ಭಾರತೀಯ ಆರ್ಥಿಕ ವ್ಯವಸ್ಥೆ: ವಿನ್ಯಾಸ ಮತ್ತು ವಿಮರ್ಶೆ

 


ಭಾರತೀಯ ಆರ್ಥಿಕ ವ್ಯವಸ್ಥೆ: ವಿನ್ಯಾಸ ಮತ್ತು ವಿಮರ್ಶೆ

ಉದಯ ಕುಮಾರ ಇರ್ವತ್ತೂರು


ಪೀಠಿಕೆ

ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಕೈಗಾರಿಕಾ ಕ್ರಾಂತಿ ಒಂದು ಮಹತ್ವದ  ಘಟನೆ. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಉತ್ಪಾದನಾ ಕ್ರಮಗಳಲ್ಲಿ ಮಹತ್ವದ ಬದಲಾವಣೆಗಳಾದುವು. ಒಂದು ಮಿತಿಯಲ್ಲಿ ಕೆಲಸ ಮಾಡಲು ಶಕ್ತನಾಗಿದ್ದ ಕಾರ್ಮಿಕನ ಸ್ಥಾನವನ್ನು ಬೃಹತ್ ಸಾಮರ್ಥ್ಯವಿರುವ ಯಂತ್ರಗಳು ಆಕ್ರಮಿಸಿಕೊಂಡವು. ಪ್ರಾಕೃತಿಕ ಸಂಪನ್ಮೂಲಗಳನ್ನು ತನಗಿಷ್ಟ ಬಂದ ಪ್ರಮಾಣದಲ್ಲಿ ಬಳಸಲು ಮತ್ತು ಆ ವಸ್ತುಗಳನ್ನು ಉಪಭೋಗಕ್ಕಾಗಿ ಉಪಯೋಗಿಲು ಇದ್ದ ತೊಡಕನ್ನು ಕೃಗಾರಿಕಾ ಕ್ರಾಂತಿ ಬಗೆÀಹರಿಸಿತೆಂದೇ ಹೇಳಬಹುದು. ಈ ಕಾರಣದಿಂದ, ಕೈಗಾರಿಕೀಕರಣ ಹೆಚ್ಚು ಸಂಪತ್ತನ್ನು ಸೃಷ್ಟಿಸುತ್ತದೆ ಮತ್ತು ಇಂತಹ ವ್ಯವಸ್ಥೆಯಲ್ಲಿ ಒಂದಲ್ಲ ಒಂದು ರೂಪದಲ್ಲಿ  ಭಾಗಿಗಳಾಗುವ ಸಮುದಾಯದ ಜನರಿಗೆ ಈ ಸಂಪತ್ತು ದಕ್ಕುವಂತೆ ಮಾಡುತ್ತದೆ ಎಂದು ತಿಳಿಯಲಾಯಿತು. ಸಂಪತ್ತಿನ ಸಹಾಯದಿಂದ ಜನ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುವುದರಿಂದ ಅವರು ಬಡತನ ಅಥವಾ ದಾರಿದ್ರö್ಯದಿಂದಲೂ ಪಾರಾಗಬಹುದು ಎಂದು ಅಭಿಪ್ರಾಯ ಪಡಲಾಯಿತು.

ಇಂದು ಕೈಗಾರಿಕಾ ಕ್ರಾಂತಿ ಆರಂಭವಾಗಿ ಎರಡು ಶತಮಾನಗಳೇ ಉರುಳಿವೆ. ಇಂದಿಗೂ ಜಗತ್ತಿನ ಮೂರನೇ ಎರಡಂಶ ಜನ ಬಹಳ ದೀನ ಸ್ಥಿತಿಯಲ್ಲಿಯೇ ಬದುಕುತ್ತಿದ್ದಾರೆ. ವಿಶ್ವಬ್ಯಾಂಕ್‌ನ ಸಮೀಕ್ಷೆಗಳೇ ಹೇಳುವ ಹಾಗೆ ಜಗತ್ತಿನ  ಶೇಕಡ ನಲವತ್ತರಷ್ಟು ಜನ ತೀವ್ರವಾದ ಬಡತನದಲ್ಲಿದ್ದು, ಪೋಷಕಾಂಶಗಳ ಕೊರತೆ, ಹಸಿವು, ಅನಾರೋಗ್ಯ ಮುಂತಾದ ಸಮಸ್ಯೆಗಳಿಂದ ಕಂಗೆಟ್ಟು ಹೋಗಿದ್ದಾರೆ. ಬದುಕಿನ ಕನಿಷ್ಟ ಅವಶ್ಯಕತೆಗಳಾದ ಅನ್ನ, ವಸ್ತç ಮತ್ತು ವಸತಿಯನ್ನು ಹೊಂದಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ. ಆಫ್ರಿಕಾದ ಹಲವು ದೇಶಗಲ್ಲಿ ಹೊಟ್ಟೆಗಿಲ್ಲದೆ ಸಾಯುವವರ ಸಂಖ್ಯೆ, ಅದರಲ್ಲೂ ಮಕ್ಕಳ ಸಾವಿನ ಸಂಖ್ಯೆ ಗಣನೀಯವಾಗಿ ಏರಿದೆ. ಹಾಗೆಂದು ವಿಶ್ವದಲ್ಲಿ ಆಹಾರ ಪದಾರ್ಥಗಳ ಉತ್ಪಾದನೆಯೇ ಆಗುತ್ತಿಲ್ಲವೆಂದಿಲ್ಲ. ವಿಶ್ವದ ಎಲ್ಲ ಜನರ ಹಸಿವನ್ನು ನೀಗಿಸಲು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಆಹಾರ ಸಾಮಾಗ್ರಿಗಳನ್ನು ಉತ್ಪಾದಿಸಲಾಗುತ್ತಿದೆ. ಹಲವು ದೇಶಗಳಲ್ಲಿ ಬೇಡಿಕೆ, ಪೂರೈಕೆಗಳ ನಡುವೆ ಸಮತೋಲನ ಉಳಿಸಿಕೊಳ್ಳಲು ಟನ್ನುಗಟ್ಟಲೆ ಆಹಾರ ಸಾಮಾಗ್ರಿಗಳನ್ನು ಸಮುದ್ರಕ್ಕೆ ಚೆಲ್ಲಲಾಗುತ್ತದೆ. ಹಸಿವು ಬಡತನಗಳಿರುವ ಸರ್ಬಿಯಾ, ಪ್ಯಾಲೆಸ್ತೀನ್, ಅಪ್‌ಘಾನಿಸ್ಥಾನದಂತಹ ದೇಶಗಳಲ್ಲೂ ಜನ ಅತ್ಯಾಧುನಿಕ ಶಸ್ತಾçಸ್ತçಗಳನ್ನು ಹಿಡಿದುಕೊಂಡು ಹೋರಾಡÀÄತ್ತಿದ್ದಾರೆ. ಇದೊಂದು ರೀತಿಯ ಅಸಂಗತ ಸ್ಥಿತಿಯಾಗಿ ಕಾಣುತ್ತದೆ. ಒಂದು ಕಡೆ ನಮ್ಮ ತಂತ್ರಜ್ಞಾನ, ಬಂಡÀವಾಳ ಮತ್ತು ಆ ಮೂಲಕ ಮಾನವ ಸಂಪನ್ಮೂಲದ ಬಳಕೆಯಿಂದ ರಾಶಿಗಟ್ಟಲೆ ಆಹಾರ ಧಾನ್ಯಗಳ ಉತ್ಪಾದನೆ ಸಾಧ್ಯವಾಗಿದ್ದರೆ ಇನ್ನೊಂದೆಡೆ ಕಿತ್ತು ತಿನ್ನುವ ಹಸಿವು ಬಡತನ! ಇದೆಲ್ಲವನ್ನು ಗಮನಿಸಿದಾಗ ನಮ್ಮನ್ನು ಸಹಜವಾಗಿ ಕಾಡುವ ಪ್ರಶ್ನೆ: ಯಾವುದು ವಾಸ್ತವ? ಯಾವುದು ಭ್ರಮೆ?

ಮೇಲ್ನೋಟಕ್ಕೆ ಗೋಜಲು ಗೋಜಲಾಗಿರುವ ಈ ಸಮಸ್ಯೆಯನ್ನು ವಿಶ್ಲೇಷಿಸುತ್ತ ಹೋದರೆ ನಮಗೆ ಹಲವು ಸವಾಲುಗಳು ಎದುರಾಗುತ್ತವೆ. ನಮ್ಮ ನಿರಂತರ ಅಭಿವೃದ್ಧಿಯ ಫಲ ಯಾರಿಗೆ ದಕ್ಕಿದೆ? ವಿಶ್ವದಲ್ಲಿ ಶ್ರೀಮಂತರ ಮತ್ತು ಬಡವರ ನಡುವಿನ ಅಂತರ ಯಾಕೆ ಹೆಚ್ಚುತ್ತಾ ಹೋಯಿತು? ಅಂತರಾಷ್ಟಿçÃಯ ದ್ರವ್ಯ ನಿಧಿ, ವಿಶ್ವಬ್ಯಾಂಕ್ ಮತ್ತು ಅದರ ಸಹ ಸಂಸ್ಥೆಗಳು ಬಡದೇಶಗಳನ್ನು ಬಡತನದಿಂದ ಮುಕ್ತವಾಗಿಸಲು ನಡೆಸುತ್ತಿರುವ ಹರಸಾಹಸಗಳ ಹೊರತಾಗಿಯೂ ಬಡದೇಶಗಳ ಪರಿಸ್ಥಿತಿ ಯಾಕೆ ಸುಧಾರಿಸುತ್ತಿಲ್ಲ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದಾಗ ಈ ವರೆಗೆ ನಮ್ಮಲ್ಲಿ ಪ್ರಬಲವಾಗಿದ್ದ ನಮ್ಮ ಅಭಿವೃದ್ಧಿಯ ಕುರಿತಾದ ತಿಳುವಳಿಕೆ, ಚಿಂತನೆಗಳ ಬಗ್ಗೆ ಮರು ಚಿಂತನೆ ಅಗತ್ಯ ಎನ್ನುವುದು ಮನದಟ್ಟಾಗುತ್ತದೆ. ಈ ಕಾರಣದಿಂದ ಅಭಿವೃದ್ಧಿಯ ಪರಿಕಲ್ಪನೆಯನ್ನು ಪುನರ್ ವಿಮರ್ಶಿಸಬೇಕಾದ ಅಗತ್ಯ ಕಂಡು ಬರುತ್ತದೆ. ಈ ಪುನರ್ ವಿಮರ್ಶೆ ಮೂಲಕ ಅಭಿವೃದ್ಧಿಯ ಉದ್ದೇಶಗಳಾದ ಬಡತನ ನಿರ್ಮೂಲನ, ಆರೋಗ್ಯ, ಅಕ್ಷರಾಭ್ಯಾಸ ಮುಂತಾದ ಮಾನವ ಬದುಕಿನ ಮೂಲಭೂತ ಅವಶ್ಯಕತೆಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಇರುವ ತೊಡಕುಗಳನ್ನು ಬಗೆಹರಿಸಬೇಕಾಗಿದೆ. ಈ ದಿಸೆಯಲ್ಲಿ ಅಭಿವೃದ್ಧಿಯ ಆದ್ಯತೆಗಳನ್ನು ಮತ್ತು ಅಭಿವೃದ್ಧಿ ನೀತಿಯನ್ನು ಮರು ವಿಮರ್ಶೆ ಮಾಡಬೇಕಿದ್ದು ಆ ಮೂಲಕ ಆರ್ಥಿಕ ಅಭಿವೃದ್ಧಿಯ ಗುರಿ ಮತ್ತು ದಾರಿಗಳನ್ನು ಗುರುತಿಸಿಕೊಂಡು ಮುನ್ನಡೆಯಬೇಕಾದ ಅಗತ್ಯವಿದೆ. ಅರ್ಥಶಾಸ್ತçಜ್ಞರು, ಯೋಜನಾ ಇಲಾಖೆ ಮತ್ತು ಚಿಂತಕರು ಈ ಕುರಿತು ಧನಾತ್ಮಕವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗಲು ಇದು ಸಕಾಲ.

ಮೊದಲು ನಾವು ಆರ್ಥಿಕ ಅಭಿವೃದ್ಧಿಯ ಕುರಿತು ಪ್ರಚಲಿತ ವ್ಯಾಖ್ಯೆ ಏನು? ಅಭಿವೃದ್ಧಿಯನ್ನು ಯಾವ ಸಂಕೇತಗಳ ಮೂಲಕ ಗುರುತಿಸಲಾಗುತ್ತಿದೆ? ಅಭಿವೃದ್ಧಿಗೆ ಉಪಯೋಗವಾಗುವ ಪರಿಕರಗಳಾವುವು? ಯಾವ ತಾತ್ವಿಕ ತಳಹದಿಯ ಮೇಲೆ ನಮ್ಮ ಪ್ರಚಲಿತ ಅಭಿವೃದ್ಧಿ ನೀತಿಗಳು ರೂಪಿತವಾಗಿದೆ? ಮತ್ತು ಇಂತಹ ಅಭಿವೃದ್ಧಿಯ ನೀತಿಯ ಫಲ ಏನಾಗಿದೆ?  ಎನುವುದನ್ನು ಸಂಕ್ಷಿಪ್ತವಾಗಿ ತಿಳಿಯೋಣ.

ಭಾಗ-೧

ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿ ಮತ್ತು ಹೊಸ ಆರ್ಥಿಕ ನೀತಿ  


ಆರ್ಥಿಕ ಅಭಿವೃದ್ಧಿ-ವ್ಯಾಖ್ಯೆ ಮತ್ತು ಪರಿಕಲ್ಪನೆ

ಆರ್ಥಿಕ ಅಭಿವೃದ್ಧಿ ಎಂದರೆ ಒಂದು ದೇಶದ ತಲಾ ಆದಾಯದಲ್ಲಿ, ದೀರ್ಘಾವಧಿಯಲ್ಲಿ ಏರಿಕೆಯುಂಟಾಗುವ ಒಟ್ಟು ಪ್ರಕ್ರಿಯೆ ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗಿದೆ. ಮೊದಲಿಗೆ ನಾವು ತಲಾ ಆದಾಯ, ದೀರ್ಘಾವಧಿ ಮತ್ತು  ಪ್ರಕ್ರಿಯೆಗಳ ಕುರಿತು ಪ್ರಸ್ತಾಪಿಸೋಣ. ತಲಾ  ಆದಾಯದಲ್ಲಿ ಏರಿಕೆಯಾದಾಗ ಅದು ದೇಶದ ಒಟ್ಟು ಉತ್ಪನ್ನದಲ್ಲಿ ಹೆಚ್ಚಳವಾಗಿರುವುದನ್ನು ತೋರಿಸುತ್ತದೆ. ಇಂತಹ ಹೆಚ್ಚುವರಿ ಸಂಪತ್ತು ಜನರಲ್ಲಿ ಹರಿದು ಹೋಗಿ ಅವರ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿ ಜೀವನ ಮಟ್ಟವನ್ನು ಉತ್ತಮವಾಗಿಸುತ್ತದೆ. ಅಂದರೆ ಇಲ್ಲಿ ತಲಾ ಆದಾಯದಲ್ಲಿನ ಹೆಚ್ಚುವರಿಯಾದ ಆದಾಯ ಜನರಿಗೆ ಹರಿದು ಹೋಗುತ್ತಿದೆ ಎಂಬ ನಂಬಿಕೆಯನ್ನು ಸೂಚಿಸುತ್ತದೆ. ದೀರ್ಘಾವಧಿ ಎಂದರೆ ಮರ‍್ನಾಲ್ಕು ದಶಕಗಳ ಕಾಲ. ಯಾಕೆಂದರೆ ಅಭಿವೃದ್ಧಿ ಎನ್ನುವುದು ಅಲ್ಪಕಾಲೀನವಾಗಿರಬಾರದು: ಅದು ದೀರ್ಘಾವಧಿಯಲ್ಲಿ

ಗುರುತಿಸಬೇಕಾದಂತಹುದು ಮತ್ತು ಇಂತಹ ಅಭಿವೃದ್ಧಿ ಕುರಿತ ಚಟುವಟಿಕೆಗಳು ನಿರಂತರವಾಗಿರಬೇಕು. ಒಂದು ದೇಶ ಒಂದೆರಡು ವರ್ಷಗಳಷ್ಟು ಕಾಲ ಅಭಿವೃದ್ಧಿಶೀಲವಾಗಿದ್ದು ನಂತರ ಹಿಂದುಳಿದ ದೇಶಗಳ ಸಾಲಿಗೆ ಸೇರಿದ್ದೆಂದು ಪರಿಗಣಿಸುವಂತಿರಬಾರದು. ಅಲ್ಪಕಾಲಾವಧಿಯಲ್ಲಿ ನಾವು ಒಂದು ದೇಶ ಪ್ರಗತಿ ಪಥದತ್ತ ಕಾರ್ಯೊನ್ಮಖವಾಗಿರುವುದನ್ನು ಕಾಣಬಹುದೇ ಹೊರತು ಅಭಿವೃದ್ಧಿ ಹೊಂದಿತೆAದು ಹೇಳುವ ಹಾಗಿಲ್ಲ. ಹೀಗೆ ಅಭಿವೃದ್ಧಿ ಒಂದು ಪ್ರಕ್ರಿಯೆ, ಯಾಕೆಂದರೆ ಇಲ್ಲಿ ಅಂತರ್ ಸಂಬAಧಿಯಾದ ಉತ್ಪಾದನಾ ಪರಿಕರಗಳು ಸಾಮಾನ್ಯ ಮಾದರಿಯಲ್ಲಿ ಒಂದು ನಿಶ್ಚಿತ ಉದ್ದೇಶದ ಈಡೇರಿಕೆಗೋಸ್ಕರ ಕ್ರಿಯಾಶೀಲವಾಗುತ್ತವೆ. ನಾವು ಬಡತನೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಇಂತಹ ಉತ್ಪಾದನಾ ಪರಿಕರಗಳನ್ನು ಬಳಸಿ ಕಾರ್ಯೋನ್ಮುಖರಾದಾಗ, ಬಡತನ ನಿರ್ಮೂಲನವಾಗಬೇಕಾದರೆ ಯಾವ ಯಾವ ವಸ್ತುಗಳು ಉತ್ಪಾದನೆಯಾಗಬೇಕೋ ಅವನ್ನು ಉತ್ಪಾದಿಸುತ್ತವೆ ಮತ್ತು ಇಂತಹ ವಸ್ತುಗಳು ಬಳಕೆಗೆ ಒದಗಿ ಬಡತನ ನಿರ್ಮೂಲನ ಉದ್ದೇಶ ಸಾಧಿತವಾಗುತ್ತದೆ. ಒಂದು ವೇಳೆ ನಮ್ಮ ಉದ್ದೇಶ ರಾಷ್ಟಿçÃಯ ಆದಾಯವನ್ನು ಹೆಚ್ಚಿಸುವುದೆಂದಾದರೆ, ಉತ್ಪದನಾ ಪರಿಕರಗಳನ್ನು ಬಳಸಿ ಅಧಿಕ ಪ್ರತಿಫಲ ತರುವ ವಸ್ತುಗಳನ್ನು ಉತ್ಪಾದಿಸಿದಾಗ ರಾಷ್ಟಿçÃಯ ಆದಾಯದಲ್ಲಿ ಏರಿಕೆಯುಂಟಾಗುತ್ತದೆ. ಇಂತಹ ಅಭಿವೃದ್ಧಿ ಸಾಧಿಸುವಾಗ ನಾವು ಗಮನಿಸಬೇಕಾದಂತಹ ಇನ್ನೂ ಕೆಲವು ಅಂಶಗಳಿವೆ, ಅವುಗಳೆಂದರೆ, ನಾವು ಅಭಿವೃದ್ಧಿಯತ್ತ ಸಾಗುತ್ತಾ ಹೋಗುವಾಗ ಅಭಿವೃದ್ಧಿ ಪೂರ್ವ ಹಂತದಲ್ಲಿ ಬಡತನದ ರೇಖೆಗಿಂತ ಕೆಳಗೆ ಇದ್ದ ಜನಸಂಖ್ಯಾ ಪ್ರಮಾಣ ಇಳಿಮುಖವಾಗುತ್ತಾ ಹೋಗಬೇಕು. ಉದಾಹರಣೆಗೆ, ಪ್ರಸ್ತುತ ನಮ್ಮ ದೇಶದಲ್ಲಿ ಶೇಕಡಾ ನಲವತ್ತರಷ್ಟು ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ. ನಾವು ಈಗ ಅಭಿವೃದ್ಧಿ ಹೊಂದಲು ಅನುಷ್ಟಾನಗೊಳಿಸುವ ಕಾರ್ಯತಂತ್ರದ ಫಲವಾಗಿ ಬಡತನದ ರೇಖೆಗಿಂತ ಕೆಳಗಿರುವ ಶೇಕಡಾ ನಲವತ್ತರಷ್ಟು ಪ್ರಮಾಣ ಭವಿಷ್ಯತ್ತಿನಲ್ಲಿ ಇಳಿಮುಖವಾಗುತ್ತಾ ಹೋಗಬೇಕು. ಇಲ್ಲವಾದಲ್ಲಿ ಒಂದು ವೇಳೆ ರಾಷ್ಟಿçÃಯ ಆದಾಯದಲ್ಲಿ ಏರಿಕೆಯಾದರೂ ಅದನ್ನು ಅಭಿವೃದ್ಧಿ ಎಂದು ಕರೆಯಲಾಗದು. ರಾಷ್ಟಿçÃಯ ಉತ್ಪನ್ನದಲ್ಲಿ ಹೆಚ್ಚಳವಾದಂತೆಯೇ ಜನಸಂಖ್ಯೆಯಲ್ಲಿಯೂ ಅದೇ ಪ್ರಮಾಣದಲ್ಲಿ ಹೆಚ್ಚಳವಾದರೆ ನಾವು ಅದನ್ನು ಆರ್ಥಿಕ ಅಭಿವೃದ್ಧಿ ಎಂದು ಕರೆಯಲಾಗದು. ಆದ್ದರಿಂದ ಹೆಚ್ಚುವರಿ ಏನು ಉತ್ಪಾದನೆಯಾಗುತ್ತದೆ ಅದನ್ನು ಜನಸಂಖ್ಯಾ ಹೆಚ್ಚಳ ಕಬಳಿಸಿ ಬಿಡುವಂತೆ ಆಗಬಾರದು. ಉತ್ಪಾದಿಸಲಾದ ಹೆಚ್ಚುವರಿ ಉತ್ಪಾದನೆ ಆದಷ್ಟು ಸಮಾನವಾಗಿ ವಿತರಣೆಯಾದಾಗ ಅಭಿವೃದ್ಧಿಯಲ್ಲಿ ಹೆಚ್ಚು ಸ್ಥಿರತೆಯೂ ಕಂಡು ಬರುತ್ತದೆ. ಈ ರೀತಿಯಲ್ಲಿ ಅಭಿವೃದ್ಧಿ ಎಂದರೆ, ದೀರ್ಘಾವಧಿಯಲ್ಲಿ ಒಂದು ದೇಶದಲ್ಲಿರುವ ಉತ್ಪಾದನಾ ಪರಿಕರಗಳು ಬಳಕೆಯಾಗಿ, ಅವುಗಳು ಉತ್ಪಾದನೆಯನ್ನು ಹೆಚ್ಚಿಸಿ, ಅಂತಹ ಹೆಚ್ಚಳದ ಪರಿಣಾಮವಾಗಿ ತಲಾ ಆದಾಯ ಮತ್ತು ರಾಷ್ಟಿçÃಯ ಆದಾಯದಲ್ಲಿ ಏರಿಕೆಯಾಗುವ ಒಟ್ಟು ಪ್ರಕ್ರಿಯೆ, ಅಮಾರ್ತ್ಯಸೇನ್ ಅವರ ಮಾತಿನಲ್ಲಿ ಹೇಳುವುದಾದರೆ ಉತ್ಪಾದನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವ ಮೂಲಕ ಜನ ಸಾಮಾನ್ಯ ತÀನಗಿರುವ ಬದುಕುವ ಸ್ವಾತಂತ್ರö್ಯವನು ಮತ್ತು ಆಯ್ಕೆಯ ಸ್ವಾತಂತ್ರö್ಯವನ್ನು ಹೊಂದುವುದಾಗಿದೆ. 

ಈ ಹಿಂದೆ ನಾವು ಅಭಿವೃದ್ಧಿಯ ವ್ಯಾಖ್ಯೆಯಲ್ಲಿ ತಿಳಿಸಿದಂತೆ ಒಂದು ಅರ್ಥವ್ಯವಸ್ಥೆ ಅಭಿವೃದ್ಧಿ ಸಾಧಿಸಿರುವುದನ್ನು, ಕೆಲವೊಂದು ಸಂಕೇತಗಳ ಮೂಲಕ ಅರ್ಥೈಸಿಕೊಳ್ಳಬೇಕಾಗುತ್ತದೆ. 

ಮೊದಲನೆಯದಾಗಿ, ಅಭಿವೃದ್ಧಿ ಹೊಂದಿದಾಗ ರಾಷ್ಟಿçÃಯ ಉತ್ಪನ್ನ ಮತ್ತು ರಾಷ್ಟಿçÃಯ ಆದಾಯದಲ್ಲಿ ಏರಿಕೆ ಕಂಡು ಬರಬೇಕು. ಅಂದರೆ ಯಾವ ದೇಶದಲ್ಲಿ ತಲಾ ಆದಾಯ ಹೆಚ್ಚಾಗಿದೆಯೋ ಅದು ಅಭಿವೃದ್ಧಿಯನ್ನು ಸಂಕೇತಿಸುತ್ತದೆ. ಅಂದರೆ ಅಲ್ಲಿ ಉತ್ಪದನಾ ಪರಿಕರಗಳು ಕ್ರಿಯಾಶೀಲವಾಗಿರುವುದನ್ನು ಕಾಣಬಹುದಾಗಿದೆ. ಇಂತಹ ಕ್ರಿಯಾಶೀಲ ಸ್ಥಿತಿಯಲ್ಲಿ ಭೂಮಿ, ಬಂಡವಾಳ, ಕಾರ್ಮಿಕ ವರ್ಗ ಮತ್ತು ಸಂಘಟನಾ ಶಕ್ತ, ಆದಾಯ ರೂಪದಲ್ಲಿ ಪ್ರತಿಫಲ ಪಡೆಯುತ್ತವೆ. ಇಂತಹ ಆದಾಯ ಜನರ ಬಯಕೆ ಈಡೇರಿಸಿಕೊಳ್ಳಲು ವಸ್ತುಗಳನ್ನು, ಯಾ ಸೇವೆಗಳನ್ನು ಒದಗಿಸಿಕೊಡುತ್ತದೆ.

ಎರಡನೆಯದಾಗಿ, ಅಭಿವೃದ್ಧಿ ಹೊಂದಿದ ವ್ಯವಸ್ಥೆಯಲ್ಲಿ ಬಡವ ಮತ್ತು ಶ್ರೀಮಂತರ ನಡುವೆ ಅಂತರ ಕಡಿಮೆಯಿರುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಅರ್ಥವ್ಯವಸ್ಥೆಯಲ್ಲಿ ಉತ್ಪಾದನಾ ಪರಿಕರಗಳು ಒಂದು ವಲಯದಿಂದ ಇನ್ನೊಂದು ವಲಯಕ್ಕೆ ವರ್ಗಾವಣೆಗೊಳ್ಳುತ್ತಲೇ ಇರುತ್ತವೆ. ಅಂದರೆ ಎಲ್ಲಿ ಪ್ರತಿಫಲ ಹೆಚ್ಚಿದೆಯೋ ಅಲ್ಲಿಗೆ ವರ್ಗಾವಣೆಗೊಳ್ಳುತ್ತವೆ. ಇತರ ಉತ್ಪದನಾ ಪರಿಕರಗಳೂ ಹೆಚ್ಚು, ಕಡಿಮೆ ಸಮನಾಗಿ ಪ್ರತಿಫಲ ಪಡೆಯುತ್ತವೆ. ಪರಿಣಾಮವಾಗಿ ಆದಾಯದ ಹಂಚಿಕೆಯಲ್ಲಿ ಅಸಮಾನತೆ ಕಡಿಮೆಯಾಗುತ್ತದೆ. ಇದರಿಂದಾಗಿ ಅಭಿವೃದ್ಧಿ ಶೀಲ ರಾಷ್ಟçಗಳಲ್ಲಿ ಉಳ್ಳವರ ಮತ್ತು ಇಲ್ಲದವರ ಮಧ್ಯೆ ಇರುವ ಅಸಮತೋಲನ ಅಭಿವೃದ್ಧಿ ಹೊಂದದ ದೇಶಗಳಿಗೆ ಹೋಲಿಸಿದಾಗ ಕಡಿಮೆಯಿರುತ್ತದೆ. 

ಮೂರನೆಯದಾಗಿ ಅಭಿವೃದ್ಧಿ ಹೊಂದಿದ ದೇಶದಲ್ಲಿ ಅಗತ್ಯವಿರುವ ಬಂಡವಾಳ ಕಡಿಮೆ ಬಡ್ಡಿಯದರದಲ್ಲಿ ಲಭ್ಯವಿರುತ್ತದೆ. ಹೀಗೆ ಲಭ್ಯವಿರುವ ಬಂಡವಾಳವನ್ನು ಬಯಸಿದಾಗ ಉತ್ಪನ್ನ ಹೆಚ್ಚಾಗುತ್ತದೆ. ಇದರಿಂದಾಗಿ ಉತ್ಪಾದನಾ ಪರಿಕರಗಳ ಆದಾಯದಲ್ಲಿಯೂ ಹೆಚ್ಚಳವಾಗುತ್ತದೆ. ಇದರಿಂದಾಗಿ ಉತ್ಪಾದನಾ ಪರಿಕರಗಳ ಆದಾಯದಲ್ಲಿಯೂ ಹೆಚ್ಚಳವಾಗುತ್ತದೆ. ಆದಾಯ ಹೆಚ್ಚಾದಾಗ ಉಳಿತಾಯದಲ್ಲೂ ಏರಿಕೆ ಉಂಟಾಗುತ್ತದೆ ಮತ್ತು ಬಂದವಾಳ ಸಂಚಯನ ಸುಲಭವಾಗುತ್ತದೆ. ಉತ್ಪಾದನೆ ಹೆಚ್ಚಾಗುವ ವೇಳೆ ಕೈಗಾರಿಕೋದ್ಯಮಿಗಳಿಗೆ ಸಿಗುವ ಲಾಭದಲ್ಲಿ ಹಎಚ್ಚಳವಾಗುವುದರಿಂದ ಹೂಡಿಕೆಗಾಗಿ ಅಧಿಕ ಬಂಡವಾಳ ಲಭ್ಯವಿರುತ್ತದೆ. ಹೀಗೆ ಬಂಡವಾಳ ಸಂಚಯನ ಬೇಕಾದಷ್ಟು ಪ್ರಮಾಣದಲ್ಲಿ ಆದಾಗ ಬಡ್ಡಿಯ ದರದಲ್ಲಿ ಕಡಿತ ಉಂಟಾಗಿ ಸಾಕಷ್ಟು ಬಂಡವಾಳ ಸುಲಭವಾಗಿ ಲಭ್ಯವಿರುತ್ತದೆ. 

ನಾಲ್ಕನೆಯದಾಗಿ ದೇಶದ ಒಟ್ಟು ಉತ್ಪನ್ನದಲ್ಲಿ ಕೈಗಾರಿಕಾ ರಂಗದ ಕೊಡುಗೆ ಅಧಿಕವಾಗಿರುವುದು ಕಂಡು ಬರುತ್ತದೆ. ಉದಾಹರಣೆಗೆ ಅಮೇರಿಕಾದಲ್ಲಿ ಒಟ್ಟು ರಾಷ್ಟಿçÃಯ ಉತ್ಪನ್ನದಲ್ಲಿ ಕೃಷಿ ಕೇತ್ರದ ಕೊಡುಗೆ ೪%ನಿಂದ ೫%ವರೆಗಿದ್ದರೆ ಭಾರತದಲ್ಲಿ ಇದು ೩೫% ನಿಂದ ೪೦% ರಷ್ಟಿದೆ. ನಾವು ಯಾವುದೇ ದೇಶದ ಅಭಿವೃದ್ಧಿಯ ಮಟ್ಟವನ್ನು ಗಮನಿಸಿದಾಗ ಬಡದೇಶಗಳಲ್ಲಿ ಮೂಲ ಉತ್ಪಾದನಾ ಕ್ಷೇತ್ರಗಳಾದ ಕೃಷಿ, ಗಣಿಗಾರಿಕೆ, ಮೀನುಗಾರಿಕೆ ಮುಂತಾದ ಪ್ರಾಥಮಿಕ ವಲಯಗಳ ಕೊಡುಗೆ ಕೈಗಾರಿಕಾ ರಂಗದ ಕೊಡುಗೆಗಿಂತ ತುಂಬಾ ಕಡಿಮೆಯಿರುವುದು ಕಂಡು ಬರುತ್ತದೆ. ಇವಲ್ಲದೆ ಉದ್ಯೋಗಾವಕಾಶಗಳು ಸೇವಾರಂಗದ ಬೆಳವಣಿಗೆ ಮುಂತಾದ ವಿಷಯಗಳೂ ಆರ್ಥಿಕ ಅಭಿವೃದ್ಧಿಯ ಮಟ್ಟವನ್ನು ಪ್ರತಿಬಿಂಬಿಸುತ್ತವೆ.

ಆರ್ಥಿಕ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ? ಅಭಿವೃದ್ಧಿಯ ಗತಿ ಹೇಗೆ ಸಾಗುತ್ತದೆ? ಎನ್ನುವ ಕುರಿತು ಹಲವಾರು ಅರ್ಥಶಾಸ್ತçಜ್ಞರು ತರ್ಕಬದ್ಧವಾದ ವ್ಯಾಖ್ಯೆ ಮತ್ತು ವಿವರಣೆಗಳನ್ನು ನೀಡಿದ್ದಾರೆ. ಇದರಲ್ಲಿ ಕ್ಲಾಸಿಕಲ್ ಮತ್ತು ನಿಯೋ ಕ್ಲಾಸಿಕಲ್ ಅರ್ಥಶಾಸ್ತçಜ್ಞರು ನೀಡಿರುವ ವ್ಯಾಖ್ಯೆ ಮತ್ತು ವಿವರಣೆಗಳು ಹೆಚ್ಚು ಸ್ವೀಕೃತವಾಗಿದ್ದು ಇಂದು ಅನುಷ್ಠಾನದಲ್ಲಿವೆ. ಇಂದು ಜಗತ್ತಿನ ಮುಂದುವರಿದ ರಾಷ್ಟçಗಳು ಇಂತಹ ಅಭಿವೃದ್ಧಿ ನೀತಿಯನ್ನು ಅನುಮೋದಿಸುತ್ತಿದ್ದು ಇಂತಹ ಅಭಿವೃದ್ಧಿ ನೀತಿಯ ಮೂಲಕ ಆರ್ಥಿಕ ಸಮಾನತೆ ಪಡೆಯಬಹುದೆಂದು ಹೇಳಲಾಗುತ್ತಿದೆ. 

ಆರ್ಥಿಕ ಅಭಿವೃದ್ಧಿ ಹೇಗೆ ರೂಪುಗೊಳ್ಳುತ್ತದೆ ಎನ್ನುವುದನ್ನು ಹೀಗೆ ವಿವರಿಸಲಾಗಿದೆ. ಒಂದು ದೇಶದ ಕಾರ್ಮಿಕ ಶಕ್ತಿಯನ್ನು ಬಳಸಿ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಊಳಿದೆಲ್ಲ ಉತ್ಪಾದನಾ ಪರಿಕರಗಳು ತಮ್ಮ ದುಡಿಮೆಗೆ ಒಂದು ನಿಶ್ಚಿತ ಫಲವನ್ನು ಪಡೆಯುತ್ತವೆ. ಕಾರ್ಮಿಕ ಶಕ್ತಿಯ ಅಧಿಕ ದÀÄಡಿತದಿಂದ ಬಳಕೆಗೆ ಬೇಕಾಗುವುದಕ್ಕಿಂತ ಅಧಿಕ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಕಾರ್ಮಿಕ ಶಕ್ತಿ ಅಧಿಕವಾಗಿ ಉತ್ಪಾದಿಸುವುದರಿಂದ ಮತ್ತು ಮಡಿಮೆ ವಸ್ತುವನ್ನು ಬಳಸುವ ಮೂಲಕಬಂಡವಾಳ ಸಂಚಯನ ಸಾಧ್ಯವಾಗುತ್ತದೆ ಈ ರೀತಿ ಬಂಡÀವಾಳ ಸಂಚಯನ ಕ್ರಿಯೆ ಮೊದಲಾಗುತ್ತದೆ. ಇಂತಹ ಬಂಡÀವಾಳ ಸಂಚಯನ ಕ್ರಿಯೆಯಲ್ಲಿ ತೀವ್ರತೆ ಉಂಟಾಗುವುದು ಕಾರ್ಮಿಕ ಶಕ್ತಿಯ ವರ್ಗಿಕರಣದಿಂದ ಕಾರ್ಮಿಕ ಶಕ್ತಿಕ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗುತ್ತದೆ. ಯಾಕೆಂದರೆ ಇಂತಹ ವರ್ಗಿಕರಣದಿಂದ ಕಾರ್ಮಿಕರು ಒಂದು ಉದ್ಯೋಗದಿಂದ ಇನ್ನೊಂದು ಉದ್ಯೋಗಕ್ಕೆ ವಲಸೆ ಹೋಗುತ್ತಾ ಸಮಯ ವ್ಯರ್ಥವಾಗುವುದಿಲ್ಲ, ಕೆಲಸದಲ್ಲಿ ಪರಿಣತಿಯುಂಟಾಗುತ್ತದೆ ಮತ್ತು ಇಂತಹ ಪರಿಣತಿಯಿಂದ ಹೊಸ ಆವಿಷ್ಕಾರಗಳು ಸಾಧ್ಯವಾಗುತ್ತವೆ. ಯಾವ ಮಟ್ಟದಲ್ಲಿ ಕಾರ್ಮಿಕ ಶಕ್ತಿಯ ವರ್ಗಕರಣ ಉಂಟಾಗುತ್ತದೆ ಎನ್ನುವುದು ಉತ್ಪಾದಿತ ವಸ್ತುವಿಗಿರುವ ಮಾರುಕಟ್ಟೆ ಮತ್ತು ಬಂಡವಾಳವನ್ನವಲAಬಿಸಿದೆ. ಕಾರ್ಮಿಕ ಶಕ್ತಿ ಹೆಚ್ಚಾದಾಗ ಉತ್ಪಾದನೆ ಹೆಚ್ಚಾಗುತ್ತದೆ. ಯಾಕೆಂದರೆ ನಾವು ಕಾರ್ಮಿಕ ಶಕ್ತಿಯಲ್ಲಿ ಹೆಚ್ಚಳ ಉಂಟುಮಾಡಬಹುದೇ ಹೊರತು ಪ್ರಕೃತಿಯಲ್ಲಲ್ಲ. ಹೀಗೆ ಉತ್ಪಾದನೆಯಾದ ವಸ್ತುಗಳು ವಿನಿಮಯದ ಮೂಲಕ ಪ್ರಸರಣ ಹೊಂದುತ್ತವೆ. ಇಂತಹ ಪ್ರಸರಣದಲ್ಲಿ ಕೊಡುಕೊಳ್ಳುವಿಕೆ ಅನಿವಾರ್ಯವಾಗಿರುತ್ತದೆ.

ನಾವು ಈ ಮೊದಲೇ ಹೇಳಿದಂತೆ ಬಂಡವಾಳ ಸಂಚಯನವು ಕಾರ್ಮಿಕ ಶಕ್ತಿಯ ವರ್ಗೀಕರಣ ಅಧಿಕವಾದಂತೆ ಉತ್ಪಾದನೆಯೂ ಅಧಿಕವಾಗುತ್ತಾ ಹೋಗುತ್ತದೆ. ಉತ್ಪಾದನೆ ಹೆಚ್ಚಿದಾಗ ಲಾಭಾಂಶ ಹೆಚ್ಚಿ ಬಂಡವಾಳಶಾಹಿಗಳ ಕೈಯಲ್ಲಿ ಸಂಪತ್ತು ಸಂಚಯಿತವಾದAತೆ ಬಂಡವಾಳ ಲಭ್ಯತೆಯೂ ಅಧಿಕವಾಗುತ್ತದೆ. ಇದು ಕಾರ್ಮಿಕ ಶಕ್ತಿಯ ವರ್ಗೀಕರಣ ಉಂಟುಮಾಡುತ್ತದೆ. ಕಾರ್ಮಿಕನ ಶಕ್ತಿಯ ವರ್ಗೀಕರಣ ಬಂಡವಾಳ ಸಂಚಯನವಲ್ಲದೆ, ಮಾರುಕಟ್ಟಿಯ ಗಾತ್ರ, ಜನಸಂಖ್ಯಾ ದಟ್ಟಣೆ ಮತ್ತು ವಾಣಿಜ್ಯ ವ್ಯವಸ್ಥೆ ಇವುಗಳನ್ನೂ ಅವಲಂಬಿಸಿದೆ. ಬಂಡವಾಳ ಹಎಚ್ಚಿದಂತೆಲ್ಲಾ ಕಾರ್ಮಿಕ ಶಕ್ತಿಯ ವರ್ಗೀಕರಣವೂ ಅಧಿಕವಾಗುತ್ತಾ ಹೋಗುತ್ತದೆ. ಇದೊಂದು ರೀತಿಯಲ್ಲಿ ವರ್ತುಲಾಕೃತಿಯ ಹರಿವು ಇದ್ದಂತೆ, ಸಂಚಯಿತ ಬಂಡÀವಾಳದಿAದ ಕೈಗಾರಿಕಾ ಚಟುವಟಿಕೆಗಳು ಅಧಿಕವಾಗಿ ಹೆಚ್ಚು  ಉತ್ಪಾದನೆಯುಂಟಾಗುತ್ತದೆ. ಇದರಿಂದ ಇನ್ನಷ್ಟು ಉತ್ಪಾದನಾ ಪರಿಕರಗಳು ತೊಡಗಿಸಲ್ಪಡುತ್ತವೆ ಯಾ ಸಕ್ರಿಯವಾಗುತ್ತವೆ. ಪರಿಣಾಮವಾಗಿ ಅಧಿಕ ಲಾಭ ಉಂಟಾಗುತ್ತದೆ. ಪುನಃ ಬಂಡವಾಳದಾರರ ಸಂಪತ್ತು ಹೆಚ್ಚಿ ಅಂತಹ ಬಂಡÀವಾಳ ಕೈಗಾರಿಕಾ ವಲಯದ ಗಾತ್ರವನ್ನಲ್ಲದೆ ಅದರ ನೈಪುಣ್ಯತೆಯನ್ನೂ ಅಧಿಕಗೊಳಿಸುತ್ತದೆ.

ಬಂಡವಾಳವನ್ನು ನಾಲ್ಕು ಉದ್ದೇಶಗಳಿಗೆ ಬಳಸಲಾಗುತ್ತದೆ:

೧. ಸಮಾಜದ ಬಳಕೆಗೆ ಮತ್ತು ಇತರ ಉಪಯೋಗಕ್ಕೆ ಬೇಕಾಗುವ ಕಚ್ಚಾಮಾಲುಗಳನ್ನು ಪಡೆಯಲು ಅಥವಾ ಉತ್ಪಾದಿಸಲು, ಉದಾ:ಕೃಷಿಕ್ಷೇತ್ರದಲ್ಲಿನ ಉತ್ಪಾದನೆಗೆ, ಮೀನುಗಾರಿಕೆ, ಗಣಿಗಾರಿಕೆ, ಮುಂತಾದ ಶೇಖರಣಾ ಚಟುವಟಿಕೆಗಳಿಗೆ.

೨. ಕಚ್ಚಾಮಾಲುಗಳನ್ನು ಸಿದ್ಧ ವಸ್ತುಗಳಾಗಿ ಮಾರ್ಪಾಡಿಸಲು, ಉದಾ: ಉತ್ಪಾದನಾ ಕಾರ್ಯಗಳಿಗೆ.

೩. ಉತ್ಪಾದಿಸಿದ ವಸ್ತುಗಳನ್ನು ಉತ್ಪಾದನಾ ಕೇಂದ್ರದಿAದ ಅವು ಮಾರಾಟವಾಗುವ ಸ್ಥಳಗಳಿಗೆ ಕೊಂಡೊಯ್ಯಲು ಉದಾ. ಸಾರಿಗೆ, ವಿಮೆಯಂತಹ ಪೂರಕ ಚಟುವಟಿಕೆಗಳಿಗೆ.

೪. ಉತ್ಪನ್ನಗಳನ್ನು ಅವುಗಳ ಬಳಕೆದಾರರಿಗೆ ತಲುಪಿಸಲು, ಉದಾ. ವಸ್ತು  ಯಾ ಸೇವೆಯ ನಿರ್ವಹಣಾ ಜಾಲ ನಿರ್ವಹಣೆಗೆ.

ಮೇಲೆ ವಿವರಿಸಿದ ನಾಲ್ಕು ಉದ್ದೇಶಗಳಿಗೆ ಬಂಡವಾಳದ ಉಪಯೋಗವಾದಂತೆ ಕಾರ್ಮಿಕ ಶಕ್ತಿಯೂ ಉಪಯೋಗಿಸಲ್ಪಡುತ್ತದೆ. ಕಾರ್ಮಿಕ ಶಕ್ತಿ ಈ ರೀತಿ  ಉಪಯೋಗಿಸಲ್ಪಟ್ಟಾಗ ಅಂತಹ ವಸ್ತುಗಳ ಮೌಲ್ಯ ವೃದ್ಧಿಯಾಗುತ್ತದೆ. ಕಾರ್ಮಿಕ ಶಕ್ತಯ ಉತ್ಪಾದನಾ ಸಾಮರ್ಥ್ಯ ವೇತನ ನಿಧಿಯನ್ನವಲಂಬಿಸಿದೆ. (ವೇಜ್ ಫಂಡ್) ವೇತನ ನಿಧಿಯು ಉಳಿತಾಯ ಮಾಡಬೇಕೆನ್ನುವ ತುಡಿತವನ್ನವಲಂಬಿಸಿದೆ. ಉಳಿತಾಯದ ಮೇಲೆ ದೊರಕುವ ಪ್ರತಿಫಲವಾದ ಬಡ್ಡಿ ಸಂಚಯಿತವಾಗುತ್ತಾ ಹೋದಂತೆ ಸಂಪತ್ತು ವೃದ್ಧಿಯಾಗುತ್ತದೆ. ಇದು ಒಂದು ಸಾಮೂಹಿಕ ಕ್ರಿಯೆಯಾದಾಗ ದೇಶದಲ್ಲಿ ಉತ್ಪಾದಕತೆ ಹೆಚ್ಚುತ್ತದೆ. ಅಭಿವೃದ್ಧಿ ತಾನಾಗಿಯೇ ಆಗುತ್ತದೆ. ಇಂತಹ ಸಾಮೂಹಿಕ ಕ್ರಿಯೆಯಲ್ಲಿ ವ್ಯಕ್ತಿಗತ ಲಾಭ ಮತ್ತು ಸಾರ್ವಜನಿಕ ಹಿತಾಸಕ್ತಿಯ ನಡುವೆ ಸಮತೋಲನವನ್ನು ಅದೃಶ್ಯದ ಹಸ್ತ ತಾನಾಗಿಯೇ ನಿಯಂತ್ರಿಸುತ್ತದೆ. ಕಾರ್ಮಿಕ ಶಕ್ತಿ....... ಬಂಡವಾಳ ಸಂಚಯನ........ಉತ್ಪಾದಕತೆ..............ವಾಣಿಜ್ಯ ವಹಿವಾಟಿನ ಬೆಳವಣಿಗೆ.............ಅಧಿಕ ಲಾಭ......... ಸಾಮಾಜಿಕ ಅಭಿವೃದ್ಧಿ .........ಹೀಗೆ ಆರ್ಥಿಕ ಅಭಿವೃದ್ಧಿ ತನ್ನಿಂತಾನೇ ಆಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಹಿತಾಸಕ್ತಿಯನ್ನು ಹೀಗೆ ಕಾಯ್ದುಕೊಳ್ಳಬೇಕೆಂದು ಎಲ್ಲರಿಗಿಂತ ಹೆಚ್ಚಾಗಿ ತಿಳಿದಿರುತ್ತಾನೆ. ಆದ್ದರಿಂದ ಸರ್ಕಾರ ವ್ಯಕ್ತಿಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿರುವುದಿಲ್ಲ ಎನ್ನುವುದು ಶಾಸ್ತಿçÃಯ ಅರ್ಥಶಾಸ್ತçದ ಗ್ರಹೀತ.

ಇವತ್ತು ಜಗತ್ತಿನ ಅಭಿವೃದ್ಧಿ ಹೊಂದಿದ ಮುಂದುವರಿದ ದೇಶಗಳು. ಅಭಿವೃದ್ಧಿ ಶೀಲ ದೇಶಗಳಿಗೆ ಹೇಳುತ್ತಿರುವ ವಿಶ್ವ ಮಾರುಕಟ್ಟೆ, ಜಾಗತೀಕರಣ, ಮುಕ್ತ ಅರ್ಥವ್ಯವಸ್ಥೆಗಳೆಲ್ಲವೂ ಈ ಶಾಸ್ತಿçÃಯ ಅರ್ಥಶಾಸ್ತç ಪಾತಳಿಯ ಮೇಲೇಯೇ ನಿಂತಿರುವAತದ್ದಾಗಿವೆ. ಇಂತಹ ತತ್ವವನ್ನು ಆಧರಿಸಿದ ಅಭಿವೃದ್ಧಿ ನೀತಿಯನ್ನು ಅನುಸರಿಸುವ ಮೂಲಕ ಒಂದೇ ನೆಗೆತಕ್ಕೆ ಯಾವುದೇ ದೇಶ ಅಭಿವೃದ್ಧಿ ಹೊಂದುವುದು ಕಷ್ಟವೆಂದೇ ಹೇಳಬಹುದು. ಬದಲಾಗಿ ಈ ಕೆಲಸ ಹಂತ ಹಂತವಾಗಿ ಮುಂದುವರಿದು ಅಂತಿಮವಾಗಿ ಅಭಿವೃದ್ಧಿಯ ಮಟ್ಟವನ್ನು ತಲುಪಬಹುದು. ಡÀಬ್ಲೂö್ಯ,ಡಬ್ಲೂö್ಯ. ರಾಸ್ತೋವ್ ನ ಪ್ರಕಾರ ಎಲ್ಲ ದೇಶಗಳು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಈ ಕೆಳಗಿನ ಹಂತಗಳನ್ನು ದಾಟಿ ಹೋಗಬೇಕಾಗುತ್ತದೆ.

* ಪಾರಂಪರಿಕ ಸಮಾಜ

* ಮೇಲೆರುವುದಕ್ಕಿನ ಮುಂಚಿನ ಹಂತ

* ಮೇಲೆರುವ ಹಂತ

* ಪೂರ್ಣತೆಯತ್ತ ಚಲನೆಯ ಹಂತ

* ಅಧಿಕ ಸಾಮೂಹಿಕ ಬಳಕೆಯ ಹಂತ

ಅಭಿವೃದ್ಧಿ ಕುರಿತಾದ ಈ ತತ್ವಗಳು ಮತ್ತು ವ್ಯಾಖ್ಯೆಗಳಿಂದ ಸ್ಪಷ್ಟವಾಗುವ ಮುಖ್ಯವಾದ ಅಂಶಗಳೆAದರೆ ಉತ್ಪಾದನಾ ಪರಿಕರಗಳನ್ನು ದುಡಿಸಿಕೊಂಡÀÄ ಉತ್ಪಾದನೆಗಳನ್ನು ಹೆಚ್ಚಿಸುವುದು, ಉತ್ಪಾದನಾ ಪರಿಕರಗಳನ್ನು ದುಡಿಸಿಕೊಳ್ಳುವಾಗ ಉತ್ಪಾದನೆಯ ಪ್ರಮಾಣವನ್ನು ಅಧಿಕಗೊಳಿಸಲು ನಾವು ಉತ್ಪನ್ನ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ. ಇಂತಹ ತಂತ್ರಜ್ಞಾನವು ಆವಿಷ್ಕಾರದ ಫಲ. ಆವಿಷ್ಕಾರ ಸಾಧ್ಯವಾಗುವುದು, ಕಾರ್ಮಿಕ ಶಕ್ತಿಯ ವರ್ಗೀಕರಣದಿಂದ, ಕಾರ್ಮಿಕ ಶಕ್ತಿಯ ವರ್ಗೀಕರಣ ಸಾಧ್ಯವಾಗುವುದು ಬಂಡವಾಳ ಸಂಚಯನದಿAದ ಮ್ತು ಬಂಡವಾಳ ಸಂಚಯನ ಸಾಧ್ಯವಾಗುವುದು ಕಾರ್ಮಿಕ ವರ್ಗದ ಶ್ರಮದಿಂದ ಹಾಗೂ ಬಳಕೆಯ ಖರ್ಚನ್ನು ಕಡಿಮೆ ಮಾಡುವುದರಿಂದ.

