ಉಡುಪಿ ಜಿಲ್ಲೆ ಯ ಆದುನೀಕರಣಕ್ಕೆ ಮುನ್ನುಡಿ

ವಸಾಹತುಶಾಹಿಯ ಪ್ರಭಾವಕ್ಕೆ ಒಳಗಾದಂತೆ ಭಾರತದಲ್ಲಿ ಆಧುನೀಕರಣದ ಪ್ರಸರಣವೂ ವೇಗ ಪಡೆದಿರುವುದನ್ನು ಗಮನಿಸಬಹುದು. ವಸಾಹತುಶಾಹಿ ಶಕ್ತಿಯು ಅನ್ಯ ನೆಲದಲ್ಲಿ ತನ್ನ ಇರವನ್ನು ಯಾ ಅಸ್ತಿತ್ವನ್ನು ಸಮರ್ಥಿಸುವ ದೃಷ್ಟಿಯಿಂದ ಹತ್ತು ಹಲವು ರೀತಿಯ ಹುನ್ನಾರಗಳನ್ನು ನಡೆಸಿರುವುದನ್ನು ಇತಿಹಾಸದಿಂದ ತಿಳಿಯಬಹುದಾಗಿದೆ. ಇಂತಹ ಹಲವು ಹುನ್ನಾರಗಳಲ್ಲಿ ಒಂದು ಬಿಳಿಯರ ಸ್ವಯ೦ ಆರೋಪಿತ ಹೊಣೆಗಾರಿಕೆ. ಇದರನ್ವಯ ವಸಾಹತಿನಲ್ಲಿರುವ ಜನರು ಬಿಳಿಯರಿಗೆ/ಯಾ ಸಾಮಾಜ್ಯಶಾಹಿ ಜನರಿಗೆ ಹೋಲಿಸಿದಲ್ಲಿ ಹಿಂದುಳಿದವರು, ನಾಗರೀಕತೆಯ ಪ್ರಕ್ರಿಯೆಯಲ್ಲಿ ಇನ್ನೂ ಸಾಕಷ್ಟು ಮುಂದುವರಿಯಬೇಕಾದ ಜನರು. ಅಂತಹವರನ್ನು ಸುಧಾರಣೆಗೊಳಪಡಿಸಿ ಅವರಿಗೆ ಆಧುನಿಕ ಪ್ರಪಂಚದಲ್ಲಿ ನಾಗರಿಕರ ಸ್ಥಾನಮಾನವನ್ನು ಗಳಿಸಿಕೊಡುವ ಒಂದು ಮಹತ್ತರ ಜವಾಬ್ದಾರಿ ಈ ಸಾಮಾಜ್ರö್ಯಶಾಹಿಯದ್ದಾಗಿರುತ್ತದೆ. ಇದೇ ಕಾರಣದಿಂದಾಗಿ ವಸಾಹತೀಕರಣ, ಅಥವಾ ಭಾರತೀಯರ ಮೇಲೆ ಬ್ರಿಟೀಷರ ಆಡಳಿತ ಅನಿವಾರ್ಯ ಎನ್ನುವ ಒಂದು ತಿಳುವಳಿಕೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಯಿತು. ಯಾವಾಗ ನಮ್ಮ ಜನ (ಭಾರತೀಯರು) ಮುಂದುವರಿದು ಬಿಳಿಯರ ರೀತಿ ರಿವಾಜು, ಜೀವನ ಕ್ರಮವನ್ನು ಅನುಸರಿಸಲು ಸಿದ್ಧರಾಗುತ್ತಾರೋ ಆಗ ನಮ್ಮನ್ನು ಬಿಳಿಯರ ಆಡಳಿತದಿಂದ ಮುಕ್ತವಾಗಿಸಿ, ನವ್ಮ್ಮ ಕೈಗೆ ಆಡಳಿತ ವ್ಯವಸ್ಥೆಯ ಅಧಿಕಾರ ಒಪ್ಪಿಸಿಬಿಡಬಹ್ಮದು, ಎನ್ನುವ ವಾದವನ್ನು ಸಾಮ್ರಾಜ್ಯಶಾಹಿ ಮುಂದಿಡುತ್ತಾ ಬಂದಿರುವುದನ್ನು ನಾವು ಗಮನಿಸಬಹುದಾಗಿದೆ. ವಸಾಹತುಶಾಹಿ ತನ್ನ ಸಾಮ್ರಾಜ್ಯ ವಿಸûರಣೆಯ ಗುಪ್ತಕಾಂiÀið ಸೂಚಿಗೆ ಒ೦ದು ಸ್ವಯ೦ ಆರೋಪಿತ ಸುಧಾರಣಾವಾದಿಯ ಮುಖವಾಡವನ್ನು ಹಾಕಿಕೊಳ್ಮ್ಳವ ಕೆಲಸವನ್ಮ್ನ ಬಹಳ ನಾಜೂಕಿನಿ೦ದಲೇ ಮಾಡಿದೆ. ಈ ತಾತ್ವಿಕ ನೆಲೆಗಟ್ಟಿನ ಹಿನ್ನಲೆಯಲ್ಲಿಯೇ ನಾವು ವಸಾಹತುಶಾಹಿ ಕಾಲದಲ್ಲಿ ನಡೆದು ಹೋದ ಇತರ ಎಲ್ಲಾ ಸಂಗತಿಗಳನ್ನು ತಿಳಿಯಬೇಕಾಗಿದೆ.


ಬ್ರಿಟೀಷರು ಯಾ ಇತರ ಐರೋಪ್ಯ ರಾಷ್ಟçಗಳು ಭಾರತಕ್ಕೆ ಆಗಮಿಸಲು ಬಹುಮುಖ್ಯ ಕಾರಣವೇ ಇಲ್ಲಿನ ಸಾಂಬಾರ ಪದಾರ್ಥ, ಬಟ್ಟೆ, ಮತ್ತಿತರ ವಸ್ತುಗಳಿಗೆ ಪಶ್ಚಿಮದಲ್ಲಿದ್ದ ಬೇಡಿಕೆ. ಅಂದರೆ ಭಾರತದ ಬಗೆಗಿನ ಪಶ್ಚಿಮದ ಜನರ ವ್ಯಾಮೋಹಕ್ಕೆ ಆಧಾರವೇ ವ್ಯಾಪಾರ. ಹಾಗಾಗಿ ವ್ಯಾಪಾರ ಕೇಂದ್ರಿತ ಚಟುವಟಿಕೆಗಳ ಸುತ್ತ ಇಡೀ ವ್ಯವಸ್ಥೆ ಮರುಸಂಘಟನೆಡಿರುವ ಅಂಶವನ್ನು ಗಮನಿಸಬಹುದಾಗಿದೆ.


ಸಾಮುದಾಯಿಕ ಬಡತನದಲ್ಲಿ, ವರ್ಣಾಧಾರಿತ ವ್ಯವಸ್ಥೆಯಡಿ ಸಂಘಟಿತವಾಗಿದ್ದ ಭಾರತೀಯ ಸಮಾಜ ಪಶ್ಚಿಮದ ಸಮಾಜಕ್ಕಿಂತ ಭಿನ್ನವಾಗಿತ್ತು. ಇಂತಹ ಭಿನ್ನತೆಯನ್ನು, ಒಂದು ವೈಶಿಷ್ಟ ಎ೦ದು ಸ್ವೀಕರಿಸುವ ಬದಲಾಗಿ ಇದನ್ನು ಪಶ್ಚಿಮದ ವ್ಯವಸ್ಥೆಗೆ ಹೋಲಿಸಿ ಒಂದು ಲೋಪ, ಹಿಂದುಳಿದಿರುವಿಕೆ ಎಂದೇ ವಸಾಹತು ಪ್ರಭುತ್ವ್ವ ಪರಿಭಾವಿಸಿತು. ಹೀಗೆ ಅಥವಾ ಈ ರೀತಿಯಲ್ಲಿ ಭಾರತೀಯ ಸಮಾಜವನ್ನು ಪರಿಭಾವಿಸುವ ಮೂಲಕ ಪಶ್ಚಿಮದ/ ಯುರೋಪಿನ/ ಸಾಮ್ರಾಜ್ಯಶಾಹಿ ಶಕ್ತಿ ಪರೋಕ್ಷವಾಗಿ ತನ್ನನ್ನು ಸುಧಾರಣಾವಾದಿಯ ಸ್ಥಾನದಲ್ಲಿ ಪ್ರತಿಷ್ಟಾಪಿಸಿ, ವಸಾಹತು ದೇಶಗಳಾದ ಭಾರತ ಮುಂತಾದುವುದನ್ನು ಸುಧಾರಣಾ/ ಪರಿವರ್ತನಾ ಪ್ರಕ್ರಿಯೆಯ ಮೂಲಕ ಪರಿಶುದ್ಧವಾಗಿಸುವ ಕ್ರಿಯೆಗೆ ತೊಡಗಿತು. ಭಾರತೀಯ ವ್ಯವಸ್ಥೆಯು ಕೂಡಾ ಮುಂದೊAದು ದಿನ ಮುಂದುವರಿಯುವ ಯಾ ಆಧುನೀಕರಣಗೊಳ್ಳುವ ಹಂತ ತಲುಪುವುದು ಎಂದು ನಂಬಿಸಲಾಯಿತು. ಅಂತಹ ಗುಣಗಳಲ್ಲಿ ಹಲವನ್ನು, ನಾವು, ಈ ಕೆಳಗಿನಂತೆ ಗುರುತಿಸಬಹುದು


ಭೂಮಿಯಾಧಾರಿತ ಕೃಷಿಯನ್ನು ಅವಲಂಬಿಸಿ ಒಂದು ಸಮಾಜ ಸಘಂಟಿತವಾದರೆ ಯೋಜಿತ ಅಭಿವೃದ್ಧಿ ಸಾಧ್ಯವಿಲ್ಲ, ಯಾಕೆಂದರೆ ಕೃಷಿ ಬಹುಪಾಲು ನೈಸರ್ಗಿಕ ಸಂಪನ್ಮೂಲ, ಪ್ರಾಕೃತಿಕ ವಾತಾವರಣ, ಹವಾಗುಣ...... ಇತ್ಯಾದಿಗಳ ಮೇಲೆ ಅವಲಂಭಿತವಾಗಿರುವುದರಿAದ, ಮನುಷ್ಯ ನಿಯಂತ್ರಣಕ್ಕೆ ಹೊರತಾದ ಅಂಶಗಳು ಅಂತಹ ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಯೋಜನಾಬದ್ಧ ಯಾ ಶಿಸ್ತು ಬದ್ಧ ಬೆಳವಣಿಗೆ ಕಷ್ಟ ಸಾಧ್ಯ, ಇಲ್ಲಿ ಉತ್ಪಾದನಾ ಕ್ರಮ ಪ್ರಾಕೃತಿಕ ಕಾರಣಗಳನ್ನು ಕೇಂದ್ರೀಕರಿಸಿದ್ದು ದೂರಗಾಮಿ ಪರಿಣಾಮವುಳ್ಳ ಯೋಜನಾ ಬದ್ಧ ಅಭಿವೃದ್ಧಿ ಇಂತಹ ಕಡೆ ಅಸಾಧ್ಯವಾಗುತ್ತದೆ. ಈ ಪರಿಸ್ಥಿತಿಯಲ್ಲಿ ಬದಲಾವಣೆ ಬರಬೇಕೆಂದಿದ್ದರೆ ಉತ್ಪಾದನಾ ವ್ಯವಸ್ಥೆಯಲ್ಲಿ ಕೃಷಿಯನ್ನು ಹೊರತುಪಡಿಸಿ ಕೈಗಾರಿಕಾ ವ್ಯವಸ್ಥೆಯ ಮೇಲೂ ಉತ್ಪಾದನೆ ಅವಲಂಬಿತವಾಗುವAತೆ ಮಾಡಬೇಕಾಗುವುದು. ಹೀಗೆ ಮಾಡುವುದರಿಂದ ಮಾನವಶ್ರ‍್ರಮ, ಪ್ರಾಕೃತಿಕ ಸಂಪನ್ಮೂಲ ಹಾಗೂ ಸಂಘಟನಾ ಚಾತುರ್ಯದ ಸಮರ್ಥ ಬಳಕೆಯಾಗುವ ಮೂಲಕ ನಿರಂತರ ಉತ್ಪಾದನೆಯನ್ನು ಮಾಡಬಹುದಾಗಿದೆ. ಎಲ್ಲಿ ಉತ್ಪಾದನಾಕರ‍್ಯ ನಿರಂತರವಾಗಿಯೂ ಯೋಜನಾ ಬದ್ಧವಾಗಿಯೂ ನಡೆಯುವುದೋ ಆಗ ಸಮಾಜದ ಸ್ಥಿತಿಗತಿ ಕೇವಲ ಪ್ರಾಕೃತಿಕ ಸಂಪನ್ಮೂಲ ಮತ್ತು ಪ್ರಾಕೃತಿಕ ಪರಿಸ್ಥಿತಿಯನ್ನು ಅವಲಂಬಿಸಿರುವುದಿಲ್ಲ ಹಾಗಾದಾಗ ಒಂದು ವ್ಯವಸ್ಥೆಯ ಯೋಜನಾ ಬದ್ಧ ಅಭಿವೃದ್ಧಿ ಸಾಧ್ಯಾವಾಗುತ್ತದೆ. ಇಂತಹ ಒಂದು ತಿಳುವಳಿಕೆ ಬೆಳೆಯುವುದಕ್ಕೆ ಪ್ರಮುಖ ಕಾರಣ ಯೂರೋಪ್‌ನಲ್ಲಿ ಆದ ಸಾಮಾಜಿಕ ಪರಿವರ್ತನೆ, ಹೊಸ ಅನ್ವೇಷಣೆ ಮತ್ತು ಆವಿಷ್ಕಾರಗಳು.


