ಅರ್ಥ ವ್ಯವಸ್ಥೆ-ಒಂದು ಟಿಪ್ಪಣಿ
ಮನುಷ್ಯನ ಪ್ರಾಪಂಚಿಕ ಬದುಕಿಗೆ ಸಂಬ0ಧಿಸಿದ ಅವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆಯನ್ನು ಆರ್ಥಿಕ ವ್ಯವಸ್ಥೆ ಎಂದು ತಿಳಿಯಬಹುದು. ಜಾಗತಿಕ ನೆಲೆಯಲ್ಲಿ ನಮಗೆ ಗೋಚರಿಸುವ ಸಾಮಾಜಿಕ ಮತ್ತು ಸಾಂಸ್ಕöತಿಕ ವೈವಿದ್ಯಕ್ಕೆ ಹೋಲಿಸಿದರೆ ಆರ್ಥಿಕ ವ್ಯವಸ್ಥೆಯಿರುವ ವೈವಿದ್ಯಗಳು ಸೀಮಿತವಾಗಿವೆ. ಅಂದರೆ ಮೇಲ್ನೋಟಕ್ಕೆ ಕಂಡು ಬರುವ ಸಹಸ್ರಾರು ಸಾಂಸ್ಕöತಿಕ, ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಆಧರಿಸಿರುವ ಆರ್ಥಿಕ ವ್ಯವಸ್ಥೆಗಳಲ್ಲಿ ಕೇವಲ ಮೂರು ವಿಧವಾಗಿವೆ.
ಪಾರಂಪರಿಕ ತಿಳುವಳಿಕೆಯನ್ನು ಆದರಿಸಿ ಮನುಷ್ಯನ ಪ್ರಾಪ್ರಂಚಿಕ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆ ಮೊದಲನೆಯದಾದರೆ,
ಎರಡನೆಯದು ಸಮಗ್ರ ಸಮುದಾಯದ ಜೀವನಾವಶ್ಯಕ ವಸ್ತು ಮತ್ತು ಸೇವೆಗಳನ್ನು ಕೇಂದ್ರೀಯ ಮಂಡಳಿಯೊ0ದರ ನಿರ್ಧಾರದಂತೆ, ಆದ್ಯತೆಯ ಮೇರೆಗೆ ಉತ್ಪಾದನೆ ಮತ್ತು ವಿತರಣೆ ಮಾಡುವ ಸಮಾಜವಾದೀ ಅರ್ಥ ವ್ಯವಸ್ಥೆ. ಸಮಾಜವಾದೀ ಅರ್ಥವ್ಯವಸ್ಥೆಯೊಳಗೆ ಬಹಳಷ್ಟು ವೈವಿದ್ಯಗಳಿವೆ. ಇಂತಹ ವ್ಯವಸ್ಥೆಯಲ್ಲಿ ಉತ್ಪಾದನೆಯ ಪರಿಸರಗಳಾದ ಭೂಮಿ, ಕಾರ್ಮಿಕ, ಸಂಪನ್ಮೂಲ, ಬಂಡವಾಳ ಮತ್ತು ಸಂಘಟನಾ ಚಾತುರ್ಯಗಳನ್ನು ಇಡೀ ಸಮಾಜದ ಆಸ್ತಿಯೆಂದು ಪರಿಗಣಿಸಲಾಗುತ್ತದೆ ಮತ್ತು ಇಂತಹ ಮತ್ತು ಇ೦ತಹ ಸಂಪನ್ಮೂಲಗಳ ಖಾಸಗೀ ಒಡೆತನ ಇರುವುದಿಲ್ಲ. ಯಾವುದನ್ನು, ಯಾರಿಗಾಗಿ, ಎಷ್ಟು ಮತ್ತು ಹೇಗೆ ಉತ್ಪಾದಿಸಿ ವಿತರಿಸಬೇಕು ಎನ್ನುವುದನ್ನು ಕೇಂದ್ರೀಯ್ ಯೋಜನಾ ಸಮಿತಿ ನಿರ್ದಾರ ಮಾಡುತ್ತದೆ. ಇಂತಹ ಆರ್ಥಿಕ ವ್ಯವಸ್ಥೆ ಎರಡನೇ ಮಹಾಯುದ್ಧದ ಪೂರ್ವದಲ್ಲಿ ಪ್ರಪಂಚದ್ ಗಮನ ಸೆಳೆದಿತ್ತು. ವಿಶೇಷವಾಗಿ ಯುರೋಪ್ ಮತ್ತು ಅಮೇರಿಕಾ ಆರ್ಥಿಕ ಸಂಕಷ್ಟವನ್ನು ಎದುರಿಸುತಿದ್ದ ಕಾಲದಲ್ಲಿ ಸಮಜವಾದೀ ಮಾದರಿಯನ್ನು ಅನುಸರಿಸಿದ ರಷ್ಯಾ, ಚೀನಾ ಮುಂತಾದ ದೇಶಗಳು ದೊಡ್ದ ಗೊಂದಲಗಳಿಲ್ಲದೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದವು.
