ನನ್ನುಡಿ- ಅಮೇರಿಕಾ


ನನ್ನುಡಿ

ಅಮೇರಿಕದ ಇಡೀ ವ್ಯವಸ್ಥೆಯ ಮೇಲೆ ಖಾಸಗೀ ಉದ್ಯಮ ವಲಯ ಹೊಂದಿರುವ ಪ್ರಭಾವ ಗಾಢವಾದದ್ದು. ಮುಕ್ತ ಮಾರುಕಟ್ಟೆ, ಖಾಸಗೀಕರಣ, ಮತ್ತು ಸರಕಾರದ ಹಸ್ತಕ್ಷೇಪವನ್ನು ನಿರಾಕರಿಸುವ ಅಲ್ಲಿನ ಖಾಸಗೀ ಉದ್ಯಮ ವಲಯ ವಿಶಾಲವಾಗಿ ಬೆಳೆದು ಇಂದು ಬಹುರಾಷ್ಟಿçÃಯ ಉದ್ಯಮಗಳ ಸ್ವರೂಪ ಪಡೆಯುವ ಮೂಲಕ ಜಾಗತಿಕ ಮಟ್ಟಕ್ಕ್ಲೆ ತನ್ನ ಪ್ರಭಾವ ವಲಯವನ್ನು ವಿಸ್ತರಿಸಿಕೊಂಡಿದೆ. ಈ ಕಾರಣದಿಂದಾಗಿಯೇ ಅಮೇರಿಕಾ ತನ್ನನ್ನು ಸಲಹುವ ಅಥವಾ ನಿಯಂತ್ರಿಸುವ ಉದ್ಯಮ ವಲಯದ ಹಿತಾಸಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಕಾಪಾಡುವ ಕೆಲಸವನ್ನು ಬಹಳ ಶೃದ್ಧೆಯಿಂಲೇ ಮಾಡುತ್ತಾ ಬಂದಿದೆ. ಇದಕ್ಕೆ ಸಾಕ್ಷಿಯಾಗಿ ಎರಡನೆಯ ಮಹಾಯುದ್ಧದ ನಂತರ ‘ಉತ್ತರ’ ಮತ್ತು ‘ದಕ್ಷಿಣ’ದಲ್ಲಿ ರಾಷ್ಟç ನಿರ್ವಚನ ಮತ್ತು ರಾಷ್ಟç ನಿರ್ಮಾಣದ ಕೆಲಸದಲ್ಲಿ ಹೊರ ಜಗತ್ತಿಗೆ ಕಾಣುವ ಹಾಗೆ ಮತ್ತು ಕಾಣದಿರುವ ಹಾಗೆ ಅಮೇರಿಕಾ ನಿರಂತರವಾಗಿ ತೊಡಗಿಸಿಕೊಂಡಿರುವುದನ್ನು ಗುರುತಿಸಬಹುದು.

ಜಗತ್ತಿನ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕöÈತಿಕ ರಂಗಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಕ್ರಿಯವಾಗಿರುವ ಅಮೇರಿಕಾ ತನ್ನಂತರAಗದಲ್ಲಿರುವ ನೀತಿ ನಿರ್ಧಾರಗಳನ್ನು ತನ್ನ ಅನುಕೂಲಕ್ಕೆ ತಕ್ಕ ಹಾಗೆ ಕಾಲದಿಂದ ಕಾಲಕ್ಕೆ ಜಗತ್ತಿನಾದ್ಯಂತ ಬಹಳ ಎಚ್ಚರಿಕೆಯಿಂದ ಮತ್ತು ಲೆಕ್ಕಾಚಾರದಿಂದ ಬಿತ್ತಿ ಬೆಳೆಯುತ್ತಿದೆ. ಈ ಕಾರಣದಿಂದಾಗಿಯೇ ಇವತ್ತು ವಿಶ್ವದ ಜನಮಾನಸದ ಸುಖ ದುಖ:ಗಳ ಹಿಂದೆ ಅಮೇರಿಕದ ಶ್ವೇತಭವನದ ನೆರಳಿದೆ. ಈ ಕಾರಣದಿಂದಾಗಿಯೇ ಅಮೇರಿಕಾದ ಜನಸಾಮಾನ್ಯರಲ್ಲಿಯೂ ತಾವು ಹುಟ್ಟಿರುವುದೇ ಇಡೀ ಜಗತ್ತಿನ ದುಡಿಯುವ ವರ್ಗದ ಜನರು ಉತ್ಪಾದಿಸುವ ವಸ್ತುಗಳನ್ನು ಅಥವಾ ಭೋಗಸಾಮಾಗ್ರಿಗಗಳನ್ನು ಅನುಭವಿಸುವುದಕ್ಕೆ ಮತ್ತು ಇಡೀ ಜಗತ್ತಿರುವುದೇ ನಮ್ಮಿಂದ ಆಳಿಸಿಕೊಳ್ಳಲು ಹಾಗೂ ತಾವು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವ ಮನೋಭಾವನೆಯಿತ್ತು. ಇಂತಹ ಮನಸ್ಥಿತಿಯಿಂದ ಎಚ್ಚರವಾದದ್ದೇ ‘ಬಿನ್ ಲಾದೆನ್’ ಎನ್ನುವ ಭಯೋತ್ಪಾದಕನ ಅಟ್ಟಹಾಸಕ್ಕೆ. ಜಾಗತೀಕರಣದ ತರುವಾಯ ‘ಅಮೇರಿಕತ್ವ’ದ ಸಂಭ್ರಮಾಚರಣೆಯ ಭರಾಟೆಯಲ್ಲಿ ಮುಳುಗಿದ್ದ ಜಗತ್ತಿನ ಮಧ್ಯಮ ವರ್ಗದ ಜನರು, ಕಳೆದ ಕೆಲವು ತಿಂಗಳೀದೀಚೆಗೆ ‘ಅಮೇರಿಕತ್ವ’ ಎನ್ನುವ ಪರಿಕಲ್ಪನೆ ವಾಸ್ತವವಾಗಿ ಯಾವುದರ ಮೇಲೆ ನಿರ್ಮಿಸಲ್ಪಟ್ಟಿದೆ ಮತ್ತು ಯಾವ ಆಧಾರದ ಮೇಲೆ ಜನಮನ್ನಣೆ ಪಡೆದಿದೆ ಎನ್ನುವುದನ್ನು ಅರ್ಥೆÊಸಿಕೊಳ್ಳಲಾಗದೆ ಗೊಂದಲದಲ್ಲಿದ್ದಾರೆ.

ಅಮೇರಿಕಾದ ಪೌರೋಹಿತ್ಯದಲ್ಲಿ ನಡೆಯುತ್ತಿರುವ ಜಾಗತೀಕರಣದ ನಂತರ ಜಗತ್ತಿನ ಇತರ ರಾಷ್ಟçಗಳ ಗಡಿಗಳೊಳಗೆ ಬಹುರಾಷ್ಟಿçÃಯ ಉದ್ಯಮಗಳ ಬಂಡವಾಳ ಹರಿಯಲು ಇದ್ದ ಹಲಕೆಲವು ಅಡೆತಡೆಗಳನ್ನು ನಿವಾರಿಸಲಾಗಿದೆ. ವಾಸ್ತವ ಜಗತ್ತಿನ ದೂರವುಳಿದ ಚಿಂತನೆ ಹಾಗೂ ಅಂಕೆ ಆತಂಕಗಳಿಲ್ಲದೆ ಬರೀ ಲಾಭದ ವ್ಯಾಮೋಹದಿಂದಾಗಿ ಅಮೇರಿಕಾದ ಬ್ಯಾಂಕಿAಗ್ ಮತ್ತು ವಿಮಾ ಕ್ಷೇತ್ರ ನೆಲ ಕಚ್ಚಿದೆ. ಇಲ್ಲಿಯವರೆಗೆ ಜಾಗತೀಕರಣದ ಮಂತ್ರಕ್ಕೆ ಮಾವಿನಕಾಯಿ ಉರುಳುತ್ತೆ, ಅಂಗೈಯಲ್ಲಿ ನೆಲ್ಲಿ ಕಾಯಿ ಬರುತ್ತೆ ಅಂತೆ ಬೊಗಳೆ ಬಿಡುತ್ತಿದ್ದ ಪಂಡಿತರೆಲ್ಲ ಅಮೇರಿಕದ ಆರ್ಥಿಕ ಪರಿಸ್ಥಿತಿ ಕುಸಿದು ಬಿದ್ದಿರುವುದಕ್ಕೆ ಈಗ ವಿವರಣೆ, ಕಾರಣ ಹುಡುಕುತ್ತಿರುವುದು ಮಾತ್ರ ಮಾರ್ಕ್್ಸನ ‘ದಾಸ್ ಕ್ಯಾಪಿಟಲ್’ನಲ್ಲಿ ಎಂದರೆ ಎಂಥ ವಿಪರ್ಯಾಸ. ಮಧ್ಯಮ ವರ್ಗದ ಜನರ ಪಾಲಿಗೆ ಸ್ವರ್ಗವಾಗಿದ್ದ ಅಮೇರಿಕಾದ ‘ಅಜೀರ್ಣ’ಕ್ಕೆ ಏಷ್ಯಾ ದೇಶಗಳ ಉಷ್ಣವಲಯದ ಕಾಡಿನಲ್ಲಿರಬಹುದಾದ ನಾಟಿ ಮದ್ದಿಗಾಗಿ ಹುಡುಕಾಟ ನಡೆಯುತ್ತಿದೆ. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚುವುದೇ ಬದುಕಿನ ಮಂತ್ರವಾಗಿಸಿಕೊAಡು ಬದುಕುತ್ತಿರುವ ಬಡದೇಶಗಳಲ್ಲಿರುವ ಜನ ಮಾತ್ರ ಎಂದಿನAತೆಯೇ ‘ಬುದ್ಧ’ರಾಗಿ ಮುಂದೆ ಸಾಗುತ್ತಿದ್ದಾರೆ. ಆದರೆ ಅಮೆರಿಕದ ಸ್ಥಿತಿ ನೋಡಿ ಅದು ಉತ್ತಮ ಸ್ಥಿತಿಯಲ್ಲಿರುವಾಗಲೂ ಇಡೀ ಜಗತ್ತಿಗೆ ನಿಶ್ಚಿಂತೆಯಲ್ಲಿರಲು ಬಿಡಲಿಲ್ಲ. ಹಾಗಂತ ಸಮಸ್ಯೆಗೆ ಸಿಕ್ಕಿದಾಗಲೂ ಜಗತ್ತಿಗೆ ನೆಮ್ಮದಿಯಿಲ್ಲ. ಅಮೇರಿಕದ ಆರ್ಥಿಕ ಕುಸಿತದ ಭಾರ ಬಡಪಾಯಿ ದೇಶಗಳ ಮೇಲೂ ಬೀಳುತ್ತಿದೆ. ಸುಖ ಸಂತೋಷ ಅನುಭವಿಸುವುದು ಯಾರೋ, ಅವರ ತಪುö್ಪಗಳಿಗೆ ಪ್ರಾಯಶ್ಚಿತ್ತ ಅನುಭವಿಸುವುದು ಇನ್ಯಾರೋ. ಮೊನ್ನೆ ಮೊನ್ನೆ ಲಂಡನ್‌ನಲ್ಲಿ ನಡೆದ ಜಿ.೨೦ ದೇಶಗಳ ಶೃಂಗ ಸಭೆಯಲ್ಲಿ ಜಗತ್ತಿಗೆ ಎದುರಾದ (ಜಗತ್ತು ಎಂದರೆ ಅಮೇರಿಕ) ಸಮಸ್ಯೆಗಳನ್ನು ಎದುರಿಸಲು ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆ ಸ್ವಲ್ಪ ಮಟ್ಟಿಗೆ ವಾಸ್ತವಿಕವಾಗಿ ಯೋಚಿಸಲಾಯಿತು.