ಯುರೋಪಿನಲ್ಲಿ ಆದ ಸ್ಥಿತ್ಯಂತರಕ್ಕೆ ಮೂಲಕಾರಣ ಸಾಮಾಜಿಕ ಕ್ರ‍್ರಾಂತಿ ಮತ್ತು ತದನಂತರ ನಡೆದ ಹೊಸ ಅನ್ವೇಷಣೆ, ಆವಿಷ್ಕಾರಗಳು ಇಂತಹ ಆವಿಷ್ಕಾರ ಮತ್ತು ಅನ್ವೇಷಣೆಯ ಕಾರಣದಿಂದಾಗಿ ಉತ್ಪಾದನಾ ಪ್ರಮಾಣದಲ್ಲಿ ವೃದ್ಧಿ, ಮಾನವಶ್ರಮದ ಬದಲು ಯಾಂತ್ರಿಕ ಶಕ್ತಿಯ ಬಳಕೆ ಇವೇ ಮೊದಲಾದುವುಗಳಿಂದಾಗಿ ಇದರಿಂದಾಗಿ ಅಧಿಕ ಪ್ರಮಾಣದ ಉತ್ಪಾದನೆ ಸಾಧ್ಯವಾಗಿ ಅಂತಹ ಉತ್ಪನ್ನಗಳನ್ನು ಇತರೆಡೆ ವಿತರಿಸುವ ಅಗತ್ಯ ಉಂಟಾಯಿತು, ಮಾತ್ರವಲ್ಲ ಹೊಸ ಉತ್ಪಾದನಾ ವ್ಯವಸ್ಥೆಯನ್ನು ನಿರಂತರವಾಗಿ ಪೋಷಿಸುವ ಸಲುವಾಗಿ ಕಚ್ಚಾ ಸಾಮಾಗ್ರಿಗಳನ್ನು ಪೂರೈಸುವ ಅಗತ್ಯವೂ ಹುಟ್ಟಿಕೊಂಡಿತು. ಹಾಗಾಗಿ ಯುರೋಪಿನ ಬಹುತೇಕ ದೇಶಗಳು ತಮ್ಮ ಉತ್ಪಾದನಾ ವ್ಯವಸ್ಥೆಯನ್ನು ಆಧರಿಸುವ ಸಲುವಾಗಿ ಹೊಸ ಮಾರುಕಟ್ಟೆಯನ್ನು ಮತ್ತು ಸಾಮಾಗ್ರಿಗಳನ್ನು ಪೂರೈಸಬಲ್ಲ ಹೊಸ ಭೂಪ್ರದೇಶಗಳನ್ನು ಆಕ್ರಮಿಸುತ್ತಾ ಹೋದವು.


ಇಂತಹ ಒಂದು ಉತ್ಪಾದನಾ ವ್ಯವಸ್ಥೆಯ ಆದರಣೆ ಮತ್ತು ವಿಸ್ತರಣೆಯ ಭಾಗವಾಗಿ ಭಾರತವೂ ಬ್ರಿಟನ್ನಿನ ಹಿಡಿತದೊಳಕ್ಕೆ ಹಂತ ಹಂತವಾಗಿ ಜಾರಿಬಿಟ್ಟಿತು. ಯಾವಾಗ ಭಾರತ ಬ್ರಿಟನ್ ಆಡಳಿತಕ್ಕೆ ಒಳಪಟ್ಟಿತೋ ಆ ನಂತರ ಇಲ್ಲಿನ ಇಡೀ ಉತ್ಪಾದನಾ ವ್ಯವಸ್ಥೆಯ ನಿಯಂತ್ರಣ ಕೇಂದ್ರ ಭಾರತದಿ೦ದ ಇಂಗ್ಲೆAಡಿಗೆ ವರ್ಗಾಯಿಸಲ್ಪಟ್ಟತು. ಒಂದು ಕಾಲದಲ್ಲಿ ಇಂಡಿಯಾದ ವಸ್ತುಗಳಿಗೆ ಯುರೋಪಿನ ದೇಶಗಳಲ್ಲಿ ಬಹುದೊಡ್ಡ ಮಾರುಕಟ್ಟೆಯಿತ್ತು. ಆದರೆ ಹಂತಹAತವಾಗಿ ಈ ಮಾರುಕಟ್ಟೆ ಕುಸಿದುಬಿದ್ದು ಇದರ ಪರಿಣಾಮವಾಗಿ ಭಾರತೀಯ ಗುಡಿಕೈಗಾರಿಕೆಯನ್ನು, ಆದರಿಸಿದ ಕುಶಲಕರ್ಮಿಗಳು ನಿರುದ್ಯೋಗಿಗಳಾಗಿ, ಹಸಿವಿಂದ ಪರದಾಡುವಂತಾಯಿತು. ಭಾರತೀಯ ಅಥವಾ ದೇಶೀಯ ಮಾದರಿಯ ಉತ್ಪಾದನಾ ವ್ಯವಸ್ಥೆಯು ನಂತರದಲ್ಲಿ ಹಂತಹAತವಾಗಿ ನೆಲಕಚ್ಚಿತು. ಇದರ ಜಾಗದಲ್ಲಿ ಬ್ರಿಟನ್ ಅರ್ಥವ್ಯವಸ್ಥೆಯ ವಿಸ್ತûರಣಾ ಯೋಜನಾನುಸಾರ ಬದಲಾವಣೆ ಪ್ರಾರಂಭವಾಯಿತು.



ಮೊದಲಿಗೆ ಬ್ರಿಟನ್‌ನಿಂದ ತಂದ ವಸ್ತುಗಳನ್ನು, ಸರಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿತರಿಸಿ, ಇಲ್ಲಿಂದ ಸಿದ್ಧ ವಸ್ತುಗಳನ್ನು ಉತ್ಪಾದಿಸಲು ಅಗತ್ಯವಿರುವ ಕಚ್ಛಾ ಸಾಮಾಗ್ರಿಗಳನ್ನು ಕೊಂಡೊಯ್ಯಲಾಗುತ್ತಿತ್ತು. ಇಂತಹ ವ್ಯಾಪಾರದಲ್ಲಿ ಭಾರತೀಯ ಮೂಲದ ಜನ ಕೆಳಸ್ತರದಲ್ಲಿ ವಿತರಕರಾಗಿಯೂ ಯಾ ಕಮಿಷನ್ ಏಜಂಟರಾಗಿಯೂ ದುಡಿಯುತ್ತಿದ್ದರು. ನಂತರದಲ್ಲಿ ಇಂಗ್ಲೆAಡಿನ ಕೈಗಾರಿಕೆಗಳಿಗೆ ಅಗತ್ಯವಿರುವ ವಾಣಿಜ್ಯ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಲಾಯಿತು. ಭೂಕಂದಾಯವನ್ನು ನಗದಿನ ರೂಪದಲ್ಲಿ ಸಂಗ್ರಹಿಸುವ ಬ್ರಿಟೀಷ್ ಸರ್ಕಾರದ ನಿರ್ಧಾರದಿಂದ ಭಾರತೀಯ ಅರ್ಥ ವ್ಯವಸ್ಥೆಯಲ್ಲೂ ಹಣದ ಪ್ರಸರಣ ಅಧಿಕವಾಗತೊಡಗಿತು. ಇದರಿಂದ ಜನ ತಮ್ಮ ಉತ್ಪನ್ನವನ್ನು ಮಾರಾಟಮಾಡುವ ಪ್ರಸಂಗ ಎದುರಾಯಿತು. ಆಹಾರದ ಬೆಳೆಗಳೊಂದಿಗೆ ವಾಣಿಜ್ಯ ಬೆಳೆಗಳನ್ನು ಬೆಳೆಯಿಸುವ ಪರಿಪಾಟ ಪ್ರಾರಂಭವಾಯಿತು. ಹಲವಾರು ಸಂದರ್ಭಗಳಲ್ಲಿ ಆಹಾರದ ಬೆಳೆ, ಯಾ ಕೃಷಿ ಉತ್ಪನ್ನಗಳು ನಷ್ಟವಾದಾಗ ಭೂಕಂದಾಯ ನೀಡಲು ರೈತರು ಭೂಮಿಯನ್ನು ವ್ಯಾಪಾರಿಗಳಿಗೆ ಮಾರಿಯೋ, ಅಡವಿಟ್ಟೋ ಹಣಪಡೆಯುವ ಪರಿಸ್ಥಿತಿ ಬ೦ದದ್ದನ್ನು ಕಾಣಬಹುದು. ಒಟ್ಟಿನಲ್ಲಿ ಸ್ವಾವಲಂಬಿ ಮಾದರಿಯಿಂದ ಅವಲಂಬಿತ ಅಭಿವೃದ್ಧಿ ಮಾದರಿಯೆಡೆಗೆ ಉತ್ಪಾದನಾ ವಿಧಾನಗಳು ವಿಸ್ತರಣೆಗೊಳ್ಳುತ್ತಾ ಬರತೊಡಗಿದುವು. ವಿನಿಮಯ, ಹಣಕಾಸು, ವ್ಯಾಪಾರ ಎನ್ನುವ ಹೊಸ ವಾಙ್ಮಯ ಭಾರತೀಯರಿಗೆ ಹೆಚ್ಚು ಹೆಚ್ಚು ಪರಿಚಯವಾಗುತ್ತಾ ಬಂದಿತು ಎ೦ದು ಹೇಳಬಹುದು.


