಗಳ ಬಗ್ಗೆ ಗಾಂಧೀಜಿಯವರಿಗೆ ಒಲವೇನೂ ಇರಲಿಲ್ಲ. ಮಾತ್ರವಲ್ಲ ಗಾಂಧೀಜಿಯವರ ಚಿಂತನೆಗಳು ಒಂದು ರೀತಿಯಲ್ಲಿ ಅಸ್ಪಷ್ಟವಾಗಿವೆ. ಗೊಂದಲಗಳಿAದ ಕೂಡಿದೆ ಎನ್ನುವ ಅಸಾಮಾಧಾನ ಕಾಂಗ್ರೆಸಿನ ಒಳಗೂ ಇದ್ದದ್ದು ಸುಳ್ಳಲ್ಲ. ಈ ಕಾರಣದಿಂದಾಗಿ ರೆವಲ್ಯೂಷನರಿ ಕಾಂಗ್ರೆಸ್, ಮತ್ತು ಸೋಷಲಿಸ್ಟ್ ಕಾಂಗ್ರೆಸ್ ಹುಟ್ಟಿಕೊಂಡಿತ್ತು. ಇಡೀ ಉತ್ಪಾದನಾ ವ್ಯವಸ್ಥೆಯಲ್ಲಿ ಮನುಷ್ಯರ ಶ್ರಮ ಮತ್ತು ನೈಪುಣ್ಯಕ್ಕೆ ಬೆಲೆ ಇರಬೇಕು, ಸುಖ ಸಂತೋಷಗಳಿಗೆ ಮಹತ್ವವಿರಬೇಕು ಎನ್ನುವುದು ಸರ್ವೋದಯದ ಆಶಯವಾಗಿದೆ. ಈ ದೃಷ್ಟಿಯಿಂದ ನೋಡಿದರೆ ಸರ್ವೋದಯದ ಆಶಯಗಳು ಮುಕ್ತ ಅರ್ಥವ್ಯವಸ್ಥೆಯನ್ನು ಸಮಾಜಮುಖಿಯನ್ನಾಗಿಸುವಲ್ಲಿ ಶ್ರಮಿಸಿದರೆ ಸಾಕೆನ್ನುವ ಒಂದು ತಾತ್ವಿಕ ತಿರ್ಮಾನಕ್ಕೆ ಬರಬಹುದು.

ವರ್ತಮಾನದ ಅರ್ಥವ್ಯವಸ್ಥೆಗೆ ಪರ್ಯಾಯವನ್ನು ರೂಪಿಸುವುದು ಅನಿವಾರ್ಯವೂ ಅಲ್ಲ ಸಾಧ್ಯವೂ ಅಲ್ಲ. ಹೀಗಾಗಿ ನಾಗರಿಕ ಸಮಾಜದ ಪಾಲ್ಗೊಳ್ಳುವಿಕೆಯ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಇನ್ನಷ್ಟು ಕಸುವು ತುಂಬುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಂಡಾಗ ಆರ್ಥಿಕ ನೀತಿಗಳನ್ನು ಹೆಚ್ಚು ಸಮಾಜಮುಖಿಯಾಗಿಸಲು ಸಾಧ್ಯವಿದೆ. ನಾಗರಿಕ ಸಮಾಜ ಕ್ರಿಯಾಶೀಲವಾದಾಗ ತೃತೀಯ ವಲಯದ ಸಂಘಟನೆಗಳು ಇನ್ನಷ್ಟು ಚುರುಕಿನಿಂದ ಕಾರ್ಯನಿರ್ವಹಿಸಬಹುದು. ಈ ಲೇಖನದ ಮೊದಲ ಭಾಗದಲ್ಲಿ ಜೋಸೆಫ್ ಸ್ಟಿಗ್ಲಿಟ್ಜ್ ಅವರು ಹೇಳಿದಂತೆ ಅಭಿವೃದ್ಧಿಯಾದರೆ ನಾವು ಸಮಾಧಾನ ಪಟ್ಟುಕೊಳ್ಳಬಹುದು.