ಇದುವರೆಗೆ ‘ಅಮೇರಿಕ’ವನ್ನೇ ಕೇಂದ್ರವಾಗಿರಿಸಿ ಕೆಲವೊಂದು ಸಂಗತಿಗಳನ್ನು ನಾನು ಪ್ರಸ್ತಾವಿಸಿರುವುದಕ್ಕೆ ಕಾರಣ, ಬಹಳ ಸ್ಪಷ್ಟ. ಜಗತ್ತಿನ ಎಲ್ಲ ಆಗುಹೋಗುಗಳ ಹಿಂದೆ, ಎಲ್ಲ ಒಳಿತು-ಕೆಡುಕುಗಳ ಹಿಂದೆ ಅಮೇರಿಕದ ಪ್ರಭಾವವನ್ನು ನಾವು ಅಲ್ಲಗಳೆಯಲಾಗದು. ಈ ಕಾರಣದಿಂದಾಗಿಯೇ ಇವತ್ತು ಅಮೇರಿಕಾ ದೇಶಗಳಲ್ಲಿ ನಡೆಯುವ ವರ್ತಮಾನದ ವಿದ್ಯಮಾನಗಳ ಹಿಂದೆ ಒಂದು ನಿರ್ದಿಷ್ಟ ಹಿನ್ನೆಲೆಯಿದೆ. ಆ ಹಿನ್ನೆಲೆಗೆ ಒಂದು ಸೈದ್ಧಾಂತಿಕ ನೆಲೆಗಟ್ಟಿದೆ. ಅಮೇರಿಕದ ‘ಆರ್ಥಿಕ; ಮತ್ತು ‘ರಾಜಕೀಯ’ ನೀತಿಯ ಪ್ರಭಾವ ಮತ್ತು ಪರಿಣಾಮಗಳು ಜಗತ್ತಿನ ಎಲ್ಲ ದೇಶಗಳ ಮೇಲೆ ಆಗುತ್ತಿದೆ. ಇಂತಹ ಪ್ರಭಾವ ಮತ್ತು ಪರಿಣಾಮ ಎಷ್ಟು ಗಾಢವಾಗಿ ಮತ್ತು ಆಳವಾಗಿ ಆಗುತ್ತಿದೆ ಎನ್ನುವುದು ಅಮೇರಿಕ ಮತ್ತು ಇನ್ನೊಂದು ದೇಶದ ನಡುವಿರುವ ‘ಅಂತರ’ ಎಷ್ಟು ಎನ್ನುವುದನ್ನು ಅವಲಂಬಿಸಿದೆ. ಉದಾಹರಣೆಗೆ ನೆರೆ ರಾಷ್ಟçಗಳಾಗಿರುವ ಭಾರತ ಮತ್ತು ಪಾಕಿಸ್ತಾನ ಒಂದೊAದು ಹೊಂದಿಕೊAಡಿದೆಯೋ ಅಥವಾ ತಾಗಿಕೊಂಡಿದೆಯೇ ಎನ್ನುವುದು ಕೂಡಾ ವಾಷಿಂಗ್ಟನ್ ಮತ್ತು ದೆಹಲಿ; ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್‌ನ ನಡುವಿರುವ ‘ಅಂತರ’ವನ್ನವಲAಬಿಸಿದೆ. ಏಷ್ಯಾದ ರಾಜಕೀಯ ಸೂಕ್ಷ÷್ಮಗಳನ್ನು ಬಲ್ಲವರಿಗೆ ಭಾರತ ಮತ್ತು ಪಾಕಿಸ್ತಾನ ಸದಾ ‘ನೆರೆ’ ‘ಹೊರೆ’ಯಾಗಿಯೇ ಉಳಿಯಬೇಕಾದ ಅನಿವಾರ್ಯತೆ ಯಾರಿಗಿದೆ ಮತ್ತು ಯಾಕಿದೆ ಎನ್ನುವುದು ಗೋಡೆ ಮೇಲಿನ ಬರಹವಾಗಿಯೇ ಇದೆ.

ಇಷ್ಟೆಲ್ಲದರ ಹೊರತಾಗಿಯೂ ‘ಅಮೆರಿಕಾ’ ಹೇಗಿದೆ ಎನ್ನುವುದು, ಹೇಗೆ ಚರ್ಚೆಯ ವಿಷಯವಾಗಿದೆಯೋ ಹಾಗೆಯೇ ಅಮೇರಿಕಾ ಹೇಗೆ ಈ ಹಂತಕ್ಕೆ ಬೆಳೆದುಬಂತು ಮತ್ತು ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಒಂದು ರೀತಿಯ ವಿಭಿನ್ನತೆ ಈ ದೇಶದಲ್ಲಿರುವುದಕ್ಕೆ ಕಾರಣ ಏನು ಎನ್ನುವುದು ತಿಳಿದು ಬರುತ್ತದೆ. ಅದರಂತೆಯೇ ಈ ದೇಶದ ಜನರ ಶ್ರೀಮಂತಿಕೆಯ ಹಿಂದೆ ಬರ್ಬರತೆಯ ಮತ್ತು ಹೋರಾಟದ ವಾಸನೆಯಿದೆ. ಇತಿಹಾಸವನ್ನು