ಮೊದಮೊದಲು ಭಾರತದಲ್ಲಿ ಉತ್ಪಾದನಾ ಚಟುವಟಿಕೆಯನ್ನು ಬ್ರಿಟನ್ ಪ್ರೋತ್ಸಾಹಿಸದಿದ್ದರೂ ಮೊದಲನೇ ಮಹಾಯುದ್ಧದ ಕಾಲದಲ್ಲಿ ಇಂಗ್ಲೆAಡಿನಿAದ ಉತ್ಪನ್ನಗಳನ್ನು ಯಾ ಪದಾರ್ಥಗಳನ್ನು ಪ್ರಪಂಚದ ಇತರ ಎಲ್ಲಾ ಮೂಲೆಗಳಿಗೆ ಸಾಗಿಸುವುದು ತುಂಬಾ ರೀತಿಯಿಂದ ಅನನುಕೂಲಕರ ಎಂದೆನಿಸಿತು. ಇದರ ಪರಿಣಾಮವಾಗಿ ವಸಾಹತುಗಳಲ್ಲಿ ಕೂಡಾ ಉತ್ಪಾದನಾ ಕರ‍್ಯವನ್ನು ಕೈಗೊಳ್ಳವುದು ಪ್ರಯೋಜನಕಾರಿ ಎಂಬುವುದನ್ನು ಸಾಮ್ರಾಜ್ಯಶಾಹಿ ಮನಗಂಡಿತು. ಇಂತಹ ಬೆಳವಣಿಗೆಯ ಫಲವಾಗಿ ಭಾರತದಲ್ಲಿ ವ್ಯಾಪಾರೀ ವರ್ಗವೂ ವಿಕಸನ ಹೊಂದಿ ಉತ್ಪಾದನಾ ವರ್ಗ ಯಾ ಕೈಗಾರಿಕೋದ್ಯಮಿಗಳಾಗಿ ಪರಿವರ್ತನೆ ಹೊಂದಿರುವುದನ್ನು ಗಮನಿಸಬಹುದಾಗಿದೆ. ಮುಂದೆ ಸ್ವತಂತ್ರ ಭಾರತದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ನೀತಿಗಳು ಹೇಗಿರಬೇಕೆನ್ನುವ ದಿಸೆಯಲ್ಲಿ `ಬಾಂಬೆ ಪ್ಲಾನ್’ ಬಹಳ ಪ್ರಮುಖವಾಗಿದೆ. ಇದರನ್ವಯ ಭಾರತದಲ್ಲಿ ಹುಟ್ಟಿಕೊಂಡ ಮೊದಲ ತಲೆಮಾರಿನ ಉದ್ಯಮ ಪತಿಗಳನ್ನು ಪ್ರೋತ್ಸಾಹಿಸಿ; ಅವರು ಕಟ್ಟಿ ಬೆಳೆಸಿದ ಕೈಗಾರಿಕೆಗಳು, ಉತ್ಪಾದನಾ ಚಟುವಟಿಕೆಗಳನ್ನು ದೇಶದ ಅಭಿವೃದ್ಧಿಯಲ್ಲಿ ಸಶಕ್ತವಾಗಿ ದುಡಿಸಿಕೊಳ್ಳಲು ಸೂಕ್ತ ಅವಕಾಶಗಳನ್ನು ಒದಗಿಸಿಕೊಡಬೇಕೆನ್ನುವ ವಾದವು ಸಹಜವಾಗಿಯೇ ಇಂಬು ಪಡೆಯಿತು. ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಕೈಗಾರಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಉತ್ಪಾದನಾ ಪ್ರಕ್ರಿಯೆಯಲ್ಲಿ ಸಮಸ್ತ ಜನವರ್ಗವನ್ನು ಸಶಕ್ತೀಕರಿಸಬಹುದೆಂದು ನಂಬಿದ್ದರು. ಪಾಶ್ಚಿಮಾತ್ಯ ರಾಷ್ಟçಗಳು ಅನುಸರಿಸಿದ ಅಭಿವೃದ್ಧಿ ಮಾದರಿಗಳು, ಬೃಹತ್ ಕೈಗಾರೀಕೀಕರಣ ಭಾರತಕ್ಕೆ ಸೂಕ್ತವಲ್ಲ ಎನ್ನುವ ಮಹಾತ್ಮಾಗಾಂಧೀಜಿಯವರ ವಾದವನ್ನೂ ಯಥಾವತ್ ಸ್ವೀಕರಿಸಲು ನೆಹರೂ ಚಿಂತನೆಯಾದಾರಿತ ಅಭಿವೃದ್ಧಿ ಮಾದರಿ ಸಿದ್ಧವಿರಲಿಲ್ಲ. ಗಾಂಧೀ ಸೂಚಿಸಿದ ಕೆಲವೊಂದು ಕಾರ್ಯಕ್ರಮಗಳನ್ನು ಮಾತ್ರ ಸಹಿಸಿಕೊಳ್ಳುವ ಮಟ್ಟದಲ್ಲಷ್ಟೇ ನಮ್ಮ ಅಭಿವೃದ್ಧಿ ನೀತಿಗಳು, ಕಾರ್ಯರೂಪಕ್ಕೆ ಬಂದವು. ಇದರನ್ವಯ ಪಂಚವಾರ್ಷಿಕ ಯೋಜನೆಗಳ ಮೂಲಕ ಸೂಕ್ತ ದಾರಿಗಳನ್ನು ಗುರುತಿಸಿಕೊಂಡು, ಸರಕಾರೀ ಮತ್ತು ಖಾಸಗೀ ಉದ್ಯಮವಲಯಗಳು ಕರ‍್ಯಪ್ರವೃತ್ತವಾಗಿ ನಿಗದಿತ ಗುರಿತಲುಪುವ ದಿಸೆಯಲ್ಲಿ ಆರ್ಥವ್ಯವಸ್ಥೆಯನ್ನು ಸಂಘಟಿಸಲಾಯ್ತು. ನಾಲ್ಕೆöÊದು ಪಂಚವಾರ್ಷಿಕ ಯೋಜನೆಗಳ ಅನುಷ್ಠಾನದ ತರುವಾಯವೂ ಒಂದು ರೀತಿಯ ಸಂತುಲಿತ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಕೇಂದ್ರ ಸರಕಾರ “ಗರೀಬಿ ಹಟಾವೋ” ದಂತಹ ಅಲ್ಪಾವಧಿಯಲ್ಲಿ ಪ್ರಯೋಜನ ನೀಡಬಲ್ಲ ಜನಪ್ರಿಯ ಯೋಜನೆಗಳಿಗೆ ಚಾಲನೆ ನೀಡ ಹೊರಟಿತು. ಪ್ರಜಾಸತ್ತಾತ್ಮಕ ಚಳುವಳಿಗಳು ಅಭಿವೃದ್ಧಿಯ ವೈಫಲ್ಯಗಳ ಬಗ್ಗೆ ಧ್ವನಿಯೆತ್ತತೊಡಗಿದಾಗ ಅವುಗಳನ್ನು ಹತ್ತಿಕ್ಕುವ ಪ್ರಯತ್ನಗಳೂ ನಡೆದವು. ಖಾಸಗೀವಲಯವು ಸರಕಾರೀ ನಿಯಂತ್ರಣದಿAದ ನಲುಗಲಾರಂಭಿಸಿದಾಗ ಹೆಚ್ಚಿನ ಸ್ವಾಯತ್ತೆಗಾಗಿ ಒತ್ತಾಯಮಾಡಲಾರಂಭಿಸಿತು.



ಆರ್ಥಿಕ ಅಭಿವೃದ್ಧಿಯಲ್ಲಿನ ಭ್ರಮನಿರಸನ ರಾಜಕೀಯ ರಂಗದಲ್ಲಿಯೂ ಫ್ರತಿಫಲನಗೊಂಡಿರುವುದನ್ನು ಕಾಣಬಹುದು. ೧೯೭೭ರ ವರೆಗಿದ್ದ ಕಾಂಗ್ರೆಸ್ ಪಕ್ಷದ ರಾಜಕೀಯ ಪಾರಮ್ಯ ಕುಸಿದು ಹೋಗಿ ಪ್ರಾಂತೀಯ/ ಪ್ರಾದೇಶಿಕ ಜನವರ್ಗದ ಆಶೋತ್ತರಗಳು ಪ್ರಾದೇಶಿಕ ಪಕ್ಷಗಳ ರೂಪದಲ್ಲಿ ಪ್ರತಿಬಿಂಬಿತವಾಯಿತು. ಇಂತಹ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳು ಪ್ರಾದೇಶಿಕ ಹಿತಾಸಕ್ತಿಗಳಿಗೆ ಕಿವಿಗೂಡಬೇಕಾದ ಅನಿವಾರ್ಯತೆಯೊದಗಿತು. ಆದರೆ ಈ ವೇಳೆಗಾಗಲೇ ಸರಕಾರಗಳು ಅಂತಾರಾಷ್ಟಿçÃಯ ಮಟ್ಟದಲ್ಲಿ ನಡೆಯುವ ಬದಲಾವಣೆಗಳ ಪ್ರಭಾವಕ್ಕೆ ಒಳಗಾಗುವ ಮೂಲಕ ತಮ್ಮ ಹೊಣೆಗಾರಿಕೆಯನ್ನು ಹಾಗೂ ಬಹುತೇಕ ಜವಾಬ್ದಾರಿಯನ್ನು ವಿಕೇÃಂದ್ರೀಕರಣದ ಹೆಸರಲ್ಲಿ, ಖಾಸಗೀಕರಣದ ಹೆಸರಲ್ಲಿ ಕಡಿಮೆಮಾಡುತ್ತಾ ಬಂದಿರುವುದನ್ನೂ ಗುರುತಿಸಬಹುದು.


೧೯೮೦ರ ನಂತರ ಬೀಸಲಾರಂಭಿಸಿದ ಬದಲಾವಣೆಯ ಗಾಳಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳನ್ನು ಅತ್ಯಂತ ತ್ವರಿತಗತಿಯಲ್ಲಿ ತಂದಿರುವುದನ್ನು ನಾವು ನೋಡಬಹುದು. ತದನಂತರದ ದಿನಗಳಲ್ಲಿ ಖಾಸಗೀ ರಂಗದಲ್ಲಿ ಉದ್ಯಮಶೀಲತೆಯ ಬೆಳವಣಿಗೆಗೆ ಒತ್ತು ನೀಡಿರುವುದನ್ನು, ಖಾಸಗೀವಲಯದಲ್ಲಿ ಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ, ಇತ್ಯಾದಿಗಳಿಗೆ ಮಹತ್ವ ನೀಡುತ್ತಾ ಬಂದಿರುವುದನ್ನು ಗುರುತಿಸಬಹುದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಉಂಟಾಗಿರುವ ಪ್ರಗತಿಯ ಕಾರಣದಿಂದ ಜ್ಞಾನಾಧಾರಿತ ಉತ್ಪಾದನಾ ಚಟುವಟಿಕೆಗಳು ಇಲ್ಲಿ ಆರಂಭಗೊAಡವು ಜಿಲ್ಲೆಯ ಅಭಿವೃದ್ಧಿಯನ್ನು ಈ ಹಿನ್ನೆಲೆಯಲ್ಲಿ ಗಮನಿಸುವುದು ಸೂಕ್ತವೆನಿಸುತ್ತದೆ.