ಅಭಿವೃದ್ಧಿಯ ಈ ವ್ಯಾಖ್ಯೆ, ದೋಷಮುಕ್ತವಾದುದಲ್ಲ ಎನ್ನುವುದಕ್ಕೆ ವಾಸ್ತಾವಿಕವಾಗಿ ನಮಗೆ ಬಹಳಷ್ಟು ಉದಾಹರಣೆಗಳು ದೊರೆಯುತ್ತವೆ. ರಾಷ್ಟಿçÃಯ ಆದಾಯ ಯಾ ತಲಾ ಆದಾಯ ಅಧಿಕವಿರುವ ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಎನ್ನುವುದು ನಿಖರವಾದ ವ್ಯಾಖ್ಯೆಯಲ್ಲ, ಉದಾಹರಣೆಗೆ, ಕುವೈತ್ ದೇಶದಲ್ಲಿನ ತಲಾ ಆದಾಯ ಅಧಿಕವಾಗಿದ್ದರೂ ನಾವದನ್ನು ಅಭಿವೃದ್ಧಿ ಹೊಂದಿದ ರಾಷ್ಟç ಎಂದು ಪರಿಗಣಿಸುವುದಿಲ್ಲ, ರಾಷ್ಟಿçÃಯ ಆದಾಯ ಅಧಿಕವಿದ್ದಾಗಲೂ ತಲಾ ಆದಾಯ ನಿಜವಾಗಿ ಕಡಿಮೆಯಿರಬಹುದು. ಇದಕ್ಕೆ ಕಾರಣ ಸಂಪತ್ತಿನ ಕ್ರೋಢೀಕರಣ ಕೆಲವೇ ವರ್ಗಗಳಲ್ಲಿ ಆಗಿರುವುದು. ಅಭಿವೃದ್ಧಿ ಹೊಂದಲು ಹಂತಗಳು ಎಲ್ಲ ದೇಶಗಳಿಗೂ ಏಕರೂಪದಲ್ಲಿರಲು ಸಾಧ್ಯವಿಲ್ಲ. ಯಾಕೆಂದರೆ ಅಭಿವೃದ್ಧಿ ದೇಶದ ವಿವಿಧ ಸಂಪನ್ಮೂಲಗಳನ್ನು ಅವಲಂಬಿಸಿದೆ. ಕೆಲವೊಂದು ದೇಶಗಳಂತೂ ರಾಸ್ತೋವ್ ಹೇಳಿರುವ ಹಂತಗಳನ್ನು ಹಾದು ಹೋಗಿರುವುದೇ ಆಲ್ಲ. ಉದಾಹರಣೆಗೆ, ಅಮೇರಿಕಾದ ಸಂಯುಕ್ತ ಸಂಸ್ಥಾನಗಳು, ಕೆನಡಾ, ನ್ಯೂಜಿಲ್ಯಾಂಡ್, ಆಸ್ಟೆçÃಲಿಯಾ...... ಇತ್ಯಾದಿ ದೇಶಗಳು ಕ್ಲಾಸಿಕಲ್ ಅರ್ಥಶಾಸ್ತçಜ್ಞರು ಹೇಳುವ ಅಭಿವೃದ್ಧಿ ನೀತಿಯಿಂದ ಮತ್ತು ಅದರ ಅನುಷ್ಠಾನದಿಂದ ರಾಷ್ಟಿçÃಯ ಆದಾಯದಲ್ಲಿ ತಲಾ ಆದಾಯದಲ್ಲಿ ಏರಿಕೆಯಾಗಿ ಜನರಿಗೆ ಮೊದಲಿಗಿಂತಲೂ ಹೆಚ್ಚು ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ ಮತ್ತು ಅವರು ಸುಖದಿಂದ ಇರಬಹುದು ಎಂಬಿತ್ಯಾದಿ ವಿವರಣೆಗಳು ಸರಿಯಲ್ಲ ಅಭಿವೃದ್ಧಿ ಎನ್ನುವುದು ಕೇವಲ ಆರ್ಥಿಕ ಕಲ್ಯಾಣವಾಗಲೀ ಸಾಮಾಜಿಕ ಏಳಿಗೆಯಾಗಲೀ ಅಲ್ಲ, ಯಾಕೆಂದರೆ ಪ್ರಚಲಿತ ನಾವಂದುಕೊAಡಿರುವ ಮತ್ತು ಸಾಧಿಸಬಯಸುತ್ತಿರುವ ಅಭಿವೃದ್ಧಿಯ ಮಾದರಿ, ಹಲವಾರು ರೀತಿಯ ಅಪಾಯಕಾರಿ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಅಭಿವೃದ್ಧಿ ಸಂಪತ್ತು ಸೃಷ್ಟಿಸುವುದು ಮಾತ್ರÀವಲ್ಲದೇ ಸಾಮಾಜಿಕ ಸಂಸ್ಥೆಗಳ ಮೇಲೆ, ಜನರ ಅಭ್ಯಾಸ, ನಂಬಿಕೆ, ಮೌಲ್ಯಗಳ ಮೇಲೆ, ಅಗಾಧವಾದ ಪರಿಣಾಮವನ್ನುಂಟುಮಾಡುತ್ತದೆ. ಆದಾಯದ ಅಸಮರ್ಪಕ ವಿತರಣೆ ಸಮಾಜದ ವಿವಿಧ ವರ್ಗಗಳ ಮಧ್ಯೆ, ಒತ್ತಡವನ್ನು ಹೆಚ್ಚಿಸಿದೆ. ಜಾಗತಿಕವಾಗಿ ಕೂಡಾ ಸಂಪತ್ತಿನ ಅಸಮರ್ಪಕ ವಿತರಣೆಯು ದೇಶಗಳ ಮಧ್ಯೆ, ಪ್ರಾಂತ್ಯಗಳ ಮಧ್ಯೆ ಪೈಪೋಟಿಯನ್ನು ನಿರ್ಮಿಸಿದೆ. ನಿಜ ಸ್ಥಿತಿ ಹೀಗಿರುವಾಗ ಅಭಿವೃದ್ಧಿಯ ಸಂಕೇತಗಳಾದ ರಾಷ್ಟಿçÃಯ ಆದಾಯದಲ್ಲಿ ಹೆಚ್ಚಳ ಮತ್ತು ತಲಾ ಆದಾಯದಲ್ಲಿ ಏರಿಕೆಯುಂಟಾದಾಗ ಸುಖ ಸಮೃದ್ಧಿ ಒದಗಿ ಬರುತ್ತದೆ ಎನ್ನುವುದು ವಾಸ್ತವಿಕತೆಗೆ ದೂರವಾದ ಹೇಳಿಕೆಯಾಗಿದೆ. ಅರ್ಥಶಾಸ್ತçದ ಮೂಲ ಆಶಯವಾದ ಮನುಷ್ಯನ ಬಯಕೆÀಯನ್ನು ಈಡೇರಿಸುವ ಮೂಲಕ ತೃಪ್ತಿ ಹೆಚ್ಚಿಸುವ ಉದ್ದೇಶ ಏನಿದೆಯೋ, ಅದಕ್ಕಿಂತ ಅಭಿವೃದ್ಧಿಯ ಕುರಿತ ವಸ್ತುಸ್ಥಿತಿ ತೀರಾ ಭಿನ್ನವಾಗಿದೆ, ತಲಾ ಆದಾಯ ಮತ್ತು ರಾಷ್ಟಿçÃಯ ಆದಾಯದಲ್ಲಿ ಏರಿಕೆಯಾದಾಗಲೂ ಇದು ಗಂಭೀರ ತೆರನಾದ ಸಮಸ್ಯೆಗಳನ್ನು ಸೃಷ್ಟಿಸಿದೆ. ಕೊಲಂಬಿಯಾ ದೇಶದ ಕುರಿತಾದ ಅಂತಾರಾಷ್ಟಿçÃಯ ವರದಿಯಲ್ಲಿ ಹೇಳುವಂತೆ ಆರ್ಥಿಕ ಬೆಳವಣಿಗೆಯ ಕುರಿತಾದ ಅತೃಪ್ತಿಗೆ ಮೂಲಕಾರಣ ಇಂತಹ ಬೆಳವಣಿಗೆಯಾದರೂ, ಇದರೊಂದಿಗೆ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆ, ಬಡವ ಶ್ರೀಮಂತರ ನಡುವಿನ ಅಂತರದ ಹೆಚ್ಚಳ, ಹಳ್ಳಿ ಮತ್ತು ಪಟ್ಟಣದ ಜನರ ಆದಾಯದಲ್ಲಿ ಅಸಮತೋಲನ ಮುಂತಾದುವುಗಳಿAದಾಗಿ ಹೆಚ್ಚು ಪ್ರಮಾಣದ ಜನ ಬಡತನದ ರೇಖೆಗಿಂತ ಕೆಳಗೆ ಕುಸಿಯುತ್ತಿರುವುದು ದಾಖಲಾಗಿದೆ. ಅಭಿವೃದ್ಧಿಯ ವೇಗವನ್ನು, ಪ್ರಮಾಣವನ್ನು ಹೆಚ್ಚಿಸಿದಂತೆಲ್ಲಾ ಮೇಲಿನ ಸಮಸ್ಯೆಗಳು ಪೂರ್ತಿ ಬಗೆಹರಿಯುವ ಮೊದಲು ಸಮಸ್ಯೆಯ ತೀವ್ರತೆ ಅಧಿಕವಾಗುತ್ತ ಹೋಗುತ್ತಲಿದೆ. ಈ ಕಾರಣದಿಂದಾಗಿ ಅಭಿವೃದ್ಧಿಯ ಸ್ವಭಾವ ಮತ್ತು ಪ್ರಕ್ರಿಯೆಯಲ್ಲಿ ಬದಲಾವಣೆಯ ಅಗತ್ಯವಿದೆ. ಪಾಕಿಸ್ಥಾನ ಸರಕಾರದ ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಂತೆ ಅಭಿವೃದ್ಧಿಯೆನ್ನುವುದು ಬಡತನ, ಪೌಷ್ಠಿಕ ಆಹಾರದ ಕೊರತೆ, ಹಸಿವು, ರೋಗ, ಅನಕ್ಷರತೆ, ಅಸಮಾನತೆ ಮುಂತಾದವುಗಳ ಮೇಲಿನ ಸಮರವಾಗಬೇಕು. ನಾವಂದು ಕೊಂಡಿರುವ ರಾಷ್ಟಿçÃಯ ಉತ್ಪನ್ನ ಹೆಚ್ಚಿದಾಗ ಬಡತನ ಮಾಯವಾಗಲಿದೆ ಎನ್ನುವ ನಂಬಿಕೆ ತಿರುವವು ಮುರುವಾಗಬೇಕು. ಬಡತನದ ಮೇಲೆ ಸಾರುವ ನಿರಂತರ ಸಮರ ಯಶಸ್ವಿಯಾದಾಗ ರಾಷ್ಟಿçÃಯ ಉತ್ಪನ್ನ ತಾನೇ ತಾನಾಗಿ ಹೆಚ್ಚುತ್ತದೆ. ತೃತೀಯ ಜಗತ್ತಿನ ರಾಷ್ಟçಗಳ ರಾಷ್ಟಿçÃಯ ಉತ್ಪನ್ನದಲ್ಲಿ ೧೯೬೦ರಿಂದೀಚೆಗೆ ಶೇಕಡಾ ಐವತ್ತರಷ್ಟು ಅಭಿವೃದ್ಧಿಯಾಗಿದ್ದರೂ ಮೂರನೇ ಎರಡಂಶ ಜನ ಹಸಿವಿನಿಂದ ಬಳಲುತ್ತಿದ್ದಾರೆ. ಆದಾಯ ವಿತರಣೆಯಲ್ಲಿ ಅಸಮತೋಲನ ಹಿಂದೆAದಿಗಿAತಲೂ ಅಧಿಕವಾಗಿದೆ. ಜಾಗತಿಕ ಮಟ್ಟದಲ್ಲಿಯೂ ಇದೇ ತೆರನಾದ ಅಭಿವೃದ್ಧಿಯ ಫಲ ಉಳ್ಳವರ ಪಾಲಿಗೆ ದಕ್ಕಿದೆ. ಇಲ್ಲದವರು ಇನ್ನೂ ಬಡವರಾಗಿದ್ದಾರೆ. ಇದರಿಂದ ದೇಶಗಳೊಳಗೆ, ದೇಶದೊಳಗಿನ ವಿವಿಧ ಸಾಮಾಜಿಕ ವರ್ಗಗಳೊಳಗೆ ಅತೃಪ್ತಿ ಪ್ರಕ್ಷÄಬ್ಧತೆ ಹುಟ್ಟಿಕೊಂಡಿದೆ. ನಾವು ಸಾಧಿಸಿದ ಇದುವರೆಗಿನ ಅಭಿವೃದ್ಧಿಯನ್ನು ಗಮನಿಸಿದಾಗ ಕಂಡು ಬರುವ ಅಂಶಗಳೆAದರೆ:

೧. ತಲಾ ಆದಾಯದಲ್ಲಿ ಶೇಕಡಾ ೩.೫ರ ಪ್ರಮಾಣದಲ್ಲಿ ವೃದ್ಧಿಯಾಗುತ್ತಲಿರುವಾಗ ಬಡಜನರ ಆದಾಯದಲ್ಲಿ ತೀವ್ರ ಪ್ರಮಾಣದ ಇಳಿಮುಖ ಕಂಡು ಬರುತ್ತಿದೆ.

೨. ಅಧಿಕ ಪ್ರಮಾಣದಲ್ಲಿ ಸಂಪತ್ತು ಸೃಷ್ಟಿಯಾಗಿರುವುದು ಸತ್ಯ.

೩. ಬಡಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಲು ಅಧಿಕ ಪ್ರಮಾಣದಲ್ಲಿ ಅಭಿವೃದ್ಧಿ ಅವಶ್ಯಕವಾದರೂ, ಇಂತಹ ಅಭಿವೃದ್ಧಿ ಬಡಜನರ ಸ್ಥಿತಿಯನ್ನು ಖಂಡಿತ ಸುಧಾರಿಸುತ್ತದೆ ಎಂದು ಹೇಳಲಾಗುವುದಿಲ್ಲ.

೪. ಮಾನವ ಸಂಪನ್ಮೂಲ ಕೇಂದ್ರಿತ ಉತ್ಪಾದನಾ ಕ್ರಮಗಳನ್ನು ಅನುಸರಿಸಿದ ಅಭಿವೃದ್ಧಿಯ ದರದಲ್ಲಿ ಏರಿಕೆಯಿದ್ದಾಗ ಮಾತ್ರ ಶೇಕಡಾ ೪೦ರಷ್ಟು ಕಡುಬಡತನವಿರುವ ಜನರ ಆದಾಯದಲ್ಲಿ ಏರಿಕೆ ಕಂಡು ಬಂದಿದೆ.

ಇಲ್ಲಿ ನಮಗೆ ಸ್ಪಷ್ಟವಾಗುವ ವಿಚಾರವೆಂದರೆ ನಮ್ಮಲ್ಲಿ ರಾಷ್ಟಿçÃಯ ಉತ್ಪನ್ನ ಮತ್ತು ತಲಾ ಆದಾಯದಲ್ಲಿ ಹೆಚ್ಚಳ ಉಂಟುಮಾಡುವುದರಿAದ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆ ಇದೆ. ಬಡದೇಶಗಳಲ್ಲಿ ಸಂಪನ್ಮೂಲವಿದೆ ಆದರೆ ಬಂದವಾಳ ಮತ್ತು ತಂತ್ರಜ್ಞಾನದ ಕೊರೆತೆಯಿದೆ; ಬಡದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಅಧುನಿಕ ತಂತ್ರಜ್ಞಾನ ಮತ್ತು ಬಂಡವಾಳವನ್ನು ಒದಗಿಸಿಕೊಡಬೇಕು; ಇದನ್ನು ಬಳಸಿಕೊಂಡು ಬಡದೇಶಗಳು ಉತ್ಪಾದನೆ ಹೆಚ್ಚಿಸಿ, ತಲಾ ಆದಾಯ ಹೆಚ್ಚಿಸಿ ಅಭಿವೃದ್ಧಿ ಹೊಂದುವುದು ಸಾಧ್ಯ ಎಂಬ ನಂಬಿಕೆ ಕೆಲಸ ಮಾಡುತ್ತಿದೆ. ಆದರೆ ಮಹಾಯುದ್ಧದ ನಂತರದಲ್ಲಿ ಸುಮಾರು ಐದು ದಶಕಗಳಷ್ಟು ಕಾಲ ನಿರಂತರ ನಡೆದ ಈ ಅಭಿವೃದ್ಧಿಯ ಪ್ರಯತ್ನಗಳ ಹೊರತಾಗಿಯೂ ಹಸಿವು ಅನಕ್ಷರತೆ, ಪೌಷ್ಠಿಕಾಂಶದ ಕೊರತೆಯಿಂದ ಜನ ಕಂಗೆಟ್ಟಿದ್ದಾರೆ, ಮಿಲಿಯನ್‌ಗಟ್ಟಲೆ ಹಣವನ್ನು ಸಾಲವಾಗಿ ಪಡೆದು, ತಂತ್ರಜ್ಞಾನವನ್ನು ಎರವಲು ಪಡೆದು ಬಡದೇಶಗಳು ಅಭಿವೃದ್ಧಿ ಹೊಂದಲು ಮಾಡಿದ ಎಲ್ಲ ಸಾಹಸಗಳ ಹೊರತಾಗಿಯೂ ಅವರ ಪರಿಸ್ಥಿತಿಯಲ್ಲಿ ಬಹಳ ದೊಡ್ಡ ಬದಲಾವಣೆ ಆಗಿಲ್ಲ. ಆದರೆ ಶ್ರೀಮಂತ ರಾಷ್ಟçಗಳು ಮಾತ್ರ ಎಂದಿನAತೆ ಸಂಪತ್ತಿನಲ್ಲಿ ಮುಳುಗಿ ಹೋಗಿವೆ. ಬೇಡಿಕೆಯನ್ನು ಸರಿದೂಗಿಸಲು ಟನ್ನುಗಟ್ಟಲೆ ಆಹಾರವನ್ನು ಸಮುದ್ರಕ್ಕೆ ಚೆಲ್ಲುತ್ತಿವೆ. ಹೀಗಾಗಿ ಅಭಿವೃದ್ಧಿ ಎಂದರೆ, ಅಭಿವೃದ್ಧಿ ಹೊಂದಿದ ದೇಶಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು, ತಂತ್ರಜ್ಞಾನ ವರ್ಗಾವಣೆ ಮಾಡಲು, ಬಡದೇಶಗಳ ಮಾನವ ಸಂಪನ್ಮೂಲ ಬಳಕೆ ಮೂಲಕ ಸಾಧಿಸಿದ ಪ್ರಗತಿಯನ್ನುಳಿಸಿ ಕೊಳ್ಳಲು ಹೂಡಿದ ಒಂದು ಉಪಾಯವಾಗಿದೆ ಎನ್ನುವ ಅಭಿಪ್ರಾಯ ಮೂಡುತ್ತದೆ. ಉತ್ಪಾದಿತವಾಗಿರುವ ವಸ್ತುಗಳು, ಅಂತಹ ಉದ್ದೇಶಕ್ಕೆ ಬಳಕೆಯಾದಾಗ ಮಾತ್ರ ಅದಕ್ಕೆ ಮೌಲ್ಯವಿದೆ ಹೊರತು ದುಡ್ಡಿದ್ದವರಿಗೆ ಸೇರಿದಾಗ ಅಲ್ಲ, ಉತ್ಪಾದನೆಯಾದ ವಸ್ತು ಮತ್ತು ಸರಕುಗಳು ಸಮಾನವಾಗಿ ವಿರತಣೆಯಾಗಿ ಸಂಪತ್ತಿನ ಸಮಾನ ಹಂಚಿಕೆಯಾಗಿ, ಬಡತನ ಸಿರಿತನ ನಡುವಿನ ಅಂತರ ಕಡಿಮೆಯಾಗಿ ಒಂದು ರೀತಿಯ ಸಾಮಾಜಿಕ ಸ್ಥಿರತೆ, ಆರ್ಥಿಕ ಸಮಾನತೆ, ಆರ್ಥಿಕ ಏಳಿಗೆಯಾದರೆ ಅದನ್ನು ಅಭಿವೃದ್ಧಿ ಎನ್ನಬಹುದು.

ಅಂತಾರಾಷ್ಟಿçÃಯ ದ್ರವ್ಯನಿಧಿ ಮತ್ತು ವಿಶ್ವಬ್ಯಾಂಕ್ ಅಥವಾ ಜಾಗತಿಕ ಬ್ಯಾಂಕ್

ಅಮೆರಿಕಾದ ಸಂಯುಕ್ತ ಸಂಸ್ಥಾನ ಎರಡನೆಯ ವಿಶ್ವಯುದ್ಧದ ಗರಿಷ್ಠ ಪ್ರಯೋಜನ ಪಡೆದ ದೇಶವಾಗಿದೆ. ಯುದ್ಧಕಾಲದಲ್ಲಿ ಈ ದೇಶ ರಕ್ಷಣಾ ಸಾಮಾಗ್ರಿ ಉತ್ಪಾದಿಸಿ ಯುದ್ಧ ನಿರತ ದೇಶಗಳಿಗೆ ಪೂರೈಸುವ ಮೂಲಕ ಈ ದೇಶದ ಉದ್ಯಮವಲಯ ಸಂಪತ್ತು ಕ್ರೋಢೀಕರಿಸಿತು. ಆದರೆ ಕ್ರೋಢೀಕೃತ ಸಂಪತ್ತು ಜಡವಾಗಿದ್ದರೆ ಅದರಿಂದ ಯಾರಿಗೆ ಏನೂ ಲಾಭವಿಲ್ಲ. ಮತ್ತೊಂದು ಕಡೆ ಯದ್ಧದಿಂದ ಜರ್ಝರಿತವಾಗಿದ್ದ ಹಲವಾರು ದೇಶಗಳು ತಮ್ಮ ಇಡೀ ಅರ್ಥ ವ್ಯವಸ್ಥೆಯನ್ನು ಸಾಮಾಜಿಕ ವಲಯವನ್ನು ಪುನರಚಿಸಬೇಕಾಗಿತ್ತು. ಈ ಹಂತದಲ್ಲಿ ಅಮೆರಿಕಾ ಯುದ್ಧದಿಂದ ಕಂಗೆಟ್ಟಿದ್ದ ದೇಶಗಳ ನೆರವಿಗೆ ಬಂದಿತು. ಈ ಹಂತದಲ್ಲಿ ಮುಂದುವರಿದ ದೇಶಗಳ ವಸಾಹತುಗಳಾಗಿದ್ದ ಬಹಳಷ್ಟು ದೇಶಗಳು ಸ್ವಾತಂತ್ಯçವನ್ನನುಭವಿಸಿ ಸುಖೀ ರಾಷ್ಟç ನಿರ್ಮಿಸುವ ಹುರುಪಿನಲ್ಲಿದ್ದುವು. ಇಂತಹ ಒಂದು ಸಂದರ್ಭದಲ್ಲಿ ಜಗತಿಕ ಮಟ್ಟದಲ್ಲಿ ಅಮೇರಿಕಾದ ಮುಂದಾಳತ್ವದಲ್ಲಿ ಈ ಎರಡು ಸಂಸ್ಥೆಗಳು ಅಸ್ತಿತ್ವಕ್ಕೆ ಬಂದುವು. ಮೇಲ್ನೋಟಕ್ಕೆ ಅಂತಾರಾಷ್ಟಿçÃಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಸ್ವಾಯತ್ವ ಸಂಸ್ಥೆ ಎಂದು ಕಂಡುಬAದರೂ ವಾಸ್ತವ ಸ್ಥಿತಿ ಹಾಗಿಲ್ಲ ಇದುವರೆಗಿನ ಚರಿತ್ರೆಯನ್ನು ಅರ್ಥ ಮಾಡಿಕೊಂಡರೆ ಅಮೆರಿಕಾ ಯಾವ ರೀತಿಯಲ್ಲಿ ಈ ಎರಡು ಜಾಗತಿಕ ಹಣಕಾಸು ಸಂಸ್ಥೆಗಳ ಮೂಲಕ ತನಗೆ ಸರಿಯೆನಿಸುವ ರೀತಿಯಲ್ಲಿ ತನ್ನಮೂಗಿನ ನೇರಕ್ಕೆ ಇಡೀ ವಿಶ್ವಸಮುದಾಯವನ್ನು ಪಳಗಿಸುವ ಕೆಲಸ ಮಾಡುತ್ತಿದೆಯೆನ್ನುವುದು ತಿಳಿದು ಬರುತ್ತದೆ.

ಅಂತಾರಾಷ್ಟಿçÃಯ ದ್ರವ್ಯನಿಧಿ, ಸದಸ್ಯ ರಾಷ್ಟçಗಳ ಪಾವತಿ ಸಮತೋಲನ ಕಾಯ್ದುಕೊಳ್ಳಲು ಮತ್ತು ಇದಕ್ಕೆ ಸಂಬAಧಿಸಿದAತೆ ಅಪ್ಪಾವಧಿ ಹಣಕಾಸು ತೊಂದರೆಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಅಲ್ಪಾವಧಿ ಸಮಸ್ಯೆಗಳ ಮೂಲ ದೀರ್ಘಾವಧಿ ಬೆಳವಣಿಗೆಯ ಮೇಲೂ ಅವಲಂಬಿತವಾಗಿರುವುದರಿAದ ಅರ್ಥ ವ್ಯವಸ್ಥೆ ಸಮರ್ಥವಾಗಿ ಅಭಿವೃದ್ಧಿ ಹೊಂದಬೇಕಾಗಿರುವುದು ಅವಶ್ಯಕ. ಆದ್ದರಿಂದ ಬಂಡÀವಾಳ ತೊಡಗಿಸಿ ತಾಂತ್ರಿಕತೆಯನ್ನು ಉಪಯೋಗಿಸಿ ರಾಷ್ಟಿçÃಯ ಆದಾಯ ಮತ್ತು ತಲಾ ಆದಾಯದಲ್ಲಿ ಏರಿಕೆಯನ್ನುಂಟುಮಾಡುವುದು ವಿಶ್ವಬ್ಯಾಂಕ್‌ನ ಮುಖ್ಯ ಉದ್ದೇಶ. ಆ ಎರಡೂ ಸಂಸ್ಥೆಗಳ ಘೋಷಿತ ಉದ್ದೇಶಗಳನ್ನು ಗಮನಿಸೋಣ.

ಅಂತರಾಷ್ಟಿçÃಯ ಹಣಕಾಸು ನಿಗಮದ ಘೋಷಿತ ಉದ್ದೇಶಗಳು

೧. ಅಂತಾರಾಷ್ಟಿçÃಯ ಹಣಕಾಸು ವಿಚರ ಸಂಬAಧಿ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಸಹಕಾರ ಸಾಧಿಸಲು ಒಂದು ಸೂಕ್ತ ವೇದಿಕೆಯನ್ನೊದಗಿಸುವುದು.

೨. ಅಂತಾರಾಷ್ಟಿçÃಯ ವ್ಯಾಪಾರವನ್ನು ವೃದ್ಧಿಸುತ್ತಾ ಸಮತೋಲನವನ್ನು ಕಾಯ್ದಕೊಂಡು, ಸದಸ್ಯ ರಾಷ್ಟçಗಳ ಉತ್ಪಾದನೆ ಹೆಚ್ಚಾಗಲು, ತಲಾ ಆದಾಯ ಹೆಚ್ಚಾಗಲು ಸಹಾಯ ಮಾಡುವುದು.

೩. ಸದಸ್ಯ ರಾಷ್ಟçಗಳ ಹಣದ ವಿನಿಮಯ ದರದಲ್ಲಿ ಸ್ಥಿರತೆಯನ್ನು ಕಾಯ್ದಕೊಳ್ಳುವುದು ಮತ್ತು ಪ್ರತಿ ಸ್ಪರ್ಧೆಯಿಂದಾಗಿ ವಿನಿಮಯ ದರದಲ್ಲಿ ಉಂಟಾಗುವ ಸವಕಳಿಯನ್ನು ತಡೆಗಟ್ಟುವುದು.

೪. ವ್ಯಾಪಾರ ಸಂಬAಧಿ ವಿನಿಮಯದಲ್ಲಿರುವ ತೊಂದರೆಯನ್ನು ನಿವಾರಿಸುವುದು ಮತ್ತು ಬಹುಮುಖಿ ವಯಾಪಾರ ಮತ್ತು ಪಾವತಿಯನ್ನು ಸಾಧ್ಯವಾಗಿಸುವುದು. ಸದಸ್ಯ ರಾಷ್ಟçಗಳಿಗೆ ವ್ಯಾಪಾರ ಸಂಬAಧಿ ಪಾವತಿ ಸಮಸ್ಯೆಗಳೆದುರಾದಾಗ ಅವರಿಗೆ ಅಂತಾರಾಷ್ಟಿçÃಯ ದ್ರವ್ಯನಿಧಿಯಿಂದ ಸಾಲ ಒದಗಿಸುವುದು. ಇದರಿಂದಾಗಿ ಸದಸ್ಯ ದೇಶಗಳು ಸಮಸ್ಯೆಗಳೆದುರಾದಾಗ ಕಂಗಾಲಾಗದೆ ಅಭಿವೃದ್ಧಿ ಕಾರ್ಯಗಳತ್ತ ನಿಗಾ ಹರಿಸಲು ಸಾಧ್ಯವಾಗುವುದು.

೫. ಅಂತರಾಷ್ಟಿçÃಯ ಪಾವರಿ ಸಮಸ್ಯೆಯ ಕುರಿತು ಅವಧಿ ಮತ್ತು ಮೊತ್ತವನ್ನು ಕಡಿಮೆಗೊಳಿಸಿ ಸದಸ್ಯ ರಾಷ್ಟçಗಳು ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸಹಕರಿಸುವುದು.

ವಿಶ್ವ ಬ್ಯಾಂಕ್ ನ ಘೋಷಿತ ಉದ್ದೇಶಗಳು

೧. ಉತ್ಪಾದಕ ಉದ್ದೇಶಗಳಿಗಾಗಿ ಬಂಡವಾಳ ಹೂಡಿಕೆ ಹೆಚ್ಚಿಸಿ ತನ್ಮೂಲಕ ಸದಸ್ಯ ರಾಷ್ಟçಗಳ ಪುನರುತ್ಥಾನ ಅಥವಾ ಪುನರ್ ನಿರ್ಮಾಣ ಸಾಧಿಸುವುದು.

೨. ವಿದೇಶೀ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸಿ ಅಭಿವೃದ್ಧಿ ಕಾರ್ಯವನ್ನು ಉತ್ಕರ್ಷಿಸುವಂತೆ ಮಾಡುವುದು, ಇಂತಹ ಕಾರ್ಯಗಳನ್ನು ಸಾಧಿಸಲು ಅನುಸರಿಸುವ ವಿಧಾನಗಳೆಂದರೆ, ಬ್ಯಾಂಕ್ ಯಾ ಖಾಸಗೀ ಬಂಡವಾಳ ಹೂಡಿಕೆದಾರರು ವಿದೇಶಗಳಲ್ಲಿ ಬಂಡವಾಳ ಹೂಡಿದಾಗ ಅದಕ್ಕೆ ಭದ್ರತೆಯ ದೃಷ್ಟಿಯಿಂದ ಖಾತರಿ ನೀಡುವುದು (ಗ್ಯಾರಂಟಿ ನೀಡುವುದು) ಅಥವಾ ಅಂತಹ ಬಂಡವಾಳ ಹೂಡಿಕೆಯಲ್ಲಿ ಬ್ಯಾಂಕ್ ಕೂಡಾ ಭಾಗವಹಿಸುವುದು. ದೀರ್ಘಾವಧಿ ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಉತ್ಪಾದನೆಯನ್ನು ವೃದ್ಧಿಸಿ ಜನರ ಜೀವನ ಮಟ್ಟವನ್ನು ಹೆಚ್ಚಿಸುವುದು. ಅಲ್ಲದೆ ಈ ರೀತಿಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ವಿದೇಶೀ ವ್ಯಾಪಾರದಲ್ಲಿ ಸಮತೋಲನ ಕಾಯ್ದ ಕೊಳ್ಳಲು ಸಹಾಯ ನೀಡುವುದು.

೩. ಯುದ್ಧ ಕಾಲದ ಅರ್ಥವ್ಯವಸ್ಥೆಯನ್ನು ಶಾಂತಿಕಾಲದ ಅರ್ಥವ್ಯವಸ್ಥೆಯಾಗಿ ಪರಿವರ್ತಿಸಲು ಸಹಕರಿಸುವುದು.

ದ್ರವ್ಯನಿಧಿ ಮತ್ತು ಜಾಗತಿಕ ಬ್ಯಾಂಕ್ ಯಾವುದೆ ಖಾಸಗೀ ರಂಗದೊAದಿಗೆ ಅಥವಾ ಖಾಸಗೀ ಸಂಸ್ಥೆಗಳೊAದಿಗೆ ವ್ಯವಹಾರ ನಡೆಸುವುದಿಲ್ಲ. ಸರಕಾರಗಳೊಂದಿಗೆ ಮಾತ್ರ ವ್ಯವಹರಿಸುತ್ತವೆ. ಮೇಲ್ನೋಟಕ್ಕೆ ಇವುಗಳ ಉದ್ದೇಶಗಳು ಆಕರ್ಷಕವಾಗಿ ಕಂಡುಬAದರೂ ಅಂತಿಮ ಗುರಿ ಘೋಷಿತ ಉದ್ದೇಶಗಳಿಗಿಂತ ಬೇರೆಯೇ ಆಗಿದೆ ಎನ್ನುವುದು ಈ ಎರಡೂ ಸಂಸ್ಥೆಗಳು ಪ್ರಾರಂಭದ ದಿನದಿಂದ ಇದುವರೆಗೆ ಅನುಸರಿಸುತ್ತಾ ಬಂದ ಸಹಾಯ ಯೋಜನೆಗಳಿಂದ ತಿಳಿದು ಬರುತ್ತದೆ. ೧೯೭೮ರ ವಿಶ್ವ ಅಭಿವೃದ್ಧಿ ವರದಿ ದಿಗ್ಭçಮೆ ಹುಟ್ಟಿಸುವ ಸತ್ಯವನ್ನು ಹೊರತಂದಿತು. ಅದೆಂದರೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನಿಗದಿ ಮಾಡಿದ ಗುರಿಯನ್ನು ೧೯೮೫ರ ರೊಳಗಿನ ಕಲಾವಧಿಯಲ್ಲಿ ಸಾಧಿಸಿದರೂ ಮತ್ತು ಅಭಿವೃದ್ಧಿ ಪ್ರಯತ್ನಗಳು ಅದೇ ವೇಗದಲ್ಲಿ ತದನಂತರ ಹದಿನೈದು ವರ್ಷಗಳಷ್ಟು ಕಾಲ ಮುಂದುವರಿದರೂ ಜಗತ್ತಿನಲ್ಲಿ ಇನ್ನೂ ೬೦೦ ಮಿಲಯ ಜನ ಬಡತನದಲ್ಲಿಯೇ ಉಳಿಯಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ವಿಶ್ವಬ್ಯಾಮಕ್ ಸಮೂಹ ನೀಡುತ್ತಿರುವ ಸಾಲ/ಸಹಾಯದ ಮೊತ್ತ ಅಧಿಕ ಪ್ರಮಾಣದ್ದೆನಿಸಿದರೂ ವಾಸ್ತವಿಕವಾಗಿ ಬಡದೇಶಗಳಿಂದ ಶ್ರೀಮಂತರಿಗೆ ಹರಿದು ಹೋಗುವ ಹಣವೇ ಅಧಿಕವಿದೆ ಎಂದರೆ ನಂಬುವುದು ಕಷ್ಟ. ಆದರೆ ಇದು ನಿಜಸ್ಥಿತಿ. ಇದರಿಂದಾಗಿ ಉತ್ಪಾದನೆಯಲ್ಲಿ ವೃದ್ಧಿಯಾದರೂ ಬಡದೇಶಗಳ ಜನರ ಜೀವನ ಮಟ್ಟ ಸುಧಾರಣೆಯಾಗುತ್ತಲಿಲ್ಲ. ಎಂದರೆ ಶ್ರೀಮಂತ ರಾಷ್ಟçಗಳ ತಂತ್ರಜ್ಞಾನ ಮತ್ತು ಬಂಡವಾಳ ಹೂಡಿಕೆಗೆ ಬಡರಾಷ್ಟçಗಳು ಬಲಿಪಶುಗಳಾಗುತ್ತÀಲಿವೆ. ಶ್ರೀಮಂತ ದೇಶಗಳು ಈಗಾಗಲೇ ಸಾಧಿಸಿದ ಅಭಿವೃದ್ಧಿಯನ್ನು ಉಳಿಸಿಕೊಳ್ಳಲು ಇಂತಹ ಕ್ರಮ ಅನಿವಾರ್ಯ. ಬಹಳಷ್ಟು ದೇಶಗಳ ಅರ್ಥಶಾಸ್ತçಜ್ಞರಿಗೆ ಈ ಕಟು ಸತ್ಯದ ಅರಿವಿದ್ದರೂ ಶ್ರೀಮಂತ ರಾಷ್ಟçಗಳನ್ನು ಎದುರು ಹಾಕಿಕೊಳ್ಳುವ ಹಾಗಿಲ್ಲ, ಏಕೆಂದರೆ ವ್ಯಾಪಾರ ವ್ಯವಸ್ಥೆ, ತಂತ್ರಜ್ಞಾನ, ರಾಜಕೀಯನೀತಿ, ಮಿಲಿಟರಿಬಲ ಮುಂತಾದವುಗಳ ಮೂಲಕ ಬಡರಾಷ್ಟçಗಳನ್ನು ಹಾಳುಗೆಡಹಬಲ್ಲ ಸಾಮರ್ಥ್ಯ ಶ್ರೀಮಂತ ರಾಷ್ಟçಗಳಿಗೆ ಕರತಲಾಮಲಕವಾಗಿದೆ. ಮಾತ್ರವಲ್ಲ ಆರ್ಥಿಕ ನೀತಿಗಳಿಗೆ ಪೂರಕವಾದ ರಾಜಕೀಯ, ಸಾಂಸ್ಕೃತಿಕ ನೀತಿಗಳನ್ನು ಅನುಸರಿಸಿ ಬಡದೇಶಗಳು ಯಾವ ಕಾರಣಕ್ಕೂ ಇದರಿಂದ ನುಸುಳಿ ಹೋಗದಂತೆ ಎಚ್ಚರ ವಹಿಸಲಾಗುತ್ತದೆ. ಹೀಗೆ ಬಡರಾಷ್ಟçಗಳಿಗೆ ಇದು ಅಳಿವು ಉಳುವಿನ ಪ್ರಶ್ನೆ. ಉಳಿದವರಿಗೆ ಸಾಲ ಮತ್ತು ಸಹಾಯ ರೂಪದಲ್ಲಿ ದೊರೆಯುತ್ತದೆ. ಹಳೆಯ ತಂತ್ರಜ್ಞಾನಗಳು ದೊರೆಯುತ್ತದೆ. ಮುಕ್ತ ಮಾರುಕಟ್ಟೆಯನ್ನು ಪ್ರತಿಪಾದಿಸುವ ಶ್ರೀಮಂತ ರಾಷ್ಟçಗಳು ಯಾವ ಕಾರಣಕ್ಕೂ ಬಡ ದೇಶಗಳ ಉತ್ಪನ್ನಗಳನ್ನು ತಮ್ಮ ದೇಶಗಳೊಳಗೆ ಬಿಡುವುದಿಲ್ಲ. ಒಟ್ಟಿನಲ್ಲಿ ಬಡರಾಷ್ಟçಗಳಲ್ಲಿ ಕಾರ್ಯನಿರ್ವಹಿಸುವ ಬಹುರಾಷ್ಟಿçÃಯ ಕಂಪನಿಗಳ ಕಾರುಬಾರಿಗೆ ಬಡದೇಶದ ಜನರಾಗಲೀ, ಸರ್ಕಾರವಾಗಲೀ ನಿರ್ಭಂಧ ಹೇರಬಾರದು ಎನ್ನುವ ವಾದ ಯಾವ ತಾತ್ವಿಕ ಹಿನ್ನೆಲೆಯೂ ಇಲ್ಲದ ದರ್ಪದ ವಾದವಾಗಿದೆ. ಇಲ್ಲವಾದಲ್ಲಿ ದಶಕಗಳ ಅಭಿವೃದ್ಧಿಯ ನಂತರವೂ ಜನ ಹಸಿವಿನಿಂದ ಸಾಯುವ ಪರಿಸ್ಥಿತಿ ಯಾಕೆ ನಿರ್ಮಾಣವಾಗುತ್ತಿದೆ? ಇಂತಹ ಅಭಿವೃದ್ಧಿ ನೀತಿ ಎಷ್ಟು ಜುಳ್ಳೆಂದರೆ ಎಲ್ಲ ಕಾಲಕ್ಕೂ, ಎಲ್ಲ ದೇಶಗಳಿಗೂ ಏಕರೂಪದ ಪರಿಹಾರೋಪಾಯಗಳನ್ನು ಸೂಚಿಸಲಾಗುತ್ತಿದೆ. ಅದು ಆಫ್ರಿಕಾವಿರಲಿ, ಪೂರ್ವ ಏಷ್ಯಾವಿರಲಿ, ಲ್ಯಾಟಿನ್ ಅಮೆರಿಕಾವಿರಲಿ ಅಭಿವೃದ್ಧಿ ಹೊಂದಲು ಒಂದೇ ತೆರನಾದ ನೀತಿಯನ್ನು ಅನುಸರಿಸುವಂತೆ ಹೇಳಲಾಗುತ್ತದೆ. ಇಂತಹ ಅಭಿವೃದ್ಧಿ ನೀತಿಯನ್ನು ಘೋಷಿಸುವಾಗ, ಅದಕ್ಕೆ ಅಗತ್ಯವಿರುವ ಬಂಡವಾಳ ತಂತ್ರಜ್ಞಾನದೊAದಿಗೆ, ಹೇರಲಾಗುವ ವಿವಿಧ ರೀತಿಯ ಶರತ್ತುಗಳಂತೂ ಬಡರಾಷ್ಟçಗಳ ಕೈಯನ್ನು ಕಟ್ಟಿಹಾಕುತ್ತದೆ. ಹಣ ಸಹಾಯ ಪಡೆಯುವ ದೇಶಗಳು ಸಮಸ್ಯೆ, ಸಂಪನ್ಮೂಲಗಳನ್ನು ಗಮನಿಸಿ, ನಿಷ್ಪಕ್ಷಪಾತವಾಗಿ ಯಾವುದೇ ಪೂರ್ವಾಗ್ರಹವಿಲ್ಲದೇ, ದೇಶದ ಅಭಿವೃದ್ಧಿಯೊಂದನ್ನು ಮಾತ್ರ ಗಮನದಲ್ಲಿರಿಸಿ ಪರಿಹಾರ ಸೂಚಿಸಲಾಗುತ್ತದೆ ಎನ್ನುವುದು ಸಂಪೂರ್ಣ ಸತ್ಯವಲ್ಲ.

ವಿಶ್ವಬ್ಯಾಂಕ್ ಸಮೂಹಗಳ ಇಂತಹ ಹೇಳಿಕೆಗಳು ಸತ್ಯದೂರವಾದ ವಿಚಾರ ಎನ್ನುವುದನ್ನು ಡೇವಿಸನ್ ಬುಧೂ ಅವರು ಬಹಿರಂಗಪಡಿಸಿದ್ದಾರೆ. ಅವರ ಹೇಳಿಕೆಯಂತೆ ೧೯೮೨ರಿಂದ ೧೯೯೦ರವರೆಗೆ ದ್ರವ್ಯನಿಧಿ ಮತ್ತು ವಿಶ್ವಬ್ಯಾಂಕ್‌ನ ಅಸಂಬದ್ಧ ಯೋಜನೆಗಳಿಂದಾಗಿ ೫ ವರ್ಷಕ್ಕಿಂತ ಕೆಳವಯಸ್ಸಿನ ೭೦ ಮಿಲಿಯ ಮಕ್ಕಳು ಸಾವನ್ನಪ್ಪಿದ್ದಾರೆ. ಸಾಲ ನೀಡುವಾಗ ವಿಧಿಸಲಾಗುವ ಶರತ್ತುಗಳಿಂದಾಗಿ ಅಪಾರ ಹಾನಿಗೊಳಗಾದ ಅಭಿವೃದ್ಧಿಶೀಲ ದೇಶಗಳು ಅಭಿವೃದ್ಧಿಯ ಹೆಸರಲ್ಲಿ ಸಾಲದ ಬಲೆಯೊಳಗೆ ಸಿಕ್ಕಿಹಾಕಿಕೊಂಡಿವೆ. ನಿರಂತರವಾಗಿ ಸಾಲದ ಹೊರೆಯಡಿ ಹೆಣಗಾಡುತ್ತಾ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸುತ್ತಲೇ ಇವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ದ್ರವ್ಯನಿಧಿ ಮತ್ತು ಜಾಗತಿಕ ಬ್ಯಾಂಕ್ ತನ್ನ ಸಹ ಸಂಸ್ಥೆಗಳೊAದಿಗೆ ಅಭಿವೃದ್ಧಿಗಿಂತಲೂ ಹೆಚ್ಚಾಗಿ, ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸುವ ನೆಪದಲ್ಲಿ ಬಹುರಾಷ್ಟಿçÃಯ ಕಂಪೆನಿಗಳಿಗೆ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸುವ, ಶ್ರೀಮಂತ ದೇಶಗಳ ತಂತ್ರಜ್ಞಾನ ವರ್ಗಾಯಿಸುವ ಕೆಲಸವನ್ನು ಸಮರ್ಥವಾಗಿ ನಿವಹಿಸುತ್ತಲಿವೆ. ಇದರ ಪರಿಣಾಮವಾಗಿ ಅಭಿವೃದ್ಧಿ ಹೊಂದಲು ಹೆಣಗಾಡುತ್ತಿರುವ ರಾಷ್ಟçಗಳು ತಮ್ಮ ದುಡಿಮೆಯ ಫಲವನ್ನು ಶಕ್ತ ರಾಷ್ಟçಗಳಿಗೆ ವರ್ಗಾಯಿಸಿ ತಾವು ಮಾತ್ರ “ಏನಾದರೇನು ರಾಗಿ ಬೀಸುವುದು ತಪ್ಪಲಿಲ್ಲ’’ ಎನ್ನುವಂತೆ ಯಥಾ ಪ್ರಕಾರ ಹಸಿವು, ಬಡತನ ನಿರುದ್ಯೋಗದಂತಹ ಸಮಸ್ಯೆಗಳಿಂದ ಬಾಧಿತವಾಗಿವೆ.

ಅಂರಾರಾಷ್ಟಿçÃಯ ಹಣಕಾಸು ನಿಗಮ ತೃತೀಯ ಜಗತ್ತಿನ ರಾಷ್ಟçಗಳ ಸಮಸ್ಯೆ ಪರಿಹರಿಸಲು ಸಹಕರಿಸುವ ಬದಲಾಗಿ ವಿದೇಶೀ ಬಂಡವಾಳ ಹೂಡಿಕೆಯನ್ನು ವೃದ್ಧಿಸುವ ಸಂಸ್ಥೆöಯಾಗಿದೆ. ೧೯೫೬ರಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ಹಣಕಾಸು ನಿಗಮದ ಮುಖ್ಯ ಉದ್ದೇಶ ಬಡರಾಷ್ಟçಗಳಲ್ಲಿನ ಖಾಸಗೀ ವಲಯದಲ್ಲಿ ಅಲ್ಲಿನ ಸರಕಾರದ ಯಾವುದೇ ರೀತಿಯ ಖಾತರಿ ಪಡೆಯದೆ, ವಿದೇಶಿ ಬಂಡವಾಳವನ್ನು ಹೂಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುವುದು. ಈ ರೀತಿಯಲ್ಲಿ ಖಾಸಗೀ ಬಂಡವಾಳದಾರರಿಗೆ, ಬಡದೇಶಗಳ ಫಲವತ್ತಾದ ಖಾಸಗೀ ವಲಯಗಳಲ್ಲಿ ಬಂಡವಾಳ ಹೂಡಿಕೆÀಗೆ ಅನುವು ಮಾಡಿಕೊಡುವುದು, ಹೀಗೆ ಈ ಸಂಸ್ಥೆ ಹೂಡಿಕೆ ಅವಕಾಶಗಳನ್ನು ಮತ್ತು ಬಂಡವಾಳದಾರರನ್ನು ಒಟ್ಟಾಗಿಸುವ ಮೂಲಕ ಆಧುನಿಕ ತಂತ್ರಜ್ಞಾನ ಬಳಸಿ ಉತ್ಪಾದನೆಯನ್ನು ಮತ್ತು ಬಂಡÀವಾಳದಾರರನ್ನು ಒಟ್ಟಾಗಿಸುವ ಮೂಲಕ ಆಧುನಿಕ ತಂತ್ರಜ್ಞಾನ ಬಳಸಿ ಉತ್ಪಾದನೆಯನ್ನು ಹೆಚ್ಚಾಗಿಸುತ್ತದೆ. ಇಂತಹ ಬಂಡÀವಾಳ ಹೂಡಿಕೆ ಕೈಗಾರಿಕಾ ರಂಗಕ್ಕೆ ಮಾತ್ರ ಸೀಮಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟಿçÃಯ ಹಣಕಾಸು ಸಂಸ್ಥೆ ಅಭಿವೃದ್ಧಿ ಶೀಲ ದೇಶಗಳಲ್ಲಿ  ಸ್ವರೂಪಾತ್ಮಕ ಬದಲಾವಣೆ ತರಲೂ ಸಹಾಯ ಮಾಡುತ್ತಿದೆ.

 ಖಾಸಗಿ ಬಂಡÀವಾಳ ಸಂಸ್ಥೆಯAತೆ ಕಾರ್ಯವೆಸಗುವ ನಿಗಮ ಬಂಡವಾಳ ಹೂಡÀÄವಾಗ ಮತ್ತು ಸಾಲ ನೀಡುವಾಗ ಬಹಳಷ್ಟು ಎಚ್ಚರ ವಹಿಸುತ್ತದೆ. ಒಟ್ಟು  ಬಂಡÀವಾಳದ ಶೇಕಡಾ ೫೦% ರಷ್ಟು ಮಾತ್ರ ವಿದೇಶೀ ಸಹಾಯ ರೂಪದಲ್ಲಿ ದೊರೆಯುತ್ತದೆ ಉಳಿದರ್ಧ ಬಡದೇಶದ ಹೂಡಿಕೆದಾರರಿಂದ ಪೂರೈಸಬೇಕು ಯೋಜನೆಯಲ್ಲಿನ ಲಾಭಾವಕಾಶ, ನಷ್ಟದ ಅಪಾಯ, ಮುಂತಾದ ವಿಷಯಗಳನ್ನು ಗಮನದಲ್ಲರಿಸಿ ಬಡ್ಡಿಯ ದರವನ್ನು ನಿರ್ಧರಿಸಲಾಗುತ್ತÀದೆ. ತಾನು ನೀಡುವ ಸಾಲವನ್ನು ಬಂಡವಾಳವಾಗಿ ಪರಿವರ್ತಿಸುವ ಸ್ವಾತಂತ್ರö್ಯ ನಿಗಮಕ್ಕೆ ಇರುತ್ತದೆ. ಉದ್ಯಮದಲ್ಲಿ ಬಳಸಲ್ಪಡುವ ತಂತ್ರಜ್ಞಾನ ಮತ್ತು ಆಡಳಿತ ವ್ಯವಸ್ಥೆಯ ಮೇಲೂ ಅದಕ್ಕೆ ಹತೋಟಿ ಇರುತ್ತದೆ. ಮೇಲ್ನೋಟಕ್ಕೆ ಬಡದೇಶಗಳ ಪಾಲಿಗೆ ವರದಾಯವೆನ್ನಿಸಬಹುದಾದ ಈ  ಸಂಸ್ಥೆ ಶ್ರೀಮಂತ ದೇಶಗಳ ಹಿತಸಕ್ತಿಯನ್ನು ಕಾಯುವ ಕೆಲಸವನ್ನು ನಿಯತ್ತಿನಿಂದ ಮಾಡÀÄತ್ತಿದೆ. ಜಾಗತಿಕ ಬ್ಯಾಂಕ್ ಮತ್ತು ದ್ರವ್ಯನಿಧಿ ಬಡದೇಶಗಳ ಸರಕಾರಗಳಿಗೆ ಶರತ್ತು ಬದ್ಧ ಸಹಾಯ ನೀಡುವ ಮೂಲಕ ಶ್ರೀಮಂತ ದೇಶಗಳ ಉತ್ಪನ್ನಗಳಿಗೆ, ತಂತ್ರಜ್ಞಾನ ಬಳಕೆಗೆ ಅವಕಾಶ ಒದಗಿಸಿದರೆ ಅಂತರಾಷ್ಟಿçÃಯ ಹಣಕಾಸು ನಿಗಮ ಶ್ರೀಮಂತ ದೇಶಗಳ ಖಾಸಗೀ ಬಂಡವಾಳದಾರರಿಗೆ ಹಣ ತೊಡಗಿಸಲು ಅವಕಾಶ ಮಾಡಿಕೊಡುತ್ತದೆ.

ದ್ರವ್ಯನಿಧಿ, ಜಾಗತಿಕ ಬ್ಯಾಂಕ್, ಅಂತಾರಾಷ್ಟಿçÃಯ ಹಣಕಾಸು ನಿಗಮ ಮತ್ತಿತರ ಸಹಸಂಸ್ಥೆಗಳ ಒಟ್ಟು ಕಾರ್ಯಾಚರಣೆಯನ್ನು ಕೂಲಂಕುಷವಾಗಿ ಅಭ್ಯಸಿಸಿದಾಗ ನಮಗೆ ವಿಶದವಾಗುವ ಅಂಶಗಳೆAದರೆ:

೧. ಬಡದೇಶಗಳು ಶ್ರೀಮಂತ ರಾಷ್ಟçಗಳು ಇರುವ ಮಟ್ಟಕ್ಕೆ ಮೇಲೇರುವುದು ಅತ್ಯಗತ್ಯ ಮತ್ತು ಅನಿವಾರ್ಯ.

೨. ಈ ರೀತಿಯಲ್ಲಿ ಮೇಲೇರಬೇಕಾದರೆ ಯಾ ಅಭಿವೃದ್ಧಿ ಹೊಂದಬೇಕಾದರೆ ಬಂಡವಾಳ, ತಂತ್ರಜ್ಞಾನ, ಸಂಪನ್ಮೂಲ, ಮಾನವ ಸಂಪನ್ಮೂಲ ಅವಶ್ಯಕ.

೩. ಬಡದೇಶಗಳಲ್ಲಿ ಸಂಪನ್ಮೂಲವಿದೆ. ಸಂಪನ್ಮೂಲವನ್ನು ಯೋಗ್ಯವಾಗಿ ಬಳಸಬೇಕಾದರೆ ಶಿಕ್ಷಣ ಮತ್ತು ತಾಂತ್ರಿಕ ಪರಿಣತಿಯನ್ನು ನೀಡಬೇಕಾಗುತ್ತದೆ. ಯಾವ ರೀತಿಯ ಶಿಕ್ಷಣ ಮತ್ತು ತಾಂತ್ರಿಕ ಪರಿಣತಿ ನೀಡುವುದರಿಂದ ಸಂಪನ್ಮೂಲವನ್ನು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಬಹುದೆನ್ನವುದನ್ನು ಮುಂದುವರಿದ ರಾಷ್ಟçಗಳೇ ಹೇಳುತ್ತವೆ.

೪. ಬಡದೇಶಗಳಲ್ಲಿ  ಬಂಡವಾಳ ಮತ್ತು ತಂತ್ರಜ್ಞಾನದ ಕೊರತೆ ಕಂಡÀÄಬರುತ್ತದೆ.

೫. ಶ್ರೀಮಂತ ರಾಷ್ಟçಗಳು ತಮ್ಮಲ್ಲಿರುವ ತಂತ್ರಜ್ಞಾನವನ್ನು ಬಡದೇಶಗಳಿಗೆ ವರ್ಗಾಯಿಸುತ್ತವೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲು ಅವಶ್ಯಕವಿರುವ ಬಂಡವಾಳವನ್ನೂ ಪೂರೈಸುತ್ತವೆ. 

೬. ಇಂತಹ ತಂತ್ರಜ್ಞಾನವನ್ನು ಬಳಸುವಾಗ ಮತ್ತು ಬಂಡÀವಾಳವನ್ನು ಉಪಯೋಗಿಸುವಾಗ ನಿರೀಕ್ಷಿತ ಫಲವನನು ಪಡೆಯಲು ಶ್ರೀಮಂತ ದೇಶಗಳು ವಿಧಿಸುವ ಶರತ್ತುಗಳನ್ನು  ಪಾಲಿಸಬೇಕು.

೭. ಅಭಿವೃದ್ಧಿ ಎನ್ನುವುದು ನಿರಂತರವಾದದ್ದರಿAದ ಹೆಚ್ಚು ಹೆಚ್ಚು ಬಂಡÀವಾಳ ಮತ್ತು (ಶ್ರೀಮಂತ ದೇಶಗಳು ಕಂಡು ಹಿಡಿಯುವ) ಹೊಸ ಹೊಸ ತಂತ್ರಜ್ಞಾನವನ್ನು ಬಳಸುತ್ತ ಹೋಗುತ್ತಿರಬೇಕು.

ತಂತ್ರಜ್ಞಾನವನ್ನು ಯಾ ಬಂಡವಾಳವನ್ನು (ಸಾಲರೂಪದಲ್ಲಿ ಯಾ ಸಹಾಯದ ರೂಪದಲ್ಲಿ) ಪಡೆಯುವ ದೇಶಗಳು ಅವುಗಳನ್ನು ತಮಗೆ ಹಿತವೆನಿಸುವ ರೂಪದಲ್ಲಿ  ಉಪಯೋಗಿಸಲು ಬರುವುದಿಲ್ಲ ಎಂಬುದನ್ನು ಗಮನಿಸಬೇಕು. ಅವುಗಳೊಂದಿಗೆ ಹಲವಾರು ಶರತ್ತುಗಳನ್ನು ವಿಧಿಸಲಾಗುತ್ತದೆ. ಈ ಶರತ್ತುಗಳನ್ನು ವಿಧಿಸಲು ಕಾರಣವೇನು ಎನ್ನುವುದನ್ನೂ ಹೇಳಲಾಗುತ್ತದೆ. ಈ ಸಂಸ್ಥೆಗಳು ಬಡದೇಶಗಳಿಗೆ ಸಾಲ ರೂಪದಲ್ಲಿ  ಸಹಾಯ ಮಾಡುವಾಗ ವಿಧಿಸುವ ಅಭಿವೃದ್ಧಿಯೋಜಿತ ಶರತ್ತುಗಳ ಬಗ್ಗೆ ತಿಳಿಯುವ ಪ್ರಯತ್ನವನ್ನು ನಾವಿಲ್ಲಿ ಮಾಡಹುದು. ಅದಕ್ಕೂ ಮೊದಲು ಸ್ವರೂಪಾತ್ಮಕ ಹೊಂದಾಣಿಕೆ ಎಂದರೇನು ? ಅದರ ಘೋಷಿತ ಉದ್ದೇಶಗಳೇನು ? ಎನ್ನುವುದನ್ನೂ ನಾವು ಅರಿತಿರಬೇಕಾಗುತ್ತದೆ.

ಸ್ವರೂಪಾತ್ಮಕ ಹೊಂದಾಣಿಕೆ (ಸ್ಟçಕ್ಚರಲ್ ಎಡ್ವಸ್ಟ್ಮೆಂಟ್ ಪಾಲಸಿ)

ವಿಶ್ವ ಬ್ಯಾಂಕ್ ಸಮೂಹ ಬೋಧಿಸುವ ಹೊಸ ಆರ್ಥಿಕ ನೀತಿಗೆ ಎರಡು ಮುಖಗಳಿರುತ್ತವೆ ಮತ್ತು ಎರಡು ಸ್ತರಗಳಲ್ಲಿ ಅನುಷ್ಠಾನಗೊಳುತ್ತದೆ ಒಂದು, ಒಟ್ಟು ಅರ್ಥವ್ಯವಸ್ಥೆಯಲ್ಲಿ ಅಲ್ಪಕಾಲೀನ ಸ್ಥಿರತೆ ಕಾಯ್ದಕೊಳ್ಳಲು ಅನುಸರಿಸಲಾಗುವ ಕ್ರಮಗಳು. ಎರಡು, ಇಂತಹ ಅಲ್ಪಕಾಲೀನ ಸ್ಥಿರತೆಯನ್ನು ಅನುಸರಿಸಿಕೊಂಡು ಬರುವ ಸ್ವರೂಪಾತ್ಮಕ ಹೊಂದಾಣಿಕೆಗಳು. ೧೯೮೦ ದಶಕದ ಮೊದಲಲ್ಲಿ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಕ್ರಮಗಳ ಉದ್ದೇಶ ಸಂಕೀರ್ಣವಾದುದಾಗಿದ್ದು ಅದು ಮೂಲಭೂತವಾಗಿ ಪಾವತಿ ಖಾತೆಯ ಕೊರತೆಯನ್ನು ಕಡಿಮೆ ಮಾಡುವುದಾಗಿತ್ತು. ಆದರೆ ಇಂತಹ ಅಲ್ಪಕಾಲೀನ ಆರ್ಥಿಕ ಸ್ಥಿರತಾ ಕಾರ್ಯಕ್ರಮಗಳು ಸಾಲಿಗ ದೇಶಗಳ ಋಣಭಾರದ ತೀವ್ರತೆಯನ್ನು ಅಧಿಕವಾಗಿಸಿ ಹೊಸದೊಂದು ಸಮಸ್ಯೆಯನ್ನು  ಸೃಷ್ಟಿಸಿದುವು. ಈ ಹೊಸ ಸಮಸ್ಯೆಗೆ  ಒಂದು ಪರಿಹಾರೋಪಾಯವನ್ನು ಕಂಡು ಹಿಡಿಯುವುದು ಅನಿವಾರ್ಯವಾಯ್ತು. ಈ ಮೊದಲು ಅಮೇರಿಕಾದ ಖಜಾನೆ ಕಾರ್ಯದರ್ಶಿಯಾಗಿದ್ದ ಮಿಸ್ಟರ್ ಜೀಮ್ಸ್ ಬೆಕರ್ ಈ ಸಮಸ್ಯೆನ್ನು ಪರಿಹರಿಸಲು ಸ್ವÀರೂಪಾತ್ಮಕ ಯೋಜನೆಯೊಂದನ್ನು ರೂಪಿಸಿದರು. ಇದನ್ನು ‘ಬೆಕರ್ ಯೋಜನೆ’ ಎಂದು ಕರೆಯಲಾಯಿತು. ಬೆಕರ್ ಯೋಜನೆಯಂತೆ ಸಾಲ ಪಡೆಯುವ ದೇಶಗಳ ಮೇಲೆ ೧೯೮೫ರ ನಂತರ ಹೊಸ ಶರತ್ತುಗಳನ್ನು ಹೇರಲಾಯಿತು ಮತ್ತು ಈ ಶರತ್ತುಗಳನ್ನು ‘ಸ್ವರೂಪಾತ್ಮಕ ಹೊಂದಾಣಿಕಾ’ ಕಾರ್ಯಕ್ರಮ ಎಂದು ಕರೆಯಲಾಯಿತು. ಅಭಿವೃದ್ಧಿ ಸಾಧಿಸಲು ವಿಶ್ವಬ್ಯಾಂಕ್/ದ್ರವ್ಯನಿಧಿ ಪ್ರತಿಪಾದಿಸುವ ಯಾ ವಿಧಿಸುವ ಅಲ್ಪಕಾಲೀನ ಅತ್ಯಂತ ಪರಿಣಾಮಕಾರೀ ಯೋಜನೆಗಳೆಂದು ಘೋಷಿಸಲಾಯಿತು. ಈ ಎರಡೂ ಯೋಜನೆಗಳಲ್ಲಿದ್ದ ಕಾರ್ಯಕ್ರಮಗಳು ಈ ಕೆಳಗಿನಂತಿವೆ:

(ಅ) ೧೯೮೦ರ ಪ್ರಾರಂಭದಲ್ಲಿದ್ದ ಆರ್ಥಿಕ ಸ್ಥಿರತೆ ನೀಡುವ ಉದ್ದೇಶದ ಯೋಜನೆಗಳಲ್ಲಿದ್ದ ಕಾರ್ಯಕ್ರಮಗಳು

೧. ಹಣದ ಅಪಮೌಲೀಕರಣ.

೨. ಬಜೆಟ್‌ನ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಸರ್ಕಾರೀ ವೆಚ್ಚದಲ್ಲಿ ತೀವ್ರ ಕಡಿತ (ಸಾಮಾಜಿಕ ರಂಗದಲ್ಲಿ ಸರ್ಕಾರ ಮಾಡಬೇಕಾದ ವೆಚ್ಚಗಳು, ಸರ್ಕಾರೀ ನೌಕರರಿಗೆ ನೀಡÀಬೇಕಿರುವ ಭತ್ತೆ ಮತ್ತಿತರ ಖರ್ಚು ವೆಚ್ಚಗಳೂ ಸೇರಿದಂತೆ ತೀವ್ರ ಕಡಿತ ಮಾಡಬೇಕಾಗಿರುತ್ತದೆ).

೩. ಬೆಲೆ ನಿಯಂತ್ರಣ ಮತ್ತು ಸಹಾಯಧನ ಪದ್ಧತಿ ರದ್ದು ಮಾಡುವ ಮೂಲಕ ಮಾರುಕಟ್ಟೆ ಅನಿಯಂತ್ರಣಗೊಳಿಸುವುದು.

೪. ಸಂಬಳ, ಕೂಲಿಯನ್ನು ಕಡಿಮೆಗೊಳಿಸುವ ಮೂಲಕ ನೌಕರ ವರ್ಗದ ಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುವುದು.

(ಆ) ಸ್ವರೂಪಾತ್ಮಕ ಹೊಂದಾಣಿಕೆ ಯೋಜನೆಯಲ್ಲಿರುವ ವಿವಿಧ ಕಾರ್ಯಕ್ರಮಗಳು

೧. ಸ್ವಯಂತಾAತ್ರಿಕ ವ್ಯಾಪಾರೀ ವ್ಯವಸ್ಥೆಯನ್ನು ನೆಲೆಗೊಳಿಸುವ ಉದ್ದೇಶದಿಂದ ದೇಶೀಯ ಉದ್ದಿಮೆಗಳಿಗೆ ಒದಗಿಸಿದ ರಕ್ಷಣಾ ಕವಚವನ್ನು ಬಿಚ್ಚುವುದರ ಮೂಲಕ ದೇಶೀಯ ಉದ್ದಿಮೆಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವುದು.

೨. ಬ್ಯಾಂಕಿAಗ್ ವ್ಯವಸ್ಥೆಯನ್ನು ಸ್ವಯಂತಾAತ್ರಿಕವಾಗಿಸುವುದು. ರಾಜ್ಯಗಳ ನಿಯಂತ್ರಣದಲ್ಲಿರುವ ಕೃಷಿ, ಕೈಗಾರಿಕಾ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿರುವ ಬ್ಯಾಂಕಿAಗ್ ಸಂಸ್ಥೆಗಳ ಖಾಸಗೀಕರಣ. ಇದರಿಂದಾಗಿ ಹಣಕಾಸು ನೀತಿಯ ಮೇಲೆ ಕೇಂದ್ರೀಯ ಬ್ಯಾಂಕ್ ನ ಹತೋಟಿ ತಪ್ಪಿ ಹೋಗಿ ಬಡ್ಡಿಯ ದರ ಮಾರುಕಟ್ಟೆ ನಿಯಂತ್ರಿಕ ವ್ಯವಸ್ಥೆಯಿಂದ ನಿರ್ಧಾರವಾಗುವ ಹಾಗಾಗುತ್ತದೆ.

೩. ಆದಾಯದ ದೃಷ್ಟಿಯಿಂದ ಏನೇನೋ ಲಾಭದಾಯಕವಲ್ಲದ ಯಾ ಖರ್ಚಿನ ಬಾಬತ್ತುಗಳಾದ ಶಿಕ್ಷಣ, ಆರೋಗ್ಯ ಮತ್ತು ಪೋಷಕಾಂಶ ಒದಗಿಸುವ ಸಮುದಾಯ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಕೈ ಬಿಡುವುದರ ಮೂಲಕ ಬೊಕ್ಕಸದಲ್ಲಿ ಅಧಿಕ ಮಟ್ಟದ ಶಿಲ್ಕು ನಿಲ್ಲಿಸುವಂತೆ ಮಾಡುವುದು.

೪. ಸರ್ಕಾರೀ ಒಡೆತನಕ್ಕಿಂತಲೂ ಖಾಸಗೀ ದೊರೆಗಳು ಅತ್ಯಂತ ದಕ್ಷವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಬ್ಯಾಂಕ್ ಮತ್ತು ಉದ್ದಿಮೆಗಳ ಖಾಸಗೀಕರಣ.

೫. ಸರ್ಕಾರೀ ಒಡೆತನದ ಸಂಸ್ಥೆಗಳ ಪುನರುಜ್ಜೀವನ ಇದರ ಹಿಂದಿರುವ ಉದ್ದೇಶ ಅನಗತ್ಯ ಖರ್ಚು ವೆಚ್ಚವನ್ನು ಕಡಿತಗೊಳಿಸಿ ವೆಚ್ಚ ಕಡಿತವನ್ನು ಸರ್ಕಾರೀ ಯೋಜನೆಗಳಲ್ಲಿ ಅನುಷ್ಠಾನ ಗೊಳಿಸುವುದು(ಈ ಅಂಶವನ್ನು ಜಾರಿಗೊಳಿಸುವಾಗ ಹೆಚ್ಚಿರುವ ನೌಕರ ವರ್ಗವನ್ನು ಮನೆಗಟ್ಟುವುದೂ ಸೇರಿದೆ)

೫. ತೆರಿಗೆ ಸುಧಾರಣಾ ಕ್ರಮಗಳ ಮೂಲಕ ಮಧ್ಯಮ ವರ್ಗದ ಜನರ ತೆರಿಗೆ ಹೊರೆಯನ್ನು ಹೆಚ್ಚಾಗಿಸುವುದು. ಸಣ್ಣ ಉದ್ದಿಮೆಗಳನ್ನು ಮತ್ತು ಕೃಷಿ ಉತ್ಪಾದಕರನ್ನು ತೆರಿಗೆ ಮಿತಿಯೊಳಗೆ ತರುವುದು.

೬. ಬಡತನ ನಿವಾರಣಾ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳೊಸುವುದು.

ವಿಶ್ವಬ್ಯಾಂಕ್ ಮತ್ತು ದ್ರವ್ಯ ನಿಧಿಯು ಸ್ವರೂಪಾತ್ಮಕ ಹೊಂದಾಣಿಕೆಯನ್ವಯ ಜಾರಿಗೊಳಿಸಲಾಗುವ ಕಾರ್ಯಕ್ರಮಗಳ ಘೋಷಿತ ಉದ್ದೇಶಗಳು ಹೀಗಿವೆ.

ಕಾರ್ಯಕ್ರಮಗಳ ಘೋಷಿತ ಉದ್ದೇಶ

೧. ಹಣದ ಅಪಮೌಲ್ಯ: ಇದು ಹಣದ ಆಂತರಿಕ ಮೌಲ್ಯವನ್ನು ಇಳಿಮುಖವಾಗಿಸುವುದರಿಂದಾಗಿ ದೇಶದ ರಫ್ತಿನಲ್ಲಿ ಗಣನೀಯ ಪ್ರಮಾಣದ ಏರಿಕೆಯುಂಟಾಗುತ್ತದೆ ಮತ್ತು ಆಮದಿನ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಉಂಟಾಗುತ್ತದೆ.

೨. ರಫ್ತು ವೃದ್ಧೀಕರಣ: ವಿದೆÃಶಿ ಸಾಲಗಳನ್ನು ಮರು ಪಾವತಿಸಲು ಬೇಕಾಗಿರುವ ಧನರಾಶಿಯ ಸಂಪಾದನೆ (ಸಂಚಯನ)

೩. ಸರ್ಕಾರೀ ವೆಚ್ಚದಲ್ಲಿ ಕಡಿತ: ಸರ್ಕಾರೀ ವೆಚ್ಚದಲ್ಲಿ ಕಡಿತ ಮಾಡುವುದರಿಂದ, ಕಡಿತ ಮಾಡಿದ ಪ್ರಮಾಣದಷ್ಟು ಹಣ ಸಾರ್ವಜನಿಕರಲ್ಲಿ ಕಡಿಮೆಯಾಗಿ ಅಷ್ಟು ಪ್ರಮಾಣದಲ್ಲಿ ಬೇಡಿಕೆಯಲ್ಲಿ ಇಳಿಮುಖ ಉಂಟಾಗುತ್ತದೆ. ಪರಿಣಾಮವಾಗಿ ಬೆಲೆಯೇರಿಕೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

೪. ಖಾಸಗೀಕರಣ: ಸರ್ಕಾರೀ ರಂಗದ ಉದ್ದಿಮೆಗಳು ರೋಗಗ್ರಸ್ತವಾಗಿದ್ದು ದೇಶದ ಬಹುಪಾಲು ಹಣವನ್ನು ಪೋಲುಮಾಡುತ್ತಿವೆ. ಆದ್ದರಿಂದ ಅಧಿಕ ಲಾಭ, ದಕ್ಷತೆ, ಮತ್ತು ಕಾರ್ಯಕ್ಷಮತೆಯುಳ್ಳ ಖಾಸಗೀರಂಗಕ್ಕೆ ಇಂತಹ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ವಹಿಸಿಕೊಡುವುದು.

೫. ಅನಿರ್ಬಂಧಿತ ಆಮದು ನೀತಿ: ಅನಿರ್ಭಂಧಿತ ಆಮದು ಇದ್ದಾಗ ಅಂತಾರಾಷ್ಟಿçÃಯ ಗಣ ಮಟ್ಟದ ವಸ್ತುಗಳು ದೇಶೀಯ ಮಾರುಕಟ್ಟೆಗೆ ಹರಿದು ಬರುತ್ತಿದೆ. ಆಗ ದೇಶೀಯ ಉತ್ಪಾದಕರು ತಮ್ಮ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸಬೇಕಾಗಿ ಬರುಬುದರಿಂದ ದೇಶೀಯ ಉತ್ಪನ್ನಗಳ ಗುಣಮಟ್ಟದಲ್ಲಿ ವೃದ್ಧಿಉಂಟಾಗುತ್ತದೆ. ಇದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳು ಲಭ್ಯವಾಗುತ್ತವೆ.

೬. ಬಡ್ಡಿಯ ದರದಲ್ಲಿ ಹೆಚ್ಚಳ: ಬೆಲೆ ಏರಿಕೆಯನ್ನು ತಡೆಗಟ್ಟುವುದು ತನ್ಮೂಲಕ ಹಣದುಬ್ಬರವನ್ನು ನಿಯಂತ್ರಿಸುವುದು.

ವಿದೇಶೀ ಸಾಲದ ಒತ್ತಡ, ಪಾವತಿ ಸಮಸ್ಯೆ, ಹಣದುಬ್ಬರ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ದೇಶ ತನ್ನ ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯಾ ಹಣ ಸಹಾಯ ಪಡೆಯಲು ದ್ರವ್ಯನಿಧಿ ಮತ್ತು ವಿಶ್ವಬ್ಯಾಂಕ್‌ನ್ನು ಸಂಪರ್ಕಿಸಿದರೆ ಬ್ಯಾಂಕ್ ತನ್ನಲ್ಲಿರುವ ವಿಶ್ವದ ಶ್ರೇಷ್ಠತಮ ಆರ್ಥಿಕ ತಜ್ಞರನ್ನು ಆ ದೇಶಕ್ಕೆ ಕಳುಹಿಸಿ ಸಮಸ್ಯೆಯನ್ನು ಆಮೂಲಾಗ್ರವಾಗಿ ಅಭ್ಯಸಿಸಿ ಪರಿಹಾರೋಪಾಯವನ್ನು ಸೂಚಿಸುತ್ತದೆ. ಹಣ ಸಹಾಯ ಪಡೆಯುವ ದೇಶ ವಿಶ್ವಬ್ಯಾಂಕ್ ದ್ರವ್ಯನಿಧಿ ಸೂಚಿಸಿದ ರೀತಿಯಲ್ಲಿ ಸಾಲದ ಹಣವನ್ನು ಉಪಯೋಗಿಸಿಕೊಂಡು ಅರ್ಥ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ.

ಮೊದಲಿಗೆ ೧೯೯೧ ಡಾ/ಮನಮೋಹನ್ ಸಿಂಗ್ ರವರು ವಿಶ್ವಬ್ಯಾಂಕ್ ಯಾ ದ್ರವ್ಯನಿಧಿಯ ಯಾವ ಶರತ್ತಿಗೂ ದೇಶ ತಲೆÀಬಾಗುವ ಪ್ರಮೇಯ ಇಲ್ಲವೆಂದು ಹೇಳಿದರೂ ಸಾಲ ಪಡೆಯಲಾಗುವ ವಿಷಯವನ್ನು ಅಲ್ಲಗಳೆಯಲಿಲ್ಲ. ಆದರೆ ಎರಡು ವರ್ಷಗಳ ತರುವಾಯ ಈಗ ಎಲ್ಲವೂ ಬಟ್ಟಬಯಲಾಗಿದೆ. ಸ್ವರೂಪಾತ್ಮಕ ಹೊಂದಾಣಿಕೆಯ ಎಲ್ಲ ಅಂಶಗಳನ್ನೂ ಒಳಗೊಂಡಿರುವುದು ಅಲ್ಲದೆ ಅದಕ್ಕೆ ಸಂಬAಧಿಸಿದ ಎಲ್ಲ ಶರತ್ತಗಳಿಗೂ ನಾವು ತಲೆಬಾಗಿರುವುದು ಸ್ಪಷ್ಟವಾಗಿದೆ. ಮೆಲ್ನೋಟಕ್ಕೆ ಆರ್ಥಿಕ ಅಭಿವೃದ್ಧಿ ಸಾಧಿಸಲು ಸಹಾಯಕವೆನ್ನುವ ಸ್ವರೂಪಾತ್ಮಕ ಹೊಂದಾಣಿಕೆಯAತಹ ಕಾರ್ಯಕ್ರಮಗಳನ್ನು ಒಪ್ಪಿ ಅರ್ಥವ್ಯವಸ್ಥೆಯನ್ನು ಬಲಿಷ್ಠವಾಗಿಸಲು ಪ್ರಯತ್ನಿಸಿದ ವಿಶ್ವದ ಹಲವು ದೇಶಗಳ ಅನುಭವವನ್ನು ಇಲ್ಲಿ ದಾಖಲಿಸುವುದು ಹೆಚ್ಚು ಪ್ರಸ್ತುತವೆಂದೆನಿಸುತ್ತದೆ.

ಸ್ವರೂಪಾತ್ಮಕ ಹೊಂದಾಣಿಕೆ ಮತ್ತು ಅಭಿವೃದ್ಧಿ ಶೀಲ ರಾಷ್ಟçಗಳ ಅನುಭವ

ಅಭಿವೃದ್ಧಿ ಹೊಂದಲು ಪ್ರಯತ್ನಿಸುತ್ತಿರುವ ಬಡದೇಶಗಳಿಗೆ ಸಾಲ ರೂಪದ ಆರ್ಥಿಕ ಸಹಾಯ ನೀಡÀÄವ ವಿಶ್ವಬ್ಯಾಂಕ್, ದ್ರವ್ಯನಿಧಿಗಳ ಇಂತಹ ಸಾಲದ ಉಪಯೋಗಕ್ಕೆ ವಿಧಿಸುವ ಶರತ್ತುಗಳು ಪ್ರಪಂಚದ ಎಲ್ಲ ಕಡೆಯಲ್ಲಿ ಒಂದೇ ತೆರೆನಾಗಿರುತ್ತವೆ. ಅರ್ಥ ವ್ಯವಸ್ಥೆಯಲ್ಲಿ ಸ್ಥಿರತೆ ತರುವ ಕಾರ್ಯಕ್ರಮಗಳಿಗಿರುವ ಉದ್ದೇಶಗಳೆಂದರೆ:

೧. ತತ್ಕಾಲೀನವಾಗಿ ಯಾ ಅಲ್ಪಾವಧಿಯಲ್ಲಿ ಬಾಧಿಸುತ್ತಿರುವ ಪಾವತಿ ಸಮಸ್ಯೆಯಲ್ಲಿ ಸಮತೋಲನ ಸಾಧಿಸುವುದು.

೨. ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡಿ ಹಣದ ಮೌಲ್ಯದಲ್ಲಾಗುವ ಕುಸಿತವನ್ನು ತಡೆಯುವುದು.

* ಇಂತಹ ಗುರಿಯನ್ನು ಸಾಧಿಸಲು ಹಣಕಾಸು ನೀತಿ,ಹಣದ ಅಪಮೌಲೀಕರಣ ಮುಂತಾದವುಗಳನ್ನು ಬಳಸಲಾಗುತ್ತದೆ. ಇಲ್ಲಿ ಸ್ಥಳೀಯ ಆರ್ಥಿಕ ಪರಿಸ್ಥಿತಿಯ ಅಧ್ಯಯನವಾಗಲೀ, ಉತ್ಪಾದನಾ ವೃದ್ಧಿಯ ಇತರ ಕ್ರಮಗಳಿಗಾಗಲೀ ಯಾವ ಮಹತ್ವವನ್ನೂ ನೀಡಲಾಗುವುದಿಲ್ಲ. ಆದ್ದರಿಂದ ಇಂತಹ ಕ್ರಮಗಳು ಆರ್ಥಿಕ ಪುನಶ್ಚೇತನ ನೀಡÀÄವ ಬದಲು ಅರ್ಥವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತವೆ.    

ಭಾರತೀಯ ಅರ್ಥವ್ಯವಸ್ಥೆ ಮತ್ತು ಪ್ರಸ್ತುತ ಹೊಸ ಆರ್ಥಿಕ ನೀತಿ

ಹಲವಾರು ದಶಕಗಳಷ್ಟು ಕಾಲ ಬ್ರಿಟಿಷ್ ಆಡಳಿತಕ್ಕೊಳಪಟ್ಟ ಭಾರತದಲ್ಲಿ ಬಹುಪಾಲು ಬಡತನ ತಾಂಡವವಾಡುತ್ತಿತ್ತು. ಸ್ವತಂತ್ರ ಭಾರತದ ನಿರ್ಮಾಪಕರೆಲ್ಲರೂ ಇಂತಹ ಬಡತನದಿಂದ ದೇಶವನ್ನು ಮುಕ್ತಗೊಳಿಸುವ ಕುರಿತು (ಸ್ವಾತಂತ್ರö್ಯ ಹೋರಾಟದಲ್ಲಿ ತೊಡಗಿಸಿಕೊಂಡು) ಬಹುತೇಕ ಜನ ಕನವರಿಸಿದ್ದರು ಮತ್ತು ಆ ದಿಸೆಯಲ್ಲಿ ಕೆಲಸ ಮಾಡಲು ಆರಂಭಿಸಿದ್ದರು. ಆದರೆ ಹಸಿವಿನಿಂದ ಮುಕ್ತವಾದ ಭಾರತ ಮಾತ್ರ ಇಂದಿನವರೆಗೂ ಉದಯವಾಗಲೇ ಇಲ್ಲ.

೧೯೫೧ರಲ್ಲಿ ಕಾರ್ಯ ಆರಂಭಿಸಿದ ಯೋಜನಾ ಆಯೋಗ ಆರ್ಥಿಕ ಅಭಿವೃದ್ಧಿಯನ್ನು ಯಾವ ಮಾದರಿಯಲ್ಲಿ ಸಾಧಿಸಬಹುದೆನ್ನುವ ಕುರಿತು ಅಧ್ಯಯನ ನಡೆಸಿತು.

ಸಮಾಜವಾದೀ ಸಿದ್ಧಾಂತವನ್ನು ಅನುಸರಿಸುತ್ತ ಬಂದ ಸೋವಿಯತ್ ಒಕ್ಕೂಟ ಪಂಚವಾರ್ಷಿಕ ಯೋಜನೆಗಳ ಮೂಲಕ ಅದ್ಭುತ ಪ್ರಗತಿ ಸಾಧಿಸಿದ್ದು, ಜವಾಹರಲಾಲ್ ನೆಹರೂ ಅವರ ಗಮನ ಸೆಳೆಯಿತು. ಮಾತ್ರವಲ್ಲ ಹಲವಾರು ತಜ್ಞರೂ ಇಂತಹ ಮಾದರಿಯ ಬಗ್ಗೆ ಒಲವು ತೋರಿದ್ದರು. ಆದರೆ ನಮ್ಮಲ್ಲಿ ಸೋವಿಯತ್ ದೇಶಕ್ಕಿಂತ ಭಿನ್ನವಾದ ಯೋಜನಾ ಆಧಾರಿತ ಅಭಿವೃದ್ಧಿ ಮಾದರಿಯನ್ನು ಒಪ್ಪಿಕೊಳ್ಳಲಾಯಿತು. ಇಂತಹ ಅಭಿವೃದ್ಧಿ ಮಾದರಿಯನ್ನು ಮಿಶ್ರ ಆರ್ಥಿಕ ನೀತಿಯೆಂದು ಕರೆಯಲಾಯಿತು. ಇದರ ಪ್ರಕಾರ ಸಾರ್ವಜನಿಕ ರಂಗ ಮತ್ತು ಖಾಸಗೀ ರಂಗಗಳೆರಡೂ ಜೊತೆಜೊತೆಯಾಗಿ ಅಸ್ತಿತ್ವದಲ್ಲಿದ್ದು ದೇಶೀಯ ಉತ್ಪಾದನೆ ಹೆಚ್ಚಿಸಲು ಕಾರ್ಯಪ್ರವೃತ್ತವಾಗುತ್ತವೆ. ಅಪಾರ ಬಂಡÀವಾಳ ಬಯಸುವ, ರಾಷ್ಟಿçÃಯ ಮಹತ್ವವಿರುವ ಪ್ರಮುಖ ಉದ್ದಿಮೆಗಳನ್ನು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ರಂಗದಲ್ಲುಳಿಸಿಕೊಳ್ಳಲಾಯಿತು. ಮಿಕ್ಕುಳಿದ ಉದ್ಯಮಗಳನ್ನು ಖಾಸಗೀ ರಂಗದಲ್ಲಿ ಸೇರಿಸಲಾಯಿತು. ದೇಶದ ಅಭಿವೃದ್ಧಿಗೆ ಅಪೂರ್ವ ಕೊಡುಗೆ ನೀಡಲಿರುವ ಸಹಕಾರೀ ರಂಗಕ್ಕೂ ಆಸ್ಪದ ನೀಡಲಾಯಿತು. ಇಂತಹ ಯೋಜನಾಬದ್ಧ ಬೆಳವಣಿಗೆ ಮಾದರಿ ಪ್ರಜಾಪ್ರಭುತ್ವ ರೀತಿಯಲ್ಲಿದ್ದು ಜನರ ಆಶಯಗಳನ್ನು ಪ್ರತಿಪಲಿಸುವಂತಿತ್ತು. ಅಭಿವೃದ್ಧಿ ನೀತಿಯಲ್ಲಿ ಎಲ್ಲ ರಂಗಗಳ ಸಮತೋಲಿತ ಬೆಳವಣಿಗೆಗೆ ಒತ್ತು ನೀಡÀಲಾಗಿತ್ತು. ಈ ಯೋಜನಾ ಮಾದರಿಯ ಹೊರತಾಗಿಯೂ ನಮ್ಮ ಅರ್ಥ ವ್ಯವಸ್ಥೆ ಯಾವುದೇ ಸಿದ್ದಾಂತಕ್ಕೆ ಬದ್ಧವಾಗಿರದೇ ಅತ್ತ ಬಂಡವಾಳಶಾಹಿಯೂ ಅಲ್ಲದೆ ಇತ್ತ ಸಮಾಜವಾದಿಯೂ ಅಲ್ಲದ ರೀತಿಯಲ್ಲಿ ಗೊತ್ತುಗುರಿಯಿಲ್ಲದ ಸಾಗುವ ನೌಕೆಯಂತೆ ಸಾಗುತ್ತಿದೆ. ಯಾಕೆಂದರೆನಾವು ಯೋಜನಾಬದ್ಧ ಅಭಿವೃದ್ಧಿ ನೀತಿಯನ್ನು ಅನುಸರಿಸುವಾಗ, ಬಂಡವಾಳಶಾಹೀ ಒಲವಿನ ಖಾಸಗೀ ವಲಯಕ್ಕೂ ಆಸ್ಪದ ನೀಡಿದ್ದೇವೆ. ಸಮಾಜವಾದೀ ಸಿದ್ದಾಂತವನ್ನಾಧರಿಸಿ ಸರ್ಕಾರೀ ನಿಯಂತ್ರಣದಲ್ಲಿರುವ ಸರ್ವಜನಿಕ ರಂಗದ ಉದ್ದಿಮೆಗಳ ವಿಷಯದಲ್ಲಿಯೂ ಗಟ್ಟಿಯಾಗಿ ಯಾವುದೇ ನೀತಿಗೆ ಸದಾ ಅಂಟಿಕೊAಡಿಲ್ಲ. ಮಾತ್ರವಲ್ಲ ಮುಕ್ತ ಆರ್ಥೀಕ ನೀತಿಯನ್ನು ಪ್ರತಿಪಾದಿಸುವ ಪಶ್ಚಿಮದ ದೇಶಗಳ ಒತ್ತಡಕ್ಕೆ ಮಣಿಯುವ ಮೂಲಕ ಪರಸ್ಪರ ತದ್ವಿರುದ್ಧವಾಗಿ ವರ್ತಿಸುತ್ತಾ ಬಂದಿದ್ದೇವೆ. ಇಂತಹ ವಿರೋಧಾಬಾಸಗಳು ಅಗಿಂದಾಗ್ಗೆ ಕಾಣಸಿಗುತ್ತವೆ. ಹೀಗೆ ವಿಭಿನ್ನ ಗುರಿಗಳನ್ನು ಸಾಧಿಸುವಲ್ಲಿ ನಮ್ಮ ಯೋಜನಾ ಆಯೋಗ ಯಶಸ್ವಿಯಾಗಲಿಲ್ಲ. ಮಾತ್ರವಲ್ಲ ನಾವು ಅತ್ತ ಬಂಡÀವಾಳಶಾಹಿಯೂ ಅಲ್ಲದ ಇತ್ತ ಸಮಾಜವಾದಿಯೂ  ಅಲ್ಲದ ಮೂರನೇ ತಂತ್ರವನ್ನಳವಡಿಸಿಕೊAಡ ಒಂದು ರೀತಿಯ ತ್ರಿಶಂಕು ಸ್ಥಿತಿಯಲ್ಲಿದ್ದೇವೆ. ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಭೌಗೋಳಿಕವಾಗಿ ವೈವಿದ್ಯಮಯವಾದ ಭಾರತ ಸ್ವಾತಂತ್ರಾö್ಯನAತಯರದ ನಾಲ್ಕೂವರೆ ದಶಕಗಳ ನಂತರವೂ ಬಡದೇಶವಾಗಿಯೇ ಉಳಿದಿದÉ. ದೇಶದ ಒಟ್ಟು ಜನಸÀಂಖ್ಯೆಯ  ೪೦% ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ. ನಾವು ಸಾಧಿಸಬೇಕಾಗಿರುವುದು ಇನ್ನೂ ಬಹಳಷ್ಟಿರುವುದನ್ನು ಇದು ಸೂಚಿಸುವುದು ಸತ್ಯವಾಗಿದ್ದರೂ ಬಡತನ, ಹಸಿವು ಮಾತ್ರ ಇನ್ನೂ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಲೇ ಇವೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸವಲತ್ತುಗಳಿಲ್ಲದೆ ಹುಟ್ಟುವ ಬಹುಪಾಲು ಮಕ್ಕಳು ಸಾಯುತ್ತಿವೆ. ಮೂರನೇ ಎರಡಂಶ ಜನ ಇಂದಿಗೂ ಶುದ್ಧವಾದ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. ಅರ್ಧದಷ್ಟು ಹಳ್ಳಿಗಳು ಇಂದಿಗೂ ಉತ್ತಮ ರಸ್ತೆಗಳನ್ನು ಪಡೆದಿಲ್ಲ.ಶಾಲೆಗೆ ಹೋಗುವ ವಯಸ್ಸಿನ ಮಕ್ಕಳಲ್ಲಿ ಮೂರನೇ ಒಂದAಶ ಮಕ್ಕಳು ಬಾಲಕಾರ್ಮಿಕರು ದುಡಿಯುತ್ತಿದ್ದಾರೆ. ದೇಶದ ನಾಳಿನ ಪ್ರಜೆಗಳ ವಿದ್ಯಾಭ್ಯಾಸ ವಂಚಿತರಾಗುತ್ತಿದ್ದರೆ, ಫ್ರೌಢರಲ್ಲಿ ಮೂರನೇ ಎರಡಂಶ ಜನ ಅನಕ್ಷರಸ್ಥರು. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಗರೀಭಿ ಹಟಾವೋ, ಅಂತ್ಯೋದಯ, ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ, ಜವಾಹರ್ ರೋಜಗಾರ್ ಯೋಜನೆ, ಇಪ್ಪತ್ತು ಅಂಶಗಳ ಆರ್ಥಿಕ ಕಾರ್ಯಕ್ರಮ ಮುಂತಾದ ಹಲವಾರು ಯೋಜನೆಗಳನ್ನುಜಾರಿಗೆ ತಂದಿದೆ. ಅಭಿವೃದ್ಧಿ ಸಾಧಿಸಲು ಪೂರಕ ಕ್ರಮವಾಗಿ ಬ್ಯಾಂಕು ರಾಷ್ಟಿçÃಕರಣ, ಭೂ ಮಸೂದೆ ಜಾರಿಯಂತಹ ದಿಟ್ಟವಾದ ಕ್ರಮಗಳನ್ನು  ಸರ್ಕಾರ ಕೈಗೊಂಡಿದೆ. ಬಡಜನರ ಒಟ್ಟು ಕಲ್ಯಾಣ ಸಾಧಿಸಲು ಅನುಷ್ಠಾನ ಗೊಳಿಸಲಾದ ಯೋಜನೆಗಳ ಫಲವಾಗಿ ಆರೋಗ್ಯ, ವಸತಿ, ಶಿಕ್ಷಣ, ರಸ್ತೆ, ಸಂಪರ್ಕ, ವಿದ್ಯುತ್ ಮುಂತಾದ ಕ್ಷೇತ್ರಗಳಲ್ಲಿ ಕೊಂಚ ಪ್ರಗತಿ ಕಂಡು ಬಂದಿದೆ. ದೇಶದ ಬಡಜನರ ಒಟ್ಟು ಅವಶ್ಯಕತೆಗಳನ್ನು ಗಮನಿಸಿದರೆ ಇಂತಹ ಸಾಧನೆ ನಗಣ್ಯವೆನಿಸಿವೆ. ಇಂತಹ ಯೋಜನೆಗಳ ಅನುಷ್ಠಾನವಾಗುವ ಬಹಳಷ್ಟು ಸಂಪನ್ಮೂಲ ಮಾರ್ಗಮಧ್ಯದಲ್ಲಿ ಇಂಗಿ ಹೋಗುತ್ತಿದೆ. ಇದರಿಂದಾಗಿ ಮಧ್ಯವರ್ತಿಗಳು ಫಲಾನುಭವಿಗಳಿಗಿಂತಲೂ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ಇದು ಜನೋಪಯೋಗಿ ಯೋಜನೆಗಳ ಮಾತಾಯಿತು. ಇನ್ನು ಆರ್ಥಿಕ ಅಭಿವೃದ್ಧಿಯ ಫಲ ಜನ ಸಾಮಾನ್ಯರಿಗೆ ದೊರೆತಿದೆಯೋ ಇಲ್ಲವೋ ಎನ್ನುವ ಕುರಿತು ಬಹಳಷ್ಟು ಚರ್ಚೆ ನಡೆಯುತ್ತಿದೆ. ಅಭಿವೃದ್ಧಿಯ ಪಲದಲ್ಲಿ ಹೆಚ್ಚಿನಂಶವನ್ನು ಉಳ್ಳವರೇ ಪಡೆದರೆ ಬಡವರಿಗೆ ಯಾ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಇದರ ಪ್ರಯೋಜನೆ ಕಡಿಮೆ ದೊರಕುತ್ತಿದೆ. ಅಭಿವೃದ್ಧಿ ಹೊಂದಿದ ಕೃಷಿ ಪ್ರಧಾನ ರಾಜ್ಯಗಳಾದ ಪಂಜಾಬ್, ಹರ್ಯಾನ, ಗುಜರಾತ್ ಗಳಲ್ಲಿ ಕೂಡಾ ಒಟ್ಟು ಉತ್ಪನ್ನ, ಆದಾಯದಲ್ಲಿ ಬಹಳಷ್ಟು ಹೆಚ್ಚಳವಾಗಿದ್ದರೂ ಬಹಳಷ್ಟು ಕಾರಣಗಳಿಂದಾಗಿ ಇದು ಬಡಜನರಿಗೆ ಹರಿದುಹೋಗಿಲ್ಲ. ಸಾಮಾನ್ಯವಾಗಿ ಕೃಷಿಕ್ಷÉ್ಷÃತ್ರದಲ್ಲಾಗುವ ಹೆಚ್ಚುವರಿ ಉತ್ಪಾದನೆ ಸಣ್ಣ ರೈತರ ಮತ್ತು ಕೃಷಿಕಾರ್ಮಿಕರ ಆದಾಯ ವೃದ್ಧಿಸುತ್ತದೆಯಾದರೂ ಪಂಜಾಬ್, ಹರ್ಯಾನ ಮತ್ತು ಗುಜರಾತ್ ಗಳಲ್ಲಿ ಹೀಗಾಗಿಲ್ಲ. ಕಾರಣ, ಇಲ್ಲಿ ಉತ್ಪಾನೆ ಹೆಚ್ಚಿಸಲು (೧) ಕೃಷಿ ಕಾರ್ಮಿಕರ ಬದಲಿಗೆ ಕಾರ್ಮಿಕ ಶ್ರಮ ಉಳಿಸುವ ಯಂತ್ರಗಳ ಬಳಕೆಯಾಗಿದೆ. (೨) ಅತ್ಯಧಿಕ ಉತ್ಪಾದನೆ ದೊಡ್ಡ ರೈತರ ಮುತುವರ್ಜಿ ಮತ್ತು ಸ್ವಂತ ಶ್ರಮದ ಮೂಲಕ ಆಗಿದೆ. (೩) ಸಣ್ಣ ಮತ್ತು ಬಡ ರೈತರಿಗೆ ಅನಾನುಕೂಲಕರವಾದ ವಾತಾವರಣ ನಿರ್ಮಾಣದಿಂದಾಗಿ, ಅವರು ಕೃಷಿ ಕ್ಷೇತ್ರದಿಂದ ಹೊರಬಂದು ಕೂಲಿ ಕಾರ್ಮಿಕರಾಗಬೇಕಾಗಿದೆ (೪) ಗ್ರಾಮೀಣ ಪ್ರದೇಶದ ಕರಕುಶಲಕರ್ಮಿಗಳ ಮತ್ತು ಗುಡಿಕೈಗಾರಿಕೆಯನ್ನು ಅವಲಂಬಿಸಿದ್ಧ ಜನ, ಕಾರ್ಮಿಕ ಮಾರುಕಟ್ಟಗೆ ಬರುವಂತಾಗಿದೆ. ಇದು ಕೃಷಿಕ್ಷೇತ್ರದಲ್ಲಿನ ಬೆಳವಣಿಗೆಯಾದರೆ ಬೃಹತ್ ಬಂಡÀವಾಳ ಕೇಂದ್ರಿತ, ಕಾರ್ಮಿಕ ಶಕ್ತಿ ಉಳಿತಾಯದ ತಂತ್ರಜ್ಞಾನ ಬಳಸಿಕೊಂಡು ಕಾರ್ಯಾರಂಭ ಮಾಡಿದ ಉದ್ಯಮಗಳಿಂದಾಗಿ ಅನ್ಯ ಕ್ಷೇತ್ರದಲ್ಲಿನ ಪಾರಂಪರಿಕ ಕೈಗಾರಿಕೆಗಳು, ಸ್ಥಳೀಯ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದ ಉದ್ಯಮಗಳು ಮತ್ತು ಉದ್ಯಮವನ್ನಲಂಬಿಸಿದ್ದ ಜನ ಬಹಳ ತೊಂದರೆಗೊಳಗಾದರು. ಅಭಿವೃದ್ಧಿಯೊಂದಿಗೆ ಆರ್ಥಿಕ ಅಸಮಾನತೆ ಹೆಚ್ಚುತ್ತಾ ಹೋಯಿತು. ೧೯೭೦ ದಶಕದ ಮಧ್ಯಭಾಗದಲ್ಲಿ ಕಂಡು ಬಂದAತೆ ದೇಶದ ೨೫% ರಷ್ಟಿರುವ. ಶ್ರೀಮಂತ ಜನ ಒಟ್ಟು ಉತ್ಪನ್ನದ ೫೦% ಭಾಗವನ್ನು ಅನುಭವಿಸುತ್ತಿದ್ದರೆ ಕೆಳಸ್ತರದ ೨೫% ಜನ ಒಟ್ಟು ಉತ್ಪನ್ನದ ೭% ವನ್ನು ಪಡೆಯುತ್ತಿದ್ದರು. ಆದರೆ ಗ್ರಾಮೀಣ, ಭಾರತದಲ್ಲಿ ಆರ್ಥಿಕ ಅಸಮಾನತೆಯೊಂದಿಗೆ ಸಾಮಾಜಿಕ ಅಸಮಾನತೆ ಕೂಡಾ ಒಂದು ಭೀಕರ ಸಮಸ್ಯೆಯಾಗಿದೆ. ಎಲ್ಲ ರಂಗಗಳಲ್ಲಿ ದಲಿತ ವರ್ಗ ಶತಮಾನಗಳಿಂದಲೂ ಮೂಲೆಗುಂಪಾಗಿಸಲ್ಪಟ್ಟು ಮೇಲ್ವರ್ಗದವರ ದಬ್ಬಾಳಿಕೆಗೊಳಗಾಗಿದೆ. ಆರ್ಥಿಕ ಅಸಮಾನತೆಯೊಂದಿಗೆ, ಸಮಾಜಿಕ ಅಸಮಾನತೆಯೂ ಸೇರಿ ಸಮಸ್ಯೆಯು ಇನ್ನಷ್ಟು ಜಟಿಲವಾಗಿದೆ. ವಲಯಗಳಲ್ಲಿ ನಾವು ಸಾಧಿಸಿದ ಪ್ರಗತಿ, ಬೃಹದಾಕಾರÀದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ, ರಾಜಕೀಯ ಹಾಗೂ ಸಾಮಾಜಿಕ ಸಮಸ್ಯೆಗಳು, ಅಂತರಾಷ್ಟಿçÃಯ ಆಗುಹೋಗುಗಳ ಭಾರತದ ಮೇಲಣ ಪರಿಣಾಮಗಳಿಂದಾಗಿ “ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ’ಯಾಯಿತು. ಸ್ವಾತಂತ್ರಾö್ಯ ನಂತರದ ಒಟ್ಟು ಅಭಿವೃದ್ಧಿ ಯೋಜನೆಗಳ ಸ್ವÀರೂಪ, ಅವುಗಳ ಅನುಷ್ಠಾನ ಮತ್ತು ಅದರ ಪ್ರತಿಫಲ ಇವನ್ನು ಗಮನಿಸುವಾಗ ಈ ಕೆಳಗಿನ ಚಿತ್ರಣ ಸಿಗುತ್ತದೆ :

೧. ನಮ್ಮ ಅಭಿವೃದ್ಧಿ ಯೋಜನೆಯ ಸಿದ್ದಾಂತ ಮತ್ತು ಭೂಮಿಕೆ ಯಾವುದೊಂದು ನಿರ್ದಿಷ್ಟತೆಯಿಲ್ಲದ ಕಾರಣ ಬಿಗುವು ಕಳಕೊಂಡಿರುವುದು.

೨. ಅಭಿವೃದ್ಧಿ ಯೋಜನೆಯ ಸ್ವರೂಪವನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸಿದವರ ಮೇಲೆ ಪಾಶ್ಚಿಮಾತ್ಯರ ಅಭಿವೃದ್ಧಿ ನೀತಿಯ ಪ್ರಭಾವ ಮುಖ್ಯವಾಗಿದ್ದದು.

೩. ಅಭಿವೃದ್ಧಿ ಯೋಜನೆಗಳ ಫಲ ಶ್ರೀಮಂತರಿಗೆ ಹೆಚ್ಚು ದೊರೆತು, ಬಡಜನರಿಗೆ ಕೊಂಷ ಮಾತ್ರ ಹರಿದು ಬಂದದ್ದು.

೪. ಅಭಿವೃದ್ಧಿ ಯೋಜನೆಯಲ್ಲಿನ ಸ್ವರೂಪಾತ್ಮಕ ದೌರ್ಬಲ್ಯಗಳು ಸಾಮಾಜಿಕ ಅಸಮತೋಲನವನ್ನು ಭೇದಿಸಿ ಸಮಾಜದ ಎಲ್ಲ ವರ್ಗಗಳನ್ನು ಮುಟ್ಟುವಲ್ಲಿ ಯಶಸ್ಸು ಸಾಧಿಸದಿರುವುದು.

೫. ಅಭಿವೃದ್ಧಿ ಯೋಜನೆಗಳಲ್ಲಿ, ಆರ್ಥಿಕ ಧೋರಣೆಗಳ ಮೇಲಿನ ರಾಜಕೀಯ ಪ್ರಭಾವ.ಒತ್ತಡಗಳಿಂದಾಗಿ ನಿರಂತರತೆ ಇಲ್ಲದಿರುವುದು.

೬. ಅಲ್ಪ ಸ್ವಲ್ಪ ಪ್ರಗತಿ ಸಾಧಿಸಲು ಸಹಾಯಕವಾಗಿದ್ದು ಸಾರ್ವಜನಿಕ ರಂಗದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ, ಸರ್ಕಾರದ ಸಹಾಯಕವಾಗಿದ್ದು ಸರ್ವಜನಿಕ ರಂಗದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ, ಸರ್ಕಾರದ ಜನೋಪಯೋಗಿ ಉದ್ದೇಶಗಳಿಗಾಗಿ ಬಂಡÀವಾಳ ಹೂಡಿಕೆ, ಆರೋಗ್ಯ, ವಿದ್ಯಾಭ್ಯಾಸ, ಸಂಚಾರ ಮತ್ತು ಸಂಪರ್ಕ ಉದ್ಧೇಶಗಳಿಗಾಗಿ ಸರ್ಕಾರಿ ಖಜಾನೆಯ ಹಣ ವಿನಿಯೋಗದಿಂದಾಗಿ ಅಲ್ಪಸ್ವಲ್ಪ ಪಗ್ರತಿ ಸಾಧ್ಯವಾಗಿರುವುದು.

ಅತ್ತ ಬಂಡÀವಾಳ ಶಾಹಿಯೂ ಅಲ್ಲದೆ ಇತ್ತ ಸಂಪೂರ್ಣ ಸಮಾಜವಾದಿಯೂ ಅಲ್ಲದ ಮಧ್ಯಮಮಾರ್ಗದಲ್ಲಿ ಮುನ್ನಡೆಯುತ್ತಿದ್ದ ನಮ್ಮ ನೀತಿಯಲ್ಲಿ ೧೯೯೧ ರಿಂದೀಚೆಗೆ ಅಧ್ಬುತ ಬದಲಾವಣೆಗಳು ಕಾಣಲಾರಂಭಿಸಿದವು. ಇಂತಹ ಬದಲಾವಣೆಗಳು ನಮ್ಮ ಆರ್ಥಿಕ ಅಗತ್ಯಗಳಿಂದ ಯಾ ಸಾಮಾಜಿಕ ಅನಿವಾರ್ಯತೆಯಿಂದ ಉಂಟಾಗಲಿಲ್ಲ. ಬದಲಿಗೆ ವಿಶ್ವಬ್ಯಾಂಕ್, ಐ.ಎಂ.ಎಫ್. ಮತ್ತಿತರ ಸಹಸಂಸ್ಥೆಗಳ ಶರತ್ತುಗಳಿಗನುಸಾರಾವಾಗಿ ಮತ್ತು ಸದಾ ಬಡದೇಶಗಳನ್ನು ಉಪಯೋಗಿಸುತ್ತಾ ಬಂದ ಶ್ರೀಮಂತ ದೇಶಗಳ ಒತ್ತಾಯಕ್ಕನು ಗುಣವಾಗಿ ಆಗಿದೆ. ಈ ಬದಲಾವಣೆಗಳ ಬವಣೆ ಅನುಭವಿಸುವವರು ಬಡತನದಲ್ಲಿರುವ ಜನ.

೧೯೯೨-೯೩ ರ ಬಜೆಟ್ ಮಂಡನೆಗೆ ಮರ‍್ನಾಲ್ಕು ದಿನ ಮುಂಚಿತವಾಗಿ ರಾಷ್ಟಿçÃಯ ದೈನಿಕವೊಂದು ದೇಶದ ವಿತ್ತ ಸಚಿವ ಡಾ/ಮನಮೋಹನ್ ಸಿಂಗ್ ರವರು ವಿಶ್ವಬ್ಯಾಂಕ್ ನೊಂದಿಗೆ ಬಜೆಟ್ಗೆ ಸಂಬAಧಿಸಿದAತೆ ಪ್ರಮುಖ ವಿಷಯವೊಂದನ್ನು ಚರ್ಚಿಸಿದ್ದು ಅದನ್ನು ಪಾರ್ಲಿಮೆಂಟಿನಲ್ಲಿ ಬಹಿರಂಗ ಪಡಿಸಬೇಕೆಂದು ಒತ್ತಾಯಿಸಲಾಯಿತು. ಡಾ/ಮನಮೋಹನ್ ಸಿಂಗ್ ಇಂತಹ ರಹಸ್ಯ ಮಾತುಕತೆಯನ್ನು ಅಲ್ಲಗೆಳೆದರೆ, ಕೊನೆಗೆ (ಮಾಜಿ ಪ್ರಧಾನಿ ಚಂದ್ರಶೇಖರ್, ಪಾಶ್ಚಿಮಾತ್ಯ ದೇಶಗಳ ಮರ್ಜಿಯನ್ನು ಒಪ್ಪಲು ನಿರಾಕರಿಸಿದ್ದು ಈ ಮೊದಲು ಅನುಸರಿಸುತ್ತಾ ಬಂದ ಕೈಗಾರಿಕಾಲಾಭಿಯ ಬಗೆಗಿನ ಮೃದು ಧೋರಣೆ. ಕಾಂಗ್ರೆಸ್ ಪಕ್ಷವನ್ನು, ನಾಯಕರನ್ನು ಒಲೈಸಲು ಚಂದ್ರಶೇಖರ್ ನಿರಾಕರಿಸಿದುದು..... ಇತ್ಯಾದಿಗಳು ಚಂದ್ರಶೇಖರ್ ಸರಕಾರದ ಪತನಕ್ಕೆ ಕಾರಣವೆನ್ನುವ ಒಂದು ವಾದವೂ ಇದೆ) ಈ ರಹಸ್ಯ ವಿಷಯದ ಕುರಿತ ಪತ್ರದ ಪ್ರತಿಯೊಂದನ್ನು ಸದನದಲ್ಲಿ ಬಹಿರಂಗದಲ್ಲಿ ಪ್ರದರ್ಶಿಸಿದಾಗ ಅನಿವಾರ್ಯವಾಗಿ, ವಿಶ್ವಬ್ಯಾಂಕ್‌ನೊAದಿಗೆ ಸ್ವರೂಪಾತ್ಮಕ ಹೊಂದಾಣಿಕೆಯ ರೂಪದಲ್ಲಿ ಸಾಲವಾಗಿ ೫೦೦ ಮಿಲಿಯ ಅಮೇರಿಕನ್ ಡಾಲರ್ ಗಳನ್ನು ಪಡೆಯುವ ಕುರಿತ ಡಾ/ಸಿಂಗ್ ತಿಳಿಸಿದರು. ಈ ಸಾಲವನ್ನನುಸರಿಸಿ ಬರುವ ಶರತ್ತುಗಳೇನು ಎನ್ನುವುದನ್ನು ಡಾ.ಸಿಂಗ್ ಸ್ಪಷ್ಟವಾಗಿ ತಿಳಿಸಲಿಲ್ಲ. ಕಾಲಕ್ರಮೇಣ ನಾವು ಯಾವ ಶರತ್ತುಗಳಿಗೆ ಕತ್ತೊಡ್ಡಿ ಸಾಲ ಪಡೆದಿದ್ದೇವೆ ಮತ್ತು ಈ ಶರತ್ತುಗಳು ಏನೇನು ಎನ್ನುವುದು ಸರ್ಕಾರ ನೇಮಿಸಿದ ವಿವಿಧ ಸಮಿತಿಗಳ ಏಕರೂಪದ ಶಿಫಾರಸನ್ನು ನೋಡಿದರೆ ಎಂತಹವರಿಗೂ ತಿಳಿಯುತ್ತದೆ. ಸ್ವರೂಪಾತ್ಮಕ ಹೊಂದಾಣಿಕೆಯ ಆಶಯವಾದ ಹೊಸ ಆರ್ಥಿಕ ನೀತಿಯಿಂದ ದೇಶಕ್ಕೆ ಮತ್ತು ಜನರಿಗೆ ಒಳ್ಳೆಯದೇ ಆಗುತ್ತದೆ ಎನ್ನಲಾಗುತ್ತಿದೆ. ದೇಶ ಮತ್ತು ಜನ ಎಂದರೆ ಯಾರು? ದಿನವೊಂದರ ಇಪ್ಪತ್ತು ರೂಪಾಯಿಗೂ ಕಡಿಮೆ ಆದಾಯವಿರುವ ದೇಶದ ೮೦% ಜನರೋ ಅಥವಾ ದೇಶದ ೫% ಕ್ಕಿಂತಲೂ ಕಡಿಮೆಯಿರುವ ಶ್ರೀಮಂತರು ಮಾತ್ರವೇ? ಎನ್ನುವ ಒಂದು ಪ್ರಶ್ನೆಯೂ ನಮ್ಮ ಮುಂದಿದೆ. ಆರ್ಥಿಕ ಅಭಿವೃದ್ಧಿಗೆ ಇಂತಹ ಕ್ರಮ ತೀರಾ ಅನಿವಾರ್ಯ ಎಂದು ಸರ್ಕಾರ ಹೇಳುತ್ತಾ ಬಂದಿದೆ. ಇದಕ್ಕೆ ಪುರಾವೆಯಾಗಿ ಅಂಕಿ ಅಂಶಗಳ ಮೂಲಕ ಸಮರ್ಥನೆ ನೀಡಲಾಗುತ್ತಿದೆ. ೧೯೯೨ ರ ನಂತರ ಹೊಸ ಆರ್ಥಿಕ ನೀತಿಯನ್ವಯ ಸರ್ಕಾರ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳನ್ನು ಗಮನಿಸೋಣ:

೧. ರೂಪಾಯಿಯ ಮೌಲ್ಯದಲ್ಲಿ ೨೦% ರಷ್ಟು ಅಪಮೌಲ್ಯ.

೨. ವಿದೇಶಿ ಬಂಡÀವಾಳ ಹೂಡಿಕೆಯನ್ನು ಪ್ರೋತ್ಸಾಹಿಸುವ ಹೊಸ ಕೈಗಾರಿಕಾ ನೀತಿ.

೩. ಖಾಸಗೀ ಉದ್ಧಿಮೆ ರಂಗಕ್ಕೆ ಹೆಚ್ಚು ಹೆಚ್ಚು ಅವಕಾಶಗಳನ್ನು ಒದಗಿಸುವುದರ ಬಗ್ಗೆ ಕಾರ್ಯ ಯೋಜನೆ. (ರೋಗಗ್ರಸ್ತವೆಂದು ಪರಿಗಣಿಸಲಾದ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕೈಗಾರಿಕಾ ಮತ್ತು ಆರ್ಥಿಕ ಪುನಿರ್ಮಾಣ ನಿಗಮಕ್ಕೆ ಪರಿಶೀಲನೆಗಾಗಿ ವಹಿಸಿ ಬಿಡುವುದು)

೪. ಸಾರ್ವಜನಿಕ ರಂಗದ ಉದ್ದಿಮೆಗಳ ಲಾಭದಾಯಕ ಘಟಕಗಳ ಶೇರು ಬಂಡವಾಳದಲ್ಲಿ ಒಂದು ಭಾಗವನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡುವುದು.

೬. ದೇಶದ ಖಾಸಗೀ ವಲಯ ಮತ್ತು ಸಾರ್ವಜನಿಕ ರಂಗಗಳಲ್ಲಿ, ಆರ್ಥಿಕ ಬೆಳವಣಿಗೆಯ ಒಂದು ಯೋಜನೆಯಾಗಿ ದಕ್ಷತೆಯನ್ನು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ನಿರ್ಗಮನ ನೀತಿಯನ್ನು ಅನುಷ್ಠಾನಗೊಳಿಸುವುದು.