ಕಾಲದಿಂದ ಕಾಲಕ್ಕೆ ಅಳಿಸಿಹಾಕಿ ತನಗೆ ಬೇಕಾದ್ದನ್ನು ಮಾತ್ರ ಬರೆಯುವ ಸಾಮರ್ಥ್ಯ ಆ ದೇಶಕ್ಕೆ ಇಲ್ಲವಾದರೂ ಜಗತ್ತಿನ ಜನ ಇತಿಹಾಸದಲ್ಲಿ ಅಮೇರಿಕದ ಆರೋಗ್ಯಕ್ಕೆ ಆಮ್ಲಜನಕವಾಗುವ ಭಾಗವನ್ನು ಕೋಳಿ ಕಾಳು ಹೆಕ್ಕಿದ ಹಾಗೆ ಆಯ್ದು ಸಿದ್ಧಾಂತೀಕರಿಸಿ ಜಾಗತಿಕ ವಲಯದ ಪಂಡಿತ ವರ್ಗಕ್ಕೆ ಉಣಬಡಿಸುವ ಕಲೆಯೂ ಆ ದೇಶಕ್ಕೆ ಕರತಲಾಮಲಕವಾಗಿದೆ. ಜಾಗತಿಕ ಮಟ್ಟದ ಪ್ರಮುಖ ಸಂಸ್ಥೆಗಳ ಮೂಲಕ, ಪಂಡಿತರ ಮೂಲಕ, ಅಧಿಕಾರ ವರ್ಗದ ಮತ್ತು ಇತ್ತೀಚೆಗೆ ಮುಕ್ತ ಮಾರುಕಟ್ಟೆಯ ಬುಲ್ಡೋಜರ್‌ನಡಿ ಸಿಕ್ಕಿ ಸಾಯುವ ಜನರ ರಕ್ತದ ಕಲೆಯನ್ನೊರೆಸುವ ಎನ್. ಜಿ. ಓ. ಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದಾರವಾಗಿ ಸಹಾಯಹಸ್ತ ನೀಡುವ ಮೂಲಕ ಇಂತಹ ಕೆಲಸವನ್ನು ಬಹಳ ನಾಜೂಕಿನಿಂದ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ತನ್ಮೂಲP ಇಂದು ಜಗತ್ತಿಗೆ ಎದುರಾಗಿರುವ ನಿಜವಾದ ಸಮಸ್ಯೆ’ಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ. ಮುಕ್ತ ಮಾರುಕಟ್ಟೆಯನ್ನು ಹೊರತುಪಡಿಸಿ ಉಳಿದೆಲ್ಲ ಆಯ್ಕೆಗಳನ್ನು ಬಲವಂತವಾಗಿ ಜನರಿಂದ ದೂರವಿಡುವ ಕೆಲಸವನ್ನು ಬಹಳ ಕಕ್ಕುಲತೆಯಿಂದ ಮಾಡುತ್ತಿದೆ. ಹೀಗಾಗಿ ಅಮೆರಿಕದ ಇತಿಹಾಸ, ವರ್ತಮಾನ ಮತ್ತು ರಾಜಕೀಯದಜ್ ಸಣ್ಣ ಪರಿಚಯವಾಗದಿದ್ದರೆ ಅಮೇರಿಕೀಕರಣದ ಬಾರ ಹೊರುತ್ತಿರುವ ‘ತೃತೀಯ ಜಗತ್ತಿನ’ ಜನರಿಗೆ ನಿಜವಾದ ಶಿಕ್ಷಣ ದೊರೆಯುವುದು ಸಾಧ್ಯವಿಲ್ಲ. ಜ್ಞಾನಮಾರ್ಗದ ಎಲ್ಲ ಶಾಖೆಗಳು ಅಂತರ್‌ಸAಬAಧಿಯಾಗಿದ್ದು, ಪರಸ್ಪರಾವಲಂಬಿಯಾಗಿರುವ ಇವತ್ತಿನ ಸನ್ನಿವೇಶದಲ್ಲಿ ಕೇಂದ್ರದAತಿರುವ ಅಮೇರಿಕ ಜಾಗತಿಕ ವ್ಯವಸ್ಥೆಯಲ್ಲಿ ಉಂಟುಮಾಡುತ್ತಿರುವ ಸಂಚಲನಗಳನ್ನು ಅರ್ಥ ಮಾಡಿಕೊಳ್ಳಲು, ಅಮೇರಿಕದ ಯಜಮಾನಿಕೆ ಹೊಂದಿರುವ ಮರ್ಮವನ್ನು ತಿಳಿದುಕೊಳ್ಳುವುದು ಅಗತ್ಯ ಕೂಡ. ಹಾಗೆಂದು ಅಮೇರಿಕದ ಬಗ್ಗೆ ಎಷ್ಟನ್ನು ತಿಳಿದುಕೊಳ್ಳಬೇಕು, ಏನನ್ನು ತಿಳಿದುಕೊಳ್ಳಬೇಕು ಎನ್ನುವುದು ಕೂಡ ಒಂದು ಸಂದಿಗ್ಧವೇ.