ಪ್ರಾಚೀನ ಕೈಗಾರಿಕೆಗಳು


ಕೈಗಾರಿಕೆ ಎನ್ನುವ ಪದವೇ ಆಧುನಿಕ ಜಗತ್ತಿನ ಯಂತ್ರಾಧಾರಿತ ಉತ್ಪಾದನಾ ಚಟುವಟಿಕೆಗಳನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ ಪ್ರಾಚೀನ ಕೈಗಾರಿಕೆ ಎಂದು ಉತ್ಪಾದನಾ ವ್ಯವಸ್ಥೆಯನ್ನು ಗುರುತಿಸುವುದೇ ಸಮಸ್ಯಾತ್ಮಕ ಸಂಗತಿ. ಇದಕ್ಕಿಂತಲೂ ಮಿಗಿಲಾಗಿ, ಯುರೋಪಿಯನ್ನರ ಆಗಮನವಾಗುವ ಮೊದಲು ರಾಜಕೀಯ ಗಡಿಗಳು ಈಗಿನಂತೆ ನಿಖರವಾಗಿರಲಿಲ್ಲ. ಆಯಾ ಕಾಲಮಾನದಲ್ಲಿ ರಾಜ್ಯಭಾರ ಮಾಡುತ್ತದ್ದ ರಾಜ, ಮಹಾರಾಜರ ಶಕ್ತಿ ಸಾಮರ್ಥ್ಯಗಳಿಗನುಸಾರವಾಗಿ ರಾಜಕೀಯ ಗಡಿಗಳು ನಿರ್ಧರಿತವಾಗುತ್ತಿದ್ದುವು. ಹಾಗಾಗಿ ದೇಶ, ಪ್ರದೇಶದ ಗಡಿಗಳು ಕಾಲದಿಂದ ಕಾಲಕ್ಕೆ ಪಲ್ಲಟಗೊಳ್ಳುತ್ತಾ ಇದ್ದುವು. ಪ್ರಾಚೀನ ಕಾಲದಲ್ಲಿ, ಆಧುನಿಕ ಕಾಲದಲ್ಲಿ ಇರುವಂತೆ ಒಂದು ರೀತಿಯ ಅವ್ಯಕ್ತ ಉತ್ಪಾದನಾ ಸಂಬAಧಗಳು ಇರಲಿಲ್ಲವೆನ್ನಬಹುದು. ಇದಕ್ಕೆ ಪ್ರಮುಖ ಕಾರಣ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆ ಉತ್ಪಾದನೆಯನ್ನು ಅವಲ೦ಬಿಸಿತ್ತೇ ಹೊರತು, ಪ್ರಸ್ತುತ ಇರುವಂತೆ ಉತ್ಪಾದನೆಯೇ ವಾಣಿಜ್ಯ ಮತ್ತು ವ್ಯಾಪಾರವನ್ನು ಅವಲಂಬಿಸಿರಲಿಲ್ಲ. ಪ್ರಾಯಶ: ಜಿಲ್ಲೆಯ ಇಂದಿನ ಪರಿಸ್ಥಿತಿಯನ್ನು ಅವಲೋಕಿಸುವಾಗ ಅವತರಿಸುವ ಅನುಮಾನಗಳು, ಸಂಶಯಗಳು, ಪ್ರಾಚೀನ ಪರಿಸ್ಥಿತಿಯನ್ನು ತಿಳಿಯಬಯಸುವಾಗ ಬಹಳಷ್ಟು ಸಲ ಅಪ್ರಸ್ತುತ ನೆಲೆಯಲ್ಲಿರುವ ಅಪಾಯಗಳಿವೆ ಎನಿಸುತ್ತದೆ. ಈ ಎಲ್ಲಾ ಇತಿಮಿತಿಗಳ ಬಗ್ಗೆ ಜಾಗೃತವಾಗಿದ್ದುಕೊಂಡು ವಿಷಯ ಮಂಡನೆ ಮಾಡುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.



ಕರಾವಳಿ ತೀರದ ಈ ಜಿಲ್ಲೆಯು ಪ್ರಾಚೀನ ಕಾಲದಿಂದಲೂ ಕೃಷಿಯಾಧಾರಿತ ಪ್ರದೇಶವಾಗಿದ್ದರೂ, ವ್ಯಾಪಾರವಹಿವಾಟುಗಳಲ್ಲಿಯೂ ಸಾಕಷ್ಟು ಮುಂದಿತ್ತು ಎನ್ನುವುದಕ್ಕ ಐತಿಹಾಸಿಕ ಪುರಾವೆಗಳು ದೊರಕುತ್ತವೆ (ಗುರುರಾಜ ಭಟ್ಟ) ಗುತ್ತುಗಳು, ಗುತ್ತೇದಾರರು, ಸೀಮೆ ಅಥವಾ ನಾಡಿನ ಹೆಗ್ಗಡೆಯವರು, ಮಾಗಣೆಯ ಅರಸರು, ಬಹುಸಂಖ್ಯೆಯ ಆಳುಗಳ ಮೂಲಕ ಕೃಷಿಕಾರ್ಯವನ್ನು ದೊಡ್ಡ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ನಡೆಸಿರುವ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ.


ತುಳುನಾಡಿನಲ್ಲಿ ವ್ಯಾಪಾರ ವಹಿವಾಟುಗಳು ಬಹುಪಾಲು ಶ್ರೇಷ್ಟಿ ಅಥವಾ ಶೆಟ್ಟಿಕಾರರು ಎನ್ನುವವರ ವಶದಲ್ಲಿತ್ತು. ಬಾರಕೂರಿನಲ್ಲಿರುವ ಶಾಸನಗಳು ಈ ಬಗ್ಗೆ ವಿವರಗಳನ್ನು ಹೊಂದಿವೆ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ(ಡಾ. ಎಸ್.ಡಿ. ಶೆಟ್ಟಿ). ಬಾರಕೂರಿನಲ್ಲಿ ೧೬ ಜನ ಶ್ರೇಷ್ಠಿಗಳು ಊರಿನ ಹಾಗೂ ಪರವೂರಿನ ವ್ಯಾಪಾರ ವಹಿವಾಟುಗಳನ್ನು ನಡೆಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿರುವ ಅಂಶ ಅವರಿಗಿದ್ದ ರಾಜಕೀಯ ಸಾಮೀಪ್ಯದ ಬಗೆಗೂ ಬೆಳಕು ಚೆಲ್ಲುತ್ತದೆ. ವೃತ್ತಿನಿರತ ವ್ಯಾಪಾರಸ್ಥರ ಸಂಘವು ಕಾರ್ಕಳ, ಮೂಡಬಿದಿರೆ, ವೇಣೂರು, ಬಸ್ರೂರು, ಹೊನ್ನಾವರ, ಭಟ್ಕಳ ಮುಂತಾದ ಕಡೆಗಳಲ್ಲಿಯೂ ವ್ಯಾಪಾರೀ ಚಟುವಟಿಕೆಗಳನ್ನು ನಿಯಂತ್ರಿಸುತ್ತಿತ್ತು. ವಿವಿಧ ರೀತಿಯ ಉತ್ಪನ್ನಗಳ ವ್ಯಾಪಾರಗಳು ನಡೆಯುತ್ತಿದ್ದು ದೊಡ್ಡ ಮಟ್ಟದಲ್ಲಿ ಹಣಕಾಸಿನ ನಿರ್ವಹಣೆ ನಡೆಯುತ್ತಿತ್ತು ಎನ್ಮ್ನವುದು ತಿಳಿದುಬರುತ್ತದೆ. ಮೂಡಬಿದಿರೆ, ಭಟ್ಕಳ ಮತ್ತು ಹೊನ್ನಾವರದಲ್ಲಿರುವ ಶಾಸನಗಳು ಈ ಬಗ್ಗೆ ಬೆಳಕು ಚೆಲ್ಲುತ್ತವೆ. ಶ್ರೇಷ್ಟಿಗಳಲ್ಲದೆ ಬಳಂಜು ಅಥವಾ ಬಣಜಿಗರು, ನಾನಾ ದೇಸಿಯವರು, ಗಾವರೆಯವರು ಮುಂತಾದ ವ್ಯಾಪಾರಿ ವರ್ಗದ ಬಗ್ಗೆ ಹಾಗೂ ಕುಶಲಕರ್ಮಿಗಳೂ ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದ ಕುರಿತು ಇತಿಹಾಸಕಾರರು ಬೆಳಕು ಚೆಲ್ಲಿದ್ದಾರೆ.


ಈ ಪ್ರದೇಶದ ಕುರಿತು ನಡೆದಿರುವ ಸ೦ಶೋಧನೆಯ ಪ್ರಕಾರ ಜಿಲ್ಲೆಯಲ್ಲಿ ‘ಹಂಝಮಾನ’ ಸಂಸ್ಥೆ ಅಸ್ತಿತ್ವದಲ್ಲಿದ್ದ ಬಗ್ಗೆ ಉಲ್ಲೇಖಗಳಿವೆ. ಒಂದು ವರ್ಗದ ಇತಿಹಾಸಕಾರರು ಈ ಸಂಸ್ಥೆ ಹಾಗೂ ಜನರನ್ನು ತಮಿಳುನಾಡಿನ ಶಾಸನದಲ್ಲಿ ಬರುವ ಅಂಜುವಣ್ಣತ್ತರ್ (ಕುಶಲಕರ್ಮಿಗಳ ಐದು ವರ್ಗ ಚಿನಿವಾರ, ಕಮ್ಮಾರ, ಕಂಚುಗಾರ, ಬಡಗಿ, ಕಲ್ಲುಕುಟಿಗ) ನೊಂದಿಗೆ ಸಂಬAಧವಿರುವ ವರ್ಗವೆಂದು ಅಭಿಪ್ರಾಯ ಪಡುತ್ತಾರೆ. ಈ ಹಂಝಮಾನ ಎನ್ನುವ ಕುಶಲಕರ್ಮಿಗಳ ವರ್ಗ ಸ್ಥಳೀಯವಾಗಿ ಉತ್ಪಾದನಾ ಚಟುವಟಿಕೆಗಳಲ್ಲಿ ಪ್ರಮುಖವಾಗಿತ್ತು ಹಾಗೂ ವಿದೇಶೀ ವ್ಯಾಪಾರದಲ್ಲಿಯೂ ಆ ದಿನಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ಹಂಝಮಾನ ಎನ್ನುವುದು ಪಾರ್ಸೀ ಮೂಲದ ಶಬ್ದ ಮತ್ತು ಈ ಕುಶಲಕರ್ಮಿಗಳು ಮಹಾರಾಷ್ಟçದ ಥಾಣೆ ಪ್ರದೇಶದಿಂದ ವಲಸೆಬಂದವರು ಎನ್ನುವ ಇನ್ನೊಂದು ಅಭಿಪ್ರಾಯವೂ ಇತಿಹಾಸಕಾರರಲ್ಲಿ ಪ್ರಚಲಿತದಲ್ಲಿದೆ (ಗುರುರಾಜ ಭಟ್) ಅವಿಭಜಿತ ದಕ್ಷಿಣ ಜಿಲ್ಲೆಯು ಪಶ್ಚಿಮದ ಈಜಿಪ್ಟ್, ಪರ್ಷಿಯಾದೊಂದಿಗೆ ವಾಣಿಜ್ಯ ಸಂಬAಧ ಹೊಂದಿದ್ದ ಬಗ್ಗೆ ಇಬನ್ ಕುರ್ದಾದ್ಬ್, ಸುಲೈಮಾನ್, ಯಾಕುಬಿ, ಇಬ್ನ್ ರಸ್ತಾ, ಮಸೂದಿ, ಇದ್ರಿಸ್ ಮತ್ತು ದಿಮಿಸ್ಕಿಯವರ ಬರಹಗಳಲ್ಲಿ ಉಲ್ಲೇಖಿಸಿರುವ ದಾಖಲೆಗಳು ಸಾಕ್ಷೀಕರಿಸುತ್ತವೆ. ಉಡುಪಿಯ ಜಿಲ್ಲೆಯ ಬಾರ್ಕೂರು, ಮಲ್ಪೆ, ಬಸ್ರ‍್ರೂರು, ಗಂಗೊಳ್ಳಿಗಳು ವ್ಯಾಪಾರಿ ಕೇಂದ್ರವಾಗಿದ್ದುವು ಎನ್ನುವುದು ದಾಖಲೆಗಳಿವೆ ತಿಳಿದುಬರುತ್ತದೆ.