೭. ಹಣಕಾಸು  ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಬ್ಯಾಂಕಿAಗ್ ಕ್ಷೇತ್ರದಲ್ಲಿ  ಸುಧಾರಣೆಯ ಕಾರ್ಯಕ್ರಮವಾಗಿ ವಿದೆÉÃಶಿ ಬ್ಯಾಂಕುಗಳಿಗೆ ನಮ್ಮ ದೇಶದಲ್ಲಿ ವ್ಯವಹಾರ ನಡೆಸಲು ಮುಕ್ತ ಅವಕಾಶ ನೀಡುವುದು.

೮. ಎಲ್ಲ ಆಮದುಗಳನ್ನೂ ಮುಕ್ತಗೊಳಿಸುವುದು.

೯. ಯಾವುದೇ ಅಡೆತಡೆಗಳಿಲ್ಲದೆ ನಿರಾತಂಕಿತ ನಿರ್ಯಾತ ನೀತಿಯನ್ನು ಪಾಲಿಸುವುದು.

೧೦.ಮಾರುಕಟ್ಟೆ ಸ್ನೇಹದ ಕ್ರಮವನ್ನು (ಒಚಿಡಿಞeಣ ಜಿಡಿieಟಿಜಟಥಿ meಚಿsuಡಿes) ಅನುಸರಿಸುವುದು ಮತ್ತು ಸರ್ಕಾರದ ಹಸ್ತಕ್ಷೇಪವನ್ನು ನಿಲ್ಲಿಸುವುದು.

ಹೊಸ ಆರ್ಥಿಕ ನೀತಿ ಅಥವಾ ಆರ್ಥಿಕ ಸುಧಾರಣೆಗಲು ಅನುಷ್ಠಾನಗೊಂಡ ಎರಡು ವರ್ಷಗಳ ನಂತರ ನಮ್ಮ ದೇಶದ ಪ್ರಗತಿಯಲ್ಲಿ ಏನೇನು ಸುಧಾರಣೆಗಳಾಗಿವೆ ಮತ್ತು ಸುಧಾರಣೆಗಳ ಪರಿಣಾಮ ಯಾವ ರೀತಿಯಾಗಿದೆ ಎನ್ನುವುದನ್ನು ಸರ್ಕಾರವೇ ಹೊರಡಿಸಿದ ವರದಿಗಳ ಆಧಾರದ ಮೇಲೆ ಗಮನಿಸೋಣ ಮತ್ತು ಅವುಗಳ ಸತ್ಯಾಸತ್ಯತೆಯನ್ನು ವಿಮರ್ಶಿಸೋಣ.

೧೯೮೦ರಿಂದಲೂ ನಮ್ಮನ್ನು ಕಾಡುತ್ತಿದ್ದ ಸಮಸ್ಯೆಗಳಾದ ಹಣದುಬ್ಬರ, ಚಾಲ್ತಿ ಖಾತೆಯಲ್ಲಿನ ಕೊರತೆಯ ಹೆಚ್ಚಳ,ತೊಂದರೆಗಳಿಗೆಲ್ಲಾ ಮೂಲಕಾರಣವಾಗಿದ್ದ ಸರ್ಕಾರೀ ನೀತಿಯಲ್ಲಿ ಸೂಕ್ತ ಬದಲಾವಣೆ, ೧೯೯೦-೯೧ರಲ್ಲಿ ರಾಷ್ಟಿçÃಯ ಉತ್ಪಾದನೆಯ ೮.೪೫ರಷ್ಟಿದ್ದ ಬಜೆಟ್ ಕೊರತೆಯನ್ನು ೧೯೯೧-೯೨ರಲ್ಲಿ ೫.೭% ಕ್ಕೆ ಮತ್ತು ೧೯೯೩-೯೪ರಲ್ಲಿ ೪.೭% ಇಳಿಸುವಲ್ಲಿ ಸರ್ಕಾರದ ಯಶಸ್ಸು, ಕೈಗಾರಿಕಾ ನೀತಿಯನ್ನು ನವೀಕರಿಸುವ ಮೂಲಕ ಕೈಗಾರಿಕಾ ಲೈಸೆನ್ಸಿಂಗ್‌ನಲ್ಲಿ ಉದಾರೀಕರಣ, ಖಾಸಗೀ ವಲಯಗಳಿಗೆ ಹೆಚ್ಚಿನ ಸ್ವಾತಂತ್ರö್ಯ, ವಿದೇಶೀ ತಂತ್ರಜ್ಞಾನ ಪಡೆಯುವಲ್ಲಿದ್ದ ತೊಡಕುಗಳನ್ನು ನಿವಾರಿಸುವ ಮೂಲಕ ಉತ್ಪಾದಕತೆಯ ವೃದ್ಧಿಗಾಗಿ ಮುಕ್ತ ವಾತಾವರಣದ ನಿರ್ಮಾಣ -ಇವೆಲ್ಲದರ ಪರಿಣಾಮವಾಗಿ ದಕ್ಷತೆಗೆ ಇನ್ನೊಂದು ಹೆಸರಾಗಿರುವ ಖಾಸಗೀ ವಲಯದಲ್ಲಿ ಉತ್ಪಾದಕ ಚಟುವಟಿಕೆಗಳು ತೀವ್ರಗೊಂಡಿವೆ. ಈ ಹಿಂದೆ ರಫ್ತು ಮತ್ತು ಕೃಷಿ ನೀತಿಗೆ ಸರ್ಕಾರ ಹೆಚ್ಚಿನ ರಕ್ಷಣೆ ನೀಡುತ್ತಿದ್ದು. ಇದಕ್ಕೆ ಸಂಬAಧಿಸಿದAತೆ ವ್ಯಾಪಾರೀ ವಲಯದ ಆಮದನ್ನು ನಿರ್ಬಂಧಿಸುವ ಮೂಲಕ ವ್ಯಾಪಾರೀ ವಲಯದ ಹಿತಸಕ್ತಿಗಳನ್ನು ಹತ್ತಿಕ್ಕಲಾಗುತ್ತಿತ್ತು. ಉದಾರೀಕರಣದ ನಂತರ ವ್ಯಾಪಾರ ಮತ್ತು ವಿನಿಮಯ ದರ ಪದ್ಧತಿಯನ್ನು ಸರ್ಕಾರ ಸಡಿಲಗೊಳಿಸುವ ಮೂಲಕ ವಿಶ್ವಮಾರುಕಟ್ಟೆಯಲ್ಲಿ ಸ್ಪರ್ಧಿಸಬಲ್ಲಂತಹ ಉತ್ಪನ್ನಗಳನ್ನು ನೀಡುವಷ್ಟು ನೈಪುಣ್ಯ ಪೂರ್ಣ ತಂತ್ರಗಾರಿಕೆಯನ್ನು ಪಡೆದಿರುತ್ತೇವೆ. ಈ ಹಿಂದೆ ವಿದೇಶಿ ಬಂಡವಾಳ ನೀತಿಯನ್ನು ಸಡಿಲಗೊಳಿಸುವ ಮೂಲಕ ನಾವು ವಿದೇಶೀ ಬಂಡವಾಳ ಹೆಚ್ಚು ಹೆಚ್ಚು ಹರಿದು ಬರುವಂತೆ ಮಾಡಿದ್ದೇವೆ. ಬಂಡÀವಾಳದೊAದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ವಿಶ್ವಮಾರುಕಟ್ಟೆಯಲ್ಲಿ ಸ್ಪರ್ಧಿಸಬಲ್ಲಂತಹ ಉತ್ಪನ್ನಗಳನ್ನು ನೀಡುವಷ್ಟು ನೈಪುಣ್ಯಪೂರ್ಣ ತಂತ್ರಗಾರಿಕೆಯನ್ನು ಪಡೆದಿರುತ್ತೇವೆ. ಈ ಹಿಂದೆ ವಿದೇಶೀ ಬಂಡÀವಾಳ ಹೂಡಿಕೆಗೆ ಇದ್ದಂತಹ ಸರ್ಕಾರಿ ಹಾಗೂ ಅಧಿಕಾರಿಶಾಹೀ ವ್ಯವಸ್ಥೆಯಲ್ಲಿನ ಗೊಂದಲ, ತೊಂದರೆಗಳನ್ನು ನಿವಾರಿಸಲಾಗಿದೆ. ತೆರಿಗೆ ಸುದಾರಣಾ ಕಾರ್ಯಕ್ರಮಗಳನ್ನು ಡಾ. ಚೆಲ್ಲಯ್ಯ ಸಮಿತಿಯ ವರದಿಯ ಆಧಾರದಲ್ಲಿ ಜಾರಿಗೊಳಿಸಲಾಗುತ್ತಿದೆ. ಬಂಡÀವಾಳ ಹೂಡಿಕೆ ಮತ್ತು ನೀಡಿಕೆ ನಿಯಂತ್ರಣ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ. ಶೇರು ಮಾರುಕಟ್ಟೆಯ ನಿರ್ವಾಹಕ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಮತ್ತು ನಿಯಂತ್ರಿಸಲು ಸೆಕ್ಯುರಿಟೀಸ್ ಎಕ್ಸ್ ಚೇಂಜ್ ಬೋಡ್ ಆಫ್ ಇಂಡಿಯಾ (SಇಃI) ಅಸ್ತಿತ್ವಕ್ಕೆ ಬಂದ ಮ್ಯೂಚ್ಯುವಲ್ ಫಂಡ್‌ಗಳಿಗೆ ಹಣ ಹೂಡಲು ಮತ್ತು ತೊಡಗಿಸಲು ಹಸಿರು ನಿಶಾನೆ ತೋರಿಸಲಾಗಿದೆ.  ಸಾರ್ವಜನಿಕ ರಂಗದ ಉದ್ದಿಮೆಗಳಿಗೆ ಸರ್ಕಾರದ ಬೊಕ್ಕಸದಿಂದ ಹರಿದು ಬರುವ ಹಣವನ್ನು ನಿಲ್ಲಿಸಿ ಅವನ್ನು ಸ್ವಯಂಸAಪನ್ಮೂಲ ನೆಲೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಒಂದೊಮ್ಮೆ ಯಾವುದೇ ಸರ್ಕಾರೀ ರಂಗದ ಉದ್ದಿಮೆ ನಷ್ಟದಿಂದ ಯಾ ಸಂಚಿತ ನಷ್ಟದಿಂದ ಬಳಲುತ್ತಿದ್ದರೆ, ಅದನ್ನು ನಿಧಾನವಾಗಿ ಸಾಯಲುಬಿಡುವ ಯಾ ಖಾಸಗೀ ವಲಯಕ್ಕೆ ಮಾರಿ ಬಿಡುವ ನಿರ್ಧಾರ ಮಾಡಲಾಗುತ್ತದೆ. ಕಾನೂನಿನಲ್ಲಿ ಸೂಕ್ತ ಮಾರ್ಪಾಡು ತರುವ ಮೂಲಕ ರೋಗಗ್ರಸ್ತ  ಉದ್ದಿಮೆಗಳನ್ನು ಬಿ.ಐ.ಎಫ್.ಆರ್. ಗೆ (ಬ್ಯೂರೋ ಆಫ್ ಇಂಡಸ್ಟಿçಯಲ್ ಎಂಡ್ ಫೈನ್ಯಾನ್ಷಿಯಲ್ ರೀಕನ್‌ಸ್ಟçಕ್ಷನೆಗೆ) ಶಿಫಾರಸಿಗಾಗಿ ವಹಿಸಿ ಕೊಡಲಾಗುವುದು. ಇತ್ಯಾದಿ....

೧೯೯೩ರ ಮೇ ೩೧ರಂದು ವಿಶ್ವಬ್ಯಾಂಕ್ ಅಧ್ಯಕ್ಷರಿಗೆ ನಮ್ಮ ದೇಶದ ವಿತ್ತ ಸಚಿವ ಡಾ. ಮನಮೋಹನ್ ಸಿಂಗ್ ಅವರು ಬರೆದ ಪತ್ರದಲ್ಲಿ ಮೊಟ್ಟಮೊದಲ ಬಾರಿಗೆ ಸ್ವರೂಪಾತ್ಮಕ ಹೊಂದಾಣಿಕೆಗಳು ನಿರೀಕ್ಷಿತ ಫಲ ನೀಡುತ್ತಿಲ್ಲ ಎನ್ನುವುದನ್ನು ಚಿಕಿತ್ಸೆಯ ರೋಗ ನಿವಾರಕ ಫಲಕ್ಕಿಂತ ಅನ್ಯ ತೊಂದರೆಗಳೇ ಅಧಿಕವಾಗಿದ್ದು ಹೇಗೆ ಇದು ಪಕ್ಕೆಗೆ ಚುಚ್ಚುವ ಮುಳ್ಳುಗಳಾಗಿವೆ ಎನ್ನುವುದನ್ನೂ ಒಪ್ಪಿಕೊಂಡಿದ್ದಾರೆ. ಈ ಎಲ್ಲ ವಿಷಯಗಳನ್ನು ಅವಲೋಕಿಸಿದಾಗ ಒಂದು ಅಂಶವAತೂ ಸ್ಪಷ್ಟವಾಗುತ್ತದೆ. ಅದೆಂದರೆ ಯಾವ ಹಾನಿಯನ್ನು ತಪ್ಪಿಸಲಿಕ್ಕಾಗಿ ನಾವು ಶರತ್ತು ಬದ್ಧ ಸಾಲ ಪಡೆಯಲು ಆರ್ಥಿಕ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ತಂದೆವೋ ಎರಡು ವರ್ಷಗಳ ನಂತರವೂ ನಮ್ಮ ದೇಶ ಸಂಭಾವ್ಯ ದುರಂತವನ್ನು ಮೀರಿ ಬೆಳೆಯಲಿಲ್ಲ. ಅದರ ಬದಲು ಋಣಭಾರದಿಂದ ಕುಗ್ಗಿ ಹೋಗಿದೆ ೧೯೯೪-೯೫ರಲ್ಲಿ ಸಾಲ ಮರುಪಾವತಿ ಪ್ರಾರಂಭವಾದರೆ ಮತ್ತೆ ನಾವು ವಿಶ್ವಬ್ಯಾಂಕ್ ನಿಂದ ಸಾಲ ಪಡೆಯಬೇಕಾಗಿ ಬರಬಹುದೇನೋ? ಈ ವಿಷಯಕ್ಕೆ ಸಂಬAಧಿಸಿದAತೆ ಅಂಕಿ ಅಂಶಗಳ ಪುರಾವೆಗಳನ್ನು ನೀಡುತ್ತಿವೆ. ವ್ಯಾಪಾರ ಮತ್ತು ಪಾವತಿ ನೀತಿ ಸುದಾರಣೆಯ ಮೂಲಕ ನಾವು ಪ್ರೋತ್ಸಾಹಿಸಿದ ರಫ್ತು, ಡಾಲರುಗಳಲ್ಲಿ ಅಂತಹ ಹೆಚ್ಚಳವನ್ನೇನೂ ಉಂಟುಮಾಡಿಲ್ಲ. ೧೯೯೪-೯೫ರಲ್ಲಿ ನಮ್ಮ ಸಾಲ ಮರುಪಾವತಿ ಪ್ರಾರಂಭವಾಗುವ ವೇಳೆಗೆ ಡಾಲರು ಮೌಲ್ಯದಲ್ಲಿ ಸಾಧಿಸಬೇಕಾಗಿರುವ ರಫ್ತು ಹೆಚ್ಚಳ ಕನಿಷ್ಟ ೧೫% ರಷ್ಟು ಏರಿಕೆಯಾಗಬೇಕಿದೆ. ಆದರೆ ಸದ್ಯದ ಹೆಚ್ಚಳ ಶೇಕಡಾ ೧% ಮಾತ್ರ. ೧೯೯೦-೯೧ಕ್ಕೆ ಹೋಲಿಕೆÀಯಾಗಿ ಕಳೆದ ವರ್ಷಾಂತ್ಯಕ್ಕೆ ಹೋಲಿಸಿದಾಗ ರಫ್ತು ನಿರೀಕ್ಷಿತ ಮಟ್ಟಕ್ಕಿಂತ ೨೦% ರಷ್ಟು ಕಡಿಮೆಯಾಗಿದೆ. ಎನ್ನು ಆಮದು ೧೯೯೦-೯೧ ಮಟ್ಟಕ್ಕಿಂತ ಕಡಿಮೆಯಾಗಿದ್ದರೆ ಚಾಲ್ತಿ ಖಾತೆಯ ಕೊರತೆ ಅದೇ ಪಂಚವಾರ್ಷಿಕ ಯೋಜನೆ ಅವಧಿಯ ಸರಾಸರಿ ಪ್ರತಿಶತಕ್ಕಿಂತ ಕಡಿಮೆಯಾಗಿಲ್ಲ ಎನ್ನುವುದು ಪರಿಸ್ಥಿತಿಯ ವಿಷಮತೆ ಕಡಿಮೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಬಾಹ್ಯ ಸಾಲಗಳ ಒತ್ತಡ ಹೆಚ್ಚುತ್ತಿದ್ದು ೧೯೯೪-೯೫ ರ ವೇಳೆಗೆ ಮತ್ತೊಂದು ಸಾಲ ಸಂಕಟ ಪ್ರಾರಂಭವಾಗುವ ಎಲ್ಲ ಸೂಚನೆಗಳೂ ಸ್ಪಷ್ಟವಾಗಿವೆ. ಒಟ್ಟು ಉತ್ಪನ್ನಗಳ ಶೇಕಡಾವಾರು ಪ್ರಮಾಣದಲ್ಲಿ ಸರ್ಕಾರದ ಕಂದಾಯ ಕೊರತೆ ೧೯೯೦-೯೧ರಲ್ಲಿ ಮತ್ತೆ ೧೯೯೨-೯೩ ರಲ್ಲಿ ಆರನೆಯ ಯೋಜನಾಂತ್ಯದಲ್ಲಿ ಯಾವ ರೀತಿಯಲ್ಲೂ ಕಡಿಮೆಯಾಗಿಲ್ಲ. ಬಜೆಟ್ ಕೊರೆತೆಯಲ್ಲಿ ಕಡಿತ ಉಂಟುಮಾಡಿರುವುದು ಬಂಡವಾಳ ಖರ್ಚುಗಳಲ್ಲಿ ತೀವ್ರ ಇಳಿತ ಮಾಡುವ ಮೂಲಕವೇ ಆಗಿದೆ. ಈ ರೀತಿ ಬಂಡÀವಾಳ ಖರ್ಚಿನಲ್ಲಿ ಕಡಿತ ಮಾಡುವ ಮೂಲಕ ಅಲ್ಪಕಾಲಿಕವಾಗಿ ಹಣದುಬ್ಬರ ಕಡಿಮೆಯಾಗಿ ಬೆಲೆ ಏರಿಕೆಯಲ್ಲಿ ಇಳಿಕೆ ಕಂಡುಬAದು ಒಳ್ಳೆಯದಾದಂತೆ ಕಾಣಬಹುದು. ಆದರೆ ಸರ್ಕಾರಿ ರಂಗಗಳಾದ ಶಿಕ್ಷಣ, ಅಭಿವೃದ್ಧಿ, ಆರೋಗ್ಯ ಮುಂತಾದ ಕ್ಷೇತ್ರಗಳು ಇದರಿಂದಾಗಿ ಕಂಗೆಟ್ಟಿವೆ. ಅಂದರೆ ಇಂತಹ ಅಲ್ಪಾವಧಿ ಪರಿಣಾಮ ಉಂಟುಮಾಡಲು ದೇಶದ ಬಡಜನರ ಹಿತಾಸಕ್ತಿಗಳನ್ನು ನಿರ್ದಯವಾಗಿ ಬಲಿಗೊಡಲಾಗಿದೆ. ಮುಂದಿನ ದಿನಗಳಲ್ಲಿ ಒಟ್ಟು ಉತ್ಪಾದನಾ ಪ್ರಮಾಣ ಕಡಿಮೆಯಾಗುವ ಅಪಾಯವಿದೆ. ದೇಶದ ಕೈಗಾರಿಕಾರಂಗದ ಉತ್ಪಾದನೆಯನ್ನು ತೆಗಡದುಕೊಂಡರೆ ೯೨-೯೩ ರಲ್ಲಿ ಕೇವಲ ಶೇಕಡಾ ೧%ರಷ್ಟು ವೃದ್ಧಿಯಾಗಿದೆ (೯೦-೯೧ಕ್ಕೆ ಹೋಲಿಕೆಯಾಗಿ) ಅಂದರೆ ಇದು ಹೊಸ ಆರ್ಥಿಕ ನೀತಿಯನ್ವಯ ನಿರೀಕ್ಷಿಸುವ ಮಟ್ಟಕ್ಕಿಂತ ೧೬% ಕಡಿಮೆಯಾಗಿದೆ. ಅನ್ವಯಿಕ ಅರ್ಥಶಾಸ್ತç ಇಕನಾಮಿಕ್ ರೀಸರ್ಚ್) ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ ೧೯೯೩-೯೫ ರಲ್ಲಿ ಬಂಡವಾಳ ಹೂಡಿಕೆಯಲ್ಲಿ ನಿರುತ್ಸಾಹದ ವಾತಾವರಣವೇ ಕಂಡುಬರಲಿದೆ. ಇದರ ಪರಿಣಾಮವಾಗಿ ಖಾಸಗೀ ವಲಯದಲ್ಲಿ ಉತ್ಪಾದನಾ ಪ್ರಮಾಣ, ಉದ್ಯೋಗವಕಾಶಗಳು ಹೆಚ್ಚುವ ಸೂಚನೆಗಳಿಲ್ಲ. ಅತ್ತ ಸಾರ್ವಜನಿಕ ರಂಗದಲ್ಲಿಯೂ ಹೊಸ ಯೋಜನೆಯಿಂದಾಗಿ ಬಂಡವಾಳ ಹೂಡಿಕೆಯಲ್ಲಿ ಕಡಿತ, ನಿರ್ಗಮನ ನೀತಿ, ಖಾಸಗೀಕರಣ, ರೋಗಗ್ರಸ್ತ ಉದ್ಯಮಗಳ ಮುಚ್ಚವಿಕೆ ಮುಂತಾದ ಕ್ರಮಗಳಿಂದ ಒಟ್ಟು ಉತ್ಪಾದನೆ ಮತ್ತು ಉದ್ಯೋಗಗಳ ಅವಕಾಶದಲ್ಲಿ ಕುಸಿತ ಮುಂತಾದ ಪರಿಣಾಮಗಳಾಗುವುದರಿಂದ ಸ್ವರೂಪಾತ್ಮಕ ಹೊಂದಾಣಿಕೆಯ ಪರಿಣಾಮ ಯಾರ ಮೇಲೆ ಆಗುತ್ತದೆ ಎನ್ನುವುದು ಸುಸ್ಪಷ್ಟ.

ಬೃಹತ್ ಉದ್ದಿಮೆಗಳಿಗೆ ಮತ್ತು ವಿದೇಶಿ ಬಂಡÀವಾಳ ಹೂಡಿಕೆದಾರರಿಗೆ ಎಲ್ಲ ದಾರಿಗಳನ್ನೂ ಸುಗಮಗೊಳಿಸುವ ಅತ್ಯುತ್ಸಾಹದಲ್ಲಿ ದೇಶದ ಬಹುಪಾಲು ಜನರನ್ನು ಪೋಷಿಸುತ್ತಿರುವ ಸಹಕಾರಿ ರಂಗ ಮತ್ತು ಸಣ್ಣ ಉದ್ದಿಮೆದಾರರನ್ನು ಸರಕಾರ ಮರೆತೇ ಬಿಟ್ಟಿದೆ. ಆರ್ಥಿಕ ಸ್ವಾವಲಂಬನೆ ಮತು ಉದ್ಯೋಗದ ದೃಷ್ಟಿಯಿಂದ ಹೆಚ್ಚು ಲಾಭದೈಕವೆನಿಸುವ ಈ ವಲಯವನ್ನು ಕಡೆಗಣಿಸಲಾಗಿದೆ. ದೇಶೀಯ ತಂತ್ರಜ್ಞಾನ ಬಳಸಿ ಕಡಿಮೆ ಬಂಡವಾಳ ವಿನಿಯೋಗಿಸುವ ಇವು ಆದಾಯ ವಿತರಣೆಯಲ್ಲಿ ಹೆಚ್ಚು ಸಮಾನತೆಯನ್ನು ಕಾಯ್ದುಕೊಂಡಿವೆ. ಈ ರಂಗಕ್ಕೆ ತೊಡಕಾಗಿರುವ ಲೈಸನ್ಸ್ ವ್ಯವಸ್ಥೆಯನ್ನು ತೆಗೆದುಹಾಕಿಲ್ಲ. ಯಾವ ರೀತಿಯ ಪ್ರೋತ್ಸಾಹವನ್ನೂ ನೀಡಿಲ್ಲ. ಲಿಬರಲೈಸೇಶನ್ ಬಗೆಗಿನ ಚರ್ಚೆಯಲ್ಲಿ ಯೋಜನಾ ಆಯೋಗದ ಮಾಜಿ ಸದಸ್ಯೆ ಡಾ/ಎಲ್.ಸಿ.ಜೈನ್ ಅವರು ಅಂದAತೆ ಆರ್ಥಿಕ ಉದಾರೀಕರಣದ ಎಲ್ಲಾ ಕಸರತ್ತುಗಳನ್ನು ಮಾಡಿಯೂ ನಮ್ಮ ಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ ಎನ್ನುವುದನ್ನು ವಿಷದ ಪಡಿಸುವ ಇನ್ನೊಂದು ಅಂಶವೆAದರೆ ನಾವು ವಿದೇಶೀ ಹೂಡಿಕೆದಾರರ ದೃಷ್ಟಿಯಲ್ಲಿ ಮತ್ತು ವಿದೇಶೀ ಬ್ಯಾಂಕುಗಳ ದೃಷ್ಟಿಯಲ್ಲಿ ಉದಾರೀಕರಣ ಪೂರ್ವ ಅವಧಿಯಲ್ಲಿದ್ದದ್ದಕ್ಕಿಂತ ಹೆಚ್ಚಿನ ಅಂಕಗಳನ್ನ ಋಣನಿರ್ಧಾರಕ ವಿಷಯದಲ್ಲಿ ಪಡೆಯದಿರುವುದು. ವಿದೇಶೀ ಹೂಡಿಕೆದಾರರಿಗೆ ನಾವು ರತ್ನಗಂಬಳಿ ಹಾಸಿದರೂ ನಿರೀಕ್ಷಿತ ಮಟ್ಟದಲ್ಲಿ ಆಕರ್ಷಿಸಿಲ್ಲ. ವಿದೇಶೀ ಬಂಡವಾಳಗಾರರು ಜಾಗತಿಕ ಬ್ಯಾಂಕ್, ದ್ರವ್ಯನಿಧಿಗಳ ಸಾಲ ಪಡೆದ ದೇಶಗಳ ಮೇಲೆ ಉಂಟುಮಾಡಬಹುದಾದ ಅಂತಿಮ ಪರಿಣಾಮದ ಕುರಿತು ಹೆಚ್ಚು ಆಸಕ್ತಿ ಹೊಂದಿರುತ್ತಾರೆಯೋ ಹೊರೆತು ಅದನ್ನು ನಾವು ಉಪಯೋಗಿಸಿ ಹೇಗೆ ಕಾರ್ಯ ನಿರ್ವಹಿಸುತ್ತೇವೆ ಎಂಬುದರಲ್ಲಲ್ಲ. ವಿಶ್ವಬ್ಯಾಂಕಿನ ಉದಾರೀಕರಣ ಕ್ರಮವನ್ನು ಪಾಠ ಓದಿದ ರೀತಿಯಲ್ಲಿ  ಅನುಷ್ಠಾನ ಮಾಡುವ ಮೊದಲು ಅರ್ಥವ್ಯವಸ್ಥೆಯನ್ನು ಅಧ್ಯಯನ ಮಾಡಿ ಅದಕ್ಕೆ ಸೂಕ್ತವಾಗಿ ಸ್ಪಂದಿಸುವ ಕ್ರಮ ತೆಗೆದುಕೊಳ್ಳುವ ಗೋಜಿಗೇ ನಾವು ಹೋಗಿಲ್ಲ. ಇಂತಹ ಸ್ವರೂಪಾತ್ಮಕ ಹೊಂದಾಣಿಕೆಯ ಕಾರ್ಯಕ್ರಮಗಳು ಯಾವಾಗಲು ಬಿಸಿಲ್ಗುದುರೆಯ ಬೆನ್ನು ಹತ್ತುತ್ತವೆಯೇ ಹೊರತು ಇದವರೆಗೆ ಎಲ್ಲೂ ಉತ್ತಮ ಸ್ಥಿತಿಯನ್ನುಉಂಟು ಮಾಡಿದ ದಾಖಲೆಗಳಿಲ್ಲ. ನಮ್ಮ ಋಣ ನಿರ್ಧಾರಕ ಅಂಶಗಳನ್ನು ನಿರ್ಧರಿಸುವ ಸಂಸ್ಥೆಗಳ ರಾಜಕೀಯ  ಪರಿಸ್ಥಿತಿ,ಹೂಡಿಕೆ ನಿರ್ವಹಣೆ, ರಫ್ತು ಆದಾಯ, ಉಳಿತಾಯ ಮುಂತಾದ ಅಂಶಗಳ ಆಧಾರದ ಮೇಲೆ ನಮ್ಮ ಯೋಗ್ಯತೆಯನ್ನು ನಿರ್ಧರಿಸುತ್ತವೆಯೇ ಹೊರತು ನಾವು ವಿಧೇಯರಾಗಿ ಜಾರಿ ಮಾಡುವ ಯೋಜನೆಗಳನ್ನು ಆಧರಿಸಿ ಅಲ್ಲ. ನಮ್ಮ ದೇಶದ ರಾಜಕೀಯ ಪರಿಸ್ಥಿತಿಯು ಡೋಲಾಯಮಾನವಾಗಿಯೇ  ಮುಂದುವರಿದಿದ್ದು, ಕಾಂಗ್ರೆಸ್ ಪಕ್ಷ ತಾತ್ವಿಕವಾಗಿ ಬಲಪಂಥೀಯ ಬಿಜೆಪಿ ಯೊಂದಿಗೆ ಒಂದು ರೀತಿಯ ಹೊಂದಾಣಿಕೆಯ ಮನೋಭಾವದಿಂದ ನಡೆದುಕೊಳ್ಳುತ್ತಿರುವುದರಿಂದ ಸರ್ಕಾರದ ಬದ್ಧತೆಯ ಕುರಿತೇ ಅನುಮಾನಗಳಿವೆ.     

ನಮ್ಮ ಅರ್ಥವ್ಯವಸ್ಥೆಯನ್ನು ಉದಾರೀಕರಣದ ನಂತರ ಅಪಾಯದಿಂದ ರಕ್ಷಿಸಿದ್ದು ಕೃಷಿಕ್ಷೇತ್ರ ಮಾತ್ರ ಉತ್ತಮ ಮುಂಗಾರು ಹಣದುಬ್ಬರ ಕಡಿಮೆಯಾಗಲು ಪ್ರಮುಖ ಕಾರಣ ೧೯೯೦-೯೧ ಹೋಲಿಸಿದರೆ ೯೨-೯೩ ಶೇಕಡಾ ೩% ರಷ್ಟು ಅಧಿಕ ಉತ್ಪಾದನೆಯಿದೆ. ಮಾತ್ರವಲ್ಲ ಸದ್ಯದ ಪರಿಸ್ಥಿತಿಯಲ್ಲಿ ಮುಂಬರುವ ವರ್ಷ ಕೂಡಾ ಇಷ್ಟೇ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಕೃಷಿ ಉತ್ಪನ್ನಗಳ ಮತ್ತ ಕೃಷಿ ಆಧಾರಿತ ಕೈಗಾರಿಕಾ ಉತ್ಪನ್ನಗಳ ಮತ್ತ ಕೃಷಿ ಆಧಾರಿತ ಕೈಗಾರಿಕಾ ಉತ್ಪನ್ನ ಸಂಬAಧಿ ಹಣದುಬ್ಬರದ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬರುತ್ತದೆ. ಉದಾರೀಕರಣ ನೀತಿಯಲ್ಲಿ ಉತ್ತಮ ಫಲಿತಾಂಶ ನೀಡಿದ ಒಂದೇ ಒಂದು ಅಂಶವೆAದರೆ ಸರಿಯಾದ ಪ್ರಮಾಣದಲ್ಲಿ ಅಪಮೌಲ್ಯೀಕರಣಗೊಂಡ ರೂಪಾಯಿ ಹಣದುಬ್ಬರ ತಡೆಹಿಡಿಯಲು ಸಫಲವಾದದ್ದು. 

ವಸ್ತು ಸ್ಥಿತಿ ಗಮನಿಸಿದರೆ ನಮಗೆ ಮನದಟ್ಟಾಗುವ ಅಂಶಗಳೆAದರೆ, ನಾವು ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ವಿಫಲರಾಗಿದ್ದೇವೆ, ಮಾನವ ಸಂಪನ್ಮೂಲ ಅಧಿಕವಾಗಿರುವ ನಮ್ಮ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ವಿದೇಶಿ ತಂತ್ರಜ್ಞಾನ ಮತ್ತು ಬಂಡÀವಾಳ ಹೂಡಿಕೆಯಿಂದಾಗಿ ಈಗಾಗಳೆ ತೊಂದರೆಗೀಡಾಗಿವೆ. ಉದ್ಯೋಗಾವಕಾಶಗಳಲ್ಲಿ ತೀರಾ ಇಳಿತವುಂಟಾಗಿದೆ. ಶ್ರೀಮಂತ ವರ್ಗಕ್ಕೆ ತೆರಿಗೆ ಕಡಿತ ಮುಂತಾದ ಪ್ರೋತ್ಸಾಹಕ ಕ್ರಮ ನೀಡುತ್ತಿದ್ದೇವೆ ಪಡಿತರ, ಆಹಾರ ಮತ್ತಿತರ ಜೀವನಾವಶ್ಯಕ ವಸ್ತುಗಳ ಬೆಲೆ ಏರುತ್ತಲೆ ಇವೆ.

ಇದೆಲ್ಲವನ್ನು ಗಮನಿಸಿದಾಗ ಸ್ವರೂಪಾತ್ಮಕ ಹೊಂದಾಣಿಕೆ ನಮ್ಮನ್ನು ಎಲ್ಲಿಗೆ ಒಯ್ಯಬಹುದೆನ್ನುವ ಭಯ ಉಂಟಾಗುತ್ತದೆ. ಸರಕಾರ ನೀಡುತ್ತಿರುವ ಆಶಾದಾಯಕ ಭರವಸೆಗಳ ಬರೀ ನಿರೀಕ್ಷೆ ಹುಟ್ಟಿಸಬಹುದೇ ಹೊರತು ಫಲವನ್ನಲ್ಲ.

ಭಾಗÀ: ೨

ಭಾರತೀಯ ಆರ್ಥಿಕ ವ್ಯವಸ್ಥೆಯ ಅಭಿವೃದ್ಧಿಯ ಏಳು ಬೀಳುಗಳತ್ತ ಒಂದು ಹೊರಳು ನೋಟ

ಐದು ಶತಮಾನಗಳಷ್ಟು ಕಾಲ ಸಾಮ್ರಾಜ್ಯಶಾಹಿ ಆಡಳಿತಕ್ಕೊಳಪಟ್ಟ ನಮ್ಮ ದೇಶದಲ್ಲಿ ಬಡತನ, ಸಾಮಾಜಿಕ ಆರ್ಥಿಕ ಅಸಮಾನತೆಯೇ ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯ ಸ್ವಾತಂತ್ರಾö್ಯ ನಂತರ ನಮ್ಮ ಮುಂದಿದ್ದ ಗುರಿಯಾಗಿತ್ತು, ಇಂತಹ ಜಟಿಲವಾದ ಸಮಸ್ಯೆಗಳಿಗೆ ಅಭಿವೃದ್ಧಿ ನೀತಿಯೊಂದನ್ನು ರೂಪಿಸಿಕೊಂಡು ಹೆಚ್ಚುವರಿ ಸಂಪತ್ತನ್ನು ಸೃಷ್ಟಿಸಿ ಅದರ ವಿತರಣೆ  ಮಾಡುವ ಮೂಲಕ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡÀÄವ ಮೂಲಕ ಪರಿಹಾರ ಸಾಧ್ಯವಿದೆ. ಆರ್ಥಿಕ ಸಮಾನತೆ ಸಾಧಿಸಿದಾಗ ಮಿಕ್ಕುಳಿದ ಸಮಸ್ಯೆಗಳ ಪರಿಹಾರ ಸುಲಭಸಾಧÀ್ಯವಾಗುತ್ತದೆ. ಯಾಕೆಂದರೆ ಸಾಮಾಜಿಕ ಅಸಮಾನತೆ ಬಡತನ ಮುಂತಾದ ಸಮಸ್ಯೆಗಳೆಲ್ಲ ಬಹುಪಾಲು “ಅರ್ಥಮೂಲ’’ವಾಗಿರುವಂತಹವುಗಳೇ, ನಾವು ಸ್ವಾತಂತ್ರಗಳಿಸಿದ ಕಾಲಕ್ಕೆ ಆರ್ಥಿಕ ಅಭಿವೃದ್ದಿಯ ಗುರಿ ಸಾಧನೆಗೆ ಎರಡು ಮಾರ್ಗಗಳಿದ್ದುವು. ಒಂದು ಮುಕ್ತ ಆರ್ಥಿಕ ಅಭಿವೃದ್ದಿ ನೀತಿ ಅಥವಾ ಬಂಡÀವಾಳಶಾಹಿ ವ್ಯವಸ್ಥೆ. ಎರಡನೆಯದು ಸರಕಾರದ ನಿಯಂತ್ರಣಕ್ಕೊಳಪಟ್ಟ ಯೋಜನಾಧಾರಿತ ನಿಯಂತ್ರಿತ ಅಭಿವೃದ್ಧಿ ನೀತಿ, ಮೊದಲನೆಯ ಮಾರ್ಗವನ್ನನುಸರಿಸಿ ಯಶಸ್ವಿಯಾದ ದೇಶಗಳಲ್ಲಿ ಅಮೇರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳಿದ್ದರೆ, ಎರಡನೇ ಮಾರ್ಗವನ್ನನುಸರಿಸಿ ಆರ್ಥಿಕ ಸಾಧಿಸಿದ ದೇಶಗಳಲ್ಲಿ ರಷ್ಯಾ, ಚೀನಾ, ಕ್ಯೂಬಾ ಪ್ರಮುಖವಾಗಿದ್ದುವು. 

ಮುಕ್ತ ಅರ್ಥವ್ಯವಸ್ಥೆಯ ಬಂಡವಾಳಶಾಹಿ ವ್ಯವಸ್ಥೆಯ ಪ್ರಮುಖ ಲಕ್ಷಣವೆಂದರೆ, ಸರಕಾರದ ಹಸ್ತಕ್ಷೇಪವಿಲ್ಲದೆ ಖಾಸಗೀ ರಂಗ ಉತ್ಪಾದಕ ಚಟುವಟಿಕೆಗಳಲ್ಲಿ ತೊಡಿಗಿ ಸಂಪತ್ತು ಸೃಷ್ಟಿಸಿ ಮರುವಿತರಣೆಯಲ್ಲಿ ಪ್ರಮುಖ ಪಾತ್ರವಹಿಸುವುದು.ಇಂತಹ ಅಭಿವೃದ್ಧಿಯ ನೀತಿಗೆ ಅರ್ಥಶಾಸ್ತçಜ್ಞ ಆಡಂ ಸ್ಮಿತ್‌ರಂತಹ ಪ್ರಮುಖ ‘ಶಾಸ್ತಿಯ ಅರ್ಥಶಾಸ್ತçಜ್ಞರ’ ಚಿಂತನೆ ಆಧಾರವಾಗಿತ್ತು. ಇದರಂತೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಹಿತಾಶಕ್ತಿಯನ್ನು ಗಮನದಲ್ಲಿರಿಸಿ ತನ್ನನ್ನು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಸ್ತು ಮತ್ತು ಸೇವೆಯನ್ನು ಉತ್ಪಾದಿಸುತ್ತಾನೆ. ಹೀಗೆ ಬಹುಪಾಲು ಜನ ಕಾರ್ಯಪ್ರವೃತ್ತರಾದಾಗ ಒಂದು ದೇಶ ಯಾ ಪ್ರದೇಶ ಮುಂದುವರಿಯುವುದು ಸಾಧ್ಯವಾಗುತ್ತದೆ. 

ಯೋಜನಾಧಾರಿತ ನಿಯಂತ್ರಿತ ಅಭಿವೃದ್ಧಿ ನೀತಿಯ ಪ್ರಮುಖ ಲಕ್ಷಣವೆಂದರೆ, ದೇಶದ ಎಲ್ಲಾ ಉತ್ಪಾದನಾ ಪರಿಕರಗಳು ಸರ್ಕಾರಗಳು ಸರ್ಕಾರದ ಆಸ್ತಿಯೆಂದು ಪರಿಗಣಿಸಿ, ಬಹುಪಾಲು ಜನರ ಹಿತವನ್ನು ದೃಷ್ಯಿಯಲ್ಲಿರಿಸಿ ಕೇಂದ್ರಿಯ ಯೋಜನಾ ಆಯೋಗ ನಿರ್ಧಾರ ಮಾಡುವ ವಸ್ತುಗಳನ್ನು ಯಾ ಸೇವೆಯನ್ನು ಉತ್ಪಾದಿಸಿ, ಇದರ ವಿತರಣೆ  ಮಾಡುದಾಗಿದೆ. ೧೯೧೬ರ ವರೆಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರಷ್ಯಾ ಇಂತಹ ಅಭಿವೃದ್ಧಿ  ನೀತಿಯನ್ನನುಸರಿಸಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿತು. ೧೯೩೦ರ ದಶಕದಲ್ಲಿ ಪಶ್ಚಿಮದ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕುಸಿತ ಉಂಟಾಗಿದ್ದ ಸಮಯದಲ್ಲೂ ರಷ್ಯಾ ನಿರಂತರವಾಗಿ ರಾಷ್ಟಿçÃಯ ಉತ್ಪನ್ನದಲ್ಲಿ ಹೆಚ್ಚಳ ಸಾಧಿಸುತ್ತಾ  ಬಂದಿತು. ಮುಗ್ಗರಿಸಿದ್ದ ಬಂಡವಾಳಸಾಹಿ ಸುಧಾದಣೆಗೆ ಸರಕಾರದ ಮದ್ಯಪ್ರವೇಶ ಅಗತ್ಯ ಮತ್ತು ಅನಿವಾರ್ಯ ಎನ್ನುವುದನ್ನು ಪಶ್ಚಿಮದ ದೇಶಗಳು ತಾತ್ವಿಕವಾಗಿ ಒಪ್ಪಿಕೊಂಡವು. ಭಾರತದ ವಿಷಯದಲ್ಲಿ ಯಾವುದೇ ನೀತಿ ಸರಿಯಾಗಿ ಅನುಷ್ಠಾನಗೊಳ್ಳಲು ಸರಕಾರದ ಪರಿಣಾಮಕಾರೀ ನಿಯಂತ್ರಣ ಅಗತ್ಯವೆಂದು ತಿಳಿಯಲಾಗಿದೆ.

ನಮ್ಮ ಅಭಿವೃದ್ಧಿ ನೀತಿಯನ್ನು ರೂಪಿಸುವಾಗ ನಮ್ಮ ಮುಂದೆ ಅಮೇರಿಕಾ ಮಾದರಿಯ ಅಭಿವೃದ್ಧಿ ನೀತಿ ಮತ್ತು  ರಷ್ಯಾ ಮಾದರಿಯ  ಅಭಿವೃದ್ಧಿ ನೀತಿ, ಇದ್ದು ಇವೆರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಇಂತಹ ಆಯ್ಕೆ ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಾಗಿರಲ್ಲ ಹಾಗೂ ಸರಳವಾಗಿರಲ್ಲ. ಪಾಶ್ಚಿಮಾತ್ಯ ಮಾದರಿಯ  ಶಿಕ್ಷಣ ಪಡೆದು, ಹಲವಾರು ವಿಚಾರಗಳಲ್ಲಿ ಅವರಿಂದ ಪ್ರಭಾವಿತರಾಗಿದ್ದ ನಮ್ಮ ರಾಜಕೀಯ ನಾಯಕರ ಮೇಲೆ ಮುಕ್ತ ಅರ್ಥ ವ್ಯವಸ್ಥೆಯ ಪ್ರಭಾವ ಅಧಿಕವಾಗಿತ್ತು. ನಮ್ಮ ದೇಶದಲ್ಲಿ ನಿಧಾನವಾಗಿ ಬೇರೂರುತ್ತಾ ಬಂದಿದ್ದ ಉದ್ಯಮಿಪತಿಗಳೂ ಮುಕ್ತ ಅರ್ಥ ವ್ಯವಸ್ಥೆಯ ಕಡೆಗೆ ವಾಲಿದ್ದು ಸಹಜವಾಗಿತ್ತು. ಹೊಸದಾಗಿ ಸ್ವಾತಂತ್ರö್ಯ ಪಡೆದ ನಮ್ಮ ದೇಶದಲ್ಲಿ ಬಂಡವಾಳ ಸಕ್ರಿಯಗೊಳ್ಳಲು ವಿಪುಲವಾದ ಅವಕಾಶಗಳಿದ್ದವು ಇಂತಹ ಅವಕಾಶಗಳನ್ನು ದೇಶೀಯ  ಬಂಡವಾಳಶಾಹಿ ಕಳೆದುಕೊಳ್ಳಲು ಸಿದ್ದವಾಗಿರರಲಿಲ.್ಲ ಬಂಡವಾಳದ ಮತ್ತು ಕೈಗಾರಿಕಾ ರಂಗದ ಬೆಳವಣಿಗೆಗೆ ಸರಕಾರದ ರಕ್ಷಣೆ ಮತ್ತು ಸಹಾಯ ಅಗತ್ಯವಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಂತಹ ಪ್ರಕ್ರಿಯೆಗಳು ಪ್ರಮುಖವಾಗಿದ್ದು ಪ್ರತಿಯೊಂದು ಚುನಾವಣೆಗಳಲ್ಲೂ ಬಹಳ ದೊಡ್ಡಮೊತ್ತದಹಣದ ಚಲಾವಣೆಯಾಗುತ್ತದೆ. ರಾಜಕೀಯ ಪಕ್ಷಗಳಿಗೆ ಅಗತ್ಯವಿರುವ ಇಂತಹ ದೊಡ್ಡ ಮೊತ್ತದ ಹಣ ಒದಗಿಸುವ ಸಾಮರ್ಥ್ಯ ಉದ್ಯಮಪತಿಗಳಿಗೆ ಬಿಟ್ಟರೆ ಮಿಕ್ಕುಳಿದ ವರ್ಗಗಳಿಗೆ ಸಾಧ್ಯವಾಗಿರುವುದಿಲ್ಲ. ಸಾಮಾನ್ನವಾಗಿ ಎಲ್ಲಾ ಪ್ರಜಾಪ್ರಭುತ್ಯ ವ್ಯವಸ್ಥೆಗಳೂ ಬಂಡವಾಶಾಹಿ ಸರ್ಕಾರಗಳ ಮೇಲೆ  ಪ್ರಭಾವ ಬೀರುವ ಮೂಲಕ ತಮಗನುಕೂಲವಾದ ವಾತಾವರಣ ನಿರ್ಮಿಸಿಕೊಂಡಿರುವುನ್ನು ಕಾಣಬಹುದಾಗಿದೆ. ಮುಕ್ತ ಅರ್ಥ ವ್ಯವಸ್ಥೆಯ ಇಂತಹ ಪ್ರಭಾವದ ಹೊರತಾಗಿಯೂ ಜವಹರ್‌ಲಾಲ್ ನೆಹರೂರಂತಹ ನಾಯಕರಿಗೆ ಸಮಾಜವಾದೀ ಒಲವುಗಳಿದ್ದು, ರಷ್ಯಾದಲ್ಲಿ ಅನುಷ್ಠಾನ ಗೊಂಡ ಪಂಚವಾರ್ಷಿಕ ಯೋಜನೆಗಳು ಸಾಧಿಸಿದ ಅದ್ಭುತ ಪ್ರಗತಿಯ ಬಗೆಗೂ ಒಲವಿತ್ತು. ಸಮಾಜವಾದೀ ರಾಷ್ರö್ಟನಿರ್ಮಾಣ ಸಾಧನೆಗೆ ಪಂಚವಾರ್ಷಿಕ ಯೋಜನೆಗಳಂತಹ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು ಸಹಕಾರಿಯಾಗಬಲ್ಲವೆಂದು ನೆಹರೂ ಅವರಂತಹ ಜನನಾಯಕರು ತಿಳಿದಿದ್ದರು. ಈ ಕಾರಣದಿಂದಾಗಿ ಯಾವುದಾದರೊಂದು ನೀತಿಗೆ ಬದ್ದವಾಗಿ ಅಭಿವೃದ್ಧಿ ನೀತಿಯನ್ನೇರೂಪಿಸುವುದು ಸಾಧ್ಯವಾದೇ ಎರಡೂ ನೀತಿಗಳನ್ನು ಒಪ್ಪಿಕೊಂಡು ಸಮ್ಮಿಶ್ರ ಆರ್ಥಿಕ ನೀತಿಯನ್ನು ರೂಪಿಸಲಾಯ್ತು. ಇದರಂತೆ ಅರ್ಥವ್ಯವಸ್ಥೆಯಲ್ಲಿ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯಗಳನ್ನು ಗುರುತಿಸಲಾಯ್ತು. ಸಾರ್ವಜನಿಕ ರಂಗದಲ್ಲಿ ಬೃಹತ್ ಪ್ರಮಾಣದ ಉದ್ದಿಮೆಗಳು ಸಾರಿಗೆ ಮತ್ತು ಸಂಪರ್ಕ, ರಕ್ಷಣೆ ಮುಂತಾದ ಸ್ವರೂಪಾತ್ಮಕ ಉತ್ಪಾದಕ ಚಟುವಟಿಕೆಗಳಿದ್ದರೆ ಮಿಕ್ಕುಳಿದುದನ್ನು ಖಾಸಗೀ ವಲಯದಲ್ಲಿ ಸೇರಿಸಿ ಬಿಡಲಾಯಿತು. ದೇಶದ ಹಿತದೃಷ್ಟಿಯಿಂದ , ಖಾಸಗಿ ವಲಯ ಕಾರ್ಯ ನಿರ್ವಹಿಸುವಂತೆ ಖಾತರಿ ಕೆಲವೊಂದು ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಯಿತು.ಮಿಶ್ರ ಆರ್ಥಿಕ ನೀತಿ ರೂಪುಗೊಳ್ಳಲು ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಹಲವಾರು ಶಕ್ತಿಗಳು ಯಾ ಕಾರಣಗಳು ಕೆಲಸ ಮಾಡಿವೆ. ಮಿಶ್ರ ಆರ್ಥಿಕ ನೀತಿ ರೂಪುಗೊಳ್ಳಲು ರಾಷ್ಟಿçÃಯ ಮಟ್ಟದಲ್ಲಿ ಪ್ರಭಾವ ಬೀರಿರುವ ಅಂಶಗಳು ಈ ಕೆಳಗಿನಂತಿವೆ.

(೧)೧೯೪೭ರ ಸಮಯದಲ್ಲಿ ನಮ್ಮ ದೇಶದಲ್ಲಿನ ಬಂಡವಾಳಶಾಹಿ ಉದ್ದಮೆರಂಗದಲ್ಲಿ ಆಗತಾನೇ ಬೆಳೆಯುವ ಹಂತದಲ್ಲಿದ್ದು ಬೃಹತ್ ಉದ್ದಿಮೆಗಳಲ್ಲಿ ತೊಡಗಿಕೊಳ್ಲುವಷ್ಟು ಪ್ರಭಲವಾಗಿರಲಿಲ್ಲ. (೨) ಹೆಚ್ಚಿನ ಬೃಹತ್ ಉದ್ಯಮಗಳು ಸ್ವರೂಪಾತ್ಮಕ ರೀತಿಯಲ್ಲಿದ್ದು ಅಲ್ಪಕಾಲದಲ್ಲಿ ಲಾಭದಾಯಕವಲ್ಲದ ಮತ್ತು ಪ್ರತ್ಯಕ್ಷವಾಗಿ ಪ್ರತಿಫಲ ನೀಡದಿರುವಂತಹ ರೀತಿಯವು ಆಗಿದ್ದಿವು. ಉದಾಹರಣೆಗೆ ಸಾರಿಗೆ, ಸಂಪರ್ಕ,ರೈಲ್ವೆ, ವಿದ್ವುತ್ ಶಕ್ತಿ ಇತ್ಯಾದಿ.(೩) ಖಾಸಗೀ ಉದ್ಯಮ ವಲಯವನ್ನು ವಿದೇಶಿ ಉದ್ಯಮಗಳ ಸ್ಪರ್ದೆಯಿಂದ ರಕ್ಷಿಸುವುದು ಅಗತ್ಯವಾಗಿತ್ತು. ಯಾಕೆಂದರೆ ಅತ್ತುತ್ತಮ ಮಟ್ಟದ ತಾಂತ್ರ‍್ತಕತೆಯನ್ನು ಪ್ರಯೋಗಿಸಿಕೊಂಡು ಉತ್ಪಾದನೆ ಮಾಡುವ ಮುಂದುವರಿದ ದೇಶಗಳ ಕೈಗಾರೆಕೆಗಳೊಂದಿಗೆ ಪೈಪೋಟ ನಡೆಸುವ ಶಕ್ತಿ ನಮ್ಮ ದೇಶದ ಕ್ಯೆಗಾರಿಕೆಗಳಿಗಿರಲಿಲ್ಲ. ಆದ್ದರಿಂದ ವೀದೇಶಿ ಉತ್ಪನ್ನಗಳನ್ನು ದೇಶಿಯ ಮಾರುಕಟ್ಟೆ ಪ್ರವೇಶಿಸದಂತೆ ತಡೆಯುವ ಶಾಸನಾತ್ಮಕ ಕ್ರಮಗಳು ಅಗತ್ಯವಾಗಿದ್ದು, ಖಾಸಗೀ ವಲಯ ಇಂತಹ ನಿಯಂತ್ರಣ ವ್ಯವಸ್ಥೆಯನ್ನು ಬೆಂಬಲಿಸಿದವು.(೪) ಉದ್ಯೋಗಾವಕಾಶಗಳ ಸೃಷ್ಟಿಯ ದೃಷ್ಟಿಯಿಂದಲು ಸಾರ್ವಜನಿಕ ರಂಗಗಳು ಮಹತ್ವದ ಪಾತ್ರವಹಿಸಬೇಕಿತ್ತು.ಭಾರತದಂತಹ ಮಾನವ ಸಂಪನ್ಮೂಲ ಅಧಿಕವಾಗಿರುವ ದೇಶದಲ್ಲಿ ಖಾಸಗಿ ವಲಯವೊಂದೇ ಉದ್ಯೋಗ ಸೃಷ್ಟಿಸುವುದು ಸಾಧ್ಯವಿಲ್ಲ. ಅಲ್ಲದೆ ಸ್ವಾತಂತ್ರö್ಯ ಹೋರಾಟದ ಸಮಯದಲ್ಲಿ ಪ್ರಚಲಿತವಿದ್ದ ಇನ್ನೊಂದು ಅಂಶ ಸಾಮಾಜಿಕ ಸಮಾನತೆ ಮತ್ತು ಅನಕ್ಷರತೆಯ ನಿರ್ಮೂಲನ. ಹಿಂದುಳಿದ ಮತ್ತು ಬಡವರ್ಗದ ಜನರಿಗೆ ಸಾಮಾಜಿಕ ನ್ಯಾಯವೊದಗಿಸುವಲ್ಲಿ (ಕೈಗಾರಿಕೀಕರಣದಲ್ಲಿ ಸರಕಾರ ಸಕ್ರಿಯವಾಗುವುದರ ಮೂಲಕ ಅರ್ಥಾತ್ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ) ಸರ್ಕಾರಿ ಸ್ವಾಮ್ಯದ ಉದ್ದಮೆರಂಗ ಪ್ರಮುಖ ಪಾತ್ರ ವಹಿಸಬೇಕಿತು.