ಇತ್ತೀಚೆಗೆ ಅಮೇರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದ ಪ್ರಮುಖ ವಿಷಯಗಳ ಜಾಡು ಹಿಡಿಯುತ್ತಾ ಆ ಮೂಲಕ ನಿತ್ಯಾನಂದ ಬಿ. ಶೆಟ್ಟಿಯವರು ತಮ್ಮ ಕೆಲಸ ಆರಂಭಿಸಿದ್ದಾರೆ. ಅಮೇರಿಕದ ಭವ್ಯ ಬಂಗಲೆಗ ಳೊಳಗಿರುವ ಅಲಮಾರುಗಳಲ್ಲಿರ ಬಹುದಾದ ಕರಿಯರ ತಲೆಬುರುಡೆಗಳ ಹೊರಗೆಳೆಯುವ ಅಗತ್ಯಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಇರಾಕ್‌ನ ಸದ್ದಾಮ್ ನಲ್ಲಿ ‘ಸಮೂಹನಾಶ ಮತ್ತು ಜೈವಿಕ ಅಸ್ತçಗಳಿವೆಯೆಂದು’ ಜಗತ್ತಿಗೆಲ್ಲ ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುತ್ತಾ ಬಂದ ಜಾರ್ಜ್ ಬುಷ್; ನಿಜವಾಗಿಯೂ ಸಮೂಹ ನಾಶ ಮಾಡಲು ಶಕ್ತಿಯಿರುವ ಜೈವಿಕಾಸ್ತçಗಳು ಯಾರ ಬತ್ತಳಿಕೆಯಲ್ಲಿವೆ ಎನ್ನುವ ಕುರಿತು ನಡೆದಿರುವ ಬಹಳಷ್ಟು ಚರ್ಚೆಗಳು ಅಮೇರಿಕಾ ತನ್ನ ಕಾರ್ಯಸಧನೆಗಾಗಿ ಯಾವ ಮಾರ್ಗವನ್ನಾದರೂ ಅನುಸರಿಸಲು ಸಿದ್ಧ ಎನ್ನುವುದನ್ನು ತೋರಿಸಿಕೊಟ್ಟಿದೆ. ತಾವೇ ಬಿತ್ತಿದ ವಿಷ ಬೀಜಕ್ಕೆ ತಮ್ಮದೇ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಿರುವ ಅಮೇರಿಕನ್ನರು ಎದುರಿಸುತ್ತಿರುವ ತಮ್ಮೊಳಗಿನ ಮತ್ತು ಹೊರಗಿನ ಸಂಘರ್ಷಗಳಿಗೆ ಹೆದರಿ ಚಡಪಡಿಸುತ್ತಿರುವ ಪರಿಸ್ಥಿತಿಗೆ ಇರಬಹುದಾದ ಸಂಭಾವ್ಯ ಕಾರಣಗಳನ್ನು ತಿಳಿಯಲು ನಿತ್ಯಾನಂದ್ ಸಹಾಯ ಮಾಡುತ್ತಾರೆ. ರಕ್ತ ಮಾಂಸಗಳನ್ನು ಬಸಿದು ‘ಆಧುನಿಕ ಅಮೇರಿಕವನ್ನು’ ಕಟ್ಟಿದ ಕರಿಯರ ಮಾರಣ ಹೋಮ ನಡೆಸಿದ ಹಿಂದಿನ ತಲೆಮಾರಿನ ಬಿಳಿಯರ ನೆರಳಲ್ಲೂ ರಕ್ತದ ಕಲೆಗಳು, ತೊಳೆದಷ್ಟೂ ಒತ್ತರಿಸಿಬರುವ ಮರುಕಳಿಸುವ ನೆತ್ತರ ಹಸಿವಾಸನೆಗೆ ಪ್ರಾಯಶ್ಚಿತ್ತವಾಗಿ ಕರಿಯನೊಬ್ಬನಿಗೆ ಪಟ್ಟಾಭಿಷೇಕ ಮಾಡಿಸಿದ ಅಮೇರಿಕದ ಮತದಾರ ಪ್ರಭುಗಳಿಗೆ, ನಿಜವಾಗಿಯೂ ಬಿಡುಗಡೆ ಸಿಗಬಹುದೋ ಗೊತ್ತಿಲ್ಲ. ಅಮೇರಿಕಾ ಕರಿಯನೊಬ್ಬನ್ನು ಅಧ್ಯಕ್ಷನನ್ನಾಗಿ ಒಪ್ಪಿಕೊಳ್ಳುವ ಮೂಲಕ ಹಿಂದಿನ ಶೋಷಕ ಮನೋಭಾವದಿಂದ ಹೊರ ಬಂದಿದೆ ಎನ್ನುವ ಮಾತೂ ಚಾಲ್ತಿಯಲ್ಲಿದೆ. ಭಾರತ-ಅಮೇರಿಕಾ ಪರಮಾಣು ಒಪ್ಪಂದದ ಸಮಯದಲ್ಲೂ ಇಂತಹ ಮಾತು ಕೇಳಿ ಬರುತ್ತಿತ್ತು. ಆದರೆ ವರ್ತಮಾನದ ಅಮೇರಿಕಾ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದೆ ಎನ್ನುವ ವಾದವನ್ನು ನಾವು ಅದರ ಮುಖಬೆಲೆಯಲ್ಲಿ ಸ್ವೀಕರಿಸಬಹುದೇ ಎನ್ನುವ ಬಹುದೊಡ್ಡ ಸವಾಲು ನಮ್ಮ ಮುಂದಿದೆ. ‘ಅಮೇರಿಕವೆಂದರೆ’ ಸುಂದರ ಸ್ವರ್ಗ ಎನ್ನುವ ಮಧ್ಯಮವರ್ಗದ ಜನರ ಕಲ್ಪನೆಗಂತೂ ಘಾಸಿಯಾಗಿದ್ದು, ಸದ್ಯಕ್ಕೆ ಭ್ರಮೆಯಿಂದ ಬಿಡುಗಡೆ ದೊರೆತಿರುವಂತೆ ಕಾಣುತ್ತಿದೆ. ಭ್ರಮೆ ಇಳಿದ ಈ ಹೊತ್ತಿನಲ್ಲಿ ಅಮೇರಿಕದ ಹಿನ್ನಲೆ, ಒಳ, ಹೊರಗುಗಳ ಬಗೆನೆ ಒಂದು ಹೊರಳು ನೋಟ ಬೀರುವ ಕೃತಿಯ ಆಗಮನ ಅತ್ಯಂತ ಅಪೇಕ್ಷಣೀಯವಾಗಿತ್ತು. ಕನ್ನಡದ ಓದುಗರಿಗೆ ಇಂತಹ ಒಂದು ಕೃತಿಯನ್ನು ನೀಡಿದ ನಿತ್ಯಾನಂದ ಶೆಟ್ಟಿ ಅಭಿನಂದನೆಗೆ ಅರ್ಹರು. ಅವರ ಶ್ರಮ ಸಾರ್ಥಕವಾಗಬೇಕಾದರೆ ಈ ಕೃತಿಯನ್ನು ಕನ್ನಡದ ಓದುಗರು ಓದುವ ಹಾಗಾಗಬೇಕು. ಹಾಗೆ ನೋಡಿದರೆ ನಮ್ಮಲ್ಲಿ ಅಮೇರಿಕವನ್ನು ವಿಶ್ಲೇಷಿಸಿ ಓದುಗರ ಮುಂದಿಡುವ ಗಂಭೀರ ಪ್ರಯತ್ನ ಕೇವಲ ಎಡಪಂಥೀಯ ಚಿಂತಕರಿAದ ಆಗಿದೆ. ಇಂತಹ ಪ್ರಯತ್ನಗಳ ಬಗ್ಗೆ ಓದುಗರಲ್ಲಿ ಮತ್ತು ಬರಹಗಾರರಲ್ಲಿ ಒಂದು ತರದ ಪೂರ್ವಗ್ರಹ ಇರುವ ಕಾರಣ ಅಮೇರಿಕವನ್ನು ಒಬ್ಜೆಕ್ಟಿವ್ ಆಗಿ ಅಥವಾ ವಿಮರ್ಶಾತ್ಮಕವಾಗಿ ನೋಡುವ ಗಂಭೀರ ಪ್ರಯತ್ನಗಳು ಆಗಿಲ್ಲವೆಂದೇ ಹೇಳಬಹುದು. ಈ ದೃಷ್ಠಿಯಿಂದಲೂ ಈ ಕೃತಿ ಸ್ವಾಗತಾರ್ಹ.