ಮೂರನೇ ಮಾದರಿ, ಮಿತ್ತ ಅರ್ಥ ವ್ಯವಸ್ಥೆ ಅಥವಾ ಅನಿಯಂತ್ರಿತ ಅರ್ಥವ್ಯವಸ್ಥೆ. ಇಂತಹ ವ್ಯವಸ್ಥೆಯಲ್ಲಿ ಉತ್ಪಾದನ ಪರಿಕರಗಳು ಖಾಸಗಿ ಒಡೆತನದಲ್ಲಿದ್ದು ಉದ್ಯಮಶೀಲತಾ ವ್ಯಕ್ತಿಗಳ ಮುತುವರ್ಜಿಯ ಮೂಲಕ ವಸ್ತುಗಳ ಉತ್ಪಾದನೆ ಮತ್ತು ವಿತರಣೆಯ ಕೆಲಸ ನಡೆಯುತ್ತದೆ.
ಮೊದಲನೆಯ ಮಾದರಿಯನ್ನು ಈಗಲೂ ಅನುಸರಿಸುತ್ತಿರುವುದು ಬುಡಕಟ್ಟು ಜನಾಂಗ ಮತ್ತು ಆದೀವಾಸಿಗಳು. ಪಾರಂಪರಿಕ ತಿಳುವಳಿಕೆಯನ್ನು ಆದರಿಸಿ ಪ್ರಾಪಂಚಿಕ ಬದುಕಿಗೆ ಅಗತ್ಯವಿರುವ ವಸ್ತು ಮತ್ತು ಸೇವೆಯನ್ನು ದ್ಯೆಹಿಕ ಶ್ರಮವನ್ನು ಬಳಸಿ ಪ್ರಕೃತಿಯೊಂದಿಗೆ ಅನುಸಂಧಾನ ನಡೆಸುವ ಮೂಲಕ ಒದಗಿಸಲಾಗುತ್ತದೆ.ಇಂತಹ ವ್ಯವಸ್ತೆಯಲ್ಲಿ ನಿಸರ್ಗ(ಮನುಷ್ಯ ಮತ್ತು ಪ್ರಾಕೃತಿಕ ) ಪ್ರಧಾನ ಭೂಮಿಕೆಯನ್ನು ಪರಿವರ್ತನೆಗೆ ಒಳಗಾಗುವಂತಹದು. ಈ ರೀತಿಯ ಆರ್ಥಿಕ ವ್ಯವಸ್ತೆಯನ್ನು ನಾವು ಜಗತ್ತಿನ ಕೆಲವೇ ಕೆಲವು ಭಾಗಗಳಲ್ಲಿ ಸೀಮಿತ ಸಮುದಾಯಗಳಲ್ಲಿ ಕಾಣಬಹುದು.