ಮಿಶ್ರ ಆರ್ಥಿಕ ನೀತಿ ರೂಪಗೊಳ್ಳಲು ಅಂತಾರಾಷ್ಟಿçÃಯ ಮಟ್ಟದಲ್ಲಿ ಪ್ರಭಾವ ಬೀರಿದ ಅಂಶಗಳಲ್ಲಿ ಒಂದು, ಏಷ್ಯಾ ಖಂಡದಲ್ಲಿ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಲಿದ್ದ ರಷ್ಯದಂತಹ ದೇಶದಿಂದ ನಾವು ಸಂಪೂರ್ಣವಾಗಿ ಹೊರಗುಳಿಯಬೇಕಾದರೆ ಬಂಡವಾಳಶಾಹಿ ಮರ್ಜಿಗೆ ಮಣಿ ಹಾಕಲೇಬೇಕಾಗಿತ್ತು. ಆಗ ತಾನೇ ಸ್ವಾತಂತ್ರö್ಯ ಪಡೆದ ನಮಗೆ ಇಂತಹ ಹಂಗು ಬೇಕಾಗಿರಲಲ್ಲ. ಹಾಗಾಗಿ ರಷ್ಯದೊಂದಿಗೆ ಆರ್ಥಿಕ ಸಂಬAಧ ಸ್ಥಾಪಸಿಕೊಳ್ಳುವ ಮೂಲಕ ಒಂದು ರೀತಿಯ ಸಮತೋಲನ ಉಳಿಸಿಕೊಳ್ಳಲು ಪ್ರಯತ್ನಿಸಿದೆವು. ಎರಡನೆಯದಾಗಿ ಆರ್ಥಿಕ ಅಭಿವೃಧ್ಧಿಯ ಅನುಷ್ಟಾನ ಒಂದು ನಿರ್ದಿಷ್ಟ ಚೌಕಟ್ಟನ್ನು ಬಯಸುತ್ತದೆ. ಈಗಾಗಲೇ ಅಭಿವೃಧ್ಧಿ ಹೊಂದಿದ ಪಶ್ಚಿಮದ ರಾಷ್ಟçಗಳಲ್ಲಿ ಚಾಲ್ತಿಯಲ್ಲಿದ್ದ ಮಾದರಿಯ ಚೌಕಟ್ಟುಗಳನ್ನೆ ನಮ್ಮ ದೇಶದಲ್ಲಿಯೂ ಸ್ವೀಕರಿಸಲಾಯಿತು. ಇವೆಲ್ಲಕಿಂತಲೂ ಮುಖ್ಯವಾಗಿ ಸಂಜವಾದಿ ತತ್ವಗಳ ಬಗ್ಗೆ ಜವಾಹರಲಾಲ್ ನೆಹರೂರವರಿಗಿದ್ದ ಆರ್ಕರ್ಷಣೆಯೂ ಅಭಿವೃದ್ಧಿ ನೀತಿಯಲ್ಲಿ ರೂಪಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದೆ ಒಟ್ಟಿನಲ್ಲಿ ಎರಡು ಪ್ರಮುಖ ವಿಚಾರಧಾರೆಗಳಿಂದ ಪ್ರೇರಿತವಾದ ಮಿಶ್ರ ಆರ್ಥಿಕ ನೀತಿಯನ್ನು ಪಂಚವಾರ್ಷಿಕ ಯೋಜನಾಧಾರಿತ ಕಾರ್ಯಕ್ರಮಗಳ ಮೂಲಕ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಯಿತು.

ಇಂದಿಗೆ ಸ್ವಾತಂತ್ರಾö್ಯ ನಂತರದ ಐವತ್ತುವರ್ಷಗಳು ಸಂದಿವೆ, ಎಂಟು ಪಂಚವಾರ್ಷಿಕಯೋಜನೆಗಳು ಅನುಷ್ಟಾನಗೊಂಡಿವೆ, ಹಲವಾರು ಚುನಾಯಿತ ಸರ್ಕಾರಗಳು, ಸಮಾಜವಾದೀ ಸಮಾಜ ನಿರ್ಮಾಣ ಮಾಡಲು ಪ್ರಯತ್ನಗಳನ್ನು ನಡೆಸಿದೆ, ನಮ್ಮೆಲ್ಲ ಅಭಿವೃದ್ಧಿ ಪ್ರಯತ್ನಗಳು ನೀಡಿರಬಹುದಾದ ಪ್ರತಿಫಲದ ಬಗ್ಗೆ ಯೋಚಿಸಿದರೆ ಮೇಲ್ನೋಟಕ್ಕೆ ಬಹಳಷ್ಟು ಬದಲಾವಣೆಗಳು(ಸುಧಾರಣೆ) ಆದಂತೆ ಕಂಡು ಬಂದರು ವಾಸ್ತವಿಕವಾಗಿ ಇಂತಹ ಪ್ರತಿಫಲ ಕೆಲವೇವರ್ಗಗಳಲ್ಲಿ ಹರಿದು ಹೋಗಿ,ಕೆಳವರ್ಗದ ಜನರಂತೂ ಯಾವ ಪ್ರಯೋಜನವನ್ನು ಪಡೆಯಲಿಲ್ಲವೆಂದೇ ಹೇಳಬಹುದು.ಹಾಗಾಗಿ ನಿರುದ್ಯೋಗ, ಬಡತನ, ಅನಕ್ಷರತೆ, ಮೂಲಭೂತ ಸೌಕರ್ಯಗಳಿಲ್ಲದ ಹಳ್ಳಿಗಳ ಸಮಸ್ಯೆಅಭಿವೃದ್ಧಿಯ ಹೆಸರಲ್ಲಿ ಮೂಲೆಗುಂಪಾಗುತ್ತಿರುವ ಜನರ ಸಂಖ್ಯೆ ಮತ್ತು ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿರುವ                ಪರಿಸರ ಸಂಬAಧಿ ಪ್ರಶ್ನೆಗಳು ಪ್ರಸ್ತುತವಾಗಿವೆ.ಮತ್ತು ಇಂತಹ ಸಮಸ್ಯೆಗಳಿಗೆಲ್ಲ ಒಂದು ಪರಿಹಾರ ಕಂಡು ಹಿಡಿಯಬೇಕಾದ್ದು ಅಗತ್ಯವಾಗಿದೆ. ನಮ್ಮ ಮುಂದಿರುವ ಇಂತಹ ಸವಾಲುಗಳಿಗೆ ಅರ್ಥಶಾಸ್ತಿçÃಯ ಮಿತಿಯೊಳಗೆ ಉತ್ತರ ಹುಡುಕಿದರೆ ಸೂಕ್ತ ಉತ್ತರ ಯಾ ಪರಿಹಾರ ಸಿಗುವುದು ಕಷ್ಟ.ಯಾಕೆಂದರೆ ಒಂದು ಸಮಾಜದಲ್ಲಿ ಆರ್ಥಿಕ ಯೋಜನೆಗಳು ಕೇವಲ ಅರ್ಥಶಾಸ್ತಿçÃಯಚೌಕಟ್ಟಿನಲ್ಲಿ ಮಾತ್ರ ಅನುಷ್ಠಾನಗೊಳ್ಳುವುದಿಲ್ಲ. ಬದಲಿಗೆ ಸಾಮಾಜಿಕ, ರಾಜನೈತಿಕ ಪ್ರಭಾವಕ್ಕೊಳಪಟ್ಟು ಅನುಷ್ಟಾನಗೊಳ್ಳುತ್ತವೆ. ಈಕಾರಣದಿಂದಾಗಿ ಒಂದು ನಿರ್ಧಿಷ್ಟ ಆರ್ಥಿಕ ನೀತಿಯ ಪರಿಣಾಮ ಬೇರೆ ಬೇರೆ ಸಾಮಾಜಕ ಮತ್ತು ರಾಜಕೀಯ ಸ್ಥಿತಿಗಳಲ್ಲಿ ವಿಭಿನ್ನ ರೀತಿಯ ಪರಿಣಾಮಗಳನ್ನು ನೀಡುತ್ತದೆ. ಇದೇ ಕಾರಣದಿಂದಾಗಿ ಅಮೇರಿಕಕ್ಕೆ ಯಾಜಪಾನಿಗೆ ಸೂಕ್ತವೆನಿಸುವ ಆರ್ಥಿಕ ನೀತಿ ಭಾರತದಲ್ಲಿ ಸೂಕ್ತವಾಗಲೇ ಬೇಕಾಗಿಲ್ಲ.ಸಂಕ್ಷಿಪ್ತವಾಗಿ ಹೇಳುವುದಿದ್ದರೆ ನಮ್ಮ ಆರ್ಥಕÀÀ ವ್ಯವಸ್ಥೆಯ ನೀರಸ ಪರಿಣಾಮಗಳೀಗೆ ಸಾಮಾಜಿಕ ಮತ್ತು ರಾಜನೈತಿಕ ಹಿನ್ನಲೆಯಲ್ಲು ಸೂಕ್ತ ಉತ್ತರ ಹುಡುಕುವ ಕಾರ್ಯ ತುರ್ತಾಗಿ ನಡೆಯ ಬೇಕಾಗಿದೆ. ಈದಿಸೆಯಲ್ಲಿ ಈಲೇಖನ ಒಂದು ಪ್ರಯತ್ನವಾಗಿದೆ.    

ನಮ್ಮ ದೇಶದÀ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿರುವ ಮತ್ತು ಪ್ರಭಾವಶಾಲಿಯಾಗಿರುವ ವರ್ಗಗಳ ಕುರಿತು ತಿಳಿಯೋಣ. ಆರ್ಥಿಕ ಅಭಿವೃದ್ಧಿಗೆ ಸಂಬAಧಿಸಿದ ನೀತಿ ರೂಪಗೊಳ್ಳುವಲ್ಲಿ ರಾಷ್ಟçಮಟ್ಟದಲ್ಲಿ ಪ್ರಭಾವ ಬೀರಿದ ಉದ್ದಿಮೆದಾರರ ಮತ್ತು ವ್ಯಾಪಾರಿ ವರ್ಗದ ಹಿತಾಶಕ್ತಿಯ ಕುರಿತು ಹಿಂದೆಯೇ ಪ್ರಸ್ತಾಪಿಸಲಾಗಿದೆ. ಈಲಾಬಿಯ ಆಶಯದಂತೆ ಆಮದು ಕಡಿತಗೊಳಿಸುವುದು, ದೇಶಿಯ ಮಾರುಕಟ್ಟೆಗೆ ಶಾಸನಾತ್ಮಕ ಕ್ರಮಗಳ ಮೂಲಕ ರಕ್ಷಣೆ ಒದಗಿಸುವುದು, ಅರ್ಥವ್ಯವಸ್ಥೆಯ ಸ್ವರೂಪಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ಬೃಹತ್ ಉದ್ಯಮಗಳಲ್ಲಿ ಸರಕಾರ ಬಂಡವಾಳ ಹೂಡುವುದು, ಮುಂತಾದ ಕ್ರಮಗಳನ್ನು ಸರ್ಕಾರ ಕೈಗೊಂಡಿತು. ಖಾಸಗೀವಲಯದ ಕೈಗಾರಿಕೆಗಳ ಬೆಳವಣಿಗೆಯನ್ನು ಕಂಡು ಮತ್ತು ಕಾರ್ಯನಿರ್ವಹಣೆಯನ್ನು ಕಂಡು ಶಾಸನಗಳನ್ನು ರೂಪಿಸಲಾಗಿತ್ತಾದರೂ ಇಂತಹ ಕ್ರಮಗಳ ಅನುಷ್ಟಾನವಾದದ್ದು ಅಪರೂಪವೆಂದೇ ಹೇಳಬೇಕು. ಖಾಸಗಿ ರಂಗ ಕೆಲವೇ ಕುಟುಂಬಗಳ ಮಾಲಿಕತ್ವಕ್ಕೆ ಸೀಮಿತವಾಯ್ತು. ಖಾಸಗಿ ಉದ್ದಿಮೆಗಳು ತಮ್ಮಲ್ಲಿದ್ದ ಸಂಪತ್ತಿನÀ ಬಲದಿಂದ ತಾವೆಸಗಿದ ಆರ್ಥಿಕ ಅಪಾರಾಧಗಳನ್ನು ಸಕ್ರಮಗೊಳಿಸುತ್ತಾ ಬಂದವು. ಖಾಸಗೀ ಉದ್ಧಿಮೆಗಳಲ್ಲಿ ಸಾರ್ವಜನಿಕ ರಂಗದ ಹಣಕಾಸು ಸಂಸ್ಥೆಗಳು ಬೃಹತ್ ಪ್ರಮಾಣದ ಶೇರು ಬಂಡವಾಳ ಹೊಂದಿದ್ದರೂ ಅವುಗಳನ್ನು ರಾಷ್ಟಿçÃಯ ಹಿತಾಸಕ್ತಿಗಳಿಗನುಸಾರವಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಮಾತ್ರವಲ್ಲ ಖಾಸಗೀ ವಲಯದಲ್ಲಿ ನಷ್ಟ ಅನುಭವಿಸುವ ಯಾ ರೋಗಗ್ರಸ್ಥ ಉದ್ಧಿಮೆಗಳನ್ನು ಸರಕಾರದ ಮಡಿಲಿಗೆಸೆದು ಉದ್ಧಿಮೆ ಪತಿಗಳು ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಪರಿಪಾಠವಾಯಿತು. ಒಟ್ಟಿನಲ್ಲಿ ಕೈಗಾರಿಕಾ ವಲಯದಲ್ಲಿ ಖಾಸಗೀ ಉದ್ಧಿಮೆಗಳು ಸ್ವಂತ ಹಿತಾಸಕ್ತಿಗಳನ್ನೇ ಪ್ರಧಾನ ಗುರಿಯಾಗಿಸಿಕೊಂದು ಬಂಡವಾಳಶಾಹಿ ಬೆಳವಣಿಗೆಗೆ ಸಹಕರಿಸಿದವು. ಉದ್ಧಿಮೆರಂಗದ ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ ಸಣ್ಣ ಉದ್ದಿಮೆಗಳ ಸಂಖ್ಯೆಯಲ್ಲಿ ಆದಂತಹ ಹೆಚ್ಚಳ. ಮೇಲ್ನೋಟಕ್ಕೆ ಅಭಿವೃಧ್ದಿಯ ದೃಷ್ಟಿಯಿಂದ ಇದು ಒಂದು ಒಳ್ಳೆಯ ಬೆಳವಣಿಗೆ ಎನಿಸಿದರೂ ವಾಸ್ತವವಾಗಿ ಹಾಗಿಲ್ಲ. ಕಾರಣ ಇಂತಹ ಸಣ್ಣ ಉದ್ದಿಮೆಗಳು ನವ ಉದ್ಯಮಪತಿಗಳಿಂದ ಅಥವಾ ಉದ್ಯಮ ಸಂಪರ್ಕವಿಲ್ಲದ ಜನರಿಂದ ಪ್ರಾರಂಭಿಸಿದAತಹ ಉದ್ದಿಮೆಗಳಾಗಿರದೆ, ಬೃಹತ್ ಕೈಗಾರಿಕೆಗಳ ಉಪಯೋಗಕ್ಕಾಗಿ ಅಸ್ತಿತ್ವಕ್ಕೆ ಬಂದವುಗಳಾಗಿದ್ದವು. ಕಾರ್ಮಿಕ ಕಾನೂನಿನಿಂದ ವಿನಾಯಿತಿ ಸುಂಕ ಮತ್ತು ತೆರಿಗೆ ವಿನಾಯಿತಿ, ಸಹಾಯಧನ ಮುಂತಾದ ಸವಲತ್ತುಗಳನ್ನುಪಯೋಗಿಸಿಕೊಳ್ಳಲು ಹುಟ್ಟಿಕೊಂದ ನಾಮಕಾವಸ್ತೆ ಉದ್ದಿಮೆಗಳಾಗಿರುವುದನ್ನು ಕಾಣಬಹುದಾಗಿದೆ. ಹಾಗಾಗಿ ಸಣ್ಣ ಉದ್ಯಮ ವಲಯದ ಕಾರ್ಯ ನಿರ್ವಹಣೆಯ ಕುರಿತು ಸಾಮಾಧಾನ ಪಡುವ ಹಾಗಿಲ್ಲ.

ನಮ್ಮ ಅರ್ಥ ವ್ಯವಸ್ಥೆಯಲ್ಲಿ ಪ್ರಬಲವಾದ ಇನ್ನೊಂದು ವರ್ಗ ಶ್ರೀಮಂತ ಭೂಮಾಲಿಕದ್ದು, ಕೃಷಿ ಪ್ರಧಾನವಾದ ದೇಶದಲ್ಲಿ ಹೆಚ್ಚು ಸಂಖ್ಯೆಯ ಜನ ಜೀವನಾಧಾರಕ್ಕಾಗಿ ಕೃಷಿಯನ್ನವಲಂಬಿಸಿದ್ದರು ಭೂಮಿಯ ಒಡೆತನ ಮಾತ್ರ ಕೆಲವೇ ಜನರಲ್ಲಿ ಅಥವಾ ಕೆಲವೇ ವರ್ಗದ ಜನರಲ್ಲಿ ಕೇಂದ್ರಿಕೃತವಾಗಿದೆ. ಹೀಗೆ ಭೂಮಾಲಿಕರಾಗಿದ್ದು, ಗೇಣಿ ವಸೂಲಿ ಮಾಡಿ ಜೀವನ ನಡೆಸುತ್ತಿದ್ದವರಿಗೆ ಬಂಡವಾಳ ಸಂಚಯನ ಸಾಧ್ಯವಾಗಿ ಅಭಿವೃದ್ಧಿಯ ಹಂತದಲ್ಲಿ ಸೇವಾರಂಗ, ಆಡಳಿತಕ್ಷೇತ್ರ ರಾಜಕೀಯ ಮುಂತಾದೆಡೆ ಸೃಷ್ಟಿಯಾದ ಹೊಸ ಹೊಸ ಅವಕಾಶಗಳನ್ನುಪಯೋಗಿಸಿಕೊಳ್ಳಲು ಸಾಧ್ಯವಾಯಿತು. ಸಣ್ಣ ಹಿಡುವಳಿದಾರರಿಗೆ ಮತ್ತು ಗೇಣಿದಾರರಿಗೆ ಭೂವಸೂದೆಯಂತಹ ಪ್ರಗತಿಪರ ಕಾರ್ಯಕ್ರಮಗಳು ಕೊಂಚ ಮಟ್ಟಿಗೆ ಪ್ರಯೋಜನವುಂಟು ಮಾಡಿರುವುದನ್ನು ಒಪ್ಪಬಹುದು. ಕೃಷಿಕ್ಷೇತ್ರದ ಪ್ರಗತಿಗೆ ಸರಕಾರ ಕೊಡ ಮಾಡಿದ ಸವಲತ್ತುಗಳು ಸಣ್ಣ ರೈತರಿಗಿಂತಲೂ ದೊಡ್ಡ ಜಮೀನುದಾರರಿಗೆ ದೊಡ್ಡ ರೀತಿಯ ಪ್ರಯೋಜನವುಂಡು ಮಾಡಿದವು. ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಮತ್ತು ಹೆಚ್ಚು ಪ್ರಮಾಣದಲ್ಲಿ ರಸಗೊಬ್ಬರ ಬಳಕೆಯಾಗುತ್ತ ಬಂದಾಗ ದೊಡ್ಡ ರೈತರು ಆರ್ಥಿಕವಾಗಿ ಹೆಚ್ಚು ಹೆಚ್ಚು ಬೆಳೆಯಲಾರಂಭಿಸಿದರು. ಅಲ್ಲದೆ ಕೃಷಿ ಕ್ಷೇತ್ರದಲ್ಲಿ ಯಾಂತ್ರಿಕತೆಗೆ ದೊಡ್ಡ ಹಿಡಿವಳಿಯಿದ್ದಷ್ಟು ಅಧಿಕ ಲಾಭವಿದ್ದುದರಿಂದ ಶ್ರೀಮಂತರಾದ ಭೂಮಾಲಿಕರು ಸಣ್ಣ ರೈತರ ಜಮೀನುಗಳನ್ನು ಆಕರ್ಷಕ ಬೆಲೆಗೆ ಕೊಂಡುಕೊಳ್ಳಲು ಶುರುಮಾಡಿದರು. ಹೀಗಾಗಿ ಆರ್ಥಿಕ ಕಾರಣಗಳಿಂದಾಗಿ ಸಣ್ಣ ಹಿಡುವಳಿದಾರರು ತಮ್ಮ ಜಮೀನುಗಳನ್ನು ಶ್ರೀಮಂತ ರೈತರಿಗೆ ಮಾರಿ ಪಟ್ಟಣಕ್ಕೆ ವಲಸೆ ಹೋದರು ಅಥವಾ ಕೃಷಿ ಕಾರ್ಮಿಕರಾಗಿ ಸೇರಿ ಕೊಂಡÀರು. ಇನ್ನು ಕೃಷಿಯನ್ನವಲಂಭಿಸಿದ ಕೂಲಿಕಾರ್ಮಿಕರು ಮತ್ತು ಕುಶಲಕರ್ಮಿಗಳು ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಹೆಚ್ಚಾಗುತ್ತಾ ಬಂದAತೆ ಕೂಲಿ ಕಾರ್ಮಿಕರಾದರು ಅಥವಾ ಪಟ್ಟಣಕ್ಕೆ ವಲಸೆ ಹೋಗಲಾರಂಭಿಸಿದರು. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಸರಕಾರ ನೀಡಿದ ಸವಲತ್ತುಗಳು ಆರ್ಥಿಕವಾಗಿ ಸಶಕ್ತರಾಗಿದ್ದ ರೈತರಿಗೆ ಮಾತ್ರ ಹರಿದುಬರಲು ಶಕ್ತವಾಯಿತು. ಕೃಷಿಯನ್ನವಲಂಭಿಸಿದ ಕೂಲಿ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಶ್ರೀಮಂತ ರೈತರೊಂದಿಗೆ ಸಾಲಿಗ ಮಾಲಿಕ ಸಂಬAಧ ಮಾತ್ರ ಹೊಂದಿದದು ಅವರೊಂದಿಗೆ ಹೊಂದಿಕೊAಡು ಯಾ ಅವರು ಮರ್ಜಿಗನು ಗುಣವಾಗಿ ಬದುಕುತ್ತಿದ್ದಾರೆ. ಹಾಗಾಗಿ ಮೇಲ್ನೋಟಕ್ಕೆ ಕಂಡು ಬರುವ ಕೃಷಿಕರ ಸಂಖ್ಯೆ ಅಪಾರವೆನಿಸಿದರೂ ಭೂಮಾಲಿಕತ್ವ ಹೊಂದಿದ್ದು ಇದರಿಂದ ಪ್ರಯೋಜನ ಪಡೆಯುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಿದೆ. ಬಹು ಸಂಖ್ಯಾತರಾಗಿರುವ ಕೃಷಿ ಕಾರ್ಮಿಕರಾಗಲೀ, ಕೂಲಿಕಾರ್ಮಿಕರಾಗಲೀ ಸಂಘಟಿತರಾಗಿಲ್ಲ. ಇದಕ್ಕೆ ಪ್ರಮುಖ ಕಾರಣ, ತಮ್ಮೆಲ್ಲ ಅವಶ್ಯಕತೆಗಳಿಗೆ ಶ್ರೀಮಂತ ಭೂಮಾಲಿಕರನ್ನೇ ಅವಲಂಭಿಸಿಕೊAಡಿರುವುದು, ಅನಕ್ಷರತೆ, ಸಾಮಾಜಿಕ ಅಸಮಾನತೆಯೆ ಮುಂತಾದವುಗಳಾಗಿವೆ. ಹಾಗಾಗಿ ಬಹುಸಂಖ್ಯೆಯಲ್ಲಿದ್ದರೂ ಇವರು ಸಾಮಾಜಿಕವಾಗಿ ಯಾ ರಾಜಕೀಯವಾಗಿ ಸಂಘಟಿತ ಹೋರಾಟ ನಡೆಸಲು ಶಕ್ತರಾಗಿಲ್ಲ.

ದೇಶದ ಬಹಳಷ್ಟು ಭಾಗಗಳಲ್ಲಿ ಭೂಮಾಲಿಕರು ಯಾ ದೊಡ್ಡ ಹಿಡುವಳಿದಾರರು ಪ್ರಬಲರಾಗುತ್ತಾ ಬಂದ ಕಾರಣದಿಂದಾಗಿ ಗ್ರಾಮೀಣಶಾಹಿ ರೂಪಗೊಳ್ಳತೊಡಗಿತು. ಬೃಹತ್ ಪ್ರಮಾಣದ ನೀರಾವರಿ ಸೌಲಭ್ಯ, ಅಧಿಕ ಇಳವರಿಯ ತಳಿಗಳು ಕೃಷಿಯ ವಾಣಿಜ್ಯೀಕರಣ ಮುಂತಾದ ಕ್ರಮಗಳಿಂದ ಬಂಡವಾಳಶಾಹಿ ಬೆಳವಣಿಗೆ ಸುಲಭವಾಯ್ತು, ಹಾಗಾಗಿ ಈ ವರ್ಗ ಕೃಷಿಯಲ್ಲದೇ ಲೇವಾದೇವಿ, ಸಾರಿಗೆ, ವ್ಯಾಪಾರ ಮುಂತಾದ ಕ್ಷೇತ್ರಗಳಿಗೂ ತಮ್ಮ ಚಟುವಟಿಕೆಯನ್ನು ವಿಸ್ತರಿಸುತ್ತಾ ಬಂದಿತು. ನಿಧಾನವಾಗಿ ಹೂಡಿಕೆಯ ಮೂಲಕ ಆಧುನಿಕ ಉದ್ಧಿಮೆ ರಂಗಗಳಿಗೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುತ್ತಾ ಬಂದ ಒಂದು ಪ್ರಭಾವೀ ಗುಂಪಾಗಿ ದೇಶದ ರಾಜಕೀಯದ ಮೇಲೆಯೂ ಪ್ರಭಾವ ಬೀರುವಷ್ಟು ಸಮರ್ಥರಾಗುತ್ತಾ ಬಂದರು. ದೇಶದ ಬಹುಸಂಖ್ಯಾತ ಜನರು ಹಳ್ಳಿಯಲ್ಲಿದ್ದು, ಇಂತಹ ಶ್ರೀಮಂತ ಭೂಮಾಲಿಕರ ಪ್ರಭಾವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕವಾಗುತ್ತಾ ಹೋಯಿತು. ಹಾಗಾಗಿ ಸಾಮಾಜಿಕ ಅಸಮಾನತೆಗಳಿದ್ದಾಗ ಎಲ್ಲ ವ್ಯತ್ಯಾಸಗಳನ್ನು ಬದಿಗಿರಿಸಿ ಒಂದಾಗುತ್ತಿದ್ದರು. ಹೀಗೆ ಉದ್ಯಮವಲಯ ಮತ್ತು ಕೃಷಿ ವಲಯದಲ್ಲಿ ಒಂದು ಸಣ್ಣ ಶ್ರೀಮಂತ ವರ್ಗದ ಹಿಡಿತ ಬಲವಾಗುತ್ತ ಹೋಯಿತು.

ಈ ಮೇಲಿನ ಎರಡು ಪ್ರಮುಖ ವರ್ಗಗಳನ್ನು ಹೊರತು ಪಡಿಸಿದರೆ ನಮ್ಮ ಅರ್ಥ ವ್ಯವಸ್ಥೆಯಲ್ಲಿ ಪ್ರಭಾವಿಯಾಗಿರುವ ಇನ್ನೊಂದು ವರ್ಗ ಆಡಳಿತಶಾಹಿ ಅಥವಾ ನೌಕರಶಾಹಿ ಸರ್ಕಾರದ ಕಾರ್ಯಕ್ರಮಗಳೆಲ್ಲ ಅನುಷ್ಠಾನವಾಗುವಲ್ಲಿ ಈ ನೌಕರಶಾಹಿಯ ಪಾತ್ರ ಬಹಳ ಪ್ರಮುಖವಾಗಿದ್ದು ಸರ್ಕಾರಗಳು ಬದಲಾದರೂ ನೌಕರಶಾಹಿ ಮಾತ್ರ ಖಾಯಂ ಆಗಿ ಮುಂದುವರಿಯುತ್ತಿದ್ದು ತನ್ನದೇ ಆದ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ನೌಕರಿಶಾಹಿ ವ್ಯವಸ್ಥೆಯೊಳಗೆ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಭಿನ್ನತೆಗಳಿವೆಯಾದರೂ ಸಂಘಟಿತ ವರ್ಗವಾಗಿರುವ ಕಾರಣ ಸರಕಾರದ ಮೇಲೆ ಪ್ರಭಾವ ಬೀರಿಯೋ ಒತ್ತಡ ಹೇರಿಯೋ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಂಡು ಮುಂದುವರಿಯುತ್ತಲೇ ಇದೆ.

ಇದುವರೆಗಿನ ವಿವರಗಳನ್ನು ಸರಿಯೆಂದೊಪ್ಪಿಕೊAಡರೆ ಸಹಜವಾಗಿಯೇ ನಾವೇನೂ ಪ್ರಗತಿ ಸಾಧಿಸಿಲ್ಲವೇ? ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನಾವು ನಮ್ಮ ಅಭಿವೃದ್ದಿ ಕಾರ್ಯಗಳಲ್ಲಿ ಯಶಸ್ಸು ಗಳಿಸಿದ್ದೇವೆ. ಆದರೆ ಈ ಯಶಸ್ಸಿನ ಫಲ, ಪ್ರಯತ್ನದಲ್ಲಿ ಪಾಲ್ಗೊಂಡ ಎಲ್ಲರಿಗೂ ಸರಿಯಾಗಿ ಲಭಿಸಿಲ್ಲ. ಬದಲಾಗಿ ಕೆಲವೇ ಜನರಲ್ಲಿ ಹಂಚಿಹೋಗಿದೆ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಬಂಡವಾಳಶಾಹಿಯು ಎಲ್ಲ ಅಭಿವೃದ್ಧಿ ಕಾರ್ಯ ಕ್ರಮಗಳು ನೀಡಿದ ಪ್ರತಿಫಲದಲ್ಲಿ ಅತ್ಯಧಿಕ ಪ್ರಯೋಜನವನ್ನು ಪಡೆದಿದೆ. ಸಂಘಟಿತ ವರ್ಗಗಳು ತಮ್ಮ ಸಂಘಟನಾ ಶಕ್ತಿಯಿಂದ ಬೇಡಿಕೆಗಳ ಬಗ್ಗೆ ಬಂಡವಾಳ ಶಾಹಿಯ ಮೇಲೆ ಒತ್ತಡ ಹೇರಲು ಶಕ್ತವಾಗಿರುವುದರಿಂದ ಬೇಡಿಕೆ ಈಡೇರಿಸಿಕೊಳ್ಳಲು ಶಕ್ತರಾಗಿದ್ದಾರೆ. ಆದರೆ ಅಸಂಘಟಿತ ಕಾರ್ಮಿಕ ವರ್ಗ ಮಾತ್ರ ಇಂತಹ ಯಾವುದೇ ರೀತಿಯಲ್ಲಿ ತನ್ನ ಸ್ಥಿತಿಯಲ್ಲಿ ಸುಧಾರಣೆ ತರಲು ಶಕ್ತವಾಗುವುದಿಲ್ಲ. ಆದರೆ ಕಾರ್ಮಿಕರ ವರ್ಗ ತಮ್ಮ ಶ್ರಮ ಸಂಪತ್ತನ್ನು ಉಳಿಸಿಕೊಂಡು ಅದನ್ನು ಬಂಡವಾಳಶಾಹಿಯ ಬೆಳವಣಿಗೆಯಲ್ಲಿ ವಿನಯೋಗಿಸುವ ಹಾಗೆ ನೋಡಿಕೊಳ್ಳಬೇಕಾದರೆ, ಅವರನ್ನು ಕನಿಷ್ಠ ಈಗಿರುವ ಸ್ಥಿತಿಯಲ್ಲಾದರೂ ಉಳಿಸಿಕೊಂಡಿರಬೇಕಾಗುತ್ತದೆ. ಹಾಗಾಗಿ ಉದ್ದಿಮೆರಂಗದಿAದ ಯಾವ ಪ್ರಯೋಜನವನ್ನು ಪಡೆಯದೇ ಹೊರಗುಳಿದ ಸಮುದಾಯಕ್ಕೆ ಸರಕಾರದ ಜನೋಪಯೋಗಿ ನೀತಿಗಳ ಮೂಲಕ ಬದುಕಿನ ಕನಿಷ್ಠ ಅವಶ್ಯಕತೆಗಳು ದೊರೆಯುವಂತೆ ನೋಡಿಕೊಳ್ಳುತ್ತದೆ. ಯಾಕೆಂದರೆ ಕಾರ್ಮಿಕ ವರ್ಗವಿಲ್ಲದೆ ಬಂಡವಾಳಶಾಹಿ ಉಳಿದು ಬೆಳೆಯುವುದಿಲ್ಲ ಎನ್ನುವುದು ಒಂದು ಕಾರಣವಾದರೆ, ಕನಿಷ್ಠ ಅವಶ್ಯಕತೆಗಳಿಗೂ ಕುತ್ತು ಬರುವ ಸಂದರ್ಭ ಸೃಷ್ಟಿಯಾದಾಗ ಅಸ್ತಿತ್ವವುಳಿಸಿಕೊಳ್ಳಲು ಕಾರ್ಮಿಕ ವರ್ಗ ಹೋರಾಡಲೇ ಬೇಕಾದ ಅನಿವಾರ್ಯ ಸ್ಥಿತಿ ನಿಮಾಣವಾಗುತ್ತದೆ. ಈ ಕಾರಣದಿಂದಾಗಿ ನಮ್ಮ ದೇಶದಲ್ಲಿ ಬಂಡÀವಾಳ ಶಾಹಿಯ ಪ್ರಭಾವದಲ್ಲಿರುವ ಸರಕಾರ ಆಗಿಂದಾಗ್ಗೆ ಹಿಂದುಳಿದ ವರ್ಗ, ಕೃಷಿಕಾರ್ಮಿಕರಿಗೆ ಮತ್ತಿತರ ಅಸಂಘಟಿತ ವರ್ಗದ ಜನರಿಗೆ ನೀಡುತ್ತಾ ಬಂದ ಸವಲತ್ತುಗಳು ಸಮಾನತೆಯನ್ನು ಸಾಧಿಸುವುದಕ್ಕಿಂತಲೂ ಅಧಿಕವಾಗಿ ಅವರ ಶ್ರಮಿಕ ಸಂಪತ್ತನ್ನು ಉಳಿಸಿಕೊಂಡು ಒಲಿಸಿಕೊಂಡು ಒಂದು ವ್ಯವಸ್ಥೆಯನ್ನು ಮುಂದುವರಿಸಿಕೊAಡು ಹೋಗುವ ದೃಷ್ಟಿಯಿಂದಾಗಿದೆ ಎನ್ನಬಹುದು.

೧೯೪೭ರಿಂದ ೧೯೯೧ ವರೆಗೆ ನಾವು ಪಾಲಿಸುತ್ತಾ ಬಂದ ಆರ್ಥಿಕ ಅಭಿವೃದ್ಧಿ ನೀತಿಗಳಲ್ಲಿ ವ್ಯಾಪಕಮಟ್ಟದ ಬದಲಾವಣೆಗಳಾಗಿವೆ. ಮಿಶ್ರ ಆರ್ಥಿಕ ನೀತಿಯ ಬದಲಾಗಿ ಮುಕ್ತ ಮಾರುಕಟ್ಟೆಯೆಡೆಗೆ ಆಕರ್ಷಿತರಾಗಿದ್ದೇವೆ. ಆರ್ಥಿಕ ಉದಾರೀಕರಣ, ಜಾಗರಿಕರಣ, ಖಾಸಗೀಕರಣ ಮುಂತಾದ ವಿಷಯಗಳು ಅಭಿವೃದ್ಧಿ ಸಾಧಿಸಲು ಅನಿವಾರ್ಯವೆನ್ನುವ ಮಟ್ಟಿಗೆ ಚಲಾವಣೆಯಲ್ಲಿವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಇಂತಹ ವ್ಯಾಪಕ ಬದಲಾವಣೆಗಳಿಗೆ ಮೂಲಭೂತ ಕಾರಣಗಳೇನು? ನಿಜವಾಗಿಯೂ ಉದಾರೀಕರಣ ನೀತಿ ದೇಶದ ಹಿತದೃಷ್ಟಿಯಿಂದ ಅನುಷ್ಠಾನಗೊಳಿಸಲ್ಪಡುತ್ತಿದೆಯೇ ಅಥವಾ ೯೦ರ ದಶಕದವರೆಗಿನ ನೀತಿಗಳಲ್ಲಿನ ಲೋಪ ದೋಷಗಳು ಇಂತಹ ಬದಲಾವಣೆಯನ್ನು ಅನಿವಾರ್ಯವಾಗಿಸಿವೆಯೇ? ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ನಾವು ನಮ್ಮ ಅರ್ಥ ವ್ಯವಸ್ಥೆಗೆ ಸಂಬAಧಿಸಿದ ಕೆಲವೊಂದು ವಿವರಗಳನ್ನು ತಿಳಿದುಕೊಳ್ಳುವುದು ಸೂಕ್ತವಾಗಿದೆ. ಅದರಂತೆ ಸ್ವಾತಂತ್ರ‍್ಯಾ ನಂತರ ನಮ್ಮ ಅಭಿವೃದ್ಧಿ ನೀತಿ ವಿಮರ್ಶೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಕುರಿತ ಸರಕಾರದ ಧೋರಣೆ, ಅಭಿವೃದ್ಧಿ ನೀತಿಯ ಮೇಲೆ ಉಂಟಾಗಿರಬಹುದಾದ ರಾಜಕೀಯ ಪರಿಣಾಮಗಳೇನು ಮುಂತಾದ ವಿಚಾರಗಳನ್ನು ತಿಳಿಯುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.

ಸ್ವಾತಂತ್ರಾö್ಯ ನಂತರ ಆರ್ಥಿಕ ಅಭಿವೃದ್ದಿಯ ಗತಿ ಮತ್ತು ವೇಗವನ್ನು ಗಮನಿಸಿದರೆ ನಮಗೆ ಸ್ಪಷ್ಟವಾಗುವ ಒಂದು ಅಂಶ ೧೯೪೭ರಿಂದ ೧೯೮೦ರ ವರೆಗೆ ಮಂದಗತಿಯಲ್ಲಿದ್ದ ಬೆಳವಣಿಗೆ ೧೯೮೦-೯೦ರ ಅವಧಿ ಚುರುಕುಗೊಂಡಿತು. ೧೯೮೦-೯೦ರ ಅವಧಿಯಲ್ಲಿ ದಾಖಲಾದ ಪ್ರಮುಖ ಸಾಧನೆಗಳೆಂದರೆ, ಮೊದಲನೆಯದಾಗಿ ಆಹಾರ ಧ್ಯಾನ್ಯಗಳ ಆಮದು ನಿಂತು ಹೋದದ್ದು, ಎರಡನೆಯದಾಗಿ ಕೈಗಾರಿಕಾ ರಂಗದಲ್ಲಿ ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ಮೂರನೆಯದಾಗಿ ಸೇವಾರಂಗದ ಕಾರ್ಯ ನಿರ್ವಹಣೆಯಲ್ಲಿ ಅಭಿವೃದ್ಧಿ ೧೯೮೦-೯೧ಅವಧಿಯಲ್ಲಿ ಇಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಅರ್ಥ ವ್ಯವಸ್ಥೆ ನಂತರ ಏಕಾಏಕಿ ಸಂಕಷ್ಟಕ್ಕೆ ಗುರಿಯಾಗಲು ಕಾರಣವೇನು ಅನ್ನುವುದು ಮಹತ್ವದ ಪ್ರಶ್ನೆಯಾಗುತ್ತದೆ. ಇದಕ್ಕೆ ಹಲವಾರು ಕಾರಣಗಳನ್ನು ಆರೋಪಿಸಲಾಗುತ್ತಿದೆ ಮತ್ತು ಆರ್ಥಿಕ ಚಿಂತರಲ್ಲಿಯೂ ಈ ವಿಚಾರದ ಕುರಿತಂತೆ ಅಭಿಪ್ರಾಯ ಭೇಧಗಳಿವೆ. ಒಂದು ಗುಂಪಿನ ತಜ್ಞರ ಅಭಿಮತದಂತೆ ಇಂತಹ ತೊಂದರೆಗೆ ಕಾರಣ ಐವತ್ತರ ದಶಕದಿಂದಲೂ ನಾವು ಆರ್ಥಿಕ ಅಭಿವೃದ್ಧಿಯಲ್ಲಿ ಅನುಸರಿಸಿದ ನೀತಿಗಳು ಮತ್ತು ವ್ಯೂಹಗಳಲ್ಲಿನ ದೋಷಗಳು. ಇನ್ನು ಕೆಲವರ ಅಭಿಪ್ರಾಯದಂತೆ ೧೯೮೦ರ ದಶಕದಲ್ಲಿ ಸರ್ಕಾರ ಅರ್ಥವ್ಯವಸ್ಥೆಯನ್ನು  ಬೇಕಾಬಿಟ್ಟಿಯಾಗಿ ನಡೆಸಿಕೊಂಡಿರುವುದೇ ಆಗಿದೆ. ಇನ್ನು ಒಂದು ಅಭಿಪ್ರಾಯದ ಪ್ರಕಾರ ನಮ್ಮ ಆರ್ಥಿಕ ನೀತಿ ಮತ್ತು ಯೋಜನೆಗಳಲ್ಲಿಯೇ ಮೂಲಭೂತವಾಗಿ ದೋಷಗಳಿರುವುದೇ ಇಂತಹ ಸಮಸ್ಯೆಗಳಿಗೆ ಕಾರಣ. ೧೯೯೧ ರಲ್ಲಿ ಎದುರಾದ ಆರ್ಥಿಕ ಮುಗ್ಗಟ್ಟು ಏಕಾಏಕಿ ಉದ್ಭವಿಸಿದ ಸಮಸ್ಯೆಯಾಗಿ ಕಂಡರೂ ಇದರ ಬೆಳವಣಿಗೆ ೧೯೮೦ರ ದಶಕದುದ್ದಕ್ಕೂ ಆಗಿರುವುದು ಕಂಡು ಬರುತ್ತದೆ. ೧೯೮೦ ರ ದಶಕದಲ್ಲಿ ಆರ್ಥಿಕ ಅಭಿವೃದ್ಧಿಗೆ ಸಂಬAಧಿಸಿದAತೆ ಸರಕಾರ ಕೈಗೊಂಡ ಹಲವಾರು ನೀತಿಗಳ ಬಗ್ಗೆ ಟೀಕಾಕಾರರು ಮಾಡಿದ್ದ ಆರೋಪಗಳು ನಿರಾಧಾರವಾಗಿಲ್ಲ ಎಂದು ತಿಳಿದುಬರುತ್ತದೆ. ೮೦ರ ದಶಕದಲ್ಲಿ ಹಲವಾರು ರೀತಿಯಲ್ಲಿ ಉತ್ತಮ ಸಾಧನೆಗಳಾಗಿದ್ದರೂ, ಅದರೊಂದಿಗೆ ಅಂತರಾಷ್ಟೀಯ ವ್ಯಾಪಾರದಲ್ಲಿ ಕೊರೆತೆಯ ಪ್ರಮಾಣದಲ್ಲಿ ಏರಿಕೆ, ಸರಕಾರದ ಬಜೆಟ್ ಕೊರೆತೆ, ಮತ್ತು ಬಾಹ್ಯ ಸಾಲದ ಹೊರೆ, (ಆಂತರಿಕ ಹಣಕಾಸು ಮಾರುಕಟ್ಟೆಯಲ್ಲಿ ಏರುತ್ತಿದ್ದ ಸಾಲದ ಮೊತ್ತ ಮುಂತಾದ) ಸಾರ್ವಜನಿಕ ಋಣದ ಪ್ರಮಾಣದಲ್ಲಿ ಹೆಚ್ಚಳ ಮುಂತಾದ ಸಮಸ್ಯೆಗಳೂ ಹುಟ್ಟಿಕೊಂಡವು ಆರ್ಥಿಕ ವ್ಯವಸ್ಥೆಯ ಆರೋಗ್ಯಕ್ಕೆ ಹಾನಿಕಾರಕವಾದಂತಹ ತೊಂದರೆಗಳ ನಿವಾರಣೆಗೆ ಯೋಜನಾ ಆಯೋಗ ಮತ್ತು ಆರ್ಥಿಕ ತಜ್ಞರು ನೀಡುತ್ತಾ ಬಂದ ಸಲಹೆ ಸೂಚನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ.  ಅಥವಾ  ೮೦ರ ದಶಕದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳಿಗೆ ಕಠೋರವಾದ ಆರ್ಥಿಕ ಶಿಸ್ತನ್ನು ಪಾಲಿಸಿಕೊಂಡು ಮುಂದುವರೆಯುವುದೇ ಸಾಧ್ಯವಾಗಲಿಲ್ಲ. ದುರ್ಬಲವಾಗಿದ್ದ ಅರ್ಥವ್ಯವಸ್ಥೆಯ ಸ್ಥಿತಿ ಕೊಲ್ಲಿ ಯುದ್ಧದಿಂದುAಟಾದ ತೈಲಬೆಲೆ ಏರಿಕೆ, ಅನಿವಾಸಿ ಭಾರತೀಯರಿಂದ ವಿದೇಶಿ ವಿನಿಮಯ ಠೇವಣಿಗಳ (ಮುರು ಪಡೆಯುವಿಕೆ) ಹಿಂದೆ ಪಡೆಯುವಿಕೆ, ವಿದೇಶಿ ವಿನಿಮಯದ ಒಳ ಹರಿವಿನಲ್ಲಿ ಗಮನಾರ್ಹ ಇಳಿಕೆ, ರಷ್ಯಾದಲ್ಲಿ ಉಂಟಾದ ಆಂತರಿಕ ಗೊಂದಲಗಳು ದ್ವಿಪಕ್ಷೀಯ ವ್ಯಾಪಾರ ಸಂಬAಧಗಳಿAದಾಗಿ ಸಂಪೂರ್ಣವಾಗಿ ಹದಗೆಟ್ಟಿತು. ಅರ್ಥ ವ್ಯವಸ್ಥೆಯನ್ನು ಪುನಃಶ್ಚೇತನಗೊಳಿಸಲು ದೊಡ್ಡ ಮೊತ್ತದ ವಿದೇಶಿ ವಿನಿಮಯದ ಅಗತ್ಯವಿದ್ದು ಅಂತಾರಾಷ್ಟಿçÃಯ ದ್ರವ್ಯನಿಧಿ ಮತ್ತು ವಿಶ್ವಬ್ಯಾಂಕ್ ಮೊರೆ ಹೋಗುವುದನ್ನು ಬಿಟ್ಟರೆ ಅನ್ಯಮಾರ್ಗವಿರಲಿಲ್ಲ. ಅಂತಾರಾಷ್ಟಿçÃಯ ಹಣಕಾಸು ಸಂಸ್ಥೆಗಳು ಶರತ್ತು ಬದ್ಧವಾಗಿ ನೀಡÀÄವ ಇಂತಹ ಸಾಳಗಳು ದೇಶದ ಮೇಲೆ ಯಾವ ರೀತಿಯ ಪರಿಣಾಮಗನ್ನುಂಟು ಮಾಡುತ್ತದೆ ಎನ್ನುವುದು ಪ್ರಶ್ನಾರ್ಹವಾದ ವಿಚಾರವಾಗಿದೆ. ಉದಾರೀಕರಣ ಕ್ರಮಗಳು ಪ್ರಾರಂಭವಾಗಿ ಸುಮಾರು ವರ್ಷಗಳುರುಳಿವೆ.ಇದರ ಸಾಧಕ ಬಾದಕಗಳು ಏನೇ ಇದ್ದರೂ ಇದನ್ನು ತಡೆಯುವ ಯಾ ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸುವ ಸ್ವಾತಂತ್ರö್ಯ ನಮಗಿಲ್ಲ ಎಂದೇ ಹೇಳಬಹುದು.

ನಮ್ಮ ದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಹೇಗೆ ಅನುಷ್ಠಾನಕ್ಕೆ ಬರುತ್ತಿದ್ದವು ಅಥವಾ ಅಭಿವೃದ್ಧಿ ಕಾರ್ಯಕ್ರಮಗಳು ಯಾವ ರೀತಿಯಲ್ಲಿ ರಾಜಕೀಯವಾಗಿ ಪ್ರೇರಿತವಾಗಿರುತ್ತಿದ್ದುವು ಅನ್ನುವುದನ್ನು ತಿಳಿಯುವುದು ಅವಶ್ಯಕ ಎನಿಸುತ್ತದೆ ಮಿಶ್ರ ಆರ್ಥಿಕ ನೀತಿಯನ್ವಯ ನಿರ್ಧರಿತವಾದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯೋಜನಾ ಆಯೋಗ ಸಿದ್ದಗೊಳಿಸಿ, ಅದನ್ನು ಹೇಗೆ ಅಥವಾ ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕೇಂದು ನಿರ್ಧರಿಸುತ್ತದೆ. ಹಾಗಾಗಿ ಯೋಜನಾ ಆಯೋಗದ ಪಾತ್ರ ಮತ್ತು ಜವಾಬ್ದಾರಿ ಬಹಳ ಮಹತ್ವಪೂರ್ಣವಾಗಿದೆ. ದೇಶದ ಪ್ರಧಾನಿ ಈ ಆಯೋಗದ ಅಧ್ಯಕ್ಷರಾಗಿದ್ದು ದೇಶದ ವಿವಿಧ ರಂಗಗಳಲ್ಲಿ ಅನುಭವವಿರುವ ತಜ್ಞರನ್ನು ಸರಕಾರ ಸದಸ್ಯರನ್ನಾಗಿ ನಾಮಕರಣ ಮಾಡುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳ ನೀತಿಗಳೂ, ಗೊಂದಲಗಳೂ ಯೋಜನಾ ಆಯೋಗದಂತಹ ತಜ್ಞರಿರುವ ಸಂಸ್ಥೆಯ ಕಾರ್ಯದಕ್ಷತೆಯ ಮೇಲೆ ಪರಿಣಾಮ ಬೀರುವಂತಹ ವಾತಾವರಣವಿದೆ. ೧೯೭೦ರ ದಶಕದವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆÀ್ರಸ್ ಸರಕಾರ ಮತ್ತು ರಾಜಕಾರಣಿಗಳಿಗೆ ನಿಶ್ಚಿತವಾದ ಗುರಿ ಮತ್ತು ಒಂದು ಮಟ್ಟದ ದೂರ ದೃಷ್ಟಿ ಇತ್ತಾದರೂ ತದನಂತರದಲ್ಲಿ ನಾವು ಅಂತಹದೇ ಸ್ಥಿರತೆಯನ್ನು ಕಾಣಲಿಲ್ಲ. ೧೯೭೭ರಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದಾಗ ಪ್ರಥಮ ಬಾರಿಗೆ ವಿರೋಧ ಪಕ್ಷವೊಂದು ಸರಕಾರ ರಚಿಸಿತು. ಇದುವರೆಗೆ ವಿರೋಧ ಪಕ್ಷದ ಟೀಕೆಗಳಿಗೆ ಗುರಿಯಾಗಿದ್ದ ಅಭಿವೃದ್ಧಿ ನೀತಿಗಳು ಕೊಂಚಮಟ್ಟಿಗೆ ಮರುವಿಮರ್ಶೆಗೊಳಪಟ್ಟವು. ಯೋಜನಾ ಆಯೋಗದ ಪುನಾರಚನೆಯಾಗಿ ಅಭಿವೃದ್ಧಿಯ ಅಧ್ಯತೆಗಳಲ್ಲೂ ಬದಲಾವಣÉಗಳುಂಟಾದವು. ನಂತರ ಇಂತಹ ಬದಲಾವಣೆಗಳು ಕಾಲಕಾಲಕ್ಕೆ ಸರಕಾರದಲ್ಲಿ ಬದಲಾವಣೆಗಳುಂಟಾದAತೆ ನಡೆದಿವೆ. ಒಟ್ಟಿನಲ್ಲಿ ೧೯೭೦ರ ವರೆಗೆ ಒಂದು ರೀತಿಯ ರಾಜಕೀಯ ಸ್ಥಿರತೆಯಿದ್ದು ಇಂತಹ ಸ್ಥಿರತೆಗೂ ಆರ್ಥಿಕ ರಂಗದಲ್ಲಿ ಕಂಡು ಬಂದಿರುವAತಹ ಸ್ಥಿತಿಗೂ ಒಂದು ರೀತಿಯ ಸಂಬAಧವಿದೆಯೆAದು ಹೇಳಬಹುದು. ನಂತರದ ದಿನಗಳಲ್ಲಿ ರಾಜಕೀಯ ಏರಿಳಿತಗಳು ಮತ್ತು ಅನಿಶ್ಚಿತತೆಗಳು ಅರ್ಥ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆಯೂ ತನ್ನ ಪರಿಣಾಮವನ್ನು ಉಂಟುಮಾಡಿವೆ. ಹಾಗಾಗಿ ನಮ್ಮ ದೇಶದ ಆರ್ಥಿಕ ಅಭಿವೃದ್ದಿಯ ಕುರಿತು ಅಧ್ಯಯನ ನಡೆಸುವಾಗ ರಾಜಕೀಯ ವ್ಯವಸ್ಥೆಯ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಐವತ್ತು ಮತ್ತು ಅರವತ್ತರ ದಶಕಗಳಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಥಿರ ಹಾಗೂ ದಕ್ಷವಾದ ಸರಕಾರಗಳಿದ್ದುದರಿಂದ ಯೋಜನಾ ಆಯೋಗ ಹೆಚ್ಚು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸರಕಾರಗಳಿಗೆ ಯೋಜನೆಯ ಮತ್ತು ಆದ್ಯತೆಗಳ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದುದರಿಂದ ಯೋಜನಾ ಆಯೋಗ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿತ್ತು. ಇಂತಹ ಆರೋಗ್ಯ ಪೂರ್ಣ ವಾತಾವರಣ ಅರವತ್ತರ ದಶಕದ ಕೊನೆಯ ದಿನಗಳಲ್ಲಿ ಬದಲಾಗುತ್ತ ಬಂದಿತು. ಪ್ರಮುಖ ರಾಜಕೀಯ ಪಕ್ಷ ಮತ್ತು ದೀರ್ಘಕಾಲ ಅಧಿಕಾರ ನಡೆಸಿದ ಕಾಂಗ್ರೇಸ್ ಪಕ್ಷ ಪಕ್ಷದೊಳಗಿನ ಆಂತರಿಕ ಒತ್ತಡಗಳಿಂದಾಗಿ ಕೂಡಾ ಅದುವರೆಗೆ ಅನುಸರಿಸುತ್ತಾ ಬಂದ ನೀತಿಗಳನ್ನು ಮುಂದುವರೆಸುವುದು ಕಷ್ಟವಾಯ್ತು. ರಾಷ್ಟಿçÃಯ ಅಭಿವೃದ್ದಿಯ ಆದ್ಯತೆಯ ಕುರಿತಂತೆ ಹಲವು ಅಭಿಪ್ರಾಯಗಳು ಧ್ವನಿತವಾಗುತ್ತಬಂದವು. ದೇಶ ಎದುರಿಸಿದ ಬರ ಮತ್ತು ವಿದೇಶಿ ವಿನಿಮಯ ಸಮಸ್ಯೆಯ ನಿಭಾವಣೆಗೆ ವಿವಿಧ ಮಾದರಿಯ ಪರಿಹಾರಗಳು ಸೂಚಿತವಾದವು. ಇಂತಹ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿಯೇ ಯೋಜನಾ ಆಯೋಗ ಹಿಂದಿದ್ದ ಧೃಢತೆಯಿಂದ ಮುಂದುವರೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಸರಿಯಾಗಿ ನೆರವು ನೀಡಲು ಒಪ್ಪಿದ್ದ ರಾಷ್ಟçಗಳು ನೆರವಿನ ಪ್ರಮಾಣದಲ್ಲಿ ಕಡಿತವುಂಟು ಮಾಡಿದವು. ರೂಪಾಯಿಯ ಅಪಮೌಲ್ಯ ಮಾಡಿ ರಫ್ತು ಹೆಚ್ಚಿಸಿ ಸದ್ಯದ ಪರಿಸ್ಥಿತಿಯನ್ನು ಡದುರಿಸಲು ಕ್ರಮಕೈಗೋಳ್ಳಲಾಯ್ತಾದರೂ ಇಂತಹ ಕ್ರಮಗಳೂ ನಿರೀಕ್ಷಿತ ಫಲ ನೀಡಲಿಲ್ಲ. ಪಂಚವಾರ್ಷಿಕ ಯೋಜನೆಗಳನ್ನು ಮೂರುವರ್ಷಗಳವರೆಗೆ ಸ್ಥಗಿತಗೊಳಿಸಲಾಯ್ತು. ಒಂದರ್ಥದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡÀವು. ಇಂತಹ ಸಮಸ್ಯೆಗಳಿಂದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳಲು ಒಂದು ದಶಕವೇಬೇಕಾಯ್ತು. ೧೯೬೯ ರಲ್ಲಿ ಹಿಂದಿದ್ದ ದೃಢತೆ ಮರಳಿ ಬರಲಿಲ್ಲ. ಇದಕ್ಕೆ ಅನುಗುಣವಾಗಿಯೇ ಅಧಿಕಾರದಲ್ಲಿರಿಸಿಕೊಂಡÀ ನಿಷ್ಠುರ ನೀತಿಯನ್ನು ಕೈ ಬಿಟ್ಟು ಗರೀಬಿ ಹಟಾವೋ ಇಪ್ಪತ್ತಂಶಗಳ ಕಾರ್ಯಕ್ರಮ ಮುಂತಾದ ಅಲ್ಪಾವಧಿಯಲ್ಲಿ ಜನಪ್ರಿಯತೆ ನೀಡಬಲ್ಲ  ಕಾರ್ಯಕ್ರಮ ರೂಪಿಸತೊಡಗಿತು. ಈ ಹಂತದಲ್ಲಿ ಕಾಂಗ್ರೆಸ್ ವಿಭಜನೆಯಾಯ್ತು ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಸರಕಾರ ರಚನೆ ಮಾಢಿದವು. ಈ ರೀತಿಯ ಬೆಳವಣಿಗೆಗಳು ರಾಜಕೀಯ ಪಕ್ಷಗಳಿಗೆ ಅಧಿಕಾರ ಹಿಡಿಯಲು ನೆರವು ನೀಡಬಲ್ಲ ಜನಪ್ರಿಯವಾದ ಅಭಿವೃದ್ಧಿ ನೀತಿಯ ಕುರಿತು ಯೋಚಿಸುವಂತೆ ಮಾಡಿದವು. ಹಾಗಾಗಿ ಅಲ್ಲಿಂದೀಚೆಗೆ ಸರಕಾರಗಳು ಉದ್ಯಮ ಅಥವಾ ಸಂಪತ್ತು ಸೃಷ್ಟಿಸುವಂತಹ ಕಾರ್ಯಕ್ರಮಗಳಿಗೆ ಬದಲಾಗಿ ವೋಟ್ ಬ್ಯಾಂಕ್ ಸೃಷ್ಟಿಸುವಂತಹ ಕಾರ್ಯಕ್ರಮಗಳಿಗೆ ಮಹತ್ವ ನೀಡುತ್ತ ಬಂದವು. ೧೯೭೨ರಲ್ಲಿ ದಿ.ಶ್ರೀಮತಿ ಇಂದಿರಾಗಾAಧಿ ‘ಗರೀಬಿ ಹಟಾವೋ’ ಘೊಷಣೆಯನ್ನು ಮುಂದಿಟ್ಟುಕೊAಡು ಚುನಾವಣೆಯನ್ನು ಎದುರಿಸಿ ವಿಜಯಿಯಾದರೂ, ಪ್ರತಿಯೊಂದು ರಾಜಕೀಯ ಪಕ್ಷಗಳು ಮತ ಸೆಳೆಯಬಲ್ಲ ಜನಪ್ರಿಯ ಕಾರ್ಯಕ್ರಮಗಳೇ ರಾಷ್ಟಿçÃಯ ಅಭಿವೃದ್ಧಿ ನೀತಿ ಎನ್ನುವ ಮಟ್ಟ ಮುಟ್ಟಿದ್ದರು. ಯೋಜನಾ ಆಯೋಗ ಕೂಡಾ ಹಿಂದಿನ ಮಹತ್ವವನ್ನು ಕಳೆದುಕೊಂಡು ಸರಕಾರದ ಪ್ರಣಾಳಿಕೆಗಳನ್ನು ಅನುಷ್ಠಾನಗೊಳಿಸುವ ವ್ಯವಸ್ಥೆಯಾಯ್ತು. ಹೀಗಾಗಿ ಸಹಾಯಧನ ಪದ್ಧತಿ, ಬಡತನ ನಿರ್ಮುಲನಕ್ಕಾಗಿ ಕಾರ್ಯಕ್ರಮ ರೂಪಿಸುವುದು ಮುಂತಾದ ಕಾರ್ಯಕ್ರಮಗಳು ಮಹತ್ವ ಪಡೆದವು. ದೂರದೃಷ್ಟಿಯುಳ್ಳ ರಾಷ್ಟಿçÃಯಹಿತವನ್ನು ಗಮನದಲ್ಲಿರಿಸಿಕೊಂಡÀÄ ತಯಾರಿಸಬೇಕಾದಂತಹ ನಿರ್ದಿಷ್ಠ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಯಾವ ಸರಕಾರಗಳು ಯೋಚಿಸುವ ಗೋಜಿಗೆ ಹೋಗಲಿಲ್ಲ.

ಹೀಗೆ ಅರವತ್ತರ ದಶಕದ ಕೊನೆಯವರೆಗೆ ಮಂದಗತಿಯಲ್ಲಾದರೂ ಒಂದು ರೀತಿಯಲ್ಲಿ ನಿರ್ದಿಷ್ಟ ದಿಕ್ಕಿನಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕಾರ್ಯಕ್ರಮಗಳು ಕೊಂಚ ಸಮಯ ಗೊಂದಲವುAಟಾದರೂ ಮತ್ತೆ ಎಪ್ಪತ್ತರ ಕೊನೆಯವರೆಗೂ ಮುಂದುವರೆಯುತ್ತಾ ಬಂದವು.

ದೇಶದ ಅರ್ಥವ್ಯವಸ್ಥೆ ೧೯೮೦ರ ದಶಕದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಂಎಇತು. ಸರಕಾರ ಆಂತರಿಕವಾಗಿ ಬಂಡವಾಳ ಸಂಚಯಿಸುವ ಅಗತ್ಯ ನೀತಿಗೆ ಗಮನ ಹರಿಸಲಿಲ್ಲ. ಬದಲಾಗಿ ವಿಸ್ತರಣಾ ನೀತಿಯನ್ನು ಅನುಸರಿಸುತ್ತಾ ಹೋಯಿತು. ಹಣಕಾಸಿನ ಪ್ರಸರಣ ಪ್ರಮಾಣದಲ್ಲಿ ಏರಿಕೆಯುಂಟಾಗುತ್ತಾ ಹೋಯಿತು. ಸಾಲ ರೂಪದಲ್ಲಿ ಪಡೆದ ಹಣವನ್ನು ಜನಪ್ರಿಯ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಲಾಯ್ತು. ರಫ್ತು ಪ್ರಮಾಣದಲ್ಲಿ ಇಳಿತವಾಗಿ ಆಮದಿಗೆ ಪಾವತಿಸಲು ಬೇಕಾದ ವಿದೇಶಿ ವಿನಿಮಯದಲ್ಲಿ ಕೊರೆತೆ ಕಂಡು ಬಂದಿತ್ತು. ಬಳಕೆದಾರರ (ಭೋಗ ಸಾಮಾಗ್ರಿಗಳು) ಸಾಮಾಗ್ರಿಗಳ ಉತ್ಪಾದನೆಗೆ ವಿದೇಶಿ ತಂತ್ರಜ್ಞಾನ ಮತ್ತು ಬಂಡವಾಳವನ್ನು ದೇಶದೊಳಗೆ ಪ್ರವೇಶಿಸಲು ಅನುಮತಿ ನೀಡÀಲಾಯ್ತು. ೧೯೮೦ ದಶಕದ ಪ್ರಾರಂಭದ ದಿನಗಳಲ್ಲಿಯೇ ಆರ್ಥಿಕ ವಲಯದಲ್ಲಿ ಅರ್ಥ ವ್ಯವಸ್ಥೆಯನ್ನು ಸರಕಾರದ ನಿಯಂತ್ರಣದಿAದ ಮುಕ್ತವಾಗಿರಿಸಬೇಕು ಮತ್ತು ಆ ಮೂಲಕ ಖಾಸಗೀ ಉದ್ಯಮರಂಗದ ಅತ್ಯುತ್ತಮ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿತ್ತು.ಇಂತಹ ಮುಕ್ತ ಯಾ ನಿಯಂತ್ರಣವಿಲ್ಲದ ಮಾರುಕಟ್ಟೆ ನೀತಿಯಾಧಾರಿತ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಇದುವರೆಗೆ ಸಾಧ್ಯವಾಗದ್ದನ್ನು ಸಾಧಿಸಬಹುದೆನ್ನುವ ಅಂಶವನ್ನು ಚಲಾವಣೆಗೆ ಬಿಡಲಾಯ್ತು. ರಾಜೀವ ಗಾಂಧಿ ಅಧಿಕಾರಕ್ಕೆ ಬಂದಾಗ,ಇAದಿರಾಗಾAಧಿಯವರಿAದ ಪ್ರಾರಂಭಗೊAಡ ಕೆಲವೊಂದು ಉದಾರೀಕರಣ ಕಾರ್ಯಕ್ರಮಗಳು ಮುಂದುವರಿಯುತ್ತಾ ಚುರುಕುಗೊಂಡವು. ಹೊಸ ಆರ್ಥಿಕ ನೀತಿ ಎನ್ನುವ ಹೆಸರಿನೊಂದಿಗೆ ಇಂತಹ ಬದಲಾವಣೆ ಚಲಾವಣೆಗೆ ಬಂದಿತು. ಪ್ರಾರಂಭಿಕ ಹಂತದಲ್ಲಿ ಅಭಿವೃದ್ದಿಯ ದರಗಳಲ್ಲಿ ಏರಿಕೆ ಕಂಡು ಬಂದು ಭಾರತೀಯ ಅರ್ಥವ್ಯವಸ್ಥೆ ಹೊಸಹಾದಿಯಲ್ಲಿ ಹೊಸ ಹುರುಪಿನಿಂದ ನಡೆಯುತ್ತಿದೆ ಎನ್ನುವ ಭರವಸೆ(ಭ್ರಮೆ)ಯನ್ನು ಮೂಡಿಸಿತು. ಕೈಗಾರಿಕಾರಂಗದಲ್ಲಿ ಮತ್ತು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳ ದಾಖಲಾದವು, ಇಂತಹ ಹೆಚ್ಚಳದೊಂದಿಗೆ ಬಜೆಟ್ ಕೊರತೆ ಮತ್ತು ಸಾರ್ವಜನಿಕ ವೆಚ್ಚ (ಪಬ್ಲಿಕ್ ಎಕ್ಸಪೆಂಡಿಚರ್) ಅಧಿಕವಾಗುತ್ತ ಬಂದವು ಈರೀತಿಯಲ್ಲಿ ಅಧಿಕವಾಗುತ್ತಾ ಬಂದ ಸಾರ್ವಜಸನಿಕ ವೆಚ್ಚವನ್ನು ಸರಿದೂಗಿಸುವ ಸೂಕ್ತ ಕ್ರಮವನ್ನು ಮಾತ್ರ ನಿರೂಪಿಸಲಾಗಿರಲಿಲ್ಲ. ಸಾಮಾನ್ಯವಾಗಿ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲ್ಲು ಅಭಿವೃದ್ಧಿ ಶೀ¯ ರಾಷ್ಟçಗಳು ಅನುಸರಿಸುವ ಕ್ರಮವೆಂದರೆ ಅಧಿಕ ತೆರಿಗೆ ಸಂಗ್ರಹಿಸುವುದು.ಆದರೆ ಹೊಸ ಆರ್ಥಿಕ ನೀತಿಯನ್ವಯ ವ್ಯಾಪಾರ ಮತ್ತು ಉದ್ದಿಮೆಗಳ ಮೇಲೆ ತೆರಿಗೆಗಳಲ್ಲಿ ಕಡಿತ ಮಾಡಿರುವ ಕಾರಣ ಕೊರತೆಯ ಪ್ರಮಾಣ ಅಗಾಧವಾಗಿ ಏರುತ್ತಲೇ ಹೋಯಿತು. ಇಂತಹ ಕೊರತೆಯನ್ನು ಸಾರ್ವಜನಿಕ ಸಾಲ ಎತ್ತುವ ಮೂಲಕ ಸರಿ ಹೊಂದಿಸಲು ಪ್ರಯತ್ನಿಸಲಾಯ್ತು. ಇಂತಹ ಸಾರ್ವಜನಿಕ ಸಾಲ ಮರುಪಾವತಿಸುವ ಸಂದರ್ಬದಲ್ಲಿಯೇ ಅನಿರೀಕ್ಷಿತ ಸಮಸ್ಯೆಗಳೆದುರಾದ ಕಾರಣ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಯಿತು. ಸರಕಾರದ ಖರ್ಚಿನ ಯಾ ವೆಚ್ಚದ ಬಾಬತ್ತಿನಲ್ಲಿ ಎರಡು ವಿಧಗಳಿದ್ದು ಒಂದು ಬಂಡವಾಳ ರೀತಿಯದು ಎರಡನೆಯದು ಸಾಮಾನ್ಯ ರೀತಿಯದು. ಸಾಮಾನ್ಯ ರೀತಿಯ ಖರ್ಚು, ಅನುತ್ಪಾದಕ ಚÀಟುವಟಿಕೆಗಳಿಗೆ ಕುರಿತಾಗಿರುವುದರಿಂದ ಇದು ಹಣದುಬ್ಬರ, ಬಜೆತ್ ಕೊರತೆ ಮುಂತಾದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತಲೇ ಹೋಗುತ್ತದೆ. ೧೯೮೦ರ ದಶಕದಲ್ಲಿ ಕೈಗಾರಿಕಾ ಉತ್ಪಾದನೆಕಯಲ್ಲಿ ಹೆಚ್ಚಳವಾಗಿರುವುದರ ಕುರಿತಂತೆ ಈಗಾಗಲೆ ಪ್ರಸ್ತಾಪಿಸಲಾಗಿದೆ. ಕೈಗಾರಿಕಾ ರಂಗದ ಸಾಧನೆಗೆ ಮೂಲ ಕಾರಣ ಆಮದು ಪ್ರೋತ್ಸಾಹಕ ನೀತಿಯನ್ನು ಅನುಸರಿಸಿದ್ದೇ ಆಗಿತ್ತು.ಆಮದು ಪ್ರೋತ್ಸಾಹಕ ನೀತಿಯನ್ನು ಅನುಸರಿಸಿದ್ದರಿಂದ ಕೈಗಾರಿಕಾ ರಂಗದಲ್ಲಿ ಉತ್ಪದನೆಯೆನೋ ಹೆಚ್ಚಳವಾಯಿತು. ಆದರೆ ವಿದೇಶಿ ವಿನಿಮಯ ಪಾವತಿ ಸಮಸ್ಯೆ ಮಾತ್ರ ಉಲ್ಬಣಗೊಳ್ಳುತ್ತಾ ಹೋಯಿತು. ಹೀಗಾಗಿ ನಮ್ಮ ರಪ್ತಿಗಿಂತ ಆಮದಿನ ಪ್ರಮಾಣದಲ್ಲಿ ಹೆಚ್ಚಳವಾಗಿ ದೊಡ್ಡ ಮೊತ್ತದ ವಿದೇಶಿ ವಿನಿಮಯ ಪಾವತಿಸಬೇಕಾದಂತಹ ಸಂದರ್ಬ ಸೃಷ್ಟಿಯಾಯಿತು. ಈಕೆಳಗಿನ ಕೋಷ್ಠಕದಲ್ಲಿ ನೀಡಿರುವ ಪಾವತಿ ಖಾತೆಯಲ್ಲಿನ ಶಿಲ್ಕನ್ನು ಗಮನಿಸಿದಾಗ ಮೇಲೆ ಹೇಳಿದ ವಿವರಗಳು ಹೆಚ್ಚು ಸ್ಪಷ್ಟವಾಗುತ್ತದೆ.

ಪಾವತಿ ಖಾತೆಯಲ್ಲಿನ ಶಿಲ್ಕು

                     ಒಟ್ಟು ರಾಷ್ಟç ಉತ್ಪನ್ನದ ಶೇಕಡವಾರುಗಳಲ್ಲಿ

ವರ್ಷ    ರಫ್ತು   ಆಮದು  ವ್ಯಾಪಾರ ಶಿಲ್ಕು  ರಫ್ತು   ಆಮದು ವ್ಯಾಪಾರ ಶಿಲ್ಕು    

೧೯೮೦-೮೧ ೬೭೧೧   ೧೨೫೪೯    ೫೮೩೮   ೪.೫   ೬.೨       ೪.೩

೧೯೮೧-೮೨  ೭೮೦೬   ೧೩೬೦೮     ೫೮೦೨  ೪.೯   ೮.೫    ೩.೬

೧೯೮೨-೮೩  ೮೮೦೩   ೧೪೨೯೩    ೫೪೬೦೨  ೪.೯   ೮.೦    ೩.೧   

೧೯೮೩-೮೪  ೬೭೭೧   ೧೫೮೩೧    ೬೦೬೦    ೪.೭   ೭.೬    ೨.೬

೧೯೮೪-೮೫  ೧೧೭೪೪ ೧೭೧೩೪    ೫೩೯೦    ೫.೧   ೭.೪    ೨.೩

೧೯೮೫-೮೬  ೧೦೯೮೫  ೧೯೬೫೮   ೮೭೬೩     ೪.೨   ೭.೫    ೩.೩

೧೯೮೬-೮೭  ೧೨೪೫೨  ೨೦೦೯೬   ೭೬೪೪     ೪.೩   ೬.೯    ೨.೬

೧೯೮೭-೮೮  ೧೫೬೭೪  ೨೨೨೪೪   ೬೫೭೦     ೪.೭   ೬.೭    ೨.೦

೧೯೮೮-೮೯  ೨೦೨೩೨  ೨೮೨೩೫   ೮೦೦೩     ೫.೧   ೭.೧    ೨.೦

೧೯೮೯-೯೦  ೨೭೬೮೧  ೩೪೫೧೬   ೭೭೩೫     ೬.೧   ೭.೮     ೧.೭

೧೯೯೦-೯೧  ೩೨೫೫೩  ೪೩೧೯೩  ೧೦೬೪೦    ೬.೦   ೮.೧     ೨.೦

೧೯೯೧-೯೨  ೪೪೦೪೨  ೪೨೮೫೧  ೩೮೦೫     ೭.೨   ೭.೯     ೦.೨

೧೯೯೨-೯೩  ೫೩೩೫೧  ೬೨೯೨೩  ೯೫೭೨      ೭.೬   ೯.೦    ೧.೪

೧೯೯೩-೯೪  ೪೯೧೮೨  ೫೧೪೭೭  ೨೨೯೫      -    -       -

ಪಾವತಿ ಖಾತೆ ಕೊರತೆ ಅಗಾಧವಾಗಿ ಬೆಳೆಯುತ್ತಬಂದ ಪರಿಣಾಮ ಹೆಚ್ಚು ಮೊತ್ತದ ವಿದೇಶಿ ಸಾಲವನ್ನು ಪಡೆಯುವುದು ಅನಿವಾರ್ಯವಾಯ್ತು.ಇದರಿಂದಾಗಿ ವಿದೇಶಿ ಸಾಲದ ಹೊರೆಯೂ ಅಧಿಕವಾಯ್ತು. ಹಳೆಸಾಲಗಳ ಮರುಪಾವತಿಗಾಗಿ ಹೊಸಸಾಲ ಪಡೆಯುವುದು ಅನಿವಾರ್ಯವಾಯಿತು. ಇಂತಹ ಸಂದರ್ಭದಲ್ಲಿ ವಿಶ್ವಬ್ಯಾಂಕಿನ ಅಭಿವೃದ್ಧಿ ವರದಿ ಭಾರತದ ಅರ್ಥ ವ್ಯವಸ್ಥೆಯ ಸುಧಾರಣೆಗೆ ರೂಪಾಯಿಯ ಅಪಮೌಲ್ಯಕ್ಕೆ ಶಿಫಾರಸು ಮಾಡಿತು. ಇಂತಹ ವರದಿ ಪ್ರಕಟವಾದ ಕೂಡಲೇ ವಿದೇಶಿ ವಿನಿಮಯ ಖಾತೆಯಲ್ಲಿದ್ದ ಠೇವಣಿಯನ್ನು ಠೇವಣಿದಾರರು ಹಿಂದೆ ಪಡೆಯಲಾರಂಭಿಸಿದ್ದು ಪರಿಸ್ಥಿತಿ ಬಿಗಲಾಯಿಸುವಂತೆ ಮಾಡಿತು. ಹೀಗಾಗಿ ಒಂದಾದರೊAದರ ಮೇಲಂತೆ ಬಂದೆರಗಿದ ಆರ್ಥಿಕ ಸಮಸ್ಯೆಗಳನ್ನೆದುರಿಸಲು ದೊಡ್ಡ ಮೊತ್ತದ ಆರ್ಥಿಕ ಅಹಾಯ ಅಗತ್ಯವಾಗಿ, ಅಂತರಾಷ್ಟಿçÃಯ ಹಣಕಾಸು ಸಂಸ್ಥೆಗಳಿAದ ಸಾಲ ಪಡೆಯುವುದು ಅನಿವಾರ್ಯವಾಯ್ತು.*    

ವಿದೇಶಿ ಸಾಲ ಈ ಕೆಳಗಿನಂತಿದೆ.                           

    ವರ್ಷ                      ಸಾಲದ ಮೊತ್ತ

(ಮಾರ್ಚ ೨೧ಕ್ಕೆ ಕೊನೆಯಾಗುವಂತೆ)      (ಕೋಟಿ ರೂ ಗಳಲ್ಲಿ)

   ೧೯೮೯                      ೮೯.೮೨೬

   ೧೯೯೦                      ೧೦೯೧೬೭

   ೧೯೯೧                      ೧೩೬೬೧೫

   ೧೯೯೨                          ೨೧೯೧೯೨

   ೧೯೯೩                          ೨೪೭೦೨೬

   ೧೯೯೪ಸೆಪ್ಟಂಬರ್‌ವರೆಗೆ              ೨೪೭೬೭೩

ಆಥಿüðಕ ಉದಾರೀಕರಣ ಮತ್ತು ಸ್ವರೂಪಾತ್ಮಕ ಹೊಂದಾಣಿಕೆಗಳನ್ನು ಅನುಷ್ಟಾನಗೊಳಿಸುವ ಮೊದಲಿನ ರಾಜಕೀಯ ಪರಿಸ್ಧಿಯೂ ಬಹಳ ಸಂವೇದನಾತ್ಮಕವಾಗಿತ್ತು.ಮತ್ತು ಒಂದು ರೀತಿಯ ಅಸ್ಧಿರತೆಯಿಂದ ಕೂಡಿತ್ತು. ಇಂತಹ ಸ್ಧಿತಿಯಲ್ಲಿ ಅಧಿಕಾರಕ್ಕೆ ಬಂದ ಪಿ.ವಿ.ನರಸಿಂಹರಾವ್ ನೇತೃತ್ವದ ಅಲ್ಪಮತದ ಕಾಂಗ್ರೆಸ್ ಸರಕಾರದ ಮುಂದುವರಿಕೆ ಅನಿವಾರ್ಯವಾಗಿತ್ತು. ಉದಾರೀಕರಣ ನೀತಿಯನ್ನುಅನುಷ್ಟಾನಗೊಳಿಸಲು ಡಾ.ಮನಮೋಹನ್ ಸಿಂಗ್‌ರAತಹ ವಿತ್ತ ಮಂತ್ರಿಯೂ ನಮಗೆ ಅನಿವಾರ್ಯವಾದರು. ಉದಾರೀಕರಣ ನೀತಿಯ ಕುರಿತಂತೆ ಈಗಾಗಲೆ ಚರ್ಚೆ ನಡೆಸಿರುವುದರಿಂದ, ನಾವೀಗ ಉದಾರೀಕರಣ ಭಾರತದಲ್ಲಿ ನೀಡಿದಂತಹ ಫಲಗಳ ಕುರಿತು ತಿಳಿಯಲು ಪ್ರಯತ್ನಿಸೋಣ. ಉದಾರೀಕರಣ ಉಂಟು ಮಾಡಿದ ಪವಾಡಗಳ ಕುರಿತು ಸರಕಾರ ಏನೇ ಹೇಳಿಕೊಂಡರು ಅದನ್ನು ಯಥವತ್ತಾಗಿ ನಂಬುವ ಸ್ಥಿತಿಯಲ್ಲಿ ನಾವಿಲ್ಲ. ಕೊಂಚ ಮಟ್ಟಿಗಿನ ಬದಲಾವಣೆಗಳು ಐದು ವರ್ಷಗಳ ಅವಧಿಯಲ್ಲಿ ಆಗಿರಬಹುದಾದರೂ, ನಿರೀಕ್ಷಿತ ಫಲ ದೊರೆತಿಲ್ಲವೆಂದೇ ಹೇಳಬೇಕಾಗುತ್ತದೇ.ವಿದೇಶಿ ವ್ಯಾಪಾರ ಮತ್ತು ಹೂಡಿಕೆ ನೀತಿ ಮತ್ತು ರಾಷ್ಟಿçÃಯ ಉತ್ಪಾದನಾ ರಂಗದಲ್ಲಿ ಉಂಟಾಗಿದೆ ಎನ್ನಲಾದ ಬದಲಾವಣೆಗಳ ಕುರಿತು ಪ್ರಮುಕವಾಗಿ ಚರ್ಚಿಸೋಣ.

ವಿದೇಶಿ ವ್ಯಾಪಾರ ಮತ್ತು ಹೂಡಿಕೆ ನೀತಿ 

ವಿದೇಶಿ ತಂತ್ರಜ್ಞಾನ ಮತ್ತು ವಿದೇಶಿ ಬಂಡವಾಳಕ್ಕೆ ನಮ್ಮ ಅರ್ಥ ವ್ಯವಸ್ಥೆಯನ್ನು ತೆರೆದಿಡುವ ವಿಚಾರ ವಿವಾದಾತ್ಮಕವೇ ಆಗಿದೆ. ದೇಶೀ ಉದ್ದಿಮೆಗಳ ಸ್ಪರ್ಧಾತ್ಮಕತೆ ಹೆಚ್ಚಿಸುವ, ಗುಣಮಟ್ಟದಲ್ಲಿ ಉತ್ಕೃಷ್ಟತೆ ಸಾಧಿಸುವ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದೇ ಮೊದಲಾದ ಕಾರಣಗಳಿಗಾಗಿ ದೇಶೀ ಮಾರುಕಟ್ಟೆಯನ್ನು ಅನಿಯಂತ್ರಣಗೊಳಿಸುವುದು ಲಾಭದಾಯಕವೆಂದು ವಾದಿಸಲಾಗಿದೆ.ಇಂತಹ ಕ್ರಮಗಳಿಂದ ನಮ್ಮ ದೇಶದ ಕೈಗಾರಿಕೆಗಳು ಸ್ಪರ್ಧಾತ್ಮಕತೆಯನ್ನು ಮೈಗೂಡಿಸಿಕೊಂಡು ಜಾಗತಿಕ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಶಕ್ತವಾಗುತ್ತವೆ ಎಂದು ನಂಬಲಾಗಿದೆ. ಹಾಗಾಗಿ ಕೈಗಾರಿಕಾ ರಂಗಕ್ಕೆ ವಿದೇಶಿ ಬಂಡÀವಾಳ ಹರಿದು ಬರುವುದು ನಮ್ಮ ಅರ್ಥ ವ್ಯವಸ್ಥೆಗೆ ಸಹಕಾರಿ ಎಂದು ನಂಬಲಾಗಿದೆ. ಈ ನಿಟ್ಟಿನಲ್ಲಿ  ಹೊಸ ಉದಾರೀಕರಣ ನೀತಿ ಸೂಕ್ತಫಲ ನೀಡಿದೆ ಎಂದು ಹೇಳಲಾಗಿದೆ. ೧೯೯೧ ರಲ್ಲಿ ಒಂದು ಬಿಲಿಯನ್ ಡಾಲರಗಳಿದ್ದ ವಿದೇಶಿ ವಿನಿಮಯ ೨೦೦೬ ರಲ್ಲಿ ೭೯ ಬಿಲಿಯನ್ ಡಾಲರ್‌ಗಳಾಗಿದ್ದು ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ. ವಾಸ್ತವಿಕವಾಗಿ ಇಂತಹ ಹೆಚ್ಚಳ ನಮ್ಮ ಗಳಿಕೆಯಾಗಿರದೆ ಸಾಲ ಅಥವಾ ಬಂಡವಾಳದ ರೂಪದಲ್ಲಿದೆ ಇಂತಹ ವಿದೇಶಿ ವಿನಿಮಯವನ್ನು ನಂಬಿ ವಹಿವಾಟು ನಡೆಸುವುದು ಅಪಾಯಕಾರಿ ಕೂಡ ಏಕೆಂದರೆ ಈ ವಿದೇಶಿ ವಿನಿಮಯ ಯಾವುದೇ ಸಂದರ್ಭದಲ್ಲಿ ದೇಶದಿಂದ ಹೊರಹರಿಯಬಹುದಾಗಿದೆ. ಒಂದು ವೇಳೆ ಅದು ಇನ್ನೊಂದು ರೀತಿಯ ಸಂಕಷ÷್ಟಕ್ಕೆ ದಾರಿಯಾಗಬಹುದು ಈ ಕೆಳಗಿನ ಕೋಷ್ಠಕವನ್ನು ನೋಡಿದಾಗ ಈ ವಿಷಯ ಸ್ಪಷ್ಟವಾಗಿ ಅರಿವಾಗುತ್ತದೆ.

ವಿದೇಶಿ ಬಂಡÀವಾಳ  

            ೧೯೯೨-೯೩     ೧೯೯೩-೯೪    ೧೯೯೪-೯೫

          ಮೊತ್ತ  ಒಟ್ಟು        ಮೊತ್ತ     ಒಟ್ಟು  ಮೊತ್ತ    ಒಟ್ಟು 

         (ಅ)   ಹೂಡಿಕೆಯ   ಹೂಡಿಕೆಯ ಹೂಡಿಕೆಯ

                ಶೇಕಡ      ಶೇಕಡ      ಶೇಕಡ

ನೇರಹೂಡಿಕೆ   ೩೪೧  ೭೮.೭     ೬೨೦     ೧೫.೧    ೧೩೮೧   ೨೬.೮

ಹೂಡಿಕೆ      ೯೨   ೨೧.೩    ೩೪೯೦   ೪೮.೯     ೨೫೮೧   ೭೩.೨

ಪತ್ರಗಳ ಮುಖಾಂತರ

ಹೂಡಿಕೆ

ಒಟ್ಟು        ೪೩೩   ೧೦೦     ೪೧೧೦     ೧೦೦   ೪೫೯೫    ೧೦೦

* ಪೋರ್ಟ್ ಪೋಲಿಯೋ ಇನ್ವೆಸ್ಟ್ ಮೆಂಟ್ 

(ಅ) ಮಿಲಿಯನ್ ಡಾಲರುಗಳಲ್ಲಿ

ಆಧಾರ: ಭಾರತೀಯ ರಿಸರ್ವ್ ಬ್ಯಾಂಕಿನ ವಾರ್ಷಿಕ ವರದಿ ಲೈನ್ ಪತ್ರಿಕೆ. ಡಿಸೆಂಬರ್ ೨೯,೧೯೯೫ರಲ್ಲಿ ಪ್ರಕಟವಾದಂತೆ.

ಮೇಲೆ ಹೇಳಿದಂತಹ ವಿದೇಶಿ ವಿನಿಮಯಗಳಿಕೆ ಹಲವು ಸಮಸ್ಯೆಗಳಿಗೆ ಮೂಲವಾಗಿರುತ್ತದೆ. ಮೊದಲನೆಯದಾಗಿ ವಾಣಿಜ್ಯ ಸಾಳದಂತಹ ಮೂಲಗಳಿಂದ ಹಣದ ಮೇಲೆ ಬಡ್ಡಿ ಸಹಿತ ಅಸಲು ಮರುಪಾವತಿಸಬೇಕಾಗುತ್ತದೆ. ಹಾಗಾಗಿ ಸದ್ಯದ ಮಟ್ಟಿಗೆ ವಿದೇಶಿ ವಿನಿಮಯ ಗಳಿಸಿದರೂ ನಂತರದಲ್ಲಿ ಹೆಚ್ಚು ಮೊತ್ತದ ಹಣ ದೇಶದಿಂದ ಹೊರೆಹರಿಯುತ್ತದೆ. ಎರಡನೆಯದು ಬಂಡÀವಾಳ ಸಕ್ರಿಯಗೊಳ್ಳುವ ರೀತಿ ಉಂಟು ಮಾಡಬಹುದು ಸಮಸ್ಯೆ. ಇದನ್ನು ಈ ರೀತಿಯಲ್ಲಿ ವಿವರಿಸಬಹುದಾಗಿದೆ. ವಿದೇಶಿಬಂಡವಾಳ ಎರಡು ರೂಪದಲ್ಲಿ ಅರ್ಥ ವ್ಯವಸ್ಥೆಯಲ್ಲಿ ಸಕ್ರಿಯವಾಗುತ್ತದೆ. ಒಂದು ಪ್ರತ್ಯಕ್ಷವಾಗಿ ಯಾ ನೇರವಾಗಿ ತೊಡಗಿಕೊಳ್ಳುವುದರ ಮೂಲಕ. ಉದಾಹರಣೆಗೆ ಹೊಸ ಉತ್ಪಾದಕ ರಂಗದಲ್ಲಿ ವಿದೇಶಿ ಬಂಡÀವಾಳದ ಬಳಕೆ.ಇನ್ನೊಂದು ಈಗಾಗಲೇ ಅಸ್ತಿತ್ವದಲ್ಲಿರುವ ಭಾರತೀಯ ಕಂಪನಿಗಳ ಶೇರು ಮತ್ತು ಸಾಲಪತ್ರಗಳಲ್ಲಿ ತೊಡಗಿಸಲಾಗುವ ವಿದೇಶಿ ಬಂಡÀವಾಳ. ಈ ರೀತಿಯ ಬಂಡವಾಳ ಬಹಳ ಅಪಾಯಕಾರಿಯಾದದ್ದು, ಯಾಕೆಂದರೆ ಇಂತಹ ಬಂಡವಾಳದ ಮೇಲೆ ಸಿಗುವ ಲಾಭಾಂಶ ವಿದೇಶಿ ವಿನಿಮಯಕ್ಕೆ ಪರಿವರ್ತಿತವಾಗಿ ದೇಶದಿಂದ ಹೊರ ಹರಿಯುತ್ತದೆ, ಮತ್ತು ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತಾ ಬಂದಾಗ ಇಂತಹ ಹೂಡಿಕೆ ದೇಶದಿಂದ ಹೊರ ಹರಿಯಲಾರಂಭಿಸಿದರೆ ಇಡೀ ಅರ್ಥ ವ್ಯವಸ್ಥೆ ಕುಸಿದು ಹೋಗುವ ಅಪಾಯವಿದೆ. ಈ  ಮೊದಲು ಕೋಷ್ಠಕವನ್ನು ಗಮನಿಸಿದರೆ, ನಮ್ಮ ದೇಶಕ್ಕೆ ಹರಿದು ಬಂದಿರುವ ವಿದೇಶಿ ವಿನಿಮಯದಲ್ಲಿ ಹೆಚ್ಚು ಪಾಲು ಈ ರೀತಿಯದ್ದಾಗಿರುವುದು ಕಂಡÀÄ ಬರುತ್ತದೆ. ನೇರವಾಗಿ ಹೂಡಲ್ಪಟ್ಟ ಬಂಡÀವಾಳದಲ್ಲಿಯೂ ತೊಡಕುಗಳಿವೆ. ಇಂತಹ ಬಂಡÀವಾಳ ಆಸ್ತಿಗಳಲ್ಲಿ ಹೂಡಲ್ಪಟ್ಟಿರುವ ಕಾರಣ ಸರಕಾರ ಅವಶ್ಯಕತೆಯಿದ್ದಾಗ ಇದನ್ನು ಬಳಸುವ ಸ್ಥಿತಿಯಲ್ಲಿರುವುದಿಲ್ಲ. ಮೂರನೆಯದಾಗಿ ವಿದೇಶಿ ವಿನಿಮಯದಿಂದ ಹೊರ ಮತ್ತು ಒಳಹರಿವುಗಳಲ್ಲಿ ಏರಿಳಿತವಿದ್ದಾಗ ಅದು ಸ್ವದೇಶದ ಹಣದ ಮೇಲೆ ಅಥವಾ ಹಣದ ಮೌಲ್ಯದ ಮೇಲೆ ಪ್ರಭಾವ ಬೀರುವ ಮೂಲಕ ಸ್ವದೇಶಿ ವಿನಿಮಯಕ್ಕೆ ಸಂಬAಧಿಸಿದAತೆ ಈಗಿರುವ ಪರಿಸ್ಥಿತಿ ಯಾವಾಗ ಬೇಕಾದರೂ ಅರ್ಥ ವ್ಯವಸ್ಥೆಯನ್ನು ಅಪಾಯಕ್ಕೀಡು ಮಾಡಬಹುದಾಗಿದೆ. ತೈಲ ಉತ್ಪಾದನೆಯ ದೇಶಿಯ ಮೂಲಗಳಲ್ಲಿ (ನಮ್ಮ ದೇಶದಲ್ಲಿ ಲಭ್ಯವಿರುವ ತೈಲ ಉತ್ಪಾದನೆ) ೧೯೮೮ ಇಳಿತ ಉಂಟಾಗಿರುವ ಸಂಭವವಿದೆ. ಅಂತಹ ಸಂದರ್ಭದಲ್ಲಿ ಕಚ್ಚಾ ತೈಲ ಆಮದಿನಿಂದಾಗಿ ಇನ್ನೂ ಹೆಚ್ಚಿನ ವಿದೇಶಿ ವಿನಿಮಯ ಬಳಕೆಯಾಗ ಬಹುದಾದಂತಹ ಸಾಧ್ಯತೆ ಇದೆ. ವಿದೇಶಿ ಸಾಲಗಳಲ್ಲಿ ಬಹುಪಾಲು ಸಾಲವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಮರುಪಾವತಿಸಬೇಕಾಗಿದೆ. ವಿದೇಶಿ ಬಂಡÀವಾಳ ಮತ್ತು ಅನಿವಾಸಿ ಭಾರತೀಯರ ಖಾತೆಗಳಲ್ಲಿರುವ ಹಣ ಹಿಂದಕ್ಕೆ ಪಡೆಯಲ್ಪಟ್ಟು ದೇಶದಿಂದ ಹೊರಹರಿದರೆ ಪರಿಸ್ಥಿತಿ ಮತ್ತೆ ನಮ್ಮನ್ನು ೧೯೯೧ರ ಸ್ಥಿತಿಗೆ ನೂಕಬಹುದಾಗಿದೆ.

ರಾಷ್ಟಿçÃಯ ಉತ್ಪಾದನಾ ರಂಗದ ನಿರ್ವಹಣೆ 

೧೯೯೦ ರಲ್ಲಿ ನಡೆದ ಉದಾರೀಕರಣದ ತರುವಾಯ ರಾಷ್ಟಿçÃಯ ಉತ್ಪನ್ನದಲ್ಲಿ ಒಂದು ರೀತಿಯ ಚೇತರಿಕೆ ಕಂಡು ಬಂದಿರುವುದನ್ನು ಗಮನಿಸ ಬಹುದಾಗಿದೆ. ೧೯೯೧ ರಿಂದ ೯೫-೯೬ ವರೆಗಿನ ಉತ್ಪಾದನೆಗೆ ಸಂಬAಧಿಸಿದ ಅಂಕಿ ಅಂಶಗಳು ಈ ಕೆಳಗಿನಂತಿವೆ.

ರಾಷ್ಟಿçÃಯ ಉತ್ಪಾದನಾ ದರ

ವರ್ಷ       ಬೆಳವಣಿಗೆಯ ದರ

೧೯೯೧-೯೨    ೦.೯%

೯೨-೯೩      ೪.೧%

೯೩-೯೪      ೪.೪%

೯೪-೯೫      ೫.೩%

೯೫-೯೬      ೬.೦ % (ಅಂದಾಜಿಸಲ್ಪಟ್ಟAತೆ)

ಮೂಲಕ: ಸಿಟಿ ಕುರಿಯನ್ ‘’ಎ ಸ್ಟಡಿ ರಿಕವರಿ’’ ಫ್ರಂಟ್ ಲೈನ್ ಜನವರಿ ೧೨, ೧೯೯೬ ರಲ್ಲಿ ಪ್ರಕಟವಾದಂತೆ.

ಮೇಲ್ನೋಟಕ್ಕೆ ಇದೊಂದು ಒಳ್ಳೆಯ ಪರಿಣಾಮ ಎಂದು ಕಂಡು ಬಂದರೂ ಹಿಂದಿನ ದಶಕಕ್ಕೆ ಹೋಲಿಸಿದರೆ, ಅರ್ಥ ವ್ಯವಸ್ಥೆ ೧೯೮೦ ದಶಕದಲ್ಲಿ ಅನುಭವಿಸುತ್ತಿದ್ದ ತೊಂದರೆಗಳಿಗಿAತ ಚೇತರಿಸಿಕೊಂಢಿದೆ ಎಂದೆಷ್ಟೇ ಹೇಳಬಹುದು. ೧೯೯೫-೯೬ ರ ವರ್ಷಕ್ಕೆ ಅಂದಾಜಿಸಲಾಗಿರುವ ಶೇಕಡಾ ಆರರ ಬೆಳವಣಿಗೆ ದರವನ್ನು ಮುಂದಿನ ಕೆಲವರ್ಷಗಳ ಮಟ್ಟಿಗಾದರೂ ಉಳಿಸಿಕೊಂಡು ಮುಂದುವರಿಯುವುದು ಸಾಧ್ಯವಾದರೆ ಅದೊಂದು ಉತ್ತಮ ಫಲಿತಾಂಶವಾಗ ಬಹುದಾಗಿದೆ. ಆರ್ಥಿಕ ಉದಾರೀಕರಣದ ನಂತರದ ವರ್ಷಗಳಲ್ಲಿ ಉತ್ತಮ ಮಂಗಾರಿನಿAದ ಕೃಷಿ ರಂಗದ ಉತ್ಪಾದನೆ ಹೆಚ್ಚಿದ್ದು ಆಹಾರ ಧಾನ್ಯ ಉತ್ಪಾದನೆಯಲ್ಲಿ ದಾಖಲೆ ನಿರ್ಮಾಣವಾಗಿದೆ. ದೊಡ್ಡ ಪ್ರಮಾಣದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಇದೆ. ಆದರೆ ವಿಚಿತ್ರವೆಂದರೆ ಬಡಜನರ ಕೊಳ್ಳುವ ಸಾಮರ್ಥ್ಯದಲ್ಲಿ ಕಡಿತವಾಗಿರುವುದು ಕಂಡÀÄ ಬರುತ್ತದೆ. ಇದು ಉತ್ಪಾದನೆ ಹೆಚ್ಚಳವಾಗಿದ್ದರೂ ಸರಿಯಾಗಿ ವಿತರಣೇಯಾಗಿಲ್ಲವೆನ್ನುವ ಅಂಶವನ್ನು ವಿಷದಪಡಿಸುತ್ತದೆ. ಕೈಗಾರಿಕಾ ರಂಗದ ಉತ್ಪಾದನೆಯಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು ಕಂಡು ಬರುತ್ತದೆ. ಆದರೆ ಹಣದುಬ್ಬರ ಮತ್ತು ವಿದೇಶಿ ಸಾಲದ ಪ್ರಮಾಣಗಳನ್ನು ಗಮನದಲ್ಲಿರಿಸಿ ನೋಡಿದರೆ ಈ ಸಾಧನೆಯಿಂದ ತೃಪ್ತಿಪಟ್ಟುಕೊಳ್ಳಲಾಗದು.

ಒಂದು ದೇಶದ ಅರ್ಥ ವ್ಯವಸ್ಥೆ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕಿದ್ದರೆ ಬಂಡವಾಳ ಸಂಚಯನ ಸಾಧ್ಯವಾಗಬೇಕು. ಅಂದರೆ ಒಟ್ಟು ಉತ್ಪಾದನಾ ಪರಿಕರಗಳು ಸಕ್ರಿಯವಾಗಿ ಹೆಚ್ಚುವರಿ ಸಂಪತ್ತು ಉತ್ಪಾದನೆಯಾಗುತ್ತದೆ. ಹೀಗೆ ಸಂಚಯಿತವಾದ ಬಂಡÀವಾಳ ಈ ಕೆಳಗಿನಂತಿದೆ.

ವರ್ಷ       ಒಟ್ಟು ರಾಷ್ಟಿçÃಯ ಉತ್ಪಾದನೆಯ ಶೇಕಡವಾರುಗಳಲ್ಲಿ

೧೯೮೫-೯೧ ೨೭.೧

೧೯೯೧-೯೨  ೨೩.೬

೧೯೯೨-೯೩  ೨೨.೦

೧೯೯೩-೯೪  ೨೦.೪

ಆಧಾರ: ಸಿಟಿ ಕುರಿಯನ್, ಎಸ್ಟೆಡಿ ರಿಕವರಿ ಫ್ರಂಟ್ ಲೈನ್, ಜನವರಿ ೧೨,೧೯೯೬.

ಬಂಡವಾಳ ಸಂಚಯನದ ಸ್ಥಿತಿಯಲ್ಲಿ ೧೯೯೦-೯೧ರ ಅವಧಿಯಲ್ಲಿ ಗೋಚರಿಸಿದ ಏರಿಕೆ ತದನಂತರದ ವರ್ಷಗಳಲ್ಲಿ ಕಡಿಮೆಯಾಗುತ್ತಾ ಬಂದಿದೆ. ಅಂತೆಯೇ ರಾಷ್ಟಿçÃಯ ಉತ್ಪನ್ನದಲ್ಲಿ ಉಳಿತಾಯದ ಪ್ರಮಾಣ ಕೂಡ ಇದ್ದು ೯೦-೯೧ ರಲ್ಲಿ ೨೩.೭೧ ಕ್ಕೋ ಏರಿಕೆಯಾಗಿದ್ದು ಕಂಡು ಬರುತ್ತದೆ. ಆದರೆ ಇಂತಹ ಏರಿಕೆಯ ದರದಲ್ಲಿ ಮುಂದುವರೆಕೆಯೂ ಇಳಿಯುತ್ತಾ ಬಂದು ೧೯೯೩-೯೪ ರಲ್ಲಿ ೨೦.೨ ರಷ್ಟಾಗಿತ್ತು. ಉಳಿತಾಯಕ್ಕೆ ಸಂಬAಧಿಸಿದAತೆ ಇನ್ನೊಂದು ಪ್ರಮುಖ ವಿಷಯವೆಂದರೆ ಖಾಸಗೀ ರಂಗದ ಉದ್ದಿಮೆಗಳ ಸಾಮಾನ್ಯ ಜನರು ಮಾಡುತ್ತಿದ್ದ ಉಳಿತಾಯದಲ್ಲಿ ಇಳಿಕೆ ಕಂಡು ಬಂದಿದೆ. ಇಂತಹ ಪರಿಣಾಮಗಳಿಗೆ ಖಾಸಗೀಕರಣಕ್ಕೆ ಮಹತ್ವವೇ ಮುಂತಾದ ಹೊಸ ಆರ್ಥಿಕ ನೀತಿಗಳೂಕಾರಣವಾಗಿವೆ. ಒಟ್ಟಿನಲ್ಲಿ ಮುಗ್ಗರಿಸಿದ್ದ ನಮ್ಮ ಅರ್ಥವ್ಯವಸ್ಥೆ ನಿಧಾನ ಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಆದರೆ ೮೦ರ ದಶಕದಲ್ಲಿ ನಾವು ಇರಿಸಿಕೊಂಡಿದ್ದ ಗುರಿಗಳಿಗಿಂತ ಉಳಿತಾಯದ ಪ್ರಮಾಣದಲ್ಲಿ ನಿರುತ್ಸಾಹಕ ವಾತಾವರಣ, ವಿದೇಶೀ ಬಂಡÀವಾಳದ ಮೇಲೆ ಅತೀ ಅವಲಂಬನೆ ಮುಂತಾದ ಅಂಶಗಳನ್ನು ಗಮನಿಸಿದಾಗ ಗುರಿಸಾಧನೆ ಸಾಧ್ಯವೇ ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಹೊಸ ಆರ್ಥಿಕ ನೀತಿ ಪ್ರತಿಪಾದಿಸುವ ಮಹತ್ವದ ಅಂಶಗಳಲ್ಲಿ ಸರಕಾರದ ಹಸ್ತಕ್ಷೇಪ ಕಡಿಮೆಯಾಗಬೇಕು ಎನ್ನುವುದು ಒಂದಾಗಿದೆ. ಉತ್ಪಾದನಾ ರಂಗಗಳಲ್ಲಿ ಸರಕಾರ ತನ್ನ ಪಾತ್ರವನ್ನು ಆದಷ್ಟು ಮಿತಿಗೊಳಿಸಿ ವಲಯ ಸಕ್ರಿಯವಾಗಲು ಅವಕಾಶ ನೀಡಬೇಕೆನ್ನುವುದು ಉದಾರ ಆರ್ಥಿಕ ನೀತಿಯ ಮೂಲತತ್ವ ಕೂಡ. ಅಂತರಾಷ್ಟಿçÃಯ ಹಣಕಾಸು ಸಂಸ್ಥೆಗಳು ಸಾಲ ನೀಡುವಾಗ ಇಂತಹ ವಾತಾವರಣ ಸೃಷ್ಟಿಸುವ ದೃಷ್ಟಿಯಿಂದ ಶರತುಗಳನ್ನು ವಿಧಿಸುತ್ತದೆ. ರಷ್ಯಾದ ಅರ್ಥ ವ್ಯವಸ್ಥೆ ಕುಸಿದು ಬಿದ್ದ ನಂತರ ಅಭಿವೃದ್ಧಿಗೆ ಜಿನವಾದ ಮಾರ್ಗವೇ ಮುಕ್ತ ಅರ್ಥವ್ಯವಸ್ಥೆ ಅಥವಾ ಜಾಗತೀಕರಣ ಎನ್ನುವ ವಾದ ಪ್ರಬಲವಾಗಿ ಕೇಳಿಬರುತ್ತಿದೆ. ಅಭಿವೃದ್ಧಿ ಶೀಲ ರಾಷ್ಟçಗಳಿಗೆ ಬೇಕಾದಂತಹ ಬಂಡÀವಾಳ ಮತ್ತು ತಂತ್ರಜ್ಞಾನವನ್ನು ಅಪಾರವಾಗಿ ಹೊಂದಿರುವ ಮುಂದುವರಿದ ರಾಷ್ಟçಗಳು ಹೇಳುವುದನ್ನು ಬಡದೇಶಗಳು ಕೇಳಲೇ ಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಮುಂದುವರಿದ ರಾಷ್ಟçಗಳು ತಮ್ಮಲ್ಲಿರುವ ಎಲ್ಲಾ ಅವಕಾಶಗಳನ್ನು ವ್ಯಯಿಸಿಕೊಂಡಿವೆ. ಹಾಗಾಗಿ ಮುಂದುವರಿದ ಶ್ರೀಮಂತ ದೇಶಗಳಿಗೆ ತಮ್ಮ ಶ್ರೀಮಂತಿಕರಯನ್ನು ಉಳಿಸಿಕೊಳ್ಳಲು ಮತ್ತು ಬಂಡವಾಳ ವಿನಿಯೋಗಿಸುವ ಅವಕಾಶ ಪಡೆಯಲು ಅಭಿವೃದ್ಧಿ ಶೀಲ ದೇಶದೊಳಕ್ಕೆ ಪ್ರವೇಶಿಸದೆ ಅನ್ಯ ಮಾರ್ಗವಿಲ್ಲದಂತಾಗಿದೆ. ಹಾಗಾಗಿ ಆರ್ಥಿಕ ಉದಾರೀಕರಣ ಅಂತಹ ದೇಶಗಳಿಗೆ ಅನಿವಾರ್ಯವಾಗಿದೆ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟçದಲ್ಲಿ ಹಾಗೂ ಅರ್ಥ ವ್ಯವಸ್ಥೆಯಲ್ಲಿ ಸರಕಾರದ ಪಾತ್ರ ಅಥವಾ ಜವಾಬ್ದಾರಿ ಹೇಗಿದೆ ತಿಳಿಯೋಣ. ಸರಕರ ಹಲವಾರು ರೀತಿಯ ಕಾನೂವು ಕಾಯಿದೆಗಳ ಯಾ ಶಾಸನಾತ್ಮಕ ಕ್ರಮಗಳ ಮೂಲಕ ಖಾಸಗೀ ರಂಗದ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಹಲವಾರು ರೀತಿಯ ಉತ್ಪಾದಕ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗುತ್ತದೆ. ಆರ್ಥಾತ್ ಸಾರ್ವಜನಿಕ ರಂಗದ ಉದ್ದಿಮೆಗಳು ಸರಕಾರದ ಒಡೆತನಕ್ಕೆ ಸೇರದವುಗಳಾಗಿವೆ. ಆರ್ಥಿಕ ಉದಾರೀಕರಣ ಪ್ರತಿ ಪಾದಿಸುವ ತತ್ವವೇನೆಂದರೆ ಭಾರತದಂತಹ ದೇಶದಲ್ಲಿ ಸರಕರ ಶಾಸನಾತ್ಮಕ ತೊಡಕುಗಳನ್ನು ನಿವಾರಿಸಿ ಖಾಸಗಿ ರಂಗದ ಕಾರ್ಯ ದಕ್ಷತೆಗೆ ಸಂಪೂರ್ಣ ಅವಕಾಶ ಮಾಡಿಕೊಡಬೇಕು. ಸರಕಾರ ನಡೆಸುವ ಉದ್ದಿಮೆಗಳು ನಷ್ಟವನ್ನು ಅನುಭವಿಸುತ್ತಿರುವುದರಿಂದ  ಅವನ್ನು ಖಾಸಗಿಯವರಿಗೆ ಮಾರಿ ಬರುವ ಹಣವನ್ನು ಸರಕಾರದ ಬಜೆಟ್ ಕೊರತೆ ತುಂಬಲು ಬಳಸಿಕೊಳ್ಳಬೇಕು. ಸರಕಾರ ತನ್ನ ಆದಾಯದ ಮೂಲಗಳಿಗಿಂತ ಹೆಚ್ಚು ವೆಚ್ಚ ಮಾಡುವ ಪರಿಪಾಠವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಂತಹ ವಾದಗಳು ಬಹಳ ಆಕರ್ಷಕ ಮತ್ತು ಸತ್ಯವಾದಂತಹವುಗಳು ಎನಿಸುತ್ತದೆ. ಇದರ ಹಿಂದಿರುವ ಬಂಡವಾಳಶಾಹಿ (ಚಿಂತನೆ) ಉದ್ದೇಶ ಜನಸಾಮಾನ್ಯರಿಗೆ ತಿಳಿಯುವುದೇ ಇಲ್ಲ. ೧೯೯೧ರಲ್ಲಿ ವಿಶ್ವ ಬ್ಯಾಂಕ್ ಮತ್ತು ಅಂತರಾಷ್ಟಿçÃಯ ದ್ರವ್ಯ ನಿಧಿಯಿಂದ ಸಾಲ ಪಡೆದಾಗ ಅವರು ವಿಧಿಸಿದ ಹಲವು ಶರತ್ತುಗಳಲ್ಲಿ ಸರಕಾರ ಬಜೆಟ್ ಕೊರತೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿ ಆದಾಯಕ್ಕನುಗುಣವಾಗಿ ವೆಚ್ಚ ಮಾಡಬೇಕೆನ್ನುವುದು ಪ್ರಮುಖವಾಗಿದೆ. ೧೯೯೧ರಿಂದೀಚೆಗಿನ ಕೊರೆತೆಯನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗಿದೆ.೧೯೯೦-೯೧ರಲ್ಲಿ ರಾಷ್ಟಿçÃಯ ಉತ್ಪನ್ನದ ೮.೪ ಇದ್ದ ಕೊರೆತೆಯ ಪ್ರಮಾಣ ೯೪.೫೪ರಲ್ಲಿ ೯೫-೯೬ರ ಬಜೆಟ್ ಈ ಕೊರತೆಯ ಮಟ್ಟವನ್ನು ೫.೫ ರಷ್ಟಕ್ಕೆ ಮಿತಿಗೊಳಿಸುವ ಗುರಿಹೊಂದಿದೆ. ಇಲ್ಲಿ ಕೊರತೆಯ ಮೂಲವಾಗಿರುವ ಸರಕಾರ ಆದಾಯದ ಮತ್ತು ಖರ್ಚಿನಲ್ಲಿ ಎರಡು ವಿಧಗಳಿವೆ. ಒಂದು ಸಾಮಾನ್ಯ ಖರ್ಚು, ಕಾನೂನು ಶಿಸ್ತು ಪಾಲನೆ, ಆಡಳಿತ ವೆಚ್ಚ ಮುಂತಾದ ನೇರ ಪ್ರತಿಫಲವಿಲ್ಲದ ಉದ್ದೇಶಗಳಿಗೆ ಆಗುತ್ತದೆ. ಎರಡನೆÀಯದು ಬಂಡವಾಳ ಖರ್ಚು, ಕೃಷಿ ಉದ್ದಿಮೆ ಸ್ಥಾಪನೆ, ಉದ್ಯೋಗಾವಕಾಶ ಸೃಷ್ಟಿ, ಮುಂತಾದ ಉದ್ದೇಶಗಳಿಗಾಗುತ್ತದೆ. ಹಾಗಾಗಿ ಸಾರಾಸಗಟಾಗಿ ಸರಕಾರ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು ನಿರುಪಯುಕ್ತ ಎಂದು ಹೇಳುವ ಹಾಗಿಲ್ಲ. ಯಾಕೆಂದರೆ ಬಡಜನರ ಸಂಖ್ಯೆ ಅಧಿಕವಾಗಿರುವ ನಮ್ಮ ದೇಶದಲ್ಲಿ ಅವರಿಗೆ ಆದಾಯ ಗಳಿಸಿಕೊಡಲು ಸರಕಾರ ಬಂಡವಾಳ ಖರ್ಚುಗಳನ್ನು ಮಾಡುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಬಂಡವಾಳ ಖರ್ಚು ಸಮಾಜದ ಕೆಳಸ್ತರದ ಅಂದರೆ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಯೋಜನ ನೀಡುವಂತಹ ರೀತಿಯ ಖರ್ಚಾಗಿದೆ. ಹಾಗಾಗಿ ಸರಕಾರದ ಖರ್ಚು ಯಾ ಕೊರತೆಯ ಮೂಲ ಕಾರಣ ತಿಳಿದು ಅದು ಸಾಮಾನ್ಯ ಖರ್ಚಾಗಿದ್ದರೆ ಮಾತ್ರ ಅದು ಅಪ್ರಯೋಜಕ ಯಾ ನಿರುಪಯುಕ್ತ ಎಂದು ಹೇಳಬಹುದೇ ಹೊರತು ಬಂಡವಾಳ ಖರ್ಚಾದಾಗ ಹಾಗೆ ಹೇಳುವ ಹಾಗಿಲ್ಲ. ೧೯೯೧-೯೨ ರ ನಂತರದಲ್ಲಿ ನಮ್ಮ ಬಜೆಟ್ ಕೊರತೆಯ ಪ್ರಮಾಣದಲ್ಲಿ ಇಳಿಮುಖವಾಗಿರುವುದೇ ಒಂದು ದೊಡ್ಡ ಸಾಧನೆಯೆಂದು ಹೇಳಲಾಗುತ್ತಿದೆ. ಆದರೆ ಈ ಕೊರೆತೆಯ ಪ್ರಮಾಣದ ಇಳಿಕೆಗೆ ಮುಖ್ಯ ಕಾರಣ ಸರಕಾರ ಬಂಡÀವಾಳ ಖರ್ಚನ್ನು ಕಡಿಮೆಮಾಡಿ ಉತ್ಪಾದಕ ಚಟುವಟಿಕೆಗಳಿಗೆ ಹರಿದು ಹೋಗುತ್ತಿರುವ ಹಣದ ಪ್ರಮಾಣವನ್ನು ತÀಡೆದುದೇ ಆಗಿದೆ. ಇನ್ನೊಂದೆಡೆ ಸಾಮಾನ್ಯ ಆಡಳಿತಾತ್ಮಕ ಖರ್ಚುಗಳು ಏರುತ್ತಲೇ ಇದೆ. ಇಂತಹ ಉದ್ದೇಶಗಳಿಗೆ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸುವ ಬದಲು ನಾವು ಸಾಲ ಪಡೆಯುತ್ತಲಿದ್ದೇವೆ. ನಮ್ಮ ಆದಾಯದ ಬಹುಪಾಲು ಹಣ ಬಡ್ಡಿ ಪಾವತಿಸಲು ವಿನಿಯೋಗವಾಗುತ್ತಿದೆ. ಇದು ಪ್ರತಿವರ್ಷ ಏರುತ್ತಲೇ ಇದೆ. ಇನ್ನೊಂದೆಡೆ ತೆರಿಗೆಯ ಆದಾಯದಲ್ಲಿ ಇಳಿತವುಂಟಾಗುತ್ತಲಿದೆ. ೧೯೯೦-೯೧ ರಲ್ಲಿ ರಾಷ್ಟಿçÃಯ ಉತ್ಪನ್ನದ ೧೦.೮% ರಷ್ಟಿದ್ದ ತೆರಿಗೆ ಆದಾಯ ೯೪-೯೫ ರಲ್ಲಿ ೯.೬% ಕ್ಕೆ ಇಳಿದಿದೆ. ಬಜೆಟ್ ಕೊರತೆಯಲ್ಲಿ ಸರ್ಕಾರಗಳಿಗೆ ನೀಡುವ ಸಂಪನ್ಮೂಲದ ಪ್ರಮಾಣದಲ್ಲಿ ಕಡಿತವುಂಟು ಮಾಡಲಾಗಿದೆ. ಇದರ ಪರಿಣಾಮವಾಗಿ ರಾಜ್ಯ ಸರಕಾರಗಳು ಕೃಷಿ ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾರ್ಯಗಳನ್ನು  ನಿಧಾನಗೊಳಿಸುತ್ತದೆ. ೧೯೯೦-೯೧ರಲ್ಲಿ ರಾಷ್ಟಿçÃಯ ಉತ್ಪನ್ನದ ೯.೧% ನ್ನು ರಾಜ್ಯಗಳು ಪಡೆಯುತ್ತಿದ್ದರೆ, ೯೪.೯೫ ರಲ್ಲಿ ಇದು ೪.೫% ರಷ್ಟಾಗಿದೆ. ಹಾಗಾಗಿ ಸರಕಾರ ಬಜೆಟ್ ಕೊರತೆ ಕಡಿಮೆ ಮಾಡಲು ಅನುಸರಿಸಿದ ಮಾರ್ಗಗಳು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳ ಹಿತಾಸಕ್ತಿಗೆ ಮಾರಕವಾಗಿದೆ. ಇಂತಹ ನೀತಿಗಳ ಪರಿಣಾಮ ತಿಳಿದು ಬರಲು ಕೊಂಚ ಕಾಲಾವಕಾಶ ಬೇಕಾಗಬಹುದೇನೋ?

