Posts

ಸಹಕಾರ-ಸರಕಾರ- ಮತ್ತು ರಾಜಕೀಯ ಅಧಿಕಾರ

ಭಾರತ ಸರಕಾರ "ಸಹಕಾರ ಸಚಿವಾಲಯ" ಆರಂಭಿಸಿ ಅದರ ಚುಕ್ಕಾಣಿಯನ್ನು ಗೃಹ ಸಚಿವ ಅಮಿತ್ ಷಾ ಅವರ ಕೈಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ರಂಗದ ಮುಂದಿನ ಬೆಳವಣಿಗೆ ಹಾಗೂ ಷಾ ಅವರ ಭವಿಷ್ಯದ ನಡೆ ಏನಿರಬಹುದು ಎನ್ನುವ ಕುತೂಹಲ ಈಗಾಗಲೇ ಚರ್ಚೆಯ ಮೂಲಕ ವ್ಯಕ್ತವಾಗುತ್ತಿದೆ. ಕೋವಿಡ್ ನಂತರದಲ್ಲಿ ಹದಗೆಟ್ಟ ದೇಶದ ರಾಜಕೀಯ, ಆರ್ಥಿಕ, ಪರಿಸ್ಥಿತಿಯ ಸಂದರ್ಭದಲ್ಲಿ ಸಹಕಾರೀ ರಂಗಕ್ಕೆ ದೊರೆತಿರುವ ಮಹತ್ವ ಅರ್ಥವ್ಯವಸ್ಥೆಯ ಪುನರುತ್ಥಾನಕ್ಕೆ ಹೊಸ ಅವಕಾಶಗಳನ್ನೇನಾದರೂ ಹುಟ್ಟು ಹಾಕಿದಯೇ ಎನ್ನುವ ಕುರಿತು ಈ ಲೇಖನದ ಮೊದಲ ಬಾಗದಲ್ಲಿ, ರಾಜಕೀಯದಲ್ಲಿ ಪ್ರತಿ ಹೆಜ್ಜೆಯನ್ನೂ ಅಳೆದು ತೂಗಿ ಬಹಳ ಲೆಕ್ಕಾಚಾರದಲ್ಲಿ ಇಡುವ ಅಮಿತ್ ಷಾ ಸಹಕಾರೀ ಸಚಿವಾಲಯದ ಹೊಣೆಯನ್ನು ವಹಿಸಿಕೊಂಡಿರುವುದರ ಹಿಂದೆಯೂ ಕೆಲವೊಂದು ಕಾರಣಗಳು ಇದ್ದೇ ಇದೆ. ಅಂತಹ ಕಾರಣಗಳು ಯಾವುದು, ಅವುಗಳ ಹಿಂದು ಮುಂದಿನ ಲೆಕ್ಕಾಚಾರಗಳೇನು ಎನ್ನುವ ಕುರಿತು ಎರಡನೇ ಬಾಗದಲ್ಲಿ ಚರ್ಚಿಸಲಾಗಿದೆ.  ಸಹಕಾರಿ ರಂಗ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಹಳ ಮಹತ್ವದ ರಂಗವಾಗಿ ಬೆಳೆಯುತ್ತಿದೆ ಎನುವುದನ್ನು ನಮ್ಮ ಮುಂದಿರುವ ಅಂಕಿ ಅಂಶಗಳೇ ಹೇಳುತ್ತಿವೆ. ದೇಶಾತ್ಯಂತ 95238 ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು, 363 ಜಿಲ್ಲಾ ಸಹಕಾರಿ ಬ್ಯಾಂಕುಗಳು, ಒಂದು ಕೋಟಿ ಎಪ್ಪತ್ತು ಲಕ್ಷ ಸದಸ್ಯರಿರುವ 1,94,195 ಹಾಲು ಉತ್ಪಾದಕರ ಸಹಕಾರಿ ಸಂಘಗಳು, ದೇಶದ ಒಟ್ಟು ಸಕ್ಕರೆ ಉತ್ಪಾದನೆಯ ಶೇಕಡಾ 35% ರಷ್ಟನ್

ಸರ್ವೋದಯ

  ಅಭಿವೃದ್ಧಿಯೆನ್ನುವ ಮಾಯಾ ಜಿಂಕೆ ೨೦೧೪ರಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ‘ಅಭಿವೃದ್ದಿಯ ಆರ್ಥಿಕ ಲೇಪನ’ವಿರುವ ಚುನಾವಣಾ ಪ್ರಣಾಳಿಕೆ ನರೇಂದ್ರ ಮೋದಿಯವರಿಗೆ ಸಹಕಾರಿಯಾಯಿತು ಎಂದರೆ ತಪ್ಪಾಗಲಾರದೇನೋ. ಅಭಿವೃದ್ಧಿಯ ಸ್ಪರ್ಶವಿರದಿದ್ದ ವಿಚಾರಗಳಿಗೆ ಈಗಿನ ಪ್ರಧಾನಮಂತ್ರಿಯವರಿAದ ಸೂಕ್ತ ಸ್ಪಂದನೆ ಸಿಗುವುದಿಲ್ಲ ಎನ್ನುವುದನ್ನುÀ ಅರಿತುಕೊಂಡ ಅವರ ಪಕ್ಷದ ರಾಜಕೀಯ ಧುರೀಣರು ಪಧಾನ ಮಂತ್ರಿಯವರಲ್ಲಿ ಏನೇ ವಿಷಯ ಪ್ರಸ್ತಾಪಿಸಿದರೂ ಅದಕ್ಕೊಂದು ಅಭಿವೃದ್ಧಿಯ ಆಯಾಮ ನೀಡಲು ಹೆಣಗಾಡುವುದರ ಬಗ್ಗೆ ದಿನಪತ್ರಿಕೆಯೊಂದರ ಸಂಪಾದಕರು ಇತ್ತೀಚೆಗೆ ತಮ್ಮ ಅಂಕಣ ಬರಹದಲ್ಲಿ ಪ್ರಸ್ತಾಪಿಸಿದ್ದರು. ಅಭಿವೃದ್ದಿಯೆನ್ನುವ ಮಾಯ ಜಿಂಕೆ ಇಂದು ಸರ್ವಾಂತರಯಾಮಿಯಾಗಿ ಬಿಟ್ಟಿದೆ. ಆದರೆ ನಿಜವಾದ ಅರ್ಥದಲ್ಲಿ ಅಭಿವೃದ್ದಿಯೆಂದರೇನು? ಇದರ ಮೂಲಭೂತ ಆಶಯಗಳೇನು? ಇದ್ದಕ್ಕೆ ಸಂಬAಧಿಸಿದ ಆಚಾರ ವಿಚಾರಗಳು ಏನು ಎನ್ನುವುದು ಎಂದಿನAತೆಯೇ ಗೊಂದಲಗಳಿAದ ಕೂಡಿದೆ. ಕಾಲದಿಂದ ಕಾಲಕ್ಕೆ ಅಭಿವೃದ್ಧಿಯ ವ್ಯಾಖ್ಯಾನದಲ್ಲಿ ಬದಲಾವಣೆ ಮತ್ತು ಪರಿಷ್ಕರಣೆಗೆ ಒಳಗಾಗುತ್ತಲೇ ಇದೆ.  ಅರ್ಥಶಾಸ್ರದಲ್ಲಿ ತಾವು ಮಾಡಿರುವ ಸಂಶೋಧನಾತ್ಮಕ ಕೆಲಸಗಳಿಗೆ ನೊಬೆಲ್ ಬಹುಮಾನ ಪಡೆದಿರುವ ಜೋಸೆಫ್ ಸ್ಟಿಗ್ಲಿಸ್ ಅಭಿವೃದ್ಧಿಯ ಕುರಿತಂತೆ ಬಹಳ ವಿಚಾರ ಪೂರ್ಣವಾದ ಮತ್ತು ವ್ಯಾಪಕ ಅರ್ಥವಿರುವ ಒಂದು ವ್ಯಾಖ್ಯಾನ ನೀಡಿದ್ದಾರೆ. ಅದರಂತೆ ಅಭಿವೃದ್ಧಿಯೆನ್ನುವುದು ರಾಷ್ಟಿçÃಯವಾಗಿ