ಈ ಪ್ರದೇಶವು ತನ್ನ ವೈವಿಧ್ಯಮಯ ಸಂಸ್ಸೃತಿಯ P್ಫರಣದಿಂದ ಯುರೋಪಿಯನ್ ಪ್ರವಾಸಿಗರನ್ನು ಆಕರ್ಷಿಸಿದು,್ದ ಈ ಪ್ರವಾಸಿಗರು ನೀಡಿರುವ ವಿವರಗಳಲ್ಲಿಯೂ ಈ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಬಗ್ಗೆ ತಿಳಿದುಬರುತ್ತದೆ. ಬಾರ್ಬೊಸಾ ಎನ್ನುವ ಪ್ರವಾಸಿಗ ನೀಡಿರುವ ವಿವರಣೆಯಲ್ಲಿ ಭಟ್ಕಳ ಬಂದರಿನ ಮೂಲಕ ಈ ಪ್ರದೇಶದಿಂದ ಅಕ್ಕಿ, ಸಕ್ಕರೆ, ಕಬ್ಬಿಣದ ಅದಿರನ್ನು ಹಡಗುಗಳ ಮೂಲಕ ವಿದೇಶಗಳಿಗೆ ರವಾನಿಸಲಾಗುತ್ತಿತ್ತು ಎಂದು ಹೇಳಲಾಗಿದೆ (ಗುರುರಾಜ ಭಟ್) ಅಲ್ಲದೆ ಸಾಂಬಾರ ಪದಾರ್ಥಗಳು, ಮರದ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬರುತ್ತದೆ. ಮೂರ್ ವಂಶದ ದೊರೆಗಳು ಉತ್ತಮ ತಳಿಯ ಕುದುರೆಗಳನ್ನು ಭಟ್ಕಳ ಬಂದರಿನ ಮೂಲಕ ತಂದು ವಿಜಯನಗರದ ಅರಸರಿಗೆ ಮಾರಾಟ ಮಾಡುತ್ತಿದ್ದರು. ಇಂತಹದೇ ವಿವರಣೆಗಳನ್ನು ಇಬ್ಬನ್ ಬತೂತ, ವೆರ್ತೆಮಾ ಮುಂತಾದ ಪ್ರವಾಸಿಗರೂ ನೀಡಿದ್ದಾರೆ. ಇನ್ನೊಬ್ಬ ಪ್ರವಾಸಿಗ ಡೆಲ್ಲಾವಾಲ್ಲೆ, ಈ ಪ್ರದೇಶದಲ್ಲಿ ಯೂರೋಪಿನಿಂದ ತರಲಾಗುತ್ತಿದ್ದ ಕೇಸರಿಗೆ ತುಂಬಾ ಬೇಡಿಕೆಯಿರುವ ಮತ್ತು ಚೇಟರ ರಾಣಿ ಕೇಸರಿಯ ಬಗ್ಗೆ ವಿಚಾರಿಸಿದ್ದ ಬಗ್ಗೆಯೂ ದಾಖಲಿಸಲಾಗಿದೆ. ಈಗಿನ ಶಿವಮೊಗ್ಗ ಜಿಲ್ಲೆಯ ಗೇರುಸೊಪ್ಪಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕರಿಮೆಣಸು ಬೆಳೆಸಲಾಗುತ್ತಿದ್ದು ಅಲ್ಲಿಯ ರಾಣಿಯನ್ನು ‘ಕರಿಮೆಣಸಿನ ರಾಣಿ’ ಎಂದು ಕರೆಯಲಾಗುತ್ತಿದ್ದ ಬಗ್ಗೆಯೂ ಸಂಶೋಧನಾ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಚೀನಾ ದೇಶದಲ್ಲಿ ತಯಾರಾದ ವಸ್ತç ಖರೀದಿಗಾರರ ಬಗ್ಗೆ ಮಾಡಿದ ಉಲ್ಲೇಖದಿಂದ ಈ ನಾಡು ಚೀನಾ ದೇಶದೊಂದಿಗೂ ವ್ಯಾಪಾರ ವಹಿವಾಟು ಹೊಂದಿದ್ದು ಆಮದು ರಫ್ತು ನಡೆಸುತ್ತಿದ್ದ ಅಂಶ ಖಚಿತಗೊಂಡಿದೆ. ಸಾವಿರ ಕಂಬದ ಬಸದಿಯ ಬೈರಾದೇವಿ ಮಂಟಪದ ಅಡಿಭಾಗದ ಪೀಠದ ಶಿಲಾಫಲಕಗಳಲ್ಲಿ ಡ್ರಾಗನ್‌ಗಳನ್ನು ಕೆತ್ತಿರುವುದು ಕೂಡಾ ಈ ಭಾಗದ ಜನರಿಗೆ ಚೀನಾ ದೇಶದ ಸಂಪರ್ಕ ಇರುವುದಕ್ಕೆ ಆಧಾರ ಎನ್ಮ್ನವ ಪ್ರತೀತಿಯಿದೆ.



ಇತಿಹಾಸಕಾರರು ಉಲ್ಲೇಖಿಸಿರುವ೦ತೆ ಕರಾವಳಿ ಜಿಲ್ಲೆಯ ಉತ್ತರ ಭಾಗದ ಕುಂದಾಪುರ, ಹಟ್ಟಿಯಂಗಡಿ ಪ್ರದೇಶಗಳು ಧಾರವಾಡದ ಲಕ್ಷö್ಮಣೇಶ್ವರದ ಬಳಿಯಿರುವ ಪುರಿಗೆರೆ ಪಟ್ಟಣದೊಂದಿಗೆ ವಾಣಿಜ್ಯ ಸಂಬAಧ ಹೊಂದಿದ್ದು, ಜಿಲ್ಲೆ ಪ್ರಮುಖ ವ್ಯಾಪಾರೀ ಕೇಂದ್ರವಾಗಿತ್ತು. ವಿಜಯನಗರದ ಅರಸರ ಸುಮಾರು ಇನ್ನೂರ ಐವತ್ತು ವರ್ಷದ ಆಳ್ವಿಕೆಯಲ್ಲಿ ಕರಾವಳಿ ಪ್ರದೇಶಗಳು ಒಳನಾಡಿನ ಬಹಳಷ್ಟು ಪ್ರದೇಶಗಳೊಂದಿಗೆ ವ್ಯಾಪಾರ ಸಂಬAದವನ್ನು ವೃದ್ಧಿಸಿದ್ದು ಕಂಡುಬರುತ್ತದೆ. ಘಟ್ಟದ ಮೇಲಿಂದ ಅಕ್ಕಿ, ಹೆಸರು, ಉದ್ದು, ಎಳ್ಳು, ಕಬ್ಬು, ತುಪ್ಪ, ಬೆಲ್ಲ, ಮೆಂತೆ, ತೊಗರಿಬೇಳೆ, ದ್ವಿದಳ ಧಾನ್ಯಗಳು, ಸಾಂಬಾರ ಪದಾರ್ಥಗಳನ್ನು ಬಾರ್ಕೂರಿಗೆ ಮಾರಾಟಕ್ಕಾಗಿ ತರಲಾಗುತ್ತಿತ್ತು. ಘಟ್ಟದ ಮೇಲಿನಿಂದ ಉತ್ತಮ ತಳಿಯ ರಾಸುಗಳನ್ನು ಕರಾವಳಿ ಪ್ರದೇಶಗಳಿಗೆ ತಂದು ಮಾರಾಟ ಮಾಡಲಾಗುತ್ತಿತ್ತು. ರಾಸು ಮತ್ತು ಗೋವುಗಳನ್ನು ಆ ಕಾಲದಲ್ಲೂ ಪೂಜ್ಯ ಭಾವನೆಯಿಂದ ಕಾಣಲಾಗುತ್ತಿತ್ತು. ಈ ಪ್ರದೇಶದಲ್ಲಿ ಜೈನ ಶೆಟ್ಟರು ವ್ಯಾಪಾರವನ್ನು ಮುಖ್ಯ ವೃತ್ತಿಯಾಗಿ ಸ್ವೀಕರಿಸಿರುವುದು ಕಂಡುಬರುತ್ತದೆ. ರಾಜಕೀಯ ಅಧಿಕಾರ, ಭೂಮಿಯ ಒಡೆತನಗಳ ಜೊತೆಯಲ್ಲಿ ವ್ಯಾಪಾರವೂ ಕೂಡ ಇವರ ಸ್ವಾಧೀನವಿದ್ದುದರಿಂದ ಸಾಮಾಜಿಕವಾಗಿ ಇವರು ಹೆಚ್ಚು ಪ್ರಭಾವಶಾಲಿಗಳಾvದ್ದರು.ss ಮೂಡಬಿದರೆ ನಗರ, ಕಾರ್ಕಳ ನಗರ, ಕಾಪು ನಗರ, ಭಟ್ಕಳ ನಗರ, ಬಾರಹಕನ್ಯಾಪುರ, ಮಂಗಳಪುರ, ಬಸುರೆ ಪಟ್ಟಣ ಮುಂತಾದ ಸ್ಥಳಗಳು ತುಳುನಾಡಿನ ವ್ಯಾಪಾರದ ಮುಖ್ಯ ಕೇಂದ್ರಗಳಾಗಿದ್ದವು. ಈ ಕೇಂದ್ರಗಳಲ್ಲಿ ಜೈನಮತೀಯರ ಬೇರೆ ಬೇರೆ ಹೆಸರಿನ ವರ್ತಕ ಸಂಘಗಳಿದ್ದವು. ಅವುಗಳನ್ನು ಸೆಟ್ಟಿ ಅಥವಾ ಸೆಟ್ಟಿಕಾರರು, ನಖರ ಅಥವಾ ನಕರ, ಎಳೆಮೆ ಅಥವಾ ಎಳಮೆಗೊಳಗಾದವರು, ಸಾಲಿಕೆ ಬಲ್ಲಾಳ ಹೀಗೆ ಹೆಸರಿಸಬಹುದಾಗಿದೆ ಎ೦ದು ಡಾ. ಎಸ್.ಡಿ. ಶೆಟ್ಟಿ ಅವರು ಅಭಿಪ್ರಾಯ ಪಡುತ್ತಾರೆ. ಸಂಘಗಳು ಜೈನ ಬಸದಿಗಳ ಆಡಳಿತ ನಿರ್ವಹಣೆಯಲ್ಲಿ ಉಕ್ತರಾಗಿರುವುದು ಶಾಸನಗಳಲ್ಲಿ ಕಂಡುಬರುವುದರಿAದ ತುಳುನಾಡಿನ ಮಟ್ಟಿಗೆ ಇವು ಜೈನ ವರ್ತಕಸಂಘಗಳ ಹೆಸರಾಗಿದ್ದವೆಂದು ಡಾ. ವಸಂತಮಾಧವರು ನಿರ್ಧರಿಸಿದ್ದಾರೆ(ಡಾ. ಎಸ್.ಡಿ. ಶೆಟ್ಟಿ).