ಆರ್ಥಿಕ ವ್ಯವಸ್ಥೆಯ ಉದ್ದೇಶ ಮನುಷ್ಯನ ಪ್ರಾಪಂಚಿಕ ಬದುಕಿನ ಅವಶ್ಯಕತೆಗಳನ್ನು ಪೂರೈಸುವುದಾಗಿದೆ. ಇಂತಹ ಅವಶ್ಯಕತೆಗಳನ್ನು ಪೂರೈಸುವ ಸಂದರ್ಭದಲ್ಲಿ ವೈಯಕ್ತಿಕ ಆಯ್ಕೆಗಳು, ಉತ್ಪಾದನೆಯ ಸಾಮರ್ಥ್ಯ, ಸಂಪನ್ಮೂಲಗಳ ಲಭ್ಯತೆ ಇತ್ಯಾದಿಗಳನ್ನು ಇಡೀ ಸಮುದಾಯದ ಆಶಯ, ಆಧಿಕಾರದ ವಿನ್ಯಾಸಗಳೊಂದಿಗೆ ತಾದಾತ್ಮ ಹೊಂದುವAತೆ ನೋಡಿಕೊಳ್ಳಬೇಕಾಗುತ್ತದೆ. ಅರ್ಥಾತ್ ವೈಯಕ್ತಿ ಆಸೆ, ಆಶಯ ಮತ್ತು ಆಯ್ಕೆಗಳು ಸಮಾಜದ ಆಶಯ, ನಿರೀಕ್ಷೆ ಮತ್ತು ಆಧಿಕಾರದ ಕೇಂದ್ರದೊAದಿಗೆ ಸಂಘರ್ಷಕ್ಕೆ ಎಡೆಯಿಲ್ಲದಂತೆ, ಸೌಹೌರ್ದಯುತವಾಗಿ ಬೆಸ್ಯುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ರೀತಿಯಲ್ಲಿ ಇಡೀ ಚಟುವಟಿಕೆಗಳನ್ನು ಎರಡು ಪ್ರಮುಖ ಹಂತಗಳಲ್ಲಿ ಬಹಳ ನಾಜೂಕಿನಿಂದ ನಿಭಾಯಿಸಬೇಕಾಗುತ್ತದೆ. ಅವುಗಳೆಂದರೇ ಒಂದು ಉತ್ಪಾದನೆ ಮತ್ತು ಎರಡು ವಿತರಣೆ. ಉತ್ಪಾದನೆ ಮತ್ತು ವಿತರಣೆಯ ಪ್ರಕ್ರಿಯೆಯಲ್ಲಿ ಸಮಾಜದ ಎಲ್ಲಾ ವರ್ಗದ ಜನರನ್ನು ಪಾಲ್ಗೊಳ್ಳುವಂತೆ ಮಾಡುವುದು ಮತ್ತು ಅದರ ಮೂಲಕ ಸಮಾಜ ಸದಾ ಅರ್ಠಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಆದರೆ ವಾಸ್ತವಿಕವಾಗಿ ಉತ್ಪಾದನೆ ಮತ್ತು ವಿತರಣೆಯ ಕ್ರಿಯೆ ನಡೆಯುವಾಗ ಅವಕಾಶಗಳ ಸಮಾನ ಒದಗಿಬಾರದಿರುವ ಕಾರಣದಿಂದಾಗಿ ಅಸಮತೋಲನಗಳುಂಟಾಗುತ್ತದೆ. ಸಾಮಾಜಿಕ ರಚನೆಯ ವಿನ್ಯಾಸದ ಕಾರಣದಿಂದ ಆರ್ಥಿಕ ಅಸಮಾನತೆ ಉಂಟಾಗುತ್ತದೆ ಎನ್ನುವುದನ್ನು ಪ್ರತಿಪಾದಿಸುವ ಜ್ಞಾನ ಮಾದರಿ ಒಂದು ಕಡೆಗಿದ್ದರೆ, ಆರ್ಥಿಕ ಅಸಮಾನತೆಯ ಕಾರಣದಿಂದಾಗೆ ಸಾಮಾಜಿಕ ಮತ್ತು ಸಾಂಸ್ಕöÈತಿಕ ನೆಲೆಯಲ್ಲಿ ಅಸಮಾನತೆಯುಂಟಾಗುತ್ತದೆ ಎನ್ನುವುದು ಮತ್ತೊಂದು ಬಗೆಯ ಜ್ಞಾನ ಮಾದರಿಯ ವಾದವಾಗಿದೆ. ಅಂಮವಾಗಿ ಸಮಾಜದಲ್ಲಿರುವ ಆರ್ಥಿಕ ವ್ಯವಸ್ಥೆ, ಯಾವ ಸರಕುಗಳನ್ನು ಉತ್ಪಾದಿಸಲಾಗುತ್ತದೆ, ಯಾವ ರೀತಿಯಲ್ಲಿ ಉತ್ಪಾದನೆ ಮತ್ತು ವಿತರಣೆಯನ್ನು ಮಾಡಲಾಗುತ್ತದೆ ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳಬಹುದಾಗಿದೆ.
ಮೇಲೆ ವಿವರಿಸಿದಂತೆ ಮನುಷ್ಯನ ಪ್ರಾಪುಚಿಕ ಜೀವನದ ಅವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆಯ ಹಿಂದಿನ ಪ್ರೇರಕ ಶಕ್ತಿ ಉತ್ಪಾದನಾ ಪರಿಕರಗಳಿಗೆ ದೊರೆಯುವ ಪ್ರತಿಫಲ ಅಥವಾ ದಂಡದ ಭಯ. ನಿರ್ಧಾರಕ ಶಕ್ತಿಯಾಗಿರುವ ಪ್ರತಿಫಲ ಅಥವಾ ದಂಡದ ಸ್ವರೂಪ ಬೇರೆ ಬೇರೆ ಆರ್ಥಿಕ ವ್ಯವಸ್ಥೆಯಲ್ಲಿ ವಿಭಿನ್ನ ರೀತಿಯಲ್ಲಿರುತ್ತದೆ. ಪಾರಂಪರಿಕ ಅರ್ಥ ವ್ಯವಸ್ಥೆಯಲ್ಲಿ ವಿಭಿನ್ನ ರೀತಿಯಲ್ಲಿರುತ್ತದೆ. ಪಾರಂಪರಿಕ ಅರ್ಥ ವ್ಯವಸ್ಥೆಯಲ್ಲಿ ಸಮುದಾಯದ ಒಪ್ಪಿಗೆ ಅಥವಾ ಸ್ವೀಕೃತಿ ಯಾ ನಿರಾಕರಣೆ ಯಾ ತಿರಸ್ಕಾರ ನಿರ್ಧಾರಕ ಶಕ್ತಿಯಾದರೆ, ಸಮಾಜವಾದಿ ವ್ಯವಸ್ಥೆಯಲ್ಲಿ ಕೇಂದ್ರೀಯ ಯೋಜನಾ ಆಯೋಗ ಅಥವಾ ಚಿಂತಕರ ಚಾವಡಿ ವ್ಯವಸ್ಥೆಯ ಜೀವಾಳವಾಗಿರುತ್ತದೆ. ಮುಕ್ತ ಅರ್ಥ ವ್ಯವಸ್ಥೆ ಅಥವಾ ಮಾರುಕಟ್ಟೆ ನಿಯಂತ್ರಿತ ಅರ್ಥ ವ್ಯವಸ್ಥೆಯಲ್ಲಿ ಚಾಲಕ ಶಕ್ತಿ ಬಹುಪಾಲು ಅವಾಂತರ ಸ್ವರೂಪದಲ್ಲಿರುತ್ತದೆ. ಮನುಷಯನ ಅವ್ಯಕ್ತ ಆಸೆ, ಆಕಾಂಕ್ಷೆಗಳು ವೈಯಕ್ತಿಕ ಮತ್ತು ಸಾಮುದಾಯಕ ನೆಲೆಗಳಗಳಲ್ಲಿ ಮುಖಾ ಮುಖಿಯಾಗುವ ಮೂಲಕ ಒಂದು ಲಯಕಂಡು ಕೊಳ್ಳುವುದರಲ್ಲಿಯೇ ಇಂತಹ ಆರ್ಥಿಕ ವ್ಯವಸ್ಥೆಯ Œಜೀವಾಳವಿರುತ್ತದೆ. ಸ್ವಹಿತ ಮತ್ತು ಸಾಮಾಜಿಕ ಹಿತದ ನಡುವೆ ನಡೆಯುವ ತಾಕಲಾಟವೇ ಉತ್ಪಾದನಾ ವ್ಯವಸ್ಥೆ ಆರ್ಥಿಕ ವ್ಯವಸ್ಥೆಯ ಇತಿ ಮಿತಿಗಳನ್ನು ಮತ್ತು ಇದರ ಹಿಂದಿನ ನಿರ್ಧಾರಕ ಶಕ್ತಿಯನ್ನು ನಿಯಂತ್ರಿಸುತ್ತದೆ ಎಂದು ಪರಿಭಾವಿಸಲಾಗಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಮುಕ್ತ ಮಾರುಕಟ್ಟೆಯಾಧಾರಿತ ಅರ್ಥ ವ್ಯವಸ್ಥೆ ಉಳಿದೆರಡು ವ್ಯವಸ್ಥೆಗಿಂತ ಬಲಿಷ್ಠವಾಗಿ ಜಗತ್ತನ್ನು ಅವಹಿಸಿಕೊಂಡಿದೆ. ಇಂತಹ ಆರ್ಥಿಕ ವ್ಯವಸ್ಥೆ ತನ್ನೆಲ್ಲಾ ಮಿತಿಗಳ ಹೊರತಾಗಿಯು ಬೆಳೆಯುತ್ತದೆ. ಇಂತಹ ಆರ್ಥಿಕ ವ್ಯವಸ್ಥೆಯ ಮಿತಿಗಳೇ ಇದರ ಕುಸಿತಕ್ಕೆ ಕಾರಣವಾಗಬಹುದೆಂದು ತಿಳಿಯಲಾಗಿತ್ತು. ಆದರೆ ಇಂತಹ ಆರ್ಥಿಕ ವಿನ್ಯಾಸ ತನ್ನ ಹುಳುಕಗಳನ್ನು ಮುಚ್ಚಿಕೊಳ್ಳುವ ಮತ್ತು ಮಿತಿಗಳನ್ನು ನಿಭಾಯಿಸುವ ಮಾರ್ಗೋಪಾಯಗಳನ್ನು ತನ್ನೊಳಗೇ ಸಿದ್ಧಗೊಳಿಸಿದ್ದುಕೊಂಡು ಮುಂದುವರಿಯುತ್ತಿರುವುದನ್ನು ಕಾಣಬಹುದು.
ಪರಾಮರ್ಶಕ ಗ್ರಂಥಗಳು
೧. ರಾಬರ್ಟ್ ಎಲ್ ಹೀಲ್‌ಬ್ರೋನರ್(೨೦೦೨) “ದಿ ಮೇಕಿಂಗ್ ಆಫ್ ಎಕಾನಾಮಿಕ್ ಸೊಸೈಟಿ” ಪ್ರೆಂಟಿಸಿ ಹಾಲ್.
೨. ಪಾರ್ಥ ದಾಸ್ ಗುಪ್ತಾ (೨೦೦೭) “ಎಕಾನಾಮಿಕ್ಸ್ – ಎ ವೆರಿ ಶಾರ್ಟ್ ಇಂಟ್ರಡಕ್ಷನ್”, ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ನ್ಯೂ ಡೆಲ್ಲಿ.
೩. ಫ್ರೆಡ್ರಿರಿಕ್ ಎಲ್, ಪ್ರಿಯೋರ್ (೧೯೮೫) “ಎ ಗೈಡ್ ಬುಕ್ ಟು ಕಂಪೇರೆಟಿವ್ ಸ್ಟಡಿ ಆಫ್ ಎಕಾನಾಮಿಕ್ ಸಿಸ್ಟಮ್ಸ್” ಪ್ರೆಂಟಿಸ್ ಹಾಲ್.
೪. ಮೇರೆಸ್ ಬೊರ್ನ್ಸ್ಟಿçÃನ್ (೧೯೯೪) “ಕಂಪೇರಿಟಿವ್ ಎಕಾನಾಮಿಕ್ ಸಿಸ್ಟಮ್ಸ್ – ಮೊಡೆಲ್ಸ್ ಎಂಡ್ ಕೇಸಸ್” ಬುರ್‌ರಿಡ್ಜ್ ಇರ್ವಿನ್.
೫. ತಿರ್ಥಂಕರ್ ರಾಯ್ (೨೦೦೩) “ದಿ ಇಕನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ನ್ಯೂ ಡೆಲ್ಲಿ.
Comments
Post a Comment
Please comment on the subjects posted on the site