ಮನುಷ್ಯನ ಪ್ರಾಪಂಚಿಕ ಬದುಕಿಗೆ ಸಂಬ0ಧಿಸಿದ ಅವಶ್ಯಕತೆಗಳನ್ನು ಪೂರೈಸುವ ವ್ಯವಸ್ಥೆಯನ್ನು ಆರ್ಥಿಕ ವ್ಯವಸ್ಥೆ ಎಂದು ತಿಳಿಯಬಹುದು. ಜಾಗತಿಕ ನೆಲೆಯಲ್ಲಿ ನಮಗೆ ಗೋಚರಿಸುವ ಸಾಮಾಜಿಕ ಮತ್ತು ಸಾಂಸ್ಕöತಿಕ ವೈವಿದ್ಯಕ್ಕೆ ಹೋಲಿಸಿದರೆ ಆರ್ಥಿಕ ವ್ಯವಸ್ಥೆಯಿರುವ ವೈವಿದ್ಯಗಳು ಸೀಮಿತವಾಗಿವೆ. ಅಂದರೆ ಮೇಲ್ನೋಟಕ್ಕೆ ಕಂಡು ಬರುವ ಸಹಸ್ರಾರು ಸಾಂಸ್ಕöತಿಕ, ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಆಧರಿಸಿರುವ ಆರ್ಥಿಕ ವ್ಯವಸ್ಥೆಗಳಲ್ಲಿ ಕೇವಲ ಮೂರು ವಿಧವಾಗಿವೆ. ಪಾರಂಪರಿಕ ತಿಳುವಳಿಕೆಯನ್ನು ಆದರಿಸಿ ಮನುಷ್ಯನ ಪ್ರಾಪ್ರಂಚಿಕ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆ ಮೊದಲನೆಯದಾದರೆ, ಎರಡನೆಯದು ಸಮಗ್ರ ಸಮುದಾಯದ ಜೀವನಾವಶ್ಯಕ ವಸ್ತು ಮತ್ತು ಸೇವೆಗಳನ್ನು ಕೇಂದ್ರೀಯ ಮಂಡಳಿಯೊ0ದರ ನಿರ್ಧಾರದಂತೆ, ಆದ್ಯತೆಯ ಮೇರೆಗೆ ಉತ್ಪಾದನೆ ಮತ್ತು ವಿತರಣೆ ಮಾಡುವ ಸಮಾಜವಾದೀ ಅರ್ಥ ವ್ಯವಸ್ಥೆ. ಸಮಾಜವಾದೀ ಅರ್ಥವ್ಯವಸ್ಥೆಯೊಳಗೆ ಬಹಳಷ್ಟು ವೈವಿದ್ಯಗಳಿವೆ. ಇಂತಹ ವ್ಯವಸ್ಥೆಯಲ್ಲಿ ಉತ್ಪಾದನೆಯ ಪರಿಸರಗಳಾದ ಭೂಮಿ, ಕಾರ್ಮಿಕ, ಸಂಪನ್ಮೂಲ, ಬಂಡವಾಳ ಮತ್ತು ಸಂಘಟನಾ ಚಾತುರ್ಯಗಳನ್ನು ಇಡೀ ಸಮಾಜದ ಆಸ್ತಿಯೆಂದು ಪರಿಗಣಿಸಲಾಗುತ್ತದೆ ಮತ್ತು ಇಂತಹ ಮತ್ತು ಇ೦ತಹ ಸಂಪನ್ಮೂಲಗಳ ಖಾಸಗೀ ಒಡೆತನ ಇರುವುದಿಲ್ಲ. ಯಾವುದನ್ನು, ಯಾರಿಗಾಗಿ, ಎಷ್ಟು ಮತ್ತು ಹೇಗೆ ಉತ್ಪಾದಿಸಿ ವಿತರಿಸಬೇಕು ಎನ್ನುವುದನ್ನು ಕೇಂದ್ರೀಯ್ ಯ...