ಸೆಟ್ಟಿ ಅಥವಾ ಸೆಟ್ಟಿಕಾರರು


ಸೆಟ್ಟಿಯೆಂಬುದು ಸಂಸ್ಕೃತ ಬಾಷೆಯ ಶ್ರೇಷ್ಠಿ, ಶಬ್ದದ ತದ್ಭವರೂಪವಾಗಿದೆ. ಇಡಿಯ ತುಳುನಾಡು, ವಿಜಯನಗರ ಸಾಮ್ರಾಜ್ಯದ ವಿಲೀನಗೊಂಡ ಬಳಿಕ ಸ್ವದೇಶಿ ಮತ್ತು ವಿದೇಶಿ ವ್ಯಾಪಾರಿಗಳ ಸಂಖ್ಯೆ ಗಣನೀಯವಾಗಿ ಬೆಳೆಯಿತು. ನಗರ, ಪಟ್ಟಣಗಳಲ್ಲಿ ತಮ್ಮ ಸಂಘವನ್ನು ರಚಿಸಿಕೊಂಡ ಇವರು, ಸೆಟ್ಟಿಕಾರರೆಂದು ಕರೆಯಿಸಿಕೊಂಡರು. ಇತಿಹಾಸಕಾರರು ವ್ಯಾಖ್ಯಾನಿಸಿದಂತೆ ವಿಜಯನಗರ ಅರಸರು ಮಂಗಳೂರು, ಭಟ್ಕಳ, ಹೊನ್ನಾವರ ಬಂದರುಗಳಿAದ ಅರಬ, ಪರ್ಷಿಯಾ ಮೊದಲಾದ ದೂರ ದೇಶಗಳಿಂದ ಕುದುರೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಇಂಥ ವ್ಯಾಪಾರದಲ್ಲಿ ಈ ಸೆಟ್ಟರೂ ಭಾಗವಹಿಸ್ಮತ್ತಿದ್ದರೆಂದೂ ತೋರುತ್ತದೆ. ಮೂಡಬಿದರೆಯ ಚಂದ್ರನಾಥ ಬಸದಿಯ ಶಾಸನದಲ್ಲಿ ಕುದುರೆಯ ನೇಮಣ್ಣ ಸೆಟ್ಟಿಯನ್ನು ಹೆಸರಿಸಲಾಗಿದೆ. ಬಹುಶ : ಈತನು ಕುದುರೆಯ ವ್ಯಾಪಾರ ನಡೆಸುತ್ತಿದ್ದುದರಿಂದ ಈ ಹೆಸರು ಬಂದಿರಬೇಕು. ಅದೇ ಶಾಸನದಲ್ಲಿ ಚಂದ್ರನಾಥ ಬಸದಿಯನ್ನು ಕಟ್ಟಿಸಿ ದಾನ ನೀಡಿದವರ ಹೆಸರಗುಗಳನ್ನು ವಿವರಿಸುವಲ್ಲಿ ವಿವಿಧ ರೀತಿಯ ವ್ಯಾಪಾರವನ್ನು ನಡೆಸುತ್ತಿದ್ದವರ ಹೆಸರುಗಳು ಕಂಡುಬರುತ್ತವೆ. ಉದಾಹರಣೆಗೆ ಪರದೇಸ ಸೆಟ್ಟಿಯ ಭಾಗ ೧ ಎ೦ದು ಹೇಳುವಲ್ಲಿ, ಇವನು ವಿದೇಶಕ್ಕೆ ಹೋಗಿ ವ್ಯಾಪಾರ ನಡೆಸುತ್ತಿದ್ದ ವರ್ತಕನೆಂದು ಹೇಳಬಹುದು. ಎಳಮೆಯ ನಾರಂಗಸೆಟ್ಟಿ ಎನ್ನುವವನು ಸ್ಥಳೀಯ ವರ್ತಕಸಂಘದ ಸದಸ್ಯನೆಂದು ತೋರುತ್ತದೆ. ಬಾರಕೂರು ಶಾಸನದಲ್ಲಿ ೧೫೮ ರತುನಸೆಟ್ಟಿ ಸೀರೆಸೆಟ್ಟಿ ಎಂಬ ನವರತ್ನ ಮತ್ತು ಬಟ್ಟೆಯ ವ್ಯಾಪಾರಿಯ ಉಲ್ಲೇಖವಿದೆ. ಮೂಡಬಿದಿರೆಯ ಎಂಟು ಮಂದಿ ಸೆಟ್ಟಿಕಾರರು, ಬಾರಕೂರಿನ ಮೂರುಕೇರಿಯ ಮೂವರು ಸೆಟ್ಟಿಕಾರರು, ವೇಣೂರಿನ ಹದಿನಾರು ಮಂದಿ ಸೆಟ್ಟಿಕಾರರು, ಕೋಟಿಕೇರಿಯ ನಾಲ್ವರು ಸೆಟ್ಟಿಕಾರರು ಚೌಳಿಕೇರಿಯ ಮೂವರು ಸೆಟ್ಟಿಕಾರರು, ಇತ್ಯಾದಿ ಹೆಸರುಗಳ ಮೂಲಕ ವರ್ತಕ ಸಂಘದ ಉಲ್ಲೇಖವಿದೆ. ಸೆಟ್ಟಿಕಾರರ ಸಂಘದ ಮುಖ್ಯಸ್ಥನಿಗೆ, ಪಟ್ಟಣಸೆಟ್ಟಯೆಂದು ಕರೆಯುತ್ತಿದ್ದರು. ಈಗಲೂ ಈ ಪಟ್ಟಣಸೆಟ್ಟಿಯ ಮನೆತನದವರು ಮೂಡಬಿದಿರೆ, ವೇಣೂರು, ನಾರಾವಿ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ಕಂಡುಬರುತ್ತಾರೆ. ಸೆಟ್ಟಿಕಾರರಂತೆ ನಕರ, ನಗರ, ನಖರ ಕೂಡ ವರ್ತಕ ಸಂಘದ ಹೆಸರೇ ಆಗಿದೆ. ವ್ಯಾಪಾರದ ಹಿನ್ನೆಲೆಯಲ್ಲಿ ನಕರರಿಗೂ, ಸೆಟ್ಟಿಕಾರರಿಗೂ ಇದ್ದಿರಬಹುದಾದ ವ್ಯತ್ಯಾಸಗಳ ಬಗ್ಗೆ ಡಾ! ಕೆ.ವಿ. ರಮೇಶ ಅವರು, ನಖರದವರು ವಿದೇಶ ಸರಕುಗಳನ್ನು ಮಾರುವ ವ್ಯಾಪಾರಿಗಳೆಂದೂ ಸೆಟ್ಟಿಕಾರರು ಸ್ವದೇಶಿ ಸರಕುಗಳನ್ನು ಮಾರುವ ವ್ಯಾಪಾರಿಗಳೆಂದೂ ಊಹಿಸಿದ್ದಾರೆ. ಆದರೆ ವಿದೇಶಕ್ಕೆ ತೆರಳಿ ವ್ಯಾಪಾರ ಮಾಡುತ್ತಿದ್ದ ವಿದೇಶಿ ಸೆಟ್ಟಿಯೆಂಬ ಹೆಸರು ಶಾಸನಗಳಲ್ಲಿ ಕಂಡುಬರುವುದರಿAದ, ಈ ಊಹೆಯನ್ನು ಸಮರ್ಥಿಸಲು ಸಾಧ್ಯವಾಗುವುದಿಲ್ಲ. ಈ ಸಂಘದವರು ಕಟ್ಟಿಸಿದ ಬಸದಿಗೆ ನಖರ ಜಿನಾಲಯವೆಂದು ಕರೆಯುವ ರೂಢಿಯೂ ಕೆಲವೆಡೆ ಕಂಡುಬರುತ್ತದೆ. ಮೂಡಬಿದಿರೆಯ ಶಾಸನಗಳಲ್ಲಿ ಸೆಟ್ಟಿಕಾರರ ಜೊತೆಗೆ ಹಲರನ್ನು ಪ್ರತ್ಯೇಕವಾಗಿ ಹೆಸರಿಸುವುದರಿಂದ ಇದೂ ಕೂಡ ವರ್ತಕ ಸಂಘದ ಹೆಸರೆಂಬುದು ಸ್ಪಷ್ಟವಾಗುತ್ತದೆ. ಹಲರ ಸಂಘಗಳು ವೇಣೂರು, ಮೂಡಬಿದಿರೆ, ಭಟ್ಕಳ, ಪಡುಬಿದಿರೆ, ಗೇರುಸೊಪ್ಪೆ ಮುಂತಾದ ಕಡೆಗಳಲ್ಲಿದ್ದವು. ಹಲರು ಕಟ್ಟಿಸಿದ ಬಸದಿಯೊಂದು ಕಾರ್ಕಳದಲ್ಲಿದೆ. ಎಳಮೆಗಳು ಎಂಬುದು ವರ್ತಕ ಸಂಘದ ಹೆಸರೆಂದು ಹೇಳುತ್ತಾರೆ. ಈ ಸಂಘವೇ ಮುಂದೆ ಎಳಮೆಗೊಳಗಾದವರೆಂದು ವಿಜಯನಗರಕಾಲದಲ್ಲಿ ಕರೆಯಲಾಯಿತೆಂದು ತಿಳಿಯಲಾಗದೆ. ಆಡಳಿತದ ಜವಾಬ್ದಾರಿ ಈ ಎಳಮೆಗಳ ಮೇಲೂ ಇತ್ತು. ಮೂಡಬಿದಿರೆಯ ಬಸದಿಗಳಿಗೆ ಬಿಟ್ಟ ದಾನವನ್ನು ಕಾಪಾಡಿಕೊಂಡು ಬರುವ ಜವಾಬ್ದಾರಿ ಇತರ ಸಂಘಗಳ ಜೊತೆಗೆ, ನಾಲ್ವರು ಎಳಮೆಗಳ ಮೇಲೂ ಇತ್ತು. ವೇಣೂರಿನ ಶಾಂತಿನಾಥ ಬಸದಿಗೆ ದಾನ ನೀಡುವ ಸಂದರ್ಭದಲ್ಲಿ ಅಲ್ಲಿದ್ದ ೩೬೦ ಜನ ಎಳಮೆಗಳನ್ನು ಹೆಸರಿಸಲಾಗಿದೆ. ಇದೇ ರೀತಿ ೩೬೬ ಎಳಮೆಗಳು, ೭೭೦ ಎಳಮೆ, ೧೫೦ ಎಳಮೆಗಳು ಇತ್ಯಾದಿ ಉಲ್ಲೇಖಗಳು ಶಾಸನಗಳಲ್ಲಿ ಕಂಡುಬರುವುದರಿAದ ಈ ಸಂಖ್ಯೆಗಳು ಆಯಾ ಊರುಗಳ, ಎಳಮೆ ಸಂಘದ ಸದಸ್ಯರನ್ನು ಸೂಚಿಸುತ್ತದೆಂದು ಭಾವಿಸಬಹುದು. ಇದು ಕೂಡ, ವರ್ತಕ ಸಂಘದ ಹೆಸರಾಗಿರಬೇಕೆಂಬುದು ಕೆಲವರ ಅಭಿಪ್ರಾಯವಾಗಿದೆ. ಸಾಲಿಕೆಯೆಂದರೆ ಅಂಗಡಿಯೆAದೂ, ಬಲ್ಲಾಳ ಎಂದರೆ ನಿಪುಣ-ಬಲ್ಲವನು ಎಂದು ಅರ್ಥಮಾಡಿ, ಸಾಲಿಕೆಯ ಬಲ್ಲಾಳರು ವರ್ತಕಸಂಘದವರೇ ಇರಬೇಕೆಂದು ತಿಳಿಯಲಾಗಿದೆ. ಇದೇ ರೀತಿ ಉಭಯ ನಾನಾ ದೇಸಿಗಳ ಉಲ್ಲೇಖವು ಕಾರ್ಕಳದ ಗುರುಗಳ ಬಸ್ತಿಯ ಶಾಸನದಲ್ಲಿ ಕಂಡುಬರುತ್ತದೆ. ಬಸದಿಯ ದಾನಗಳ ರಕ್ಷಣೆಯ ಜವಾಬ್ದಾರಿಯನ್ನು ವಿವರಿಸುವಲ್ಲಿ ಇವರನ್ನೂ ಹೆಸರಿಸಲಾಗಿದೆ. ಬಹುಶ : ಇವರು ಸ್ವದೇಶ ಮತ್ತು ವಿದೇಶ ಹೀಗೆ ಎರಡೂ ಕಡೆ ವ್ಯಾಪಾರ ನಡೆಸುತ್ತಿದ್ದ ವರ್ತಕರಾದ್ದರಿಂದ ಉಭಯ ನಾನಾ ದೇಶಿಗಳೆಂದು ಇವರನ್ನು ಕರೆದಿರಬೇಕು. ಪ್ರಾಯಶ: ಇವರು ಬೇರೆ ಬೇರೆ ಪ್ರದೇಶಗಳಿಂದ ತುಳುನಾಡಿಗೆ ಬಂದು ನೆಲಸಿದವರಾಗಿರಲೂಬಹುದು. ಕಾರ್ಕಳದಲ್ಲಿ ಕ್ರಿ.ಶ. ೧೯೫೦ರಲ್ಲಿ ಬಾಹುಬಲಿಯ ಮಸ್ತಕಾಭಿಷೇಕ ನಡೆದಾಗ ಜವುಳಿ ಅಂಗಡಿ, ಮುತ್ತಿನಂಗಡಿ, ರತ್ನ, ಪವಳದಂಗಡಿ, ತಾಮ್ರ, ಕಂಚಿನ ಪಸರಗಳನ್ನು ಮಾರಲು ಲಲಿತಕೀರ್ತಿಗಳು ತಕ್ಕ ವ್ಯವಸ್ಥೆ ಮಾಡಿಕೊಟ್ಟರೆಂದು ಚಂದ್ರಮಕವಿಯು ಹೇಳುವುದನ್ನು ಗಮನಿಸಬಹುದು. ಸಾಳ್ವಕವಿಯು ಒಂದೆಡೆ, ವರ್ತಕನಾದ ವೀರದತ್ತನು ಜಲ-ಸ್ಥಲ ಮತ್ತು ಹಡಗಿನ ಮೂಲಕ ಅನ್ಯ ದ್ವೀಪಗಳಿಗೆ ತೆರಲಿ ವ್ಯಾಪಾರ ನಡೆಸುತ್ತಿದ್ದನೆಂದು ಹೇಳುತ್ತವೆ.