ಪರಾಮರ್ಶನ ಗ್ರಂಥಗಳು: 

೧. ಎಂ.ಕೆ.ಗಾ0ಧೀ (೧೯೫೪) “ಸರ್ವೋದಯ” (ಏಳನೇ ಮುದ್ರಣ) ನವಜೀವನ ಪಬ್ಲಿಷಿಂಗ್ ಹೌಸ್, ಅಹಮದಾಬಾದ್.

೨. ಎಂ.ಕೆ. ಗಾಂಧೀ (೧೯೫೧) “ಸರ್ವೋದಯ: ಇಟ್ಸ್ ಪ್ರಿಸ್ಸಿಪಲ್ಸ್ ಎಂಡ್ ಪ್ರೋಗ್ರಾಂ ನವಜೀವನ ಪಬ್ಲಿಷಿಂಗ್ ಹೌಸ್ ಅಹಮದಾಬಾದ್ (ಎಂಟನೇ ಮರು ಮುದ್ರಣ ೨೦೧೦)

೩. ಅಂಟನಿ ಜೆ. ಪರೆಲ್ (೧೯೯೭) “ಹಿಂದ್ ಸ್ವರಾಜ್ ಎಂಡ್ ಅದರ್ ರೈಟಿಂಗ್ಸ್” ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, ಫೌಂಡೇಶನ್ ಬುಕ್ಸ್ ನವದೆಹಲಿ.

೪. ಅಂಟನಿ ಜೆ. ಪರೆಲ್ (೨೦೦೬) “ಗಾಂಧೀಸ್ ಪಿಲಾಸಫಿ ಅಂಡ್ ದಿ ಕ್ವೆಸ್ವ್ ಫಾರ್ ಹಾರ್ಮನಿ” ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, ನವದೆಹಲಿ.

೫. ಪೀಟರ್ ಗೊನ್ಸಾಲ್ವಿಸ್ (೨೦೧೨) “ಖಾದಿ: ಗಾಂಧೀಸ್ ಮೆಘಾ ಸಿಂಬಲ್ ಆಫ್ ಸಬ್‌ವರ್ಷನ್” ಸೇಬ್ ಪಬ್ಲಿಕೇಷನ್ ನವದೆಹಲಿ

೬. ರಾಹುಲ್ ರಾಮಗುಂಡ0 (೨೦೦೯) “ಗಾಂಧೀಸ್ ಖಾದಿ ಎ ಹಿಸ್ಟರಿ ಆಫ್ ಕಂಟೆನ್‌ಷನ್ ಆಂಡ್ ಕನ್ಸಿಲಿಯೇಶನ್” ಓರಿಯೆಂಟ್ ಬ್ಲಾಕ್ ಸ್ಪಾನ್ ಪ್ರೆöÊ.ಲಿ ಹೈದರಾಬಾದ್.

೭. ನಾರಾಯಣ ಸ್ವಾಮಿ ಕೆ.ಎಸ್ (೧೯೯೩) “ಇಕಾನಮಿ ಆಫ್ ಹ್ಯೂಮನ್ ವಾಲ್ಯೂಸ್” ಗಾಂಧೀ ಪೀಸ್ ಫೌಂಡೇಶನ್ ಬೆಂಗಳೂರು.

೮. ಎ0.ಕೆ. ಗಾಂಧಿ (೧೯೩೮) “ಹಿಂದ್ ಸ್ವರಾಜ್” (ಇಪ್ಪತ್ತೆರಡನೇ ಮರುಮುದ್ರಣ ೨೦೧೧) ನವಜೀವನ ಪಬ್ಲಿಷಿಂಗ್ ಹೌಸ್ ಅಹಮದಾಬಾದ್.

೯. ಎಂ.ಕೆ ಗಾಂಧಿ “ವಿಲೇಜ್ ಇಂಡಸ್ಟಿçÃಸ್” (ಮರುಮುದ್ರಣ ೨೦೧೧)ನವಜೀವನ ಪಬ್ಲಿಷಿಂಗ್ ಹೌಸ್, ಅಹಮದಾಬಾದ್.