ಯಾವುದೇ ಸಾಮಾಜಿಕ ಸಂಗತಿಗಳನ್ನು, ರಾಜಕೀಯ ಬೆಳವಣಿಗೆಗಳನ್ನು ಮತ್ತು ಅಭಿವೃದ್ಧಿಯ ಪರಾಮರ್ಶೆಯನ್ನು ‘ಸಾಮಾಜಿಕ ಸನ್ನಿವೇಶವನ್ನು’ ಸ್ಥಿರೀಕರಿಸಿ ಅಥವಾ ಘನೀಕರಿಸಿ ನೋಡಲಾಗುವುದಿಲ್ಲ. ಎಷ್ಟೇ ವಿಶ್ಲೇಷಣಾತ್ಮಕವಾಗಿ ನೋಡಿದರೂ ಸ್ವಲ್ಪ ಪ್ರಮಾಣದ ಸೈದ್ಧಾಂತಿಕ ಕಲ್ಮಶಗಳು ನಮ್ಮ ಮತಿಯನ್ನು ಹೊಕ್ಕಿಬಿಡುತ್ತವೆ. ಇದು ಅಧ್ಯಯನದ ಮಿತಿಯೂ ಹೌದು. ರಾಜಕೀಯ ಬೆಳವಣಿಗೆಗಳ ಮೂಲಕ ಅಮೇರಿಕದ ಕುರಿತಾದ ಹಲವಾರು ಪ್ರಮುಖ ಸಂಗತಿಗಳನ್ನು ಪರಿಚಯಿಸಿದ ರೀತಿ ಅನನ್ಯವಾಗಿದೆ. ಇಂತಹ ಒಂದು ಅನನ್ಯತೆ ‘ಅಮೇರಿಕ’ದಂಥ ಆರ್ಥಿಕ ಶಕ್ತಿಯೊಂದರ ಹುನ್ನಾರ, ರಾಜಕೀಯ ಸ್ವರೂಪ, ಆರ್ಥಿಕ ಅಭಿವೃದ್ಧಿಯ ಸೈದ್ಧಾಂತಿಕ ಚೌಕಟ್ಟುಗಳನ್ನು ಸರಿಯಾಗಿ ಗ್ರಹಿಸುವಲ್ಲಿ ಕೆಲವೊಮ್ಮೆ ಒಂದು ಮಿತಿಯಾಗಿಯೂ ಕಂಡು ಬರುತ್ತದೆ. ಮನಸ್ಸು ಮತ್ತು ಬುದ್ಧಿಯನ್ನು ಮುಟ್ಟುವ ರೀತಿಯಲ್ಲಿ, ಬಹಳ ಆತ್ಮೀಯವಾಗಿ ವಿಷಯಗಳನ್ನು ಪರಿಚಯಿಸುವ ನಿತ್ಯಾನಂದರ ಕಥನ ಶೈಲಿ ಓದನ್ನು ಎಲ್ಲಿಯೂ ಹೊರೆಯಾಗಿಸುವುದಿಲ್ಲ. ವಿಚಾರ ಪ್ರಚೋದಕವೂ, ಸಾಮಾಜಿಕ ಸಂದರ್ಭದ ಕುರಿತಂತೆ ವಿಮರ್ಶಾತ್ಮಕವೂ ಆದ ಈ ಕೃತಿ ಕನ್ನಡದ ಸಾರಸ್ವತ ಲೋಕ ಖಂಡಿತವಾಗಿಯೂ ಬುಧ್ಧಿಪೂರ್ವಕವಾಗಿ ಬರಮಾಡಿಕೊಳ್ಳಬಹುದಾದ ಹೊತ್ತಗೆ ಎಂಬುದು ನನ್ನ ಅನಿಸಿಕೆ. ಇದು ನಿಮ್ಮೆಲ್ಲರದೂ ಆಗಲಿ ಎಂದು ಹಾರೈಸುತ್ತೇನೆ.

ಮಂಗಳೂರು ಡಾ. ಉದಯ್ ಕುಮಾರ್ ಇರ್ವತ್ತೂರು

Comments

Popular posts from this blog

ಸಾಮಾಜಿಕ ಉದ್ಯಮಶೀಲತೆ

ಭಾರತೀಯ ಆರ್ಥಿಕ ವ್ಯವಸ್ಥೆ: ವಿನ್ಯಾಸ ಮತ್ತು ವಿಮರ್ಶೆ

೧೫೦ನೇ ವರ್ಷಾಚರಣೆಯ ನೆನಪಿನ ಕಾರ್ಯಕ್ರಮಗಳ ಪಕ್ಷಿನೋಟ