ಈ ಎಲ್ಲಾ ವಿವರಗಳಿಂದ ಪ್ರಾಚೀನ ದಿನಗಳಲ್ಲಿ ಕರಾವಳಿ ತೀರದ ಈ ಜಿಲ್ಲೆಯಲ್ಲಿ ಕೃಷಿ ಯಾಧಾರಿತ ಉತ್ಪನ್ನಗಳು ವ್ಯಾಪಾರದ ಪ್ರಮುಖ ಸರಕಾಗಿರುವ ಅಂಶ ನಿಚ್ಚಳವಾಗಿ ತಿಳಿದುಬರುತ್ತದೆ. ಸಮುದ್ರಕ್ಕೆ ಸಮೀಪವಿರುವ ನದಿ ತೀರದ ಪಟ್ಟಣಗಳಾದ ಬಸ್ರೂರು, ಬಾರ್ಕೂರು, ಉದ್ಯಾವರ, ಗುರುಪುರ ಮತ್ತು ಒಳನಾಡಿನ ಕಾರ್ಕಳ, ವೇಣೂರು, ಮೂಡಬಿದ್ರಿ ಮುಂತಾದ ಪ್ರದೇಶಗಳು ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದುದಕ್ಕೆ ಪ್ರಮುಖ ಕಾರಣ ಈ ಪಟ್ಟಣಗಳು ಕರ್ನಾಟಕದ ಇತರ ಭಾಗಗಳಿಗೆ ಬಂದರು ಪ್ರದೇಶದಿಂದ ಸಂಪರ್ಕ ಕಲ್ಪಿಸುವ ದಾರಿಯಾಗಿರುವುದೇ ಆಗಿದೆ. ಕೃಷಿ ಆಧಾರಿತ ಸಮಾಜದ ಇತರ ಅವಶ್ಯಕತೆಗಳನ್ನು ಗೃಹ ಕೈಗಾರಿಕೆಗಳು ಪೂರೈಸುವ ಒಂದು ಸ್ವಾವಲಂಬೀ ವ್ಯವಸ್ಥೆ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿತ್ತು. ಇಂತಹ ಸ್ವಾವಲಂಬಿ ಸಮಾಜ ದೇಶೀಯ ಮೂಲಗಳನ್ನು ನಿಧಾನವಾಗಿ ಕಳೆದುಕೊಳ್ಳಲು ಪ್ರಾರಂಭಿಸಿದ್ದೇ ಯುರೋಪಿನಿಂದ ಬ್ರಿಟೀಷರು ಮತ್ತು ಫ್ರೆಂಚರು ಆಗಮಿಸಿದ ನಂತರ.


ಆಧುನಿಕ ಕೈಗಾರಿಕೆಗಳು


ಸಶಕ್ತವಾದ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನಷ್ಠಾನಗೊಳಿಸಿ ಮತ್ತು ಆಡಳಿತದಲ್ಲಿ ಚುರುಕುತನ ತರುವ ಉದ್ದೇಶದಿಂದ, ರಾಜಕೀಯ ನಿರ್ಧಾರವಾಗಿ ಉಡುಪಿ ಜಿಲ್ಲೆಯು ೧೯೯೭ನೇಇಸವಿಯಲ್ಲಿ ಅಸ್ತಿತ್ವಕ್ಕೆ ಬಂತು. ಜಿಲ್ಲೆಯಲ್ಲಿ ಆಧುನಿಕ ಕೈಗಾರಿಕೆಗಳ ಇತಿಹಾಸ ಆರಂಭವಾಗುವುದೇ ಕ್ರಿ.ಶ. ೧೯ನೇ ಶತಮಾನದ ಉತ್ತರಾರ್ಧದಲ್ಲಿ ಎನ್ನಬಹುದು. ಇದಕ್ಕೆ ಪ್ರಮುಖ ಕಾರಣ ಬ್ರಿಟೀಷರು ಇಡೀ ಭಾರತವನ್ನೆ ಕಚ್ಛಾ ಸಾಮಗ್ರಿ ಪೂರೈಸುವ ದಾಸ್ತಾನು ಮಳಿಗೆಯಾಗಿ ನೋಡಿದ್ದಾರೆಯೇ ಹೊರತು ಉತ್ಪಾದನೆಯಲ್ಲಿ ತೊಡಗುವ ಸ್ವಾವಲಂಬೀ ಅರ್ಥವ್ಯವಸ್ಥೆಯನ್ನಾಗಿ ಅಲ್ಲ. ಆದರೆ ಬಹಳಷ್ಟು ಸಲ ಪರಿಸ್ಥಿತಿಯ ಪ್ರಭಾವಕ್ಕೆ ಒಳಗಾಗಿ ಈ ನಿಲುವಿನಲ್ಲಿ ಬದಲಾವಣೆಗಳು ನಡೆದು ಹೋಗಿರುವುದೂ ಸುಳ್ಳಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಿದವರಲ್ಲಿ ಜರ್ಮನಿಯ ಬಾಸೆಲ್ ಮಿಷನ್‌ನ ಪಾತ್ರ ಬಹುಮುಖ್ಯವಾದುದಾಗಿದೆ.


ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತ ಪರಿವರ್ತನೆಯಾಗಿ ಸೇರ್ಪಡೆಯಾದ ಸ್ಥಳೀಯರು, ಪಾರಂಪರಿಕ ಸಮಾಜದ ಉತ್ಪಾದನಾ ವ್ಯವಸ್ಥೆಯಿಂದ ಹೊರದೂಡಲ್ಪಟ್ಟಾಗ ಅವರಿಗೆ ಬದುಕಿನ ಪರ್ಯಾಯ ಮಾರ್ಗಗಳನ್ನು ರೂಪಿಸಬೇಕಾಯಿತು. ಕೈಗಾರಿಕೆಗಳನ್ನು ಯಾ ಯಂತ್ರಾಧಾರಿತ ಉತ್ಪಾದನಾ ಕ್ರಮ ಭೂಮಿ ಆಧಾರಿತ ಕೃಷಿಗೆ ಬದಲಿಯಾಗಿ ಅಸ್ತಿತ್ವಕ್ಕೆ ಬಂದಿತು ಎನ್ನುವುದನ್ನು ಈ ಹಿಂದಿನ ಸಂಶೋಧನೆಗಳು ದೃಢಪಡಿಸಿವೆ (ಪೀಟರ್ ವಿಲ್ಸನ್ ಪ್ರಭಾಕರ್). ಮಂಗಳೂರಿನಲ್ಲಿ ಪ್ರಾರಂಭಿಸಿದ ಛಾಪಖಾನೆ ಮತ್ತು ಮಂಗಳೂರು ಹಂಚಿನ ಕಾರ್ಖಾನೆಗಳು ಈ ನೆಲಕ್ಕೆ ಪರಿಚಯವಾದ ಮೊದಲ ಕೈಗಾರಿಕೆಗಳು. ಹಂಚಿನ ಕಾರ್ಖಾನೆಗಳು ಉಡುಪಿ ಮತ್ತು ಕುಂದಾಪುರಗಳಿಗೂ ವಿಸ್ತರಿಸಿತು. ಅಲ್ಲಿಯವರೆಗೆ ಬಳಕೆಯಲ್ಲಿದ್ದ, ಸಾಂಪ್ರದಾಯಿಕ ರೀತಿಯಲ್ಲಿ ತಯಾರಾಗುತ್ತಿದ್ದ ‘ನಾಡ ಹಂಚು’ ಕಾಯಕಲ್ಪ ಪಡೆದು ಯಂತ್ರಗಳ ಮೂಲಕ ಮರುಹುಟ್ಟು ಪಡೆದು ಮಂಗಳೂರು ಹಂಚು ಎನ್ನುವ ಹೆಸರಿನಿಂದ ಲೋಕವಿಖ್ಯಾತವಾಯಿತು. ಕ್ರಿ.ಶ. ೧೯೦೮ನೇ ಇಸವಿಯಲ್ಲಿ ಕಲ್ಕತ್ತಾದಿಂದ ಪ್ರಕಟವಾದ ‘ಇಂಪೀರಿಯಲ್ ಗ್ಯಾಸೆಟಿಯರ್ ಆಫ್ ಇಂಡಿಯಾ - ಪ್ರೊವಿನ್ಸಿಯಲ್ ಸಿರೀಸ್’ ಇದರಲ್ಲಿ ಈ ಪ್ರದೇಶದಲ್ಲಿರುವ ಕೈಗಾರಿಕೆಗಳ ಬಗ್ಗೆ ಬರೆಯಲಾಗಿದೆ. ಬಾಸೆಲ್ ಮಿಶನ್ ಮಂಗಳೂರಿನಲ್ಲಿ ಮತ್ತು ಉಡುಪಿ ಸಮೀಪದ ಮಲ್ಪೆಯಲ್ಲಿ ಹಂಚಿನ ಕಾರ್ಖಾನೆ ಪ್ರಾರಂಭಿಸಿತ್ತು. ಇದಲ್ಲದೆ ಸ್ಥಳೀಯವಾಗಿ ಪಾರಂಪರಿಕ ವೃತ್ತಿ ಕೌಶಲ್ಯ ರೂಢಿಸಿಕೊಂಡ ಕುಶಲ ಕರ್ಮಿಗಳು ಚಿನಿವಾರಿಕೆ, ಕಮ್ಮಾರಿಕೆ, ಮರದ ಕೆಲಸ, ಕೈಮಗ್ಗ, ಎಣ್ಣೆ ತೆಗೆಯುವುದು, ಚಾಪೆ ನೇಯುವಿಕೆ, ಹಗ್ಗ ತಯಾರಿಕೆ, ಹಾಗೆಯೇ ಕೃಷಿ ಮತ್ತಿತರ ಉತ್ಪಾದಕ ಚಟುವಟಿಕೆಗಳಿಗೆ ಅಗತ್ಯವಿರುವ ಪರಿಸರಗಳನ್ನು, ಉಪಕರಣಗಳನ್ನು ತಯಾರಿಸುತ್ತಿದ್ದರು. ಘಟ್ಟದ ಮೇಲಿನಿಂದ ಕಾಪಿ ಬೀಜ ತಂದು ಅದನ್ನು ಪರಿಷ್ಕರಿಸಿ ಕಾಫಿ ಹುಡಿ ತಯಾರಿಸಿ ಫ್ರಾನ್ಸ್, ಬ್ರಿಟನ್ ಮುಂತಾದ ಹೊರದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಇವುಗಳಲ್ಲದೆ ಮಂಗಳೂರು ಹಂಚು, ಕೊಬ್ಬರಿ, ಅಕ್ಕಿ, ಉಪ್ಪು ಸವರಿದ ಮೀನು, ಸಾಂಬಾರ ಪದಾರ್ಥ ಮತ್ತು ಸಾಗುವಾನಿ ಮರ ಇತ್ಯಾದಿಗಳನ್ನು ರಫ್ತು ಮಾಡಲಾಗುತ್ತಿತ್ತು. ಈ ರಫ್ತು ಪ್ರಮುಖವಾಗಿ ಮಂಗಳೂರು, ಮಲ್ಪೆ, ಹಂಗಾರಕಟ್ಟೆ ಮತ್ತು ಗಂಗೊಳ್ಳಿ ಬಂದರಿನ ಮೂಲಕ ನಡೆಯುತ್ತಿತ್ತು. ಈ ವಾಣಿಜ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರು ‘ಮಾಪಿಳ್ಳೆಗಳು’ ಎಂದು ಗುರುತಿಸಲ್ಪಡುವ ಮುಸ್ಲಿಮರು, ಬಲಿಜ ಮತ್ತು ಚೆಟ್ಟಿಯಾರ್‌ಗಳೆಂದು ಗುರುತಿಸಲ್ಪಟ್ಟ ತೆಲುಗರು, ಕೊಂಕಣದಿAದ ಇಲ್ಲಿಗೆ ವಲಸೆ ಬಂದ ಗೌಡ ಸಾರಸ್ವತರು, ರಾಜಾಪುರಿ ಜನಾಂಗದವರು ಮತ್ತು ಕ್ರಿಶ್ಚಿಯನ್ ಸಮುದಾಯದ ಜನರು. ಸ್ಥಳೀಯ ಸಂಸ್ಥೆಗಳು ವ್ಯವಸ್ಥೆ ಮಾಡಿದ್ದ ಸುಮಾರು ಇಪ್ಪತ್ತು ವಾರದ ಸಂತೆಗಳು ಇಲ್ಲಿ ನಡೆಯುತ್ತಿದ್ದುವು. ನಂತರದ ದಿನಗಳಲ್ಲಿ ಮದರಾಸು-ಮಂಗಳೂರು ರೈಲ್ವೇಮಾರ್ಗ ಈ ಜಿಲ್ಲೆಯನ್ನು ಭಾರತದ ರೈಲ್ವೇ ವಲಯದೊಂದಿಗೆ ಬೆಸೆಯಿತು. ೨೦ನೇ ಶತಮಾನದ ಉತ್ತರಾರ್ಧದಲ್ಲಿ ತದನಂತರ ಇಸವಿಯಲ್ಲಿ ಕೊಂಕಣ ರೈಲ್ವೇ ಮಾರ್ಗ ಈ ಜಿಲ್ಲೆಯನ್ನು ದೇಶದ ಪ್ರಮುಖ ವಾಣಿಜ್ಯ ನಗರ ಮುಂಬೈಯೊAದಿಗೆ ಜೋಡಿಸಿತು.