೧೦. ಬಿ.ಎನ್.ಘೋಷ್ (೨೦೧೨) “ಬಿಯಾಂಡ್ ಗಾಂಧಿಯನ್ ಎಕಾನಮಿಕ್ಸ್; ಟುವರ್ಡ್್ಸ ಎ   ಕ್ರಿಯೇಟಿವ್‌ಡಿಕನ್ ಸ್ಟçಕ್ಷನ್”, ಸೇಜ್ ಪಬ್ಲಿಕೇಷನ್ಸ್ ನವದೆಹಲಿ.

೧೧. ಮಾರ್ಕ ಲಿಂಡ್‌ಲೇ (೨೦೦೭) “ಜೆ.ಸಿ.ಕುಮಾರಪ್ಪ: ಮಹಾತ್ಮ ಗಾಂಧೀಸ್ ಇಕಾನಮಿಸ್ಟ್” ಪೊಪುö್ಯಲರ್       ಪ್ರಕಾಶನ ಮುಂಬಯಿ.

೧೨. ಉತ್ಸಾ ಪಟ್ನಾಯಕ್, (೨೦೦೪) “ದಿ ರಿಪಬ್ಲಿಕ್ ಆಫ್ ಹಂಗರ್, ನವದೆಹಲಿ: ಸಹಮತ್ ಸಪ್ಥರ್‌ಹಶ್ಮಿ        ಲೆಕ್ಚರ್.

೧೩. ಕೌಶಿಕ್ ಬಸು, ೧೯೯೩. ಸ್ಟçಕ್ಚರಲ್ ರಿಫಾರ್ಮ್ ಇನ್ ಇಂಡಿಯಾ ೧೯೯೧-೯೩ ಎಕ್ಸ್ಪೀರಿಯನ್ಸ್ ಆ್ಯಂಡ್          ಎಜೆಂಡಾ, ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ.

೧೪. ಪ್ರಣಬ್ ಬರ್ಧಾನ್, ೧೯೮೪. ಪೊಲಿಟಿಕಲ್ ಎಕಾನಾಮಿ ಆಫ್ ಡೆವಲಪ್‌ಮೆಂಟ್ ಇನ್ ಇಂಡಿಯಾ,       ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್.

೧೫. ಪ್ರಭಾತ್ ಪಟ್ನಾಯಕ್, ೨೦೦೩. ದಿ ರಿಟ್ರೀಟ್ ಟು ಅನ್‌ಫ್ರೀಡಂ, ನವದೆಹಲಿ: ತುಲಿಕಾ ಪವ್ಲಿಕೇಶನ್ಸ್.

೧೬. ರಾವ್ ಕೆ.ಎಸ್., ರಾಧಾಕೃಷ್ಣ ಆರ್., ೧೯೯೭. ಇಂಡಿಯನ್ ಪಬ್ಲಿಕ್ ಡಿಸ್ಟಿçಬ್ಯೂಶನ್ ಸಿಸ್ಟಂ ಇನ್ ಎ        ನ್ಯಾಶನಲ್ ಆ್ಯಂಡ್ ಇಂಟರ್ ನ್ಯಾಶನಲ್ ರ‍್ಸ್ ಪೆಕ್ಟೀವ್, ವಾಶಿಂಗ್ಟನ್: ವರ್ಲ್್ಡ ಬ್ಯಾಂಕ್.

೧೭. ಸ್ಟಿಗ್ಲಿಝ್ ಜೆ., ೨೦೦೦ ಗ್ಲೋಬಲೈಸೇಶನ್  ಆ್ಯಂಡ್ ಇಟ್ಸ್ ಡಿಸ್ ಕಂಟೆAಟ್ಸ್, ನ್ಯೂಯರ್ಕ್: ಡಬ್ಲೂ÷್ಯ.        ಡಬ್ಲೂ÷್ಯ ನಾರ್ಟನ್ ಆ್ಯಂಡ್ ಕಂಪೆನಿ


 





Comments

Popular posts from this blog

ಸಾಮಾಜಿಕ ಉದ್ಯಮಶೀಲತೆ

MILES TO GO BEFORE I SLEEP

ಭಾರತೀಯ ಆರ್ಥಿಕ ವ್ಯವಸ್ಥೆ: ವಿನ್ಯಾಸ ಮತ್ತು ವಿಮರ್ಶೆ