ಸಾರ್ವಜನಿಕ ರಂಗದ ಉದ್ದಿಮೆಗಳು ತೆರಿಗೆದಾರರಿಂದ ಸಂಗ್ರಹವಾಗುವ ಕೋಟಿಗಟ್ಟಲೆ ಹಣವನ್ನು ತಿಂದು ಯಾವ ಪ್ರತಿಫಲವನ್ನು ನೀಡುತ್ತಿಲ್ಲ ಎನ್ನುವ ವಾದವಿದೆ. ಇಲ್ಲಿ ನಾವು ನೆನಪಿಡಬೇಕಾದ ಅಂಶವೆAದರೆ ಇಂತಹ ಉದ್ದಿಮೆಗಳು ದೇಶದ ಆರ್ಥಿಕ ಅಭಿವೃದ್ದಿಯ ದೃಷ್ಟಿಯಿಂದ ಅನಿವಾರ್ಯವಾಗಿದ್ದು ಖಾಸಗಿ ರಂಗ ಇಂತಹ ಉದ್ದಿಮೆಗಳಲ್ಲಿ ಹಣ ತೊಡಗಿಸಲು ಸಾಧ್ಯವಿಲ್ಲದಂತಹ ಸಮಯದಲ್ಲಿ ಇದನ್ನು ಕೈಗೆತ್ತಿಕೊಂಡು ದಕ್ಷವಾಗಿ ನಡೆಸಿಕೊಂದು ಬಂದಿದೆ. ಇಂತಹ ಉದ್ಯಮಗಳು ನಷ್ಟ ಅನುಭವಿಸಲು ಪ್ರಮುಖ ಕಾರಣ ಅರ್ಥ ಮೂಲವಾಗಿಲ್ಲದೇ ಬೇರೆಯೇ ಆಗಿದೆ. ಹೀಗೆ ಈ ಉದ್ಯಮಗಳ ಕಳಪೆ ನಿರ್ವಹಣೆಗೆ ರಾಜಕೀಯ ಹಸ್ತಕ್ಷೇಪ ಮತ್ತು ಖಾಸಗೀ ಉದ್ದಿಮೆರಂಗದ ಕರಾಮತ್ತುಗಳು ಕಾರಣವಾಗಿದೆ. ಇಂದು ನಾವು ಇಂತಹ ಉದ್ದಿಮೆಗಳ ಶೇರುಗಳನ್ನು ಸಾರ್ವಜನಿಕರಿಗೆ ಮಾರಲು ಹೊರಟ್ಟಿದ್ದೇವೆ. ಈ ಸಾರ್ವಜನಿಕ ರಂಗದ ಉದ್ದಿಮೆಗಳ ಆಸ್ತಿಯ ನಿಜವಾದ ಮೌಲ್ಯ ಪುಸ್ತಕದಲ್ಲಿ ನಮೂದಿಸಿರುವುದಕ್ಕಿಂತ ಹಲವಾರು ಪಟ್ಟು ಜಾಸ್ತಿಯಿದೆ. ತಮಾಷೆಯೆಂದರೆ ಮುಖಬೆಲೆಗೆ ಯಾ ದಾಖಲಿತ ಬೆಲೆಗೆ ಅವುಗಳನ್ನು ಮಾರ ಹೊರಟಾಗಲೂ ಖರೀದಿಗಾರರೇ ಇಲ್ಲದಂತಹ ಸಂದರ್ಭವಿದೆ ಕಾರಣ ಸರಕಾರ ಸಾರ್ವಜನಿಕ ರಂಗದ ಕಂಪನಿಗಳ ಶೇರುಗಳನ್ನು ಮಾರಾಟಮಾಡಿ ಸಂಪÀನ್ಮೂಲ ರೂಢಿಸ ಹೊರಟಿರುವ ವಿಚಾರ ಈಗಾಗಲೇ ಎಲ್ಲ ವಲಯಗಳಲ್ಲೂ ಗೊತ್ತಿರುವುದರಿಂದ ಖಾಸಗೀ ಉದ್ಯಮ ರಂಗ ಶೇರುಗಳ ಬೆಲೆಯಲ್ಲಿ ಇನ್ನೂ ಇಳಿತವುಂಟÁಗುವುದನ್ನು ನಿರೀಕ್ಷಿಸುತ್ತದೆ. ಸಾರ್ವಜನಿಕ ರಂಗದ ಉದ್ದಿಮೆಗಳ ಶೇರುಗಳನ್ನು ಹೀಗೆ ಬಿಕರಿ ಮಾಡುವುದರಿಂದ ಆಗಬಹುದಾದ ಇನ್ನೊಂದು ಅಪಾಯವೆಂದರೆ, ದೇಶದ ಹಿತದಷ್ಟಿಯಿಂದ ಹುಟ್ಟಿಕೊಂಡ ಇಂತಹ ಉದ್ದಿಮೆಗಳ ಶೇರುಗಳು ವಿದೇಶಿಯರ ಪಾಲಾಗುವ ಸಾಧ್ಯತೆಗಳಿವೆ. ಜಗತೀಕರಣ, ಮುಕ್ತಮಾರುಕಟ್ಟೆ ಯಾ ಉದಾರ ಅರ್ಥಿಕತೆಯ ಪರಿಣಾಮ ಹಿತಕಾರಿಯಾಗುವಂತೆ ಕಾಣುಸುತ್ತಿಲ್ಲ.

ಹಿಂದಿನ ಸರಕಾರ ಆರ್ಥಿಕ ಕಾರ್ಯಕ್ರಮಗಳನ್ನು ಕಟುವಾಗಿ ಟೀಕಿಸುತ್ತಿದ್ದ ರಾಜಕೀಯ ಪಕ್ಷಗಳೆಲ್ಲಸೇರಿ ರಚಿಸಿಕೊಂಡ ಸಂಯುಕ್ತ ರಂಗ ಸರಕಾರ ೧೯೯೬ ಜೂನ್ ನಿಂದ ಅಧಿಕಾರ ನಡೆಸುತ್ತಿದೆ. ಯಾವ ಆರ್ಥಿಕ ಕಾರ್ಯಕ್ರಮಗಳನ್ನು ಈಗ ಅಧಿಕಾರದಲ್ಲಿರುವ ಪಕ್ಷಗಳು ಟೀಕಿಸುತ್ತಿದ್ದವೋ, ಅಂತಹವರೇ ಇಂದು ಉದಾರೀಕರಣವನ್ನು ಕಾಂಗ್ರಸ್ ಸರ್ಕಾರದ ಬೆಂಬೆಲದೊAದಿಗೆ ಮುಂದುವರಿಸಿಕೊAಡು ಹೋಗಬೇಕಾಗಿರುವುದು ರಾಜಕೀಯ ದುರಂತವಾಗಿದೆ. ಮುಕ್ತ ಅರ್ಥ ವ್ಯವಸ್ಥೆಯ ಬಗೆ ಒಲವಿರುವ ಚಿದಂಬರA ಅರ್ಥ ಸಚಿವರಾಗಿ ಮುಂದುವರಿಯುತ್ತಿದ್ದಾರೆ. ೧೯೯೬-೯೭ ಸಾಲಿನ ಮುಂಗಡ ಪತ್ರ ಹಿಂದಿನ ಕಾಂಗ್ರೆಸ್ ಸರಕಾರದ ಉದಾರೀಕರಣ ನೀತಿಯ ಮುಂದುವರಿಕೆಯಾಗಿದೆ. ಆದರೂ ಕೆಲವೊಂದು ಘಟಕ ಪಕ್ಷಗಳ ಯಾ ಸಹಪಕ್ಷಗಳ ಒತ್ತಾಯದ ಮೇರೆಗೆ ಜನೋಪಯೋಗಿ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ ರಾಜಕೀಯ ಅನಿಶ್ಚಿತತೆ ಮುಂದುವರೆದಿದ್ದು ಅನಿವಾರ್ಯವಾಗಿ ಈ ಗೊಂದಲ ಅರ್ಥವ್ಯವಸ್ಥೆಯ ಮೇಲೂ ತನ್ನ ಪರಿಣಾಮ ಬೀರಿದೆ. ದೇಶದ ಶೇರು ಮಾರುಕಟ್ಟೆ ಕುಸಿಯುತ್ತಿದ್ದು, ವಿದೇಶಿ ಬಂಡವಾಳ ಸಂಗ್ರಹಿಸಲು ವಿಫಲ ಪ್ರಯತ್ನಗಳು ಮುಂದುವರೆಯುತ್ತಲಿವೆ. ಒಟ್ಟಿನಲ್ಲಿ ಯಾವ ಉದ್ದೇಶಕ್ಕಾಗಿ ನಾವು ನಿಯಂತ್ರಣ ವ್ಯವಸ್ಥೆಯಿಂದ ಮುಕ್ತ ಅರ್ಥ ವ್ಯವಸ್ಥೆಯೆಡೆಗೆ ಹೊರಟ್ಟಿದ್ದೆವೋ ಅಂತಹ ಪ್ರಯತ್ನಗಳೂ ಫಲಕಾರಿಯಾಗದಿದ್ದರೆ ನಮ್ಮ ಮುಂದಿನ ಆಯ್ಕೆ ಏನು ಎನ್ನುವುದು ನಿರ್ದಾರವಾಗಬೇಕಾಗಿದೆ. ಜಾಗತೀಕರಣದ ಇಡೀ ಪ್ರಕ್ರಿಯೆ ಪೂರ್ಣಗೊಂಡರೆ ವಿಶ್ವದಲ್ಲಿನ ವ್ಯವಸ್ಥೆ ಹೇಗಾಗಬಹುದು ಎನ್ನುವ ಪ್ರಶ್ನೆಯೂ ಪ್ರಸ್ತುತವೇ?

ಆರ್ಥಿಕ ಆಭಿವೃದ್ಧಿ ನೀತಿಯಲ್ಲಿ ಮೂಲಭೂತ ಬದಲಾವಣೆಗೆ ಕಾರಣಗಳನ್ನು ನಮ್ಮ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಹಿನ್ನಲೆಯಲ್ಲಿ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಹಾಗೆಯೇ ಅಭಿವೃದ್ಧಿಯ ನೀತಿಯಲ್ಲಿರಬಹುದಾದ ಲೋಪದೋಷಗಳು,ರಾಜಕೀಯರಂಗದಲ್ಲಿ ಆದಂತಹ ಬದಲಾವಣೆಗಳು, ಸಾಮಾಜಿಕ ಅಸಮಾನತೆ, ೮೦ರ ದಶಕದಲ್ಲಿ ನಮ್ಮ ಅಭಿವೃದ್ಧಿ ನೀತಿಗಳಲ್ಲಿ ಉಂಟಾದ ಬದಲಾವಣೆಗಳು ಮುಂತಾದುವೆಲ್ಲ ಇಂದು ಆಗಿರಬಹುದಾದಂತಹ ಬದಲಾವಣೆಗೆ ಕಾರಣವೆಂದೊಪ್ಪಿಕೊAಡರೂ ಇಂತಹ ಬದಲಾವಣೆಗಳಿಗೆಲ್ಲ ಮೂಲವಾಗಿರುವ ಅಂಶಗಳು ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಬಲವಾಗಿರುವ ಬಂಡವಾಳಶಾಹಿ ಎನ್ನುವುದನ್ನು ತಿಳಿಯಬೇಕಾಗಿದೆ. ೧೯೪೭ರ ಹೊತ್ತಿಗೆ ಬಂಡವಾಳಶಾಹಿ ಮತ್ತು ಈ ವ್ಯವಸ್ಥೆಯನ್ನು ಪ್ರಶ್ನಿಸುವ ಇನ್ನೊಂದು ಗುಂಪು ಪ್ರಬಲವಾಗಿದ್ದವು. ನಂತರದಲ್ಲಿ ಅಂದರೆ ೧೯೮೦ರಷ್ಟು ಹೊತ್ತಿಗೆ  ರಷ್ಯಾದಲ್ಲಿ ತಲೆದೂರಿದ ಅಂತರಿಕ ಸಮಸ್ಯೆಗಳಿಂದಾಗಿ ಕಮ್ಯುನಿಸ್ಟ್ ಸರಕಾರದ ಪತನ ಅಂತರಾಷ್ಟಿçÃಯವಾಗಿ ಬಂಡವಾಳಶಾಹಿಗೆ ಸವಾಲೇ ಇಲ್ಲದಂತೆ ಮಾಡಿತು. ರಷ್ಯಾದೊಂದಿಗೆ ನಾವು ಹೊಂದಿದ್ದ ಆರ್ಥಿಕ ಮತ್ತು ರಾಜಕೀಯ ಸಂಬAಧಗಳಿAದಾಗಿ ನಮಗಿದೊಂದು ಆಘಾತವೇ ಆಯ್ತು. ೧೯೮೯-೯೦ರಲ್ಲಿ ನಡೆದ ಕೊಲ್ಲಿ ಯದ್ಧದ ಪರಿಣಾಮವಂತೂ ಬಂಡವಾಳಶಾಹಿ ಶಕ್ತಿಗೆ ಹೊಸ ಆತ್ಮ ವಿಶ್ವಾಸವನ್ನೇ ನೀಡಿತೆಂದರೂ ತಪ್ಪಾಗಲಾರದು. ಸಮಾಜವಾದಿ ವ್ಯವಸ್ಥೆ ಒಂದು ಉತ್ತಮ ಅಭಿವೃದ್ಧಿ ನೀತಿ ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಅನುವು ಮಾಡಿಕೊಡುವುದಿಲ್ಲ. ಎನ್ನುವುದನ್ನು ಪಶ್ಚಿಮದ ದೇಶಗಳು ರಷ್ಯಾವನ್ನು ಉದಾಹರಿಸಿ ಪ್ರಚಾರ ಮಾಡುತ್ತಾ ಬಂದವು. ಆದರೆ ಇಲ್ಲಿ ನಾವು ನೆನಪಿಟ್ಟುಕೊಳ್ಳಬೇಕಾದ ಅಂಶವೆAದರೆ ೧೯೩೦ ರ ದಶಕದಲ್ಲಿ ಬಂಡವಾಳಶಾಹಿ ದೇಶಗಳು ಆರ್ಥಿಕ ಸಂಕಷ್ಟದಲ್ಲಿದ್ದಾಗ ಸಮಾಜವಾದಿ ರಾಷ್ಟç ಸೋವಿಯತ್ ರಷ್ಯಾ ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಪ್ರಗತಿ ಸಾಧಿಸಿತ್ತು. ಬದಲಾದ ಜಾಗತಿಕ ಪರಿಸ್ಥಿತಿಯಲ್ಲಿ ಜಗತ್ತಿನಲ್ಲಿ ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟçಗಳು ಮುಂದುವರಿಯಬೇಕಾದರೆ, ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಬಲವಾಗಿರುವ ಬಂಡÀವಾಳಶಾಹಿಯ ದೆÀ್ಯತ್ಯ ಶಕ್ತಿಯೊಂದಿಗೆ ಕೂಡಿ ಬಾಳುವುದು ಅನಿವಾರ್ಯವಂತೂ ಆಗಿದೆ ಎನ್ನುವ ಮಾತು ಕೇಳಿಬರುತ್ತದೆ. ಆದರೆ ಸಾಮ್ರಾಜ್ಯಶಾಹೀ ನೀತಿಯ ಯಶಸ್ಸಿಗೆ ಅಮೆರಿಕನ್ ಪ್ರಜೆಗಳು ತೆರುತ್ತಿರುವ ಬೆಲೆಯ ಕುರಿತಂತೆ ಅಲ್ಲಿನ ಪ್ರಜೆಗಳು ಸಂತೋಷವಾಗಿಲ್ಲ. ಈ ವಇಷಯ ಇರಾಕ್ ಯದ್ಧದ ಪರಿಣಾಮವನ್ನು ನೋಡಿದರೆ ತಿಳಿಯುತ್ತದೆ. ಆದರೆ ಈ ಹುಲಿ ಸವಾರಿಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ತರುವ ಮಾರ್ಗೋಪಾಯ ಯಾವುದು ಎನ್ನುವುದೇ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ.

ಭಾಗ ೩

ಭಾರತೀಯ ಆರ್ಥಿಕ ವ್ಯವಸ್ಥೆಯ ವಿನ್ಯಾಸ ಮತ್ತು ಅಭಿವೃದ್ಧಿಯ ಮೇಲೆ ಹೊಸ ಆರ್ಥಿಕ ನೀತಿಯ ಪರಿಣಾಮಗಳ ಕುರಿತ ಒಂದು ವಿಮರ್ಶೆ


ಭಾರತೀಯ ಅರ್ಥವ್ಯವಸ್ಥೆಯಲ್ಲಿ, ಆರ್ಥಿಕ ಉದಾರೀಕರಣದ ಫಲವಾಗಿ ಬಹಳಷ್ಟು ಬದಲಾವಣೆಗಳು ಕಳೆದ ೨೩ ವರ್ಷಗಳಲ್ಲಿ ಆಗಿ ಹೋಗಿದೆ. ಇಂತಹ ಬದಲಾವಣೆಗಳನ್ನು ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿ ವಲಯಗಳು ಹೇಗೆ ಸ್ವೀಕರಿಸಿವೆ, ಹೇಗೆ ಎದುರಿಸಿವೆ ಮತ್ತು ಅವುಗಳ ಮೌಲ್ಯಮಾಪನವೇನಾದರೂ ನಡೆದಿದೆಯೋ, ನಡೆಯುವ ಅವಶ್ಯಕತೆ ಇದೆಯೋ ಎನ್ನುವ ಅಂಶಗಳ ಬಗ್ಗೆ ಸಂವಾದ, ಚರ್ಚೆ ಅಗತ್ಯ ಮತ್ತು ಅಪೇಕ್ಷಣೀಯವೆನಿಸುತ್ತದೆ.

ಇಂದಿನ ಕಾಲ ಘಟ್ಟದಲ್ಲಿ ಉದಾರೀಕರಣ ಯಾಕಾಗಿ, ಯಾವ ಕಾರಣದಿಂದ ನಡೆಯಿತು. ಎನ್ನುವ ಚರ್ಚೆಯಂತೂ ಅಪ್ರಸ್ತುತವೆನಿಸಿ ಬಿಟ್ಟಿದೆ. ಬದಲಾವಣೆ ಎನ್ನುವ ಏಕಮುಖ ಮಾರ್ಗದಲ್ಲಿ ಈಗಾಗಲೇ ಆಗಿಹೋದಘಟನಾವಳಿಗಳನ್ನು  ಅನುಷ್ಟಾನಗೊಳೊಸಿರುವ ಅಭಿವೃದ್ಧಿ ಯೋಜನೆಗಳನ್ನು ಅಳಿಸಿ ಹಾಕುವುದು ಸಾಧ್ಯವಿಲ್ಲ. ಆದರೆ ಇಂತಹ ಘಟನಾವಳಿಗಳು ಅನುಸರಿಸಿದ ಕಾರ್ಯ ತಂತ್ರಗಳು ಮತ್ತು ಅವು ಉಂಟುಮಾಡಿದ ಪರಿಣಾಮಗಳನ್ನು ಹೆಚ್ಚು ಜನಹಿತವಾಗುವಂತೆ ಬದಲಾಯಿಸಿಕೊಳ್ಳುವ ದೃಷ್ಟಿಯಿಂದ ಮುಂದಿನ ಕಾರ್ಯ ಯೋಜನೆ ರೂಪಿಸಿಕೊಳ್ಳವುದು ಅಗತ್ಯ. ಈ  ಕಾರಣದಿಂದಾಗಿಯೇ ಆರ್ಥಿಕ ವಲಯದಲ್ಲಿ ಈ ಕುರಿತ ಚರ್ಚೆ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಆರ್ಥಿಕ ಉದಾರೀಕರಣ ಅಥವಾ ೧೯೯೦ರಿಂದ ನಂತರದ ಅವಧಿಯಲ್ಲಿ ಆಗಿರುವ ಬದಲಾವಣೆಗಳು ಮತ್ತು ಉಂಟುಮಾಡಿರಬಹುದಾದ ಪರಿಣಾಮಗಳ ಬಗ್ಗೆ ಪರ, ವಿರೋಧ ವಾದಗಳಿರುವುದು ಸಹಜ. ಇಂತಹ ವಾದಗಳು ತಮ್ಮನ್ನು ಸಮರ್ಥಿಸಿಕೊಳ್ಳಲು ಲಭ್ಯವಿರುವ ಮಾಹಿತಿಯನ್ನು ತÀರ್ಕದ ಜಾಣ್ಮೆವಾದಗಳನ್ನು ಗೆಲ್ಲುವ ಬದಲಿಗೆ ನಮ್ಮ ವಾಸ್ತವ ಮತ್ತು ವಿಕಲ್ಪದ ದರ್ಶನ ಮಾಡಿಸುವಂತಿರಬೇಕು.

ಪ್ರಚಲಿತ ಸಮಯ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಆಗಿರುವ ಬದಲಾವಣೇಗಳ ಬಗೆಗೆ ನಾವು ಮೂರು ರೀತಿಯ ಅಭಿಪ್ರಾಯಗಳನ್ನು ಗಮನಿಸಬಹುದಾಗಿದೆ. ಮೊದಲನೆಯದು ಉದಾರೀಕರಣವನ್ನು ಸಮರ್ಥಿಸುತ್ತಾ ಹೋಗುತ್ತದೆ. ಇದು ಉದಾರೀಕರಣ ಮತ್ತು ಆದರಿಂದ ಉಂಟಾದ ಬದಲಾವಣೆಯ ಬಗ್ಗೆ ಸಹಮತ ವ್ಯಕ್ತಪಡಿಸುತ್ತದೆ, ಮಾತ್ರವಲ್ಲದೆ ಉದಾರೀಕರಣದ ನಂತರ ಆಗಿರುವ ಬದಲಾವಣೆಯ ಬಗ್ಗೆ ಈ ವಾದಕ್ಕೆ ಒಂದು ರೀತಿಯ ಸಂಭ್ರಮವಿದೆ. ಆರ್ಥಿಕ ದಿವಾಳಿಯಂಚೆಗೆ ಬಂದಿದ್ದ ನಮ್ಮ ಅರ್ಥ ವ್ಯವಸ್ಥೆ ಉದಾರೀಕರಣ ನೀತಿಯನ್ನು ಅನುಸರಿಸಿದ ಕಾರಣದಿಂದಾಗಿ ಒಂದು ಜಗತೀಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಎನ್ನುತ್ತಿದೆ. ಈ ವರ್ಗದ ಅಭಿಪ್ರಾಯದಂತೆ ದೀರ್ಘಕಾಲದವರೆಗೆ ಸರಕಾರದ ನಿಯಂತ್ರಣದಿAದಾಗಿ ಇಡೀ ಅರ್ಥ ವ್ಯವಸ್ಥೆöಯೇ ಜಡ್ಡುಗಟ್ಟಿಹೋಗಿತ್ತು. ಅಧಿಕಾರಶಾಹಿಯ ಎಗ್ಗಿಲ್ಲದ ದುರಾಡಳಿತದಿಂದ ಉದ್ಯಮಶೀಲ ಮನೋವೃತ್ತಿಯು ದಮನಿತವಾಗಿ ನಿರುಪಯುಕ್ತವಾಗಿ ಬಿಟ್ಟಿÀತ್ತು. ಈ ಎಲ್ಲಾ ಕಾರಣಗಳಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ತೂಕಡಿಸುತ್ತಾ ಕಾಲೆಳೆಯುತ್ತಾ ಮುಂದುವರೆದಿತ್ತು. ಸ್ವಾತಂತ್ರö್ಯ ನಂತರದಿAದ ಸರಾಸರಿ ೩.೫.ರ ದರವನ್ನು ಮೀರಿರಲಿಲ್ಲ.ಉದಾರೀಕರಣದ ನಂತರದ ದಿನಗಳಲ್ಲಿ ಈ ಸ್ಥಿತಿಗಿಂತ ಸಂಪೂರ್ಣಭಿನ್ನವಾದ ಭಾರತದ ಚಿತ್ರಣವನ್ನು ನಾವು ಈಗ ಕಾಣುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ಭಾರತ ೨೦೨೦ರ ಹೊತ್ತಿಗೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎನ್ನುವ ಅಭಿಪ್ರಾಯವನ್ನು ಈ ವರ್ಗ ನಿಸ್ಸಂಶಯವಾಗಿ ಅನುಮೋದಿಸುತ್ತಿದೆ. ಆದರೆ ಇಂತಹ ವಾದಗಳನ್ನು ಮತ್ತು ಸಮರ್ಥನೆಗಳನ್ನು ನಾವು ಬರೀ ಭಾರತೀಯ ಆರ್ಥಿಕ ವ್ಯವಸ್ಥೆಯ ಒಂದು ಕಾಲ ಘಟ್ಟದ ಪರಿಸ್ಥಿತಿಯನ್ನಾಗಿ ಮಾತ್ರ ನೋಡದೆ, ಇದರ ಆಚೆ ಈಚೆ, ಹಿಂದೆ ಮುಂದೆಯೂ ದೃಷ್ಟಿ ಬೀರಿ ವಿಷಯ ಗ್ರಹಣ ಮಾಡಬೇಕಾಗಿದೆ.  ಆ ವಿಷಯವನ್ನು ಸದ್ಯ ಪಕ್ಕಕ್ಕಿರಿಸಿ ಆರ್ಥಿಕ ಉದಾರೀಕರಣದ ಸಂಭ್ರಮಾಚರಿಸುವ ಅಭಿಪ್ರಾಯಿಗರು ತಮ್ಮ ಈ ಕ್ಷಣದ ಸಮಾಧಾನಕ್ಕೆ ಸಂಭ್ರಮಕ್ಕೆ ಮುಂದೊಡ್ಡುತ್ತಿರುವ ಸಮರ್ಥನೆಗಳ ಬಗ್ಗೆ ದೃಷ್ಟಿ ಹರಿಸೋಣ.

ಆರ್ಥಿಕ ಉದಾರೀಕರಣ ಎನ್ನುವುದು ನಮ್ಮ ಮುಂದಿರುವ ದಾರಿ ಮಾತ್ರವಲ್ಲ ಗುರಿಯೂ ಆಗಿದೆ. ಈಗಾಗಲೇ ಜಾಗತೀಕ ಅರ್ಥ ವ್ಯವಸ್ಥೆ ಅಸ್ತಿತ್ವದಲ್ಲಿದ್ದು ವಿಶಾಲವಾಗಿ ಬೆಳೆದಿರುವ ಅಂತಹ ವ್ಯವಸ್ಥೆಯನ್ನು ಅದರಿಂದ ಬೇರ್ಪಡಿಸುವುದು ಅಸಾಧ್ಯ ಮಾತ್ರವಲ್ಲ ಅಂತಹ ಕ್ರಮ ಮೂರ್ಖತನದ್ದೂ ಆಗಿದೆ. ಹಾಗಿರುವಾಗ ನಆವು ಈ ಬದಲಾವಣೆಯನ್ನು ಭಾರತದಲ್ಲಿ ಜನರ ಜೀವನ ಮಟ್ಟ ಸುಧಾರಿಸುವ ದೃಷ್ಟಿಯಿಂದ ಸಮರ್ಥವಾಗಿ ದುಡಿಸಿಕೊಳ್ಳಬೇಕೇ ಹೊರತು ಅದನ್ನು ತಡೆಯಬಾರದು ಯಾವುದೂ ಕೆÀಟ್ಟಿದ್ದೂ ಅಲ್ಲ ಪೂರ್ಣ ಒಳ್ಳೆಯದೂ ಅಲ್ಲ. ಒಂದು ವ್ಯವಸ್ಥೆಯನ್ನು ನಾವು ಎಷ್ಟು ಶ್ರದ್ದೆಯಿಂದ ಮತ್ತು ಜನಪರ ಕಾಳಜಿಯಿಂದ ದುಡಿಸಿಕೊಳ್ಳುತ್ತೇವೆ ಎನ್ನುವ ವಿಷಯ ಮುಖ್ಯವಾದಾಗ ಇತರ ದೇಶಗಳಂತೆ ನಾವೂ ಕೂಡಾ ಮುಂದುವರಿಯಬಹುದು.

ಕೈಗಾರೀಕರಣದ ಪ್ರಭಾವದಿಂದ ಎಲ್ಲರಿಗೆ ಅನ್ನ, ಮನೆ, ಉದ್ಯೋಗ ಮುಂತಾದ ಅವಶ್ಯಕತೆಗಳನ್ನು ಪೂರೈಸುವ ಮೂಲಕ ನಾವು ಸಾಕಷ್ಟು ಮುಂದೆ ಬಂದಿದ್ದೇವೆ. ಆರೋಗ್ಯ, ಶಿಕ್ಷಣ, ತಂತ್ರಜ್ಞಾನದAತಹ ರಾಗಗಳಲ್ಲಿ ಜಗತ್ತಿನ ಇತರ ದೇಶಗಳ ಹುಬ್ಬೇರಿಸುವಷ್ಟು ಮಟ್ಟಿಗೆ ನಮ್ಮ ದೇಶ ಸಾಧನೆ ಮಾಡಿದೆ. ಮಾಹಿತಿ ತಂತ್ರಜ್ಞಾನದಲ್ಲAತೂ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಗಿದ್ದೇವೆ. ಮಾತ್ರವಲ್ಲ ಈ ರಂಗದ ಅಪರಿಮಿತ ಸಾಧನೆಯ ಪರಿಣಾಮವಾಗಿ ಸಾಕಷ್ಟು ದೊಡ್ಡ ಪ್ರಮಾಣದ ವಿದೇಶೀ ಬಂಡÀವಾಳ ಹರಿದು ಬಂದಿದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗರಿವು ಸತ್ಯ ನಮ್ಮ ಕಣ್ಣ ಮುಂದಿದೆ. ಇಂತಹ ಬದಲಾವಣೆಗಳು ಆಗುವ ಸಮಾಜದಲ್ಲಿ ಅರ್ಥ ವ್ಯವಸ್ಥೆಯಲ್ಲಿ, ಕೆಲಮಟ್ಟಿನ ತಲ್ಲಣಗಳು, ಏರಿಳಿತಗಳು ಆಗುವುದು ಸಹಜ ಆದರೆ ಅಂತಹ ತಲ್ಲಣ, ಏರಿಳಿತಗಳನ್ನು ನಿಯಂತ್ರಿಸಿ ಮುಂದುವರಿಯುವ ಬಗ್ಗೆ ಯೋಚಿಸಬೇಕೇ ಹೊರತು, ಬದಲಾವಣೆಯಿಂದ ಪಾಲಾಯನ ಮಾಡಲು ಅವು ಕಾರಣಗಳಾಗಬಾರದು. ಜಗತ್ತಿನಲ್ಲಿ ಸಂಪೂರ್ಣ ಪ್ರತ್ಯೇಕವಾಗುಳಿದು ಮುನ್ನಡೆ ಸಾಧಿಸಿದ ಯಾವ ದೇಶವೂ ನಮಗೆ ಕಾಣಸಿಗುವುದಿಲ್ಲ.

೧೯೫೦ ರಿಂದ ೮೦ರ ವರೆಗೂ ಸಾಂಪ್ರದಾಯಿಕ ಮನೋಧರ್ಮ ಪ್ರೇರಿತ ರಕ್ಷಾತ್ಮಕ ಮಾದರಿಯ ಆರ್ಥಿಕ ಅಭಿವೃದ್ಧಿ ನೀತಿಯನ್ನು ಅನುಸರಿಸಿದ ಕಾರಣ ದೊಡ್ಡ ರೀತಿಯ ಬದಲಾವಣೆಗಳು ಆಗಲಿಲ್ಲ. ಈ ಅವಧಿಯಲ್ಲಿ ರಾಷ್ಟಿçÃಯ ಉತ್ಪನ್ನದಲ್ಲಿ೩ ರಿಂದ ೫% ರಷ್ಟು ಬೆಳವಣಿಗೆಯನ್ನು ಭಾರತೀಯ ಅರ್ಥ ವ್ಯವಸ್ಥೆ ದಾಖಲಿಸಿತು. ನಿಧಾನಗತಿಯ ಈ ಬೆಳವಣಿಗೆಯ ದರವನ್ನು ‘ಹಿಂದೂ ಅಭಿವೃದ್ಧಿ ದರ’ ವೆಂದು ಕರೆಯಲಾಗುತ್ತಿದೆ. ಉದಾರೀಕರಣದ ತರುವಾಯ ಆರ್ಥಿಕ ಚಟುವಟಿಕೆಗಳು ಉತ್ಕರ್ಷಗೊಂಡ ಪರಿಣಾಮವಾಗಿ ಅಭಿವೃದ್ದಿಯ ದರದಲ್ಲಿ ಗಮನಾರ್ಹ ಏರಿಕೆಯಾಗಿ ಅದು ಶೇಕಡಾ ೮-೯ ರಷ್ಟು ಏರಿಕೆಯಾಗಿದೆ. ಇದೊಂದು ಗಮನಾರ್ಹ ಸಾಧನೆಯೇ ಸರಿ.

ವಿದೇಶಿ ವಿನಿಮಯದ ಕೊರತೆಯಿಂದ ಬಹುಪಾಲು ದಿವಾಳೀಯ ಅಂಚಿಗೆ ಬಂದಿದ್ದ ಪರಿಸ್ಥಿತಿ ಇವತ್ತು ಸಂಪೂರ್ಣ ಬದಲಾಗಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ವಿದೇಶಿ ವಿನಿಮಯದ ಸಂಗ್ರಹವಿದೆ. ಪಾಲು ಬಂಡÀವಾಳ ವಿದೇಶಿ ಹಣಕಸು ಸಂಸ್ಥೆಗಳಿಗೆ ದ್ವಿತೀಯ ಮಾರುಕಟ್ಟೆಯಲ್ಲಿ ಹೂಡಿಕೆಗೆ ಅವಕಾಶ ಮತ್ತು ಅನಿವಾಸೀ ಭಾರತೀಯರು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೋಳ್ಳಲು ಕಲ್ಪಿಸಿರುವ ಅವಕಾಶಗಳೇ ಕಾರಣದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ಆರ್ಥಿಕ ಶಿಸ್ತು ಪಾಲಿಸುವುದು ಅನಿವಾರ್ಯವಾಗಿರುವ ಕಾರಣದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದೆAದಿಗಿAತಲೂ ಹೆಚ್ಚು ಶಿಸ್ತು ಬದ್ಧವಾಗಿ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿವೆ ಎಂದು ಹೇಳಲಾಗುತ್ತಿದೆ.

ದೇಶ್ಲಿ ಸೇವಾ ರೂಪದ ಉತ್ಪನ್ನಗಳ ರಫ್ತು ಗಮನಾರ್ಹವಾಗಿ ಏರಿಕೆಯಾಗಿದೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಆಗಿರುವ ಕ್ರಾಂತಿಯೇ ಇದಕ್ಕ ಪ್ರಮುಖ ಕಾರಣವಾಗಿದೆ. ೧೯೯೦-೯೧ರಲ್ಲಿ ೪.೬ ಬಿಲಿಯನ್ ಡಾಲರ್ ರಫ್ತು ೨೦೦೧-೦೨ರಲ್ಲಿ ೨೦.೩ ಬಿಲಿಯನ್ ಡಾಲರಗಳಿಗೆ ಹೆಚ್ಚಿದೆ. ೧೯೯೩-೯೪ರಲ್ಲಿ ೦.೩ ಬಿಲಿಯನ್ ಡಾಲರ್‌ಗಳಿಷ್ಟಿದ್ದ ಮಾಹಿತಿ ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ರಫ್ತು ೨೦೦೧-೦೨ ನೇ ವ್ಯಾಪಾರ ಸಾಲಿನಲ್ಲಿ ೭.೨ ಬಿಲಿಯನ್ ಡಾಲರ್‌ಗಳಷ್ಟಾಗಿದೆ.ನಿರ್ಬಂಧ ಮತ್ತು ನೇರ ವಿದೇಶಿ ಹೂಡಿಕೆಗೆ ಅವಕಾಶ ದೊರೆತಿರುವ ಕಾರಣದಿಂದ ಇಂತಹ ಬದಲಾವಣೆ ಸಾಧ್ಯವಾಗಿದೆ ಎನ್ನುವುದನ್ನು ಮರೆಯುವ ಹಾಗಿಲ್ಲ.

ಚಾಲ್ತಿ ಖಾತೆ ಮತ್ತು ಬಂಡÀವಾಳ ಖಾತೆಗೆ ರೂಪಾಯಿಯ ಪರಿವರ್ತನೆಯ ಕುರಿತಂತೆ ಬದಲಾದ ನೀತಿಯ ಕಾರಣದಿಂದ ಮೇ ೨೦೦೩ ರ ಅಂತ್ಯಕ್ಕೆ ವಿದೇಶಿ ವಿನಿಮಯದ ಮೊತ್ತ ಸುಮಾರು ೭೯ ಬಿಲಿಯನ್ ಡಾಲರ್‌ಗಳಷ್ಟಿತ್ತು ಬಾಹ್ಯ ಸಾಲಗಳ ನಿರ್ವಹಣೆಯೂ ಉತ್ತಮವಾಗಿಯೇ ಇದೆ ೧೯೯೧ ರಲ್ಲಿ ರಾಷ್ಟಿçÃಯ ಉತ್ಪನ್ನದ ೧.೯% ಶೇಕಡಾದಷ್ಟಿದ್ದ ಅಲ್ಪಾವಧಿ ಸಾಲದ ಹೊರೆ ೨೦೦೨ ರಲ್ಲಿ ೦.೬% ಶೇಕಡಾಕ್ಕೆ ಇಳಿದಿತ್ತು. ಇದೇ ರೀತಿಯಲ್ಲಿ ಒಟ್ಟು ವಿದೇಶಿ ಸಾಲ ೨೮.೭% (ರಾಷ್ಟಿçÃಯ ಉತ್ಪಾದನೆಯ)ರಿಂದ ೨೦.೯% ಕ್ಕೆ ಬಂದಿದೆ. ಈ ಬದಲಾವಣೆಗಳ ಕಾರಣ ಅಂತರಾಷ್ಟಿçÃಯ ಮಟ್ಟದಲ್ಲಿ ಭಾರತದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಆಗಿದೆ. ಹೀಗಾಗಿ ವಿಶ್ವ ಇಂದು ಭಾರತವನ್ನು ಭವಿಷ್ಯತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಪರಿಗಣಿಸುತ್ತಿದೆ.

ಕೈಗಾರಿಕ ಲೈಸನ್ಸ್ ನೀತಿಯನ್ನು ಬದಲಾಯಿಸಿ ಅಗತ್ಯವಾಗಿರುವ ಕಾನೂನು ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಏಕಸ್ವಾಮ್ಯ ಮತ್ತು ವ್ಯಾಪಾರ ನಿರ್ಬಂಧ ಕಾಯಿದೆಯನ್ನು ೧೯೯೧-೯೨ರಲ್ಲಿ ಪರಿಷ್ಕರಿಸುವ ಮೂಲಕ ಕೈಗಾರಿಕ ರಂಗದಲ್ಲಿ ಬೃಹತ್ ಉದ್ಯಮಗಳು ರೂಪುಗೊಳ್ಳುವುದನ್ನು ಪ್ರೋತ್ಸಾಹಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯದ ಉದ್ಯಮಗಳು ನಮ್ಮ ದೇಶದಲ್ಲಿ ಬೆಳೆಯ ಬೇಕಾದರೆ ದೊಡ್ಡ ಮಟ್ಟದ ಉದ್ದಿಮೆಗಳು ರೂಪುಗೊಳ್ಳಲು ಸರಕಾರದ ಪ್ರೋತ್ಸಾಹ ಅಗತ್ಯ. ಟಾಟಾ ಸ್ಟೀಲ್ಸ್ನಂತಹ ಉದ್ದಿಮೆ ದೊಡ್ಡ ವಿದೇಶಿ ಕಂಪನಿಗಳನ್ನು ಖರೀದಿಸಿ ತನ್ನ ತಕ್ಕೆಗೆ ತೆಗೆದುಕೊಳ್ಳುವಂತಹ ಬೆಳವಣಿಗೆ ನಡೆದಿರುವುದು ದೇಶದ ಘನತೆಯನ್ನು ಹೆಚ್ಚಿಸಿದೆ. 

ದೇಶದ ಒಟ್ಟಾರೆ ಅಭಿವೃದ್ಧಿಯ ದೃಷ್ಟಿಯಿಂದ ಆರ್ಥಿಕ ಉದಾರೀಕರಣದ ವೇಗವನ್ನು ಹೆಚ್ಚಿಸಲು ಸಹಾಯಕವಾಗುವ ತೆರಿಗೆ, ಹಣಕಾಸು, ವ್ಯಾಪಾರ, ಇಂಧನ ಮುಂತಾದ ವಲಯಗಳಲ್ಲಿ ಸೂಕ್ತ ನೀತಿ ನಿಯಮ ಹಾಗೂ ಹಲವಾರು ಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಗಳು ನೀಡಿರುವ ಶಿಫಾರಸುಗಳನ್ನು ಅನಿಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಬ್ಯಾಂಕಿAಗ್, ತೆರಿಗೆ ನೀತಿ, ಸಣ್ಣ ಉದ್ಯಮ ವಲಯ ಮುಂತಾದ ವಲಯಗಳಲ್ಲಿ ಅನಗತ್ಯ ಔಪಚಾರಿಕ ಕಾನೂನುಗಳನ್ನು  ನಿವಾರಿಸಿ,  ಆ ವಲಯಗಳ ಕಾರ್ಯ ದಕ್ಷತೆಯನ್ನು ಹೆಚ್ಚು ಮಾಡಲಾಗಿದೆ ಆದರೆ ಆರ್ಥಿಕ ಸುಧಾರಣೆಯನ್ನು ಮುಂದುವರಿಸದೇ ಹೋದಲ್ಲಿ ಈಗಾಗಲೆ ಆಗಿರುವ ಬದಲಾವಣೆಗಳ ಫಲ ಸಾಕಷ್ಟು ಪ್ರಮಾಣದಲ್ಲಿ ದೊರೆಯದೇ ಹೋಗುವ ಸಂಭವವೂ ಇದೆ.

ಸರಕಾರೀ ಸ್ವಾಮ್ಯದ ಕಂಪೆನಿಗಳ ಶೇರುಬಂಡವಾಳವನ್ನು ಖಾಸಗೀ ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ ಜಡವಾಗಿದ್ದ ಸರಕಾರೀ ಉದ್ಯಮ ಎಚ್ಚೆತ್ತು ಕೊಳ್ಳುವಂತೆ ಮಾಡಲಾಗಿದೆ. ಮಾತ್ರವಲ್ಲ ಇಂತಹ ಕ್ರಮದ ಮೂಲಕ ಅಂದಾಜು ೨ಬಿಲಿಯನ್ ಡಾಲರ್‌ಗಳಷ್ಟು ಹಣ ಸರಕಾರೀ ಬೊಕ್ಕಸಕ್ಕೆ ಹರಿದು ಬಂದಿದೆ. ಇಂತಹ ಸಂಪನ್ಮೂಲಗಳನ್ನು ಮೂಲಭೂತ ಸೌಕರ್ಯವೃದ್ಧಿ ಯಂತಹ ಉದ್ದೇಶಗಳಿಗೆ ಉಪಯೋಗಿಸುವ ಮೂಲಕ ಖಾಸಗೀಕರಣದ ಫಲ ಜನ ಸಾಮಾನ್ಯರಿಗೂ ವರ್ಗಾಯಿಸಿದಂತಾಗಿದೆ.

ದೂರಸAಪರ್ಕ ವಲಯದಲ್ಲಿಯಂತೂ ಒಂದು ದೊಡ್ಡ ಕ್ರಾಂತಿಯೇ ನಡೆದು ಹೋಗಿದೆ ಎಂದರೂ ತಪ್ಪಾಗಲಾರದು. ೧೯೯೪-೯೫ರಲ್ಲಿ ಅಸ್ತಿಸ್ವಕ್ಕೆ ಬಂದ ರಾಷ್ಟಿçÃಯ ಟೆಲಿಕಾಂ ನೀತಿಯ ಪರಿಣಾಮವಾಗಿ ಈ ವಲಯದಲ್ಲಿ ವಿದೇಶೀ ಹೂಡಿಕೆಗೆ ಅವಕಾಶ ಮಾಡಲಾಗಿದೆ. ಈ ವಲಯದ ಕಾರ್ಯ ನಿರ್ವಹಣೆಯನ್ನು ನಿಯಂತ್ರಿಸಲು ರಾಷ್ಟಿçÃಯ ಟೆಲಿಕಾಂ ನಿಯಂತ್ರಣ  ಪ್ರಾಧಿಕಾರ ಉತ್ಪನ್ನ ಸೇವೆಯ ವಿಧಿ ವಿಧಾನ, ಬೆಲೆ ನಿರ್ಣಯ ಇತ್ಯಾದಿ ವಿಷಯಗಳ ಮೇಲುಸ್ತುವಾರಿ ನಡೆಸುತ್ತಿದ್ದು ಬಳಕೆದಾರರಿಗೆ ಅನ್ಯಾಯವಾಗದಂತೆ ಜಾಗರೂಕತೆ ವಹಿಸುತ್ತಿದ್ದು ಈ ವರೆಗಿನ ಇದರ ಕಾರ್ಯ ವೈಖರಿ ಸಮಾಧಾನಕರವಾಗೀಯೇ ಇದೆ. ಅತಿ ಕಡಿಮೆವೆಚ್ಚದಲ್ಲಿ ಜನ ಸಾಮಾನ್ಯರಿಗೂ ದೂರ ಸಂಪರ್ಕ ಒದಗಿಸುವುದು ಸರ್ಕಾರದ ಉದ್ದೇಶ ೨೦೦೨ನೇ ಇಸವಿಯ ಅಂತ್ಯದಲ್ಲಿ ಸ್ಥಿರ ದೂರವಾಣಿ ಸಂಪರ್ಕಗಳ ಶೇಕಡಾ ೮೦% ಸಾರ್ವಜನಿಕ ವಲಯದ ಬಿ. ಎಸ್. ಎನ್. ಎಲ್ ಒದಗಿಸಿದರೆ, ಮೊಬೈಲ್ ಸಂಪರ್ಕಗಳ ಶೇಕಡಾ ೭೫%ರಷ್ಟು ಖಾಸಗಿ ವಲಯಗಳು ಒದಗಿಸಿವೆ.

ದೇಶದ ಎಲ್ಲ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವದ ಯೋಜನೆಗಳು ಬೆಳಕು ಕಂಡಿವೆ. ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ೬೦೦೦ಕಿ.ಮೀ. ಉದ್ದದ ಸುವರ್ಣ ಚತುಷ್ಕೋಣ ರಸ್ತೆಯ ನಿರ್ಮಾಣಕ್ಕೆ ಕೈಹಾಕಿದು ಇದು ಒಂದು ಮಹತ್ವದ ಯೋಜನೆಯಾಗಿದೆ. ಅದೇ ರೀತಿಯಲ್ಲಿ ದೇಶದ ಉತ್ತರ ಪೂರ್ವ ರಾಜ್ಯಗಳನ್ನು ದೇಶದ ಇತರ ಭಾಗಗಳೊಂದಿಗೆ ಬೆಸೆಯುವ ೭೩೯೯ಕಿ.ಮೀ. ಉದ್ದದ ರಸ್ತೆಯ ನಿರ್ಮಾಣವು  ಪ್ರಗತಿಯಲ್ಲಿದೆ. ೧೯೯೦ರವರೆಗೆ ಕೇವಲ  ಹಣಕಾಸು ವ್ಯವಹಾರಗಳಿಗೆ ಮಾತ್ರ ಸಿಮಿತವಾಗಿದ್ದ ಬ್ಯಾಂಕಿAಗ್ ವಲಯ ಉದಾರೀಕರಣದ ನಂತರದ ದಿನಗಳಲ್ಲಿ ಮರು ಹುಟ್ಟು ಪಡೆದಿದೆ ಎಂದರೆ ತಪ್ಪಾಗಲಾರದು. ಈಹಿಂದಿನ ಅನಗತ್ಯ ಸರಕಾರೀ ನಿಯಂತ್ರಣ, ಸಾಂಸ್ಥಿತ ತೊಡಕುಗಳು ನಿವಾರೆಣೆಯಾಗಿ ಬ್ಯಾಂಕಿAಗ್ ವಲಯ ಒಂದು ಸ್ವಾಯತ್ತ ಮಾರುಕಟ್ಟೆ ಸಂವೇದಿ ರೀತಿಯಲ್ಲಿ ಸಮರ್ಥವಾಗಿ ಕೆಲಸ ಮಾಡುವ ಮೂಲಕ ಲಾಭಗಳಿಕೆಯ ದೃಷ್ಟಿಯಿಂದ ಹೊಸರೀತಿಯ ವ್ಯಾಪಾರ ವಹಿವಾಟುಗಳಿಗೆ ಪದಾರ್ಪಣೆ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆತರೆ ಬ್ಯಾಂಕುಗಳಿಗೆ ಲಾಭವು ಸಿಗುತ್ತದೆ. ಖಾಸಗೀ ವಲಯದ ಬ್ಯಾಂಕುಗಳ ಸೇವೆಯನ್ನು ಸರಿಗಟ್ಟುವ ರೀತಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದು ಇದರಿಂದ ದೇಶದ ಅರ್ಥ ವ್ಯವಸ್ಥಗೆ ಲಾಭವಾಗಿದೆ. ವಿಮಾವಲಯದಲ್ಲಿಯೂ ಇದೇ ರೀತಿಯ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ದೀರ್ಘಕಾಲ ಜಡವಾಗಿದ್ದ ಸರ್ಕಾರೀ ಸ್ವಾಮ್ಯದ ವಿಮಾ ಕಂಪನಿಗಳು ಕುಂಬಕರ್ಣ ನಿದ್ದೆಯಿಂದ ಎಚ್ಚೆತ್ತು ಬೀಸುತ್ತಿರುವ ಬದಲಾವಣೆಯ ಗಾಳಿಗೆ ಸ್ಪಂದಿಸುತ್ತಿರುವುದು ಗ್ರಾಹಕರ ಪಾಲಿಗೆ ವರದಾನವಾಗಿದೆ.ಪ್ರಾಯಶ: ಉದಾರೀಕರಣವಾಗದಿದ್ದರೆ ಇಂತಹ ಒಂದು ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೆಂದೇ ಹೇಳಬಹುದು.