ಜಿಲ್ಲೆಯಲ್ಲಿ ಆಧುನೀಕರಣದ ಪ್ರಕ್ರಿಯೆ ಪ್ರಾರಂಭಗೊಳ್ಳುವುದು ಉಡುಪಿ ಆಸುಪಾಸಿನ ಮಣಿಪಾಲದಿಂದ ಎಂದರೂ ತಪ್ಪಾಗಲಾರದೇನೋ. ಇಲ್ಲಿ ಆರಂಭವಾದ ಬ್ಯಾಂಕ್ ಮತ್ತು ಶಿಕ್ಷಣ ಸಂಸ್ಥೆಗಳು ಜಿಲ್ಲೆಯ ಜನರಿಗೆ ಆಧುನಿಕ ಜಗತ್ತಿನಲ್ಲಿ ಹೊಸ ಬದುಕಿನ ಸಾಧ್ಯತೆಗಳನ್ನು ಪರಿಚಯಿಸಿದುವು. ೧೯೨೫ರಲ್ಲಿ ಹುಟ್ಟಿದ ‘ದಿ ಕೆನರಾ ಇಂಡಸ್ಟಿçಯಲ್ ಎಂಡ್ ಬ್ಯಾಂಕಿAಗ್ ಸಿಂಡಿಕೇಟ್ ಲಿಮಿಟೆಡ್ (ಇಂದಿನ ಸಿಂಡಿಕೇಟ್ ಬ್ಯಾಂಕ್) ೧೯೪೯ರಲ್ಲಿ ಉಡುಪಿಯ ಮಹಾತ್ಮಾಗಾಂಧಿ ಮೆಮೋರಿಯಲ್ ಕಾಲೇಜು, ೧೯೪೧ರಲ್ಲಿ ಆರಂಭವಾದ ಮಣಿಪಾಲ ಪ್ರಿಂಟಿAಗ್ ಪ್ರೆಸ್, ೧೯೫೩ರಲ್ಲಿ ಆರಂಭವಾದ ಕಸ್ತೂರಬಾ ಮೆಡಿಕಲ್ ಕಾಲೇಜು, ೧೯೫೭ರಲ್ಲಿ ಮಣಿಪಾಲ ಇಂಜಿನಿಯರಿAಗ್ ಕಾಲೇಜು, ೧೯೫೭ರಲ್ಲಿ ಉಡುಪಿಯ ಕಾನೂನು ಕಾಲೇಜು, ೧೯೬೦ರಲ್ಲಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು, ೧೯೬೩ರಲ್ಲಿ ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜು, ೧೯೬೫ ಉಡುಪಿಯ ಟಿ.ಎಂ.ಎ ಪೈ ಶಿP್ಪ್ಷಣ ಮಹಾವಿದ್ಯಾಲಯ ಮತ್ತು ದಂತ ಮಹಾವಿದ್ಯಾಲಯ ಜಿಲ್ಲೆಯಲ್ಲಿ ಮಾನವ ಸಂಪನ್ಮೂಲ ಬೆಳೆಯಲು ಅನನ್ಯ ಕೊಡುಗೆ ನೀಡಿದೆ ಎನ್ನುವುದು ಉತ್ಪೆçÃಕ್ಷೆಯ ಮಾತಲ್ಲ.


ನೆಲ್ಲಿಕಾÊ ವೆಂಕಟ್ರಾವ್ ಮತ್ತು ಬೋಳಾರ ವಿಠ್ಠಲರಾಯರು ೧೯೧೪ರಲ್ಲಿ ಮಂಗಳೂರಿನಲ್ಲಿ ಕೆನರಾ ಪಬ್ಲಿಕ್ ಕನ್‌ವೇಯನ್ಸ್ ಕಂಪನಿ ಲಿಮಿಟೆಡ್ ಎನ್ನುವ ಸಾರಿಗೆ (ಸಿ.ಪಿ.ಸಿ) ಸಂಸ್ಥೆಯನ್ನು ಪ್ರಾರಂಭಿಸಿದರು. ತದನಂತರ ಹನುಮಾನ್ ‘ಟ್ರಾನ್ಸ್ ಪೋರ್ಟ ಕಂಪನಿ’ ದುರ್ಗಾಪರಮೇಶ್ವರಿ ಮೋಟಾರ್ ಸರ್ವಿಸಸ್ ಮುಂತಾದ ಸಾರಿಗೆ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದುವು. ಅಂದಿನ ದಿನಗಳಲ್ಲಿ ಈ ಮೋಟಾರು ವಾಹನಗಳನ್ನು ಬೇರೆ ದೇಶಗಳಿಂದ (ಇಂಗ್ಲೆAಡ್, ಅಮೇರಿಕಾ, ಜರ್ಮನಿಗಳಿಂದ) ಆಮದು ಮಾಡಿಕೊಳ್ಳಲಾಗುತ್ತಿತ್ತು.


೧೯೩೩ರಲ್ಲಿ ಸಾರಿಗೆ ಸಂಸ್ಥೆಗಳು ಒಟ್ಟಾಗಿ ಕಂಬೈAಡ್ ಬುಕಿಂಗ್ ಏಜನ್ಸಿ ಮತ್ತು ಜೋಯಿಂಟ್ ಬುಕ್ಕಿಂಗ್ ಏಜೆನ್ಸಿ ಎನ್ನುವ ಎರಡು ಸಂಸ್ಥೆಗಳನ್ನು ಸ್ಥಾಪಿಸಿ ವ್ಯಾಪಾರದಲ್ಲಿ ನಷ್ಟವನ್ನು ಅನಗತ್ಯ ಸ್ಪರ್ಧೆಯನ್ನು ನಿವಾರಿಸಿದುವು. ಸಿ.ಪಿ.ಸಿ ಸಂಸ್ಥೆಯನ್ನು ೧೯೨೬ರಲ್ಲಿ ಸೇರಿ ನಂತರ ಅದರ ಆಡಳಿತ ನಿರ್ದೇಶಕರಾದ ವಿ.ಎಸ್. ಕುಡ್ವ ಅವರು ಮಂಗಳೂರಿನಲ್ಲಿ ಕೆನರಾ ವರ್ಕ್ ಶಾಪ್ ಆರಂಬಿಸಿದರು. ಈ ಕೈಗಾರಿಕಾ ಘಟಕದಲ್ಲಿ ವಾಹನದ ಸ್ಪಿçಂಗ್‌ಗಳು, ಬ್ರೇಕ್ ಡ್ರಮ್‌ಗಳು ಮತ್ತು ಇತರ ಬಿಡಿಭಾಗಗಳನ್ನು ಉತ್ಪಾದಿಸಲಾಗುತ್ತಿದೆ.


ಸ್ವಾತಂತ್ರಾö್ಯ ನಂತರದ ದಿನಗಳಲ್ಲಿ ಆರ್ಥಿಕವಾಗಿ ಜಿಲ್ಲೆ ಸಬಲಗೊಂಡರೂ ಕಾರ್ಖಾನೆಗಳು ಯಾ ಕೈಗಾರಿಕೆಗಳು ಅಧಿಕ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬರಲಿಲ್ಲ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಬುದ್ದಿವಂತ ಜನ ದೊಡ್ಡ ಪ್ರಮಾಣದಲ್ಲಿ ಬೇರೆಡೆಗೆ ವಲಸೆ ಹೋದದ್ದು ಮತ್ತು ಉದ್ಯಮ ವಲಯದ ಬದಲಿಗೆ ಇತರ ಆದಾಯದ ಮೂಲಗಳನ್ನು ಆರಿಸಿಕೊಂಡದ್ದೇ ಆಗಿದೆ. ಸದ್ಯ ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿದ್ದು ಬೃಹತ್ ಕೈಗಾರಿಕೆಗಳು ಇನ್ನೂ ನೆಲೆಯೂರುವ ಹಂತದಲ್ಲಿವೆಯಷ್ಟೇ. ಇರುವ ಬಹುಪಾಲು ಕೈಗಾರಿಕೆಗಳು ಕಾರ್ಕಳ, ಉಡುಪಿ, ಕುಂದಾಪುರದAತಹ ತಾಲೂಕು ಕೇಂದ್ರಗಳ ಸುತ್ತ ಮುತ್ತ ನೆಲೆಗೊಂಡಿವೆ.

Comments

Popular posts from this blog

ಸಾಮಾಜಿಕ ಉದ್ಯಮಶೀಲತೆ

MILES TO GO BEFORE I SLEEP

ಭಾರತೀಯ ಆರ್ಥಿಕ ವ್ಯವಸ್ಥೆ: ವಿನ್ಯಾಸ ಮತ್ತು ವಿಮರ್ಶೆ