ಆರ್ಥಿಕ ಸುಧಾರಣೆಯ ನಂತರ ಕೃಷಿ ಮತ್ತು ಸಮಾಜ ಕಲ್ಯಾಣ ಕಾರ್ಯಗಳು ಹಿನ್ನಡೆಯನ್ನು ಅನುಭವಿಸಿದೆ ಎಂದು ಹೇಳಲಾಗುತ್ತದೆಯಾದರೂ ಇದಕ್ಕೆ ಸೂಕ್ತ ಪರ್ಯಾಯಗಳನ್ನು ಕಲ್ಪಿಸಲಾಗಿದೆ. ಅಸಂಘಟಿತ ವಲಯದಲ್ಲಿ ಉದ್ಯಮ ಶೀಲ ಮನೀಭಾವ ಬೆಳೆಸಿಕೊಳ್ಳುವ ಮೂಲಕ ಸ್ವ ಉದ್ಯೋಗ ಕಂಡು ಕೊಳ್ಳಲು ತಾಂತ್ರಿಕ ಮತ್ತು ಹಣಕಾಸಿನ ನೆರವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಪುಟಾಣಿ ಸಾಲ ಯೋಜನೆಗಳು ದಕ್ಷಿಣ ಭಾರತದಲ್ಲಿ ಹಳ್ಳಿ ಹಳ್ಳಿಯನ್ನು ತಲುಪಿ ದುರ್ಬಲ ವರ್ಗಗಳಿಗೆ ಸುಲಭವಾಗಿ ಹಣಕಾಸಿನ ನೆರವು ದೊರೆಯುವಂತೆ ಆಗಿದೆ ಕರ್ನಾಟಕ. ಕೇರಳ ಹಾಗೂ ತಮಿಳುನಾಡಿನಲ್ಲಿ ಈ ಯೋಜನೆ ಉತ್ತಮ ಫಲಿತಾಂಶವನ್ನು ನೀಡಿದೆ. ಸ್ಥಳೀಯ ಸಮಸ್ಯೆ ಸಂಪನ್ಮೂಲಗಳ ಬಗ್ಗೆ ಅರಿವಿರುವ ಮತ್ತು ಜನರವನ್ನು ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿಸುವಂತೆ ಮಾಡಲು ಸರಕಾರೇತರ ಸಂಸ್ಥೆಗಳು ಸಹಯೋಗವನ್ನು ಕೋರಲಾಗಿದೆ. ಸರಕಾರೇತರ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಲ್ಲಿ ಮೂರನೆಯ ವಲಯವೊಂದನ್ನು ಗುರುತಿಸಿದಂತಾಗಿದೆ. ಈ ಬೆಳವಣಿಗೆಯಿಂದ ಹಲವಾರು ಕಾರ್ಪೋರೇಟ್ ಸಂಸ್ಥೆಗಳು ಸಮಾಜ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಸಾಧ್ಯವಾಗಿದೆ. ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಕೇವಲ ಸರಕಾರವನ್ನೇ ಅವಲಂಭಿಸಿ ಬಿಡುವ ಪ್ರವೃತ್ತಿಯಲ್ಲಿ ನಿಧಾನವಾಗಿಯಾದರೂ ಬದಲಾವಣೆಯಾಗುತ್ತಿರುವುದು ಆರೋಗ್ಯ ಪೂರ್ಣ ಬೆಳವಣಿಗೆಯಾಗಿದೆ. ಇಷ್ಟರ ಹೊರತಾಗಿಯೂ ಕೇಂದ್ರ ಸರಕಾರ ಆಹಾರ ಭದ್ರತೆಯ ಹಕ್ಕು, ಕಡ್ಡಾಯ ಪ್ರಾಥಮಿಕ ಶಿಕ್ಷಣ ಮತ್ತು ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳಂತಹ ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಬಡಜನರಿಗೆ ದುಡಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಅನಗತ್ಯ ಅಂಜುಕುಳಿತನದಿAದ ಹೊರಬಂದು ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಸ್ಪರ್ಧಿಸುವ ಲಕ್ಷಣಗಳನ್ನು ಭಾರತೀಯ ಅರ್ಥವ್ಯವಸ್ಥೆ ಮೈಗೆÀÆಡಿಸಿಕೊಳ್ಳುತ್ತಿರುವುದಕ್ಕೆ ಉದಾರೀಕರಣವೇ ಕಾರಣವಾಗಿದೆ. ಆರ್ಥಿಕ ಉದಾರೀಕರಣವನ್ನು ಸಮರ್ಥಿಸುವ ಮೇಲಿನ ವಾದ ಸರಣಿಯನ್ನು ನಿರಾಕರಿಸುವ ಇನ್ನೊಂದು ವಾದವನ್ನು ಪರಿಶೀಲಿಸೋಣ ಮತ್ತು ಯಾವ ನೆಲೆಯಲ್ಲಿ ಮೇಲಿನ ಸಮರ್ಥನೆಗಳು ಸ್ವೀಕಾರರ್ಹವಲ್ಲವೆಂದು ತಿಳಿಯೋಣ.

ಉದಾರೀಕರಣದ ಸಮರ್ಥಕರು ಮುಂದಿರಿಸುವ ವಾದಗಳು ಅಂಶಿಕ ಸತ್ಯವಾಗಿದ್ದು, ವಾಸ್ತವ ಚಿತ್ರಣ ಇದಕ್ಕಿಂತ ಭಿನ್ನವಾಗಿದೆ, ಎಂದು ಆರ್ಥಿಕ ಸುಧಾರಣೆಯ ಕರಾಳ ಮುಖವನ್ನು ಸಾರ್ವಜನಿಕ ತಿಳುವಳಿಕೆಯಿಂದ ಮರೆಮಾಚಲಾಗುತ್ತದೆ. ಅರ್ಥವ್ಯವಸ್ಥೆಯಲ್ಲಿ ಸ್ವರೂಪಾತ್ಮಕ ಬದಲಾವಣೆಗಳು ಆದ ಮೇಲೆ ದೇಶದ ಅರ್ಥವ್ಯವಸ್ಥೆ ಸುಭದ್ರ ತಳಪಾಯದಿಂದ ದೂರವಾಗಿ ಜಾಗತಿಕ ಅರ್ಥವ್ಯವಸ್ಥೆಯ ನಿಯಂತ್ರಕ ಶಕ್ತಿಗಳ ಹಿಡಿತಕ್ಕೆ ಜಾರಿಹೋಗಿದೆ. ಇದರಿಂದ ನಮ್ಮ ಸಮಾಜದ ಮತ್ತು ದೇಶದ ಹಿತದೃಷ್ಟಿಯಿಂದ ಯಾವ ಸಾಮಾಜಿಕ ಆರ್ಥಿಕ ನೀತಿಗಳು ರೂಪುಗೊಳ್ಳಬೇಕಿತ್ತೋ ಅದು ಇಂದು ಸಾಧ್ಯವಾಗುತ್ತಿಲ್ಲ. ನಮ್ಮ ಕೈಗಾರಿಕ ನೀತಿ, ಆರ್ಥಿಕ ನೀತಿ ವಿದೇಶಾಂಗ ನೀತಿ ಇವೆಲ್ಲವೂ ಜಾಗತಿಕ ಅರ್ಥವ್ಯವಸ್ಥೆಯ ಮರ್ಜಿಗನುಗುಣವಾಗಿ ನಡೆಯುತ್ತಿದೆ. ಜಾಗತಿಕ ಅರ್ಥವ್ಯವಸ್ಥೆಯ ಶಿಖರದಲ್ಲಿರುವ ಅಮೇರಿಕಾದ ಮುಂದಾಳತ್ವದ ಮುಂದುವರಿದ ರಾಷ್ಟçಗಳು ಈ ಜಾಗತಿಕ ಅರ್ಥವ್ಯವಸ್ಥೆಯ ನಿಯಂತ್ರಕ ಶಕ್ತಿಯಾಗಿದೆ. ಯಾವುದು ಅಭಿವೃದ್ಧಿ, ಯಾವುದು ಅಭಿವೃದ್ಧಿಯಲ್ಲ, ಅಭಿವೃದ್ದಿಯ ಗುರಿ ಮತ್ತು ಗತಿಯನ್ನು ನಿಯಂತ್ರಿಸಲು ತಾವು ನೀಡುವ ಮಾರ್ಗದರ್ಶನವೇ ನಿರ್ಣಾಯಕವಾಗಬೇಕು ಎನ್ನುವ “ವಾಷಿಂಗ್ ಟನ್’’ ಕಾನ್ಸೆಸ್ ರೀತಿಯ ವಾದಗಳು ಮಿಕ್ಕಳಿದವರ ಅಭಿಪ್ರಾಯವನ್ನು ಕಡೆಗಾಣಿಸಿ ಮುನ್ನುಗ್ಗುತ್ತಿದೆ. ಇಂತಹ ಒಂದು ಮಹಾಚಿಂತನೆ ಬುದ್ಧಿವಂತರ ರಾಜಕೀಯ ಚಿಂತಕರ, ಮಾಧ್ಯಮದವರ ಚಾವಡಿಯಲ್ಲಿ ನಿರಂತರ ಚಲಾವಣೆಯಲ್ಲಿರುವಂತೆ ಮಾಡಲಾಗಿದೆ. ಹೀಗಾಗಿ ಸಮಾಜದ ಅಂಚಿನಲ್ಲಿರುವ ಅಹವಾಲು ಅರಣ್ಯರೋದನವಾಗಿದೆ. ಗಂಭೀರವಾದ ವಾಸ್ತವ ಪರಿಸ್ಥಿತಿ, ಬಡತನ ಹಿಂಸೆ, ಸಾಮಾಜಿಕ ಅನ್ಯಾಯಗಳ ಅವಗಣನೆ ಮತ್ತು “ಜಾಣಕುರುಡು’’ ಹಿಂಸಾತ್ಮಕ ಹೋರಾಟ ಹಾಗೂ ಧಾರ್ಮಿಕ ಮೂಲಭೂತವಾದಗಳಿಗೆ ಕಾವು ಕೊಡುತ್ತಿದೆ. ಈ ವರ್ಗವು ತನ್ನ ವಾದಗಳಿಗೆ ಸಮರ್ಥನೆಯಾಗಿ ದಾಖಲಿಸುತ್ತಿರುವ ವಿಷಯಗಳು ಈ ಕೆಳಗಿನಂತಿವೆ.

೧. ಕೃಷಿ ಕ್ಷೇತ್ರದ ನಿಧಾನಗತಿಯ ಬೆಳವಣಿಗೆ, ಕೃಷಿಯನ್ನೇ ಅವಲಂಭಿಸಿದ ಬಹುಪಾಲು ಜನರ ಬದುಕಿನಲ್ಲಿ ಹಿಂದೆAದೂ ಕಾಣದ ರೀತಿಯ ತಲ್ಲಣ ಉಂಟಾಗಿರುವುದು.

೨. ವಿದೇಶಿ ಹೂಡಿಕೆಗೆ ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳಿಗೆ ಹೋಲಿಸಿದರೆ ಹರಿದು ಬರುತ್ತಿರುವ ವಿದೇಶಿ ಬಂಡÀವಾಳ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು.

೩. ಉದ್ಯೋಗದ ಪ್ರಮಾಣದಲ್ಲಿ ಆಗುತ್ತಿರುವ ಕುಸಿತ ಮತ್ತು ಪಲ್ಲಟಗಳು ಸಂಘಟಿತ ವಲಯದಲ್ಲಿ ಉದ್ಯೋಗವಕಾಶಗಳು ತೀವ್ರ ಮಟ್ಟದಲ್ಲಿ ಕುಸಿಯುತ್ತಿದ್ದು, ಅಸಂಘಟಿತ ವಲಯದಲ್ಲಿ ತಾತ್ಕಾಲಿಕ, ‘ಪಾತರಗಿತ್ತಿ’ ಮಾದರಿಯ ಉದ್ಯೋಗಗಳ ಸೃಷ್ಟಿಯಾಗುತ್ತಿರುವುದು.

೪. ತೆರಿಗೆ ವಿನಾಯಿತಿ ಮತ್ತು ಪ್ರೋತ್ಸಾಹಕ ಕ್ರಮಗಳು ನಿರೀಕ್ಷಿತ ಮಟ್ಟದ ತೆರಿಗೆ ಆದಾಯವನ್ನಾಗಲಿ ಬೆಳವಣಿಗೆಯನ್ನಾಗಲಿ ತರಲು ಯಶಸ್ವಿಯಗಲಿಲ್ಲ.

೫. ಮೂಲಭೂತ ಸೌಕರ್ಯ ಸುಧಾರಣೆಯಲ್ಲಿ ನಿರುತ್ಸಾಹದಾಯಕ ಖಾಸಗಿ ಪಾಲುದಾರಿಕೆ.

೬. ಸಾರ್ವಜನಿಕ ರಂಗದಲ್ಲಿ ಹೂಡಿಕೆಯನ್ನು ಕಡಿತಗೊಳಿಸಿದಾಗಲೂ ವಿತ್ತೀಯ ಕೊರೆತೆಯ ಪ್ರಮಾಣ ಏರುತ್ತಲೇ ಹೋಗುತ್ತಿದ್ದು, ಕಂದಾಯ ಖಾತೆಯಲ್ಲಿ ಕೊರತೆಯುಂಟಾಗಿ ತೆರಿಗೆಯ ಹೊರೆ ಮುಂದುವರೆಯುತ್ತಾ ಹೋಗುತ್ತಿದ್ದು, ಭವಿಷ್ಯದಲ್ಲಿಯೂ ಜನರ ಮೇಲೆ ಕರಭಾರ ಬೀಳಲಿದೆ.

೭. ಅರ್ಥವ್ಯವಸ್ಥೆ ವಿವಿಧ ವಲಯಗಳ ನಡುವೆ ಅಸಮತೋಲನೆ ಮುಂದುವರಿದಿದ್ದು ಕೈಗಾರಿಕೆ ಮತ್ತು ಕೃಷಿ ವಲಯದ ಉತ್ಪಾದನೆ ಕುಸಿಯುತ್ತಾ ಮುಂದುವರಿದಿದೆ. ಆದರೆ ಸೇವಾ ಕ್ಷೇತ್ರದಲ್ಲಿ ಬೆಳವಣಿಗೆಯ ದರ ಅಧಿಕವಾಗುತ್ತ ಹೋಗುತ್ತಿದೆ.

೮. ಇಂದಿಗೂ ಶೇಕಡಾ ೬೦ರಷ್ಟು ಜನ ಕೃಷಿ ವಲಯವನ್ನು ಅವಲಂಬಿಸಿದ್ದು, ಬೇರೆಲ್ಲಿಗೂ ಸ್ಥಳಾಂತರಗೊಳ್ಳಲು ಯಾವ ಉದ್ಯೋಗಕ್ಕೂ ಪಲ್ಲಟಗೊಳ್ಳಲು ಸಾಧ್ಯವಾಗದಿರುವ ರೈತಾಪಿ ಜನರ ಸ್ಥಿತಿ ಚಿಂತಾಜನಕವಾಗಿದೆ. ದೇಶದಲ್ಲಿ ರೈತರ ಆತ್ಮಹತ್ಯೆ ನಿರಂತರ ಮುಂದುವರಿಯುತ್ತಿದೆ.

೯. ಸರಕಾರೀ ನಿಯಂತ್ರಣ, ಸಾರ್ವಜನಿಕ ವಲಯದಲ್ಲಿ ಪಾರದರ್ಶಕತೆ, ಹೊಸ ತಂತ್ರಜ್ಞಾನಧಾರಿತ ಮತ್ತು ಸೀಮಿತ ವೃತ್ತಿ ನಿರತ ವ್ಯವಹಾರಜ್ಞರಿಂದಲೇ ನಡೆಯುವ ಬಹುಪಾಲು ವಾಣಿಜ್ಯ ವಹಿವಾಟುಗಳು ಹಲವಾರು ಹಗರಣಗಳಿಗೆ ದಾರಿ ಮಾಡಿಕೊಡುತ್ತಿರುವ ಅಂಶ ಆರ್ಥಿಕ ಸದೃಢತೆಯ ದೃಷ್ಟಿಯಿಂದ ಉತ್ತಮ ಲಕ್ಷಣವಲ್ಲ.

೧೦. ಹೆಚ್ಚುತ್ತಿರುವ ಪ್ರಾದೇಶಿಕ ಅಸಮಾನತೆಗಳು, ರಾಜ್ಯಗಳು ನಡುವಿನ ವ್ಯತ್ಯಾಸಗಳಿಂದಾಗಿ ದೇಶದೊಳಗೆ ಹರಿದು ಬಂದ ವಿದೇಶಿ ಬಂಡÀವಾಳ ಆಯ್ದ ಕೆಲವೊಂದು ರಾಜ್ಯಗಳತ್ತ ಮಾತ್ರ ಹರಿಯುತ್ತಿದೆ. ಹೀಗಾಗಿ ಅಸಮಾನತೆ ಇನ್ನೂ  ಹೆಚ್ಚುತ್ತಾ ಹೋಗುತ್ತಿದೆ.

೧೧.ಉದ್ಯಮ ರಂಗದ ಒಟ್ಟು ಹೂಡಿಕೆಯ ಪ್ರಮಾಣದಲ್ಲಿ ನಿರಂತರ ಏರಿಕೆಯಾಗುತ್ತಿದ್ದು ವಿತರಣೆಯಲ್ಲಿ ಇಳಿಕೆಯಗುತ್ತಿದೆ. ಇದರಿಂದ ಸಾಮಾನ್ಯ ಜನರ ಖರೀದಿಸುವ ಸಾಮರ್ಥ್ಯ ಕುಂಟಿತವಾಗುತ್ತಿದೆ ಎಂದು ತಿಳಿಯಲಾಗಿದೆ.

೧೩. ಮಾಹಿತಿ ತಂತ್ರಜ್ಞಾನ ರಂಗದಲ್ಲಿ ದೊಡ್ಡ ಮೊತ್ತದ ಸಂಬಳವಿರುವ ಕೆಲಸಗಳು ಸೃಷ್ಟಿಯಾಗುತ್ತಿರುವುದರ ಹೊರತಾಗಿಯೂ ನಿರುದ್ಯೋಗದ ಪ್ರಮಾಣದಲ್ಲಿ ಅಧಿಕ ಪ್ರಮಾಣದ ಏರಿಕೆಯಾಗುತ್ತಿದೆ.

೧೪. ಬಹಳಷ್ಟು ದೊಡ್ಡ ಪ್ರಮಾಣದ ವಿದೇಶೀ ವಿನಿಮಯವನ್ನು ಅದರ ಗಳಿಕೆಯ ವೆಚ್ಚಕ್ಕಿಂತಲೂ ಕಡಿಮೆ ಆದಾಯ ನೀಡುವ ಖಜಾನೆ ಹುಂಡಿಗಳಲ್ಲಿ ತೊಡಗಿಸಲಾಗಿದೆ. ಇದು ಅರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ.

೧೫. ಆದಾಯ ಗಳಿಕೆಯ ಸಾಮರ್ಥ್ಯ ಮತ್ತು ವಾಸ್ತವ ಆದಾಯದ ವಿಷಯದಲ್ಲಿ ದೇಶದ ಜನರ ನಡುವೆ ಇರುವ ವ್ಯತ್ಯಾಸ ಅತ್ಯಂತ ವೇಗವಾಗಿ ಏರುತ್ತಿದೆ. ಬಡವ ಶ್ರೀಮಂತರ ನಡುವಿನ ಈ ವ್ಯತ್ಯಾಸದಿಂದಾಗಿ ಸಾಮಾಜಿಕ ಸಂತುಲನದಲ್ಲಿ ವ್ಯತ್ಯಯಗಳುಂಟಾಗುತ್ತಿದೆ.

ಮೇಲೆ ಹೇಳಿದ ಅಂಶಗಳು ಉದಾರೀಕರಣ ಉಂಡುಮಾಡಿದ ಒಟ್ಟು ಸ್ಥಿತಿಯನ್ನು ಹಿಡಿದಿಡುವ ಪ್ರಯತ್ನ ಮಾತ್ರವೇ ಹೊರತು, ವಾಸ್ತವ ಪರಿಸ್ಥಿತಿಯ ಸಂಪೂರ್ಣ ಚಿತ್ರಣವಲ್ಲ. ಉದಾರೀಕರಣದ ನಂತರವೂ ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತದ ಸ್ಥಾನದಲ್ಲಿ ಅಂತಹ ಏರಿಕೆಯೇನು ಆಗಿಲ್ಲ. ಇದಕ್ಕೆ  ಪ್ರಮುಖ ಕಾರಣ ದೇಶದಲ್ಲಿ ಸಂಪತ್ತಿನ ಸೃಷ್ಟಿ, ಸರಕು ಮತ್ತು ಸೇವೆಗಳ ಉತ್ಪಾದನೆಯಂತೂ ಹೆಚ್ಚಾಗಿರುವುದು ನಿಜ. ಆದರೆ ಇಂತಹ ಹೆಚ್ಚಳ ಕೆಲವು ಸೀಮಿತ ವಲಯಗಳಲ್ಲಿ ಉತ್ತತ್ತಿಯಾಗಿ ಸೀಮಿತ ಜನವರ್ಗಗಳಿಗೆ ಹಂಚಿಕೆಯಾಗಿದೆ. ಈ ರೀತಿಯಲ್ಲಿ ಸೃಷ್ಟಿಯಾದ ಶ್ರೀಮಂತ ವರ್ಗದ ಬೇಡಿಕೆಗಳು ಹೆಚ್ಚಿರುವ ವಿಷಯವನ್ನು ಆಧರಿಸಿ ಇಡೀ ಅರ್ಥ ವ್ಯವಸ್ಥೆಯ ಬೇಡಿಕೆಯೇ ಇದಾಗಿದೆ ಎಂದು ಹೇಳುವುದು ಸರಿಯಲ್ಲ. ಉದಾಹರಣೆಗೆ ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ. ಮೊಬೈಲ್ ದೂರವಾಣಿ ಬಳಕೆಯಲ್ಲ. ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಗಿದೆ ಆದರೆ ಈ ಬದಲಾವಣೆಯ ಉತ್ಪಾದಕತೆ ಹಗೂ ಬಳಕೆದಾರರ ಉತ್ಪಾದನಾ ಸಮಾರ್ಥ್ಯದ ಮೇಲೆ ಬೀರಿದ ಧನಾತ್ಮಕ ಪರಿಣಾಮದ ಬಗ್ಗೆ ಯೋಚಿಸಿದರೆ,ಇದೊಂದು ಹೇಳಿಕೊಳ್ಳುವ ಭಾರಿ ಸಾಧನೆಯೇ? ಇದರಿಂದ ಯಾರಿಗೆ ಎಷ್ಟು ಲಾಭವಾಗಿದೆ? ಉಪಭೋಗೀ ಆದಾಯ ‘ಪ್ರದರ್ಶನ ಪ್ರವೃತ್ತಿಗೆ’ ಯಾವ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ ಎನ್ನುವುದನ್ನು ತಿಳಿಯಬೇಕಿದೆ. ಮಾಹಿತಿ ತಂತ್ರಜ್ಞಾನ, ಹಣಕಾಸು ವ್ಯವಹಾರ, ಮನೋರಂಜನೆ, ಪ್ರವಾಸ ಮತ್ತು ಅತಿಥಿ ಸತ್ಕಾರ, ಭೂವ್ಯವಹಾರ ವ್ಯಾಪಾರೀ ಚಟುವಟಿಕೆಗಳಲ್ಲಿ ಒಟ್ಟು ವ್ಯವಹಾರ ವೇಗ ಪಡೆದುಕೊಂಡಿದೆ. ಇಂತಹ ವ್ಯಾಪಾರಿ ಚಟುವಟಿಕೆಗಳಲ್ಲಿ ಭಾರಿ ಬಂಡÀವಾಳ ಹೂಡಿಕೆಯಾಗಿದ್ದು, ಪ್ರಸರಣದ ವೇಗವೂ ಅಧಿಕವಾಗಿದೆ. ಹೀಗೆ ಅಧಿಕ ಪ್ರಸರಣದ ವೇಗದ ಕಾರಣದಿಂದ ಉತ್ಪತ್ತಿಯಾಗುವ ಲಾಭದ ಪ್ರಮಾಣವು ಅಧಿಕವಾಗಿದೆ. ಯಾರಿಗೆ ಅಧಿಕ ಪ್ರಮಾಣದ ಬಂಡÀವಾಳ ಮತ್ತು ಅಧಿಕ ಪ್ರಸರಣ ವೇಗವನ್ನು ನಿಯಂತ್ರಿಸುವ ಮತ್ತು ನಿಭಾಯಿಸುವ ಸಾಮರ್ಥ್ಯವಿದೆಯೋ ಅಂತಹ ಜನ ವರ್ಗಕ್ಕೆ ಅಧಿಕ ಲಾಭವಾಗುತ್ತದೆ. ನಾವು ಅಗತ್ಯವಾಗಿ ಗಮನಿಸಲೇಬೇಕಾದ ಅಂಶವೆAದರೆ ಇಂತಹ ಕ್ರಿಯೆಯನ್ನು ನಿಭಾಯಿಸುವ ಶಕ್ತಿಯಿರುವುದು ಅಧಿಕಾರ, ಹಣ ಅಥವಾ ಇವೆರಡನ್ನೂ ಹೊಂದಿರುವ ಖಾಸಗೀ ಬಂಡವಾಳದಾರರಿಗೆ, ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ‘ಕೈಯಿಂದ ಬಾಯಿಗೆ’ ಬೇಕಾಗುವಷ್ಟು ಆದಾಯ ಹೊಂದಿರುವ ಅಸ್ತಿತ್ವವುಳಿಸಿಕೊಳ್ಳಲು ಪರದಾಡುವ ಬಹು ಪಾಲು ಬಡ ಮತ್ತು ಕೆಳಮದ್ಯಮ ವರ್ಗದ ಜನರಿಗೆ ಉದಾರೀಕರಣದ ಫಲ ತಲುಪಿಲ್ಲ. ಇದೇ ಕಾರಣದಿಂದ ಅನಿಯಂತ್ರಿತ ಮುಕ್ತ ಮಾರುಕಟ್ಟೆಯ ಬೆಳವಣಿಗೆ ಇಡೀ ಅರ್ಥ ವ್ಯವಸ್ಥೆಯ ನಿಯಂತ್ರಕ ಶಕ್ತಿಯನ್ನು ಕೆಲವೇ ಕೆಲವು ಶ್ರೀಮಂತರ ಕೈಗೆ ವರ್ಗಾಯಿಸುತ್ತಿದೆ. ಇಂತಹ ಆರ್ಥಿಕ ಬೆಳವಣಿಗೆಗಳು ನಾವು ಪ್ರತಿಪಾದಿಸುತ್ತಿರುವ ಸಬಲೀಕರಣ, ಪ್ರಜಾಪ್ರಭುತ್ವ, ಲಿಂಗಸಮಾನತೆ, ಅಧಿಕಾರ ವಿಕೇಂದ್ರಿಕರಣ, ಇತ್ಯಾದಿ ಪರಿಕಲ್ಪನೆಗಳಿಗೆ ಪೂರಕ ಸನ್ನಿವೇಶ ನಿರ್ಮಾಣ ಮಾಡಲು ಸಹಕಾರಿಯಗಿಲ್ಲ. ಆರ್ಥಿಕಭಿವೃದ್ದಿಯ ಅಳತೆಗೋಲಾಗಿರುವ ಈ ಮೊದಲು ಹೇಳಿರುವ ಪರಿಕಲ್ಪನೆಗಳಿಗೆ ವಿರುದ್ಧವಾದ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಉದಾರೀಕರಣೋತ್ತರ ಬೆಳವಣಿಗೆಯನ್ನು ನಾವು ಹೇಗೆ ಪ್ರಗತಿ, ಉನ್ನತಿ,ಯಾ ಅಭಿವೃದ್ಧಿ ಎಂದು ಗುರುತಿಸಲು ಸಾಧ್ಯ?

ಉದಾರೀಕರಣದ ನಂತರ ಚುನಾವಣೆಗಳಲ್ಲಿ ವ್ಯಕ್ತವಾದ ಜನಾಭಿಪ್ರಾಯವನ್ನು ವಿಶ್ಲೇಷಿಸಿದಾಗ ಅಭಿವೃದ್ಧಿಯ ಕುರಿತು, ಯಾ ಆರ್ಥಿಕ ನೀತಿಗಳ ಕುರಿತು ಬಹುಸಂಖ್ಯಾತ ಜನ ತೀವ್ರ ಅಸಂತೋಷದಿAದಿರುವ ವಿಷಯ ಬಹಿರಂದವಾಗಿದೆ. ಚುನಾವಣಾ ಫಲಿತಾಂಶಗಳಲ್ಲಿ ಪ್ರಮುಖವಾಗಿ ಆಂದ್ರ ಪ್ರದೇಶದಲ್ಲಿ ವಿಶ್ವ ಬ್ಯಾಂಕಿನ ‘ಪ್ರಜಾಪ್ರಭುತ್ವ ಸರಕಾರದ’ ಆಡಳಿತ ನಿರ್ದೇಶಕ, ಆರ್ಥಿಕ ಉದಾರೀಕರಣದ ಪ್ರತಿಪಾದಕ ಮತ್ತು ಮಾಧ್ಯಮಗಳಲ್ಲಿ ಆಡಳಿತ, ಅಭಿವೃದ್ಧಿ ನೀತಿಗಳ ವಿಷಯದಲ್ಲಿ ಮಹಾ ಮುತ್ಸದ್ದಿಯೆಂದು ಕರೆಯಿಸಿಕೊಂಡಿದ್ದ ಚಂದ್ರಬಾಬುನಾಯ್ಡು ಅವರು ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದದ್ದು ಮತ್ತು “ಭಾರತ ಬೆಳಗುತ್ತಿದೆ”, ಜಾಗತಿಕ ಆರ್ಥಿಕ ಚೈತನ್ಯವಾಗಿ’ ಭಾರತ ರೂಪುಗೊಳ್ಳುತ್ತಿದೆ ಎನ್ನುವ ಘೋಷಣೆಯೊಂದಿಗೆ ಚುನಾವಣೆ ಎದುರಿಸಿದ ಅಂದಿನ ಎನ್.ಡಿ.ಎ.ಸರಕಾರದ ಬಗ್ಗೆ ದೇಶದ ಜನ ನೀಡಿದ ಮತಾಭಿಪ್ರಾಯ, ಉದಾರೀಕರಣ ವಾಸ್ತವಿಕವಾಗಿ ಈ ದೇಶದ ಜನರ ಬದುಕಿನಲ್ಲಿ ಮೂಡಿದ ಪರಿಣಾಮ ಏನು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿದೆ ಎಂದು ತಿಳಿಯಲಾಗುತ್ತಿದೆ.

ಹೊಸ ಆರ್ಥಿಕ ನೀತಿ ವಾಸ್ತವಿಕವಾಗಿ ಮತ್ತು ತಾತ್ವಿಕವಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲತತ್ವಗಳಾಗಿರುವ ಸಾಮಾಜಿಕ ಸುರಕ್ಷೆ, ಅಧಿಕಾರ, ವಿಕೇಂದ್ರೀಕರಣ,ದುಡಿಯುವ ವರ್ಗಗಳ ಮತ್ತು ದುರ್ಬಲ ವರ್ಗಗಳ ಹಿತರಕ್ಷಣೆ ಇತ್ಯಾದಿ ವಿಷಯಗಳ ಬಗ್ಗೆ ನಿರುತ್ಸಾಹ ಧೋರಣೆಯನ್ನು ಹÉÆಂದಿದೆ. ಮೂಲಭೂತವಾಗಿ ಮಾರುಕಟ್ಟೆಯಾಧಾರಿತ ಮುಕ್ತ ಆರ್ಥಿಕ ನೀತಿಯ ಚೌಕಟ್ಟಿನಲ್ಲಿ ನಿಂತಿರುವ ಹೊಸ ಆಲೋಚನಾ ಕ್ರಮ ಎಲ್ಲರನ್ನೂ ಸಮದೃಷ್ಟಿಯಿಂದ ನೋಡುತ್ತದೆ. ಆದರೆ ಅಸಮಾನ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಮೇಲಿರುವ ಜನರನ್ನು ಸಮಾನವಾಗಿ ಪರಿಗಣಿಸಿದಾಗಲೂ ಬೇದ ಭಾವ ಮೂಡಿದಂತೆಯೇ ಆಗುತ್ತದೆ. ಎಲ್ಲಿ ಶೋಷಿತರು, ಮಹಿಳೆಯರು, ಸಮಸ್ಯೆಗಳಲ್ಲಿರುತ್ತಾರೋ ಅಂತಹವರಿಗೆ ಹೆಚ್ಚು ಸಹಾಯ ಮತ್ತು ಅವಕಾಶವಗಳನ್ನು ನೀಡಬೇಕಾಗುತ್ತದೆ. ಸಮಾನತೆಯನ್ನುವುದನ್ನು ‘ಸಂಕೀರ್ಣ’ ಅಥವಾ ‘ಸೀಮಿತ’ ವಾಚ್ಯಾರ್ಥದಲ್ಲಿ ಗ್ರÀಹಿಸದ ಅದರ ಹಿಂದಿರುವ ಇಂಗಿತವನ್ನು ಗ್ರಹಿಸಬೇಕಾಗುತ್ತದೆ. ಆದರೆ ‘ನವ ಅರ್ಥಶಾಸ್ತç’ ವ್ಯಕ್ತಿಯ ಒಳಿತು ಕೆಡುಕುಗಳ ಜವಾಬ್ದಾರಿಯನ್ನು ಅವರವರ ಶಕ್ತಿ ಸಾಮರ್ಥ್ಯಗಳಿಗೆ ಆರೋಪಿಸುವ ಮೂಲಕ, ಸಾಮಾನ್ಯ ಜನರ ದುಃಖ,ದುಮ್ಮಾನಗಳ ಬಗ್ಗೆ ಮೌನವಾಗಿದ್ದು ಬಿಡುತ್ತದೆ. ಉದ್ಯಮ ವಲಯಕ್ಕೆ ಈ ಧೋರಣೆಯನ್ನು ಅನ್ವಯಿಸಿದಾಗ ಅದು ಸರಿ ಸುಮಾರು ಸಮರ್ಥನೀಯವೇ ಆಗುತ್ತದೆ. ಯಾಕೆಂದರೆ ಎಲ್ಲ ಉದ್ಯಮಗಳೂ ಒಂದು ನಿರ್ದಿಷ್ಠ ಸಾಮಾಜಿಕ ರಾಜಕೀಯ ವ್ಯವಸ್ಥೆಯಲ್ಲಿ  ಈಗಷ್ಟೇ ಉತ್ಪಾದನೆ ಆರಂಭಿಸುತ್ತದೆ. ಅದಕ್ಕೆ ತನ್ನ ಅಸ್ತಿತ್ವವನ್ನು ಕಾಡುವ ಚರಿತ್ರೆ ಇರುವುದಿಲ್ಲ. ಉದಾರೀಕರಣದ ನಂತರ ವ್ಯಾಪಾರ ಮತ್ತು ಕೈಗಾರಿಕಾ ವಲಯಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿರುವುದರ ಹೊರತಾಗಿಯೂ ಬಾಕಿಯಿರುವ ತೆರಿಗೆ, ಸಾರ್ವಜನಿಕ ಹಣಕಾಸು ಸಂಸ್ಥೆಗಳಿಗೆ ಮರುಪಾವತಿಸಬೇಕಾಗಿದ್ದ ಸಾಲ, ಇತ್ಯಾದಿಗಳನ್ನು ವಸೂಲು ಮಾಡಲು ಸರಕಾರ ವಿಫಲವಾಗಿರುವುದÀನ್ನು ಗಮನಿಸಬಹುದು. ಮೂಲಭೂತ ಸೌಲಭ್ಯ ಒದಗಿಸಲು, ದೊಡ್ಡ ದೊಡ್ಡ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು ಅಂತಾರಾಷ್ಟಿçÃಯ ವಲಯದಿಂದ ದೊಡ್ಡ ಮೊತ್ತದ ಬಂಡವಾಳವನ್ನು ಪಡೆಯಲಾಗಿದೆ. ಇದನ್ನು ಪಡೆಯುವ ಹಂತದಲ್ಲಿ ‘ಕಮಿಷನ್’,ಸತ್ಕಾರ, ‘ಪರಿಣಿತ ಮಾರ್ಗದರ್ಶನ’ಇತ್ಯಾದಿಗಳು ಹೇಗೆ ಬಡಜನತೆಯ ಹೆಗಲ ಹೊರೆಯಾಗಿದೆ ಎನ್ನುವುದನ್ನು ೨೦೦೬ ನೇ ಇಸವಿಯಲ್ಲಿ ನೋಬೆಲ್ ಪಾರಿತೋಷಕ ಪಡೆದ ಬಾಂಗ್ಲಾದೇಶದ ಆರ್ಥಿಕ ತಜ್ಞ ಮಹಮದ್ ಯೂನಸ್ ತಮ್ಮ ಆತ್ಮ ಕಥೆಯಲ್ಲಿ ವಿವರಿಸುತ್ತಾರೆ. ಕೈಗಾರಿಕಾ ವಲಯಕ್ಕೆ ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳಿಂದ ಮತ್ತು ಆ ವಲಯದಿಂದ ಬರಬೇಕಾದ ತೆರಿಗೆ, ಸುಂಕ ಮತ್ತಿತರ ರಾಜಸ್ವ ವಸೂಲಾತಿಯಲ್ಲಿನ ಅದ್ಯಕ್ಷತೆಯಿಂದ ವಿತ್ತೀಯ ಕೊರತೆಯು ಏರುತ್ತಿದೆ. ಸಮಾಜದ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸುವ ಸಂಪನ್ಮೂಲವು ಅದಕ್ಷ ಮತ್ತು ಸಂವೇದನಾ ಶೀಲತೆಯಿಲ್ಲದೆ ಸರಕಾರೀ ವ್ಯವಸ್ಥೆಯ ಕಾರಣದಿಂದ ಸಮಾಜದ ಕೆಳಸ್ತರಗಳನ್ನು ತಲುಪುವಲ್ಲಿ  ಸೋಲುತ್ತದೆ. ಇದರ ಪರಿಣಾಮವಾಗಿ ವಿತ್ತೀಯ ಕೊರತೆಯಲ್ಲಿ ಏರಿಕೆಯ ಮತ್ತು (ಪಾವತಿ ಖಾತೆ) ಬಾಹ್ಯ ಪಾವತಿಗಳ (exಣeಡಿಟಿಚಿಟ iಟಿಣeಡಿಟಿಚಿಟ ಠಿಚಿಥಿmeಟಿಣs) ಸಮಸ್ಯೆ ದೇಶದ ಸರಕಾರ ಮತ್ತು ಸಂಘಟಿತ ವಲಯದ ಮೇಲೆ ಒತ್ತದ ಉಂಟು ಮೂಡುತ್ತದೆ. ಆದರೆ ಇಂತಹ ಒತ್ತಡ ಅಂತಿಮವಾಗಿ, ಅಸಂಘಟಿತ ವಲಯ ದುರ್ಬಲ ವರ್ಗಗಳಿಗೆ ವರ್ಗಾಯಿಸಲ್ಪಡುತ್ತದೆ. ಸಂಘಟಿತ ವಲಯ ತನ್ನ ಸಮಸ್ಯೆಗಳ ಬಗ್ಗೆ, ಅವಶ್ಯಕತೆಗಳ ಬಗ್ಗೆ ಹಾಗೂ ತನ್ನ ಅಸ್ತಿತ್ವದ ಪ್ರಶ್ನೆಯ ಬಗ್ಗೆ ಒಂದು ಸಂಘಟಿತ ಹೋರಾಟ ಮಾಡುತ್ತದೆ. ಹಾಗಾಗಿ ಈ ವಲಯದ ಸಮಸ್ಯೆಗಳು ಅಸಂಘಟಿತ ವಲಯದ ಸಮಸ್ಯೆಗಳಂತೆ ಸೂಕ್ಷö್ಮ ಸ್ತರಗಳಲ್ಲಿ ಕೌಟುಂಬಿಕ ಯಾ ವ್ಯಕ್ತಿಯ ಮೇಲೆ ಆಘಾತಕಾರೀ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಭಾರತದ ಅರ್ಥ ವ್ಯವಸ್ಥೆಯಲ್ಲಿ ಇಂದು ತಲೆಯೆತ್ತುತ್ತಿರುವ ಕೋಮುವಾದ, ಜಾತಿ ಸಂಘರ್ಷ ಮಹಿಳಾ ಶೋಷಣೆ, ದುರ್ಬಲ ವರ್ಗಗಳ ಮೇಲಿನ ದಬ್ಬಾಳಿಕೆಗಳು ಇವೆಲ್ಲದರ ಹಿಂದಯೂ ಆರ್ಥಿಕ ನೀತಿಗಳ ಪರಿಣಾಮವಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಪ್ರಜಾಪ್ರಭುತ್ವ ಮಾದರಿಯ ಸರಕಾರಗಳಲ್ಲಿ ಅಸ್ಥಿರತೆ, ಗೊಂದಲಗಳು ಉಂಟಾಗಿರುವುದು ಸಹಜ, ಅದರಲ್ಲಿಯೂ ಭಾರತದಂತಹ ಬಹುರೂಪೀ ಬಹುಜಾತಿಗಳಿರುವ ದೇಶದಲ್ಲಿ ವಿವಿಧ ರೀತಿಯ ಅಸ್ಮಿತಿಯ ನೆಲೆಯಲ್ಲಿ ಸಮುದಾಯ ಸಂಘಟಿತವಾಗಿ ಪ್ರಜಾ ಪ್ರಾತಿನಿದ್ಯ ವಿಕೃತಿಗೊಳಗಾಗುವ ಅಪಾಯಗಳಿವೆ. ಇದರಿಂದ ಸ್ಥಿರತೆಯ ಹುಡುಕಾಟವೇ ಮುಖ್ಯವಾಗಿ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ ಮೂಲೆಗೊತ್ತಲ್ಪಡುವ ಪ್ರಮೇಯ ಉಂಟಾಗುವುದು. ಇಂತಹ ಬೆಳವಣಿಗೆಗಳನ್ನು ಉದಾರೀಕರಣದ ನಂತರ ಕಂಡÀÄ ಬರುವ ರಾಜಕೀಯ ವಲಯದಲ್ಲಿ ಕಾಣಬಹುದಾಗಿದೆ. ನಿಜವಾದ ಅಪಾಯವಿರುವುದು ಈ ಪರಿಸ್ಥಿತಿಯಲ್ಲಿ ಅಲ್ಲ. ಬದಲಿಗೆ ಇಂತಹ ಗೊಂದಲದ ವಾತಾವರಣವನ್ನು ಅಂತಾರಾಷ್ಟಿçÃಯ ವ್ಯಾಪಾರೀ ಸಮುದಾಯ ಮತ್ತು ಮುಂದುವರಿದ ದೇಶಗಳು ಅವರ ಅನುಕೂಲಕ್ಕಾಗಿ ಬಳಸಿಕೊಳ್ಳುವುದರಲ್ಲಿ. ಪ್ರಪಂಚದ ಬಹಳಷ್ಟು ಕಡೆ ಆರ್ಥಿಕ ಉದಾರೀಕರಣದ ಬಗ್ಗೆ ಬಹುಪಾಲು ಜನರು ವಿರೋಧ ವ್ಯಕ್ತಪಡಿಸುತ್ತಿದ್ದರೂ ಅಂತಹ ವಿರೋಧ ಒಂದು ಸಂಘಟಿತ ರೂಪದಲ್ಲಿ ವ್ಯಕ್ತವಾಗದೆ ಚದುರಿ ಹೋಗಿರುವುದರಿಂದ, ಸ್ವೀಕೃತವಲ್ಲದ ಒಂದು ನೀತಿಯ ಮುಂದುವರಿಕೆಯನ್ನು ತಡೆಯಲಾಗುತ್ತಿಲ್ಲ.

ಇಂದಿಗೂ ಬಹುಪಾಲು ಜನರಿಗೆ ಆಧಾರವಾಗಿರುವ ಕೃಷಿಕ್ಷೇತ್ರವಂತೂ ಉದಾರೀಕರಣದ ನಂತರ ತತ್ತರಿಸಿ ಹೋಗಿದೆ. ಕರ್ನಾಟಕ, ಮಹಾರಾಷ್ಟç, ಆಂದ್ರಪ್ರದೇಶ,ರಾಜ್ಯಗಳಲ್ಲಿ ರೈತರು ನಿರಂತರ ಆತ್ಮಹತ್ಯೆಗೆ ಶರಣಾಗುತ್ತಿರುವ ಕರುಣಾಜನಕ ಪರಿಸ್ಥಿತಿ ಇದೆ. ಪ್ರಧಾನಿ ಮನಮೋಹನ್ ಸಿಂಗ್ ಅವರ ‘ವಿದರ್ಭ ಪ್ಯಾಕೇಜ್’ರೈತರ ಆತ್ಮಹತ್ಯೆಯನ್ನು ತಡೆಯಲು ಸಮರ್ಥವಾಗಿಲ್ಲ. ಸೂಕ್ಷö್ಮಮನಸ್ಸಿನ ಅಮಾಯಕ ರೈತಾಪಿ ಜನ ದೇಶಕ್ಕೆ ಅನ್ನ ನೀಡಿ ತಾವು ಮಾತ್ರ ವಿಷ ಸೇವಿಸುವಂತಹ ಒಂದು ದಾರುಣ ಪರಿಸ್ಥಿತಿ, ನಮ್ಮ ದೇಶದ ಪಾರ್ಲಿಮೆಂಟ್ ಮತ್ತು ರಾಜ್ಯದ ವಿಧಾನ ಸಭೆಗಳ ಗೋಡೆಯನ್ನು ದಾಟಿ ಒಳಗಿರುವ ಜನಪ್ರತಿನಿಧಿಗಳನ್ನು ತಲುಪುತ್ತಿಲ್ಲ. ಕೃಷಿ ವಲಯದ ಸಮಸ್ಯೆಗಳಿಗೆ ವಾಣಿಜ್ಯ ಜಗತ್ತು ನೀಡುತ್ತಿರುವ ಪರಿಹಾರಗಳಂತೂ ಇನ್ನೂ ಗಾಬರಿ ಹಿಡಿಸುವ ಹಾಗಿವೆ. ಕೃಷಿ ವಲಯಕ್ಕೆ ಅನ್ವಯಿಸಬಹುದಾದ” ಒಪ್ಪಂದ(ಕ್ರಮಗಾರಿಕೆ) ಬೇಸಾಯ”ದಂತಹ ನೀತಿಯನ್ನು ಅನ್ವಯಿಸಿದರೆ ಅದರಿಂದ ರೈತರ ಪರಿಸ್ಥಿತಿ ಇನ್ನೂ ಹದಗೆಡಬಹುದು ಎನಿಸುತ್ತದೆ. ರೈತರ ಆತ್ಮಹತ್ಯೆಯ ಬಗ್ಗೆ ಇದುವರೆಗೆ ನಡೆದಿರುವ ಯಾವ ಅಧ್ಯಯನಗಳೂ ರೈತರ ಆತ್ಮಹತ್ಯೆಯ ಹಿಂದಿರುವ ಕಾರಣಗಳನ್ನು ಸರಿಯಾಗಿ ಗ್ರಹಿಸಿಲ್ಲ. ಈ ಕಾರಣಕ್ಕಾಗಿಯೇ ಈ ಸಮಸ್ಯೆಯ ಗಂಭೀರತೆಯ ಬಗ್ಗೆ ನೀಡಬೇಕಾಗಿರುವ ಗಮನ ನೀಡಿಲ್ಲವೆಂದೇ ಹೇಳಬೇಕಾಗುತ್ತದೆ.

ವ್ಯಾವಹಾರಿಕ ಮತ್ತು ವ್ಯಾಪಾರೀ ಜಗತ್ತು ಕೃಷಿ ವಲಯಕ್ಕೆ ತಂದೊಡ್ಡುತ್ತಿರುವ ಮತ್ತೊಂದು ಅಪಾಯ ‘ವಿಶೇಷ ಆರ್ಥಿಕ ವಲಯÀ’ಗಳ ರೂಪದಲ್ಲಿದೆ. ಈ ವಿಶೇಷ ಆರ್ಥಿಕ ವಲಯದ ಹಿಂದೆ ಗುಪ್ತ ಕಾರ್ಯಸೂಚಿಗಳೇನಾದರೂ ಇರಬಹುದು. ಎನ್ನುವ ರೀತಿಯಲ್ಲಿ ಇದಕ್ಕೆ ಸಂಬAಧಿಸಿದ ಬೆಳವಣಿಗೆಗಳು ನಡೆಯುತ್ತಿವೆ. ಕೃಷಿ ನಮ್ಮ ದೇಶದಲ್ಲಿ ಬರೀ ಉದ್ಯೋಗ ಮಾತ್ರವಲ್ಲ ಅದು ಒಂದು ವಿಶಿಷ್ಟವಾದ ಸಂಸ್ಕೃತಿ ಕೂಡಾ ಆಗಿದೆ. ಹಾಗಾಗಿ ಕೃಷಿ ರಂಗವನ್ನು ಬರೀ ನಾಣ್ಯಗಳ ಮೂಲಕ ಅಳೆಯುವುದು ಸರಿಯಲ್ಲ. ಕೃಷಿಯೊಂದಿಗೆ ನಮ್ಮ ಸಂಸ್ಕೃತಿಯೂ ಬೆರೆತುಕೊಂಡಿದೆ. ಇಂತಹ ಸೂಕ್ಷö್ಮವನ್ನು ಅರಿಯದೆ ಬರೀ ಪರಿಹಾರದ ಹಣ, ವಿದೇಶಿ ವಿನಿಮಯ ಮತ್ತು ಬೃಹತ್ ಆರ್ಥಿಕ ಶಕ್ತಿಯಾಗುವತ್ತ ಓಟ’ ಎನ್ನುವ ಆಮದಿತ ಬುದ್ಧಿವಂತಿಕೆಯನ್ನು ಬದಿಗಿಟ್ಟು ಯೋಚನೆ ಮಾಡಬೇಕು.ವಿಶೇಷ ಆರ್ಥಿಕ ವಲಯದ ನೆಪದಲ್ಲಿ ರೈತರ ಬದುಕಿನೊಂದಿಗೆ ಆಟವಾಡುವುದು ಸರಿಯಲ್ಲ. ಏನೇ ಸಂಪತ್ತನ್ನು ಗಳಿಸಿದರೂ ಅದರ ಅಂತಿಮ ಉದ್ದೇಶ ಒಂದು ಸುಖೀ ಸಮಾಜದ ನಿರ್ಮಾಣವೇ ಹೊರತು ಬರೀ ಹÀಣಗಳಿಕೆ ಮಾತ್ರವಲ್ಲ.

ಕಾರ್ಮಿಕ ಪಾಲುಗೊಳ್ಳುವಿಕೆಯ ದರದಲ್ಲಿ ಇಳಿಕೆ, ನೌಕರವರ್ಗ ಗಳಿಸುತ್ತಿರುವ ಆದಾಯದ ನಡುವೆ ಇರುವ ವ್ಯತ್ಯಾಸ ಏರುತ್ತಿರುವುದು, ಸಣ್ಣ ಜನವರ್ಗ ದೇಶದ ಸಂಪತ್ತಿನ ದೊಡ್ಡ ಭಾಗದ ಮೇಲೆ ಹಿಡಿತ ಹೊಂದಿರುವುದು, ಬಡತನದ ತೀವ್ರತೆ ಹೆಚ್ಚಾಗುತ್ತಿರುವುದು, ಅಧಿಕಾರದ ಕೇಂದ್ರಗಳು ಜನತಾಂತ್ರಿಕ ವ್ಯವಸ್ಥೆಯಿಂದ ನಿಧಾನವಾಗಿ ಬಂಡವಾಳ ನಿಯಂತ್ರಿತ ವ್ಯವಸ್ಥೆಯ ಕಡೆಗೆ, ಅವ್ಯಕ್ತ ರೀತಿಯಲ್ಲಿ ವರ್ಗಾವಣೆ ಹೊಂದುತ್ತಿರುವುದು, ಬಹುಪಾಲು ಜನರ ಸಂಕಟದ ವಗ್ಗೆ ಮಾದ್ಯಮಗಳಿಗೆ, ಆಡಳಿತ ವ್ಯವಸ್ಥೆಗೆ ನಿರಾಸಕ್ತಿ, ದುರ್ಬಲ ವರ್ಗಗಳ ಸಮಸ್ಯೆಗಳ ಬಗ್ಗೆ ಗಮನ ಕಡಿಮೆಯಾಗುತ್ತಿರುವುದು, ಬದುಕಿನ ಸರ್ವ ರಂಗಗಳೂ ವ್ಯಾಪಾರೀಕರಣಕ್ಕೆ ಅಪಾಯಗಳ ಬಗ್ಗೆ ಸಮರ್ಥ ರೀತಿಯ ವಾದಗಳನ್ನು ಮುಂದಿಡಲಾಗಿದೆ.

ಮೇಲಿನ ಎರಡರ ಹೊರತಾದ ಮೂರನೇಯ ವರ್ಗವೊಂದಿದೆ. ಇದು ಯಾವುದರ ಬಗ್ಗೆಯೂ ಗಂಭೀರವಾಗಿ ಯೋಚಿಸುವುದೇ ಇಲ್ಲ. ಬದಲಾವಣೆಯೆನ್ನುವುದು ಅನಿವಾರ್ಯ ಅದರ ಹಿಂದೆ ಮುಂದೆ ಯೋಚಿಸುವುದರಿಂದ ಏನೂ ಲಾಭವಿಲ್ಲ. ಅದರಿಂದ ಹೇಗೆ ಪ್ರಯೋಜನ ಪಡೆಯುವುದು ಎಂದಷ್ಟೇ ಚಿಂತಿಸುತ್ತದೆ. ಅರ್ಥಶಾಸ್ತçಜ್ಞ ಕೇನ್ಸ್ ಹೇಳುವಂತೆ “ನಾವು ದೀರ್ಘಾವಧಿ ಪರಿಣಾಮಗಳ ಬಗೆಗೆ ಹೆಚ್ಚು ಚಿಂತಿತರಾಗಿಲ್ಲ, ಯಾಕೆಂದರೆ ದೀರ್ಘಾವಧಿಯಲ್ಲಿ ನಾವಿರುವುದಿಲ್ಲ.  ನಾವು ಬದುಕುವುದು ಅಲ್ಪಾವಧಿಯಲ್ಲಿ ಮಾತ್ರ ಹಾಗಾಗಿ ನಾವು ಅಲ್ಪಾವಧಿಯ ಬಗ್ಗೆ ಮಾತ್ರ ಚಿಂತಿತರಾಗಿದ್ದೇವೆ’’ಎನ್ನುವುದನ್ನು ಸಂಭ್ರಮಿಸುವ ಈ ವರ್ಗ ಗೆದ್ದ ಎತ್ತಿನ ಬಾಲಹಿಡಕೊಂಡು ದಡ ಸೇರುವ ಮನೋಭಾವದವರು.

ಆರ್ಥಿಕ ಅಭಿವೃದ್ಧಿಯ ಬದಲಾಗುತ್ತಿರುವ ವಾಙ್ಮಯಗಳು ಯಾವುದೋ ಒಂದು ದಿಕ್ಕಿನಲ್ಲಿ ನಿರ್ಧಿಷ್ಟ ಜಾಗದಲ್ಲಿ ಮುನ್ನಡೆಯುತ್ತಿವೆ. ಇಂತಹ ದಿಕ್ಕು, ಗತಿ ಮತ್ತು ವೇಗಗಳನ್ನು ನಿಯಂತ್ರಿಸುವ ಒಂದು ಗುಂಪು ಇದ್ದೇ ಇದೆ. ಎಲ್ಲವೂ ನೀರಿಕ್ಷೆಯಂತೆ ನಡೆಯದೇ ಹೋದರೂ ಬಹುಪಾಲು ಬದಲಾವಣೆಗಳು ಒಂದು ವರ್ಗದ ಹಿತಾಸಕ್ತಿಗೆ ಪೂರಕವಾಗಿ ನಡೆಯುತ್ತಿರುವುದಂತೂ ಸತ್ಯ. ಇಂತಹ ಬದಲಾವಣೆಗಳ ವಿಸ್ತಾರ ಮತ್ತು ವ್ಯಾಪ್ತಿ ಬಹುಜನರ ಹಿತಾಸಕ್ತಿಗಳನ್ನು ಒಳಗೊಂಡು ಎಲ್ಲ ಜನವಗÀðವನ್ನು ತಮ್ಮೊಟ್ಟಿಗೆ ಕರೆದುಕೊಂಡು ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರ ವಿಕೇಂದ್ರೀಕರಣ, ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯ ಪೂರ್ಣ ಬೆಳವಣಿಗೆ, ಸಮಾಜದ ಸ್ವಾಸ್ಥö್ಯ ಮತ್ತು ದೃಢತೆಯನ್ನು ನಿಯಂತ್ರಿಸುವ ಮತ್ತು ನಿರ್ಧರಿಸುವ ಮೂಲಧಾತುವಾಗಿರುವ ಶಿಕ್ಷಣ ಮತ್ತು ಆರೋಗ್ಯವನ್ನು ಎಲ್ಲರಿಗೆ ಕಡ್ಡಾಯವಾಗಿ ವಿತರಿಸುವ ವ್ಯವಸ್ಥೆ ಮಾನವ ಹಕ್ಕು ರಕ್ಷಣೆ, ಇತ್ಯಾದಿಗಳು ಅತ್ಯಗತ್ಯ. ಮಾರುಕಟ್ಟೆ ಆಧಾರಿತ ವ್ಯವಸ್ಥೆಯಾಗಿರಬಹುದು ಅಥವಾ ಸರಕಾರ ನಿಯಂತ್ರಿಸುವ ವ್ಯವಸ್ಥೆಯಾಗಿರಬಹುದು, ಆದರೆ ಅದು ಮಾನವ ಕಲ್ಯಾಣ ಕೇಂದ್ರಿತ ವ್ಯವಸ್ಥೆಯಾಗಿರುವುದು ಅತ್ಯಂತ ಪ್ರಮುಖವಾಗಿದೆ. ಈಗ ಆಗಿರುವ ಸುಧಾರಣೆ ಈ ಉದ್ದೇಶದಿಂದ ಎಷ್ಟು ಹತ್ತಿರ ಅಥವಾ ದೂರವಿದೆ ಎನ್ನುವುದರ ಆಧಾರದ ಮೇಲೆ ಆರ್ಥಿಕ ಸುಧಾರಣೆಯ ಮೌಲ್ಯಮಾಪನ ಆಗಬೇಕಿದೆ.    


Comments

Popular posts from this blog

ಸಾಮಾಜಿಕ ಉದ್ಯಮಶೀಲತೆ

೧೫೦ನೇ ವರ್ಷಾಚರಣೆಯ ನೆನಪಿನ ಕಾರ್ಯಕ್ರಮಗಳ ಪಕ್ಷಿನೋಟ